45+ ಫ್ರೆಂಡಶೀಪ ಕೋಟ್ಸ - Friendship Quotes in Kannada - Friendship Kannada Quotes - Friendship Day thoughts in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

45+ ಫ್ರೆಂಡಶೀಪ ಕೋಟ್ಸ - Friendship Quotes in Kannada - Friendship Kannada Quotes - Friendship Day thoughts in Kannada

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes

ಫ್ರೆಂಡಶೀಪ ಕೋಟ್ಸ - Friendship Quotes in Kannada 

೧) ಕಷ್ಟ ಅಂತಾ ಮಧ್ಯರಾತ್ರಿ ಕರೆ ಮಾಡಿದಾಗ ನಾನು ನನ್ನ ಶತ್ರುಗಳಿಗೂ ಸಹಾಯ ಮಾಡಿರುವೆ. ಆದರೆ ನಾನು ಕಷ್ಟದಲ್ಲಿರುವಾಗ ನನ್ನ ಗೆಳೆಯರೇ ನನಗೆ ಸಹಾಯ ಮಾಡಲಿಲ್ಲ... 

೨) ಗೆಳೆಯರೆಲ್ಲ ಒಳ್ಳೆಯವರಲ್ಲ... 

೩) ಹೆಣ್ಣಿಗೆ ಹೆಣ್ಣೆ ಶತ್ರುವಾಗಿರುವಂತೆ ಗಂಡಿಗೆ ಗಂಡೇ ಶತ್ರುವಾಗಿದ್ದಾನೆ. ಹೇಗೆ ಒಂದು ಹೆಣ್ಣಿನ ಸೌಂದರ್ಯವನ್ನು ಮತ್ತೊಂದು ಹೆಣ್ಣು ಸಹಿಸುವುದಿಲ್ಲವೋ ಅದೇ ರೀತಿ ಒಬ್ಬ ಗಂಡಸಿನ ಸಕ್ಸೆಸನ್ನು ಮತ್ತೊಬ್ಬ ಗಂಡಸು ಸಹಿಸುವುದಿಲ್ಲ. ಅದಕ್ಕಾಗಿ ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ...‌

೪) ಸದ್ಯಕ್ಕೆ ಜೀವಕ್ಕೆ ಜೀವ ಕೊಡುವ ಗೆಳೆಯರಿಗಿಂತ ಜಲಸಿಯಿಂದ ಜೀವಕ್ಕೆ ಕುತ್ತು ತರುವ ಗೆಳೆಯರೇ ಅಧಿಕವಾಗಿದ್ದಾರೆ... 

೫) ಸುತ್ತಲೂ ಸಾವಿರ ಸ್ವಾರ್ಥ ಸ್ನೇಹಿತರಿರುವುದಕ್ಕಿಂತ ಒಬ್ಬ ಸಮರ್ಥ ಶತ್ರುವಿದ್ದರೆ ಸಾಕು ನಾವು ತಾನಾಗಿಯೇ ಸಕ್ಸೆಸಫುಲ್ಲಾಗುತ್ತೇವೆ... 

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes

೬) ನಿಮ್ಮ‌ ನಿಜವಾದ ಶಕ್ತಿ ಸಾಮರ್ಥ್ಯ ನಿಮ್ಮ ಶತ್ರುಗಳಿಗೆ ಗೊತ್ತಿದ್ದರೆ ನಿಮ್ಮ ವಿಕನೇಸ್ ನಿಮ್ಮ ಸ್ನೇಹಿತರಿಗಷ್ಟೇ ಗೊತ್ತಿರುತ್ತದೆ.‌ ಅದಕ್ಕಾಗಿ ನಿಮ್ಮ ಗುಟ್ಟುಗಳನ್ನು ಗುಟ್ಟಾಗಿಡಿ. ಇಲ್ಲವಾದರೆ ನಿಮ್ಮ‌ ಗೆಳೆಯರೇ ನಿಮ್ಮ ಗೋರಿ ಕಟ್ಟುತ್ತಾರೆ... 

೭) ಫೇಸ್ಬುಕ್ ಗೆಳೆಯರಿಗಿಂತ ಲೈಫ್ಬುಕ್ ಗೆಳೆಯರು ಮುಖ್ಯ ಎಂಬುದನ್ನು ಮರೆಯದಿರಿ...‌

೮) ನಿಮ್ಮ ಗಡ್ಡಕ್ಕೆ ಬೆಂಕಿ ಬಿದ್ದಾಗ ಸಿಗರೇಟ ಹೊತ್ತಿಸಿಕೊಳ್ಳುವವನು ಯಾವತ್ತೂ ನಿಮಗೆ ಬೆಸ್ಟಫ್ರೆಂಡ್‌ ಆಗಲ್ಲ. ಜೀವನದಲ್ಲಿ ಮುಂದೆ ಹೋಗುವ ಆಸೆಯಿದ್ದರೆ ಮೊದಲು ನಕಲಿ ಗೆಳೆಯರ ಭ್ರಮಾ ಲೋಕದಿಂದ ಹೊರ ಬನ್ನಿ... 

೯) ಜೀವನದಲ್ಲಿ ಸಾವಿರ ಜನ ಬರ್ತಾರೆ ಸಾವಿರ ಜನ ಹೋಗ್ತಾರೆ. ಆದರೆ ಕೆಲವರು ಮಾತ್ರ ಬೆಸ್ಟ ಫ್ರೆಂಡಾಗಿ ಕೊನೆತನಕ ನಮ್ಮೊಂದಿಗೆ  ಇರ್ತಾರೆ... 

೧೦) ನಿಮಗೆ ಕಷ್ಟಗಳು ಬಂದಾಗ ಯಾರು ನಿಮ್ಮ‌ ನಿಜವಾದ ಬೆಸ್ಟ ಫ್ರೆಂಡ್ ಅಂತಾ ನಿಮಗೆ ಅಟೋಮ್ಯಾಟಿಕ್ಕಾಗಿ ಗೊತ್ತಾಗುತ್ತದೆ. ಸೋ ಕಷ್ಟಗಳನ್ನು ದ್ವೇಷಿಸಬೇಡಿ, ಬೆಸ್ಟ ಫ್ರೆಂಡಗಳನ್ನ ಅನಾವಶ್ಯಕವಾಗಿ ಪರೀಕ್ಷಿಸಬೇಡಿ... 

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes

೧೧) ನಿಜವಾದ ಗೆಳೆಯರು ನಿಮ್ಮ ಬಳಿಯಿರುವ ಹಣ ನೋಡಲ್ಲ, ಗುಣ ನೋಡ್ತಾರೆ. ಮನೆತನ ನೋಡಲ್ಲ, ಮನತನ ನೋಡ್ತಾರೆ... 

೧೨) ನಿಮಗೆ ಬೈದು ಬುದ್ಧಿವಾದ ಹೇಳೋ ಗಟ್ಸ ನಿಮ್ಮ ಬೆಸ್ಟಫ್ರೆಂಡಗೆ ಮಾತ್ರ ಇರುತ್ತೆ. ನಿಮ್ಮ ಬೆಸ್ಟಫ್ರೆಂಡ ಬೈದಾಗ ಬೇಜಾರು ಮಾಡಿಕೊಳ್ಳಬೇಡಿ... 

೧೩) ನಿಮ್ಮ ಬೆಸ್ಟ ಫ್ರೆಂಡ್ ನಿಮ್ಮ ಮುಂದೆ ನಿಮ್ಮ ಕಾಲೆಳೆದು ತಮಾಷೆ ಮಾಡಬಹುದು. ಆದರೆ ಬೆನ್ನ ಹಿಂದೆ ಆತ ಯಾವತ್ತೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಲ್ಲ. ಒಂದು ವೇಳೆ ಮಾತಾಡಿದ್ರೆ ಆತ ನಿಮ್ಮ ಬೆಸ್ಟ ಫ್ರೆಂಡ್ ಅಲ್ವೇ ಅಲ್ಲ... 

೧೪) ನಮ್ಮ ಖುಷಿನಾ ನೋಡೋ ದೌರ್ಭಾಗ್ಯ ಎಲ್ಲರಿಗೂ ಸಿಕ್ಕಿರುತ್ತೆ. ಆದ್ರೆ ನಮ್ಮ‌ ಕಣ್ಣಿರ್ನಾ ನೋಡೊ ಸೌಭಾಗ್ಯ ನಮ್ಮ ಬೆಸ್ಟಫ್ರೆಂಡಗೆ ಮಾತ್ರ ಸಿಕ್ಕಿರುತ್ತೆ... 

೧೫) ನಿಮ್ಮ ಗೆಳೆಯರ ಜೀವನದಲ್ಲಿ ಕಷ್ಟ ಬಂದಾಗ ಅವರು ಸುಧಾಮನಾಗ್ತಾರೆ, ನಿಮ್ಮನ್ನು ಶ್ರೀಕೃಷ್ಣನ ತರಹ ನೋಡ್ತಾರೆ.‌ ನೀವು ಅವರಿಗೆ ಬೆಸ್ಟಫ್ರೆಂಡ ಆಗಿದ್ರೆ ನೀವು ನಿಮ್ಮ ಜೀವ ಒತ್ತೆಯಿಟ್ಟಾದ್ರು ಅವರಿಗೆ ಸಹಾಯ ಮಾಡುತ್ತೀರಿ. ನೀವು ಅವರಿಗೆ ಜಸ್ಟ ಫ್ರೆಂಡಾಗಿದ್ರೆ ಏನಾದರೂ ಒಂದು ಕುಂಟು ನೆಪ ಹೇಳಿ ಜಾರಿಕೋಳ್ತಿರಿ‌... 

ಫ್ರೆಂಡಶೀಪ ಕೋಟ್ಸ - Friendship Quotes in Kannada

೧೬) ಕಷ್ಟಗಳು ಬಂದಾಗ ಫ್ರೆಂಡಶೀಪ ಡೇ ದಿನ ಕೈಮೇಲಿದ್ದ ಬ್ಯಾಂಡಗಳಷ್ಟು ಕೈಗಳು ನಿಮ್ಮ ಹೆಗಲ ಮೇಲೆ ಇರಲ್ಲ. ಕೇವಲ ಒಂದೇ ಒಂದು ಕೈಯಿರುತ್ತದೆ. ಅದು ನಿಮ್ಮ ಬೆಸ್ಟ ಫ್ರೆಂಡದಾಗಿರುತ್ತದೆ... 

೧೭) ನಿಮ್ಮ ನಿಜವಾದ ಶಕ್ತಿ ಸಾಮರ್ಥ್ಯ ನಿಮ್ಮ ಶತ್ರುಗಳಿಗೆ ಗೊತ್ತಿರುತ್ತದೆ. ಆದರೆ ನಿಮ್ಮ ವಿಕನೆಸ್ ನಿಮ್ಮ ಬೆಸ್ಟ ಫ್ರೆಂಡಗೆ ಮಾತ್ರ ಗೊತ್ತಿರುತ್ತದೆ. ಅವರು ಎಲ್ಲಿ ತನಕ ನಿಮ್ಮ ಸಿಕ್ರೇಟನ್ನು ಸೀಕ್ರೆಟಾಗಿ ಇಡ್ತಾರೋ ಅಲ್ಲಿ ತನಕ ಮಾತ್ರ ಅವರು ನಿಮಗೆ ಬೆಸ್ಟ ಫ್ರೆಂಡಾಗಿರ್ತಾರೆ... 

೧೮) ನಿಮ್ಮ ಬೆಸ್ಟ ಫ್ರೆಂಡ್ ಅನಾವಶ್ಯಕವಾಗಿ ನಿಮ್ಮಿಂದ ಏನನ್ನೂ ಸಹ ಬಯಸುವುದಿಲ್ಲ. ಆದರೆ ಅವಶ್ಯಕತೆ ಬಿದ್ರೆ ನಿಮಗೆ ಎಲ್ಲವನ್ನೂ ಕೊಡಲು ತಯಾರಾಗುತ್ತಾರೆ... 

೧೯) ನಿಮ್ಮ ಬೆಸ್ಟಫ್ರೆಂಡ ನಿಮ್ಮ ಕೆಟ್ಟ ಕೆಲಸಗಳಿಗೆ ಕುಮ್ಮಕ್ಕು ಕೊಡಲ್ಲ, ನಿಮ್ಮ ದುಶ್ಚಟಗಳಿಗೆ ಸಪೋರ್ಟ್ ಮಾಡಲ್ಲ, ಹಾಳಾಗಲು ಅವಕಾಶ ಕೊಡಲ್ಲ‌‌. ಒಂದು ವೇಳೆ ಕೊಟ್ರೆ ಅವರು ನಿಮ್ಮ ಬೆಸ್ಟ ಫ್ರೆಂಡ ಅಲ್ಲ... 

೨೦) ಜಗತ್ತೇ ಎದುರಾಗಿ ನಿಂತ್ರು ನಿಮ್ಮ ಬೆಸ್ಟಫ್ರೆಂಡ ನಿಮ್ಮ ಜೊತೆಗಿರ್ತಾರೆ‌. ಕಿವಿ ಚುಚ್ಚುವವರ ಮಾತಿಗೆಲ್ಲ ಅವರು ಕಿವಿ ಕೊಡಲ್ಲ. 

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes

೨೧) ನೀವು ಎಷ್ಟೇ ಬಿಜಿಯಾಗಿದ್ರೂ, ಎಷ್ಟೇ ದೊಡ್ಡ ಬಿಜನೆಸಮ್ಯಾನ ಆಗಿದ್ರೂ ನಿಮ್ಮ ಬೆಸ್ಟಫ್ರೆಂಡ ನಿಮ್ಮನ್ನು ಡಿಸ್ಟರ್ಬ ಮಾಡದೇ‌ ಬಿಡಲ್ಲ. ಅವರಿಗೆ ನಿಮ್ಮನ್ನು ಸುಮ್ನೆ ಬಿಟ್ಟಿರೋಕೆ ಆಗಲ್ಲ... 

೨೨) ನಿಮಗೆ ಪದೇಪದೇ ಏನಾದರೂ ಒಂದನ್ನು ಅನ್ನದಿದ್ರೆ ನಿಮ್ಮ ಬೆಸ್ಟಫ್ರೆಂಡಗೆ ತಿಂದ ಅನ್ನ ಜೀರ್ಣವಾಗಲ್ಲ. 

೨೩) ನಿಮ್ಮ ಬೆಸ್ಟಫ್ರೆಂಡ ಮಧ್ಯೆರಾತ್ರಿಯಾದರೂ ನಿಮಗೆ ಕಾಲ ಮಾಡೋಕೆ ಹಿಂದುಮುಂದು ನೋಡಲ್ಲ. ಅವರು ಸೀದಾ ಕಾಲ ಮಾಡ್ತಾರೆ‌. ತುಂಬಾನೇ ಎಮರ್ಜೆನ್ಸಿ ಇದ್ದರೆ ಸೀದಾ ಮನೆಗೂ ಬರ್ತಾರೆ. ನೀವಿರುವಾಗ ಅವರು ಬೇರೆ ಯಾರ ಬಳಿಯೂ ಸಹಾಯ ಕೇಳಲ್ಲ... 

೨೪) ಸ್ವಾರ್ಥ ರಕ್ತ ಸಂಬಂಧಗಳು ದೂರ ತಳ್ಳಿದಾಗ ನಿಸ್ವಾರ್ಥ ಸ್ನೇಹ ಸಂಬಂಧಗಳು ಬಿಗಿದಪ್ಪಿಕೊಳ್ಳುತ್ತವೆ... 

೨೫) ಪ್ರೀತಿಯಿಂದ ಸ್ನೇಹ ಶುರುವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಸ್ನೇಹದಿಂದ ಪ್ರೀತಿ ಖಂಡಿತ ಶುರುವಾಗುತ್ತೆ... 

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes

೨೬) ಗುಣ ನೋಡಿ ಗೆಳೆತನ ಮಾಡಿ, ಹಣ ನೋಡಿ ಅಲ್ಲ...‌

೨೭) ಗೆಳೆತನ ಮಾಡುವುದಕ್ಕಿಂತ ಮುಂಚೆ ನಿಮ್ಮ ಭಾವಿ ಗೆಳೆಯರನ್ನು ಒಂದಲ್ಲ ನೂರು ಸರ್ತಿ ಪರೀಕ್ಷಿಸಿ. ಆದರೆ ಒಂದ್ಸಲ ಗೆಳೆಯ ಅಂತಾ ಒಪ್ಪಿಕೊಂಡ ಮೇಲೆ ಯಾವುದೇ ಕಾರಣಕ್ಕೂ ನಿಮ್ಮ ಗೆಳೆಯನನ್ನು ಪರೀಕ್ಷಿಸಬೇಡಿ. ಏಕೆಂದರೆ ಒಂದು ವೇಳೆ ನೀವಿಟ್ಟ ಪರೀಕ್ಷೆಯಲ್ಲಿ ನಿಮ್ಮ ಗೆಳೆಯ ಫೇಲಾದರೆ ನಿಮಗೇ ನೋವಾಗುತ್ತೆ... 

೨೮) ನಿಮಗೆ ನಿಜವಾದ ಗೆಳೆಯ ಸಿಕ್ರೆ ದೋಸ್ತಿಯೇ ದೊಡ್ಡ ಆಸ್ತಿ‌ ಎಂಬುದರಲ್ಲಿ‌ ದೂಸ್ರಾ ಮಾತೇ ಇಲ್ಲ...‌ 

೨೯) ನಿಮ್ಮ‌ ಗೆಳೆತನದಲ್ಲಿ ಸಿರಿತನ, ಬಡತನ, ಸಣ್ಣತನ, ಹಗೆತನ ಬರದಂತೆ ನೋಡಿಕೊಳ್ಳಿ...‌ 

೩೦) ಎಲ್ಲೋ ನೂರಕ್ಕೆ ಒಬ್ಬರಿಗೆ ನಿಜವಾದ ಸ್ನೇಹ ಸಿಗುತ್ತೆ.‌ ಮಿಕ್ಕವರೆಲ್ಲ ಬಿಟ್ಟಿ ಬೈಕ ಮೇಲೆ ಊರು ಸುತ್ತೋಕೆ ಬರೋ ಡಮ್ಮಿ ಗೆಳೆಯರನ್ನೆ ನಿಜವಾದ ಫ್ರೆಂಡ್ಸ ಅನಕೊಂಡು ಹಾಯಾಗಿರ್ತಾರೆ, ಇಲ್ಲ ಅವರಿಂದಲೇ‌ ಹಾಳಾಗುತ್ತಾರೆ...‌

ಫ್ರೆಂಡಶೀಪ ಕೋಟ್ಸ - Friendship Quotes in Kannada

೩೧) ಸಿಗದ ಪ್ರೀತಿಗಾಗಿ ಸಾಯೋದಕ್ಕಿಂತ ಸಿಕ್ಕ ಸ್ನೇಹಕ್ಕಾಗಿ ಬದುಕಿ... 

೩೨) ದೋಸ್ತ ಅನ್ನೋ ಮಾತಲ್ಲಿ ಬಹಳಷ್ಟು ಧಮ್‌ ಇದೆ. ಅದನ್ನು ಸಿಕ್ಕಸಿಕ್ಕವರೆಲ್ಲ ಕರೆಯಲು ಬಳಸಬೇಡಿ... 

೩೩) ನಿಮ್ಮ ಬೆಸ್ಟಫ್ರೆಂಡ ಸಮಯ ಸಂದರ್ಭ ನೋಡದೇ ನಿಮ್ಮ ಕಾಲೆಳೆದು ಅಪಹಾಸ್ಯ ಮಾಡುತ್ತಾನೆ. ಆದರೆ ಎಲ್ಲರಿಗಿಂತ ಹೆಚ್ಚಿನ‌ ಕಾಳಜಿನೂ ಅವನೇ ಮಾಡ್ತಾನೆ...‌ 

೩೪) ನಿಜವಾದ ಗೆಳೆಯರು ನಿಮ್ಮ ಸಮಸ್ಯೆಗಳನ್ನು ಮಾಯವಾಗಿಸದಿದ್ದರೂ ನಿಮಗೆ ಸಮಸ್ಯೆ ಬಂದಾಗ ಮಾಯವಾಗದೆ ನಿಮ್ಮ ಜೊತೆಗಾದರೂ ಇದ್ದು ಧೈರ್ಯ ತುಂಬುತ್ತಾರೆ... 

೩೫) ಜೀವದ ಗೆಳೆಯನನ್ನು ರೇಗಿಸಿ ಅವನ ಕಾಲೆಳೆಯುವುದರಲ್ಲಿ ಏನೋ ಒಂದು ಮಜಾ ಸಿಗುತ್ತೆ. ಆದರೆ ಆತ ಎಡವಿ ಕೆಳಗೆ ಬಿದ್ದಾಗ ಅವನಿಗಿಂತ ಜಾಸ್ತಿ ನಮಗೇನೇ ಹರ್ಟಾಗುತ್ತೆ...  

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes

೩೬) ನಿಮ್ಮ ಬೆಸ್ಟ ಫ್ರೆಂಡ್ ನೀವು ಕಷ್ಟದಲ್ಲಿರುವಾಗ ಅವನನ್ನು ಕೈಮುಗಿದು ಕರೀಲಿ ಅಂತಾ ಕಾಯ್ತಾ ಕೂಡಲ್ಲ. ಕರೆಯದೇ ಬಂದು ಹೆಲ್ಪ ಮಾಡಿ ಥ್ಯಾಂಕ್ಸಗಾಗಿ ಕಾಯದೆ ಹೋಗ್ತಾನೆ... 

೩೭) ನಿಜವಾದ ಗೆಳೆಯರು ಕನ್ನಡಿ ಮತ್ತು ನೆರಳಿನಂತೆ ಇರುತ್ತಾರೆ. ಕನ್ನಡಿ ಯಾವತ್ತೂ ಸುಳ್ಳೇಳಲ್ಲ, ನೆರಳು ನಿಮ್ಮನ್ನು ಬಿಟ್ಟೋಗಲ್ಲ... 

೩೮) ಸಂಸಾರದಲ್ಲಿ ಪ್ರೀತಿಯಿರದಿದ್ದರೂ ಸ್ನೇಹವಿದ್ದರೆ ಆ ಸಂಸಾರ ಯಾವತ್ತೂ ಮುರಿಯಲ್ಲ... ಗಂಡ ಹೆಂಡತಿಯ ನಡುವೆಯೂ ಸ್ನೇಹವಿರುತ್ತೆ... 

೩೯) ಶತ್ರುಗಳ ಮಾತಿಗಿಂತ ಸ್ನೇಹಿತರ ಮೌನ ಹೆಚ್ಚಿಗೆ ನೋಯಿಸುತ್ತೆ... 

೪೦) ನಿಮ್ಮೊಂದಿಗೆ ನೀವು ಫ್ರೆಂಡಶಿಪ್ ಮಾಡಿದ್ರೆ ನೀವು ಯಾವತ್ತೂ ಒಂಟಿಯಾಗಿ ನರಳೋ ಸಮಯ ಬರಲ್ಲ... 

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes

೪೧) ಸ್ನೇಹ ಅನ್ನೋದು ಗಾಜಿನ ಅರಮನೆಯಿದ್ದಂತೆ ಒಮ್ಮೆ ಒಡೆದರೆ ಮುಗಿತು. ಮತ್ತೆ ಸೇರಿದರೂ ಮೊದಲಿನಂತೆ ಇರಲ್ಲ... 

೪೨) ಈ ಜಗತ್ತಿಗೆ ನೀವು ಒಬ್ಬರೇ ವ್ಯಕ್ತಿಯಾಗಿರಬಹುದು. ಆದರೆ ನಿಮ್ಮ ಗೆಳೆಯ ಅಥವಾ ಗೆಳತಿಗೆ ನೀವೇ ಪ್ರಪಂಚವಾಗಿರುತ್ತೀರಿ... 

೪೩) ಬೆಳಕಿನಲ್ಲಿ ಒಂಟಿಯಾಗಿ ನಡೆಯುವುದಕ್ಕಿಂತ ನಿಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಕತ್ತಲಲ್ಲಿ ಕಷ್ಟದಲ್ಲಿ ನಡೆಯಿರಿ, ಆಗ ನಿಮಗೆ ಬದುಕಿನ ಮಜಾ ಅರ್ಥವಾಗುತ್ತೆ... 

೪೪) ನಿಜವಾದ ಗೆಳೆಯರೂ ಎಷ್ಟೇ ದೂರದಲ್ಲಿದ್ದರೂ ಮಾನಸಿಕವಾಗಿ ಬೇರ್ಪಡಿಸಲಾಗದಷ್ಟು ಹತ್ತಿರವಿರುತ್ತಾರೆ... 

೪೫) ಜೊತೆಗಿದ್ದು ಬೆನ್ನಿಗೆ ಚೂರಿ ಹಾಕುವ ನಕಲಿ ಗೆಳೆಯನಿಗಿಂತ ಎದುರುಗಡೆಯಿಂದ ಎದೆಗೆ ಬಂದು ಒದೆಯುವ ಅಸಲಿ ಶತ್ರು ಎಷ್ಟೋ ಪಟ್ಟು ವಾಸಿ... 

ಫ್ರೆಂಡಶೀಪ ಕೋಟ್ಸ - Friendship Quotes in Kannada - friendship kannada quotes
Blogger ನಿಂದ ಸಾಮರ್ಥ್ಯಹೊಂದಿದೆ.