ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing in Kannada - Network Marketing in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing in Kannada - Network Marketing in Kannada

ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing

                     ಹಾಯ್ ಗೆಳೆಯರೇ, ಕಳೆದ ಎಪಿಸೋಡನಲ್ಲಿ ನಾನು ನೆಟವರ್ಕ ಮಾರ್ಕೆಟಿಂಗ್ ಬಿಜನೆಸ್ ಸ್ಟ್ರ್ಯಾಟರ್ಜಿ ಬಗ್ಗೆ ಡಿಸ್ಕಸ್ ಮಾಡಿದ್ದೆ. ಇವತ್ತಿನ ಎಪಿಸೋಡನಲ್ಲಿ ನೆಟವರ್ಕ ಮಾರ್ಕೆಟಿಂಗನ ಕರಾಳ ಮುಖದ ಬಗ್ಗೆ, ನೆಟವರ್ಕ ಮಾರ್ಕೆಟಿಂಗ್ ಜಾಬ್ ಮಾಡಬೇಕಾ ಅಥವಾ ಬೇಡ್ವಾ, ನೆಟವರ್ಕ ಮಾರ್ಕೆಟಿಂಗನಲ್ಲಿ ಈಗ ಭವಿಷ್ಯವಿದೆಯಾ ಎಂಬಿತ್ಯಾದಿ ವಿಷಯಗಳ ಬಗ್ಗೆ ನೋಡೋಣಾ.

1) ನೆಟವರ್ಕ ಮಾರ್ಕೆಟಿಂಗ್ ಎಂದರೇನು? What is Network Marketing?

                 ಕಂಪನಿಗಳು ತಮ್ಮ ಮ್ಯಾನುಫ್ಯಾಕ್ಚರಿಂಗ ಯುನಿಟಲ್ಲಿ ತಯಾರಾದ ಪ್ರೊಡಕ್ಟನ್ನು ಕಂಜುಮರ ತನಕ ತಲುಪಿಸಲು ಡಿಸ್ಟ್ರಿಬ್ಯೂಟರ್ಸಗಳನ್ನು ಬಳಸಿಕೊಂಡು ಒಂದು ದೊಡ್ಡ ನೆಟವರ್ಕನ್ನು ರೆಡಿ ಮಾಡುತ್ತವೆ. ಈ ಡಿಸ್ಟ್ರಿಬ್ಯೂಟರಗಳ ನೆಟವರ್ಕ ಮೂಲಕ ಕಂಪನಿಗಳು ಸುಲಭವಾಗಿ ತಮ್ಮ ಪ್ರೋಡಕ್ಟನ್ನು ಕಸ್ಟಮರ್ಸಗಳಿಗೆ ಮಾರಾಟ ಮಾಡುತ್ತವೆ. ಈ ರೀತಿಯ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಗೆ ನಾವು ನೆಟವರ್ಕ ಮಾರ್ಕೆಟಿಂಗ್ ಎನ್ನುತ್ತೇವೆ. ಇದಕ್ಕೆ Multi Level Marketing, Chain Marketing, Referral Marketing, Pyramid Marketing ಎಂತಲೂ ಕರೆಯುತ್ತಾರೆ.


ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing

                 ಕಂಪನಿ ತನ್ನ ಪ್ರೋಡಕ್ಟಗಳ ಮಾರಾಟಕ್ಕಾಗಿ ಒಬ್ಬ ಡಿಸ್ಟ್ರಿಬ್ಯೂಟರನನ್ನು ನೇಮಿಸಿದರೆ ಆತ ತನ್ನ ಕೈಕೆಳಗೆ ಮತ್ತಿಬ್ಬರು ಸಬ್ ಡಿಸ್ಟ್ರಿಬ್ಯೂಟರಗಳನ್ನು ನೇಮಿಸಿಕೊಳ್ಳುತ್ತಾನೆ. ಈ ಸಬ್ ಡಿಸ್ಟ್ರಿಬ್ಯೂಟರಗಳು ಮತ್ತೆ ಪ್ರತ್ಯೇಕವಾಗಿ ತಮ್ಮ ಕೈಕೆಳಗೆ ಮತ್ತಿಬ್ಬರು ಸಬ್ ಡಿಸ್ಟ್ರಿಬ್ಯೂಟರಗಳನ್ನು ನೇಮಿಸಿಕೊಳ್ಳುತ್ತಾರೆ. ಈ ರೀತಿ ಈ ನೆಟವರ್ಕ ಒಬ್ಬರಿಂದ ಇಬ್ಬರು, ಇಬ್ಬರಿಂದ ನಾಲ್ಕು, ನಾಲ್ವರಿಂದ ಎಂಟು, ಎಂಟರಿಂದ ಹದಿನಾರು ಇದೇ ರೀತಿ ಇನಫೈನೈಟಾಗಿ ಬೆಳೆಯುತ್ತದೆ. ಈ ಚೈನಲ್ಲಿ ಟಾಪಲ್ಲಿರೋ ಡಿಸ್ಟ್ರಿಬ್ಯೂಟರಗಳಿಗೆ ಕಂಪನಿಯಿಂದ ಜಾಸ್ತಿ ಮಾರ್ಜಿನ ಸಿಗುತ್ತದೆ, ಜಾಸ್ತಿ ಕಮಿಷನ್ ಸಿಗುತ್ತದೆ. ಕೆಳಗಿರೋ ನೆಟವರ್ಕ ಮಾರ್ಕೆಟರಗಳಿಗೆ ಕಮ್ಮಿ ಮಾರ್ಜಿನ ಸಿಗುತ್ತದೆ. ಈ ಡಿಸ್ಟ್ರಿಬ್ಯೂಟರಗಳು ಮತ್ತು ನೆಟವರ್ಕ ಮಾರ್ಕೆಟಿಂಗ್ ಆ್ಯಜೆಂಟಗಳು ಹೆಚ್ಚಿನ ಕಮಿಷನಿನ ಆಸೆಗಾಗಿ ಹೆಚ್ಚೆಚ್ಚು ಪ್ರೊಡಕ್ಟಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಕಂಪನಿಗೆ ಹೆಚ್ಚಿನ ಲಾಭವಾಗುತ್ತದೆ. ಇದೇ ನೆಟವರ್ಕ ಮಾರ್ಕೆಟಿಂಗ್.
ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing

2) ನೆಟವರ್ಕ ಮಾರ್ಕೆಟಿಂಗನಿಂದ ರಾತ್ರೋರಾತ್ರಿ ಶ್ರೀಮಂತರಾಗಲು ಸಾಧ್ಯನಾ? Can Network Marketing make me Rich Over Night?

                    ಒಂದಾನೊಂದು ಕಾಲದಲ್ಲಿ ನೆಟವರ್ಕ ಮಾರ್ಕೆಟಿಂಗ್ ಡಿಸ್ಟ್ರಿಬ್ಯೂಟರ ಆಗಿ ಅಥವಾ ಜಾಬ್ ಮಾಡಿ ಶ್ರೀಮಂತರಾಗಲು ಸಾಧ್ಯವಿತ್ತು. ಆದರೆ ಈಗ ಆ ಸಾಧ್ಯತೆ ತುಂಬಾನೇ ಕಮ್ಮಿಯಿದೆ. ಯಾವುದೇ ಫೀಲ್ಡಲ್ಲಿ ರಾತ್ರೋರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ. ಇನ್ನೂ ನೆಟವರ್ಕ ಮಾರ್ಕೆಟಿಂಗನಲ್ಲಂತು ಮೊದಲೇ ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ನಿಮಗೆ ಸೇಲ್ಸ ಆ್ಯಂಡ್ ಮಾರ್ಕೆಟಿಂಗ್ ಸ್ಕೀಲ್ಸಗಳು ಬೇಕಾಗುತ್ತವೆ, ವಸ್ತುಗಳನ್ನು ಮಾರಾಟ ಮಾಡಲು ಬರಬೇಕಾಗುತ್ತದೆ. ಸದ್ಯಕ್ಕೆ ನೆಟವರ್ಕ ಮಾರ್ಕೆಟಿಂಗಗೆ ಜಾಯಿನ ಆಗುತ್ತಿರುವವರಲ್ಲಿ 99% ಜನ ಫೇಲಾಗುತ್ತಿದ್ದಾರೆ, ತಮ್ಮ ದುಡ್ಡನ್ನು ಕಳೆದುಕೊಂಡು ಅಳುತ್ತಿದ್ದಾರೆ. ಫ್ರಾಡ ಕಂಪನಿಗಳ ಮಾತನ್ನು ನಂಬಿ ತಮ್ಮ ಸಂಬಂಧಿಕರನ್ನು, ಸ್ನೇಹಿತರನ್ನು ದರಿದ್ರ ಸ್ಕೀಮಗಳಲ್ಲಿ ಸಿಲುಕಿಸಿ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಆದರೂ ಸಹ ನೀವು ಸರಿಯಾದ ಕಂಪನಿಯ ಟಾಪ ಲೆವೆಲ ಡಿಸ್ಟ್ರಿಬ್ಯೂಟರ್ ಆದರೆ ನೆಟವರ್ಕ ಮಾರ್ಕೆಟಿಂಗನಿಂದ ಹಣಗಳಿಸಿ ಕೋಟ್ಯಾಧಿಪತಿ ಆಗಬಹುದು. ಆದರೆ Terms and Conditionsಗಳು ಅಪ್ಲಾಯ ಆಗುತ್ತವೆ.


ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing

3) ನೆಟವರ್ಕ ಮಾರ್ಕೆಟಿಂಗನಲ್ಲಿ ಫ್ಯುಚರ್ ಇದೆಯಾ? Does Network Marketing has any future?

                 ಪರ್ಸನಲ್ಲಾಗಿ ನನ್ನ ಕೇಳಿದ್ರೆ ಸದ್ಯಕ್ಕೆ ನೆಟವರ್ಕ ಮಾರ್ಕೆಟಿಂಗಗೆ ಮೊದಲಿನಂತೆ ಡಿಮ್ಯಾಂಡ ಇಲ್ಲ ಮತ್ತು ಮುಂದೆ ಫ್ಯುಚರ್ ಕೂಡ ಇಲ್ಲ. ಈ ನೆಟವರ್ಕ ಮಾರ್ಕೆಟಿಂಗ್ ಇಂಡಸ್ಟ್ರಿ ಕೆಲವೊಂದಿಷ್ಟು ಫ್ರಾಡ್ ಕಂಪನಿಗಳಿಂದಾಗಿ ಮೊದಲಿನಿಂದಲೂ ಖರಾಬಾಗಿದೆ ಮತ್ತು ಕಳಂಕಿತವಾಗಿದೆ. ಕೆಲವೊಂದಿಷ್ಟು ಕಂಪನಿಗಳು ಫ್ರಾಡ್ ಮಾಡಬೇಕಂತಾನೆ, ಜನರಿಗೆ ಮೋಸ ಮಾಡಿ ಹಣಗಳಿಸಬೇಕಂತಾನೆ ಮಾರ್ಕೆಟಿಗೆ ಬರುತ್ತವೆ. ಈ ಕಂಪನಿಗಳ ಬಳಿ ತಮ್ಮದೇ ಆದ ಯಾವುದೇ ಪ್ರೋಡಕ್ಟ ಇರುವುದಿಲ್ಲ. ಅದಕ್ಕೆ ಇವು ಗೊಳ್ಳು ಸ್ಕೀಮಗಳ ಜೊತೆಗೆ ಕುಕ್ಕರಗಳಂಥ ವಸ್ತುಗಳನ್ನು ಮಾರಾಟ ಮಾಡಿ ಜನರಿಗೆ ವಂಚಿಸುತ್ತವೆ. ಕಷ್ಟ ಪಡದೇ ಬೇಗನೆ ಶ್ರೀಮಂತರಾಗಬೇಕು ಎಂಬ ಮೂರ್ಖ ಆಸೆಗಳನ್ನು ಇಟ್ಟುಕೊಂಡ ಮೂರ್ಖ ಜನರನ್ನು ಈ ಕಂಪನಿಗಳು ಟಾರ್ಗೆಟ ಮಾಡುತ್ತವೆ. ಅವರಿಗೆ ಕುರುಡು ಕನಸುಗಳನ್ನು ತೋರಿಸಿ, ನೀವು ಕಷ್ಟಪಡದೇ ಮೂರೇ ತಿಂಗಳಲ್ಲಿ ಕೋಟ್ಯಾಧಿಪತಿಯಾಗುತ್ತೀರಿ, ನಿಮ್ಮತ್ರ ದೊಡ್ಡ ಬಂಗಲೆ ಕಾರು ಇತ್ಯಾದಿಯೆಲ್ಲ ಬರುತ್ತವೆ ಅಂತೆಲ್ಲ ನಂಬಿಸಿ ಅವರಿಗೆ ಗೊಳ್ಳು ಸ್ಕೀಮಗಳ ಜೊತೆಗೆ ಕುಕ್ಕರನ್ನು ಮಾರಿ ಮೋಸ ಮಾಡುತ್ತವೆ. ಈ ಮೂರ್ಖರು ತಮಗಾಗಿರುವ ನಷ್ಟವನ್ನು ರಿಕವರಿ ಮಾಡಿಕೊಳ್ಳಲು ತಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಮೋಸ ಮಾಡುತ್ತಾರೆ. ಕಷ್ಟ ಪಟ್ಟು ಕೆಲಸ ಮಾಡಲು ಇಂಟರೆಸ್ಟ್ ಇಲ್ಲದ ಮೂರ್ಖರೇ ಈ ನೆಟವರ್ಕ ಮಾರ್ಕೆಟಿಂಗಗೆ ಜಾಯಿನಾಗಿ ದುಡ್ಡಾಕಿ ಮೋಸ ಹೋಗುತ್ತಾರೆ. ಈ ಮೂರ್ಖರೇ ಮಲ್ಟಿ ಲೆವೆಲ ಮಾರ್ಕೆಟಿಂಗನ ಮುಖ್ಯ ಮೀನುಗಳು. ಆದರೆ ಈಗ ಜನ ಬಹಳಷ್ಟು ಜಾಣರಾಗಿದ್ದಾರೆ, ಜೊತೆಗೆ ನೆಟವರ್ಕ ಮಾರ್ಕೆಟಿಂಗನ ಇನ್ನೊಂದು ಮುಖವನ್ನು ನೋಡಿದ್ದಾರೆ. ಹೀಗಾಗಿ ಅವರು ಮತ್ತೆ ಕುಕ್ಕರನ್ನು ತೆಗೆದುಕೊಂಡು ಮೋಸ ಹೋಗಲು ತಯಾರಿಲ್ಲ. ಹೀಗಾಗಿ ನೆಟವರ್ಕ ಮಾರ್ಕೆಟಿಂಗಗೆ ಯಾವುದೇ ಫ್ಯುಚರ್ ಇಲ್ಲ.


ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing

                    ಮತ್ತೊಂದು ವಿಷಯ ಹೇಳಬೇಕೆಂದರೆ ಈಗ ಟೆಕ್ನಾಲಜಿ ಬಹಳಷ್ಟು ಅಪಡೇಟ ಆಗಿದೆ. ಎಲ್ಲ ಕಂಪನಿಗಳು ಡಿಜಿಟಲ ಮಾರ್ಕೆಟಿಂಗ್ ಹಾಗೂ ಈ ಕಾಮರ್ಸ್ ಸೈಟಗಳ ಮೂಲಕ ನೇರವಾಗಿ ತಮ್ಮ ಪ್ರೋಡಕ್ಟಗಳನ್ನು ಮಾರಾಟ ಮಾಡುತ್ತಿವೆ. ದೊಡ್ಡ ಕಂಪನಿಗಳೆಲ್ಲವು ಈಗ ತಮ್ಮದೇ ಈ ಕಾಮರ್ಸ್ ಸ್ಟೋರಗಳ ಮೂಲಕ ಡೈರೆಕ್ಟಾಗಿ ತಮ್ಮ ಪ್ರೊಡಕ್ಟಗಳನ್ನು ಮಾರಾಟ ಮಾಡುತ್ತಿವೆ. ಹೀಗಾಗಿ ಡಿಜಿಟಲ ಮಾರ್ಕೆಟಿಂಗನಿಂದಾಗಿ ನೆಟವರ್ಕ ಮಾರ್ಕೆಟಿಂಗ್ ಫಿನಿಶ್ ಆಗುತ್ತಿದೆ, ಒಂದೆರಡು ವರ್ಷಗಳಲ್ಲಿ ಸಂಪೂರ್ಣವಾಗಿ ಫಿನಿಶ್ ಆಗುತ್ತದೆ. ಸೋ, ನೆಟವರ್ಕ ಮಾರ್ಕೆಟಿಂಗಗೆ ಮುಂದೆ ಅಂಥ ಸ್ಪೆಷಲ್ ಫ್ಯುಚರ್ ಏನಿಲ್ಲ.

4) ನೆಟವರ್ಕ ಮಾರ್ಕೆಟಿಂಗಗೆ ಜಾಯಿನ ಆಗಬೇಕಾ ಅಥವಾ ಬೇಡ್ವಾ?

                  ನೆಟವರ್ಕ ಮಾರ್ಕೆಟಿಂಗಗೆ ಜಾಯಿನ ಆಗಬೇಕಾ ಅಥವಾ ಬೇಡ್ವಾ ಎಂಬುದು ನಿಮ್ಮ ವೈಯಕ್ತಿಕ ವಿಚಾರ ಮತ್ತು ಆಸಕ್ತಿ. ನೀವು ಒಳ್ಳೇ ಕಂಪನಿ ಜೊತೆ ಕೈಜೋಡಿಸಿ ದೊಡ್ಡ ಡಿಸ್ಟ್ರಿಬ್ಯೂಟರ್ ಆದರೆ ನೀವು ಕೆಲವು ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುತ್ತೀರಾ. ಆದರೆ ನಿಮಗೆ ಒಳ್ಳೇ ಕಂಪನಿ ಸಿಗುವುದು ದುರ್ಲಭವಾಗಿದೆ. ಏಕೆಂದರೆ ಒಳ್ಳೇ ಕಂಪನಿಗಳು ಒಳ್ಳೇ ಪ್ರೋಡಕ್ಟಗಳನ್ನು ತಯಾರಿಸುತ್ತವೆ. ಒಳ್ಳೇ ಪ್ರೊಡಕ್ಟಗಳು ಈಜಿಯಾಗಿ ಸೇಲ್ ಆಗುತ್ತವೆ. ಅಲ್ಲದೇ ಈಗ ಆಲ್ ಮೊಸ್ಟ ಆಲ್ ಕಂಪನಿಗಳು ಆನಲೈನ ಮಾರ್ಕೆಟಿಂಗ್, ಡಿಜಿಟಲ ಮಾರ್ಕೆಟಿಂಗ್ ಮೇಲೆ ಡಿಪೆಂಡಾಗುತ್ತಿವೆ. ಹೀಗಾಗಿ ನೆಟವರ್ಕ ಮಾರ್ಕೆಟಿಂಗಗೆ ಅಷ್ಟೊಂದು ಸ್ಕೋಪ ಇಲ್ಲ. ಆದರೂ ಸಹ ನೀವು ನೆಟವರ್ಕ ಮಾರ್ಕೆಟಿಂಗ್ ಸೇರಬೇಕೆಂದರೆ ಸರಿಯಾದ ಕಂಪನಿಗೆ ಜಾಯಿನ ಆಗಿ. ಜಾಯಿನ ಆಗುವುದಕ್ಕಿಂತ ಮುಂಚೆ ಕಂಪನಿ ಬಗ್ಗೆ ಸ್ಟಡಿ ಮಾಡಿ. ಕಂಪನಿ ಸರಿಯಾಗಿದ್ರೆ ಮಾತ್ರ ಸೇರಿಕೊಳ್ಳಿ. ನಿಮಗೆ ಯಾವ ವಸ್ತುವನ್ನು ಮಾರುವುದಿದೆ? ಎಂಬುದನ್ನು ನೋಡಿ. ಪ್ರೋಡಕ್ಟನಲ್ಲಿ ಧಮ್ಮಿದ್ರೆ ಮಾತ್ರ ಜಾಯಿನ ಆಗಿ. ಯುನಿಕ್ ಪ್ರೋಡಕ್ಟ ಇದ್ರೆ ಮಾತ್ರ ಜಾಯಿನ ಆಗಿ. ಚೀಪ್ ಆ್ಯಂಡ್ ಬೆಸ್ಟ ಪ್ರೊಡಕ್ಟ ಆಗಿದ್ದರೆ ಮಾತ್ರ ಜಾಯಿನ ಆಗಿ. ಎಲ್ಲರತ್ರ ಇರುವ ಪ್ರೋಡಕ್ಟನ್ನೇ ಮಾರಲು ಮುಂದಾಗಿ ದುಡ್ಡಾಕಿದ್ರೆ ಮಣ್ಣು ತಿಂತಿರಾ ಅಷ್ಟೇ. ಬಹಳಷ್ಟು ಪಶ್ಚಾತ್ತಾಪ ಪಡ್ತೀರಿ ಮುಂದೆ.


ನೆಟವರ್ಕ ಮಾರ್ಕೆಟಿಂಗ್ ಸೇರಿಕೊಳ್ಳುವ ಮುಂಚೆ ಈ ಕಹಿಸತ್ಯ ತಿಳಿದುಕೊಳ್ಳಿ : Understand this Bitter Truth before joining Network Marketing

                  ಓಕೆ ಗೆಳೆಯರೇ ಫೈನ್, ನೀವು ನೆಟವರ್ಕ ಮಾರ್ಕೆಟಿಂಗಗೆ ಫಿಟ್ಟಾಗಿದ್ದಿರಾ ಎಂಬುದನ್ನು ಅನಲೈಜ ಮಾಡಿಕೊಳ್ಳಿ. ನಿಮ್ಮಲ್ಲಿ ಸೇಲ್ಸ ಸ್ಕೀಲ್ ಇದೆಯಾ? ಪೀಪಲ್ ಸ್ಕೀಲ್ಸ, ಇನಫ್ಲುಯನ್ಸಿಂಗ್ ಸ್ಕೀಲ್ಸ ಇದೆಯಾ ಎಂಬುದನ್ನು ನೋಡಿಕೊಳ್ಳಿ. ಏಕೆಂದರೆ 90% ಫೆಲಿವರ್ ರೇಷೋ ಇದೆ. ಏಕೆಂದರೆ ಹಣದಾಸೆಗೆ ಸ್ಕೀಲ ಇಲ್ಲದೆ ಜಾಯಿನ ಆಗಿ ಬಹಳಷ್ಟು ಜನ ಹಾಳಾಗಿದ್ದಾರೆ. ರಿಜೆಕ್ಷನ ಬಹಳಷ್ಟಿದೆ. ನಿಮ್ಮ ನಿರ್ಧಾರ, ನಿಮ್ಮ ಲೈಫ ನಿಮ್ಮಿಷ್ಟ. All the Best and Thanks You...

Blogger ನಿಂದ ಸಾಮರ್ಥ್ಯಹೊಂದಿದೆ.