ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model in Kannada

ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model

                                                       ಬಿಜನೆಸ್ ಲೆಸನ್ - 19

                                ಹಾಯ್ ಗೆಳೆಯರೇ, ನನಗೆ ಬಹಳಷ್ಟು ಜನ ಆವಾಗಾವಾಗ "ಸರ್ ನಾನು ಬಿಜನೆಸ್ ‌ಮಾಡಬೇಕು ಎಂದುಕೊಂಡಿರುವೆ, ಆದರೆ ಯಾವ ಬಿಜನೆಸ್ ‌ಮಾಡಲಿ ಎಂಬುದು ತಿಳಿಯದಾಗಿದೆ? ಯಾವ ಬಿಜನೆಸ್ ಮಾಡಿದರೆ ಸಾಕಷ್ಟು ಲಾಭವಾಗುತ್ತದೆ? ಯಾವ ಬಿಜನೆಸ್ ಮಾಡಲಿ? ಬಿಜನೆಸ್ ಐಡಿಯಾ ಹುಡುಕುವುದು ಹೇಗೆ?" ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಲೆ ಇರುತ್ತಾರೆ. ಸೋ ಬನ್ನಿ ಗೆಳೆಯರೇ‌ ಇವತ್ತಿನ ಬಿಜನೆಸ್ ಲೆಸನನಲ್ಲಿ "ಯಾವ ಬಿಜನೆಸ್ ಹೆಚ್ಚಿಗೆ ಲಾಭವನ್ನು ತಂದುಕೊಡುತ್ತದೆ? ಎಂಥಹ ಬಿಜನೆಸ್ಸನ್ನು ಪ್ರಾರಂಭಿಸಬೇಕು?" ಎಂಬುದನ್ನು ನೋಡೊಣಾ.

ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model

                   ಗೆಳೆಯರೇ, ಬಿಜನೆಸ್ ಐಡಿಯಾವನ್ನು ಹುಡುಕುವುದು ಸಿಂಪಲಾಗಿದೆ‌. ಮಾರ್ಕೆಟನಲ್ಲಿ ಸ್ವಲ್ಪ ಸುತ್ತಾಡಿ, ಹೊರಗಡೆ ಸುತ್ತಾಡಿ, ದೇಶದಲ್ಲಿ ಸುತ್ತಾಡಿ. ನಿಮ್ಮ ಕಣ್ಣಿಗೆ ಎಷ್ಟು ಪ್ರಾಬ್ಲಮ್ಸಗಳು ಕಾಣಿಸುತ್ತವೆಯೋ ಅವೆಲ್ಲವೂ ‌ಸಹ ಬಿಜನೆಸ್ ಐಡಿಯಾಗಳಾಗಿವೆ. ಹೌದು ಗೆಳೆಯರೇ, ಇವೆಲ್ಲ ಪ್ರಾಬ್ಲಮಗಳು ಪ್ರೋಫಿಟೇಬಲ್ ಬಿಜನೆಸ್ ಐಡಿಯಾಗಳಾಗಿವೆ‌. ಸದ್ಯಕ್ಕಿರುವ ಟೆಕ್ನಾಲಜಿಯನ್ನು ಬಳಸಿಕೊಂಡು ಯಾವುದಾದರೂ ಒಂದು ಪ್ರಾಬ್ಲಮನ್ನು ಸಾಲ್ವ ಮಾಡಿ ಇದೇ ದೊಡ್ಡ ಬಿಜನೆಸ್ ಆಗುತ್ತದೆ. ನಿಮ್ಮ ಬಿಜನೆಸನಿಂದ ಅಥವಾ ಪ್ರೋಡಕ್ಟನಿಂದ ಯಾವುದಾದರೂ ಒಂದು ಪ್ರಾಬ್ಲಮ ಸಾಲ್ವ ಆಗುತ್ತಿದ್ದರೆ ಮಾತ್ರ ನಿಮಗೆ ಪ್ರೋಫಿಟಾಗುತ್ತದೆ. ನಿಮ್ಮ ಬಿಜನೆಸ್ PSB ಆಗಿದ್ದರೆ ಅಂದರೆ Problem Solving Business ಆಗಿದ್ದರೆ ನಿಮಗೆ ಅಟೋಮ್ಯಾಟಿಕ್ಕಾಗಿ ಪ್ರೋಫಿಟಾಗುತ್ತದೆ. ಸೋ ಮೊದಲು ನೀವು ಪ್ರಾಬ್ಲಮ ಸಾಲ್ವ ಮಾಡುವುದರ ಮೇಲೆ ಫೋಕಸ್ ಮಾಡಿ ಪ್ರೋಫಿಟ ತಾನಾಗಿಯೇ ಬರುತ್ತದೆ. ಅದಕ್ಕಾಗಿ ಗೆಳೆಯರೇ ನಿಮಗೆ ಹೆಚ್ಚಿನ ಲಾಭವನ್ನು ಗಳಿಸಬೇಕು ಎಂಬಾಸೆಯಿದ್ದರೆ Problem Solving Business ಪ್ರಾರಂಭಿಸಿ. ನಿಮ್ಮ ಪ್ರೋಡಕ್ಟ ಆಪ್ಶನ್ ಆಗಿರಬಾರದು, ಕಂಪಲ್ಶನ ಆಗಿರಬೇಕು ಅಂಥಹ ಪ್ರೋಡಕ್ಟನ್ನು ಇನ್ನೋವೇಟ ಮಾಡಿ. ಅಂದಾಗಲೇ ನೀವು ಹೆಚ್ಚಿಗೆ ಲಾಭಗಳಿಸುತ್ತೀರಿ ಮತ್ತು ಬೇಗನೆ ಬಿಲೆನಿಯರ್ ಆಗುತ್ತೀರಿ. ಈ ಉದಾಹರಣೆಗಳನ್ನು ಗಮನಿಸಿ ನಿಮಗೆ ಐಡಿಯಾ ಬರುತ್ತದೆ.


ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model

* ಜನರಿಗೆ ತಮ್ಮ ಜೀವನಕ್ಕಿಂತ ಬೇರೆಯವರ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುವಲ್ಲಿ ಹೆಚ್ಚಿಗೆ ಆಸಕ್ತಿಯಿದೆ. ಜನರಿಗೆ ತಮ್ಮ ಲೈಫನ್ನು ಎಕ್ಸಪೋಸ ಮಾಡಲು ಮತ್ತು ಟೈಮಪಾಸ ಮಾಡಲು ಒಂದು ಆನಲೈನ ಪ್ಲಾಟಫಾರ್ಮನ ಅವಶ್ಯಕತೆ ಇದೆಯೆಂದಾಗ ಮಾರ್ಕ ಝುಕರಬರ್ಗರಿಂದ ಫೇಸ್ಬುಕ್ ಮಾರುಕಟ್ಟೆಗೆ ಬಂತು. ಈಗ ಸದ್ಯಕ್ಕೆ ಫೇಸ್ಬುಕ್ ಜಗತ್ತಿನ ಅತಿದೊಡ್ಡ ಸೋಸಿಯಲ್ ಮೇಡಿಯಾ ಸೈಟಾಗಿದೆ‌. ಜೊತೆಗೆ ಬೆಸ್ಟ್ ಆನಲೈನ ಅಡ್ವಟೈಜಿಂಗ್ ಪ್ಲಾಟಫಾರ್ಮ ಆಗಿದೆ‌.

* ಜನರಿಗೆ ವಿಡಿಯೋಗಳನ್ನು ಶೇರ್ ಮಾಡಲು ಯಾವುದೇ ಸಮರ್ಪಕ ಸಾಧನಗಳಿಲ್ಲದಿರುವಾಗ ಜಾವೆದ ಕರೀಮ ಹಾಗೂ ಅವರ ಗೆಳೆಯರಿಂದ ಯುಟ್ಯೂಬ ಜನ್ಮತಾಳಿತು. ಸದ್ಯಕ್ಕೆ ಯುಟ್ಯೂಬ ಗೂಗಲ್ ನಂತರ ಎರಡನೇ ಅತಿದೊಡ್ಡ ಸರ್ಚ ಇಂಜೀನ ಆಗಿದೆ.‌

* ಜನರಿಗೆ ತಮ್ಮ ಪ್ರತಿಷ್ಟೆಗೆ ತಕ್ಕಂತೆ ಕ್ವಾಲಿಟಿ ಆ್ಯಂಡ್ ಸೆಕ್ಯುರ್ ಮೊಬೈಲ್‌ ಪೋನಗಳ ಅವಶ್ಯಕತೆ ಇದೆಯೆಂದಾಗ ಐಪೋನ ಮಾರುಕಟ್ಟೆಗೆ ಬಂದಿತು. ಇಂದಿಗೂ ಐಪೋನ ಖರೀದಿಸುವುದು ಎಷ್ಟೋ ಜನರ ಕನಸಾಗಿದೆ.


ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model

* ಜನರಿಗೆ ಬೇರೆಬೇರೆ ಊರುಗಳಿಗೆ ಹೋದಾಗ, ಪ್ರವಾಸಕ್ಕೆ ಹೋದಾಗ ಒಳ್ಳೇ ಕ್ವಾಲಿಟಿ ರೂಮಗಳು ಸಿಗದಾಗಿವೆ, ರೂಮಗಳನ್ನು ಹುಡುಕಲು ಬಹಳಷ್ಟು ತೊಂದರೆಯಾಗುತ್ತಿದೆ ಎಂಬುದು ರಿತೇಶ ಅಗರವಾಲ ಅವರ ಗಮನಕ್ಕೆ ಬಂದಾಗ ಒಯೋ ರೂಮ್ಸ ಜನ್ಮತಾಳಿತು. ಸದ್ಯಕ್ಕೆ ಒಯೋ ಭಾರತದ ಅತಿದೊಡ್ಡ ಹೊಟೆಲ್ ರೂಮ ಚೈನಾಗಿದೆ.

* ದೊಡ್ಡ ದೊಡ್ಡ ನಗರಗಳಲ್ಲಿ ಸಂಚರಿಸುವ ಜನರಿಗೆ ಟೈಮಕ್ಕೆ ಬರದ ಮಹಾನಗರ ಪಾಲಿಕೆ ಬಸ್ಸುಗಳಿಂದ ಹಾಗೂ ತಲೆ ತಿನ್ನುವ ಅಟೋದವರಿಂದ ಸಿಕ್ಕಾಪಟ್ಟೆ ಟೈಮ ವೇಸ್ಟಾಗುತ್ತಿದೆ, ತೊಂದರೆಯಾಗುತ್ತಿದೆ ಎಂದಾಗ ಓಲಾ ಆ್ಯಂಡ ಉಬರ ಕಂಪನಿಗಳ ಕಾರುಗಳು ರಸ್ತೆಗಿಳಿದವು. ಈ ಎರಡೂ ಕಾರ ರೆಂಟಲ ಕಂಪನಿಗಳಿಂದ ಎಷ್ಟೋ ಜನ ಡ್ರೈವರಗಳಿಗೆ ರೆಗ್ಯುಲರ ಕೆಲಸ ಸಿಗುವುದರ ಜೊತೆಗೆ ಸೀಟಿ ಟ್ರಾವೆಲ್ ಪ್ರಾಬ್ಲಮ ಸಾಲ್ವಾಗಿದೆ.

* ಜನರಿಗೆ ಆನಲೈನನಲ್ಲಿ ಬಸ್ ಬುಕ್ ಮಾಡಲು ಬೆಸ್ಟ ಆ್ಯಪಗಳಿಲ್ಲ ಎಂದಾಗ ರೆಡ ಬಸ್ ಮಾರುಕಟ್ಟೆಗೆ ಬಂದಿತು ಹಾಗೂ ಬಸ್ ಬುಕ್ಕಿಂಗ್ ಪ್ರಾಬ್ಲಮ ಸಾಲ್ವಾಯಿತು.

* ಜನರಿಗೆ ಮಾರ್ಕೆಟಿಗೆ ಹೋಗಿ ವಸ್ತುಗಳನ್ನು ಖರೀದಿಸುವಷ್ಟು ಟೈಮಿಲ್ಲ ಎಂಬುದು ಗೊತ್ತಾದಾಗ ಅಮೆಜಾನನಂಥ ಈ ಕಾಮರ್ಸ ಕಂಪನಿಗಳು ಸ್ಟಾರ್ಟ ಆದವು‌. ಆನಲೈನನಲ್ಲೇ ಬುಕ್ಕಿಂಗ್ ತೆಗೆದುಕೊಂಡು ಜನರ ಮನೆ ಬಾಗಿಲಿಗೆ ವಸ್ತುಗಳನ್ನು ಡೆಲಿವರಿ ಕೊಡಲು ಪ್ರಾರಂಭಿಸಿದವು. ಸದ್ಯಕ್ಕೆ ಅಮೆಜಾನ್ ಫ್ಲಿಪಕಾರ್ಟನಂಥ ಈ ಕಾಮರ್ಸ ಕಂಪನಿಗಳು ಎಷ್ಟೋ ಪ್ರೋಡಕ್ಟ ಮ್ಯಾನುಫ್ಯಾಕ್ಚರಿಂಗ ಕಂಪನಿಗಳಿಗೆ ಮತ್ತು ಜನರಿಗೆ ಬೆಸ್ಟ ಮಾರುಕಟ್ಟೆಯಾಗಿವೆ‌‌‌.


ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model

* ಸಿಕ್ಕಸಿಕ್ಕಿದ್ದನೆಲ್ಲ ತಿಂದು ಜನರ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ, ಇಂಗ್ಲೀಷ್ ಮೆಡಿಸಿನಗಳಿಂದ ಜನರ ಆರೋಗ್ಯ ಹದಗೆಡುತ್ತಿದೆ ಎಂಬುದು ಗೊತ್ತಾದಾಗ ಬಾಬಾ ರಾಮದೇವರಿಂದ ಪತಂಜಲಿ ಕಂಪನಿಯ ಉಗಮವಾಯಿತು. ಫ್ರೀ ಯೋಗದ ಜೊತೆಗೆ ಆಯುರ್ವೇದ ಮೆಡಿಸಿನಗಳನ್ನು, ಫುಡ್ ಪ್ರೋಡಕ್ಟಗಳನ್ನು ಮಾರಿ ವಿದೇಶಿ ಕಂಪನಿಗಳನ್ನು ಹಿಂದಿಕ್ಕಿ ಪತಂಜಲಿ ಕಂಪನಿ ಫಾಸ್ಟೆಸ್ಟಾಗಿ ಗ್ರೋ ಆಗುತ್ತಿದೆ.

* ಎಜುಕೇಶನ್ ಫೀಲ್ಡಲ್ಲಿರೋ ಪ್ರಾಬ್ಲಮಗಳನ್ನು ಸಾಲ್ವ ಮಾಡಿ ಆನಲೈನನಲ್ಲಿ ಕ್ವಾಲಿಟಿ ಎಜುಕೇಶನ್ ನೀಡುವುದಕ್ಕಾಗಿ ಬೈಜುಸ್ ಮಾರುಕಟ್ಟೆಗೆ ಬಂತು. ಕಾಂಪಿಟೇಟಿವ ಎಕ್ಸಾಮಗಳಿಗೆ ಬೆಸ್ಟ ಸ್ಟಡಿ ಮಟಿರಿಯಲ್ ಹಾಗೂ ಟ್ರೇನಿಂಗನ್ನು ನೀಡಲು ಅನ-ಅಕಾಡೆಮಿ ಮಾರುಕಟ್ಟೆಗೆ ಬಂತು.

* ಕೋಲನಿಂದ ವಾಯುಮಾಲಿನ್ಯವಾಗುತ್ತಿದೆ ಹಾಗೂ ಸೂರ್ಯನ ಎನರ್ಜಿ ಸುಮ್ಮನೆ ವೇಸ್ಟಾಗುತ್ತಿದೆ ಎಂಬುದು ಗಮನಕ್ಕೆ ಬಂದಾಗ ಸೋಲಾರ ಪ್ರೋಡಕ್ಟಗಳು ಮಾರುಕಟ್ಟೆಗೆ ಕಾಲಿಟ್ಟವು.

* ಪೆಟ್ರೋಲ್, ಡಿಜೇಲಗಳಿಂದ ವಾಯುಮಾಲಿನ್ಯವಾಗುತ್ತಿದೆ, ಓಝೋನ ಪದರು ಹಾಳಾಗುತ್ತಿದೆ, ಅಲ್ಲದೇ ಈ ಪೆಟ್ರೋಲ್ ಡಿಜೇಲಗಳು ಬೇಗನೆ ಖಾಲಿಯಾಗುವ ಸಾಧ್ಯತೆಯಿದೆ ಎಂಬುದು ಗಮನಕ್ಕೆ ಬಂದಾಗ ಈಲಾನ ಮಸ್ಕ ಎಲೆಕ್ಟ್ರಿಕ್ ಕಾರುಗಳನ್ನು ರೆಡಿ ಮಾಡಲು ಪ್ರಾರಂಭಿಸಿದರು. ಈಗ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಕಾಲಿಡಲು ರೆಡಿಯಾಗಿವೆ‌‌.


ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model

* ಜನರಿಗೆ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಬಹಳಷ್ಟು ತಲೆನೋವಾಗುತ್ತಿದೆ ಎಂಬುದು ಗೊತ್ತಾದಾಗ ಪೇಪಾಲ ಪ್ರಾರಂಭವಾಯಿತು. ಅದನ್ನು ನೋಡಿ ಈಗ ಭಾರತದಲ್ಲಿ ಪೇಟಿಯಮ್, ಗೂಗಲ ಪೇ, ಫೋನ ಪೇ ಇತ್ಯಾದಿ ಮನಿ ಟ್ರಾಂಜಾಕ್ಷನ  ಆ್ಯಪಗಳು ಬಂದಿವೆ‌‌.‌ ಇವುಗಳಿಂದ ‌ಜನ ಈಜಿಯಾಗಿ ಪೇಮೆಂಟ ಮಾಡುತ್ತಿದ್ದಾರೆ ಜೊತೆಗೆ ಪೇಮೆಂಟಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಕ್ಯಾಷಲೆಸ್ ಜಮಾನಾ ಬಂದಿದೆ.

* ಜನರಿಗೆ ಹೊಟೆಲ್ ಹಾಗೂ ರೆಸ್ಟೊರೆಂಟಗಳಿಗೆ ಹೋಗಿ ಫುಡ್ ತರೋವಷ್ಟು ಟೈಮಿಲ್ಲ ಎಂದಾಗ Zomato, Uber Eatsನಂಥ ಆನಲೈನ ಫುಡ್ ಡೆಲಿವರಿ ಕಂಪನಿಗಳು ಸ್ಟಾರ್ಟಾದವು.

* ಜನರ ಬೇರೆಬೇರೆ ಪ್ರಾಬ್ಲಮಗಳನ್ನು ಸಾಲ್ವ ಮಾಡುವುದಕ್ಕಾಗಿ ಗೂಗಲನಿಂದ ಆ್ಯಂಡ್ರಾಯಿಡ್, ಪ್ಲೆಸ್ಟೋರ್, ಗೂಗಲ ಮ್ಯಾಪ್ಸ, ಗೂಗಲ ಟ್ರಾನ್ಸಲೇಟರ್, ಜೀಮೇಲ, ಗೂಗಲ ಪೇ ಇತ್ಯಾದಿ ಸರ್ವಿಸಗಳು ಸ್ಟಾರ್ಟಾದವು‌.

* ಜನ ಬೋರಿಂಗ ಸಿನಿಮಾ ಹಾಗೂ ಟಿವಿ ಸೀರಿಯಲಗಳನ್ನು ನೋಡಿ ಬೋರಾಗಿದ್ದಾರೆ ಎಂಬುದು ಗೊತ್ತಾದಾಗ ಕ್ವಾಲಿಟಿ  ಆ್ಯಂಡ್ ಸ್ವಲ್ಪ ನ್ವಾಟಿ ಎಂಟರಟೈನಮೆಂಟಗಾಗಿ ನೆಟಫ್ಲಿಕ್ಸ, ಅಮೆಜಾನ್ ಪ್ರೈಮ, ಉಲ್ಲು, ಅಲ್ಟ ಬಾಲಾಜಿಗಳಂಥ OTT ಪ್ಲಾಟಫಾರ್ಮಗಳು ಜನ್ಮತಾಳಿದವು.

Etc Etc Etc...


ಇಂಥಹ ಬಿಜನೆಸ್ ‌ನಿಮಗೆ ಹೆಚ್ಚಿಗೆ ಲಾಭ ತಂದು‌ ಕೊಡುತ್ತದೆ - Problem Solving Business Model

                       ಗೆಳೆಯರೇ, ಈ ರೀತಿ ನಿಮ್ಮ ಬಿಜನೆಸ, ಪ್ರೋಡಕ್ಟ ಅಥವಾ ಸರ್ವಿಸ್ ಸಹ ಪ್ರಾಬ್ಲಮ ಸಾಲ್ವಿಂಗ್ ಬಿಜನೆಸ್ ಆಗಿದ್ದರೆ, ಆಪ್ಶನ ಆಗದೇ ಕಂಪಲ್ಶನ ಆಗಿದ್ದರೆ ಮಾತ್ರ ನಿಮಗೆ ದೊಡ್ಡ ಪ್ರಮಾಣದಲ್ಲಿ ಲಾಭವಾಗುತ್ತದೆ. ಈ ಜಗತ್ತಿನಲ್ಲಿ ಎಷ್ಟು ಜನ ಸಕ್ಸೆಸಫುಲ್ ಬಿಜನೆಸಮ್ಯಾನಗಳಿದ್ದಾರೋ ಅವರೆಲ್ಲರೂ ಇರೋ ಪ್ರಾಬ್ಲಮಗಳನ್ನು ಸಾಲ್ವ ಮಾಡಿ‌‌ ಅದನ್ನೆ ಬಿಜನೆಸ್ ‌ಮಾಡಿಕೊಂಡಿದ್ದಾರೆ. ನೀವು ಅದೇ‌ ರೀತಿ ಮಾಡಿ. ನಿಮಗೊಂದು ಸಣ್ಣ ಹೋಮವರ್ಕ ಇದೆ. ನೀವು ಗಮನಿಸಿದ ಪ್ರಾಬ್ಲಮ ಸಾಲ್ವಿಂಗ ಬಿಜನೆಸ್ಸಗಳನ್ನು ಕಮೆಂಟ ಮಾಡಿ. ಜೊತೆಗೆ ಈ ಅಂಕಣಕ್ಕೆ ಲೈಕ ಮಾಡಿ ಹಾಗೂ ನನ್ನ ಯುಟ್ಯೂಬ ಚಾನೆಲಗೆ ಸಬ್ ಕ್ರೈಬ ಮಾಡಿ. All the Best and Thanks You...

Blogger ನಿಂದ ಸಾಮರ್ಥ್ಯಹೊಂದಿದೆ.