1) Dreamನೊಂದಿಗೆ ಮಲಗಿ Aimನೊಂದಿಗೆ ಎದ್ದೇಳಿ. ಪ್ರತಿ ದಿನ ಕನಸಿನೊಂದಿಗೆ ಮಲಗಿಕೊಂಡು ಗುರಿಯೊಂದಿಗೆ ಎದ್ದೇಳಿ, ನಿಮಗೆ ಗೆಲುವು ನಿಶ್ಚಿತ...
2) ನಿಮ್ಮ ಕನಸುಗಳ ನನಸಿಗಾಗಿ ಸ್ವಲ್ಪ ನಿದ್ರೆಯನ್ನು ತ್ಯಾಗ ಮಾಡಿ. ಮಲಗಿಕೊಂಡು ನಿದ್ರೆಯಲ್ಲಿ ಕುರುಡು ಕನಸುಗಳನ್ನು ಕಾಣಬೇಡಿ. ಮೈಚಳಿ ಬಿಟ್ಟು ಕೆಲಸ ಮಾಡುತ್ತಾ ದೊಡ್ಡ ಕನಸುಗಳನ್ನು ಕಾಣಿ...
3) ಪ್ರತಿದಿನ ಸಂಜೆ ಆಫೀಸನಿಂದ ಅಥವಾ ಕೆಲಸದಿಂದ ಮನೆಗೆ ಬರುವಾಗ ನಿಮ್ಮೆಲ್ಲ ಟೆನ್ಶನಗಳನ್ನು, ನೆಗೆಟಿವ ಆಲೋಚನೆಗಳನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಒಳ ಬನ್ನಿ. ಸುಂದರ ರಾತ್ರಿಯನ್ನು ಸುಂದರವಾಗಿ ಅನುಭವಿಸಿ. ಅದನ್ನು ಬಿಟ್ಟು ಒಣ ಟೆನ್ಶನಗಳನ್ನು ತಲೆಯಲ್ಲಿ ತುಂಬಿಕೊಂಡು ಸಂಗಾತಿಯೊಡನೆ ಜಗಳಾಡಿ ರಾತ್ರಿಯೆಲ್ಲ ತಲೆದಿಂಬನ್ನು ತಬ್ಬಿಕೊಂಡು ಒದ್ದಾಡಬೇಡಿ...
4) ಎಲ್ಲೋ ಇರುವ ಗೊಳ್ಳು ಗೆಳೆಯರ ಭ್ರಮಾಲೋಕದಲ್ಲಿ ಮುಳುಗಿ ತಡರಾತ್ರಿಯ ತನಕ ನಿಮ್ಮ ಮೊಬೈಲನ್ನು ಬಳಸಬೇಡಿ. ಇದರಿಂದ ನಿಮ್ಮ ನಿದ್ದೆಯ ಜೊತೆಗೆ ಸಂಬಂಧಗಳು ಸಹ ಹಾಳಾಗುತ್ತವೆ. ರಾತ್ರಿಯಾಗುತ್ತಿದ್ದಂತೆಯೇ ಮೊಬೈಲನ್ನು ಮೂಲೆಗೆ ಬೀಸಾಕಿ ನಿಮ್ಮ ಸಂಗಾತಿಯೊಂದಿಗೆ ಮನಸ ಬಿಚ್ಚಿ ಮಾತಾಡಿ. ಸಂಗಾತಿಗೆ ಸಾಕಷ್ಟು ಸಮಯ ಕೊಡಿ. ಇದರಿಂದ ನಿಮ್ಮ ಲೈಫ ಸುಂದರವಾಗುವುದಷ್ಟೇ ಅಲ್ಲ ಸಕ್ಸೆಸಫುಲ ಸಹ ಆಗುತ್ತೆ...
5) ನೀವು ಒಂಟಿಯಾಗಿದ್ದಿರಿ ಎಂದು ಕೊರಗುತ್ತಾ ಮಲಗಬೇಡಿ. ನಿಮ್ಮನ್ನು ನೀವು ಪ್ರೀತಿಸಿ ಲೈಫಲ್ಲಿ ಬೇಗನೆ ಸೆಟ್ಲಾಗಿ, ಬೇಗನೆ ವೈಫ ಬಂದು ನಿಮ್ಮ ಒಂಟಿ ಬಾಳನ್ನು ಬೆಳಗುತ್ತಾಳೆ...
6) ಕನಸುಗಳನ್ನು ಕಾಣಲು ಯಾವುದೇ ಕರ ಕಟ್ಟಬೇಕಾಗಿಲ್ಲ. ಧೈರ್ಯವಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಾಣಿ. ನೀವು ಕನಸು ಕಾಣದಿದ್ದರೆ ನೀವು ಜೀವಂತ ಶವ ಎಂದರ್ಥ.
7) ಕಣ್ಣಿಲ್ಲದವರು ಕನಸು ಕಾಣುತ್ತಿರುವಾಗ ಕಣ್ಣೀರುವ ನಿಮಗೇನಾಗಿದೆ? ಎಷ್ಟೇ ಕಷ್ಟಗಳಿದ್ದರೂ ಕನಸು ಕಾಣಿ. ನಿಮ್ಮ ಕನಸು ನನಸಾದಾಗ ನಿಮ್ಮೆಲ್ಲ ಕಷ್ಟಗಳು ಮಾಯವಾಗುತ್ತವೆ...
8) ರಾತ್ರಿ ಕನಸಿನಲ್ಲಿ ಬೇರೆ ಹುಡುಗ ಅಥವಾ ಹುಡುಗಿಯರ ಬಗ್ಗೆ ಕಲ್ಪಿಸಿಕೊಳ್ಳುವುದಕ್ಕಿಂತ ನಿಮ್ಮ ಗುರಿಯನ್ನು ಕಲ್ಪಿಸಿಕೊಳ್ಳಿ. ಜೀವನದಲ್ಲಿ ಬೇಗನೆ ಸೆಟ್ಲಾಗುವ ಆಸೆಯಿದ್ದರೆ ಸೆಕ್ಸಿ ಕನಸುಗಳನ್ನು ಸಕ್ಸೆಸಫುಲ್ ಕನಸುಗಳಾಗಿ ಕನವರ್ಟ ಮಾಡಿ...
9) ನಿಮ್ಮ ನೋವುಗಳನ್ನು ಮರೆಯಲು ರಾತ್ರಿ ಒಂದು ವರವಾಗಿದೆ. ಮರೆವು ಕೂಡ ಒಂದು ವರವಾಗಿದೆ. ನಿಮಗೆ ನೋವನ್ನುಂಟು ಮಾಡಿದ ಎಲ್ಲ ಕೆಟ್ಟ ಸಂಗತಿಗಳನ್ನು ಅವತ್ತೇ ಮರೆತು ಬಿಡಿ. ಎಲ್ಲರನ್ನು ಕ್ಷಮಿಸಿ ಬಿಡಿ. ದಿನಾ ರಾತ್ರಿ ನಿಶ್ಚಿಂತೆಯಾಗಿ ಮಲಗಿ ಎಲ್ಲವೂ ನೀವೆಂದುಕೊಂಡಂತೆಯೆ ಆಗುತ್ತದೆ...
10) ನೀವು ಹಾಸಿಗೆಯ ಮೇಲೆ ಬೀಳುತ್ತಿದ್ದಂತೆ ನಿದ್ರಾದೇವಿ ನಿಮ್ಮನ್ನು ಆವರಿಸಿಕೊಂಡರೆ ನೀವು ಇವತ್ತು ಸಾಕಷ್ಟು ಕೆಲಸ ಮಾಡಿದ್ದೀರಿ ಎಂದರ್ಥ. ಯಾವತ್ತೂ ನಿಮಗೆ ನಿದ್ದೆ ಬರುವುದಿಲ್ಲವೋ ಅವತ್ತು ನೀವು ಕೆಲಸ ಮಾಡಿಲ್ಲವೆಂದರ್ಥ. ಸುಖವಾಗಿ ನಿದ್ದೆ ಬರುವಂತೆ ಕೆಲಸ ಮಾಡಿ...
11) ದಿನಾ ರಾತ್ರಿ ಮಲಗುವ ಮುಂಚೆ ನಿಮಗೆ ಇವತ್ತು ಸಹಾಯ ಮಾಡಿದವರಿಗೆ, ನಿಮ್ಮ ಸಂಕಷ್ಟಗಳನ್ನು ದೂರಾಗಿಸಿದವರಿಗೆ ಥ್ಯಾಂಕ್ಸ ಹೇಳುವುದನ್ನು ಮರೆಯಬೇಡಿ. ಹಾಗೇ ನಿಮ್ಮ ದೇವರಿಗೂ ಒಂದು ಥ್ಯಾಂಕ್ಸ ಹೇಳಿ ಖುಷಿಯಾಗಿ ಮಲಗಿ...
12) ರಾತ್ರಿ ಮಲಗುವಾಗ ಮುಖ ಉದಿಸಿಕೊಂಡು ಮಲಗಬೇಡಿ. ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆಗಳಿವೆ, ನಿಮಗಷ್ಟೇ ಸಮಸ್ಯೆಯಿಲ್ಲ. ಏನೇ ಇದ್ದರೂ ರಾತ್ರಿ ಮಲಗುವಾಗ ಮುಖದ ಮೇಲೆ ನಗು ಹೊತ್ತುಕೊಂಡು ಮಲಗಿ, ನಗು ಮುಖದೊಂದಿಗೆ ಎದ್ದೇಳಿ. ಆಗ ನಿಮ್ಮ ಜೀವನದಿಂದ ಎಲ್ಲ ನೋವುಗಳು ಬೇಗನೆ ದೂರಾಗುತ್ತವೆ...
13) ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ನೀವು ಚೆನ್ನಾಗಿ ನಿದ್ದೆ ಮಾಡಿದಷ್ಟು ಆ್ಯಕ್ಟೀವಾಗಿರುತ್ತೀರಾ, ಅಲ್ಲದೇ ನಿಮ್ಮ ಮುಖದ ಮೇಲೆ ಒಂದು ರಾಜಕಳೆ ಇರುತ್ತದೆ.
14) ಕೋಟ್ಯಾಂತರ ಜನ ನಿದ್ರೆ ಮಾಡುತ್ತಿರುವಾಗ ನೀವು ನಿದ್ದೆಗೆಟ್ಟು ಕೆಲಸ ಮಾಡಿ. ಮುಂದೊಂದಿನ ಎಲ್ಲರೂ ನಿದ್ದೆಗೆಟ್ಟು ಕೆಲಸ ಮಾಡುವಾಗ ನೀವು ಹಾಯಾಗಿ ನಿದ್ದೆ ಮಾಡಬಹುದು...
15) ಪ್ರತಿದಿನ ಮಲಗುವಾಗ ಒಳ್ಳೇ ಆಲೋಚನೆಗಳೊಂದಿಗೆ, ಪೋಜಿಟಿವ ಯೋಚನೆಗಳೊಂದಿಗೆ ಮಲಗಿ. ವಿಚಾರ ಒಳ್ಳೆದಾಗಿದ್ದರೆ ಎಲ್ಲವೂ ಹಂತಹಂತವಾಗಿ ಒಳ್ಳೆದಾಗುತ್ತದೆ...
16) ನಿಮಗೆ ಸಿಗುವ ಪ್ರತಿ ರಾತ್ರಿ ಬರೀ ರಾತ್ರಿಯಲ್ಲ, ಅದೊಂದು ಅಪಾರ್ಚುನಿಟಿ. ಈ ಅಪಾರ್ಚುನಿಟಿಯನ್ನು ಸರಿಯಾಗಿ ಬಳಸಿಕೊಂಡು ನಾಳೆಗೆ ಸಜ್ಜಾಗಿ...
17) ನಿಮ್ಮ ಕನಸು ಬೇಗನೆ ನನಸಾಗುತ್ತಿಲ್ಲ ಅಂತಾ ನಿರಾಶರಾಗಬೇಡಿ. ನೀವು ಸತ್ತ ಮೇಲೂ ನಿಮ್ಮ ಕನಸುಗಳು ನನಸಾಗುತ್ತವೆ. ಡಾ. ವಿಕ್ರಮ ಸಾರಾಭಾಯಿಯವರ ಕನಸಿನ ಕೂಸು ಆರ್ಯಭಟ ಅವರ ನಿಧನದ ನಂತರ ನಭಕ್ಕೆ ಹಾರಿತು. ಶೇಕ್ಸಪಿಯರ್ ಬರೆದ ನಾಟಕಗಳೆಲ್ಲವೂ ಅವನ ನಿಧನದ ನಂತರ ಪುಸ್ತಕ ರೂಪದಲ್ಲಿ ಪ್ರಕಟವಾದವು...
18) ರಾತ್ರಿಯಲ್ಲಿ ಕಗ್ಗತ್ತಲು ಜಾಸ್ತಿಯಾದಷ್ಟು ನಕ್ಷತ್ರಗಳು ಹೊಳೆಯುತ್ತವೆ. ಅದೇ ರೀತಿ ನಿಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚಾದಷ್ಟು ನೀವು ಬಲಿಷ್ಟರಾಗುತ್ತೀರಿ, ಬೆಳಕಿನಲ್ಲೂ ಹೊಳೆಯುತ್ತೀರಿ...
19) ನಕ್ಷತ್ರಗಳು ಕಾಣಿಸಲು ಕತ್ತಲಾಗಬೇಕು. ನಮಗೆ ನಾವು ಕಾಣಬೇಕೆಂದರೆ ನಮಗೆ ಕಷ್ಟಗಳು ಬರಬೇಕು...
20) ಮೊದಲ ಅವಕಾಶ ಕೈತಪ್ಪಿತು ಅಂತಾ ಕೊರಗಬೇಡಿ. ಸಜ್ಜಾಗಿ ಮುಂದಿನ ಅವಕಾಶಕ್ಕಾಗಿ ಕಣ್ತೆರೆದು ಕಾಯಿರಿ. ಬದುಕು ನಿಮಗೆ ನಾಳೆಯ ರೂಪದಲ್ಲಿ ಪದೇಪದೇ ಎರಡನೇ ಅವಕಾಶವನ್ನು ಕೊಡುತ್ತಲೇ ಇರುತ್ತದೆ...
21) ಸೋತಾಗ ಎಲ್ಲ ಮುಗೀತು ಅಂತಾ ಯಾವತ್ತೂ ಅನ್ಕೊಬೇಡಿ. ಏಕೆಂದರೆ ರಾತ್ರಿಯಾದ ಮೇಲೆ ಬೆಳಕು ಬರುವಂತೆ ಸೋಲಿನ ಹಿಂದೆ ಗೆಲುವು ಬರ್ತಾಯಿರುತ್ತೆ. ಸ್ವಲ್ಪ ತಾಳ್ಮೆಯಿಂದಿರಿ...
22) ನೆರಳಿಗೆ ಹೆದರಬೇಡಿ. ನೆರಳು ಬೀಳಲು ಸಹ ಬೆಳಕು ಬೇಕೆ ಬೇಕು. ನೆರಳು ಹೆದರಿಸಿದಾಗ ಅದರ ಬೆಳಕಿನ ಮೂಲ ಎಲ್ಲಿದೆ ಎಂಬುದನ್ನು ಹುಡುಕಿ ಸಾಕು...
23) ನಿಮಗೆ ರಾತ್ರಿ ಬಾಯ್ ಹೇಳಿದ ನಂತರವೂ ಆನಲೈನನಲ್ಲಿರುವವರಿಗೆ ಜಾಸ್ತಿ ಮಹತ್ವ ಕೊಡಬೇಡಿ. ನಿಮಗೊಸ್ಕರ ಆನಲೈನಗೆ ಬಂದು ನೀವು ಮಲಗಿದ ತಕ್ಷಣವೇ ಕನಸಲ್ಲಿ ಬಂದು ಭೇಟಿಯಾಗುವವರಿಗೆ ಮಹತ್ವ ಕೊಡಿ. ಏಕೆಂದರೆ ಗುಡ್ ಬಾಯ್ ಹೇಳುವವರಿಗಿಂತ ಗುಡ್ ನೈಟ ಹೇಳಿ ಸದಾ ಜೊತೆಗಿರುವವರು ಮುಖ್ಯ...
24) ನಿಜವಾಗಿಯೂ ಮಲಗಿರುವವರನ್ನು ಎಬ್ಬಿಸಬಹುದು. ಆದರೆ ಮಲಗಿದವರಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಅದಕ್ಕಾಗಿ ನಕಲಿ ಜನರನ್ನು ಕತ್ತಿಡಿದು ನಿಮ್ಮ ಜೀವನದಿಂದ ಆಚೆ ಕಳುಹಿಸಿ ಹ್ಯಾಪಿಯಾಗಿರಿ...
25) ನಿದ್ದೆಯೂ ಸಹ ಒಂದು ಬೆಸ್ಟ ಮೆಡಿಸಿನ ಆಗಿದೆ. ಅದನ್ನು ದಿನಾ ತಪ್ಪದೇ ಸರಿಯಾಗಿ ತೆಗೆದುಕೊಳ್ಳಿ...
26) ನಿಮ್ಮ ಕನಸುಗಳ ಮೇಲೆ ಸದಾ ಭರವಸೆಯಿಡಿ. ನಿಮ್ಮ ಕನಸುಗಳ ಮೇಲಿನ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಕನಸುಗಳೊಂದಿಗೆ ಮುನಿಸು ಬೇಡ...
27) ನೀವು ಎಲ್ಲದರಲ್ಲೂ ಎಲ್ಲರಿಗಿಂತ ಒಂದೊಜ್ಜೆ ಮುಂದೆ ಇರಬೇಕೆಂದರೆ ಬೇಗನೆ ಮಲಗಿ ಬೇಗನೆ ಎದ್ದೇಳಿ, ಬೇಗನೆ ನಿಮ್ಮ ಕೆಲಸವನ್ನು ಮಾಡಿ ಮುಗಿಸಿ...
28) ನಾಳೆಯ ಭಯ ನಿಮ್ಮನ್ನು ಹೆದರಿಸಿದಾಗ ಆತ್ಮವಿಶ್ವಾಸವೆಂಬ ತಲೆದಿಂಬನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿ. ಭಯ ತಾನಾಗಿಯೇ ನಿಮ್ಮಿಂದ ದೂರ ಓಡಿ ಹೋಗುತ್ತದೆ...
29) ಕೊರಗುವುದರಿಂದ ನಿಮ್ಮ ಕೆಟ್ಟ ಪರಿಸ್ಥಿತಿ ಬದಲಾಗಲ್ಲ. ಆದರೆ ಕೆಲಸ ಮಾಡುವುದರಿಂದ ನಿಮ್ಮ ಕೆಟ್ಟ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ...
30) ನಾಳೆ ನಿಮ್ಮ ಜೀವನದಲ್ಲಿ ಒಳ್ಳೆ ಸಂಗತಿಗಳು ಬರಬೇಕೆಂದರೆ ಇವತ್ತು ಮಲಗುವ ಮುಂಚೆ ಎಲ್ಲ ಕೆಟ್ಟ ಸಂಗತಿಗಳನ್ನು ಮರೆತು ಮಲಗಿ...
To be Continued...