ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? - How to do Business without money? - Ultra Business Boot Strapping in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? - How to do Business without money? - Ultra Business Boot Strapping in Kannada

ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot Strapping

                                  ಬಿಜನೆಸ್ ಲೆಸನ್ - 11 
                         ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನಮ್ಮ ಬಳಿ ಮೈಂಡ್ ಪವರ ಇದ್ದರೆ ನಾವು ಮನಿ ಪವರ್ ಹಾಗೂ ಮ್ಯಾನ ಪವರ್ ಇಲ್ಲದೇನೆ ಕೆಲವು ತಿಂಗಳುಗಳ ತನಕ ಬಿಜನೆಸ್ ನಡೆಸಬಹುದು. ನಾವು ಹೇಗಾದರೂ ಮಾಡಿ ತಲೆ ಉಪಯೋಗಿಸಿ ಕೆಲವು ತಿಂಗಳುಗಳ ತನಕ ಅಥವಾ ಒಂದೆರಡು ವರ್ಷಗಳ ತನಕ ದುಡ್ಡಿಲ್ಲದೆ ಅಥವಾ ಕಡಿಮೆ ದುಡ್ಡಲ್ಲಿ ಹೇಗೋ ಬಿಜನೆಸ್ ರನ್ ಮಾಡಿದರೆ ನಾವು ಗೆದ್ದಂತೆ. ನಮಗೆ ಕಡಿಮೆ ದುಡ್ಡಲ್ಲಿ ಬಿಜನೆಸ್ ಮಾಡುವ ಕಲೆ ಗೊತ್ತಾದಾಗಲೇ ನಾವು ಜಾಸ್ತಿ ದುಡ್ಡನ್ನು ನಮ್ಮೆಡೆಗೆ ಸೆಳೆಯಬಹುದು. ಒಂಚೂರು ದುಡ್ಡಿಲ್ಲದೇ ಬಿಜನೆಸ್ ಮಾಡಲು ಸಾಧ್ಯವಿಲ್ಲ. ಸ್ವಲ್ಪನಾದ್ರೂ ದುಡ್ಡು ಬೇಕೇಬೇಕು. ಈ ಸ್ವಲ್ಪ ದುಡ್ಡನ್ನೇ ಸರಿಯಾಗಿ ಬಳಸಿಕೊಂಡು ದೊಡ್ಡ ಲೆವಲನಲ್ಲಿ ಬಿಜನೆಸ್ ಮಾಡಬಹುದು. ಅದಕ್ಕೆ ನಾವು Ultra Business Boot Strapping ಎನ್ನುತ್ತೇವೆ. ಈ ಸ್ಟ್ರ್ಯಾಟರ್ಜಿಯನ್ನು ಬಳಸಿಕೊಂಡು ಕಡಿಮೆ ದುಡ್ಡಲ್ಲಿ ದೊಡ್ಡ ಲೆವಲನಲ್ಲಿ ಬಿಜನೆಸ್ ಮಾಡಲು ಬೆಸ್ಟ ಟ್ರಿಕ್ಸಗಳು ಇಂತಿವೆ ;

ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot Strapping


Trick - 1 : Dream Big but Start Small


                        ನಿಮ್ಮತ್ರ ಬಿಸನೆಸ್ ಸ್ಟಾರ್ಟ ಮಾಡಲು ಸಾಕಷ್ಟು ದುಡ್ಡಿಲ್ಲದಿದ್ದರೆ ಅದು ಕೆಟ್ಟ ವಿಚಾರವಲ್ಲ. ಅದು ಒಳ್ಳೇ ವಿಚಾರ. ಕಡಿಮೆ ದುಡ್ಡಿದಾಗಲೇ ನಿಮ್ಮ ಬ್ರೇನ್ ಜಾಸ್ತಿ ಕ್ರಿಯೆಟಿವ ಆಗಿ ಹಾಗೂ ಸರಿಯಾಗಿ ಕೆಲಸ ಮಾಡುತ್ತದೆ. ನಿಮ್ಮಲ್ಲಿ ಸಾಕಷ್ಟು ದುಡ್ಡಿರಲಿ ಅಥವಾ ಇರದಿರಲಿ ನೀವು ಬಿಜನೆಸ್ ಸ್ಟಾರ್ಟ ಮಾಡುವಾಗ ಸಣ್ಣ ಪ್ರಮಾಣದಲ್ಲಿ ಸ್ಟಾರ್ಟ ಮಾಡಬೇಕು. ಒಮ್ಮೆಲೇ ದೊಡ್ಡ ಪ್ರಮಾಣದಲ್ಲಿ ಸ್ಟಾರ್ಟ ಮಾಡಿದರೆ ನೀವು ಫೇಲಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಅದಕ್ಕಾಗಿ ನೀವು ಬಿಜನೆಸ್ ಸ್ಟಾರ್ಟ ಮಾಡುವಾಗ ದೊಡ್ಡ ಕನಸನ್ನು ಕಾಣಬೇಕು, ಕೋಟಿಗಳಲ್ಲಿ ಪ್ಲ್ಯಾನಿಂಗ್ ಮಾಡಬೇಕು, ಆದರೆ ಸ್ಟಾರ್ಟ ಮಾಡುವಾಗ ಮಾತ್ರ ಲಕ್ಷಗಳಲ್ಲಿ ಸ್ಟಾರ್ಟ ಮಾಡಬೇಕು. ಯಾವುದೇ ಆಡಂಬರ ಮಾಡದೇ, ಹೆಚ್ಚಿಗೆ ಅನಾವಶ್ಯಕ ಖರ್ಚು ಮಾಡದೇ ಸಣ್ಣ ಲೆವಲನಲ್ಲಿ ಬಿಜನೆಸ್ ಸ್ಟಾರ್ಟ ಮಾಡಬೇಕು.


ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot StrappingTrick 2 : Boot Strapping


                ನಿಮ್ಮ ಬಳಿ ಬಿಜನೆಸ್ ಸ್ಟಾರ್ಟ ಮಾಡಲು ಸಾಕಷ್ಟು ದುಡ್ಡಿಲ್ಲದಿದ್ದರೆ Boot Strapping ಮಾಡಿ. ನೀವು ಇಷ್ಟು ದಿನ ಗಳಿಸಿದ ಹಣವನ್ನು, ಸೇವಿಂಗ್ ಮಾಡಿಟ್ಟ ಹಣವನ್ನು, ನಿಮ್ಮ ಪಾಕೆಟ ಮನಿಯನ್ನು ಬಳಸಿಕೊಂಡು ನಿಮ್ಮ ಬಿಜನೆಸನ್ನು ಸ್ಟಾರ್ಟ ಮಾಡಿ. ನಿಮ್ಮ ಮನೆಯವರು, ಸ್ನೇಹಿತರು, ಸಂಬಂಧಿಕರು ಹೆಲ್ಪ ಮಾಡಿದ್ರೆ ಓಕೆ, ಮಾಡದಿದ್ರೆ ಡಬ್ಬಲ್ ಓಕೆ. ಕ್ರೌಡ ಫಂಡಿಂಗ್ ಮಾಡಲು ಟ್ರಾಯ ಮಾಡಿ, ವರ್ಕೌಟ ಆದ್ರೆ ಓಕೆ, ಯಾರು ಸ್ಪಾನ್ಸರ್ ಮಾಡದಿದ್ರೆ ಟ್ರಿಬಲ್ ಓಕೆ. ಎಲ್ಲರನ್ನೂ ಬಿಡಿ. ನಿಮ್ಮ ಪಾಕೆಟನಲ್ಲಿ ಎಷ್ಟಿದಿಯೋ ಅಷ್ಟರಲ್ಲೇ ಬಿಜನೆಸ್ ಸ್ಟಾರ್ಟ ಮಾಡಿ. ನಿಮ್ಮೊಂದಿಗೆ ನೀವಿದ್ದಾಗ ನಿಮಗೆ ಬೇರೆ ಯಾರ ಸಹಾಯವೂ ಬೇಕಾಗುವುದಿಲ್ಲ. ಈಗಂತೂ ನಮ್ಮ ಭಾರತ ಸರ್ಕಾರ ಬಿಜನೆಸ್ ರೆಜಿಸ್ಟ್ರೇಶನ್ ಮೇಲಿನ ಎಲ್ಲ ಅನಾವಶ್ಯಕ ಖರ್ಚುಗಳನ್ನು ತೆಗೆದಿದೆ. ಬಿಜನೆಸ್ ರೆಜಿಸ್ಟ್ರೇಶನನ್ನು ಈಜಿ & ಸೂಪರ ಫಾಸ್ಟ್ ಮಾಡಿದೆ. ಇದರ ಸದುಪಯೋಗ ಪಡೆದುಕೊಳ್ಳಿ.


ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot StrappingTrick 3 : Start With What You have


              ನಿಮ್ಮತ್ರ ಎಷ್ಟಿದಿಯೋ ಅಷ್ಟರಲ್ಲೇ ಬಿಜನೆಸ್ ಸ್ಟಾರ್ಟ ಮಾಡಿ. ನಿಮ್ಮತ್ರ ಎಷ್ಟು ಸಾಧನಗಳಿವೆಯೋ ಅಷ್ಟರಲ್ಲಿ ಸ್ಟಾರ್ಟ ಮಾಡಿ. ನಿಮ್ಮ ಮೊಬೈಲ್, ಲ್ಯಾಪಟಾಪ್, ಬೈಕ್ ಎಲ್ಲವನ್ನೂ ಸರಿಯಾಗಿ ಬಳಸಿಕೊಳ್ಳಿ. ನಿಮಗೆ ಆಫೀಸನ್ನು ಅಫೋರ್ಡ ಮಾಡಲಾಗದಿದ್ದರೆ ನಿಮ್ಮ ಮನೆಯನ್ನೇ ಆಫೀಸ್ ಮಾಡಿ. ನಿಮ್ಮ ಮನೆಯಿಂದಲೇ ಬಿಜನೆಸ್ ರನ್ ಮಾಡಿ. ಅವಶ್ಯಕತೆ ಬಿದ್ರೆ ಕೋ ವರ್ಕಿಂಗ ಸ್ಪೇಸಗಳನ್ನು ಮತ್ತು Shared ಆಫೀಸಗಳನ್ನು ಬಳಸಿಕೊಳ್ಳಿ. ವರ್ಚುಚಲ್ ಆಫೀಸಗಳನ್ನು ಬಳಸಿಕೊಳ್ಳಿ. ಗ್ಯಾರೆಜಿನಿಂದ ಬಿಜನೆಸ್ ಸ್ಟಾರ್ಟ ಮಾಡಿದವರು ಇವತ್ತು ಮಲ್ಟಿ ಬಿಲೆನಿಯರಗಳಾಗಿ ನಿಮ್ಮ ಕಣ್ಮುಂದಿದ್ದಾರೆ. ನಿಮಗೆ ನೌಕರರ ಸಂಬಳ ಕೊಡಲಾಗದಿದ್ದರೆ ಅವರಿಗೆ ಪ್ರೋಫಿಟನ ಒಂದಿಷ್ಟು ಪರ್ಸಂಟೆಜನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳಿ ಇಲ್ಲವೇ ಫ್ರಿಲ್ಯಾನ್ಸಿಂಗ ಮೇಲೆ ಕೆಲಸ ಮಾಡಿಸಿಕೊಳ್ಳಿ. ನಿಮ್ಮ ಸಂಪೂರ್ಣ ಟೈಮ, ಟ್ಯಾಲೆಂಟ ಆ್ಯಂಡ್ ಎನರ್ಜಿಯನ್ನು ನಿಮ್ಮ ಬಿಜನೆಸ್ಸಲ್ಲಿ ಇನ್ವೇಸ್ಟ ಮಾಡಿ.


ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot StrappingTrick 4 - Win-Win Exchange

             ನಿಮ್ಮ ಬಳಿಯಿರುವ ವಸ್ತುಗಳು ಬೇರೆ ಬಿಜನೆಸಮ್ಯಾನಗಳತ್ರ ಇರಲ್ಲ, ಅದೇ ರೀತಿ ಬೇರೆಯವರ ಬಳಿಯಿರುವ ವಸ್ತುಗಳು ನಿಮ್ಮ ಬಳಿಯಿರಲ್ಲ. ಆಗ ನಿಮಗೆ ಇಂಟರೆಸ್ಟ್ ಇದ್ರೆ ಅವಶ್ಯಕ ವಸ್ತುಗಳನ್ನು Mutual Exchange ಮಾಡಿಕೊಳ್ಳಿ. ಬೇರೆ ಬಿಜನೆಸಮ್ಯಾನಗಳೊಂದಿಗೆ, ಬೇರೆ ಕಂಪನಿಗಳೊಂದಿಗೆ Win-Win ಬಿಜನೆಸ್ ಡೀಲಗಳನ್ನು ಮಾಡಿಕೊಳ್ಳಿ.

ಉದಾಹರಣೆಗೆ : ನಾವು ಬಿಜನೆಸ್ ಸ್ಟಾರ್ಟ ಮಾಡಿದಾಗ ನಮಗೆ ದೇಶದ ಬೇರೆ ಬೇರೆ ಸೀಟಿಗಳಿಗೆ ವಿಜಿಟ ಮಾಡಲು ಎರಡು ಕಾರಗಳು ಬೇಕಿದ್ದವು. ಆಗ ನಾವು ಒಂದು ಟೂರಿಸ್ಟ ಟ್ರಾವೆಲ ಕಂಪನಿಗೆ ಫ್ರೀಯಾಗಿ ಎರಡ್ಮೂರು ಆ್ಯಡ ಫಿಲ್ಮಗಳನ್ನು ಮಾಡಿಕೊಟ್ಟು ಅವರ ಕಾರುಗಳನ್ನು ನಾವು ಎರಡ್ಮೂರು ತಿಂಗಳುಗಳ ಕಾಲ ಫ್ರಿಯಾಗಿ ಬಳಸಿಕೊಂಡೆವು. ಈ ರೀತಿ ನೀವು ಸಹ Win Win ಡೀಲಗಳನ್ನು ಮಾಡಿಕೊಳ್ಳಿ, ಡುಡ್ಡಿಲ್ಲದಿದ್ದರೂ ನಿಮ್ಮ ಬಿಜನೆಸ್ ಮುಂದೆ ಸಾಗುತ್ತದೆ.


ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot Strapping


Trick 5 : Early Bookings and Discount Offers

                     ನಿಮ್ಮ ಬಳಿ ದುಡ್ಡಿಲ್ಲದಿದ್ದರೆ ಅಥವಾ ಕಡಿಮೆ ದುಡ್ಡಿದ್ರೆ ನೀವು Early Bookings and Discount Offersಗಳನ್ನು ನಡೆಸಿ ನಿಮ್ಮ ಕಸ್ಟಮರಗಳಿಂದ ಅಡ್ವಾನ್ಸಾಗಿ ದುಡ್ಡನ್ನು ಪಡೆದುಕೊಳ್ಳಿ. ಡಿಸ್ಕೌಂಟ ಸಿಗುತ್ತೆ, ಕಡಿಮೆ ರೇಟಲ್ಲಿ ಸಿಗುತ್ತೆ ಅಂದ್ರೆ ಸಾಕು ಕಸ್ಟಮರ Early Booking ಮಾಡಲು ತಯಾರಾಗುತ್ತಾನೆ. ಆಗ ಅವನ ಕಡೆಯಿಂದ ಅರ್ಲಿ ಬುಕ್ಕಿಂಗ ಮಾಡಿಕೊಂಡು ಹಣ ಪಡೆದುಕೊಳ್ಳಿ.

ಉದಾಹರಣೆಗೆ ; ಲಾಸ್ಟ್ ಇಯರ ನಾವು ಒಂದು ಘಾಟನಲ್ಲಿ ಒಂದು ಆ್ಯಡ್ ಶೂಟ ಮಾಡ್ತಾ ಇದ್ವಿ. ಆಗ Bad Environmental Conditionನಿಂದಾಗಿ ನಮ್ಮ ಡ್ರೋನ್ ಕ್ರ್ಯಾಷಾಗಿ ಆ ಫಾಟಿನ ಯಾವ ಗುಂಡಿಯಲ್ಲಿ ಬಿತ್ತೋ ಗೊತ್ತಾಗಲಿಲ್ಲ. ಆಗ ನಮಗೆ ಅರ್ಜೆಂಟಾಗಿ ಡ್ರೋನ್ ತರಲೇಬೇಕಿತ್ತು. ಆದರೆ ಕೈಯಲ್ಲಿ ಕ್ಯಾಷ್ ಇರಲಿಲ್ಲ. ಆಗ ನಾವು EMI ಮೇಲೆ ಡ್ರೋನ ತರಲು ಡಿಸೈಡ ಮಾಡಿದ್ದೇವು. ಆದರೆ ನಮ್ಮ ಟೀಮ್ ಲೀಡರ್ ಒಂದು ಬೆಸ್ಟ ಡಿಸ್ಕೌಂಟ ಆಫರನ್ನು ತೆಗೆದ್ರು. Early Bookingsಗಳ ಮೇಲೆ 10% discount and Full Paymentಗಳ ಮೇಲೆ 20% discount ಆಫರನ್ನು ತೆಗೆದರು. ನಮ್ಮ ಕಸ್ಟಮರಗಳು ಈ ಆಫರನ್ನು ಕ್ಯಾಚ್ ಮಾಡಿಕೊಂಡರು. ನಮಗೆ ಯಾವುದೇ ಸಾಲ ಮಾಡದೇ EMI ಬಡ್ಡಿ ಕಟ್ಟದೇ ಈಜಿಯಾಗಿ ಡ್ರೋನ ಸಿಕ್ಕಿತು. ಈ ರೀತಿ ನೀವು ನಿಮಗೆ ದುಡ್ಡಿನ ಕೊರತೆಯಾದಾಗ ಡಿಸ್ಕೌಂಟ ಆಫರಗಳನ್ನು ನಡೆಸಿ ಲೋನ ಮಾಡದೇ ಕಸ್ಟಮರಗಳಿಂದಲೇ ಅಡ್ವಾನ್ಸಾಗಿ ದುಡ್ಡನ್ನು ತೆಗೆದುಕೊಳ್ಳಿ.


ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot Strapping


Trick 6 : Re - Invest Your Profits in your Business

          ನಿಮ್ಮ ಬಿಜನೆಸ್ಸಲ್ಲಿ ನಿಮಗೆ ಪ್ರೋಫಿಟ್ಸ ಬಂದಾಗ ಅದನ್ನು ನಿಮ್ಮ ಪರ್ಸನಲ್ ಕೆಲಸಗಳಿಗೆ ಬಳಸಿಕೊಳ್ಳಬೇಡಿ. ಒಣ ಶೋಕಿ ಅಥವಾ ಪಾರ್ಟಿ ಮಾಡಬೇಡಿ. ನಿಮ್ಮ ತುರ್ತು ಅವಶ್ಯಕತೆಗಳನ್ನು ಪೂರೈಸಿಕೊಂಡು ಮಿಕ್ಕ ಹಣವನ್ನೆಲ್ಲ ನಿಮ್ಮ ಬಿಜನೆಸ್ಸಲ್ಲಿ ಮತ್ತೆ ರೀಇನ್ವೇಸ್ಟ ಮಾಡಿ. ನಿಮ್ಮ ಬಿಜನೆಸ್ ಫುಲ್ಲಿ ಸ್ಟೈಬಲ ಆಗುವ ತನಕ ರೀಇನ್ವೇಸ್ಟ ಮಾಡುತ್ತಲೇ ಹೋಗಿ.

                    ಈ ರೀತಿ ನೀವು ಒಂದೆರಡು ವರ್ಷ ಬಿಜನೆಸ್ ರನ್ ಮಾಡಿದರೆ ನಿಮ್ಮ ಫೈನಾನ್ಸಿಯಲ್ ಟ್ರ್ಯಾಕ್ ರೆಕಾರ್ಡ ರೆಡಿಯಾಗುತ್ತೆ. ಈಗ ನಿಮಗೆ ಯಾವ ಬ್ಯಾಂಕ ಬೇಕಾದರೂ ಲೋನ ಕೊಡಲು ಮುಂದೆ ಬರುತ್ತೆ. ಅವಶ್ಯಕತೆಯಿದ್ರೆ ಲೋನ ತೆಗೆದುಕೊಳ್ಳಿ. ಇನ್ನೂ ದೊಡ್ಡ ಹಂತಕ್ಕೆ ಅಂದ್ರೆ ನ್ಯಾಷನಲ್ ಇಂಟರನ್ಯಾಷನಲ್ ಲೆವಲಗೆ ನಿಮ್ಮ ಬಿಜನೆಸ್ಸನ್ನು ತೆಗೆದುಕೊಂಡು ಹೋಗುವ ಕನಸಿದ್ರೆ ಬಿಜನೆಸ್ ಫಂಡಿಂಗಗೆ ಟ್ರಾಯ ಮಾಡಿ, ಆಂಜೆಲ್ ಇನ್ವೇಸ್ಟರಗಳನ್ನು ಹುಡುಕಿ. ನಿಮ್ಮ ಬಿಜನೆಸ್ ಸ್ಕೇಲೆಬಲ್ ಆಗಿದ್ದರೆ ನಿಮಗೆ ಫಂಡಿಂಗ್ ಸಿಕ್ಕೇ ಸಿಗುತ್ತದೆ.


ದುಡ್ಡಿಲ್ಲದೇ ಬಿಜನೆಸ್ ಮಾಡುವುದೇಗೆ? How to do Business without money? Ultra Business Boot Strapping

                     ಗೆಳೆಯರೇ, ಈ ರೀತಿ ನೀವು ದುಡ್ಡಿಲ್ಲದೆ ಕಡಿಮೆ ದುಡ್ಡಲ್ಲಿ ಬಿಜನೆಸ್ ಮಾಡಬಹುದು. ನೆಕ್ಟ್ಸಎಪಿಸೋಡನಲ್ಲಿ ಬಿಜನೆಸ್ ಫಂಡಿಂಗ್ ಬಗ್ಗೆ ಡಿಸ್ಕಸ್ ಮಾಡೋಣಾ. ಈ ವಿಡಿಯೋ ಯುಜಫುಲ್ ಆಗಿದ್ರೆ ಲೈಕ್ ಮಾಡಿ, ಕಮೆಂಟ ಮಾಡಿ ಜೊತೆಗೆ ಚಾನೆಲಗೆ ಸಬಸ್ಕ್ರೈಬ ಮಾಡಿ ಬೆಲ್ ಐಕಾನನ್ನು ಒತ್ತಿ. All the Best and Thanks You...

Blogger ನಿಂದ ಸಾಮರ್ಥ್ಯಹೊಂದಿದೆ.