ಮೂರು ರಾಣಿಯರ ಪ್ರೇಮಕಥೆ - Kannada Moral Love Story - Story of three queens in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮೂರು ರಾಣಿಯರ ಪ್ರೇಮಕಥೆ - Kannada Moral Love Story - Story of three queens in Kannada

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                                         ಗರುಡ ಸಾಮ್ರಾಜ್ಯದ ರಾಜನಿಗೆ ಮೂವರು ರಾಣಿಯರಿದ್ದರು. ಮೊದಲನೇ ರಾಣಿ ಬಹಳಷ್ಟು ಸುಂದರವಾಗಿದ್ದಳು. ಅವಳಷ್ಟು ಸುಂದರಿ ಸುತ್ತಮುತ್ತಲಿನ ಯಾವ ರಾಜ್ಯದಲ್ಲಿಯೂ ಇರಲಿಲ್ಲ. ರಾಜ ಒಂದಿನ ಬೇರೆ ದೇಶದ ಮೇಲೆ‌ ದಂಡೆತ್ತಿ ಹೋಗಿ ಯುದ್ಧ ಮಾಡಿ‌ ಸಾಕಷ್ಟು ಸಂಪತ್ತನ್ನು ದೋಚಿಕೊಂಡು ಬರುವಾಗ ಈ ಸುಂದರಿ ರಾಜನ ಕಣ್ಣಿಗೆ ಬಿದ್ದಳು. ಆಗ ರಾಜ ಅವಳ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ಮದುವೆಯಾಗಿ ತನ್ನ ಅರಮನೆಗೆ ಕರೆ ತಂದಿದ್ದನು.‌ ಆ ರಾಜನ‌ ಎರಡನೇ ‌ರಾಣಿ ಮೊದಲನೆಯವಳಿಗಿಂತೇನು ಸುಂದರಿಯಾಗಿರಲಿಲ್ಲ. ಆದರೆ ಬುದ್ಧಿಮತ್ತೆಯಲ್ಲಿ, ರಾಜ್ಯದ ಆಡಳಿತದ ವಿಷಯದಲ್ಲಿ ‌ಬಹಳಷ್ಟು ಚುರುಕಾಗಿದ್ದಳು. ಯುದ್ಧ ಮಾಡದೇ‌ ಎದುರಾಳಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಅವಳಲ್ಲಿತ್ತು. ಸುತ್ತಮುತ್ತಲಿನ ರಾಜ್ಯದಲ್ಲಿ ಅವಳಷ್ಟು ಬುದ್ಧಿವಂತೆ ಯಾರು ಇರಲಿಲ್ಲ. ಹೀಗಾಗಿ ಗರುಡ ರಾಜ ಅವಳ ತಂದೆಯೊಂದಿಗೆ ‌ಯುದ್ಧ ಮಾಡಿ ಅವಳನ್ನು ಕದ್ದು ತಂದು ತನ್ನ ಅರಮನೆಯಲ್ಲಿಟ್ಟುಕೊಂಡಿದ್ದನು. ಎಲ್ಲ ಆಡಳಿತ ಕೆಲಸಗಳನ್ನು ಅವಳಿಗೆ ವಹಿಸಿದ್ದನು.‌ ನಂತರ ಅವಳ ತಂದೆಯ ಒತ್ತಾಯಕ್ಕೆ ‌ಅವಳನ್ನು ಮದುವೆಯಾಗಿದ್ದನು. ಇನ್ನೂ ಮೂರನೇಯ ರಾಣಿಯ ಬಗ್ಗೆ ಹೇಳಬೇಕೆಂದರೆ ಅವಳು ರಾಜನ ದೃಷ್ಟಿಯಲ್ಲಿ ರೂಪವಂತೆ, ಬುದ್ಧಿವಂತೆಯಾಗಿರದಿದ್ದರೂ ಗುಣವಂತೆಯಾಗಿದ್ದಳು. ಅವಳು‌ ರಾಜನನ್ನು ಪ್ರೀತಿಸಿ ಹಠಕ್ಕೆ‌ ಬಿದ್ದು ಮದುವೆಯಾಗಿದ್ದಳು. ಆದರೆ ‌ರಾಜ ಅವಳನ್ನು "ಬರೀ ಬಿಟ್ಟಿಯಾಗಿ ಗಂಡು ಸಂತಾನವಿಲ್ಲದ ಒಂದು ರಾಜ್ಯ ‌ಸಿಗುತ್ತಲ್ಲ..."‌ ಎಂಬ ದುರಾಸೆಯಿಂದ‌ ಮದುವೆಯಾಗಿದ್ದನು. ಅವನಿಗೆ ಮೂರನೇ‌ ರಾಣಿಯ ಮೇಲೆ ಯಾವುದೇ ಮಮಕಾರ‌ ಪ್ರೀತಿ ಇರಲಿಲ್ಲ. 

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                      ಗರುಡ ರಾಜ ಯಾವಾಗಲೂ ಐಷಾರಾಮಿ ಜೀವನದಲ್ಲಿ ‌ಮುಳುಗಿರುತ್ತಿದ್ದನು. ಸಾಮ್ರಾಜ್ಯ ವಿಸ್ತರಣೆಯ ಕೆಲಸವನ್ನು ಸೇನಾಧಿಪತಿಗಳು ಮಾಡುತ್ತಿದ್ದರು. ರಾಜ್ಯಾಡಳಿತವನ್ನು ಎರಡನೇ‌ ರಾಣಿ‌ ನೋಡಿ‌ಕೊಳ್ಳುತ್ತಿದ್ದಳು. ಹೀಗಾಗಿ ರಾಜ ಸದಾ ಕಾಲ ಮೊದಲ ರಾಣಿಯೊಡನೆ ಸರಸ ಸಲ್ಲಾಪದಲ್ಲಿ ಮೈಮರೆಯುತ್ತಿದ್ದನು. ಅವಳು ರಾಜನ ಮೇಲಿನ ಪ್ರೀತಿಯಿಂದ‌ ಅವನನ್ನು ‌ಮದುವೆಯಾಗಿರುವುದಿಲ್ಲ. ಅವನತ್ರ ಶ್ರೀಮಂತ ಸಾಮ್ರಾಜ್ಯವಿದೆ, ಐಶಾರಾಮಿ ಜೀವನ ನಡೆಸಬಹುದು ಎಂಬ ಉದ್ದೇಶದಿಂದ ಆಕೆ ಅವನನ್ನು ಮದುವೆಯಾಗಿದ್ದಳು. ರಾಜನೂ ಅಷ್ಟೇ ಅವಳ ಸೌಂದರ್ಯಕ್ಕೆ ಮೋಹಿತನಾಗಿಯೇ ಅವಳನ್ನು ‌ಮದುವೆಯಾಗಿದ್ದನು. ಅದಕ್ಕಾಗಿ ಹಗಲು ರಾತ್ರಿಯೆನ್ನದೆ ಅವಳ ಸೌಂದರ್ಯವನ್ನು ‌ಲೂಟಿ ಮಾಡುತ್ತಿದ್ದನು. ಅವಳಿಗೆ ಮುತ್ತು ರತ್ನ ವಜ್ರ ವೈಡೂರ್ಯ ಆಭರಣಗಳನ್ನು ‌ನೀಡಿ ಅವಳನ್ನು ದಿನಾ ರಾತ್ರಿ ಬೆತ್ತಲೆ‌ ಮಾಡಿ ತನ್ನ ದೇಹದ ಹಸಿವನ್ನು ನೀಗಿಸಿಕೊಳ್ಳುತ್ತಿದ್ದನು. ಅವಳನ್ನು ಬರೀ ‌ಶರೀರ ಸುಖಕ್ಕಾಗಿ ಬಳಸಿಕೊಳ್ಳುತ್ತಿದ್ದನು.‌ ಅವಳು ಅಷ್ಟೇ ಬರೀ ಅವನನ್ನು ಸಂಪತ್ತಿಗಾಗಿ ಬಳಸಿಕೊಳ್ಳುತ್ತಿದ್ದಳು.‌ ಸುಖದ ಜೀವನಕ್ಕಾಗಿ ಅವನಿಗೆ ಸೆರಗು ಹಾಸಿ ಅವನೊಂದಿಗೆ ಪ್ರೀತಿ‌ ನಾಟಕವಾಡುತ್ತಾ ತನ್ನ ದುರಾಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದಳು. 

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                 ಮೊದಲ ರಾಣಿಯೊಂದಿಗೆ ಸರಸವಾಡಿ ಬೇಜಾರಾದಾಗ ಎರಡನೇ ರಾಣಿಯ ಖಾಸಗಿ ಅರಮನೆಗೆ ನುಗ್ಗಿ ಅವಳೊಂದಿಗೆ ಬಲವಂತ ಮಾಡಿ‌ ಕೆಟ್ಟದಾಗಿ ವರ್ತಿಸುವುದು ರಾಜನ ರೂಢಿಯಾಗಿತ್ತು. ಎರಡನೇ ರಾಣಿಯೂ ಸಹ ಸುಂದರವಾಗಿದ್ದಳು. ರಾಜ ಅವಳ‌ ತಂದೆಯ ಮೇಲೆ ಯುದ್ಧ ಮಾಡಿ ಅವಳನ್ನು ಕದ್ದು ತಂದು ಬಲವಂತದಿಂದ ಕೆಲಸ ಮಾಡಿಸಿಕೊಂಡು ಬಲವಂತದಿಂದ ಮದುವೆಯಾಗಿದ್ದಕ್ಕೆ ಅವಳಿಗಿನ್ನು ರಾಜನ ಮೇಲೆ ಕೋಪವಿತ್ತು. ಆಕೆಯಿನ್ನು ರಾಜನ ಮೇಲೆ ಕೆಂಡಕಾರುತ್ತಿದ್ದಳು. ಅವಳಿಗೆ ಅವನ ಮೇಲೆ‌ ಯಾವ ಪ್ರೀತಿಯೂ ಇರಲಿಲ್ಲ.‌ ಆದರೆ ರಾಜನಿಗೆ ಅವಳ ಮೇಲೂ ಬಹಳಷ್ಟು ವ್ಯಾಮೋಹವಿತ್ತು.‌ ಮೊದಲ ರಾಣಿಯ ಹಾಸಿಗೆ ಸುಖ ಸಿಗದಿದ್ದಾಗ ‌ಆತ ಎರಡನೇ ರಾಣಿಯ ಹಾಸಿಗೆಗೆ ನುಗ್ಗಿ ಅವಳನ್ನು ಬಲವಂತವಾಗಿ ಅನುಭವಿಸುತ್ತಿದ್ದನು. ಅವಳ ಮೇಲೆ‌ ಆತ ಮೊದಲಿನಿಂದಲೂ ಬಲವಂತವನ್ನೇ‌ ಮಾಡುತ್ತಾ ಬಂದಿದ್ದನು. ಅವಳಿಗೆ ಬಲವಂತ ಮಾಡಿ ಹಿಂಸೆ‌ ನೀಡಿ ಅವಳನ್ನು ಸುಖಿಸುವುದರಲ್ಲೂ ಅವನಿಗೆ ವಿಚಿತ್ರ ‌ಮಜಾ‌ ಸಿಗುತ್ತಿತ್ತು. ಅದಕ್ಕಾಗಿ ಆತ ಎರಡನೇ ರಾಣಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದನು. ಅವಳ ಮೇಲೆ‌ ತನ್ನ ಪುರುಷ ಪರಾಕ್ರಮ ಪ್ರದರ್ಶಿಸಿ ಅವಳ ಕತ್ತಿಗೆ ಚೂರಿ ಹಿಡಿದು ಅವಳ ಬಟ್ಟೆಗಳನ್ನು ಹರಿದು ಅವಳನ್ನು ನಗ್ನಗೊಳಿಸಿ ತನ್ನ ಕಾಮವನ್ನು ತೀರಿಸಿಕೊಳ್ಳುತ್ತಿದ್ದನು. ಆದರೂ ಸಹ ಎರಡನೇ‌ ರಾಣಿ ಅವನಿಗೆ ಹೆದರಿ ರಾಜ್ಯಾಡಳಿತವನ್ನು ಸರಿಯಾಗಿ ಪ್ರಾಮಾಣಿಕವಾಗಿ ‌ನೋಡುಕೊಳ್ಳುತ್ತಿದ್ದಳು.‌ ರಾಜನನ್ನು ನೇರವಾಗಿ‌ ದ್ವೇಷಿಸಲಾಗದೆ ಬೆನ್ನ‌ ಹಿಂದೆ ಬಹಳಷ್ಟು ದ್ವೇಷಿಸುತ್ತಿದ್ದಳು.‌

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                        ಇನ್ನೂ ಮೂರನೇ‌ ರಾಣಿಯ ಮೇಲೆ ರಾಜನಿಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಎಷ್ಟಾದರೂ ಬಿಟ್ಟಿಯಾಗಿ ಸಿಕ್ಕಿದ್ದಾಳೆ ಎಂಬ ನಿರ್ಲಕ್ಷ್ಯವಿತ್ತು.‌ ರಾಜ ಮೂರನೇ‌ ರಾಣಿಯನ್ನು ಬೇಕಂತಲೆ‌ ನಿರ್ಲಕ್ಷ್ಯ ‌ಮಾಡುತ್ತಿದ್ದನು.‌ ಆಕೆ‌ ಮೊದಲೆರಡು ರಾಣಿಯರಷ್ಟು ಸುಂದರವಾಗಿರದಿದ್ದರೂ ಸುಂದರವಾಗಿದ್ದಳು. ಗುಣವಂತೆಯಾಗಿದ್ದಳು, ದೈವಭಕ್ತೆಯಾಗಿದ್ದಳು.‌ ಸುಂದರ ಸುಶೀಲೆ ಸುಗುಣೆಯಾಗಿದ್ದಳು. ಆದರೆ ರಾಜನಿಗೆ ಅವಳಲ್ಲಿ ‌ಬಹಳಷ್ಟು ಆಸಕ್ತಿಯಿರಲಿಲ್ಲ. ಆದರೆ ಇವಳು ರಾಜನನ್ನು ‌ಬಹಳಷ್ಟು ಪ್ರೀತಿಸುತ್ತಿದ್ದಳು. ಅವನಿಗೋಸ್ಕರ ಎಲ್ಲ ಕೆಲಸಗಳನ್ನು ಗುಟ್ಟಾಗಿ ಮಾಡುತ್ತಿದ್ದಳು.‌ ಮೊದಲನೇ‌ ರಾಣಿ‌ ರಾಜನೊಂದಿಗೆ ಪ್ರೀತಿ ನಾಟಕವಾಡುತ್ತಾ ಅವನೊಂದಿಗೆ ಸದಾ ಸರಸ ಸಲ್ಲಾಪದಲ್ಲಿ ಮುಳುಗಿರುತ್ತಿದ್ದಳು. ಆದರೆ ಅವನ ಆರೋಗ್ಯದ ಕಡೆಗೆ ಆಹಾರದ ಕಡೆಗೆ ಒಂಚೂರು ಗಮನ ಹರಿಸುತ್ತಿರಲಿಲ್ಲ.‌ ಆದರೆ ಮೂರನೇ‌ ರಾಣಿ ತಾನೇ ಖುದ್ದಾಗಿ ‌ರಾಜನ ಆಹಾರದ ಹಾಗೂ ಆರೋಗ್ಯದ ಉತ್ಸುವಾರಿಯನ್ನು ವಹಿಸಿಕೊಂಡಿದ್ದಳು.‌ ಆದರೆ ಇದು ರಾಜನಿಗೆ ಗೊತ್ತಿರಲಿಲ್ಲ. ಎರಡನೇ ರಾಣಿ ರಾಜನ ಮೇಲಿನ ಕೋಪದಿಂದ ಬೇಕಂತಲೇ ಕೆಲವೊಂದಿಷ್ಟು ತಪ್ಪುಗಳನ್ನು ಮಾಡುತ್ತಿದ್ದಳು. ರಾಜ್ಯದೊಳಗೆ ಶತ್ರು ಸೈನಿಕರಿಗೆ ಬರಲು ಅವಕಾಶ ಕೊಟ್ಟು ರಾಜ್ಯದ ಅವನತಿಯನ್ನು ಬಯಸುತ್ತಿದ್ದಳು. ಆದರೆ ಮೂರನೇ‌ ರಾಣಿ ತಾನೇ‌ ಖಡ್ಗವಿಡಿದು ಶತ್ರುಗಳ ತಲೆ‌ ಹಾರಿಸಿ ರಾಜ್ಯವನ್ನು ಕಾಪಾಡುತ್ತಿದ್ದಳು.‌ ಅವಳು ಕಣ್ಣಲ್ಲಿ ಕಣ್ಣಾಗಿ ರಾಜನನ್ನು ಹಾಗೂ ರಾಜ್ಯವನ್ನು ಕಾಪಾಡುತ್ತಿದ್ದಳು. ಬಡವರ ಮೇಲೆ‌ ಕಾಳಜಿ ತೋರುತ್ತಿದ್ದಳು.‌ ಪ್ರಜೆಗಳ ಕಷ್ಟ ಆಲಿಸಿ ಅವುಗಳನ್ನು ಬಗೆ ಹರಿಸುತ್ತಿದ್ದಳು. ಅವಳಿಂದಾಗಿಯೇ ಆ ರಾಜ್ಯ ಕ್ಷೇಮವಾಗಿತ್ತು. ಆದರೆ ಇದು ಯಾರಿಗೂ ಗೊತ್ತಿರಲಿಲ್ಲ. 

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                "ನನ್ನತ್ರ ಬರದಿದ್ದರೆ ಏನಾಯ್ತು? ಪ್ರೀತಿಯಿಂದ ಮಾತನಾಡದಿದ್ದರೆ ಏನಾಯ್ತು? ರಾಜ ಮೊದಲೆರಡು ರಾಣಿಯರೊಂದಿಗೆ ಖುಷಿಯಾಗಿರುವನಲ್ಲ ಸಾಕು..." ಎಂಬ ಖುಷಿಯಲ್ಲಿ ಮೂರನೇ ರಾಣಿ‌ ನಿಸ್ವಾರ್ಥದಿಂದ ರಾಜನ ಸೇವೆ ಹಾಗೂ ರಾಜ್ಯದ ರಕ್ಷಣೆಯನ್ನು ಮಾಡುತ್ತಲೇ ಹೋದಳು. ಆದರೆ ರಾಜ ಮೊದಲ ರಾಣಿಯ ಸೌಂದರ್ಯವನ್ನು ಲೂಟಿ ಮಾಡುತ್ತಾ ಮೈಮರೆತನು. ಎರಡನೇ ರಾಣಿ ಅವನ ಬಲವಂತಕ್ಕೆ ಯಾಕೆ ನರಳಬೇಕು ಎಂದು ಸ್ವಯಿಚ್ಛೆಯಿಂದಲೇ ಅವನಿಗೆ ಸೆರಗು ಹಾಸಲು ಪ್ರಾರಂಭಿಸಿದಳು. ರಾಜನಿಂದ ಅವಳಿಗೆ ಬಯಸಿದಾಗ ದೇಹ ಸುಖ ಸಿಗುತ್ತಿರಲಿಲ್ಲ. ಅದಕ್ಕಾಗಿ ‌ಅವಳು ಸೇನಾಧಿಪತಿಯೊಂದಿಗೆ ಅಕ್ರಮ ಸಂಬಂಧವನ್ನು ಬೆಳಸಿದಳು. ರಾಜ ಬಯಸಿದಾಗ ಅವನನ್ನು ‌ತೃಪ್ತಿಪಡಿಸಿ‌ ಕಳುಹಿಸುತ್ತಿದ್ದಳು. ನಂತರ ಸೇನಾಧಿಪತಿಯೊಡನೆ ಸರಸ‌ ಸಲ್ಲಾಪದಲ್ಲಿ ಮುಳುಗುತ್ತಿದ್ದಳು.‌ ರಾಜ ಮೊದಲ ರಾಣಿಯೊಡನೆ‌ ಮೈಮರೆತರೆ ಎರಡನೇ‌‌ ರಾಣಿ‌ ಸೇನಾಧಿಪತಿಯೊಡನೆ ಮಲಗಿರುತ್ತಿದ್ದಳು. ಇವರೆಲ್ಲರ ನಡುವೆ ಮೂರನೇ‌ ರಾಣಿ ಕೆಲಸ‌ ಮಾಡುತ್ತಾ ಸುಸ್ತಾಗುತ್ತಿದ್ದಳು. ಈ ವಿಷಯ ಅರಮನೆ ಹೊಸಲು ದಾಟಿ‌ ಶತ್ರು ರಾಜರುಗಳ ತನಕ ತಲುಪಿತು.‌

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                ಶತ್ರುಗಳು ಗರುಡ ರಾಜ್ಯದ ಮೇಲೆ ದಾಳಿ ಮಾಡಲು ಸನ್ನದ್ಧರಾಗಿ ಬರತೊಡಗಿದರು.‌ ಈ ವಿಷಯವನ್ನು ಬೇಗನೆ ರಾಜನಿಗೆ ತಿಳಿಸಿ ಯುದ್ಧದ ತಯಾರಿ ಮಾಡಲು ಮೂರನೇ‌ ರಾಣಿ ರಾಜನ ಖಾಸಗಿ ಅರಮನೆಗೆ ಓಡುತ್ತಾ ಹೋದಳು. ಆದರೆ‌ ರಾಜ ಮೊದಲನೇ‌ ರಾಣಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದನು. ಆಕೆ‌ ಎಷ್ಟೇಳಿದರೂ ಆತ ಅವಳ ಮಾತನ್ನು ಕೇಳಿಸಿಕೊಳ್ಳಲೇ‌ ಇಲ್ಲ. ನಂತರ ಆಕೆ‌ ಎರಡನೇ‌ ರಾಣಿಯ ಖಾಸಗಿ‌ ಕೋಣೆಗೆ ನುಗ್ಗಿದಳು. ಆದರೆ ಅಲ್ಲಿ ಎರಡನೇ ರಾಣಿ ಸೇನಾಧಿಪತಿಯೊಡನೆ ‌ಸರಸವಾಡುತ್ತಿದ್ದಳು.‌ ಅವಳು ಸಹ ಮೂರನೇ‌ ರಾಣಿಯ ಮಾತನ್ನು ಕೇಳದೆ‌ ಅವಳಿಗೆ ಅವಮಾನ ಮಾಡಿ ಕಳುಹಿಸಿದಳು. "ರಾಜನ‌ಷ್ಟೇ‌ ಅಲ್ಲ ಈಡಿ ಅರಮನೆಯೇ ಹಾದರದಲ್ಲಿ‌ ಮುಳುಗಿದೆ, ಇನ್ನೂ ಈ‌ ರಾಜ್ಯವನ್ನು ‌ಯಾರಿಂದಲೂ‌ ಕಾಪಾಡಲು ಸಾಧ್ಯವಿಲ್ಲವೆಂದು...." ಮೂರನೇ‌ ರಾಣಿ ತನ್ನ ಬಟ್ಟೆ ಬರೆಗಳನ್ನು ತೆಗೆದುಕೊಂಡು ರಾತ್ರೋರಾತ್ರಿ ಅರಮನೆ ಬಿಟ್ಟು ಹೋದಳು. 

ಮೂರು ರಾಣಿಯರ ಪ್ರೇಮಕಥೆ - Kannada Moral Love Story

             ಮೂರನೇ ರಾಣಿ ಮಧ್ಯರಾತ್ರಿ ಅರಮನೆ ಬಿಟ್ಟು ಕುದುರೆ ಮೇಲೆ ‌ಒಬ್ಬಳೇ‌ ಹೋಗುತ್ತಿರುವುದನ್ನು ಗಮನಿಸಿ ಒಬ್ಬ ಯುವ ತರುಣ ಅವಳನ್ನು ಹಿಂಬಾಲಿಸಿದನು. ಇದು ರಾಣಿಗೆ ಗೊತ್ತಾಗಿ ಅವಳು ವೇಗವಾಗಿ ಕುದುರೆ ಓಡಿಸಿದಳು. ಆ ಯುವಕನು ಸಹ ವೇಗವಾಗಿ ಕುದುರೆ ಓಡಿಸಿ ರಾಣಿಯನ್ನು ‌ಹಿಂಬಾಲಿಸಿದನು. ಆಗ ರಾಣಿ "ಇವನ್ಯಾರೋ ಕಳ್ಳನಿರಬೇಕು. ಅದಕ್ಕೆ ನನ್ನನ್ನು ಹಿಂಬಾಲಿಸುತ್ತಿದ್ದಾನೆ, ಇವನಿಗೊಂದು ಪಾಠ ಕಲಿಸಿಯೇ ಮುಂದೆ‌ ಸಾಗಬೇಕು" ಎಂದಾಕೆ‌ ತನ್ನ ಕುದುರೆಯನ್ನು ತಿರುಗಿಸಿ ಆ ಯುವಕನ ಮೇಲೆ ದಾಳಿ ಮಾಡಿ ಅವನನ್ನು ‌ಕೆಳಗೆ ಬೀಳಿಸಿದಳು.‌ ತಕ್ಷಣವೇ ಅವನ ಕೊರಳಿಗೆ ತನ್ನ ಖಡ್ಗ ಹಿಡಿದಳು.‌ ಆದರೆ ಆ ಯುವಕ ಹೆದರುವ ಬದಲು ನಗಲು‌ ಪ್ರಾರಂಭಿಸಿದನು. ಆಗ ರಾಣಿ "ಯಾಕೆ ನಗುತ್ತಿರುವೆ?" ಎಂದು ಕೇಳಿದಳು. ಆಗಾತ "ಕ್ಷಮಿಸಿ‌ ಮಹಾರಾಣಿಯವರೇ, ನಿಮ್ಮ ಪ್ರಜೆಯನ್ನು ಕೊಲ್ಲುವಷ್ಟು ಕ್ರೂರತನ ನಿಮ್ಮಲ್ಲಿ‌ ಬಂದಿರುವುದನ್ನು ನೋಡಿ‌ ನಗು ಬಂತು" ಎಂದನು. ಆಗ ರಾಣಿಗೆ ಅವನ ಮೇಲೆ‌ ಕನಿಕರ‌ ಹುಟ್ಟಿತು.

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                    ಆಗ ರಾಣಿ ಅವನನ್ನು ‌ಎಬ್ಬಿಸಿ "ಯಾಕೆ ನನ್ನನ್ನು ತಡರಾತ್ರಿಯಲ್ಲಿ‌ ಹಿಂಬಾಲಿಸಿಕೊಂಡು ಬರುತ್ತಿರುವೆ? ನಾನು ಮಹಾರಾಣಿ ಎಂಬುದು ನಿನಗೇಗೆ ಗೊತ್ತು?" ಎಂದು ಕೇಳಿದಳು. ಆಗಾತ ಮತ್ತೆ ನಗುತ್ತಾ "ಮಹಾರಾಣಿಯವರೇ ನಿಮ್ಮ‌ ಬಗ್ಗೆ ಎಲ್ಲವೂ ಗೊತ್ತು ನನಗೆ.‌ ನೀವು ರಾಜನನ್ನು ಪ್ರೀತಿಸಿ ಮದುವೆಯಾಗಿ ಮೋಸ ಹೋಗಿರುವುದು, ಅವನ ಸುಖಕ್ಕಾಗಿ ಅವನನ್ನು ಕಾಪಾಡಿದ್ದು, ಅವನ ರಾಜ್ಯವನ್ನು ಕಾಪಾಡುತ್ತಾ ಬಂದಿರುವುದು, ಈಗ ಈ ರಾಜ್ಯವನ್ನು ಕಾಪಾಡಲು ಸಾಧ್ಯವಿಲ್ಲವೆಂದು ಹೇಡಿಯಂತೆ ಓಡಿ ಹೊರಟಿರುವುದು ಎಲ್ಲವೂ ಗೊತ್ತು ನನಗೆ..." ಎಂದೇಳಿದನು.‌ ಆಗ ರಾಣಿ "ನನ್ನನ್ನೇ ಹೇಡಿ ಎನ್ನುವೆಯಾ? ನಾನೇನು ಹೆದರಿ ಹೊರಟಿಲ್ಲ, ಪ್ರಜೆಗಳ ಹಿತ ಮರೆತು ಹಾದರದಲ್ಲಿ‌ ಮೈಮರೆತಿರುವ ರಾಜ್ಯವನ್ನು ಯಾವ ಪುರುಷಾರ್ಥಕ್ಕಾಗಿ ಕಾಪಾಡುವುದು ಎಂಬ ಬೇಜಾರಲ್ಲಿ ಹೊರಟಿರುವೆ..." ಎಂದೇಳಿದಳು. ಆಗ ಆ ಯುವಕ "ನಿಮ್ಮನ್ನು ನಂಬಿರುವ ಈ‌ ಪ್ರಜೆಗಳನ್ನು ಸಾಯಲು ಬಿಟ್ಟು ಹೋಗುವುದೆ ಸರಿಯೇ?" ಎಂದು‌‌ ಕೇಳಿದನು. ಆಗ ರಾಣಿ "ಇಷ್ಟೆಲ್ಲ ನಿನಗೇಗೆ ಗೊತ್ತು? ಯಾರು ನೀನು?" ಎಂದು ಕೇಳಿದಳು. ಆಗಾತ "ಅದನ್ನೆಲ್ಲ ನಿಮಗ್ಯಾಕೆ ಹೇಳಬೇಕು?" ಎಂದು‌ ಕೇಳಿ ನಗಲು ಪ್ರಾರಂಭಿಸಿದನು.‌

                   ರಾಣಿಗೆ ಕೋಪ ಬಂದು ಆಕೆ ಅವನೆದೆಗೆ‌ ಖಡ್ಗದಿಂದ ಮೆಲ್ಲನೆ‌ ಚುಚ್ಚುತ್ತಾ "ಯಾರು ನೀನು?" ಎಂದು ಕೇಳಿದಳು. ಆಗ ಆ ಯುವಕ "ನಾನು ನಿಮ್ಮ‌ ತಂದೆಯ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಸೈನಿಕನ ಮಗ. ನಾನು ನಿಮ್ಮನ್ನು ಚಿಕ್ಕಂದಿನಿಂದಲೂ ನೋಡುತ್ತಿದ್ದೆ.‌ ನಿಮಗಾಗಿ ಯುದ್ಧ ಕಲೆ ಕಲಿತು ಸೈನ್ಯ ಸೇರಿದೆ.‌ ಆದರೆ ಅಷ್ಟರಲ್ಲಿ ‌ನೀವು ಈ ರಾಜನನ್ನು ‌ನಂಬಿಕೊಂಡು ಇಲ್ಲಿಗೆ ಬಂದೀರಿ. ನಾನು ನಿಮ್ಮನ್ನು ಹುಡುಕಿಕೊಂಡು ‌ಅವತ್ತು ಬಂದವನು‌ ಇವತ್ತಿಗೂ ನಿಮ್ಮನ್ನು ಹಿಂಬಾಲಿಸುತ್ತಿರುವೆ. ಆದರೆ ಇವತ್ತು ನೀವು ನನ್ನೆಡೆಗೆ ತಿರುಗಿ ನೋಡಿದಿರಿ..." ಎಂದನು.‌ ಆಗ ರಾಣಿ ಭಾವುಕಳಾಗಿ "ಏನು ಬೇಕು ನಿನಗೆ? ನನ್ನ ಬೆನ್ನಿಂದೆ ಬರಬೇಡ ಹೋಗು..." ಎಂದೇಳಿದಳು. ಆಗಾತ "ನನಗೆ ನೀವು ಬೇಕು? ನಿಮ್ಮನ್ನು ಬಿಟ್ಟು ಬೇರೆನು ಬೇಕಿಲ್ಲ ನನಗೆ. ನಿಮಗಾಗಿ ನಾನು ಏನು ಬೇಕಾದರೂ ಮಾಡುವೆ..." ಎಂದೇಳಿದನು. ರಾಣಿಗೆ ಪ್ರೀತಿಯಲ್ಲಿರುವ ಶಕ್ತಿ ಗೊತ್ತಿತ್ತು. ಅಲ್ಲದೇ "ನಮ್ಮನ್ನೇ ನಂಬಿಕೊಂಡು ಹಾಯಾಗಿ ಮಲಗಿರುವ ಪ್ರಜೆಗಳನ್ನು ‌ಸಾಯಲು ಬಿಟ್ಟು ಹೋಗುವುದು ಕ್ಷತ್ರಿಯ ಧರ್ಮವಲ್ಲ, ಹಾದರದ ರಾಜ ಹಾಗೂ ಅವನ ರಾಣಿಯರು ಶತ್ರುಗಳ ಕೈಯಲ್ಲಿ ಸಾಯಲಿ, ನಾನು ರಾಜ್ಯವನ್ನು ಕಾಪಾಡುವೆ..." ಎಂದು ರಾಣಿ ಮನದಲ್ಲೇ ತಿರ್ಮಾನಿಸಿದಳು.

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                  ತಕ್ಷಣವೇ ಮಹಾರಾಣಿ ಆ ಯುವಕನಿಗೆ ತನ್ನ ಬಳಿಯಿದ್ದ ಮತ್ತೊಂದು ‌ಖಡ್ಗವನ್ನು ಕೊಟ್ಟು "ಹಾಗಿದ್ದರೆ ಬಾ ನನ್ನೊಂದಿಗೆ ಸೇರಿ‌ ಈ ರಾಜ್ಯವನ್ನು ಕಾಪಾಡಲು ಸಹಾಯ ಮಾಡು..." ಎಂದಳು. ‌ಆ ಯುವಕ ಹುಮ್ಮಸ್ಸಿನಿಂದ‌ ಖಡ್ಗ ತೆಗೆದುಕೊಂಡು ‌ಕುದುರೆಯೇರಿ ರಾಣಿಯನ್ನು ‌ಹಿಂಬಾಲಿಸಿದನು. ರಾಣಿ ಅರಮನೆಗೆ ತಲುಪುವಷ್ಟರಲ್ಲಿ ಎಲ್ಲವೂ ನಡೆದು‌ ಹೋಗಿತ್ತು. ಶತ್ರುಗಳು ಅರಮನೆಗೆ ನುಗ್ಗಿ ರಾಜನ ಮೇಲೆ ದಾಳಿ ಮಾಡಿದ್ದರು. ರಾಜ ಮೊದಲ ರಾಣಿಯೊಂದಿಗೆ ಸರಸವಾಡುತ್ತಾ ಬೆತ್ತಲೆ‌ ಮಲಗಿದ್ದನು. ಆಗ‌‌ ಮೊದಲ‌ ರಾಣಿಯ ಸೌಂದರ್ಯಕ್ಕೆ ಮರುಳಾಗಿ ಶತ್ರು ರಾಜ ಗರುಡ ರಾಜನ ಕೈಕಾಲುಗಳನ್ನು ಕತ್ತರಿಸಿ ಅವನನ್ನು ಜೀವಂತ ಬಿಟ್ಟು ಮೊದಲ ರಾಣಿಯನ್ನು ಅಪಹರಿಸಿಕೊಂಡು ಹೋಗಿದ್ದನು. ಸೇನಾಧಿಪತಿ ರಾಜ್ಯವನ್ನು ಕಾಪಾಡುವ ಬದಲು ಎರಡನೇ ರಾಣಿಯೊಂದಿಗೆ ‌ತನ್ನ ಕರ್ತವ್ಯ ಮರೆತು ಮಲಗಿದ್ದನು. ಶತ್ರುಗಳು ಅವರಿಬ್ಬರನ್ನು ನಗ್ನಾವಸ್ಥೆಯಲ್ಲೇ‌ ಸಾಯಿಸಿದ್ದರು.‌ ಇಷ್ಟೆಲ್ಲ ಆದ ಮೇಲೆ‌ ಮೂರನೇ‌ ರಾಣಿ ಆ ಯುವಕನೊಂದಿಗೆ ಅರಮನೆಗೆ ಬಂದಳು.‌ ಶತ್ರು ರಾಜ ಓಡಿ‌ ಹೋಗಿದ್ದನು. ಆದರೆ ಅವನ ಸೈನಿಕರು ಪ್ರಜೆಗಳ ಮೇಲೆ ದಾಳಿ‌ ಮಾಡಲು ತಯಾರಿ ‌ಮಾಡುತ್ತಿದ್ದರು. ಅಷ್ಟರಲ್ಲಿ ಮೂರನೇ ರಾಣಿ ಹಾಗೂ ಆ ಯುವಕ ಇಬ್ಬರು ಸೇರಿ ಶತ್ರು ಸೈನಿಕರನ್ನು ಹೊಡೆದೊಡಿಸಿ ರಾಜ್ಯವನ್ನು ಕಾಪಾಡಿಕೊಂಡರು.‌

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                ಮೂರನೇ ರಾಣಿ ತಕ್ಷಣವೇ ಗರುಡ ರಾಜನೆಡೆಗೆ ಧಾವಿಸಿದಳು.‌ ಅವಳನ್ನು ‌ಆ ಶೂರ ಯುವಕ‌ ಹಿಂಬಾಲಿಸಿದನು.  ಗರುಡ ರಾಜ ತನ್ನ ಕೈಕಾಲುಗಳನ್ನು ಕಳೆದುಕೊಂಡು ನೋವಿನಿಂದ ನರಳುತ್ತಾ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ರಾಣಿ ಅವನನ್ನು ಸಂತೈಸಲು ಮುಂದಾದಳು. ಅಷ್ಟರಲ್ಲಿ ಆತ "ನನ್ನನ್ನು ಕ್ಷಮಿಸಿ‌ ಬಿಡು ಸಣ್ಣ ರಾಣಿ, ನಿನ್ನನ್ನು ಹಾಗೂ ನಿನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೆ ನಾನು ದೊಡ್ಡ ತಪ್ಪು ಮಾಡಿದೆ. ಆದರೆ ನೀನು ಆ ತಪ್ಪನ್ನು ‌ಮಾಡಬೇಡ. ಈ ಯುವಕ ನಿನಗಾಗಿ ‌ನಿನ್ನ ರಾಜ್ಯದಿಂದಲೇ ಬಂದಿದ್ದಾನೆ‌ ಎಂದು ಗೂಢಚಾರರು ನನಗೆ ಹೇಳಿದ್ದರು.‌ ಆದರೆ ನನಗೆ ನಿನ್ನ ‌ಮೇಲೆ ಆಸಕ್ತಿಯಿಲ್ಲವೆಂದು ನಾನು ಎಲ್ಲವನ್ನೂ ನಿರ್ಲಕ್ಷಿಸಿದ್ದೆ. ಮಾಡಿದ‌ ತಪ್ಪಿಗೆ ನನಗೆ ಸರಿಯಾದ ಶಿಕ್ಷೆಯೇ ಆಗಿದೆ.‌ ಇನ್ಮುಂದೆ‌ ನೀನು ಈ ರಾಜ್ಯದ ರಾಣಿಯಾಗಿ ಎಲ್ಲ‌ ಜವಾಬ್ದಾರಿ ‌ವಹಿಸಿಕೊಂಡು ಸುಖವಾಗಿರು..." ಎಂದೇಳಿ‌‌ ಕಣ್ಮುಚ್ಚಿದನು. ಆಗ ರಾಣಿ ತನ್ನ ಭಾವನೆಗಳನ್ನು ‌ಬಚ್ಚಿಡಲಾಗದೆ‌ ಆ ಶೂರ ಯುವಕನನ್ನು ಬಿಗಿಯಾಗಿ ಅಪ್ಪಿಕೊಂಡು ಅತ್ತಳು. ಆ ಯುವಕ ಅವಳನ್ನು ‌ಸಮಾಧಾನ ಮಾಡಿ ಸಂತೈಸಿದನು. ರಾಣಿ ಅವನ ಪ್ರೀತಿಯನ್ನು ‌ಒಪ್ಪಿಕೊಂಡು ಅವನನ್ನೇ‌ ಮದುವೆಯಾದಳು. 

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                    ರಾಣಿಯ ಪ್ರಾಮಾಣಿಕತೆಗೆ ಹಾಗೂ ಆ ಯುವಕನಿಗೆ ಅಂದರೆ ಅವಳ‌ ಗಂಡನಿಗೆ ಕೊನೆಗೂ ನಿಜವಾದ ಪ್ರೀತಿ ಸಿಕ್ಕಿತು. ಅವತ್ತು ಅವರ ಮೊದಲ‌ ರಾತ್ರಿಯ ಶುಭ ಘಳಿಗೆ ಅವರಿಗಾಗಿ ಕಾಯುತ್ತಿತ್ತು.‌ ಆದರೆ ರಾಣಿಯ ಮನಸ್ಸಲ್ಲಿ ಏನೇನೋ‌ ವಿಚಾರಗಳು ಓಡಾಡುತ್ತಿದ್ದವು. "ನನ್ನ‌ ಗಂಡನೂ ಸಹ‌ ಮುಂದೆ‌ ಗರುಡ ರಾಜನಂತಾದರೆ, ನನ್ನ‌ ಅರಮನೆಯೂ ಮುಂಚೆಯ ಅರಮನೆಯಂತೆ ಹಾದರದ‌ ಮನೆಯಾದರೆ..." ಎಂಬೆಲ್ಲ ಚಿಂತೆಗಳು ಕಾಡಲು ಪ್ರಾರಂಭಿಸಿದವು. ಅದಕ್ಕಾಗಿ ಆಕೆ‌ ಮಧ್ಯರಾತ್ರಿಯೇ‌ ರಾಜಸಭೆ ಕರೆದಳು. "ಗಂಡಿರಲಿ‌ ಹೆಣ್ಣಿರಲಿ ಒಂದೇ‌ ಮದುವೆಯಾಗಬೇಕು, ಮೊದಲ ಸಂಗಾತಿ ಬದುಕಿರುವಾಗ ಬಹು ಮದುವೆಗೆ ಅವಕಾಶವಿಲ್ಲ, ಹಾಗೇನಾದರೂ ಯಾರಾದರೂ ಈ ಕಾನೂನನ್ನು ಮುರಿದು ಎರಡನೇ‌ ಮದುವೆಯಾದರೆ ಅವರನ್ನು ರಾಜ್ಯದಿಂದ ‌ಗಡಿಪಾರು‌ ಮಾಡಲಾಗುವುದು..." ಎಂದು ಕಾನೂನು ಜಾರಿಗೊಳಿಸಿದಳು. ನಂತರ ತನ್ನ ಗಂಡನಿಗೆ ರಾಜಪಟ್ಟವನ್ನು ವಹಿಸಿಕೊಳ್ಳಲು ಹೇಳಿದಳು. ಆದರೆ ಆತ "ಮಹಾರಾಣಿಯವರೇ ಎಂದಿಗೂ ಈ ರಾಜ್ಯ ನಿಮ್ಮದೇ, ಈ ರಾಜ ಪಟ್ಟ ನಿಮಗಷ್ಟೇ‌ ಅರ್ಹವಾದದ್ದು, ನೀವೇ‌‌ ರಾಜನಾಗಿ ರಾಜ್ಯದ ಆಡಳಿತ ನಿರ್ವಹಿಸಿ, ನಾನು ಸೇನಾಧಿಪತಿಯಾಗಿ ನಿಮ್ಮ‌ ಕಾವಲು ಕಾಯುವೆ..." ಎಂದು ಪ್ರೀತಿಯಿಂದ ಹೇಳಿದನು.‌ ಅವಳಿಗೆ ಕೀರಿಟ ತೊಡೆಸಿ ಸಿಂಹಾಸನದ ಮೇಲೆ ಕೂಡಿಸಿದನು. 

ಮೂರು ರಾಣಿಯರ ಪ್ರೇಮಕಥೆ - Kannada Moral Love Story

                 ನಂತರ ಮದುವೆ ಸಮಾರಂಭದ ಹಾಗೂ ರಾಣಿಯ ರಾಜ್ಯಾಭಿಷೇಕದ ಔತಣಕೂಟದಲ್ಲಿ ಭಾಗವಹಿಸಿ ರಾಣಿ ತನ್ನ ಗಂಡನೊಂದಿಗೆ ತನ್ನ ಖಾಸಗಿ ಕೋಣೆ ಸೇರಿದಳು. ಅವರಿಗಾಗಿ ಮದುಮಂಚ ಕಾಯುತ್ತಿತ್ತು. ರಾಣಿ ಮಂಚದ ಮೇಲೆ‌ ಮಲಗುತ್ತಿದ್ದಂತೆಯೇ ಅವಳ‌ ಗಂಡ ಅವಳ ಮೇಲೆ ಮಲಗಿ ಅವಳನ್ನು ‌ಮುದ್ದಿಸಲು ಪ್ರಾರಂಭಿಸಿದನು. ಆಗವಳು "ಸೇನಾಧಿಪತಿಗಳೇ, ರಾಣಿಯ ಅನುಮತಿಯಿಲ್ಲದೆ ಅವಳ‌ ಮೈಮುಟ್ಟುವ ಉದ್ದಟತನವೇ?" ಎಂದು ಪ್ರಶ್ನಿಸಿ ಅವನ ಕಾಲೆಳೆದಳು. ಅದಕ್ಕಾತ "ಕ್ಷಮಿಸಿ ಮಹಾರಾಣಿಯವರೇ, ಇದು ರಾಜ ದರ್ಬಾರಲ್ಲ, ಇದು ನಮ್ಮ ಖಾಸಗಿ ಕೋಣೆ, ಇಲ್ಲಿ ನೀವು ರಾಣಿಯಲ್ಲ, ನನ್ನ ಮುದ್ದಿನ ಮಡದಿ..." ಎಂದೇಳುತ್ತಾ ಅವಳ ಸೀರೆಯನ್ನು ಸೆಳೆದನು. ಅವಳ ಮೇಲೆ ಮುತ್ತಿನ ಮಳೆಗರೆಯುತ್ತಾ ಅವಳ ಮತ್ತೇರಿಸಿದನು. ರಾಣಿ ಮುತ್ತುಗಳ ನಶೆಯಲ್ಲಿ ಮೈಮರೆತಳು. ಆತ ಅವಳ ಒಂದೊಂದೆ ಬಟ್ಟೆಗಳನ್ನು ಮೆಲ್ಲನೆ ಬಿಚ್ಚಿ ಅವಳನ್ನು ‌ಸಂಪೂರ್ಣವಾಗಿ ಬೆತ್ತಲಾಗಿಸಿದನು. ಅವಳ ಹೆಣ್ತನ ಮೊದಲ ಸಲ‌ ನಾಚಿ ನೀರಾಗಿ ಅವನ‌ ತೋಳತೆಕ್ಕೆಯಲ್ಲಿ ನದಿಯಾಗಿ ಹರಿದು ಅವನಲ್ಲಿ‌ ವಿಲೀನವಾಯಿತು. ರಾಣಿಯ ಜೀವನ ಅವನಿಂದ‌ ಪೂರ್ತಿಯಾಯಿತು. ಈ ದಿಟ್ಟ ರಾಣಿ ಆ ಹೇಡಿ ಗರುಡ ರಾಜ ಹಾಗೂ ಅವನ ಮುದ್ದಿನ‌ ರಾಣಿಯರು ಮಾಡಿದ‌ ಯಾವುದೇ ತಪ್ಪನ್ನು ‌ಮಾಡದೇ‌ ಸರಿಯಾಗಿ ಆಡಳಿತ ನಡೆಸಿದಳು.‌ ಪ್ರಜೆಗಳಿಗೆ ಒಳ್ಳೆ ‌ಆಡಳಿತ‌ ನೀಡುತ್ತಾ ತಾನು‌ ತನ್ನ ಗಂಡನೊಂದಿಗೆ ನೂರ ಕಾಲ‌ ಸುಖವಾಗಿ ಬಾಳಿದಳು.‌ ಅವಳ ಜೀವನದಿಂದ‌ ಕಲಿಯುವುದು ಸಾಕಷ್ಟಿದೆ. ಅದನ್ನು ಇಷ್ಟವಾದವರೂ ಕಲಿತು ಸುಖವಾಗಿ ಬಾಳಬಹುದು....‌

ಮೂರು ರಾಣಿಯರ ಪ್ರೇಮಕಥೆ - Kannada Moral Love Story
Blogger ನಿಂದ ಸಾಮರ್ಥ್ಯಹೊಂದಿದೆ.