ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business in Kannada


ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

                                                       ಬಿಜನೆಸ್ ಲೆಸನ್ - 08

                    ಹಾಯ್ ಗೆಳೆಯರೇ, ನೀವು ಯಾವುದೇ ಬಿಜನೆಸ್ಸನ್ನು ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ಕೆಲವೊಂದಿಷ್ಟು ವಿಷಯಗಳನ್ನು ಕ್ಲಿಯರಾಗಿ ತಿಳಿದುಕೊಳ್ಳಬೇಕಾಗುತ್ತದೆ. ನೀವು ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳದಿದ್ದರೆ ಮುಂದೆ ಹೆಜ್ಜೆಹೆಜ್ಜೆಗೂ ಕನಫ್ಯುಜನಗಳು ಸ್ಟಾರ್ಟ ಆಗುತ್ತವೆ. ಹೆಜ್ಜೆಹೆಜ್ಜೆಗೂ ನಷ್ಟವಾಗುತ್ತದೆ. ಅದಕ್ಕಾಗಿ ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ಈ ವಿಷಯಗಳನ್ನು ತಿಳಿದುಕೊಳ್ಳಿ.

1) ನೀವು ಯಾವುದೇ ಬಿಜನೆಸ್ಸನ್ನು ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮಗೆ "ಯಾಕೆ ನೀವು ಈ ಬಿಜನೆಸ್ಸನ್ನು ಸ್ಟಾರ್ಟ ಮಾಡುತ್ತಿರುವಿರಿ?" ಎಂಬುದು ಚೆನ್ನಾಗಿ ಗೊತ್ತಿರಬೇಕು. ಯಾರದೋ ಒತ್ತಾಯಕ್ಕಾಗಿ, ಯಾರನ್ನೋ ಇಂಪ್ರೆಸ್ ಮಾಡುವುದಕ್ಕಾಗಿ, ಯಾರನ್ನೋ ನೋಡಿ ಬಿಜನೆಸ್ ಸ್ಟಾರ್ಟ ಮಾಡೋದಲ್ಲ. ಬಿಜನೆಸ್ ಸ್ಟಾರ್ಟ ಮಾಡಬೇಕು ಎಂಬಾಸೆ ನಿಮ್ಮ ಮೈಂಡನಿಂದ ಬರಬೇಕು, ಬೇರೆಯವರ ಮೋಟಿವೇಷನ ಅಥವಾ ಫೋರ್ಸನಿಂದಲ್ಲ. ಅದಕ್ಕಾಗಿ ಮೊದಲು ನಿಮ್ಮ Why ಕ್ಲಿಯರ ಮಾಡಿಕೊಳ್ಳಿ. 

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

2) ಮಾರ್ಕೆಟಿಗೆ ನಿಮ್ಮ ಬಿಜನೆಸ್ ಬೇಕಾಗಿದೆಯಾ ಅಥವಾ ಇಲ್ವಾ ಎಂಬುದನ್ನು ಮೊದಲು ಕ್ಲ್ಯಾರಿಫಾಯ ಮಾಡಿಕೊಳ್ಳಿ. ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮ್ಮ ಬಿಜನೆಸಗೆ ಮಾರ್ಕೆಟನಲ್ಲಿ ಡಿಮ್ಯಾಂಡ ಇದೆಯಾ ಅಥವಾ ಇಲ್ವಾ ಎಂಬುದನ್ನು ಕನಫರ್ಮ ಮಾಡಿಕೊಳ್ಳಿ. ಮಾರ್ಕೆಟಿಗೆ ಬೇಡದಿರುವ ಡಿಮ್ಯಾಂಡಿಲ್ಲದ ಬಿಜನೆಸ್ಸನಿಂದ ನಿಮಗೆ ಯಾವುದೇ ಲಾಭ ಸಿಗಲ್ಲ, ನಿಮ್ಮ ಬದುಕು ಸಾಗೋದು ಕಷ್ಟವಾಗುತ್ತದೆ. ಅದಕ್ಕಾಗಿ ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮ್ಮ ಬಿಜನೆಸ್ ಐಡಿಯಾ ಮೇಲೆ ಸಾಕಷ್ಟು ಕೆಲಸ ಮಾಡಿ. ನಿಮ್ಮ ಬಿಜನೆಸ್ ಐಡಿಯಾವನ್ನು ಸರಿಯಾಗಿ ವ್ಯಾಲಿಡೇಟ ಮಾಡಿ. ನಿಮ್ಮ ಬಿಜನೆಸನಿಂದ ಮಾರ್ಕೆಟನಲ್ಲಿನ ಯಾವ ಪ್ರಾಬ್ಲಮ್ ಸಾಲ್ವ ಆಗುತ್ತಿದೆ ಎಂಬುದನ್ನು ನೋಡಿ. ನಿಮ್ಮ ಬಿಜನೆಸನಿಂದ ಮಾರುಕಟ್ಟೆಯಲ್ಲಿನ ಯಾವುದೇ ಸಮಸ್ಯೆ ಸಾಲ್ವ ಆಗದಿದ್ದರೆ ನಿಮ್ಮ ಬಿಜನೆಸ್ ಐಡಿಯಾ ಬಕ್ವಾಸ ಆಗಿರುತ್ತದೆ, ಅದನ್ನು ಬಿಟ್ಟು ಬಿಡಿ. ಬೇರೆ ಪ್ರಾಬ್ಲಮ್ ಸಾಲ್ವಿಂಗ್ ಬಿಜನೆಸ್ ಐಡಿಯಾ ಹುಡುಕಿ.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

3) ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮಗೆ ಮಾರ್ಕೆಟ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿರಬೇಕಾಗುತ್ತದೆ. ಮಾರ್ಕೆಟನಲ್ಲಿ ಏನು ಮಾರಾಟವಾಗುತ್ತದೆ, ಏನು ಮಾರಾಟವಾಗಲ್ಲ ಎಂಬುದರ ಬಗ್ಗೆ ನಿಮಗೆ ಸ್ವಲ್ಪನಾದ್ರೂ ಐಡಿಯಾ ಇರಬೇಕು. ಐಡಿಯಾ ಇರದಿದ್ದರೆ ಮಾರ್ಕೆಟನಲ್ಲಿ ಸ್ವಲ್ಪ ಸುತ್ತಾಡಿ, ಈಗಾಗಲೇ ಬಿಜನೆಸ್ ಸ್ಟಾರ್ಟ ಮಾಡಿದವರಿಂದ ಸ್ವಲ್ಪ ಗೈಡನ್ಸ ತೆಗೆದುಕೊಳ್ಳಿ, ಸ್ಟಾರ್ಟಪ ಹಬಗಳಿಗೆ, ವರ್ಕಶಾಪಗಳಿಗೆ ಸೇರಿಕೊಳ್ಳಿ. ಮಾರ್ಕೆಟನ ABCDಯನ್ನು ಮೊದಲು ಕಲಿಯಿರಿ.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

4) ಯಾವುದೇ ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮ್ಮ ಅಸಲಿ ಶಕ್ತಿ ಸಾಮರ್ಥ್ಯಗಳನ್ನು ಸರಿಯಾಗಿ ಅಂದಾಜಿಸಿ. ನಿಮ್ಮಲ್ಲಿ ಇಲ್ಲದಿರುವ ಟ್ಯಾಲೆಂಟ ನಿಮ್ಮಲಿದೆ ಎಂದುಕೊಂಡರೂ ನಿಮಗೆ ನಷ್ಟವಾಗುತ್ತದೆ. ನಿಮ್ಮಲ್ಲಿ ಟ್ಯಾಲೆಂಟ ಇದ್ದಾಗಲೂ ನೀವು "ನನ್ನಲ್ಲಿ ಯಾವುದೇ ಟ್ಯಾಲೆಂಟ ಇಲ್ಲ" ಎಂದುಕೊಂಡರೂ ನಷ್ಟವಾಗುತ್ತದೆ. ಅದಕ್ಕಾಗಿ ನಿಮ್ಮ ಅಸಲಿ ಶಕ್ತಿ ಸಾಮರ್ಥ್ಯಗಳನ್ನು, ಸ್ಕೀಲಗಳನ್ನು ಸರಿಯಾಗಿ ಅಂದಾಜಿಸಿ. ನಿಮ್ಮಲ್ಲಿ ಯಾವ ಸ್ಕೀಲಗಳ ಕೊರತೆಯಿದೆ ಎಂಬುದನ್ನು ನೋಡಿಕೊಂಡು ಅವುಗಳನ್ನು ಮೊದಲು ಕಲಿಯಿರಿ. ಅನಂತರ ಬಿಜನೆಸ್ ಸ್ಟಾರ್ಟ ಮಾಡಿ.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

5) ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮಗೆ ನಿಮ್ಮ ಬಿಜನೆಸ್ಸನ್ನು ಲೀಗಲ್ ಮಾಡುವುದು ಹೇಗೆ ಎಂಬುದು ಗೊತ್ತಿರಬೇಕು. ಇಲ-ಲೀಗಲಲಾಗಿ ಬಿಜನೆಸ್ ಸ್ಟಾರ್ಟ ಮಾಡಿದರೆ ಒಂದಲ್ಲ ಒಂದಿನ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ನಿಮಗೆ ನಿಮ್ಮ ಬಿಜನೆಸ್ಸನ್ನು ಲೀಗಲ್ ಮಾಡುವುದು ಹೇಗೆ ಎಂಬುದು ಗೊತ್ತಿರಬೇಕು. ಅಂದರೆ ನಿಮಗೆ ನಿಮ್ಮ ಬಿಜನೆಸ್ ನೇಮ್, ಬಿಜನೆಸ್ ಟೈಪ್, ನಿಮ್ಮ ಬಿಜನೆಸ್ ಸ್ಮಾಲ್ ಫರ್ಮ್ ಆಗುತ್ತಾ, ಒನ್ ಪರ್ಸನ್ ಕಂಪನಿಯಾಗುತ್ತಾ, LLC ಆಗುತ್ತಾ, ಪ್ರೈವೇಟ ಲಿಮಿಟೆಡ್ ಕಂಪನಿಯಾಗುತ್ತಾ ಅಥವಾ ಸ್ಟಾರ್ಟಪ್ ಆಗುತ್ತಾ ಎಂಬುದು ಗೊತ್ತಿರಬೇಕು. ಜೊತೆಗೆ ನಿಮ್ಮ ಬಿಜನೆಸ್ಸನ್ನು ಹೇಗೆ ಎಲ್ಲಿ ರಿಜಿಸ್ಟರ್ ಮಾಡಿಸಬೇಕು, ಬೇಕಾದ ಲೈಸೆನ್ಸ್ ಹಾಗೂ ಪರ್ಮಿಶನಗಳನ್ನು ಹೇಗೆ ಮತ್ತು ಯಾರಿಂದ ತೆಗೆದುಕೊಳ್ಳಬೇಕು ಎಂಬುದು ಗೊತ್ತಿರಬೇಕು. ಟ್ಯಾಕ್ಸೆಷನ್ ಬಗ್ಗೆ ಸ್ವಲ್ಪನಾದ್ರೂ ಗೊತ್ತಿರಬೇಕು.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

6) ಬಿಜನೆಸ್ಸನ್ನು ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮಗೆ ನಿಮ್ಮ ಬಿಜನೆಸ್ಸನ್ನು ಪ್ರೊಟೆಕ್ಟ ಮಾಡಿಕೊಳ್ಳುವುದು ಹೇಗೆ ಎಂಬುದು ಗೊತ್ತಿರಬೇಕು. ಏಕೆಂದರೆ ನಿಮ್ಮ ಬಿಜನೆಸ್ ಸಕ್ಸೆಸಫುಲ್ಲಾಗಿ ಸಾಗಲು ಪ್ರಾರಂಭಿಸಿದರೆ ಸಾಕು ನೂರಾಏಂಟು ಜನ ನೀವು ಮಾಡುತ್ತಿರುವ ಬಿಜನೆಸ್ಸನ್ನೇ ಮಾಡಲು ಪ್ರಾರಂಭಿಸುತ್ತಾರೆ. ನಿಮ್ಮ ಬಿಜನೆಸ್ ಐಡಿಯಾವನ್ನೇ ಕಾಪಿ ಹೊಡೆದು ನಿಮಗೇನೆ ತೊಂದರೆ ಕೊಡುತ್ತಾರೆ. ಸೋ, ನಿಮಗೆ ನಿಮ್ಮ ಬಿಜನೆಸ್ಸನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದು ಗೊತ್ತಿರಬೇಕು. ಅದಕ್ಕಾಗಿ ನೀವು ಕಾಪಿರೈಟ್ಸ, ಟ್ರೆಡಮಾರ್ಕ ಹಾಗೂ ಪೇಟೆಂಟ್ಸಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಕಂಪಲ್ಸರಿಯಾಗಿ ಮಾಡಿಸಲೇಬೇಕು. ಇಲ್ಲವಾದರೆ ಜನ ನಿಮ್ಮ ಬಿಜನೆಸ್ ಐಡಿಯಾವನ್ನು ಕಾಪಿ ಹೊಡೆದು ಮುಂದೆ ಹೋಗ್ತಾರೆ, ನೀವು ಬೀದಿಗೆ ಬರ್ತಿರಿ. ಜೊತೆಗೆ ನಿಮಗೆ ಕಾನೂನಿನ ಜ್ಞಾನವೂ ಸಹ ಇರಲೇಬೇಕು. ನಿಮಗೆ ಕಾನೂನಿನ ಜ್ಞಾನವಿದ್ದರೆ ನೀವು ಯಾವ ನಾಯಿಗೂ ಹೆದರುವ ಅವಶ್ಯಕತೆ ಇಲ್ಲ, ಯಾರಿಗೂ ಒಂದು ರೂಪಾಯಿ ಕೂಡ ಲಂಚ ಕೊಡಬೇಕಾಗಿಲ್ಲ. ನಮ್ಮನ್ನು ಕಾಪಾಡುವ ಶಕ್ತಿ ನಮ್ಮ ಕಾನೂನಿಗೆ ಮಾತ್ರವಿದೆ. ಅದಕ್ಕಾಗಿ ನಮ್ಮ ಕಾನೂನನ್ನು ಮತ್ತು ಸಂವಿಧಾನವನ್ನು ಅರ್ಥಮಾಡಿಕೊಳ್ಳಿ. ಇದರ ಬಗ್ಗೆ ನಾನು ಮತ್ತೊಂದು ಎಪಿಸೋಡನಲ್ಲಿ ಡಿಟೇಲಾಗಿ ಡಿಸ್ಕಸ್ ಮಾಡ್ತೀನಿ.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

7) ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ನಿಮಗೆ ಎಕ್ಸೀಟ್ ಪ್ಲ್ಯಾನ ಬಗ್ಗೆಯೂ ಗೊತ್ತಿರಬೇಕು. ಏಕೆಂದರೆ ನಾವು ಎಲ್ಲವನ್ನೂ ಸರಿಯಾಗಿ ಮಾಡಿದರೂ ಸಹ ದೇಶದಲ್ಲಿ ಮತ್ತು ಮಾರುಕಟ್ಟೆಯಲ್ಲಾಗುವ ಏರಿಳಿತಗಳಿಂದ ನಮ್ಮ ಬಿಜನೆಸ್ ಪ್ಲಾಫ್ ಆಗೋ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಈಗ ಕರೋನಾ ರಾಧ್ಧಾಂತವನ್ನೇ ತೆಗೆದುಕೊಳ್ಳಿ. ಅದಕ್ಕಾಗಿ ನಿಮಗೆ ಎಕ್ಸಿಟ್ ಪ್ಲ್ಯಾನ ಬಗ್ಗೆಯೂ ಗೊತ್ತಿರಬೇಕು. ಬಿಜನೆಸ್ ಪ್ಲಾಫ್ ಆದರೆ ಅದರಿಂದ ಸೇಫಾಗಿ ಹೊರಬಂದು ಮತ್ತೆ ಹೊಸ ಬಿಜನೆಸ್ಸನ್ನು ಸ್ಟಾರ್ಟ ಮಾಡುವುದೇಗೆ ಎಂಬುದು ಗೊತ್ತಿರಬೇಕು. ಏಕೆಂದರೆ ನಿಮ್ಮನ್ನು ನಂಬಿಕೊಂಡು ನಿಮ್ಮ ಫ್ಯಾಮಿಲಿ ಇರುತ್ತದೆ, ನಿಮ್ಮ ನೌಕರರ ಫ್ಯಾಮಿಲಿ ಸಹ ಇನಡೈರೆಕ್ಟಾಗಿ ನಿಮ್ಮ ಬಿಜನೆಸ್ ಮೇಲೆಯೇ ಡಿಪೆಂಡಾಗಿರುತ್ತದೆ.  ಅದಕ್ಕಾಗಿ ನಿಮಗೆ ಎಕ್ಸಿಟ್ ಆ್ಯಂಡ್ ರಿಸ್ಟಾರ್ಟ ಪ್ಲ್ಯಾನ್ ಬಗ್ಗೆ ಗೊತ್ತಿರಬೇಕು.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business

                  ಓಕೆ ಗೆಳೆಯರೇ, ಇವಿಷ್ಟು ವಿಷಯಗಳನ್ನು ನೀವು ಯಾವುದೇ ಬಿಜನೆಸ್ಸನ್ನು ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ತಿಳಿದುಕೊಳ್ಳಲೇಬೇಕು. ಇವುಗಳನ್ನು ತಿಳಿದುಕೊಳ್ಳದಿದ್ದರೆ ಮುಂದೆ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತೀರಿ, ಬಹಳಷ್ಟು ನಷ್ಟವನ್ನು ಅನುಭವಿಸುತ್ತೀರಿ. ಅದಕ್ಕಾಗಿ ಇವುಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಮುಂದಿನ ಬಿಜನೆಸ್ ಲೆಸ್ಸನನಲ್ಲಿ "How to start Business?" ಎಂಬುದರ ಬಗ್ಗೆ ಡಿಸ್ಕಸ್ ಮಾಡೋಣಾ. All the best and Thanks You...

Blogger ನಿಂದ ಸಾಮರ್ಥ್ಯಹೊಂದಿದೆ.