
ಗಾದೆ ಮಾತುಗಳು ನಮ್ಮ ಹಿರಿಯರು ನಮಗೆ ಕೊಟ್ಟ ಬೆಲೆ ಬಾಳುವ ನುಡಿಮುತ್ತುಗಳಾಗಿವೆ. ಗಾದೆಗಳಲ್ಲಿ ನಮ್ಮ ಬದುಕಿನ ಸಾರವಿದೆ. ಸಂತೋಷದ ಜೀವನಕ್ಕೆ, ಯಶಸ್ಸಿಗೆ ಗಾದೆಗಳು ದಾರಿದೀಪವಾಗಿವೆ. ನೀವು ದಿನಕ್ಕೊಂದು ಗಾದೆ ಮಾತನ್ನು ಓದಿ ಅದನ್ನು ಅರ್ಥ ಮಾಡಿಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ನೀವು ಒಂದು ವರ್ಷದಲ್ಲಿ ಸಣ್ಣ ಸರ್ವಜ್ಞರಾಗುತ್ತೀರಿ. ನನ್ನ ನೆಚ್ಚಿನ ಗಾದೆ ಮಾತುಗಳು ಇಲ್ಲಿವೆ ;
ಕನ್ನಡ ಗಾದೆ ಮಾತುಗಳು : Kannada Folk Words - Gade Matugalu in Kannada
1) ಕೈ ಕೆಸರಾದರೆ ಬಾಯಿ ಮೊಸರು.
2) ಮಾತು ಬೆಳ್ಳಿ ಮೌನ ಬಂಗಾರ.
3) ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
4) ಊರು ಉಪಕಾರವರಿಯದು ಹೆಣ ಸಿಂಗಾರವರಿಯದು.
5) ಊರ ಉಸಾಬರಿ ಮಾಡಿ ಮುಲ್ಲಾ ಸೊರಗಿದ...
6) ನಾಳೆ ಎಂದವನ ಮನೆ ಹಾಳು.
7) ಗಂಡಸು ಕೂತು ಕೆಟ್ಟರೆ ಹೆಂಗಸು ತಿರುಗಿ ಕೆಟ್ಟಳು.
8) ಕಾಯಕವೇ ಕೈಲಾಸ.
9) ಒಲಿದರೆ ನಾರಿ, ಮುರಿದರೆ ಮಾರಿ.
10) ಮಾಡಿದುಣ್ಣೋ ಮಾರಾಯಾ.

11) ದುಡ್ಡಿದ್ದವನೇ ದೊಡ್ಡಪ್ಪ...
12) ಮೊದಲು ಆಳಾಗಿ ದುಡಿ ನಂತರ ಅರಸನಾಗಿ ಉಣ್ಣು...
13) ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ.
14) ಆಕಳು ಕಪ್ಪಾದರೆ ಹಾಲು ಕಪ್ಪೆ?
15) ಕಬ್ಬು ಡೊಂಕಾದರೆ ಸಿಹಿಯು ಡೊಂಕೆ?
16) ಕಾಯಕವೇ ಕೈಲಾಸ.
17) ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
18) ಚಾರ ಅಣೆ ಕೋಳಿಗೆ ಬಾರಾಣೆ ಮಸಾಲೆ.
19) ಸಂಕಟ ಬಂದಾಗ ವೆಂಕಟರಮಣ.
20) ಕೆಟ್ಟ ಮೇಲೆ ಬುದ್ಧಿ ಬಂತು.

21) ಹಾಸಿಗೆ ಇದ್ದಷ್ಟು ಕಾಲು ಚಾಚು.
22) ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
23) ನಾಯಿ ಹಸಿದಾಗ ಅನ್ನ ಹಳಸಿತು.
24) ಕೋಪದಲ್ಲಿ ಕೂಯ್ದುಕೊಂಡ ಮೂಗು ಶಾಂತವಾದ ಮೇಲೆ ಬಾರದು.
25) ಕಳ್ಳನನ್ನ ನಂಬಿದರೂ ಸುಳ್ಳನನ್ನು ನಂಬಬಾರದು.
26) ಹಸಿವಿಲ್ಲದವನಿಗೆ ಮೊಸರಿನಲ್ಲು ಕಲ್ಲು ಸಿಗುತ್ತೆ.
27) ದುಡ್ಡೇ ದೊಡ್ಡಪ್ಪ, ಆದರೆ ವಿದ್ಯೆ ಅದರಪ್ಪ.
28) ದೇವರು ವರ ಕೊಟ್ರು ಪೂಜಾರಿ ಕೊಡಲ್ಲ.
29) ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
30) ತುಂಬಿದ ಕೊಡ ತುಳುಕಲ್ಲ.

31) ಅಗಸರ ನಾಯಿ ಹಳ್ಳಕ್ಕೂ ಅಲ್ಲ ಮನೆಗೂ ಅಲ್ಲ.
32) ಮನಸ್ಸಿದ್ದರೆ ಮಾರ್ಗ.
33) ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು.
34) ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು.
35) ಊರಿಗೆ ಬಂದವಳು ನೀರಿಗೆ ಬಾರಳೆ?
36) ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.
37) ಕೋಶ ಓದುವುದಕ್ಕಿಂತ ದೇಶ ಸುತ್ತು.
38) ಯಥಾ ರಾಜಾ ತಥಾ ಪ್ರಜಾ.
39) ಅತಿ ಆಸೆ ಗತಿ ಗೇಡು.
40) ಮುತ್ತು ಒಡೆದರೆ ಹೋಯಿತು ಮಾತು ಆಡಿದರೆ ಹೋಯಿತು.

41) ಆರೋಗ್ಯವೇ ಮಹಾಭಾಗ್ಯ.
42) ಹಾಲಿನ ದುಡ್ಡು ಹಾಲಿಗೆ, ನೀರಿನ ದುಡ್ಡು ನೀರಿಗೆ.
43) ಕಸ ತಿನ್ನುವುದಕ್ಕಿಂತ ತುಸು ತಿನ್ನು.
44) ರಾವಣ ಹೆಣ್ಣಿನಿಂದ ಕೆಟ್ಟರೆ, ಕೌರವ ಮಣ್ಣಿನಿಂದ ಕೆಟ್ಟನು.
45) ಮನೆ ಸಣ್ಣದಾದರೂ ಮನಸ್ಸು ದೊಡ್ಡದಾಗಿರಲಿ.
46) ಸಗಣಿಯವನ ಸರಸಕ್ಕಿಂತ ಗಂಧದವನ ಗುದ್ದಾಟವೇ ಲೇಸು...
47) ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು.
48) ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು.
49) ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ.
50) ವೇದ ಸುಳ್ಳಾದರೂ ಗಾದೆ ಸುಳ್ಳಾಗದು...
