ನ್ಯಾನೋ ಕಾರಿನ ಮೋಟಿವೇಷನಲ್ ಕಥೆ - Motivational Story of Tata Nano Car in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನ್ಯಾನೋ ಕಾರಿನ ಮೋಟಿವೇಷನಲ್ ಕಥೆ - Motivational Story of Tata Nano Car in Kannada

ನ್ಯಾನೋ ಕಾರಿನ ಮೋಟಿವೇಷನಲ್ ಕಥೆ - Motivational Story of Nano Car in Kannada

                            ಹಾಯ್ ಗೆಳೆಯರೇ, ನೀವೆಲ್ಲ ಟಾಟಾ ನ್ಯಾನೋ ಕಾರನ್ನು ನೋಡಿರಬಹುದು. ಈ ನ್ಯಾನೋ ಕಾರಿನ ಹಿಂದೆಯೂ ಒಂದು ಇಂಟರೆಸ್ಟಿಂಗ ಮೋಟಿವೇಷನಲ್ ಕಥೆಯಿದೆ. ನ್ಯಾನೋ ಕಾರ ರತನ ಟಾಟಾರ ಕನಸಿನ ಕೂಸಾಗಿತ್ತು. ಬನ್ನಿ ಇವತ್ತಿನ ಎಪಿಸೋಡನಲ್ಲಿ ಅದರ ಬಗ್ಗೆ ಶಾರ್ಟಾಗಿ ತಿಳಿದುಕೊಳ್ಳೋಣಾ. 

ನ್ಯಾನೋ ಕಾರಿನ ಮೋಟಿವೇಷನಲ್ ಕಥೆ - Motivational Story of Nano Car in Kannada

                 ಒಂದಿನ ಮಳೆಗಾಲದ ಸಮಯದಲ್ಲಿ ರತನ ಟಾಟಾರವರು ಒಂದು ಲಕ್ಜುರಿ ಕಾರಲ್ಲಿ ತಮ್ಮ ಆಫೀಸಿನಿಂದ ಮುಂಬೈನ ಮಲಾಡನಲ್ಲಿರುವ ತಮ್ಮ ಮನೆಗೆ ಹೋಗ್ತಾಯಿದ್ರು. ಜೋರಾಗಿ ಮಳೆ ಸುರಿತಾ ಇತ್ತು. ಕಾರು ಸುರಿಯೋ ಮಳೆಯಲ್ಲಿ ಸಾವಕಾಶವಾಗಿ ಸಾಗ್ತಾಯಿತ್ತು. ಆಗ ರತನ ಟಾಟಾರ ಕಣ್ಣಿಗೆ ಮಳೆಯಲ್ಲಿ ತಮ್ಮ ಪುಟ್ಟ ಮಗುವಿನೊಂದಿಗೆ ನೆನಿತಾ ನಿಂತಿರೋ ಒಬ್ಬ ಯುವ ದಂಪತಿಗಳು ಕಾಣಿಸಿದರು. ಅವರ ಬೈಕ ಮಳೆಯಲ್ಲಿ ನೆನೆದು ದಾರಿ ಮಧ್ಯೆದಲ್ಲಿ ಕೆಟ್ಟು ನಿಂತಿತ್ತು. ರಸ್ತೆ ಮೇಲೆ ನೀರು ತುಂಬಿ ಹರಿತಾ ಇತ್ತು. ಆ ದಂಪತಿಗಳು ಮಳೆಯಲ್ಲಿ ನೆನಿತಾ ನಿಂತಿದ್ದರು.‌ ಗಂಡ ತನ್ನ ಬೈಕನ್ನು ಯಾವುದಾದರೂ ಒಂದು ಸೇಫ ಜಾಗದಲ್ಲಿ ಪಾರ್ಕ ಮಾಡಲು ಒದ್ದಾಡುತ್ತಿದ್ದರೆ ಹೆಂಡತಿ ಮಗುವನ್ನು ಮಳೆಯಲ್ಲಿ ನೆನೆಯದಂತೆ ಕಾಪಾಡಲು ಒಂದು ಆಸರೆಯನ್ನು ಹುಡುಕುತ್ತಿದ್ದಳು‌. ಈ ದೃಶ್ಯವನ್ನು ನೋಡಿ ರತನ ಟಾಟಾರಿಗೆ ಬಹಳಷ್ಟು ಬೇಜಾರಾಯಿತು. 

ನ್ಯಾನೋ ಕಾರಿನ ಮೋಟಿವೇಷನಲ್ ಕಥೆ - Motivational Story of Nano Car in Kannada

                                  ಕಾರು ಮುಂದೆ ಸಾಗಿತು. ಮುಂದೆ ಬಹಳಷ್ಟು ಜನ ಟು ವ್ಹೀಲರ ಸವಾರರು ಮಳೆಯಿಂದ ಮನೆಗೆ ಹೋಗೋಕ್ಕಾಗದೆ ದೊಡ್ಡ ರಸ್ತೆಗಳ ಬ್ರೀಡ್ಜಗಳ ಕೆಳಗೆ ನಿಂತು ಮಳೆಯಿಂದ ಆಸರೆ ಪಡೆದುಕೊಂಡಿದ್ದರು. ಇದನ್ನು ನೋಡಿ ರತನ ಟಾಟಾರಿಗೆ ಮತ್ತಷ್ಟು ಬೇಜಾರಾಯಿತು. ಇದಕ್ಕೂ ಮುಂಚೆ ಬೈಕ ಮೇಲೆ ಹೆಂಡತಿ ಮಕ್ಕಳೊಡನೆ ಒದ್ದಾಡುತ್ತಾ ಸವಾರಿ ಮಾಡುವ ಎಷ್ಟೋ ಜನ ಮಿಡಲ ಕ್ಲಾಸ ಜನರನ್ನು ಟಾಟಾರವರು ನೋಡಿದ್ದರು. ಆದರೆ ಈಗ ಅವರಿಗೆ "ಮಳೆಯಲ್ಲಿ ನೆನಿತಾ ನಿಂತಿರೋ ಜನರಿಗೆ ಯಾಕೆ ನಾನು ಒಂದು ಬಜೆಟ್ ಫ್ರೆಂಡ್ಲಿ ಚೀಪ್ & ಬೆಸ್ಟ ಕಾರ ಕೊಡಬಾರದು?" ಅಂತಾ ಅನಿಸಿತು. "ಯಾಕೆ ನಾನು ಈ ಜನರಿಗಾಗಿ ಒಂದು ಲಕ್ಷ ರೂಪಾಯಿ ಹಣದಲ್ಲಿ ಸಿಗುವ ಕಾರ ತಯಾರಿಸಬಾರದು?" ಎಂಬ ಪ್ರಶ್ನೆಯನ್ನು ಅವರು ತಮಗೆ ತಾವೇ ಕೇಳಿಕೊಂಡರು. ಅವತ್ತೇ ಅವರು ಭಾರತದ ಮಿಡಲ ಕ್ಲಾಸ ಜನರಿಗಾಗಿ ಚೀಪ್ & ಬೆಸ್ಟ ಅಫೋರ್ಡೆಬಲ್ ಕಾರನ್ನು ತಯಾರಿಸುವ ಕನಸನ್ನು ಕಂಡರು. ಮರುದಿನವೇ ಆ ಕನಸಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಆ ಕನಸಿನ ಕಾರೇ ಈ ಟಾಟಾ ನ್ಯಾನೋ. 

ನ್ಯಾನೋ ಕಾರಿನ ಮೋಟಿವೇಷನಲ್ ಕಥೆ - Motivational Story of Nano Car in Kannada

                      ಕೆಲವರ ಕುತಂತ್ರ, ರಾಂಗ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಹಾಗೂ ಮೀಡಿಯಾಗಳ ನಾನಸೆನ್ಸ ನ್ಯೂಜಗಳಿಂದಾಗಿ ನ್ಯಾನೋ ಕಾರ ಮಾರ್ಕೆಟನಲ್ಲಿ ಫೇಲಾಯ್ತು, ಅದು ಬೇರೆ ವಿಷಯ. ಭಾರತದಲ್ಲಿ ಜನ ಕಾರನ್ನು ಓಡಾಡಲು ಖರೀದಿಸುವುದಕ್ಕಿಂತ ಹೆಚ್ಚಾಗಿ ಶೋಅಪ ಮಾಡಲು, ಸ್ಟೇಟಸನ್ನು ತೋರಿಸಲು ಖರೀದಿಸುತ್ತಾರೆ. ಬಟ್ ಬಡವರಿಗೆ ನ್ಯಾನೋ ಕಾರ ಖಂಡಿತ ಪ್ರಯೋಜನಕ್ಕೆ ಬಂದಿದೆ. ಬೇರೆ ಬಿಜನೆಸಮ್ಯಾನಗಳು ಬಡವರನ್ನು ದೋಚುತ್ತಿರುವಾಗ ಅಟಲಿಸ್ಟ ರತನ ಟಾಟಾರವರು ಬಡವರ ಬಗ್ಗೆ ಯೋಚಿಸಿ ಅವರಿಗೂ ಸಹ ಒಂದು ಕಾರನ್ನು ತಯಾರಿಸುವ ಕನಸು ಕಂಡು ಅದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರಲ್ಲ ಅದಕ್ಕೆ ನಾವೆಲ್ಲರೂ ಅವರಿಗೆ ಹ್ಯಾಟ್ಸಪ ಹೇಳಲೇಬೇಕು. ಈ ಕಾರಣಕ್ಕಾಗಿಯೇ ನಾನು ನಿಮಗೆ ರತನ ಟಾಟಾರಂಥ ಬಿಜನೆಸಮ್ಯಾನಗಳನ್ನು ಬೆಂಬಲಿಸಿ ಅಂತಾ ಹೇಳೋದು. ಇದೀಷ್ಟು ಟಾಟಾ ನ್ಯಾನೋ ಕಾರಿನ ಮೋಟಿವೇಷನಲ್ ಕಥೆ‌. ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಜೊತೆಗೆ ಕಮೆಂಟ ಮೂಲಕ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಧನ್ಯವಾದಗಳು...
ನ್ಯಾನೋ ಕಾರಿನ ಮೋಟಿವೇಷನಲ್ ಕಥೆ - Motivational Story of Nano Car in Kannada

Blogger ನಿಂದ ಸಾಮರ್ಥ್ಯಹೊಂದಿದೆ.