ಮಹರ್ಷಿ ವಾಲ್ಮೀಕಿಯ ಜೀವನ ಕಥೆ - Life Story of Maharishi Valmiki in Kannada - Maharishi Valmiki Story in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮಹರ್ಷಿ ವಾಲ್ಮೀಕಿಯ ಜೀವನ ಕಥೆ - Life Story of Maharishi Valmiki in Kannada - Maharishi Valmiki Story in Kannada

                        ಮಹರ್ಷಿ ವಾಲ್ಮೀಕಿಯ ಜೀವನ ಕಥೆ - Life Story of Maharishi Valmiki in Kannada - Maharishi Valmiki Story in Kannada

                       ಗಂಗಾ ನದಿ ತೀರದ‌ ಅರಣ್ಯದಲ್ಲಿ ಪ್ರಚೇತಸ ಎಂಬ ಖುಷಿಯಿದ್ದನು. ಅವನಿಗೆ ರತ್ನಾಕರ ಎಂಬ ಮಗನಿದ್ದನು.‌ ಅವನು ಸಹ ತಂದೆಯಂತೆ ಸಜ್ಜನನಾಗಿದ್ದುಕೊಂಡು ಪೂಜಾಪಾಠ ಯಜ್ಞ ಹವಣಗಳಲ್ಲಿ ತೊಡಗಿಸಿಕೊಂಡಿದ್ದನು. ಅವನ ಮಡದಿಯೂ ಸಹ ಅವನಂತೆ ದೈವಭಕ್ತೆಯಾಗಿದ್ದಳು. ಅವನಿಗೆ ಪ್ರತಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು. ಅವರ ಜೀವನ ಸುಖಕರವಾಗಿ ಸಾಗಿತ್ತು. ಆದರೆ ಅವರಿದ್ದ ಪ್ರದೇಶದಲ್ಲಿ ಭೀಕರ ಬರಗಾಲ ಬಂದು ಅವರ ಬದುಕು ಸಾಗುವುದು ದುಸ್ತರವಾಯಿತು. ಆಗ ರತ್ನಾಕರ ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಆ ಜಾಗವನ್ನು ಬಿಟ್ಟು ದೂರ ಬಂದನು. ನಂತರ ರತ್ನಾಕರ ಒಂದು ಬೇಟೆಗಾರರ ಜನಾಂಗ ವಾಸಿಸುತ್ತಿದ್ದ ಅರಣಕ್ಕೆ ಬಂದನು. ಅವರ ಸಹವಾಸ ದೋಷದಿಂದ ಅವನು ಸಹ ಬೇಡರಂತೆ ವಾಸಿಸಲು ಪ್ರಾರಂಭಿಸಿದನು. ಅವನು ವಾಸಿಸುತ್ತಿದ್ದ ಕಾಡಿನ‌ ದಾರಿಯಲ್ಲಿ ಸಾಗುವ ಜನರನ್ನು ಹೆದರಿಸಿ ಅವರ ಹಣವನ್ನು ಕಿತ್ತುಕೊಂಡು ಅದರಲ್ಲಿ ‌ಜೀವನ ಮಾಡತೊಡಗಿದನು.‌ ಬೇರೆ ಜನರನ್ನು ಕಾಡಿಸಿ ಪೀಡಿಸಿ ಹೆದರಿಸಿ ಅವರ ಸಂಪತ್ತನ್ನು ಕಿತ್ತುಕೊಂಡು ಅದರಲ್ಲಿ ಬದುಕಲು ಪ್ರಾರಂಭಿಸಿದನು. 

ಮಹರ್ಷಿ ವಾಲ್ಮೀಕಿಯ ಜೀವನ ಕಥೆ - Life Story of Maharishi Valmiki in Kannada - Maharishi Valmiki Story in Kannada

                 ಒಮ್ಮೆ ರತ್ನಾಕರ ಕಾಡಿನ ದಾರಿಯಿಂದ ಹಾದು ಹೋಗುತ್ತಿರುವ ತಪಸ್ವಿಗಳ ಗುಂಪನ್ನು ತಡೆದು ನಿಲ್ಲಿಸಿದನು. ಹಣ ಕೊಡುವಂತೆ ಅವರನ್ನು ಹೆದರಿಸಿದರು.‌ ಆಗ ಆ ತಪಸ್ವಿಗಳು ಅವನಿಗೆ "ಈ ರೀತಿ ಕಂಡವರ ಹಣದಲ್ಲಿ ಬದುಕುವುದು ‌ಸರಿಯಲ್ಲ. ಈ ತರ ಕೆಟ್ಟದ್ದನ್ನು ಮಾಡಿದರೆ ಖಂಡಿತ ನಿನಗೆ ಕೆಟ್ಟದಾಗುತ್ತದೆ.‌ ನಿನ್ನ ಪಾಪದ ಫಲವನ್ನು ‌ನೀನೇ ಅನುಭವಿಸಬೇಕಾಗುತ್ತದೆ. ನಿನ್ನ‌‌ ಹೆಂಡತಿ ಮಕ್ಕಳು ಸಹ ನಿನ್ನ ಪಾಪದಲ್ಲಿ ಪಾಲನ್ನು ತೆಗೆದುಕೊಳ್ಳಲಾರರು..." ಎಂದು ಎಚ್ಚರಿಸಿದರು. ಆದರೆ ರತ್ನಾಕರ ಅವರ ಮಾತಿನರ್ಥವನ್ನು ಅರಿಯದೇ "ನಾನು ಇಷ್ಟೆಲ್ಲ ಮಾಡುವುದು ನನ್ನ ಹೆಂಡತಿ ಮಕ್ಕಳಿಗಾಗಿಯೇ ತಾನೇ? ಅವರೇಕೆ ನನ್ನ ಪಾಪದಲ್ಲಿ ಪಾಲನ್ನು ತೆಗೆದುಕೊಳ್ಳುವುದಿಲ್ಲ? ಖಂಡಿತ ತೆಗೆದುಕೊಳ್ಳುತ್ತಾರೆ..." ಎಂದು ಉತ್ತರಿಸಿದನು. ಆಗ ತಪಸ್ವಿಗಳು ನಸು ನಗುತ್ತಾ ಅವನಿಗೆ "ಯಾರು ಸಹ‌ ನಿನ್ನ ಪಾಪದಲ್ಲಿ ಪಾಲನ್ನು ‌ತೆಗೆದುಕೊಳ್ಳುವುದಿಲ್ಲ. ಅನುಮಾನವಿದ್ದರೆ ಹೋಗಿ ನಿನ್ನ ಹೆಂಡತಿ ಮಕ್ಕಳನ್ನು ಕೇಳಿಕೊಂಡು ಬಾ..." ಎಂದರು.

                          ರತ್ನಾಕರ ತಪಸ್ವಿಗಳ‌ ಮಾತಿನಿಂದ ವಿಚಲಿತನಾಗಿ ತನ್ನ ಹೆಂಡತಿ ಮಕ್ಕಳನ್ನು "ನನ್ನ ಪಾಪದಲ್ಲಿ ಪಾಲನ್ನು ತೆಗೆದುಕೊಳ್ಳುವಿರಾ?" ಎಂದು ಕೇಳಲು ಮನೆಗೆ ಹೋಗಲು ಮುಂದಾದನು. ಆದರೆ ಅಷ್ಟರಲ್ಲಿ ಅವನ ತಲೆಯಲ್ಲಿ "ನಾನು ಮನೆಗೆ ಹೋಗಿ ಬರುವಷ್ಟರಲ್ಲಿ ಈ ತಪಸ್ವಿಗಳು ಓಡಿ ಹೋದರೆ?" ಎಂಬ ಅನುಮಾನ ಮೂಡಿತು. ಅದಕ್ಕಾತ ಅವರನ್ನು ಅಲ್ಲಿದ್ದ ಮರಕ್ಕೆ ಕಟ್ಟಿ ಆತುರದಿಂದ ಮನೆಗೆ ಹೋದನು. ಮನೆಗೆ ಹೋಗಿ ಅವನ ಹೆಂಡತಿಗೆ ನೇರವಾಗಿ "ನೀನು ನಾನು ಮಾಡುತ್ತಿರುವ ಪಾಪದಲ್ಲಿ ಪಾಲು ತೆಗೆದುಕೊಳ್ಳುತ್ತಿಯಾ?" ಎಂದು ಕೇಳಿದನು. ಆಗ ಅವನ ಹೆಂಡತಿ ಅವನಷ್ಟೇ ನೇರವಾಗಿ "ಇಲ್ಲ" ಎಂದು ಹೇಳಿದಳು.‌ ಆಗಾತ ಅವಳೊಂದಿಗೆ "ಯಾಕೆ ತೆಗೆದುಕೊಳ್ಳುವುದಿಲ್ಲ? ನಾನು ಇಷ್ಟೆಲ್ಲ ಪಾಪ ಮಾಡುತ್ತಿರುವುದು ನಿನ್ನನ್ನು ಮತ್ತು ಮಕ್ಕಳನ್ನು ಸಾಕಲು ತಾನೇ?" ಎಂದು ವಾದಿಸಿದನು. ಆಗಾಕೆ ಅವನಿಗೆ "ನಮ್ಮನ್ನು ಸಾಕುವುದು ನಿನ್ನ ಕರ್ತವ್ಯ. ಅದಕ್ಕಾಗಿ ನೀನು ಪಾಪ ಮಾಡಬೇಕಾಗಿಲ್ಲ. ನೀನು ಬೇರೆ ಕೆಲಸ ಮಾಡಿ ನಮ್ಮನ್ನು ಸಾಕಬಹುದು" ಎಂದಳು. ಅವನಿಗೆ ಆ ಕ್ಷಣವೇ "ಯಾರು ಸಹ ನನ್ನ ಪಾಪದಲ್ಲಿ ಪಾಲನ್ನು ತೆಗೆದುಕೊಳ್ಳುವುದಿಲ್ಲ. ನಾನು ಮಾಡಿದ ಪಾಪದ ಫಲವನ್ನು ನಾನೋಬ್ಬನೇ ಅನುಭವಿಸಬೇಕಾಗುತ್ತದೆ" ಎಂಬುದು ಅರ್ಥವಾಯಿತು. ಕೂಡಲೇ ಆತ ಆ ತಪಸ್ವಿಗಳ ಕಡೆಗೆ ಓಡಿದನು. 

ಮಹರ್ಷಿ ವಾಲ್ಮೀಕಿಯ ಜೀವನ ಕಥೆ - Life Story of Maharishi Valmiki in Kannada - Maharishi Valmiki Story in Kannada

                  ರತ್ನಾಕರ ಆ ತಪಸ್ವಿಗಳ ಕಡೆಗೆ ಓಡುತ್ತಾ ಹೋಗಿ ಅವರ ಕಟ್ಟುಗಳನ್ನು ಬಿಚ್ಚಿದನು. ಕೂಡಲೇ ಅವರ ಕಾಲಿಗೆ ಅಡ್ಡ ಬಿದ್ದು "ನನ್ನ ಹೆಂಡತಿ ಮಕ್ಕಳು ನಾನು ಮಾಡಿದ ಪಾಪದಲ್ಲಿ ಪಾಲನ್ನು ತೆಗೆದುಕೊಳ್ಳಲು ತಯಾರಿಲ್ಲ. ಹೇಗಾದರೂ ಮಾಡಿ ನನ್ನನ್ನು ಕಾಪಾಡಿ..." ಎಂದು ಬೇಡಿಕೊಂಡನು. ಆಗ ಆ ತಪಸ್ವಿಗಳು ಅವನಿಗೆ "ನೀನು ಈ ಮರದ ಕೆಳಗೆ ಕುಳಿತು ರಾಮ ನಾಮವನ್ನು ಜಪಿಸು ನಿನ್ನೆಲ್ಲ ಪಾಪ ಪರಿಹಾರವಾಗುತ್ತದೆ" ಎಂದೇಳಿ ಹೋದರು. ನಂತರ ರತ್ನಾಕರ ಆ ಮರದ ಕೆಳಗೆ ಕುಳಿತು ರಾಮ ನಾಮವನ್ನು ಜಪಿಸಲು ಪ್ರಾರಂಭಿಸಿದನು. ಆದರೆ ಅವನು ಮಾಡಿದ ಘೋರ ಪಾಪದಿಂದಾಗಿ ರಾಮ ನಾಮ ಅವನ ನಾಲಿಗೆಯಿಂದ ಹೊರಬರಲಿಲ್ಲ. ಅವನು ಎಷ್ಟೋ ದಿನಗಳ ಕಾಲ ಮರಾಮರಾ ಎಂದು ಜಪಿಸಿದನು. ನಂತರ ಅವನ ಪಾಪದ ಪ್ರಾಯಶ್ಚಿತ್ತವಾಗುತ್ತಿದ್ದಂತೆ ಅವನ ಬಾಯಿಯಿಂದ ರಾಮ ನಾಮ ಹೊರಬಂತು. ಅವನು ರಾಮ ರಾಮ ಎಂದು ಜಪಿಸಲು ಪ್ರಾರಂಭಿಸಿದನು. ಅವನು ಹಾಗೇ ರಾಮ ನಾಮವನ್ನು ಜಪಿಸುತ್ತಾ ಅದೇ ಮರದ‌ ಕೆಳಗೆ ಕುಳಿತನು. ಅವನ ಮೇಲೆ ಹುತ್ತ ಬೆಳೆದದ್ದು ಅವನಿಗೆ ಗೊತ್ತೆ ಆಗಲಿಲ್ಲ. ಅಷ್ಟರ ಮಟ್ಟಿಗೆ ಅವನು ರಾಮ ನಾಮದಲ್ಲಿ ಮುಳುಗಿದ್ದನು. 

ಮಹರ್ಷಿ ವಾಲ್ಮೀಕಿಯ ಜೀವನ ಕಥೆ - Life Story of Maharishi Valmiki in Kannada - Maharishi Valmiki Story in Kannada

                   ಒಂದಿನ ಅವನಿಗೆ ರಾಮ ನಾಮ ಜಪಿಸಲು ಹೇಳಿದ ತಪಸ್ವಿಗಳ‌ ಗುಂಪು ಅದೇ ಕಾಡಿನ ರಸ್ತೆಯ ಮೂಲಕ‌ ಹೊರಟಿತ್ತು. ಆಗ ಅವರಿಗೆ ಹುತ್ತದಿಂದ ರಾಮ ನಾಮ ಕೇಳಿ ಬಂತು. ಆಗವರು ಆ ಹುತ್ತವನ್ನು ಒಡೆದು ನೋಡಿದರೆ ಅವರಿಗೆ ಆಶ್ಚರ್ಯವಾಯಿತು. ಅವನ ಕಠಿಣ ತಪಸ್ಸನ್ನು ಮೆಚ್ಚಿ ಅವರು ಅವನಿಗೆ ವಾಲ್ಮೀಕಿ ಎಂದು ಹೆಸರಿಟ್ಟರು. ಸಂಸ್ಕೃತದಲ್ಲಿ ವಾಲ್ಮೀಕ ಎಂದರೆ ಹುತ್ತ  ಎಂದರ್ಥ. ನಂತರ ವಾಲ್ಮೀಕಿ ತಮಸಾ ನದಿ ತೀರದಲ್ಲಿ ತನ್ನದೇ‌ ಆದ‌ ಒಂದು ಆಶ್ರಮ ಮಾಡಿಕೊಂಡು ತನ್ನ  ಶಿಷ್ಯರೊಂದಿಗೆ ವಾಸಿಸತೊಡಗಿದನು. ಒಂದಿನ ನಾರದ ಮಹರ್ಷಿಗಳು ವಾಲ್ಮೀಕಿಯ‌ ಆಶ್ರಮಕ್ಕೆ ಬಂದು ಅವನಿಗೆ ಮತ್ತು ಅವನ ಶಿಷ್ಯರಿಗೆ ಶ್ರೀರಾಮನ ಚರಿತ್ರೆಯ ಬಗ್ಗೆ ಅಲ್ಪಸ್ವಲ್ಪ ವಿವರಿಸಿ ಹೋದರು. 

                 ಶ್ರೀರಾಮನ ಚರಿತ್ರೆಯನ್ನು ಕೇಳಿ ವಾಲ್ಮೀಕಿಯ ಮನಸ್ಸು ಸಂಪೂರ್ಣವಾಗಿ ಕರಗಿತು. ಅವನ ಮನಸ್ಸಲ್ಲಿ ಕರುಣೆ ತುಂಬಿತು. ಅವತ್ತಿನಿಂದ ವಾಲ್ಮೀಕಿ ಮಹರ್ಷಿ ವಾಲ್ಮೀಕಿಯಾದನು‌. ಒಂದಿನ ಮಧ್ಯಾಹ್ನ ಮಹರ್ಷಿ ವಾಲ್ಮೀಕಿಯವರು ಸ್ನಾನ ಮಾಡಲು ತಮಸಾ ನದಿಗೆ ಹೋದರು. ಸ್ನಾನ ಮಾಡಿ ಮರಳಿ ಬರುವಾಗ ಅವರಿಗೆ ಎರಡು ಜೋಡಿ ಕ್ರೌಂಚ ಪಕ್ಷಿಗಳು ಕಾಣಿಸಿದವು. ಅವರೆಡು ಬಹಳಷ್ಟು ಮುದ್ದಾಗಿದ್ದವು. ತಮ್ಮ ಪ್ರೇಮ ವಿಲಾಪದಲ್ಲಿ ಮುಳುಗಿದ್ದವು. ಅಷ್ಟರಲ್ಲಿ ಒಂದು ಬಾಣ ವೇಗವಾಗಿ ಬಂದು ಗಂಡು ಕ್ರೌಂಚ ಪಕ್ಷಿಗೆ ಚುಚ್ಚಿತು. ಅದು ಸ್ಥಳದಲ್ಲೇ ಸಾವನ್ನಪ್ಪಿತು. ಕಣ್ಣೆದುರು ಗಂಡನ ಸಾವನ್ನು ನೋಡಿ ಹೆಣ್ಣು ಕ್ರೌಂಚ ಪಕ್ಷಿ ಕೂಡ ಎದೆಯೊಡೆದುಕೊಂಡು ಸತ್ತಿತ್ತು. ಈ ದೃಶ್ಯವನ್ನು ನೋಡಿ ವಾಲ್ಮೀಕಿ ಮಹರ್ಷಿಯವರ ಮನಸ್ಸು ಬಹಳಷ್ಟು ಮರುಗಿತು‌. ಅವರು ಆ ಬಾಣ ಬಿಟ್ಟ ಬೇಡನಿಗೆ ಬಹಳಷ್ಟು ಬೈದರು. ಆದರೆ ಆಗ ಅವರ ಬಾಯಿಂದ ಬಂದ ಮಾತುಗಳು ಛಂದಸ್ಸಿನ ಶ್ಲೋಕ ರೂಪದಲ್ಲಿದ್ದವು. ಅದೇ ಕೊರಗಿನಲ್ಲಿ ಅವರು ಆಶ್ರಮಕ್ಕೆ ಬಂದರು. 

                       ಅವರು ಆಶ್ರಮಕ್ಕೆ ಬಂದು ವಿಶ್ರಮಿಸಿಕೊಳ್ಳುತ್ತಿದ್ದರು. ಸಂಜೆಯಾಗಿ ಸೂರ್ಯಾಸ್ತದ ಸಮಯವಾಗಿತ್ತು. ಅದೇ ಸಮಯದಲ್ಲಿ ಸೃಷ್ಟಿಕರ್ತ ಬ್ರಹ್ಮದೇವ ಅವರ ಆಶ್ರಮದಲ್ಲಿ ‌ಪ್ರತ್ಯಕ್ಷನಾದನು. ಕರುಣಾಮಯಿ ಹೃದಯದ ವಾಲ್ಮೀಕಿ ‌ಮಹರ್ಷಿಗಳಿಗೆ ಶ್ರೀರಾಮನ ಚರಿತ್ರೆ ಸಂಪೂರ್ಣವಾಗಿ ಕಾಣುವಂತೆ ಅನುಗ್ರಹಿಸಿದನು. ಆನಂತರ ವಾಲ್ಮೀಕಿ ‌ಮಹರ್ಷಿಗಳು ಶ್ರೀರಾಮನ ಚರಿತ್ರೆಯನ್ನು "ರಾಮಾಯಣ" ಎಂಬ ಹೆಸರಿನಿಂದ ಕಾವ್ಯ ರೂಪದಲ್ಲಿ ರಚಿಸಿದರು. ಅದು ಸಂಸ್ಕೃತದ ಮೊದಲ ಕಾವ್ಯವಾಯಿತು. ಅದಕ್ಕಾಗಿ ರಾಮಾಯಣವನ್ನು ಆದಿಕಾವ್ಯ ಹಾಗೂ ವಾಲ್ಮೀಕಿ ಮಹರ್ಷಿಯವರನ್ನು ಆದಿಕವಿ ಎಂದು ಕರೆಯುತ್ತಾರೆ. ವಾಲ್ಮೀಕಿ ‌ಮಹರ್ಷಿಗಳು ರಾಮಾಯಣ ಕಾಲದಲ್ಲಿದ್ದುಕೊಂಡೆ ರಾಮಾಯಣವನ್ನು ಬರೆದರು ಎಂಬುದು ವಿಶೇಷ. ರಾಮನ ಮಕ್ಕಳು ಲವಕುಶರು ಇವರ ಮೊದಲ‌ ಶಿಷ್ಯರು ಎಂಬುದು ಸಹ ಒಂದು ದೊಡ್ಡ ವಿಶೇಷ. ಲವಕುಶರು ರಾಮಾಯಣವನ್ನು ಕಾವ್ಯ ರೂಪದಲ್ಲಿ ಹಾಡುತ್ತಾ ಅದರ ಪ್ರಚಾರ ಮಾಡಿದರು. ನಂತರ ಭರತ ಮುನಿಯ ಶಿಷ್ಯರು ಅದನ್ನು ನಾಟಕ ರೂಪದಲ್ಲಿ ಅಭಿನಯಿಸಿ ಪ್ರಚಾರ ಮಾಡಿದರು. ಇದೀಷ್ಟು ಮಹರ್ಷಿ ವಾಲ್ಮೀಕಿಯವರ ಸಣ್ಣ ಜೀವನಕಥೆ. ನಿಮಗೀದು ಇಷ್ಟವಾಗಿದ್ದರೆ ಇದನ್ನು ಲೈಕ ಮಾಡಿ ಶೇರ್ ಮಾಡಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ ಮಾಡಿ. ಧನ್ಯವಾದಗಳು......

Best wishes of Maharishi Valmiki in Kannada ಕನ್ನಡದಲ್ಲಿ ಮಹರ್ಷಿ ವಾಲ್ಮೀಕಿಯ ಶುಭಾಶಯಗಳು


Blogger ನಿಂದ ಸಾಮರ್ಥ್ಯಹೊಂದಿದೆ.