
ಹಾಯ್ ಗೆಳೆಯರೇ, ಇನಸ್ಟಾಗ್ರಾಮಲ್ಲಿ ಲವ್ ಫೇಲಿವರಗೆ ಸಂಬಂಧಪಟ್ಟಂತೆ ಬಹಳಷ್ಟು ಪ್ರಶ್ನೆಗಳು ಬಂದಿವೆ. ಉದಾಹರಣೆಗಾಗಿ ;
1) 10th ಕ್ಲಾಸಲ್ಲಿ ಲವ್ ಮಾಡಿ ತಪ್ಪು ಮಾಡಿದೀನಿ, ಸ್ಟಡಿಲಿ ಮೋಟಿವೇಷನ ಬರ್ತಿಲ್ಲ.
2) ಮೊದಲ ಪ್ರೀತಿಯನ್ನು ಮರೆಯೋದು ಹೇಗೆ ಹೇಳಿ.
3) ಲವ್ ಫೇಲಿವರನಿಂದ ಮುಕ್ತಿ ಪಡೆಯೋದು ಹೇಗೆ ಇತ್ಯಾದಿ...
ಸೋ, ಇವತ್ತಿನ ಎಪಿಸೋಡನ್ನು ಮನಸ್ಸು ಮುರಿದುಕೊಂಡವರನ್ನು ಮೊಟಿವೇಟ ಮಾಡಲು ಮೀಸಲಾಗಿಡುವೆ. ನಿಮಗೂ ಏನಾದರೂ ಪ್ರಾಬ್ಲಮ್ಸ ಇದ್ರೆ ನೀವು ಅವುಗಳನ್ನು ನನಗೆ ಇನಸ್ಟಾಗ್ರಾಮಲ್ಲಿ ಡೈರೆಕ್ಟ ಮೆಸೆಜ ಮಾಡಬಹುದು. ನಾನದರ ಮೇಲೆ ಖಂಡಿತ ಡೆಡಿಕೆಟೆಡ ಎಪಿಸೋಡಗಳನ್ನ ಮಾಡುವೆ. ಸದ್ಯಕ್ಕೆ ಲವ್ ಫೇಲಿವರ್ ಸೋಲುಷನ ಬಗ್ಗೆ ನೋಡೋಣಾ...

ಮೊದಲನೆಯದಾಗಿ ಹೇಳಬೇಕೆಂದರೆ ಲವ್ ಫೇಲಿವರ್ ಆಗಿದ್ದಕ್ಕೆ ನಿಮಗೆ Congratulations. ನೀವು ಈ ವಿಡಿಯೋವನ್ನು ನೋಡ್ತಾಯಿದಿರಿ ಅಂದ್ರೆ ನಿಮಗೆ ಲವ್ ಫೇಲಿವರ್ ಆಗಿದೆ ಅಂತಾ ಅರ್ಥ. ಅದಕ್ಕೆ ನಿಮಗೆ Congratulations. ಏಕೆಂದರೆ in most of the cases ಲವ್ ಸಕ್ಸೆಸಫುಲ್ ಆದಾಗ ಮದುವೆಯಾಗಿ ಮಕ್ಕಳಾಗ್ತವೆ ಅಷ್ಟೇ. ಬಟ ಲವ್ ಫೇಲಿವರ ಆದಾಗ ನೀವು ಬೆಸ್ಟ ಪರ್ಸನ್ ಆಗಬಹುದು. ನಿಮ್ಮನ್ನು ನೀವು ಕಂಡುಕೊಳ್ಳಬಹುದು. ಲವ್ವಲ್ಲಿ ಫೇಲಾದಾಗ ಲೈಫಲ್ಲಿ ಗೆದ್ದು ತೋರಿಸಬಹುದು. ಲೈಫಲ್ಲಿ ಏನಾದರೂ ಒಂದನ್ನು ಸಾಧಿಸೋಕೆ, ಏನಾದರೂ ಒಂದನ್ನು ಗಳಿಸೋಕೆ ಲವ್ ಫೇಲಿವರಗಿಂತ ಬೇರೆ ಬೆಸ್ಟ ಮೊಟಿವೇಷನ ನಿಮಗೆ ಸಿಗಲು ಸಾಧ್ಯವೇ ಇಲ್ಲ. ಈ ಜಗತ್ತಿನಲ್ಲಿ ಬಹಳಷ್ಟು ಜನ ಅನಸಕ್ಸೆಲಫುಲ್ ಆ್ಯಂಡ ಅನಹ್ಯಾಪಿಯಾಗಿದ್ದಾರೆ. ಅದಕ್ಕೆ ಬೇಸಿಕ ಕಾರಣ ಏನಪ್ಪ ಅಂದ್ರೆ ಅವರು ಮೊದಲು ಅವರನ್ನು ಪ್ರೀತಿಸುವುದನ್ನ ಬಿಟ್ಟು ಬೇರೆಯವರನ್ನ ಪ್ರೀತಿಸುತ್ತಿದ್ದಾರೆ, ಬೇರೆಯವರ ವಸ್ತುಗಳನ್ನು ಇಲ್ಲವೇ ಸ್ಟೇಟಸನ್ನು ಪ್ರೀತಿಸುತ್ತಿದ್ದಾರೆ.
ನಿಮಗೆ ನಿಮ್ಮನ್ನು ನೀವು ಪ್ರೀತಿಸಲು ಈ ಲವ್ ಫೇಲಿವರ್ ಒಂದು ಬೆಸ್ಟ ಅಪಾರ್ಚುನಿಟಿಯನ್ನು ತಂದುಕೊಡುತ್ತದೆ. ಅದನ್ನು ಸರಿಯಾಗಿ ಯುಜ ಮಾಡಿಕೊಳ್ಳಿ. ಬೇರೆಯವರನ್ನು ಪ್ರೀತಿಸುವುದಕ್ಕಿಂತ ಮುಂಚೆ ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮಲ್ಲಿರುವ ಪ್ಯಾಷನನ್ನು ಪ್ರೀತಿಸಿ. ನಿಮ್ಮನ್ನು ನೀವು ಪ್ರೀತಿಸಿ ನಿಮ್ಮ ಲೈಫಲ್ಲಿ ಸರಿಯಾಗಿ ಸೆಟ್ಲಾದರೆ ನೀವು ಯಾವುದಕ್ಕೂ ಬೇರೆಯವರತ್ರ ಕೈಚಾಚೋ ಅವಶ್ಯಕತೆ ಬೀಳಲ್ಲ. ಲವ್ ಫೇಲಿವರ್ ಆದಾಗ ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮ ಟ್ಯಾಲೆಂಟನ್ನು ಪ್ರೀತಿಸಿ ನಿಮ್ಮ ಲೈಫಲ್ಲಿ ಬೇಗನೆ ಮುಂದೆ ಬನ್ನಿ. ಆಗ ಹಣ, ಆಸ್ತಿ, ಅಂತಸ್ತು, ಕಾರು, ಬೈಕು, ಬಂಗಲೆಗಳ ಜೊತೆಗೆ ಸ್ನೇಹ ಪ್ರೀತಿಗಳು ಸಹ ನಿಮ್ಮನ್ನು ಅಟೋಮ್ಯಾಟಿಕ್ಕಾಗಿ ಹುಡುಕಿಕೊಂಡು ಬರುತ್ತವೆ. ಅದಕ್ಕೆ ನಿಮ್ಮ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳಿ. ಮೊದಲು ನಿಮ್ಮನ್ನು ನೀವು ಪ್ರೀತಿಸಿ, ಆಮೇಲೆ ಎಲ್ಲರೂ ನಿಮ್ಮನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ. ಲವ್ವಲ್ಲಿ ಬಿದ್ದ ನಂತರ ಲೈಫಲ್ಲಿ ಗೆದ್ದು ತೋರಿಸಿ. ಕಣ್ಣೀರು ಸುರಿಸೋ ಬದಲು ಬೆವರು ಸುರಿಸಿ. ಸಿಕ್ಕಾಪಟ್ಟೆ ಕೆಲಸ ಮಾಡಿ. ರನ್ನಿಂಗ, ವಾಕಿಂಗ್ ಎಕ್ಸರಸೈಜ ಮಾಡಿ ಫಿಟ್ ಆ್ಯಂಡ ಹೆಲ್ದಿಯಾಗಿರಿ. ನಿಮ್ಮ ಲೈಫಿಗೆ ಮರಳಿ ಬರದವರಿಗಾಗಿ ಕೊರಗಬೇಡಿ. ಯಾವುದೇ ತರಹದ ಬ್ಯಾಡ್ ಅಡಿಕ್ಷನಗಳಿಗೆ ಅಂಟಿಕೊಳ್ಳದೇ ನಿಮ್ಮ ಮೈಂಡನ್ನು ಟ್ರೇನ ಮಾಡಿ. ಒಂದು ಗೋಲ ಸೆಟ್ ಮಾಡಿ. ನೀವು ಒಂದು ಗೋಲ ಸೆಟ್ ಮಾಡಿ ಕೆಲಸ ಮಾಡಲು ಸ್ಟಾರ್ಟ್ ಮಾಡಿದರೆ ನಿಮ್ಮ ಬಾಳಿಗೆ ಬೆಂಕಿ ಇಟ್ಟವಳ ಅಥವಾ ಇಟ್ಟವನ ನೆನಪು ನಿಮಗೆ ಬರಲು ಸಾಧ್ಯವೇ ಇಲ್ಲ.

ಲವ್ ಫೇಲಿವರ್ ಆದ ತಕ್ಷಣ ಲೈಫ ಎಂಡಾಯ್ತು ಅಂತ ಕೊರಗೋ ಅವಶ್ಯಕತೆ ಇಲ್ಲ. ಲವ್ ಮಾಡಿದೆ ಅಂತಾ ಪಶ್ಚಾತ್ತಾಪ ಮಾಡಿಕೋಳ್ಳೋ ಅವಶ್ಯಕತೆನೂ ಇಲ್ಲ. ನಿಮ್ಮ ಜೊತೆಗೆ ಲೈಫಲಾಂಗ ಬಾಳೋ ಯೋಗ್ಯತೆ ಇರದವರಿಗಾಗಿ ನಿಮ್ಮ ವ್ಯಾಲುವೇಬಲ ಟೈಮನ್ನು ಹಾಗೂ ಕಣ್ಣೀರನ್ನು ವೇಸ್ಟ ಮಾಡಬೇಡಿ. ಲವ್ ಫೇಲಿವರನ ಎನರ್ಜಿಯನ್ನು ನಿಮ್ಮ ಸಕ್ಸೆಸಗಾಗಿ ಬಳಸಿಕೊಳ್ಳಿ. ಸ್ಯಾಡ್ ಎಮೋಷನನಲ್ಲಿ ತುಂಬಾನೇ ಎನರ್ಜಿ ಇರುತ್ತದೆ. ಆ ಎನರ್ಜಿಯನ್ನು ವೇಸ್ಟ ಮಾಡದೇ ನಿಮ್ಮ ಗ್ರೋಥಗಾಗಿ ಬಳಸಿಕೊಳ್ಳಿ.
ನಿಮ್ಮನ್ನು ಮತ್ತು ನಿಮ್ಮ ಪ್ರೀತಿಯನ್ನು ತಿರಸ್ಕರಿಸಿ ಹೋದವರು ನಿಮ್ಮನ್ನು ಕಳೆದುಕೊಂಡಿದ್ದಕ್ಕಾಗಿ ಜೀವನಪೂರ್ತಿ ಪಶ್ಚಾತ್ತಾಪ ಪಡಬೇಕು ಆ ರೀತಿ ಸೆಟ್ಲಾಗಿ. ನಿಮ್ಮ ಸಕ್ಸೆಸನಿಂದ ನಿಮ್ಮ ಎಕ್ಸ ಲವರ ಮೇಲೆ ಸೇಡನ್ನು ತೀರಿಸಿಕೊಳ್ಳಿ. ನೀವು ಸಕ್ಸೆಸಫುಲ್ಲಾಗಿ ನಿಮ್ಮ ಎಕ್ಸ ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳದಿದ್ದರೆ ನೀವು ಅವರನ್ನು ನಿಜವಾಗಿಯೂ ಪ್ರೀತಿಸಿಲ್ಲ, ನಿಮ್ಮ ಪ್ರೀತಿ ಗ್ರೇಟ ಅಲ್ಲ ಅಂತರ್ಥ. ಏಕೆಂದರೆ ನೀವು ಸಕ್ಸೆಸಫುಲ್ ಆಗಲಿಲ್ಲ ಅಂದ್ರೆ ನಿಮಗೆ ನಿಮ್ಮ ಮೇಲೆಯೇ ಪ್ರೀತಿಯಿಲ್ಲ ಅಂತರ್ಥ. ಸ್ವತಃ ನಿಮ್ಮನ್ನು ನೀವು ಪ್ರೀತಿಸದಿದ್ದರೆ ಬೇರೆಯವಳು ಯಾಕೆ ನಿಮ್ಮನ್ನು ಜೀವನಪೂರ್ತಿ ಪ್ರೀತಿಸಬೇಕು? ನೀವು ಸಕ್ಸೆಸಫುಲ್ಲಾಗದಿದ್ದರೆ ಮುಂದೇ ಯಾರು ಸಹ ನಿಮ್ಮನ್ನು ಪ್ರೀತಿಸುವ ಧೈರ್ಯ ಮಾಡಲ್ಲ. ಅದಕ್ಕೆ ಲವ್ ಫೇಲಿವರ ಆದ ನಂತರ ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮ ಸಕ್ಸೆಸದಿಂದ ನಿಮ್ಮ ಎಕ್ಸ ಲವರ ಮೇಲೆ ಸೇಡು ತೀರಿಸಿಕೊಳ್ಳಿ. ನಿಮ್ಮನ್ನು ಕಳೆದುಕೊಂಡ ತಪ್ಪಿಗಾಗಿ ನಿಮ್ಮ ಎಕ್ಸ ಲವರ್ ಕಣ್ಣೀರಾಕೋವಂತೆ ಲೈಫಲ್ಲಿ ಸಕ್ಸೆಸಫುಲ್ ಆಗಿ. ಹಣ, ಆಸ್ತಿ, ಅಂತಸ್ತು, ಕಾರು, ಬೈಕು, ಬಂಗಲೆ, ನೇಮ, ಫೇಮ, ಫ್ರೆಂಡ್ಸ, ಸಕ್ಸೆಸ್, ಹ್ಯಾಪಿನೆಸ, ಹೆಲ್ಥ, ವೆಲ್ಥ, ಪವರ್, ಪ್ರಾಪರ್ಟಿ ಇತ್ಯಾದಿಗಳಲ್ಲಿ ನಿಮ್ಮ ಎಕ್ಸಕ್ಕಿಂತ ಬೆಸ್ಟ ಅಂತಾ ಪ್ರೂವ್ ಮಾಡಿ. ಮುಂದೆ ಬೆಸ್ಟ ಲೈಫ ಪಾರ್ಟನರನ್ನು ಆಯ್ಕೆ ಮಾಡಿಕೊಂಡು ಹ್ಯಾಪಿಯಾಗಿರಿ.

ಯಾರಾದರೂ ನಿಮ್ಮನ್ನು ಪ್ರೀತಿಸಿ ಬಿಟ್ಟೋಗಿದಾರೆ ಅಂದರೆ ನಿಮ್ಮಲ್ಲಿಗ ಏನೋ ಕೊರತೆಯಾಗಿದೆ ಅಂತರ್ಥ. ಇಲ್ಲವೇ ಏನೋ ಹೆಚ್ಚಾಗಿದೆ ಅಂತರ್ಥ. ಏನು ಕಮ್ಮಿಯಾಯ್ತು, ಏನು ಹೆಚ್ಚಾಯಿತು, ಎಲ್ಲಿ ಮಿಸ್ಟೇಕಾಯ್ತು ಎಂಬುದನ್ನು ಅನಲೈಜ ಮಾಡಿ. ಮೊದಲ ಪ್ರೀತಿಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಲೈಫಲ್ಲಿ ಚೆನ್ನಾಗಿ ಸೆಟ್ಲಾಗಿ. ಲವ್ ಫೇಲಿವರ ಆದಾಗ ಇಲ್ಲವೇ ಮದುವೆ ಕ್ಯಾನ್ಸಲ ಆದಾಗ ದೇವದಾಸ ಆಗಿ ಹಾಳಾಗುವ ಬದಲು, ಕಬೀರಸಿಂಗ ಆಗಿ ಹಾಳಾಗುವ ಬದಲು ದೇಶದ ಆಸ್ತಿಯಾಗಲು ಪ್ರಯತ್ನಿಸಿ. ನೀವು ಲವ್ ಬ್ರೇಕಪನಿಂದ ಹೊರಬಂದು ಲೈಫಲ್ಲಿ ಚೆನ್ನಾಗಿ ಸೆಟ್ಲಾದಾಗ ಹೊಸ ಹುಡುಗಿಯೊಂದಿಗೆ ಹೊಸ ಲೈಫ ಸ್ಟಾರ್ಟ ಮಾಡಿ. ಅದರಲ್ಲಿ ತಪ್ಪೇನಿಲ್ಲ. ಒಂದು ವೇಳೆ ನಿಮಗೆ ಇದು ಸಾಧ್ಯವಾಗದಿದ್ದರೆ ಸೀದಾ ರಟನ ಟಾಟಾರಂತೆ ದೇಶದ ಆಸ್ತಿಯಾಗಿ ಬಿಡಿ. ನಮ್ಮ ದೇಶವನ್ನು ಪ್ರೀತಿಸಿ, ದೇಶ ನಿಮ್ಮನ್ನು ಖಂಡಿತ ಪ್ರೀತಿಸುತ್ತೆ.
ಕೊನೆಯದಾಗಿ ಹೇಳಬೇಕೆಂದರೆ ಲೈಫ ತುಂಬಾ ದೊಡ್ಡದಾಗಿದೆ. ಈ ದೊಡ್ಡ ಲೈಫಲ್ಲಿ ಲವ್ ಫೇಲಿವರ್ ಒಂದು ಸಣ್ಣ ಪಾರ್ಟ ಅಷ್ಟೇ. ಇದಕ್ಕಾಗಿ ಪೂರ್ತಿ ಲೈಫನ್ನು ಹಾಳು ಮಾಡಿಕೊಳ್ಳುವುದು ಜಾಣರ ಲಕ್ಷಣ ಅಲ್ಲ. ಪ್ರೀತಿ ಗೀತಿ ಇತ್ಯಾದಿಗಳು ಹಾಳಾಗೋದ್ರೆ ಏನಂತೆ, ಮದುವೆ ಮಕ್ಕಳು ಇತ್ಯಾದಿಗಳನ್ನಾದ್ರೂ ಸರಿಯಾಗಿ ಮಾಡಿ ಸುಖವಾಗಿರಿ, ಸಕ್ಸೆಸಫುಲ್ಲಾಗಿ ಜೀವನ ಸಾಗಿಸಿ. All the Best and Thanks You....
