ಆನೆ ಚಲಿಸಲು ಪ್ರಾರಂಭಿಸಿದಾಗ ನಾಯಿಗಳು ಬೊಗಳಲು ಪ್ರಾರಂಭಿಸುತ್ತವೆ. ಅವುಗಳನ್ನು ಅವುಗಳ ಪಾಲಿಗೆ ಬೊಗಳಲು ಬಿಡಿ. ನೀವು ಹೆದರದೆ, ಕುಗ್ಗದೆ, ಬಗ್ಗದೆ, ಜಗ್ಗದೆ, ಎಲ್ಲಿಯೂ ನಿಲ್ಲದೆ, ಸುಸ್ತಾಗದೆ ಮುಂದೆ ಸಾಗುತ್ತಲೇ ಇರಿ.
ನಿಮ್ಮ ಬೆನ್ನ ಹಿಂದೆ ಬೊಗಳುವ ನಾಯಿಗಳನ್ನ ನೆಗ್ಲೆಕ್ಟ ಮಾಡಿ. ಬರೀ ನಿಮ್ಮ ಗೋಲ್ ಮೇಲೆ ಮಾತ್ರ ಫೋಕಸ್ ಮಾಡಿ. ನೀವು ನಿಮ್ಮ ಕೆಲಸ ಮಾಡುತ್ತಾ ಮುಂದೆ ಸಾಗಿ.
ನಿಮ್ಮನ್ನು ಸೋಲಿಸುವ ಶಕ್ತಿ, ನಿಮ್ಮನ್ನು ನಿಲ್ಲಿಸುವ ಶಕ್ತಿ, ನಿಮ್ಮನ್ನು ಬೀಳಿಸುವ ಶಕ್ತಿ ಬರೀ ನಿಮಗಷ್ಟೇ ಇದೆ. ನಿಮ್ಮಿಂದ ನೀವು ಸೋಲಬೇಡಿ. ನಿಮ್ಮನ್ನು ನೀವು ಗೆಲ್ಲಿ ಮತ್ತು ಮುಂದೆ ಸಾಗಿ. ಒಂದಲ್ಲ ಒಂದಿನ ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ.
ಪ್ರಯತ್ನ ಯಾವತ್ತೂ ವ್ಯರ್ಥವಾಗಲ್ಲ, ಯಾವಾಗಲೂ ತಾಳ್ಮೆಯಿಂದಿರಿ.
ಭೂಮಿಯ ಸಹನಶೀಲತೆ,
ಸೂರ್ಯನ ಸಮಯ ಪ್ರಜ್ಞೆ,
ಚಂದ್ರನ ನಗು ಸದಾ ನಿಮ್ಮೊಂದಿಗೆ ಇರಲಿ.
All the Very Best...