ಈ ಕಾರಣದಿಂದಾಗಿ ನೀವು ಯಶಸ್ವಿಯಾಗಲ್ಲ - Top Reasons for your Failure in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈ ಕಾರಣದಿಂದಾಗಿ ನೀವು ಯಶಸ್ವಿಯಾಗಲ್ಲ - Top Reasons for your Failure in Kannada

ಈ ಕಾರಣದಿಂದಾಗಿ ನೀವು ಯಶಸ್ವಿಯಾಗಲ್ಲ - Top Reasons for your Failure

             ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಈ ಜಗತ್ತಿನಲ್ಲಿ ಕೋಟ್ಯಾಂತರ ಜನ ಸಕ್ಸೆಸಫುಲ್ ಆಗಲು ಬಯಸುತ್ತಾರೆ, ನೂರಾರು ಕನಸುಗಳನ್ನು ಕಾಣುತ್ತಾರೆ. ಆದರೆ ಬರೀ 1% ಜನ ಮಾತ್ರ ಸಕ್ಸೆಸಫುಲ್ ಆಗುತ್ತಾರೆ. ಯಾಕ ಹೀಗೆ? ಏಕೆಂದರೆ ಸಕ್ಸೆಸ್ ಅನ್ನೋದು ಅದೃಷ್ಟಶಾಲಿಗಳ ಸ್ವತ್ತಲ್ಲ, ಅದು ಪ್ರಯತ್ನಶಾಲಿಗಳ ಬೇಟೆ. ಸರಿಯಾದ ಪ್ರಯತ್ನದೊಂದಿಗೆ ಸರಿಯಾದ ಡೈರೆಕ್ಷನನಲ್ಲಿ ಹೋದವರಿಗೆ ಮಾತ್ರ ಸಕ್ಸೆಸ್ ಸಿಗುತ್ತದೆ. ಬಹಳಷ್ಟು ಜನ ತಾವು ಮಾಡುವ ಸಣ್ಣಸಣ್ಣ ತಪ್ಪುಗಳಿಂದಾಗಿ ಪದೇಪದೇ ಸೋಲುತ್ತಾರೆ, ಸಕ್ಸೆಸ್ಸನ್ನು ಕೈಚೆಲ್ಲುತ್ತಾರೆ. ಅಂಥವರಲ್ಲಿ ನೀವು ಸಹ ಒಬ್ಬರಾಗಿರಬಹುದು. ಅದಕ್ಕಾಗಿ ಈ ವಿಡಿಯೋವನ್ನು ಕೇರಫುಲ್ಲಾಗಿ ಕೊನೆತನಕ ನೋಡಿ.


ಈ ಕಾರಣದಿಂದಾಗಿ ನೀವು ಯಶಸ್ವಿಯಾಗಲ್ಲ - Top Reasons for your Failure


ಈ ಕಾರಣಗಳಿಂದಾಗಿ ಬಹಳಷ್ಟು ಜನ ಸಕ್ಸೆಸಫುಲ್ ಆಗಲ್ಲ.

Reason - 1 : Not Trying : ಪ್ರಯತ್ನ ಪಡದಿರುವುದು

           ನಾನು ಗಮನಿಸಿದಂತೆ ಬಹಳಷ್ಟು ಜನ ಸಕ್ಸೆಸಫುಲ್ಲಾಗಲು ಬಯಸುತ್ತಾರೆ, ಕನಸುಗಳನ್ನು ಕಾಣುತ್ತಾರೆ. ಆದರೆ ಕಂಡ ಕನಸುಗಳನ್ನು ನನಸು ಮಾಡಲು ಪ್ರಯತ್ನ ಪಡುವುದಿಲ್ಲ ಅಂದರೆ ಬೇಕಾದ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿ ಬಹಳಷ್ಟು ಜನ ಪ್ರಯತ್ನಿಸದೇನೆ ಫೇಲಾಗುತ್ತಾರೆ.

             ಬಹಳಷ್ಟು ಜನ ತಮ್ಮ ಕಂಫರ್ಟ ಝೋನನಿಂದ ಹೊರಬಂದು ರಿಸ್ಕಗಳನ್ನು ತೆಗೆದುಕೊಳ್ಳುವುದೇ ಇಲ್ಲ. ಕೆಲವೊಂದಿಷ್ಟು ಜನ ಸೋಲಿನ ಭಯದಿಂದಾಗಿ ಹೊಸದಾಗಿ ಏನನ್ನೂ ಮಾಡಲು ಮುಂದಾಗುವುದಿಲ್ಲ, ಹೊಸದಾಗಿ ಏನನ್ನೂ ಪ್ರಯತ್ನಿಸುವುದಿಲ್ಲ. ಇನ್ನು ಕೆಲವೊಂದಿಷ್ಟು ಜನ ಕಾನ್ಫಿಡೆನ್ಸಿನ ಕೊರತೆಯಿಂದಾಗಿ, ಜನರ ಹಾಗೂ ಸಮಾಜದ ಭಯದಿಂದಾಗಿ ತಮ್ಮ ಪ್ಯಾಷನನ್ನು ಫಾಲೋ ಮಾಡುವುದಿಲ್ಲ. ಅದಕ್ಕಾಗಿಯೇ ಅವರು ಸಕ್ಸೆಸಫುಲ್ ಆಗುವುದಿಲ್ಲ. ಇನ್ನು ಕೆಲವೊಂದಿಷ್ಟು ಜನರಿಗೆ ತಮ್ಮ ಮೇಲೆ ನಂಬಿಕೆ ಇರುವುದಿಲ್ಲ. ಕೆಲವು ಜನ ಕುಂಟು ನೆಪಗಳನ್ನು ಹೇಳಿ ತಮಗೆ ತಾವೇ ವಂಚಿಸಿಕೊಳ್ಳುತ್ತಾರೆ. ನನಗೆ ಮನೆಯಲ್ಲಿ ಯಾರು ಪ್ರೋತ್ಸಾಹ ಕೊಡುತ್ತಿಲ್ಲ, ನನಗೆ ಬೇಗನೆ ಮದುವೆಯಾಯ್ತು ಎಂಬಿತ್ಯಾದಿ ನೆಪಗಳನ್ನು ಹೇಳಿ ತಮ್ಮ ಕನಸುಗಳನ್ನು ತಾವೇ ಕೊಲೆ ಮಾಡುತ್ತಾರೆ. ಈ ರೀತಿ ಬಹಳಷ್ಟು ಜನ ಪ್ರಯತ್ನಿಸದೇನೆ ಫೇಲಾಗುತ್ತಾರೆ.


ಈ ಕಾರಣದಿಂದಾಗಿ ನೀವು ಯಶಸ್ವಿಯಾಗಲ್ಲ - Top Reasons for your Failure


Reason 2 : Early Quitting due to Problems - ಸಮಸ್ಯೆಗಳಿಗೆ ಹೆದರಿ ಹಿಂದೆ ಸರಿಯುವುದು.

                   ಕೆಲವೊಂದಿಷ್ಟು ಜನ ಧೈರ್ಯಮಾಡಿ ಕಂಫರ್ಟ ಝೋನನಿಂದ ಹೊರಬಂದು ತಮ್ಮ ಪ್ಯಾಷನನ್ನು ಫಾಲೋ ಮಾಡುತ್ತಾರೆ. ಇಲ್ಲವೇ  ಜೋಷಿನಲ್ಲಿ ಬಿಜನೆಸ್ಸನ್ನು ಸ್ಟಾರ್ಟ ಮಾಡುತ್ತಾರೆ. ಆದರೆ ಮುಂದೆ ಸಮಸ್ಯೆಗಳು ಎದುರಾದಾಗ ಬೇಗನೆ ಸೋಲನ್ನು ಒಪ್ಪಿಕೊಂಡು ಹಿಂದೆ ಸರಿಯುತ್ತಾರೆ. ಬಿಜನೆಸ್ಸಲ್ಲಿ ತಾವೆಂದುಕೊಂಡಂತೆ ಪ್ರೋಫಿಟ ಬರದಿದ್ದಾಗ ಬೇಗನೆ ಸೋಲನ್ನು ಒಪ್ಪಿಕೊಂಡು ಕೈಯಲ್ಲಿನ ಆಯುಧವನ್ನು ಬೀಸಾಕುತ್ತಾರೆ. ಹೋರಾಡದೇನೆ ಸಾಮ್ರಾಜ್ಯವನ್ನು ಬಿಟ್ಟು ಕೊಡುವ ಮೂರ್ಖತನವನ್ನು ಮಾಡುತ್ತಾರೆ. ನಮ್ಮ ಜನರೇಷನಿನ ಜನರಲ್ಲಿ ತಾಳ್ಮೆ ಸ್ವಲ್ಪವೂ ಇಲ್ಲ. ಆರು ತಿಂಗಳಿಗೆ ಹುಟ್ಟಿದಂಗಾಡ್ತಾರೆ. ಸಮಸ್ಯೆಗಳು ಬಂದಾಗ ತಾಳ್ಮೆಯಿಂದ ವರ್ತಿಸಿ ಸರಿಯಾಗಿ ಶಾಂತಚಿತ್ತದಿಂದ ಯೋಚಿಸಿದರೆ ಖಂಡಿತ ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ ಇವರು ತಾಳ್ಮೆಯಿಂದ ವರ್ತಿಸಲ್ಲ. ಬೇಗನೇ ಸೋಲನ್ನು ಒಪ್ಪಿಕೊಂಡು ಮೈದಾನ ಬಿಟ್ಟು ಓಡಿ ಹೋಗುತ್ತಾರೆ.

               ಯಾರಾದರೂ ಕೆಳಗೆ ಬೀಳುತ್ತಿದ್ದಾರೆ ಎಂದರೆ ಅವರನ್ನು ಮೇಲಕ್ಕೆತ್ತುವ ಬದಲು ನಮ್ಮ ಜನ ಅವರನ್ನು ಮತ್ತಷ್ಟು ಕೆಳಕ್ಕೆ ನೂಕಲು ಯತ್ನಿಸುತ್ತಾರೆ. ಇದು ಬಹಳಷ್ಟು ಜನರಿಗೆ ಅರ್ಥವಾಗಲ್ಲ. ಜನ ನಮ್ಮನ್ನು ಕೆಳಕ್ಕೆ ನೂಕುತ್ತಿದ್ದಾರೆ ಅಂದರೆ ನಾವು ಸಿಡಿದು ಮೇಲಕ್ಕೇಳಬೇಕು ಎಂಬ ಛಲ ಬಹಳಷ್ಟು ಜನರಲ್ಲಿ ಮೂಡುವುದಿಲ್ಲ. ತಮ್ಮ ಕೆಲಸದಲ್ಲಿ ಸಮಸ್ಯೆ ಬಂದಾಗ ಇಲ್ಲವೇ ಬಿಜನೆಸ್ಸಲ್ಲಿ ಲಾಸ ಆದಾಗ ಜನರ ಮಾತುಗಳಿಗೆ ಕಿವಿಕೊಟ್ಟು ಇವರು ತಮ್ಮ ಮೂಗನ್ನು ತಾವೇ ಕೂಯ್ದುಕೊಳ್ಳುತ್ತಾರೆ. ಸಮಸ್ಯೆ ಬಂದಾಗ ಇಲ್ಲವೇ ಪ್ರೋಫಿಟ ಬರದಿದ್ದಾಗ ಇವರು ಡಿಮೋಟಿವೇಟ ಆಗುತ್ತಾರೆ, ಡಿಪ್ರೆಶನಗೆ ಹೋಗುತ್ತಾರೆ. ಕೆಲಸ ಸ್ಟಾರ್ಟ ಮಾಡುವಾಗ ಅವರಲ್ಲಿದ್ದ ಜೋಷ ಈಗ ಇರಲ್ಲ. ಅವರ ಮೇಲೆ ಈಗ ಅವರಿಗೇನೆ ನಂಬಿಕೆ ಇರಲ್ಲ. ಅದಕ್ಕವರು ಫ್ಯುಚರಗೆ ಹೆದರಿ ತಮ್ಮ ಕೆಲಸವನ್ನು ಅರ್ಧಕ್ಕೆ ಬಿಡುತ್ತಾರೆ ಮತ್ತು ಬೇಗನೆ ಸೋಲನ್ನು ಒಪ್ಪಿಕೊಳ್ಳುತ್ತಾರೆ.


ಈ ಕಾರಣದಿಂದಾಗಿ ನೀವು ಯಶಸ್ವಿಯಾಗಲ್ಲ - Top Reasons for your Failure


Reason - 3 : Trying in Wrong Direction - ತಪ್ಪಾದ ದಿಶೆಯಲ್ಲಿ ಪ್ರಯತ್ನಿಸೋದು

                     ಕೆಲವೊಂದಿಷ್ಟು ಜನ ಎಷ್ಟೇ ಕಷ್ಟವಾದರೂ, ನೋವಾದರೂ, ನಷ್ಟವಾದರೂ ತಾವು ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ಬಿಡಲ್ಲ. ಅವರು ತಮ್ಮ ಕೈಯಲ್ಲಿನ ಆಯುಧವನ್ನು ಬೀಸಾಕಿ ಸೋಲಿಗೆ ಹೆದರಿ ಮೈದಾನ ಬಿಟ್ಟು ಓಡಿ ಹೋಗಲ್ಲ. ಅವರು ಧೈರ್ಯವಾಗಿ ಎಲ್ಲ ಸಮಸ್ಯೆಗಳೊಂದಿಗೆ ಹೋರಾಡುತ್ತಾರೆ, ಸಾಕಷ್ಟು ಕಷ್ಟ ಪಡುತ್ತಾರೆ. ಆದರೂ ಸಹ ಅವರಿಗೆ ಸಕ್ಸೆಸ್ ಸಿಗುವುದಿಲ್ಲ. ಏಕೆಂದರೆ ಅವರು ತಪ್ಪಾದ ಡೈರೆಕ್ಷನನಲ್ಲಿ ಪ್ರಯತ್ನಿಸುತ್ತಿರುತ್ತಾರೆ. ದೆಹಲಿಗೆ ಹೋಗುವ ಕನಸ್ಸನ್ನು ಕಟ್ಟಿಕೊಂಡು ಕನ್ಯಾಕುಮಾರಿ ಟ್ರೇನನ್ನು ಹಿಡಿದಿರುತ್ತಾರೆ. ತಪ್ಪಾದ ದಾರಿಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಕುರುಡು ಕನಸುಗಳನ್ನು ಕಾಣುತ್ತಾ ಸಾಗುತ್ತಿರುತ್ತಾರೆ.

               ಅವರಲ್ಲಿ ಕ್ಲಿಯರ ಗೋಲ ಇರುವುದಿಲ್ಲ, ಕ್ಲಿಯರ ಮೈಂಡಸೆಟ ಇರುವುದಿಲ್ಲ, ತಮ್ಮ ಕನಸುಗಳ ಬಗ್ಗೆ ಕ್ಲಾರಿಟಿ ಇರುವುದಿಲ್ಲ, ಮೆಂಟಲ ಸ್ಟೆಬಿಲಿಟಿ ಇರುವುದಿಲ್ಲ, ಕೆಲಸದಲ್ಲಿ ಕನ್ಸಿಸ್ಟನ್ಸಿ ಇರುವುದಿಲ್ಲ, ಕಂಟಿನ್ಯುವಸ ಲರ್ನಿಂಗ್ ಇರುವುದಿಲ್ಲ, ತಮ್ಮ ಸ್ಕೀಲಗಳನ್ನು ಇಂಪ್ರೂವ ಮಾಡಿಕೊಳ್ಳಲು ಆಸಕ್ತಿ ಇರುವುದಿಲ್ಲ, ಡಿಸಿಪ್ಲೀನ ಇರುವುದಿಲ್ಲ, ದುಶ್ಚಟಗಳನ್ನು, ದುಷ್ಟ ಗೆಳೆಯರನ್ನು ಬಿಡುವ ಮನಸ್ಸಿರುವುದಿಲ್ಲ, ಡಿಸ್ಟ್ರ್ಯಾಕ್ಷನ್ಸಗಳಿಂದ ದೂರವಿರಬೇಕು ಎಂಬ ಬುದ್ಧಿ ಇರುವುದಿಲ್ಲ, ಪ್ರಾಪರ ಪ್ಲ್ಯಾನಿಂಗ್ ಇರುವುದಿಲ್ಲ, ಪ್ರಾಪರ ಪ್ಲ್ಯಾನಿಂಗ ಇದ್ದರೂ ಅದನ್ನು ಸರಿಯಾಗಿ ಎಕ್ಸಿಕ್ಯೂಟ ಮಾಡುವುದಿಲ್ಲ, ಅಂದುಕೊಂಡಿದ್ದನ್ನು ಬೇಗನೆ ಸಾಧಿಸಬೇಕು ಎಂಬ ಹಸಿವು ಇರುವುದಿಲ್ಲ, ನಾನೆಲ್ಲಿ ತಪ್ಪು ಮಾಡುತ್ತಿರುವೆ? ನನಗ್ಯಾಕೆ ಸಕ್ಸೆಸ್ ಸಿಗುತ್ತಿಲ್ಲ? ಎಂದು ಯೋಚಿಸುವಷ್ಟು ಆತ್ಮಜ್ಞಾನ ಇರುವುದಿಲ್ಲ. ಏನಾದರೂ ಸಾಧಿಸಿಯೇ ಸಾಧಿಸುತ್ತೇನೆ ಎಂಬ ಹುಚ್ತನವಿರುವುದಿಲ್ಲ. ಅದಕ್ಕಾಗಿಯೇ ಇವರು ಎಷ್ಟೇ ಕಷ್ಟಪಟ್ಟರೂ ಸಕ್ಸೆಸಫುಲ್ಲಾಗುವುದಿಲ್ಲ. ಒಂದು ವೇಳೆ ಇಂಥವರು ತಮ್ಮ ತಪ್ಪುಗಳಿಂದ ಕಲಿತರೆ ಇಲ್ಲವೇ ಒಬ್ಬ ಮೆಂಟರ ಹೇಳಿದಂತೆ ಕೇಳಿದರೆ ಇವರನ್ನು ಸಕ್ಸೆಸಫುಲ್ ಆಗುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.


ಈ ಕಾರಣದಿಂದಾಗಿ ನೀವು ಯಶಸ್ವಿಯಾಗಲ್ಲ - Top Reasons for your Failure

                       ಗೆಳೆಯರೇ, ಇವಿಷ್ಟೂ ಕಾರಣಗಳಿಂದಾಗಿ ಬಹಳಷ್ಟು ಜನ ತಮ್ಮ ಜೀವನದಲ್ಲಿ ಸಕ್ಸೆಸಫುಲ್ ಆಗಲ್ಲ. ಬಹಳಷ್ಟು ಜನ ಪ್ರಯತ್ನಿಸದೇನೆ ಸೋಲುತ್ತಾರೆ, ಕೆಲವೊಂದಿಷ್ಟು ಜನ ಪ್ರಯತ್ನಿಸಿ ಸಮಸ್ಯೆಗಳಿಗೆ ಹೆದರಿ ಹಿಂದೆ ಸರಿಯುತ್ತಾರೆ, ಇನ್ನು ಕೆಲವೊಂದಿಷ್ಟು ಜನ ಸಾಕಷ್ಟು ಕಷ್ಟ ಬಿದ್ದರೂ ತಪ್ಪಾದ ದಾರಿಯಲ್ಲಿ ಹೋಗಿ ಸೋಲುತ್ತಾರೆ. ಈ ಮೂರು ತಪ್ಪುಗಳಲ್ಲಿ ನೀವು ಯಾವ ತಪ್ಪನ್ನು ಮಾಡುತ್ತಿರುವಿರಿ ಎಂಬುದನ್ನು ನೋಡಿಕೊಳ್ಳಿ ಮತ್ತು ಅದನ್ನು ಬೇಗನೆ ತಿದ್ದಿಕೊಂಡು ಬದಲಾಗಿ. ನಿಮ್ಮಲ್ಲಿ ಮಾಡುವ ಮನಸ್ಸಿದ್ದರೆ ನೀವು ಎಷ್ಟೇ ಕಷ್ಟವಾದರೂ ಸಹ ನಿಮ್ಮ ಕೆಲಸವನ್ನು ಮಾಡಿಯೇ ಮಾಡುತ್ತೀರಿ, ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಜನರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ, ಮೈದಾನವನ್ನು ಬಿಟ್ಟು ಓಡಿ ಹೋಗದೆ ಧೈರ್ಯವಾಗಿ ಸರಿಯಾದ ದಾರಿಯಲ್ಲಿ ಮುನ್ನುಗ್ಗಿ. All the best and Thanks you...

Blogger ನಿಂದ ಸಾಮರ್ಥ್ಯಹೊಂದಿದೆ.