NO ಹೇಳುವುದನ್ನು ಕಲಿಯಿರಿ : Learn to say NO in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

NO ಹೇಳುವುದನ್ನು ಕಲಿಯಿರಿ : Learn to say NO in Kannada

NO ಹೇಳುವುದನ್ನು ಕಲಿಯಿರಿ : Learn to say NO in Kannada

                        ಹಾಯ್ ಗೆಳೆಯರೇ, ಜೀವನದಲ್ಲಿ ಒಳ್ಳೇ ಆಫರಗಳು, ಒಳ್ಳೇ ಅವಕಾಶಗಳು ಬಂದಾಗ Yes ಅಂತಾ ಹೇಳುವುದು ಎಷ್ಟು ಮುಖ್ಯವೋ ಕೆಟ್ಟ ಆಫರಗಳು ಬಂದಾಗ NO ಅಂತಾ ಹೇಳುವುದು ಅಷ್ಟೇ ಮುಖ್ಯವಾಗಿದೆ. ಕೆಟ್ಟ ಆಫರಗಳಿಗೆ ನೋ ಹೇಳದಿದ್ದರೆ ಮುಂದೆ ಬಹಳಷ್ಟು ನೋವಾಗುತ್ತೆ. ಇಷ್ಟವಿಲ್ಲದ ಫ್ರೆಂಡಶೀಪಗೆ, ಪ್ರೇಮ ಸಂಬಂಧಕ್ಕೆ ಇಲ್ಲವೇ ಮದುವೆಗೆ ಧೈರ್ಯವಾಗಿ ನೋ ಅಂತಾ ಹೇಳದಿದ್ದರೆ ಜೀವನಾಪೂರ್ತಿ ನೋವಿನಿಂದ ನರಳಬೇಕಾಗುತ್ತದೆ‌. ಇಷ್ಟವಿಲ್ಲದ ಬಿಜನೆಸ ಡೀಲಗಳಿಗೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾಗುತ್ತದೆ. ನಿಮ್ಮ ಪ್ಯಾಷನನ್ನು ಫಾಲೋ ಮಾಡೋದನ್ನ ಬಿಟ್ಟು ಇಷ್ಟವಿಲ್ಲದ ಜಾಬ ಮಾಡಿದರೆ ಜೀವನಪೂರ್ತಿ ಆರ್ಡಿನರಿಯಾಗಿ ಬದುಕಬೇಕಾಗುತ್ತದೆ‌. ಅದಕ್ಕಾಗಿ ಬೇಡದಿರುವ ಸಂಗತಿಗಳಿಗೆ, ಇಷ್ಟವಿಲ್ಲದ ವಿಷಯಗಳಿಗೆ ನೇರವಾಗಿ ನೋ ಅಂತಾ ಹೇಳುವುದನ್ನು ಕಲಿಯಿರಿ. ಇಲ್ಲವಾದರೆ ನಿಮಗೆ ಮುಂದೆ ಬಹಳಷ್ಟು ನೋವಾಗುತ್ತೆ‌. ಇಷ್ಟವಿಲ್ಲದ ಸಂಬಂಧಕ್ಕೆ, ಕೆಲಸಕ್ಕೆ ಕೈ ಹಾಕಿ ಕಷ್ಟ ಅನುಭವಿಸಬೇಡಿ‌. 
NO ಹೇಳುವುದನ್ನು ಕಲಿಯಿರಿ : Learn to say NO
                ನಿಮಗೆ ನಿಮ್ಮ ಜೀವನದಲ್ಲಿ ಏನು ಬೇಕು, ಏನು ಮಾಡಬೇಕು ಎಂಬುದು ಗೊತ್ತಿಲ್ಲದಿದ್ದರೂ ಏನು ಬೇಡ, ಏನು ಮಾಡಬಾರದು ಎಂಬುದು ಚೆನ್ನಾಗಿ ಗೊತ್ತಿರಬೇಕು. ಸೋ ಬೇಡದಿರುವುದಕ್ಕೆ ನೋ ಹೇಳುವುದನ್ನು ಕಲಿಯಿರಿ. ನೀವು ನೋ ಹೇಳಿದ ತಕ್ಷಣ ಯಾರೇನು ನಿಮ್ಮನ್ನು ಒಮ್ಮೇಲೆ ನುಂಗಿ ಬಿಡಲ್ಲ. ಕೂಲ ಆಗಿ ಪ್ರೀತಿಯಿಂದ ನಿಮ್ಮ ಅಭಿಪ್ರಾಯವನ್ನು, ಆಸೆ ಆಕಾಂಕ್ಷೆಗಳನ್ನು ಎದುರುಗಡೆಯಿರುವ ವ್ಯಕ್ತಿಗೆ ಹೇಳಿ ಜಾಣತನದಿಂದ ನೋ ಹೇಳಿ ನಿಮ್ಮ ಲೈನನ್ನು ಕ್ಲಿಯರ್ ಮಾಡಿಕೊಳ್ಳಿ. 

                       ಫೇಸ್ಬುಕ್ಕಲ್ಲಿ ಯಾರೋ ಫ್ರೆಂಡ ರಿಕ್ವೇಸ್ಟ ಕಳಿಸ್ತಾರೆ, ಕಾಲೇಜ್ನಲ್ಲಿ ಯಾರೋ ಲವ್ ಪ್ರಪೋಜಲ ಕೊಡ್ತಾರೆ, ಆಫೀಸನಲ್ಲಿ ಯಾರೋ ಮ್ಯಾರೇಜ ಪ್ರಪೋಜಲ ಕೊಡ್ತಾರೆ, ಇನ್ಯಾರೋ ಬಂದು ಬಿಜನೆಸ್ ಆಫರ್ ಕೊಡ್ತಾರೆ, ಹೀಗೆ ನೀವು ಬಂದವರಿಗೆಲ್ಲ ಕಣ್ಮುಚ್ಚಿ Yes ಅಂದ್ರೆ ಮುಂದೆ ನಿಮಗೆ ನೋವಾಗುತ್ತೆ, ನಷ್ಟವಾಗುತ್ತೆ‌. ಅದಕ್ಕಾಗಿ ಬಂದಿದ್ದನ್ನೆಲ್ಲ ಕಣ್ಮುಚ್ಚಿ ಒಪ್ಪಿಕೊಳ್ಳಬೇಡಿ. ನೀವು ಸ್ವತಂತ್ರ ಭಾರತದಲ್ಲಿ ಸ್ವತಂತ್ರವಾಗಿ ಬದುಕುತ್ತಿರುವಿರಿ. ಸ್ವಲ್ಪ ತಲೆ ಉಪಯೋಗಿಸಿ, ತಾಳ್ಮೆಯಿಂದ ಯೋಚಿಸಿ. ಆನಂತರ ನಿಮಗೆ ಯಾವುದು ಸರಿಯೆನಿಸುತ್ತೋ ಅದಕ್ಕೆ ಮಾತ್ರ Yes ಅನ್ನಿ. ಯಾವುದು ನಿಮ್ಮನ್ನು ಸಕ್ಸೆಸಿನ ದಾರಿಯಲ್ಲಿ ಮುನ್ನಡೆಸುತ್ತೋ ಅದಕ್ಕೆ ಮಾತ್ರ Yes ಅನ್ನಿ. ಮಿಕ್ಕಿದಕ್ಕೆಲ್ಲ NO ಹೇಳಿ... 

NO ಹೇಳುವುದನ್ನು ಕಲಿಯಿರಿ : Learn to say NO

ನಿಮ್ಮ ಟೈಮವೆಸ್ಟ ಮಾಡುತ್ತಿರುವ ಎಲ್ಲ ಯುಜಲೆಸ ವ್ಯಕ್ತಿಗಳಿಗೆ, ವಸ್ತುಗಳಿಗೆ ನೋ ಹೇಳಿ...

ನಿಮ್ಮನ್ನು ಡಿಸ್ಟರ್ಬ ಮಾಡುತ್ತಿರುವ, ನಿಮ್ಮನ್ನು ಡೈವರ್ಟ ಮಾಡುತ್ತಿರುವ ಎಲ್ಲ ಡಿಮೋಟಿವೇಟರಗಳಿಗೆ ನೋ ಹೇಳಿ... 

ನಿಮ್ಮ ಮೇಲೆ, ನಿಮ್ಮ ಕನಸುಗಳ ಮೇಲೆ ಭರವಸೆಯಿಡದ ವ್ಯಕ್ತಿಗಳನ್ನು ನಿಮ್ಮ ಜೀವನದಿಂದ ಡಿಲೀಟ ಮಾಡಿ... 

ನಿಮ್ಮ ಲೈಫಿಗೆ ವ್ಯಾಲೂ ಆ್ಯಡ ಮಾಡದವರನ್ನು ನಿಮ್ಮ ಹತ್ತಿರ ಸುಳಿಯಲು ಬಿಡಬೇಡಿ... 

ನಿಮ್ಮ ನೆಮ್ಮದಿಯನ್ನು ಕಿತ್ತುಕೊಳ್ಳುವ ಸ್ನೇಹಿತರಿಗೆ, ಸಂಬಂಧಿಗಳಿಗೆ ನೋ ಹೇಳಿ... 

ಬೇರೆಯವರಿಗೆ ಬೇಸರವಾಗುತ್ತೆ ಅಂತಾ ನೀವು ಎಲ್ಲದಕ್ಕೂ ತಲೆಯಲ್ಲಾಡಿಸಿ ನಂತರ ನರಳಬೇಡಿ. ಇಷ್ಟವಿಲ್ಲದ ವಸ್ತುಗಳಿಗೆ, ವ್ಯಕ್ತಿಗಳಿಗೆ, ವಿಷಯಗಳಿಗೆ ನೋ ಹೇಳಿ. ನೀವೇ ಖುಷಿಯಾಗಿರದಿದ್ದರೆ ನಿಮ್ಮತ್ರ ಏನಿದ್ದರೇ ಏನು ಪ್ರಯೋಜನ‌? ಅಲ್ವಾ? 

NO ಹೇಳುವುದನ್ನು ಕಲಿಯಿರಿ : Learn to say NO

                       ನನಗೆ ಗವರ್ನಮೆಂಟ ಜಾಬ್ ಮಾಡಲು ಇಷ್ಟವಿರಲಿಲ್ಲ. ಅದಕ್ಕೆ ನಾನು ಎರಡೆರಡು ಗವರ್ನಮೆಂಟ ಜಾಬಗಳಿಗೆ ನೋ ಹೇಳಿ ನನ್ನ ಪ್ಯಾಷನನ್ನು ಫಾಲೋ ಮಾಡಿದೆ. ಬಿಜನೆಸ ಸ್ಟಾರ್ಟ ಮಾಡಿದೆ, ಕಂಪನಿ ಓಪನ ಮಾಡಿದೆ. ಜಗತ್ತಿನ ದೃಷ್ಟಿಯಲ್ಲಿ ನಾನು ಸಕ್ಸೆಸಫುಲ್ಲಾಗಿದ್ದರೂ ನನಗಿನ್ನೂ ನಾನೆಂದುಕೊಂಡಂತೆ ಸಕ್ಸೆಸ್ ಸಿಕ್ಕಿಲ್ಲ. ಆದರೂ ನಾನು ಬಹಳಷ್ಟು ಖುಷಿಯಾಗಿರುವೆ. ಏಕೆಂದರೆ ನಾನು ಇಷ್ಟಪಟ್ಟಿದ್ದನ್ನೇ ನಾನು ಮಾಡುತ್ತಿರುವೆ‌. ನಾನು ನನ್ನಿಷ್ಟದಂತೆ ಹೆಮ್ಮೆಯಿಂದ ಬದುಕುತ್ತಿರುವೆ. ಆದರೆ ನಾನು ಕಂಪನಿ ಸ್ಟಾರ್ಟ ಮಾಡಿದಾಗ ನನ್ನನ್ನು ನೋಡಿ ನಕ್ಕ ನಮ್ಮ ಕ್ಲಾಸಮೇಟ್ಸಗಳು, ಟೀಚರಗಳು, ಲೆಕ್ಚರರ್ಸಗಳು, ರಿಲೆಟಿವ್ಸಗಳು, ಹಿತಶತ್ರುಗಳು ಯಾರು ಖುಷಿಯಾಗಿಲ್ಲ. ಯಾರು ಮುಂದೆ ಹೋಗಿಲ್ಲ. ಎಲ್ಲಿದ್ದರೋ ಅಲ್ಲೇ ಇದಾರೆ‌. ಏಕೆಂದರೆ ಅವರು ಅವರಿಗೆ ಇಷ್ಟವಿಲ್ಲದ ಕೆಲಸವನ್ನು ಮಾಡುತ್ತಿದ್ದಾರೆ. ಇಷ್ಟವಿಲ್ಲದ ವ್ಯಕ್ತಿಗಳೊಡನೆ ಬದುಕುತ್ತಿದ್ದಾರೆ. 

NO ಹೇಳುವುದನ್ನು ಕಲಿಯಿರಿ : Learn to say NO

              ನಾನು ನನ್ನೆಲ್ಲ ಹಳೇ ಕ್ಲಾಸಮೇಟ್ಸಗಳು, ಲೆಕ್ಚರರಗಳು, ಫ್ರೆಂಡ್ಸಗಳು ಎಲ್ಲ ಖುಷಿಯಾಗಿದ್ದಾರೆ, ಲೈಫಲ್ಲಿ ಹಾಯ್ ಲೆವಲಲ್ಲಿ ಸೆಟ್ಲಾಗಿದ್ದಾರೆ ಅಂತಾ ಅನ್ಕೊಂಡಿದ್ದೆ. ಬಟ ಯಾರು ಹಾರ್ಟಲಿ ಖುಷಿಯಾಗಿಲ್ಲ. ಎಲ್ಲರೂ ಆರ್ಡಿನರಿ ಲೈಫ ಸೆಲೆಕ್ಟ ಮಾಡಿಕೊಂಡು ಪಶ್ಚಾತ್ತಾಪ ಪಡ್ತಿದಾರೆ. ಇಷ್ಟವಿಲ್ಲದ ಜಾಬ ಹಿಡಿದು ಇಷ್ಟವಿಲ್ಲದ ಮದುವೆ ಮಾಡಿಕೊಂಡು ಒದ್ದಾಡುತ್ತಿದ್ದಾರೆ‌. ಇವರಿಗಿಂತ ನನ್ನ ಲೈಫ ಸಾವಿರ ಪಟ್ಟು ಚೆನ್ನಾಗಿದೆ. ಏಕೆಂದರೆ ಕಷ್ಟವಾದರೂ ನಾನು ನನ್ನಿಷ್ಟದಂತೆ ನೆಮ್ಮದಿಯಾಗಿ ಸಕ್ಸೆಸಫುಲ್ಲಾಗಿ ಬದುಕುತ್ತಿರುವೆ. ಆದರೆ ಇವರೆಲ್ಲ ಯಾರದೋ ಮನೆಯ, ಯಾರದೋ ಮನಸ್ಸಿನ, ಯಾರದೋ ಕನಸಿನ, ಯಾರದೋ ಕೆಲಸದ ಪಂಜರದ ಪಕ್ಷಿಗಳಾಗಿದ್ದಾರೆ. ಕಾಲೇಜಿನಲ್ಲಿದ್ದಾಗ ನನ್ನನ್ನು ಕಿಂಡಲ ಮಾಡುತ್ತಿದ್ದ ಹುಡುಗಿಯರು, ಲೇಡಿ ಲೆಕ್ಚರರಗಳು ಘೇಂಡಾಮ್ರಗಗಳನ್ನು ಮದುವೆಯಾಗಿದ್ದಾರೆ‌‌. ಹುಡುಗರು ಅವರವರ ಸಂಬಂಧಿಕರಲ್ಲಿನ ಸುಂಬುಳಬುರ್ಕಿಯರನ್ನು ಮದುವೆಯಾಗಿದ್ದಾರೆ. ಯಾರ ಲವ್ವು, ಯಾರ ಲೈಫು ಸಕ್ಸೆಸಫುಲ್ಲಾಗಿಲ್ಲ. ಎಲ್ಲ ಹೊಗೆನೆ... 

NO ಹೇಳುವುದನ್ನು ಕಲಿಯಿರಿ : Learn to say NO

                            ನನ್ನೆಲ್ಲ ಕ್ಲಾಸಮೇಟ್ಸಗಳಲ್ಲಿ ಕೆಲವೊಂದಿಷ್ಟು ಜನರನ್ನು ಬಿಟ್ಟರೆ ಎಲ್ಲರೂ ಆರ್ಡಿನರಿ ಜಾಬ ಮಾಡುತ್ತಿದ್ದಾರೆ. ಮೂರ್ನಾಲ್ಕು ಜನ ಮಾತ್ರ A ಡಿವಿಜನ ಅಥವಾ ಹಾಯ್ ಪ್ರೋಫೈಲ್ ಜಾಬ್ ಮಾಡ್ತಿದಾರೆ. ಯಾರು ಇನ್ನೂ ತಮ್ಮ ಜೀವನದಲ್ಲಿ ಏನು ಕಿತ್ತಾಕ್ಕಿಲ್ಲ. ನಮ್ಮ ದೇಶಕ್ಕೆ ಯಾವುದೇ ಕೊಡುಗೆ ಕೊಡುವ ಕನಸು ಕೂಡ ಇಲ್ಲ ಅವರಿಗೆ‌. ಏಕೆಂದರೆ ಅವರ ಜೀವನ ಕೆಸರಲ್ಲಿ ಸಿಕ್ಕು ಒದ್ದಾಡುತ್ತಿರುವ ಕೋಣದಂತಾಗಿದೆ. ನಾನು ಅವರನ್ನು ಸೆಲೆಬ್ರಿಟಿ ಲೆವೆಲಗೆ ಥಿಂಕ ಮಾಡಿದ್ದೆ. ಆದರೆ ಅವರು ಆ ಲೆವೆಲಗೆ ಹೋಗೋ ಪ್ರಯತ್ನ ಕೂಡ ಮಾಡಿಲ್ಲ. ಅವರು ಏನಾದರೂ ಮಾಡ್ಕೊಂಡು ಹಾಳಾಗೋಗ್ಲಿ ಬಿಡಿ. ನಮ್ಮ ಲೈಫನ್ನಾ ನಾವು ಅದ್ದೂರಿಯಾಗಿ ರೂಪಿಸಿಕೊಳ್ಳೋಣಾ. ಸೋ ಗೆಳೆಯರೇ ನೀವು ಅಲರ್ಟಾಗಿರಿ, ನಿಮಗಿನ್ನೂ ಟೈಮಿದೆ. ಇಷ್ಟವಿಲ್ಲದ ಸಂಗತಿಗಳಿಗೆ ನೋ ಹೇಳಿ, ನಿಮ್ಮಿಷ್ಟದಂತೆ ಸಂತೋಷವಾಗಿ, ಸಕ್ಸೆಸಫುಲ್ಲಾಗಿ ಬದುಕಿ. All the Best and Thanks You...


Blogger ನಿಂದ ಸಾಮರ್ಥ್ಯಹೊಂದಿದೆ.