ನಿಮ್ಮನ್ನು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಳ್ಳುವುದಕ್ಕಿಂತ ಮುಂಚೆ ಇದನ್ನು ಅರ್ಥಮಾಡಿಕೊಳ್ಳಿ - Know this before comparing yourself with others in Kannada

                  ಹಾಯ್ ಗೆಳೆಯರೇ, ನಿಮ್ಮನ್ನು ನೀವು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಳ್ಳುತ್ತಿದ್ದರೆ ಮೊದಲು ನೀವು ಈ ರೀತಿ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ನಿಮ್ಮನ್ನು ನೀವು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಂಡಷ್ಟು ನಿಮ್ಮಲ್ಲಿ ಕೀಳರಿಮೆ ಹೆಚ್ಚಾಗುತ್ತದೆ. ನಿಮ್ಮ ಮೇಲೆ ನಿಮಗೆ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ. ಬೇರೆಯವರತ್ರ ಇರುವ ವಸ್ತುಗಳು ನಿಮ್ಮತ್ರ ಇಲ್ಲದಿದ್ದರೆ ನಿಮಗೆ ಅವರ ಮೇಲೆ ಜಲಸಿ ಫೀಲಾಗುತ್ತದೆ, ಹೊಟ್ಟೆಕಿಚ್ಚು ಮೂಡುತ್ತದೆ. ನಿಮ್ಮ ಹೊಟ್ಟೆಕಿಚ್ಚು ನಿಮ್ಮನ್ನೇ ಸುಡುತ್ತದೆ. ಅದಕ್ಕಾಗಿ ನಿಮ್ಮನ್ನು ನೀವು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಳ್ಳಬೇಡಿ.

                        ಬಿಲಗೇಟ್ಸ ಹೇಳಿದಂತೆ ನಿಮ್ಮನ್ನು ನೀವು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಂಡರೆ ನಿಮ್ಮನ್ನು ನೀವು ಅವಮಾನಿಸಿದಂತೆ. ಅದಕ್ಕಾಗಿ ನಿಮ್ಮನ್ನು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಳ್ಳಬೇಡಿ. ಬೇರೆಯವರೊಂದಿಗೆ ಕಂಪೇರ್ ಮಾಡಿಕೊಂಡು ನನ್ನತ್ರ ಅದಿಲ್ಲ, ಇದಿಲ್ಲ, ಕಾರಿಲ್ಲ, ದೊಡ್ಡ ಮನೆಯಿಲ್ಲ, ಬ್ಯಾಂಕ್ ಬ್ಯಾಲನ್ಸ ಚೆನ್ನಾಗಿಲ್ಲ, ಗರ್ಲಫ್ರೆಂಡಿಲ್ಲ ಅಂತಾ ಕೊರಗಬೇಡಿ. ಕೊರಗಿ ಕೊರಗಿ ಕರಗಬೇಡಿ. ನಿಮ್ಮತ್ರ ಕಾರು, ಮನೆ, ಬ್ಯಾಂಕ್ ಬ್ಯಾಲೆನ್ಸ್, ನೇಮ, ಫೇಮ್, ಗರ್ಲಫ್ರೆಂಡ್, ಬಾಯಫ್ರೆಂಡ್ ಇಲ್ಲದಿದ್ದರೆ ಅದರಲ್ಲಿ ಕೊರಗುವಂಥದ್ದು ಏನಿದೆ? ಕೆಲಸ ಮಾಡಿ, ಕಷ್ಟ ಪಡಿ, ನೀವು ಇಷ್ಟ ಪಟ್ಟಿದ್ದನ್ನೆಲ್ಲ ಪಡೆದುಕೊಳ್ಳಿ. ಯಾರು ನಿಮ್ಮನ್ನು ತಡೆಯುತ್ತಿದ್ದಾರೆ? Who is stopping you? ನಿಮಗೇನು ಬೇಕೋ ಅದನ್ನು ಕೆಲಸ ಮಾಡಿ ಪಡೆದುಕೊಳ್ಳಿ. ಆದರೆ ನಿಮ್ಮನ್ನು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಂಡು ಕೊರಗಬೇಡಿ.

                   ನೀವು ತೆಳ್ಳಗಿದ್ದರೂ, ದಪ್ಪಗಿದ್ದರೂ, ಬೆಳ್ಳಗಿದ್ದರೂ, ಕಪ್ಪಗಿದ್ದರೂ, ಕುಳ್ಳಗಿದ್ದರೂ, ಸುಂದರವಾಗಿದ್ದರೂ ನೀವು ನೀವಾಗಿರುವಿರಿ ಎಂಬುದನ್ನು ಮರೆಯದಿರಿ. ಸಾಧಿಸಲು ನಿಮ್ಮ ಸೌಂದರ್ಯ ಮುಖ್ಯವಲ್ಲ, ವರ್ಕಿಂಗ್ ಸ್ಟೈಲ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಕುಂಡಲಿಯಿಂದ ನಿಮಗೆ ಸಕ್ಸೆಸ್ ಸಿಗುವುದಿಲ್ಲ, ನಿಮ್ಮ ಕೆಲಸದಿಂದ ನಿಮಗೆ ಸಕ್ಸೆಸ್ ಸಿಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಅದಕ್ಕಾಗಿ ನಿಮ್ಮನ್ನು ಬೇರೆ ಯಾರೊಂದಿಗೂ ಕಂಪೇರ್ ಮಾಡಿಕೊಂಡು ಕೊರಗಬೇಡಿ. ನೀವು ಬೇರೆಯವರಿಗಿಂತ ಕಮ್ಮಿಯಾಗಿದ್ದೀರಿ ಎಂದು ಭಾವಿಸಿ ನಿಮಗೆ ನೀವೇ ವಂಚಿಸಿಕೊಳ್ಳಬೇಡಿ. ನೀವು ಬೇರೆಯವರಿಗಿಂತ ಯುನಿಕ್ ಆಗಿರುವಿರಿ, ಸ್ಪೆಷಲ್ ಆಗಿರುವಿರಿ, ಬೆಸ್ಟ ಆಗಿರುವಿರಿ ಎಂಬುದನ್ನು ಮರೆಯಬೇಡಿ. ಒಂದು ಹೇಳಿಕೆಯ ಪ್ರಕಾರ ಈ ಜಗತ್ತಿನಲ್ಲಿ ನಿಮ್ಮನ್ನು ಹೋಲುವ ಏಳು ಜನರಿರುತ್ತಾರೆ. ಸದ್ಯಕ್ಕೆ ಜಗತ್ತಿನ ಜನಸಂಖ್ಯೆ 700 ಕೋಟಿಗಿಂತಲೂ ಅಧಿಕವಾಗಿದೆ ಎಂದರೆ ನೀವು 100 ಕೋಟಿಗೊಬ್ಬರು ಎಂಬುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಮೇಲೆ ನೀವು ಹೆಮ್ಮೆ ಪಟ್ಟುಕೊಳ್ಳಿ. ನಿಮಗೆ ನಿಮ್ಮ ಮೇಲೆ ಗರ್ವವಿರಬೇಕು.

                ಈ ಜಗತ್ತಿನಲ್ಲಿ ಎಲ್ಲರೂ ವಿಭಿನ್ನವಾಗಿದ್ದಾರೆ, ಯುನಿಕ್ ಆ್ಯಂಡ್ ಸ್ಪೆಷಲ್ ಆಗಿದ್ದಾರೆ. ಯಾರು ಗ್ರೇಟಲ್ಲ, ಯಾರು ಕೀಳಲ್ಲ. ಎಲ್ಲರೂ ಅವರವರ ಅವಶ್ಯಕತೆಗಳಿನುಸಾರವಾಗಿ ಕೆಲಸ ಮಾಡುತ್ತಿದ್ದಾರೆ, ಕಷ್ಟಪಡುತ್ತಿದ್ದಾರೆ. ಎಲ್ಲರ ಡಿ.ಎನ.ಎ ಸ್ಟ್ರಕ್ಚರ್ ಬೇರೆಬೇರೆಯಿದೆ, ಎಲ್ಲರ ಫಿಂಗರಪ್ರಿಂಟ್ ಬೇರೆಬೇರೆಯಿದೆ, ಎಲ್ಲರ ಆಸೆ-ಆಕಾಂಕ್ಷೆಗಳು, ವಿಚಾರಧಾರೆಗಳು, ಕನಸುಗಳು ಬೇರೆಬೇರೆಯಾಗಿವೆ. ಎಲ್ಲರೂ ಅವರವರ ಸಿದ್ಧಾಂತಗಳಂತೆ ಸರಿಯಾಗಿದ್ದಾರೆ. ಅದಕ್ಕಾಗಿ ನೀವು ಬೇರೆ ಯಾರೊಂದಿಗೂ ನಿಮ್ಮನ್ನು ಕಂಪೇರ್ ಮಾಡಿಕೊಳ್ಳಬೇಡಿ. ನೀವು ಕಂಪೇರ್ ಮಾಡಿಕೊಂಡಷ್ಟು ನಿಮಗೆ ದು:ಖವಾಗುತ್ತದೆ, ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ.

              ನೀವು ಎಲ್ಲರನ್ನೂ ಗಮನಿಸಿ, ಅವರ ಸಕ್ಸೆಸ್ ಟ್ರಿಕ್ಸಗಳನ್ನು ಅರ್ಥ ಮಾಡಿಕೊಳ್ಳಿ. ಆದರೆ ಯಾರನ್ನು ಬ್ಲೈಂಡ್ಲಿ ಫಾಲೋ ಮಾಡಬೇಡಿ. ನಿಮ್ಮನ್ನು ನೀವು ಬೇರೆಯವರೊಂದಿಗೆ ಕಂಪೇರ ಮಾಡಿಕೊಂಡು ಕಾಂಪಿಟೇಷನ್ ಮಾಡುವುದಕ್ಕಿಂತ ನಿಮ್ಮೊಂದಿಗೆ ನೀವು ಕಾಂಪಿಟೇಷನ್ ಮಾಡಿ. ನಿಮ್ಮನ್ನು ಬರೀ ನಿಮ್ಮೊಂದಿಗೆ ಮಾತ್ರ ಕಂಪೇರ್ ಮಾಡಿಕೊಳ್ಳಿ. ನಿನ್ನೆಗಿಂತ ಇವತ್ತು ನೀವು ಎಷ್ಟು ಡೆವಲಪ ಆಗಿರುವಿರಿ, ಎಷ್ಟು ಬೆಸ್ಟ ಆಗಿರುವಿರಿ, ನಿನ್ನೆಗಿಂತ ಇವತ್ತು ಎಷ್ಟು ಗಂಟೆ ಹೆಚ್ಚಿಗೆ ಕೆಲಸ ಮಾಡಿರುವಿರಿ, ಎಷ್ಟು ಹೆಚ್ಚಿಗೆ ಹಣ ಗಳಿಸಿರುವಿರಿ ಎಂಬುದನ್ನು ಲೆಕ್ಕ ಹಾಕಿ. ನೀವು ಬೇರೆಯವರೊಂದಿಗೆ ಕಾಂಪಿಟೇಷನ್ ಮಾಡಿದರೆ ನೀವು ನಂಬರ-1 ಆಗಬಹುದು. ಆದರೆ ನೀವು ಬರೀ ನಿಮ್ಮೊಂದಿಗಷ್ಟೇ ಕಾಂಪಿಟೇಷನ್ ಮಾಡಿದರೆ ನೀವು ಒನ್ಲಿ-1 ಆಗುತ್ತೀರಾ. ಅದಕ್ಕಾಗಿ ನಿಮ್ಮನ್ನು ಬೇರೆ ಯಾರೊಂದಿಗೆ ಕಂಪೇರ್ ಮಾಡಿಕೊಳ್ಳಬೇಡಿ, ಬೇರೆ ಯಾರೊಂದಿಗೂ ಕಾಂಪಿಟ ಮಾಡಬೇಡಿ. ನಿಮ್ಮನ್ನು ನಿಮ್ಮೊಂದಿಗೆ ಮಾತ್ರ ಕಂಪೇರ್ ಮಾಡಿಕೊಂಡು ನಿಮ್ಮೊಂದಿಗೆ ನೀವೇ ಕಾಂಪಿಟ ಮಾಡಿ ದಿ ಬೆಸ್ಟ ಆಗಲು ಪ್ರಯತ್ನಿಸಿ. ಮಾಸ್ಟರ್ ಪೀಸ್ ಆಗಲು ಪ್ರಯತ್ನಿಸಿ. ಆಗ ನೋಡಿ ನಿಮ್ಮ ಲೈಫ ಎಷ್ಟೊಂದು ಬ್ಯೂಟಿಫುಲ್ ಆಗಿರುತ್ತದೆ, ಹ್ಯಾಪಿಯಾಗಿರುತ್ತದೆ, ಸಕ್ಸೆಸಫುಲ್ ಆಗಿರುತ್ತದೆ ಅಂತಾ. ದಿ ಬೆಸ್ಟಾಗಿ. All the Best and Thanks You.
 
.jpg)

 
 
 
 
