ಫಾಸ್ಟೆಸ್ಟಾಗಿ ಇಂಗ್ಲೀಷ್ ಕಲಿಯುವುದು ಹೇಗೆ? - How to learn English Quickly? in Kannada - How to learn English in Kannada

ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. "ಬೇಗನೆ ಇಂಗ್ಲೀಷ್ ಕಲಿಯುವುದು ಹೇಗೆ?" ಎಂಬ ಪ್ರಶ್ನೆ ಕಮೆಂಟನಲ್ಲಿ ಬಂದಿದೆ. ಸೋ ಇವತ್ತಿನ ಎಪಿಸೋಡನಲ್ಲಿ ಫಾಸ್ಟೆಸ್ಟಾಗಿ ಇಂಗ್ಲೀಷ ಕಲಿಯುವುದು ಹೇಗೆ ಅಂತಾ ನೋಡೋಣಾ. ನಾನು ಇಂಗ್ಲೀಷ್ ಕಲಿಯಲು ಫಾಲೋ ಮಾಡಿದ ಟಿಪ್ಸಗಳನ್ನಷ್ಟೇ ನಾನೀ ಎಪಿಸೋಡನಲ್ಲಿ ಶೇರ್ ಮಾಡುತ್ತಿರುವೆ. ಬೇಗನೆ ಇಂಗ್ಲೀಷ್ ಕಲಿಯಲು ಬೆಸ್ಟ ಟಿಪ್ಸಗಳು ಇಲ್ಲಿವೆ ;

1) First Kill the Fear of English ;
ಮೊದಲು ಇಂಗ್ಲೀಷನ ಭಯವನ್ನು ಸಾಯಿಸಿ. ನಿಮಗೆ ಇಂಗ್ಲೀಷ್ ಬರಲ್ಲ ಅಂತಾ ಭಯಪಡಬೇಡಿ ಇಲ್ಲವೇ ಕೀಳರಿಮೆ ಪಟ್ಟುಕೊಳ್ಳಬೇಡಿ. ಇಂಗ್ಲೀಷ್ ಒಂದು ಭಾಷೆ. ಅದನ್ನು ಬರೀ ಭಾಷೆಯ ತರವಷ್ಟೇ ನೋಡಿ, ಭೂತದ ತರ ನೋಡಬೇಡಿ. ನೀವು ಇಂಗ್ಲೀಷ್ ಕಲಿಯುವಾಗ ತಪ್ಪುಗಳನ್ನು ಮಾಡಲು ಹೆದರಬೇಡಿ. ನೀವು ಇಂಗ್ಲೀಷ್ ಮಾತನಾಡಿದಾಗ ಜನ ನಗುತ್ತಾರೆ ಎಂಬ ಚಿಂತೆ ಬಿಡಿ. ನೀವು ಎಲ್ಲಿ ತನಕ ಜನ ನನ್ನ ನೋಡಿ ನಗ್ತಾರೆ ಎಂಬ ಕೀಳರಿಮೆಯನ್ನು ಮತ್ತು ಭಯವನ್ನು ಬಿಡುವುದಿಲ್ಲವೋ ಅಲ್ಲಿ ತನಕ ನೀವು ಇಂಗ್ಲೀಷ್ ಕಲಿಯುವುದಿಲ್ಲ. ಅದಕ್ಕಾಗಿ ಮೊದಲು ಇಂಗ್ಲೀಷನ ಭಯವನ್ನು ಬಿಡಿ. ನಗುವ ಜನರನ್ನು ಇಗ್ನೋರ ಮಾಡಿ ಮತ್ತು ಇಂಗ್ಲೀಷ್ ಕಲಿಯಲು ಟ್ರಾಯ ಮಾಡಿ. 80-20 ಪ್ರಿನ್ಸಿಪಲನ್ನು ಅಪ್ಲಾಯ ಮಾಡಿಕೊಳ್ಳಿ. ನೀವು ಇಂಗ್ಲೀಷನ್ನು ಯಾವ ಉದ್ದೇಶಕ್ಕಾಗಿ ಕಲಿಯುತ್ತೀರುವಿರಿ ಎಂಬುದನ್ನು ಖಾತ್ರಿಪಡಿಸಿಕೊಂಡು ಒಂದು ಗೋಲ ಸೆಟ ಮಾಡಿಕೊಳ್ಳಿ. ಜೊತೆಗೆ ಆ ಗೋಲಗೆ ಒಂದು ಡೆಡಲೈನ ಫಿಕ್ಸ ಮಾಡಿ. ಟೈಮ ಲಿಮಿಟ ಸೆಟ್ ಮಾಡಿ. ಅಷ್ಟರಲ್ಲಿ ಇಂಗ್ಲೀಷ್ ಕಲಿಯಿರಿ.

2) Start to Think in English Directly ;
ಬಹಳಷ್ಟು ಜನ ಇಂಗ್ಲೀಷನ್ನು ಕಲಿಯುವಾಗ ಒಂದು ಕಾಮನ ಮಿಸ್ಟೇಕನ್ನು ಮಾಡುತ್ತಾರೆ. ಅದೇನೆಂದರೆ ಮೊದಲು ತಮ್ಮ ಮಾತೃ ಭಾಷೆಯಲ್ಲಿ ಪೂರ್ತಿ ಸೆಂಟೆನ್ಸನ್ನು ಪ್ರೀಪೇರ ಮಾಡಿಕೊಳ್ಳುತ್ತಾರೆ. ನಂತರ ಅದನ್ನು ಇಂಗ್ಲೀಷಗೆ ಟ್ರಾನ್ಸಲೇಟ ಮಾಡುತ್ತಾರೆ. ಅದಕ್ಕಾಗಿಯೇ ಅವರಿಗೆ ಇಂಗ್ಲೀಷ್ ಕಲಿಯಲು ವರ್ಷಗಟ್ಟಲೆ ಸಮಯ ಬೇಕಾಗುತ್ತದೆ. ಈ ಮೆಥಡ ತಪ್ಪು ಅಂತಾ ನಾನು ಹೇಳ್ತಿಲ್ಲ. ಆದರೆ ಈ ಮೆಥಡನಿಂದ ಇಂಗ್ಲೀಷ್ ಕಲಿಯಲು ಬಹಳಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿ ನಿಮಗೆ ಬೇಗನೆ ಇಂಗ್ಲೀಷ್ ಕಲಿಯಬೇಕೆಂಬ ಆಸೆಯಿದ್ದರೆ ನೀವು ಮಾತೃಭಾಷೆಯಲ್ಲಿ ಮೊದಲು ಯೋಚಿಸಿ ಅನಂತರ ಅದನ್ನು ಇಂಗ್ಲೀಷಗೆ ಟ್ರಾನ್ಸಲೇಟ ಮಾಡುವ ಗೋಜಿಗೆ ಹೋಗಬೇಡಿ. ಡೈರೆಕ್ಟಾಗಿ ಇಂಗ್ಲೀಷನಲ್ಲಿ ಥಿಂಕ ಮಾಡಲು ಟ್ರಾಯ ಮಾಡಿ. ಮೊದಲು ಕಷ್ಟವಾಗುತ್ತೆ. ಒಂದೊಂದೆ ಶಬ್ದವನ್ನು, ಒಂದೊಂದೆ ವಾಕ್ಯವನ್ನು ಡೈರೆಕ್ಟಾಗಿ ಇಂಗ್ಲೀಷನಲ್ಲಿ ಥಿಂಕ ಮಾಡಿ. ನಿಮ್ಮ ಇಂಗ್ಲೀಷ್ ಬೇಗನೆ ಇಂಪ್ರೂವ ಆಗುತ್ತದೆ. ಬಹಳಷ್ಟು ಇಂಗ್ಲೀಷನ್ನು ಕೇಳಿಸಿಕೊಳ್ಳಿ. ನಿಮಗೆ ಬೆಸ್ಟ ಇಂಗ್ಲೀಷ್ ಸ್ಪೀಕರಾಗಬೇಕೆಂಬ ಆಸೆಯಿದ್ದರೆ ಮೊದಲು ಬೆಸ್ಟ ಲಿಜನರಾಗಿ.

3) Increase Your Vocabulary :
ನಿಮ್ಮ ಶಬ್ದ ಸಂಗ್ರಹವನ್ನು ಹೆಚ್ಚಿಸಿಕೊಳ್ಳಿ. ಇಂಗ್ಲೀಷ್ ಆರ್ಟಿಕಲ್ಸಗಳನ್ನು, ಬ್ಲಾಗಗಳನ್ನು ಓದಿ, ಇಂಗ್ಲೀಷ್ ಇಂಟರವ್ಯುವಗಳನ್ನು, ವಿಡಿಯೋಗಳನ್ನು ನೋಡಿ. ನಿಮಗೆ ಅರ್ಥವಾಗದಿದ್ದರೂ ಓದಿ, ನಿಮಗೆ ಅರ್ಥವಾಗದಿದ್ದರೂ ನೋಡಿ. ಅಲ್ಲಿ ನಡೆಯುತ್ತಿರುವ ಆ್ಯಕ್ಷನನ್ನು ನೋಡಿ ಒಂದೊಂದೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಿಕ್ಕಾಪಟ್ಟೆ ಇಂಗ್ಲೀಷನ್ನು ಓದಿ, ಸಿಕ್ಕಾಪಟ್ಟೆ ಇಂಗ್ಲೀಷನ್ನು ಕೇಳಿಸಿಕೊಳ್ಳಿ. ನಿಮಗೆ ಇಂಗ್ಲೀಷನಲ್ಲಿ ಏನ ಸಿಗುತ್ತೋ ಅದನ್ನು ಓದಿ, ಏನ ಸಿಗುತ್ತೋ ಅದನ್ನು ನೋಡಿ. ಒಟ್ನಲ್ಲಿ ಇಂಗ್ಲೀಷ್ ಎನ್ವಿರಾನ್ಮೆಂಟನಲ್ಲಿರಿ. ಸಣ್ಣಸಣ್ಣ ಶಬ್ದಗಳನ್ನು ನೆನಪಿಡಿ, ಅವುಗಳನ್ನು ನೋಟ್ ಮಾಡಿ. ಸಣ್ಣಸಣ್ಣ ಸೆಂಟೆನ್ಸಗಳನ್ನು ಬರೆಯಲು ಸ್ಟಾರ್ಟ ಮಾಡಿ. ನಿಮ್ಮ ವೋಕ್ಯಾಬ್ಲರಿಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ತಲೆಯಲ್ಲಿ ಇಂಗ್ಲೀಷ್ ವೋಕ್ಯಾಬ್ಲರಿ ಹೆಚ್ಚಾದಾಗ ಆಟೋಮ್ಯಾಟಿಕಾಗಿ ನಿಮ್ಮ ಬಾಯಿಯಿಂದ ಇಂಗ್ಲೀಷ್ ಪದಗಳು, ಸೆಂಟೆನ್ಸಗಳು ಹೊರ ಬೀಳುತ್ತವೆ.

4) Ignore Grammar and Speak Without Grammar in the Beginning
ಆರಂಭದಲ್ಲಿ ಗ್ರಾಮರನ್ನು ಸಂಪೂರ್ಣವಾಗಿ ಇಗ್ನೋರ ಮಾಡಿ. ಅದರ ಬಗ್ಗೆ ಬಿಗಿನಿಂಗನಲ್ಲಿ ಬಹಳಷ್ಟು ತಲೆ ಕೆಡಿಸಿಕೊಳ್ಳಬೇಡಿ. ಗ್ರಾಮರನ್ನು ಇಗ್ನೋರ ಮಾಡಿ ನಿಮಗೆ ಹೇಗ ಬರುತ್ತೋ ಹಾಗೇ ಇಂಗ್ಲೀಷನ್ನು ಮಾತಾಡಿ. ಎಲ್ಲಿ ತನಕ ನೀವು ಗ್ರಾಮರಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಡಲ್ಲವೋ ಅಲ್ಲಿ ತನಕ ನೀವು ಇಂಗ್ಲೀಷ್ ಕಲಿಯಲು ಸೀರಿಯಸ್ಸಾಗಿ ಟ್ರಾಯ ಮಾಡಲ್ಲ. ಅದಕ್ಕಾಗಿ ಗ್ರಾಮರನ್ನು ನೆಗ್ಲೆಕ್ಟ ಮಾಡಿ. ಹೇಗ ಬರುತ್ತೋ ಹಾಗ ಮಾತಾಡಿ. ತಪ್ಪತಪ್ಪಾಗಿ ಮಾತಾಡಿ ಏನಾಗಲ್ಲ. Just ಮಾತಾಡಿ. ಮೊದಲು ಕನ್ನಡಿ ಮುಂದೆ ನಿಂತು ನಿಮ್ಮೊಂದಿಗೆ ನೀವೇ ಮಾತಾಡಿ. ಆನಂತರ ನಿಮ್ಮ ಕ್ಲೋಜ ಫ್ರೆಂಡ್ಸಗಳೊಂದಿಗೆ ಮಾತನಾಡುವಾಗ ಇಂಗ್ಲೀಷಲ್ಲಿ ಮಾತನಾಡಲು ಸ್ಟಾರ್ಟ ಮಾಡಿ. ನಿಮ್ಮ ಫ್ರೆಂಡ್ಸಗಳೊಂದಿಗೆ ಚಾಟ ಮಾಡುವಾಗ ಕಂಪಲ್ಸರಿಯಾಗಿ ಇಂಗ್ಲೀಷನಲ್ಲೇ ಚಾಟ ಮಾಡಿ. ನಿಮ್ಮ ಬಾಯಫ್ರೆಂಡ ಅಥವಾ ಗರ್ಲಫ್ರೆಂಡನ್ನು ಇಂಗ್ಲೀಷ್ ಕಲಿಯಲು ಸರಿಯಾಗಿ ಯುಜ ಮಾಡಿಕೊಳ್ಳಿ. ಅವರೊಂದಿಗೆ ಫೋನಲ್ಲಿ ಎರಡ್ಮೂರು ಗಂಟೆ ಮಾತಾಡುವಾಗ ಇಲ್ಲ ರಾತ್ರಿಯೆಲ್ಲ ಚಾಟ ಮಾಡುವಾಗ ಬರೀ ಇಂಗ್ಲೀಷನಲ್ಲೇ ಮಾತಾಡಿ, ಇಂಗ್ಲೀಷಲ್ಲೇ ಚಾಟ ಮಾಡಿ. ನೀವು ಎಲ್ಲಿ ತನಕ ಇಂಗ್ಲೀಷನ್ನು ಯುಜ ಮಾಡಲ್ಲವೋ ಅಲ್ಲಿ ತನಕ ನಿಮಗೆ ಇಂಗ್ಲೀಷ್ ಬರಲ್ಲ. ಅದಕ್ಕಾಗಿ ಮೊದಲು ಅದನ್ನು ಡೇಲಿ ಯುಜ ಮಾಡಿ.

5) Speak With Grammar when You get Confidence :
ನಿಮಗೆ ಯಾವಾಗ "ನಾನು ಇಂಗ್ಲೀಷನಲ್ಲಿ ಮಾತನಾಡಬಲ್ಲೇ..." ಎಂಬ ಕಾನ್ಫಿಡೆನ್ಸ್ ಬರುತ್ತೋ, ಅವತ್ತಿನಿಂದ ಗ್ರಾಮರನೊಂದಿಗೆ ಇಂಗ್ಲೀಷನ್ನು ಮಾತಾಡಲು ಟ್ರಾಯ ಮಾಡಿ. ಸ್ವಲ್ಪ ಸ್ವಲ್ಪ ಗ್ರಾಮರನ್ನು ಅರ್ಥಮಾಡಿಕೊಳ್ಳಿ. ನೀವು Sentence Formation ಹಾಗೂ Tenseಗಳನ್ನು ಕಲಿತರೆ ಸಾಕು ನಿಮಗೆ ಇಂಗ್ಲೀಷ್ ಪರಫೆಕ್ಟಾಗಿ ಬಂದಂತೆ. ಗ್ರಾಮರನ್ನು ಕಲಿಯಲು ಯುಟ್ಯೂಬ ಟುಟೋರಿಯಲ್ಸಗಳನ್ನು ನೋಡಿ. ಸಾವಿರಾರು ಟುಟೋರಿಯಲ್ಸಗಳು ಫ್ರಿಯಾಗಿವೆ. ನಿಮ್ಮ ಇಂಗ್ಲೀಷ್ ಕರೆಕ್ಟಾಗಿದೆಯಾ ಅಥವಾ ಇಲ್ವಾ ಎಂಬುದನ್ನು ಚೆಕ್ ಮಾಡಿಕೊಳ್ಳಲು ಗೂಗಲ್ ಟ್ರಾನ್ಸಲೇಟರನ್ನು ಯುಜ ಮಾಡಿ. ಅದು ಫ್ರಿಯಾಗಿದೆ.

6) Speak, Speak and Speak ;
ನಿಮಗೆ ಗ್ರಾಮರ ಸ್ವಲ್ಪ ಅರ್ಥವಾದ ನಂತರ ಸಿಕ್ಕಾಪಟ್ಟೆ ಇಂಗ್ಲೀಷನ್ನು ಮಾತನಾಡಿ. ಸಿಕ್ಕಾಪಟ್ಟೆ ಸಿಂಪಲ್ ಸೆಂಟೆನ್ಸಗಳನ್ನು ಬರೆಯಿರಿ. ದಿನಾಲು ಪರಫೆಕ್ಟಾಗಿ ಪ್ರ್ಯಾಕ್ಟೀಸ್ ಮಾಡಿ. ನಿಮ್ಮ ಮೊಬೈಲನಲ್ಲಿ ನಿಮ್ಮ ಇಂಗ್ಲೀಷ್ ಸ್ಪೀಚನ್ನು ರೆಕಾರ್ಡ್ ಮಾಡಿ. ಆನಂತರ ಅದನ್ನು ನೀವೇ ಕೇರಫುಲ್ಲಾಗಿ ಕೇಳಿ. ನಿಮ್ಮ ಮೀಸ್ಟೆಕಗಳನ್ನು ನೀವೇ ಪತ್ತೆ ಹಚ್ಚಿ ನೀವೇ ಸುಧಾರಿಸಿಕೊಳ್ಳಿ. ನಿಮಗೆ ನೀವೇ ಗುರುವಾಗಿ. ನೀವು ಎಷ್ಟು ಹೆಚ್ಚಿಗೆ ಇಂಗ್ಲೀಷನಲ್ಲಿ ಮಾತನಾಡುತ್ತಿರೋ, ಎಷ್ಟು ಹೆಚ್ಚಿಗೆ ಇಂಗ್ಲೀಷ್ ಯುಜ ಮಾಡುತ್ತಿರೋ ಅಷ್ಟು ನೀವು ಇಂಗ್ಲೀಷನಲ್ಲಿ ಎಕ್ಸಪರ್ಟಾಗುತ್ತೀರಾ. ಅದಕ್ಕಾಗಿ ಸಿಕ್ಕಾಪಟ್ಟೆ ಪ್ರ್ಯಾಕ್ಟೀಸ್ ಮಾಡಿ.

ಓಕೆ ಗೆಳೆಯರೇ, ಇವೀಷ್ಟು ನಾನು ಇಂಗ್ಲೀಷನ್ನು ಕಲಿಯಲು ಫಾಲೋ ಮಾಡಿದ ಟ್ರಿಕ್ಸಗಳು. ಅವುಗಳನ್ನೇ ನಾನು ನಿಮ್ಮೊಂದಿಗೆ ಶೇರ್ ಮಾಡಿರುವೆ. ನಿಮಗೆ ಈ ಅಂಕಣ ಯುಜಫುಲ ಅಂತಾ ಈ ಅಂಕಣಕ್ಕೆ ಲೈಕ ಮಾಡಿ. ಜೊತೆಗೆ ಫೇಸ್ಬುಕ್, ಇನ್ಸಸ್ಟಾಗ್ರಾಮ, ಟ್ವಿಟ್ಟರ್ ಹಾಗೂ ಯುಟ್ಯೂಬಗಳಲ್ಲಿ ನನ್ನ ಫಾಲೋ ಮಾಡಿ. ಧನ್ಯವಾದಗಳು...