ಪಾರ್ಟಟೈಮ ಗೆಳತಿ ಕನ್ನಡ ಫ್ರೆಂಡಶೀಪ ಸ್ಟೋರಿ - kannada friendship story - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪಾರ್ಟಟೈಮ ಗೆಳತಿ ಕನ್ನಡ ಫ್ರೆಂಡಶೀಪ ಸ್ಟೋರಿ - kannada friendship story

ಪಾರ್ಟಟೈಮ ಗೆಳತಿ - ಕನ್ನಡ ಫ್ರೆಂಡಶೀಪ ಸ್ಟೋರಿ - Kannada Stories

                             ಆ್ಯಕ್ಚುಲಿ ನಾನು ಕೆಲವೊಂದಿಷ್ಟು ವಿಷಯಗಳ ಬಗ್ಗೆ ಬರೆಯಬಾರದು ಅಂತಾ ಬಹಳಷ್ಟು ಅನ್ಕೊತ್ತಿನಿ. ಆದರೆ ಆ ವಿಷಯ ಪದೇಪದೇ ಕಾಡಲು ಪ್ರಾರಂಭಿಸಿದಾಗ ಅದನ್ನು ಬರೆಯಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಂಥ ಅನಿವಾರ್ಯತೆಯಲ್ಲಿ ಹುಟ್ಟಿದ ನೈಜಕಥೆಯೇ ಈ "ಪಾರ್ಟಟೈಮ ಗೆಳತಿ".

                                ನಾನು ನಿಮಗೆಲ್ಲ ಗೊತ್ತು. ಆದರೆ ನನಗೆ ಸಿಕ್ಕ ಪಾರ್ಟಟೈಮ ಗೆಳತಿ ಯಾರಂತ ನಿಮಗೆ ‌ಗೊತ್ತಿಲ್ಲ. ಅವಳು ಯಾರಂತ ನಿಮಗೆ ಗೊತ್ತಾಗೊದು ನನಗಿಷ್ಟವಿಲ್ಲ. ಅದಕ್ಕಾಗಿ ಪೂರ್ತಿ ಕಥೆಯಲ್ಲಿ ಅವಳು ಅವಳಾಗೆ ಇರ್ತಾಳೆ. ಅವಳು ಅಂಥ ಸುಂದರಿ ಏನಲ್ಲ. ಸಿಂಪಲ್ ಸುಂದರಿ ಅಂದ್ರೆ ತಪ್ಪೇನಿಲ್ಲ. ಬಟ್ ಅವಳು ಬಹಳಷ್ಟು ಬುದ್ಧಿವಂತೆ. ಅವಳ ಧ್ವನಿ ಕೂಡ ಸುಮಧುರವಾಗಿದೆ. ನನಗೂ ಅವಳಿಗೂ ಕ್ಲಾಸಲ್ಲಿ ತುಂಬಾನೇ ಕಾಂಪಿಟೇಷನ್ ನಡಿತಾಯಿತ್ತು. ಅವಳು ನನ್ನ ದುಶ್ಮನ ತರಹ ನೊಡ್ತಾಯಿದ್ಲು. ಆದರೆ ನಾನು ಅವಳನ್ನು ಆ ತರಹ ನೋಡ್ತಾ‌ ಇರಲಿಲ್ಲ. ನಾನು ಅವಳ ಜೊತೆಗೆ ಫ್ರೆಂಡಶೀಪ ಮಾಡಬೇಕು ಅಂತಾ ಬಹಳಷ್ಟು ಸಲ ಅನ್ಕೊಂಡಿದ್ದೆ. ಆದರೆ ಅವಳು ನನಗೆ ಆ ಅವಕಾಶವನ್ನು ಕೊಡಲಿಲ್ಲ. ನಮ್ಮ ಕ್ಲಾಸಲ್ಲಿನ ಫಸ್ಟ ಬೆಂಚ್ ಕಮಂಗಿಗಳ ಜೊತೆಗೆಲ್ಲ ಅವಳು ಮಾತಾಡುತ್ತಿದ್ದಳು. ಆದರೆ ನನ್ನ ಜೊತೆಗೆ ಮಾತಾಡುತ್ತಿರಲಿಲ್ಲ. ನನ್ನನ್ನು ಅವೈಡ ಮಾಡಿ ದೂರ ಓಡುತ್ತಿದ್ದಳು‌. ಆದರೆ ಎಲ್ಲದರಲ್ಲೂ ನನ್ನೊಂದಿಗೆ ಕಾಂಪಿಟೇಷನ್ ಮಾಡುತ್ತಿದ್ದಳು.

                                ಈ ಒಣ ಕಾಂಪಿಟೇಷನನಲ್ಲೇ ಎರಡು ವರ್ಷ ಕಳೆದೊಯಿತು. ನಾವಿಬ್ಬರು 10thಗೆ ಕಾಲಿಟ್ಟೆವು. ಈಗಲಾದರೂ ಅವಳು ನನ್ನೊಂದಿಗೆ ಮಾತಾಡ್ತಾಳೆ ಅಂತಾ ನಾನು ಅಂದುಕೊಂಡೆ. ಆದರೆ ಅವಳಿಗೆ ನನ್ನ ಮೇಲೆ ಜಲಸಿ ಮತ್ತಷ್ಟು ಹೆಚ್ಚಾಯಿತು. ಆಕೆಗೆ ನಾನೆಲ್ಲಿ ಅವಳ ಫಸ್ಟ Rank ಕಿತ್ಕೊಂಡ ಬಿಡ್ತಿನಿ ಅನ್ನೋ ಭಯವಿತ್ತು ಅನಿಸುತ್ತೆ. ಅದಕ್ಕೆ ಅವಳು ಆ ರೀತಿ ನನ್ನೊಂದಿಗೆ ದೂರದ ದುಶ್ಮನಿ ಮಾಡುತ್ತಿದ್ದಳೋ ಏನೋ ಗೊತ್ತಿಲ್ಲ. ನಾನು ಕಥೆ, ಕವನ, ಕಬ್ಬಡ್ಡಿ, ಚೆಸ್, ಕ್ರಿಕೆಟ್ ಅಂತಾ ಕಲ್ಚರಲ್ ಆ್ಯಕ್ಟಿವಿಟಿಗಳಲ್ಲಿ ಬಿಜಿಯಾಗಿರತ್ತಿದ್ದೆ. ನನಗೆ ಸಿಗುತ್ತಿದ್ದ ಗೌರವ ಹಾಗೂ ಫ್ಯಾನ ಫಾಲೋಯಿಂಗ ನೋಡಿ ಅವಳು ಕಲ್ಚರಲ ಆ್ಯಕ್ಟಿವಿಟಿಗಳಲ್ಲಿ ಪಾರ್ಟಿಸಿಪೆಟ ಮಾಡಲು ಪ್ರಾರಂಭಿಸಿದಳು. ಕ್ವೀಜ ಹಾಗೂ ಚೆಸಲ್ಲಿ ನನ್ನ ಜೊತೆಗೆ ಕಾಂಪಿಟೇಷನ್ ಮಾಡಿ ಸೋತಳು‌. ಅವಳು ಗೆಲ್ಲಲಿ ಅಂತಾ ನಾನು ಬಹಳಷ್ಟು ಕೆಟ್ಟದಾಗಿ ಪರಫಾರ್ಮ ಮಾಡಿದ್ದೆ. ಆದರೂ ಸಹ ಸೋತಳು. ಕ್ವೀಜ ಕಾಂಪಿಟೇಷನಲ್ಲಂತು ಅವಳ ಈಗೋಗೆ ಬಹಳಷ್ಟು ಹರ್ಟಾಯಿತು. 

ಪಾರ್ಟಟೈಮ ಗೆಳತಿ - ಕನ್ನಡ ಫ್ರೆಂಡಶೀಪ ಸ್ಟೋರಿ - Kannada Stories

                       ಅವಳು ಸ್ಕೂಲಲ್ಲಿ ದಿನಾ ನನ್ನೆಡೆಗೆ ಕ್ರಾಸಲುಕ ಕೊಡುವಾಗ ನನಗೆ ಬೇಜಾರಾಗುತ್ತಿತ್ತು. ಅವಳು ನನ್ನೊಂದಿಗೆ ನೇರವಾಗಿ ಮಾತನಾಡುತ್ತಿರಲಿಲ್ಲ. ಆದರೆ ಇನಡೈರೆಕ್ಟಾಗಿ ಕಾಲೆಳೆಯುತ್ತಿದ್ದಳು. ಅವಳ ಗೆಳತಿಯರ ಮುಂದೆ ನನ್ನ ಬೈಯ್ಯುತ್ತಿದ್ದಳು. ನಾನು ಯಾವುದಕ್ಕೂ ಕೇರ ಮಾಡದೆ ನನ್ನ ಓದಿನಲ್ಲಿ ಬಿಜಿಯಾದೆ. ಏಕೆಂದರೆ ನಾನು 9th ಕ್ಲಾಸಲ್ಲಿದ್ದಾಗ ನಮ್ಮ ಇಂಗ್ಲೀಷ್‌ ಟೀಚರ ತುಂಬಿದ ಕ್ಲಾಸಲ್ಲಿ ನನಗೆ "ಎದೆ ಸೀಳಿದರೆ ಎರಡಕ್ಷರ ಹೊರಬರಲ್ಲ, ಕಥೆ ಕವನಗಳಿಂದ ಹೊಟ್ಟೆ ತುಂಬಲ್ಲ, ಮೊದಲು ಸರಿಯಾಗಿ ಕ್ಲಾಸಿಗೆ ಅಟೆಂಡಾಗು..." ಅಂತೆಲ್ಲ ಬೈದು ನನ್ನ ಮಾನ ಮರ್ಯಾದೆಯನ್ನು ಮೂರಕಾಸಿಗೆ ಹರಾಜಾಕಿದ್ದರು. ಆಗ ಅವಳ ಮುಖದ ಮೇಲಿನ ಖುಷಿಯನ್ನು ನೋಡಿ ನನಗೆ ಮತ್ತೆಮತ್ತೆ ನಮ ಇಂಗ್ಲೀಷ್ ಟೀಚರ ಕಡೆಯಿಂದ ಬೈಯ್ಯಿಸಿಕೊಳ್ಳಬೇಕು ಅಂತಾ ಅನಿಸ್ತಾಯಿತ್ತು. ಅಷ್ಟೊಂದು ಖುಷಿಯಾಗಿದ್ದಳು ಅವಳು ಆ ದಿನ. ಆದರೆ ನನ್ನ ಈಗೋಗೆ ಅವತ್ತು ಬಹಳಷ್ಟು ಹರ್ಟಾಗಿತ್ತು. ಆಗಲೇ ನಾನು "10th ಎಕ್ಸಾಮಲ್ಲಿ ನಾನೇ ಟಾಪ ಮಾಡೋದು..." ಅಂತಾ ಫಿಕ್ಸಾಗಿದ್ದೆ. ಅದಕ್ಕೆ ಅವತ್ತಿನಿಂದಲೇ ನಾನು ಚೆನ್ನಾಗಿ ಸ್ಟಡಿ ಮಾಡಲು ಪ್ರಾರಂಭಿಸಿದ್ದೆ. ಈಗ 10thಗೆ ಬಂದಾಗ ಬಹಳಷ್ಟು ಸೀರಿಯಸ್ಸಾಗಿ ಸ್ಟಡಿ ಮಾಡ್ತಿದ್ದೆ. ಆದರೆ ಅವಳಿಗೆ ಇದು ಗೊತ್ತಿರಲಿಲ್ಲ. ಅವಳು ನಾನು ಕಲ್ಚರಲ್ ಆ್ಯಕ್ಟಿವಿಟಿಯಲ್ಲಿ ಮಾತ್ರ ಬಿಜಿಯಿದಿನಿ ಅಂತಾ ನನ್ನ ಇಗ್ನೋರ ಮಾಡಿದಳು. ಆದರೆ ನಾನು ಅದರ ಜೊತೆಗೆ ಸ್ಟಡಿಯಲ್ಲಿ ಕೂಡ ಬಹಳಷ್ಟು ಬಿಜಿಯಾಗಿದ್ದೆ.

                               ಅವಳು ನಮ್ಮ ಕ್ಲಾಸಲ್ಲಿನ ಫಸ್ಟಬೆಂಚ್ ಗೂಬೆಗಳ ಜೊತೆಗೆ ಮಾತಾಡುತ್ತಿದ್ದಳು. ನೋಟ್ಸ ಶೇರ್ ಮಾಡುತ್ತಿದ್ದಳು. ನಾನು ಲಾಸ್ಟ ಬೆಂಚರ ಅಂಥ ನನಗೆ ಯಾರು ಅಷ್ಟೊಂದು ಇಂಪಾರಟನ್ಸ ಕೊಡುತ್ತಿರಲಿಲ್ಲ. ಕ್ಲಾಸ ಆಚೆ ನನಗೆ ಬೆಲೆಯಿದ್ದರೂ ಕ್ಲಾಸಲ್ಲಿ ನನಗೆ ಕವಡೆ ಕಾಸಿನ ಬೆಲೆ ಇರಲಿಲ್ಲ‌. ಆದರೂ ಅವಳು ನನ್ನ ದುಶ್ಮನ ತರ ನೋಡುತ್ತಿದ್ದಳು. ನಾನು ಸ್ಟಡಿ ಮಾಡ್ತಿದೀನಿ ಅನ್ನೋದು ನನಗಷ್ಟೇ ಗೊತ್ತಿತ್ತು. ಹೀಗೆ ಮೌನಯುದ್ಧದಲ್ಲಿ ನಮ್ಮ 10th ಬೋರ್ಡ ಎಕ್ಸಾಮ ಬಂತು. ನಾನು ಚೆನ್ನಾಗಿ ಪ್ರೀಪೇರಾಗಿದ್ದೆ. ಸೋ ಯಾವುದೇ ಟೆನ್ಶನ ಇಲ್ಲದೆ ಎಕ್ಸಾಮ ಬರೆದೆ. ಕೊನೆಯ ಎಕ್ಸಾಮ ದಿನ ನಾನವಳನ್ನು ಕೊನೆಯ ಸರತಿ ನೋಡಿದ್ದು‌. ಆದಾದ ಮೇಲೆ ನಾನವಳನ್ನು ಇಲ್ಲಿ ತನಕ ನೇರವಾಗಿ ನೋಡೇ ಇಲ್ಲ. ನಮ್ಮ ರಿಜಲ್ಟ ಬಂತು. ಎಲ್ಲರೂ ಅವಳು ಟಾಪ ಮಾಡಿರತಾಳೆ ಅಂತಾ ಅನ್ಕೊಂಡಿದ್ದರು. ನಮ್ಮ ಟೀಚರ್ಸರೆಲ್ಲ ಅವಳಿಗೆ ಸನ್ಮಾನ ಮಾಡೋಕೆ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ನಾನು ಟಾಪ ಮಾಡಿದ್ದೆ. ನಾನು 95.68% ಮಾಡಿ ಸೆಂಟರಗೆ ಫಸ್ಟ ಬಂದಿದ್ದೆ. ಅವಳು 89% ಮಾಡಿ ಸೆಕೆಂಡ್ ಬಂದಿದ್ದಳು. ಯಾರಿಗೂ ಈ ರಿಜಲ್ಟನ್ನು ನಂಬಲಾಗಲಿಲ್ಲ. ಏಕೆಂದರೆ ಯಾರಿಗೂ ನನ್ನ ಮೇಲೆ ಯಾವುದೇ ತರಹದ ನಂಬಿಕೆ ಇರಲಿಲ್ಲ. ನಾನು ಕ್ಲಾಸಲ್ಲಿ ಬೈಯ್ಯಿಸಿಕೊಂಡಾಗ ಅವಳು ಎಷ್ಟು ಖುಷಿಪಟ್ಟಿದ್ದಳೋ ಅದಕ್ಕಿಂತಲೂ ಹೆಚ್ಚಿನ ದು:ಖವನ್ನು ಅವಳು ರಿಜಲ್ಟ ಬಂದ ದಿನ ಅನುಭವಿಸಿದಳು. ಅವತ್ತವಳು ಕಣ್ಣೀರಾಕಿದಳು. ನನಗೆ ಇದರಿಂದ ಸ್ವಲ್ಪ ಬೇಜಾರಾಯಿತು. ಏಕೆಂದರೆ ನನ್ನ ಗೆಲುವನ್ನು ಸಂಭ್ರಮಿಸಲು ನನ್ನೊಂದಿಗೆ ನನ್ನ ಬೆಸ್ಟ ಫ್ರೆಂಡ ಒಬ್ಬಳನ್ನು ಬಿಟ್ಟು ಬೇರೆ ಯಾರು ಇರಲಿಲ್ಲ. ಎಲ್ಲರೂ ಅವಳನ್ನು ಸಮಾಧಾನ ಮಾಡುವಲ್ಲಿ ಬಿಜಿಯಾಗಿದ್ದರು. ನಾನು ಎಲ್ಲವನ್ನೂ ತಲೆಯಿಂದ ಡಿಲಿಟ ಮಾಡಿ ಧಾರವಾಡಕ್ಕೆ ಫಸ್ಟ ಪಿಯುಸಿ ಸಾಯನ್ಸಗೆ ಜಾಯಿನಾದೆ‌. ಓದಿನಲ್ಲಿ ಮತ್ತೆ ಕಥೆ, ಕವನ, ಕಬ್ಬಡ್ಡಿ, ಚೆಸಗಳಲ್ಲಿ ಕಳೆದೊದೆ.

                              ಪಿಯುಸಿ ಆಯ್ತು, ನಂತರ ಬಿಎಸ್ಸಿ ಡಿಗ್ರಿ ಕೂಡ ಆಯ್ತು. ನನಗೆ ಅವಳ ನೆನಪು ಕೂಡ ಬಂದಿರಲಿಲ್ಲ. ಏಕೆಂದರೆ ನಾನು ನನ್ನ ಓದು, ಓದಿನ ಫೀಸ್ ಹೊಂದಿಸಲು ಎರಡೆರಡು ಪಾರ್ಟಟೈಮ ಕೆಲಸ ಅಂತೆಲ್ಲ ಬಿಜಿಯಾಗಿದ್ದೆ. ಗರ್ಲಫ್ರೆಂಡ ದೂರದ ಮಾತು ಬಾಯಫ್ರೆಂಡಗಳು ಸಹ ಯಾರಿರಲಿಲ್ಲ. ಡಿಗ್ರಿಗೆ ಬಂದಾಗ ತಲೆಯಲ್ಲಿ ಓಡುತ್ತಿದ್ದ ನೂರಾರು ಬಿಜನೆಸ ಐಡಿಯಾಗಳಿಂದ ನಾನು ನಿದ್ದೆಗೆಟ್ಟು ನರಳುತ್ತಿದ್ದೆ. ಹೇಗೋ ಸಕ್ಸೆಸಫುಲ್ಲಾಗಿ ಡಿಗ್ರಿ ಕಂಪ್ಲಿಟಾಯ್ತು. ನಂತರ ನಾನು ಫೋಟೋಗ್ರಾಫಿ, ಫಿಲ್ಮ ಮೇಕಿಂಗ್ ಹಾಗೂ ಬಿಜನೆಸ್ ಸ್ಟಡಿಗಳಲ್ಲಿ ಶಾರ್ಟ್ ಕೋರ್ಸ್ ಮಾಡಿ ನಾನು ನನ್ನ ಬಿಜನೆಸ್ ಸ್ಟಾರ್ಟ ಮಾಡಿದೆ. ಆರಂಭದಲ್ಲಿ ಮಾಡಿಕೊಂಡ ಎಂದೆರಡು ಸಣ್ಣ ಯಡವಟ್ಟುಗಳಿಂದ ಹಣದ ಕೊರತೆ ಎದುರಾಯಿತು. ಹಾಗಂತ ನನ್ನ ಸ್ಟಾರ್ಟಪನ್ನು ಅರ್ಧಕ್ಕೆ ನಿಲ್ಲಿಸುವ ಹೇಡಿತನ ನನಗೆ ಬರಲಿಲ್ಲ. ನಾನು ಕಾಲೇಜಿನಲ್ಲಿದ್ದಾಗ ಪಾರ್ಟಟೈಮ ಕಾರ ಡ್ರೈವರ ಕೆಲಸ ಮಾಡುತ್ತಿದ್ದೆ. ಈಗ ಅದೇ ಕೆಲಸವನ್ನು ಫುಲಟೈಮಾಗಿ ಮಾಡಬೇಕಾಯಿತು‌. ನಾನು ಅದನ್ನು ಖುಷಿಯಿಂದ ಮಾಡ್ತಾಯಿದ್ದೆ‌‌. ಏಕೆಂದರೆ ನಮ್ಮದು ಟ್ಯೂರಿಸಂಗೆ ಸಂಬಂಧಿಸಿದ ಸ್ಟಾರ್ಟಪ ಆಗಿರುವುದರಿಂದ ನನ್ನ ಕೆಲಸವೇ ನನ್ನ ಬಿಜನೆಸಗೆ ಬ್ಯಾಕಬೋನ ತರ ಸಪೋರ್ಟ್ ಮಾಡುತ್ತಿತ್ತು.

ಪಾರ್ಟಟೈಮ ಗೆಳತಿ - ಕನ್ನಡ ಫ್ರೆಂಡಶೀಪ ಸ್ಟೋರಿ - Kannada Stories

                    ನಾನು ನನ್ನ ಆಫೀಸಿಯಲ್ ವೆಬಸೈಟ www.Skkannada.com ಮೂಲಕ ಬರೆಯುತ್ತಿದ್ದೆ. ಲಕ್ಷಾಂತರ ಓದುಗ ಬಳಗ ಸೃಷ್ಟಿಯಾಯಿತು. ಒಂದಿನ ನನ್ನ ಹೈಸ್ಕೂಲ್ ಹುಡುಗಿ 5 ವರ್ಷದ ನಂತರ ಫೇಸ್ಬುಕಲ್ಲಿ ನನಗೆ ಕಾಣಿಸಿದಳು. ನಾನು ಎರಡು ವರ್ಷದ ನಂತರ ನನ್ನ ಪರ್ಸನಲ್ ಫೇಸ್ಬುಕ್ ಅಕೌಂಟನ್ನು ಒಪನ ಮಾಡಿದಾಗ ನನ್ನ ಕಣ್ಣಿಗೆ ಅವಳ ಪ್ರೋಫೈಲ್ ಕಾಣಿಸಿತು. ನನಗೆ ಮತ್ತೆ ಮೊದಲ ಸಲ ಅವಳ ನೆನಪಾಯಿತು. ನಾನು ತಕ್ಷಣವೇ ಅವಳಿಗೆ ಫ್ರೆಂಡ ರಿಕ್ವೇಸ್ಟ ಕಳುಹಿಸಿದೆ. ಆದರೆ ಅವಳು ಆ್ಯಕ್ಸೆಪ್ಟ ಮಾಡದಿದ್ದರೆ ಬೇಜಾರಾಗುತ್ತೆ ಅಂತ ರಿಕ್ವೇಸ್ಟ ವಾಪಸ ತಗೊಂಡೆ. ಆದರವಳು ಅವಳಾಗೇ ಮತ್ತೆ ಫ್ರೆಂಡ ರಿಕ್ವೇಸ್ಟ ಕಳುಹಿಸಿದಳು. ನನ್ನ ಖುಷಿಗೆ ಪಾರವೇ ಇರಲಿಲ್ಲ. ನಾನವಳ ಫ್ರೆಂಡ ರಿಕ್ವೇಸ್ಟ ಆ್ಯಕ್ಸೆಪ್ಟ ಮಾಡಿದೆ. ಆ ಕ್ಷಣವೇ ಅವಳು ನನಗೆ ಹಾಯ್ ಅಂತ ಮೆಸೆಜ ಕಳುಹಿಸಿದಳು‌. ನಾನು ಹಾಯ ಅಂತಾ ರಿಪ್ಲೆ ಮಾಡಿದಾಗ ಚಾಟ ಶುರುವಾಯಿತು. ಎರಡ್ಮೂರು ದಿನ ಹಗಲು ರಾತ್ರಿ ಚಾಟ ಮಾಡಿದಾಗ ನನಗವಳು ಈಗ ಮೆಡಿಕಲ್ ಸ್ಟಡಿ ಮಾಡ್ತಿದಾಳೆ, ಮುಂದೆ ಒಂದ ವರ್ಷದಲ್ಲಿ ಡಾಕ್ಟರಾಗುತ್ತಾಳೆ ಅಂತಾ ಗೊತ್ತಾಯಿತು. ಕೊನೆಗೂ ನನ್ನನ್ನು ದುಶ್ಮನ ತರ ಟ್ರೀಟ ಮಾಡುತ್ತಿದ್ದ ಹುಡುಗಿ ಫ್ರೆಂಡ ಆದಳಲ್ಲ ಅಂತ ನಾನು ಬಹಳಷ್ಟು ಖುಷಿಯಾಗಿದ್ದೆ.

                                  ಒಂದು ವಾರದ ತನಕ ನಮ್ಮಿಬ್ಬರ ಚಾಟ ನಡಿತಾ ಇತ್ತು. ಚಾಟಲ್ಲಿ ಬರೀ ಅವಳು ತನ್ನ ಬಗ್ಗೆಯೇ ಮಾತಾಡುತ್ತಿದ್ದಳು. ಕಾಲೇಜಲ್ಲಿ ಅವಳ ಹವಾ ಸಖತ್ತಾಗಿದೆ ಅಂತೆಲ್ಲ ಹೇಳುತ್ತಿದ್ದಳು. ನನ್ನ ಬಗ್ಗೆ ಇಲ್ಲಿ ತನಕ ಏನು ಕೇಳಿರಲಿಲ್ಲ. ಒಂದಿನ ನನಗೆ "ಈಗ ಯಾವ ಕೋರ್ಸ ಮಾಡ್ತಿದಿಯಾ? MSc ಹೇಗ ನಡಿತಿದೆ?" ಅಂತಾ ಕೇಳಿದಳು. ನಾನದಕ್ಕೆ "ನಾನು ಸ್ಟಡಿ ಕಂಟಿನ್ಯು ಮಾಡಿಲ್ಲ. ಸ್ಟಾರ್ಟಪ ಸ್ಟಾರ್ಟ ಮಾಡಿರುವೆ, ಹಣದ ಕೊರತೆಯಿಂದಾಗಿ ಟೂರಿಸ್ಟ ಟ್ರಾವೆಲ್ಸ ಕಾರಗಳಿಗೆ ಡ್ರೈವರ ಕೆಲಸ ಮಾಡ್ತಿರುವೆ..." ಅಂತಾ ಇರೋ ವಿಷಯವನ್ನು ಹೇಳಿದೆ. ಆದರೆ ಆಕೆ ನನಗೆ "What? ನೀನು ಸ್ಟಡಿ ಕಂಟಿನ್ಯುವ ಮಾಡಿಲ್ವಾ? Oh Shit, ನೀನು ಏನೋ ಆಗ್ತಿಯಾ ಅಂತಾ ನಾನು ಅನ್ಕೊಂಡಿದ್ದೆ. ಆದರೆ ನೀನು ಡ್ರೈವರ ಆಗಿದಿಯಲ್ಲ. I can't continue relationship with you. Sorry bye..." ಅಂತೇಳಿ ತಕ್ಷಣವೇ ನನ್ನ ಬ್ಲಾಕ್ ಮಾಡಿದಳು‌. ಅವಳು ನನ್ನ ದುಡ್ಡಿನಿಂದ, ಸ್ಟೇಟಸನಿಂದ ಅಳೆದು ದೂರಾದಳು. ಅವಳು ಡಾಕ್ಟರ ಆಗೋಳು, ನಾನು ಡ್ರೈವರ ಅಂದ್ರೆ ಅವಳಿಗೆ ನಂಜೊತೆಗೆ ಫ್ರೆಂಡಶೀಪ ಮಾಡೋಕೆ ಮುಜುಗುರ ಆಗಿರಬಹುದು ಅಂತಂದುಕೊಂಡು ನಾನು ಸುಮ್ಮನಾದೆ‌. ಆದರೆ ಅವಳು ನನ್ನ ಬಗ್ಗೆ ಊರಲ್ಲಿ ಎಲ್ಲರಿಗೂ ಕೇವಲವಾಗಿ ಹೇಳಿಕೊಂಡು ತಿರುಗಾಡ್ತಿದಾಳೆ ಅನ್ನೋ ಸುದ್ದಿಗಳು ಬಂದವು. ಆದ್ರೆ ನಾನು ಗಾಳಿ ಸುದ್ದಿಗಳಿಗೆ ಅಷ್ಟೊಂದು ಬೆಲೆ ಕೊಡಲ್ಲ. ಸೋ ಇಗ್ನೋರ ಮಾಡಿ ಸುಮ್ಮನಾದೆ.

                     ನಾನು ಸ್ಕೂಲಲ್ಲಿರುವಾಗ ಅವಳೊಂದಿಗೆ ಫ್ರೆಂಡಶೀಪ ಮಾಡಬೇಕು ಅಂತಷ್ಟೇ ಬಯಸಿದ್ದೆ. ಬೇರೆ ಯಾವ ಫೀಲಿಂಗ್ಸೂ ಇರಲಿಲ್ಲ. ಅವಳೇನು ನನ್ನ ಕ್ರಷಲ್ಲ, ಒನವೇ ಪ್ರೇಯಸಿಯೂ ಅಲ್ಲ. She is nothing to me. ಆದರೂ ಅವಳು ನಾನು ಡ್ರೈವರಂತ ಗೊತ್ತಾದಾಗ ನನ್ನ ಫ್ರೆಂಡಶೀಪ ಕಟ ಮಾಡಿದಳಲ್ಲ ಅಂತಾ ಸಿಕ್ಕಾಪಟ್ಟೆ ಬೇಜಾರಾಯಿತು. ನಂತರ ಒಂದು ವಾರದಲ್ಲೇ ನನಗೆ ಬ್ಯಾಂಕ್ ಲೋನ ಸಿಕ್ಕಿತು. ನಾನು ಮತ್ತೆ ನನ್ನ ಸ್ಟಾರ್ಟಪ ಕಂಟಿನ್ಯುವ ಮಾಡಿದೆ. ಅದು ಒಂದು ವರ್ಷದೊಳಗೆ ಪ್ರೋಫಿಟಿಗೆ ಬಂತು. ನಾನು ಕನಸಲ್ಲೂ ಊಹಿಸಿರದಷ್ಟು ಹಣ ಹರಿದು ನಮ್ಮ ಕಂಪನಿ ಬ್ಯಾಂಕ್ ಅಕೌಂಟಿಗೆ ಬಂತು. ನಾನು ಲೈಫಲ್ಲಿ ಸೆಟ್ಲಾಗಿರುವೆ. ನನಗೆ ಈಗ ಹಣದ ಕೊರತೆಯಿಲ್ಲ. ಆದರೆ ನನ್ನ ಕನಸುಗಳಿಗೆ ಸದ್ಯಕ್ಕೆ ನನ್ನ ಬಳಿಯಿರುವ ಕೋಟಿ ಹಣ ಸಾಕಾಗಲ್ಲ‌. ಏಕೆಂದರೆ ಆರ್ಡಿನರಿಯಾಗಿ ಬದುಕಿ ಹೆಸರಿಲ್ಲದೆ ಸಾಯೋ ಜಾಯಮಾನ ನನ್ನದಲ್ಲ.‌ ನನ್ನ ಕನಸಿನ ಪ್ರೊಜೆಕ್ಟಗೆ 100 CR ಬೇಕು. ನಾನು ನನ್ನ ಬಳಿಯಿರುವ ಎಲ್ಲ ಅಸೆಟ್ಸಗಳ ಜೊತೆಗೆ ನನ್ನನ್ನು ಮಾರಿಕೊಂಡಾಗ ಅದರ 1% ಹಣ ಅರೇಂಜ್ ಆಗುತ್ತೆ ಅಷ್ಟೇ. ಇನ್ನು 99% ಹಣಕ್ಕಾಗಿ ನಾನು ಹಗಲು ರಾತ್ರಿ ಕೆಲಸ ಮಾಡಲೇಬೇಕು. 

ಪಾರ್ಟಟೈಮ ಗೆಳತಿ - ಕನ್ನಡ ಫ್ರೆಂಡಶೀಪ ಸ್ಟೋರಿ - Kannada Stories

                        ಅವಳು ನನ್ನನ್ನು ಸ್ಟೇಟಸನಿಂದ ಅಳೆದ ದಿನವೇ ನನಗೆ ಹುಡುಗಿಯರ ಫ್ರೆಂಡಶೀಪ ಹಾಗೂ ಪ್ರೀತಿಯ ಮೇಲಿನ ನಂಬಿಕೆ ಹೊರಟು ಹೋಗಿದೆ‌. ಈದಾದ ನಂತರವೂ ಒಂದಿಬ್ಬರು ಹುಡುಗಿಯರು ಬಂದು ಫ್ರೆಂಡಶೀಪ ಮಾಡೋ ಪ್ರಯತ್ನ ಮಾಡಿದರು. ಆದರೆ ನಾನು ನನ್ನ ಸ್ಟಾರ್ಟಪಗಳಲ್ಲಿ ಬಿಜಿಯಾಗಿದ್ದೆ. ನಾನು ನಮ್ಮ ಮ್ಯಾನೇಜರ್ ಕಾಲ್ ಬಿಟ್ಟರೆ ಬೇರೆ ಯಾವುದಕ್ಕೂ ರೆಸ್ಪೋನ್ಡ ಮಾಡುತ್ತಿರಲಿಲ್ಲ. ಆ ಹುಡುಗಿಯರಿಗೆ ಟೈಮ ಕೊಡಲಾಗಲಿಲ್ಲ ನನಗೆ‌. ಅವರೊಂದಿಗೆ ನೇರವಾಗಿ ಒಂದಿನ ಮಾತನಾಡಲು ಸಹ ನನಗೆ ಆಗಲಿಲ್ಲ. ಅವರು ಬಯಸುವಂತೆ ಅವರೊಂದಿಗೆ ಸಿನಿಮಾ, ಪಾರ್ಕು, ಕ್ಲಬ್ ಸುತ್ತುವಷ್ಟು ಸಮಯವೂ ನನಗಾಗ ಇರಲಿಲ್ಲ. ಏಕೆಂದರೆ ಸಾರ್ಟಪ ಅಂದರೆ ಸುಮ್ಮನೆ ಅಲ್ಲ. ಆಫೀಸ್ ಕಸ ಗೂಡಿಸುವುದರಿಂದ ಹಿಡಿದು ಕಂಪನಿ ಲೀಡಿಂಗ ತನಕ ಎಲ್ಲವನ್ನೂ ನಾವೇ ಮಾಡಬೇಕಾಗುತ್ತದೆ. ಎಲ್ಲರೂ ವೀಕೆಂಡ್ ಪಾರ್ಟಿ ಮಾಡುತ್ತಿರುವಾಗ ನಾವು ಮುಂದಿನ ಆರು ತಿಂಗಳ ಸೇಲ್ಸ ಪ್ಲ್ಯಾನ ಮಾಡಬೇಕಾಗುತ್ತದೆ. ಬಂದ ಪ್ರೋಫೀಟನಲ್ಲಿ ಟೀಮ ಮೆಂಬರಗಳಿಗೆ ಸ್ಯಾಲರಿ ಕೊಟ್ಟು ಖಾಲಿ ಕೈಯಲ್ಲಿ ತಿರುಗಬೇಕಾಗುತ್ತದೆ. Entrepreneurship ಅಂದ್ರೆ ಹಿಂಗೆನೆ. ಸಕ್ಸೆಸಫುಲ್ ಆದಾಗ ಸಾವಿರ ಸುಂದರಿಯರು ಕ್ಯೂನಲ್ಲಿ ಕಾಯ್ತಾರೆ. ಆದರೆ ಸ್ಟ್ರಗಲ ಮಾಡುವಾಗ ಯಾವಳು ಮಾತನಾಡಿಸಲ್ಲ. ಅದಕ್ಕೆ ಅವರು ನನ್ನೊಂದಿಗೆ ಫ್ರೆಂಡಶೀಪ ಕೂಡ ಮಾಡಲಿಲ್ಲ. ನಾನು ಎಲ್ಲ ಹುಡುಗರ ತರಹ ಕೆಲಸ ಕಾರ್ಯ ಎಲ್ಲ ಬಿಟ್ಟು ಅವರ ಹಿಂದೆ ಅಲೆಯಲ್ಲ ಎಂಬುದು ಅವರಿಗೆ ಒಂದು ವಾರದಲ್ಲೇ ಗೊತ್ತಾಯಿತು. ಅದಕ್ಕೆ ಅವರು ಸೈಲೆಂಟಾಗಿ ಕಣ್ಮರೆಯಾದರು. 

                     ಲಾಕಡೌನನಲ್ಲಿ ನಾನು ಆರು ತಿಂಗಳು ಮಹಾಬಲೇಶ್ವರದಲ್ಲಿ ತುಂತುರು ಮಳೆ, ಹಸಿರು ಕಾಡು ಹಾಗೂ ನಿಸರ್ಗದ ಜೊತೆಗೆ ಕಾಲ ಕಳೆಯುತ್ತಾ ಹಾಯಾಗಿದ್ದೆ. ಆಗ ನನ್ನ ಬೆಸ್ಟ ಫ್ರೆಂಡ ನನಗೆ "ಎಲ್ಲ ಇದ್ರೂ ಯಾಕ ಸಿಂಗಲಾಗಿದಿಯಾ? ಬರೀ 24ನೇ ವಯಸ್ಸಿಗೇನೆ ವೈರಾಗ್ಯ ಯಾಕ ಬಂತು ನಿನಗೆ?" ಅಂತಾ ಕೇಳಿ ಕೇಳಿ ತಲೆ ತಿಂದಳು. ಆಗ ಅವಳಿಗೆ ಇರೋ ಕಾರಣ ಹೇಳುವಾಗ ನನ್ನ ಪಾರ್ಟಟೈಮ ಫೇಸ್ಬುಕ್ ಗೆಳತಿ ಮತ್ತೆ ನೆನಪಾದಳು. ಅದಕ್ಕೆ ಈ ನೈಜ ಕಥೆಯನ್ನು ಬರೆಯಲೇಬೇಕಾಯಿತು‌. ನನಗೇನು ಹುಡುಗಿಯರ ಮೇಲೆ ಕೆಟ್ಟ ಅಭಿಪ್ರಾಯವಿಲ್ಲ. ಏಕೆಂದರೆ ಎಲ್ಲ ಹುಡುಗಿಯರು ಹಣ ನೋಡಲ್ಲ ಅಂತ ಗೊತ್ತು. ಆದರೆ ಈಗ ಸ್ನೇಹ, ಪ್ರೀತಿ ಹಾಗೂ ಮದುವೆ ಎಲ್ಲವೂ ಕಮರ್ಷಿಯಲ್ ಆಗಿವೆ‌. ಒಂಥರಾ ಬಿಜನೆಸ ಆಗಿವೆ‌. ಸ್ನೇಹ, ಪ್ರೀತಿ ಹಾಗೂ ಮದುವೆಯಾಗೋಕ್ಕಿಂತ ಮುಂಚೆ ಈಗ ಎಲ್ಲರೂ ಹಣ, ಆಸ್ತಿ, ಅಂತಸ್ತು, ಜಾಬ್, ಬ್ಯಾಂಕ್ ಬ್ಯಾಲನ್ಸ ನೋಡಿ ಅಳೆದು ತೂಗಿ ಸಂಬಂಧ ಬೆಳೆಸ್ತಾರೆ. ನಾನು ಬಿಜನೆಸ್ಸಲ್ಲಿ ಲಾಭ ಇರದಿದ್ದರೂ ಕೆಲವೊಂದಿಷ್ಟು ಸಲ ಖುಷಿಗಾಗಿ ಕೆಲಸ ಮಾಡ್ತಿನಿ‌. ಆದ್ರೆ ಇವರು ಲಾಭ ಇರದಿದ್ದರೆ ಏನನ್ನು ಮಾಡಲ್ಲ. ಪ್ರೀತಿ, ಮದುವೆ ದೂರದ ಮಾತು. ಅಟ್ ಲೀಸ್ಟ ಫ್ರೆಂಡಶೀಪ ಸಹ ಮಾಡಲ್ಲ. ಸರಿಯಾಗಿ ಮಾತೂ ಆಡಲ್ಲ. ಯಾವುದೇ ಸ್ವಾರ್ಥವಿರದ ಸ್ನೇಹ, ಪ್ರೀತಿ, ಬಾಳ ಸಂಗಾತಿ ಈಗಿನ ಕಾಲದಲ್ಲಿ ಸಿಗ್ತಾಳೆ ಅನ್ನೋ ನಂಬಿಕೆ ನನಗಿಲ್ಲ‌. ಅಲ್ಲದೇ ಅವಳನ್ನು ಹುಡುಕಾಡೋವಷ್ಟು ಟೈಮೂ ನನಗಿಲ್ಲ‌. ನನ್ನ ಪಾರ್ಟಟೈಮ ಗೆಳತಿ ನನಗೆ ಪೂರ್ತಿ ಜೀವನಕ್ಕಾಗೋವಷ್ಟು ಪಾಠವನ್ನು ಕಲಿಸಿದ್ದಾಳೆ. ಅವಳೀಗ ಎಲ್ಲಿದ್ದಾಳೆ? ಬದುಕಿದ್ದಾಳಾ ಅಥವಾ ಇಲ್ವಾ ಎಂಬುದು ಯಾವುದು ಗೊತ್ತಿಲ್ಲ. ಆದರೆ ಅವಳು ಕೊಟ್ಟ ಒಂದು ಕಹಿ ನೆನಪು ಆವಾಗಾವಾಗ ಕಾಡುತ್ತೆ. ಅದಕ್ಕೆ ನಾನು ನನ್ನನ್ನು, ನನ್ನ ಕಂಪನಿಯನ್ನು, ನನ್ನ ಸ್ಟಾರ್ಟಪಗಳನ್ನು, ನಮ್ಮ ದೇಶವನ್ನು ಪ್ರೀತಿಸುತ್ತಿರುವೆ. ಈ ಪ್ರೀತಿಯಲ್ಲಿ ಬಹಳಷ್ಟು ಖುಷಿಯಾಗಿರುವೆ‌. ಈ ಖುಷಿಯನ್ನು ಕಿತ್ತುಕೊಳ್ಳಲು ಯಾವುದೇ ಪಾರ್ಟಟೈಮ ಪ್ರೇಯಸಿ ಬರದಿರಲಿ ಎಂಬ ಪ್ರಾರ್ಥನೆಯಿದೆ, ಯಾವುದೇ ಸ್ವಾರ್ಥವಿಲ್ಲದೆ ಪ್ರೀತಿಸಿ, ಕನಸ್ಸಲ್ಲೂ ಮೋಸ ಮಾಡದೇ ಜೀವನಪೂರ್ತಿ ಜೊತೆಗಿರ್ತಿನಿ ಅನ್ನೋ ಗುಣವಂತೆ ಬಂದರೆ ಸ್ವಾಗತವಿದೆ....  

ಪಾರ್ಟಟೈಮ ಗೆಳತಿ - ಕನ್ನಡ ಫ್ರೆಂಡಶೀಪ ಸ್ಟೋರಿ - Kannada Stories

Blogger ನಿಂದ ಸಾಮರ್ಥ್ಯಹೊಂದಿದೆ.