35+ ಗಾಂಧೀಜಿಯವರ ಚಿಂತನೆಗಳು : Mahatma Gandhi Thoughts and Quotes in Kannada : mahatma gandhi life story in kannada
ಮಹಾತ್ಮಾ ಗಾಂಧೀಜಿಯವರ ಜನನ ಅಕ್ಟೋಬರ್ 2, 1869ರಲ್ಲಿ ಗುಜರಾತಿನ ಪೋರಬಂದರನಲ್ಲಿ ಒಂದು ಹಿಂದು ಪರಿವಾರದಲ್ಲಾಯಿತು. ಇವರ ತಂದೆ ಕರಮಚಂದ ಹಾಗೂ ತಾಯಿ ಪುತಲಿಬಾಯಿ. ಗಾಂಧೀಜಿಯವರ ಜನ್ಮದಿನ ಅಕ್ಟೋಬರ್ 2ನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸುತ್ತಾರೆ.
ಗಾಂಧೀಜಿಯವರ ಆರಂಭಿಕ ಪ್ರಾಥಮಿಕ ಶಿಕ್ಷಣ ರಾಜಕೋಟನಲ್ಲಾಯಿತು. ಅವರು ತಮ್ಮ 18ನೇ ವಯಸ್ಸಿಗೆ ಅಹಮದಾಬಾದನಲ್ಲಿ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿದರು. 1883ರಲ್ಲಿ ಗಾಂಧೀಜಿಯವರಿಗೆ 13ನೇ ವಯಸ್ಸಿನಲ್ಲೇ 14 ವರ್ಷದ ಕಸ್ತೂರಬಾ ಅವರೊಡನೆ ಬಾಲ್ಯ ವಿವಾಹವಾಗಿತ್ತು. ಅವರ ಓದು ಹಾಗೂ ವೈವಾಹಿಕ ಜೀವನ ಎರಡು ಒಟ್ಟೊಟ್ಟಿಗೆ ಸಾಗಿದವು. ಗಾಂಧೀಜಿಯವರು ಬಾಲ್ಯದಲ್ಲಿ ದುಶ್ಚಟಗಳಿಗೆ ಅಂಟಿಕೊಂಡಿದ್ದರು. ನಂತರ ಶ್ರವಣಕುಮಾರ ಹಾಗೂ ರಾಜಾ ಹರಿಶ್ಚಂದ್ರ ನಾಟಕಗಳಿಂದ ಪ್ರಭಾವಿತರಾಗಿ ಎಲ್ಲ ದುಶ್ಚಟಗಳನ್ನು ಬಿಟ್ಟು ಒಳ್ಳೆ ದಾರಿ ಹಿಡಿದರು. ಇದರ ಬಗ್ಗೆ ಹಾಗೂ ಕಸ್ತೂರಬಾರವರ ಬಗ್ಗೆ ತಿಳಿದುಕೊಳ್ಳಲು ನೀವೊಮ್ಮೆ ಗಾಂಧೀಜಿಯವರ ಆತ್ಮಕಥೆ "My Experiment with Truth"ನ್ನು ಓದಲೇಬೇಕು. ಇದನ್ನೊಮ್ಮೆ ಓದಿ, ನಿಮ್ಮ ಆಲೋಚನೆಗಳು ಖಂಡಿತ ಪರಿಶುದ್ಧವಾಗುತ್ತವೆ.
ಗಾಂಧೀಜಿಯವರ ಆತ್ಮಕಥೆ ಲಿಂಕ್ (Kannada Book)- https://amzn.to/3l4yL5q
My Experiment with Truth (English Book) - https://amzn.to/36oxa67

ಹೈಸ್ಕೂಲ್ ಶಿಕ್ಷಣ ಮುಗಿಸಿದ ನಂತರ ಗಾಂಧೀಜಿಯವರು ಕಾನೂನು ಪದವಿ ಪಡೆದುಕೊಳ್ಳಲು ಲಂಡನಿಗೆ ಹೋಗಲು ನಿರ್ಧರಿಸಿದರು. ಆದರೆ ಗಾಂಧೀಜಿಯವರು ಲಂಡನಿಗೆ ಹೋಗುವುದು ಅವರ ತಾಯಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅಲ್ಲದೇ ಕಸ್ತೂರಬಾರಿಗೆ ವಿರಹ ವೇದನೆಯನ್ನು ಕೊಡುವುದು ಸರಿಯಿರಲಿಲ್ಲ. ಆದರೂ ಅವರು ತಮ್ಮ ತಾಯಿಗೆ "ಲಂಡನನಲ್ಲಿ ಮದ್ಯ, ಮಾಂಸ ಹಾಗೂ ಹೆಣ್ಣನ್ನು ಮುಟ್ಟಲ್ಲ..." ಎಂದು ಮಾತು ಕೊಟ್ಟು ಲಂಡನಿಗೆ ಹೋದರು. ಲಂಡನಿನ ಇನ್ನರ ಟೆಂಪಲನಲ್ಲಿ ಕಾನೂನು ತರಬೇತಿ ಪಡೆದು 1891ರಲ್ಲಿ ತಮ್ಮ 22ನೇ ವಯಸ್ಸಿಗೆ ಬಾರ್ ಪದವಿ ಪಡೆದರು. ನಂತರ ಭಾರತಕ್ಕೆ ಮರಳಿದರು. ಲಂಡನನಿಂದ ಮರಳಿ ಬಂದಾಗ ಮುಂಬೈನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಯಶಸ್ವಿಯಾದರು. 2 ವರ್ಷ ಸಣ್ಣಪುಟ್ಟ ಕಾನೂನು ಕೆಲಸಗಳನ್ನು ಮಾಡಿದರು. ನಂತರ ತಮ್ಮ ವಕೀಲಿ ವೃತ್ತಿಯನ್ನು ಪ್ರ್ಯಾಕ್ಟೀಸ್ ಮಾಡುವುದಕ್ಕಾಗಿ 1893ರಲ್ಲಿ ದಕ್ಷಿಣ ಆಫ್ರಿಕಾಗೆ ತೆರಳಿದರು. ಅಲ್ಲಿಯೇ 21 ವರ್ಷಗಳ ಕಾಲ ಇದ್ದರು. ಅಲ್ಲಿ ಅವರು ಭಾರತೀಯ ವ್ಯಾಪಾರಿಗಳ ಪರವಾಗಿ ಬ್ರಿಟಿಷರೊಂದಿಗೆ ಕಾನೂನಾತ್ಮಕವಾಗಿ ಹೋರಾಡಿದರು. ಸ್ವಾತಂತ್ರ್ಯ ಹಾಗೂ ನಾಗರಿಕ ಹಕ್ಕುಗಳಿಗಾಗಿ ಅಹಿಂಸಾತ್ಮಕ ಆಂದೋಲನವನ್ನು ಪ್ರಾರಂಭಿಸಿದರು.

1915ರಲ್ಲಿ ತಮ್ಮ 45ನೇ ವಯಸ್ಸಿಗೆ ಮತ್ತೆ ಭಾರತಕ್ಕೆ ಮರಳಿದರು. ಅತಿಯಾದ ಭೂ ತೆರಿಗೆ, ರೈತರ ಲೂಟಿ, ಕಾರ್ಮಿಕರ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಪ್ರಾರಂಭಿಸಿದರು. 1921ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವವನ್ನು ವಹಿಸಿಕೊಂಡ ನಂತರ ಬಡತನ ನಿರ್ಮೂಲನೆ, ಮಹಿಳೆಯರ ಹಕ್ಕುಗಳು, ಅಸ್ಪೃಶ್ಯತೆ ನಿರ್ಮೂಲನೆ, ಧಾರ್ಮಿಕ ಸಾಮಾಜಿಕ ಏಕತೆ ಹಾಗೂ ಪೂರ್ಣ ಸ್ವರಾಜ್ಯಕ್ಕಾಗಿ ರಾಷ್ಟ್ರವ್ಯಾಪಿ ಆಂದೋಲನವನ್ನು ಕೈಗೊಂಡರು.
ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ಪಣತೊಟ್ಟರು. ಭಾರತೀಯರಲ್ಲಿ ಸ್ವಾಭಿಮಾನ ಹಾಗೂ ಆರ್ಥಿಕ ಸ್ವಾತಂತ್ರ್ಯದ ಅರಿವು ಮೂಡಿಸಲು ಬಟ್ಟೆ ತ್ಯಜಿಸಿ ನಮ್ಮ ದೇಶಿಯ ಖಾದಿ ಶಾಲು, ಖಾದಿ ಧೋತಿ ಧರಿಸಲು ಪ್ರಾರಂಭಿಸಿದರು. ತಾವೇ ಚರಕ ಹಿಡಿದು ಖುದ್ದಾಗಿ ನೂಲನ್ನು ನೇಯ್ದು ಖಾದಿ ಬಟ್ಟೆಗಳನ್ನು ತಯಾರಿಸಿದರು. ಸರಳ ಸಸ್ಯಾಹಾರ ಸೇವನೆ, ಸ್ವಚ್ಛತೆ, ಸತ್ಯ, ಅಹಿಂಸೆ, ತ್ಯಾಗ ಜೀವನದ ಬಗ್ಗೆ ಪ್ರತಿಪಾದಿಸಿದರು. ಅಹಿಂಸಾತ್ಮಕವಾಗಿ ಹಲವಾರು ಆಂದೋಲನಗಳನ್ನು ಮಾಡಿದರು. ಉಪವಾಸ ಸತ್ಯಾಗ್ರಹಗಳನ್ನು ಮಾಡಿದರು. ಪಾದಯಾತ್ರೆಗಳನ್ನು ಮಾಡಿದರು. ಇದಕ್ಕಾಗಿ ಜೈಲುವಾಸವನ್ನು ಸಹ ಅನುಭವಿಸಿದರು. 1942ರಲ್ಲಿ ಬ್ರಿಟಿಷರಿಗೆ "ಬ್ರಿಟಿಷರೇ ಭಾರತ ಬಿಟ್ಟು ತೊಲಗಿ..." ಎಂಬ ಎಚ್ಚರಿಕೆಯನ್ನು ಕೊಟ್ಟರು. ಕೋಟ್ಯಾಂತರ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಿ ಬ್ರಿಟಿಷರನ್ನು ಮಧ್ಯರಾತ್ರಿ ದೇಶಬಿಟ್ಟು ಓಡಿ ಹೋಗುವಂತೆ ಮಾಡಿದರು. ಸತ್ಯ ಹಾಗೂ ಅಹಿಂಸೆಯ ಅಸ್ತ್ರಗಳಿಂದ ಭಾರತವನ್ನು ಸ್ವತಂತ್ರಗೊಳಿಸಿದರು. ಅದಕ್ಕಾಗಿಯೇ ಅವರಿಗೆ ಮಹಾತ್ಮಾ, ರಾಷ್ಟ್ರಪಿತ, ಬಾಪೂಜಿ ಅಂತೆಲ್ಲ ಕರೆಯುತ್ತಾರೆ.

ಮಹಾತ್ಮಾ ಗಾಂಧೀಜಿಯವರ ಚಿಂತನೆಗಳು : Thoughts of Mahatma Gandhiji in Kannada - Quotes of Mahatma Gandhiji in Kannada
1) ಮನುಷ್ಯ ಅವನ ಯೋಚನೆಗಳ ಉತ್ಪನ್ನವಾಗಿದ್ದಾನೆ. ಅವನ ಯೋಚನೆಯಂತೆ ಅವನಾಗುತ್ತಾನೆ.
2) ನನ್ನ ಅನುಮತಿಯಿಲ್ಲದೆ ಯಾರು ನನ್ನನ್ನು ನೋಯಿಸಲಾರರು.
3) ನೀವು ಏನು ಯೋಚಿಸುತ್ತಿರಿ, ಏನು ಮಾತಾಡುತ್ತಿರಿ ಮತ್ತು ಏನು ಮಾಡುತ್ತಿರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿರ್ಧಾರಿತವಾಗುತ್ತದೆ.
4) ದುರ್ಬಲರಿಗೆ ಬೇರೆಯವರನ್ನು ಕ್ಷಮಿಸುವ ಸಾಮರ್ಥ್ಯವಿರಲ್ಲ. ಕ್ಷಮೆ ಎಂಬುದು ಪ್ರಬಲರ ಲಕ್ಷಣವಾಗಿದೆ.
5) ಸಾವಿರ ಮಾತುಗಳಿಗಿಂತ ಒಂದು ಎಳ್ಳಷ್ಟು ಕೆಲಸಕ್ಕೆ ಬೆಲೆ ಜಾಸ್ತಿಯಿದೆ.
6) ಪ್ರೀತಿಯನ್ನು ಪ್ರದರ್ಶಿಸುವಲ್ಲಿ ಹೇಡಿಗಳು ಅಸಮರ್ಥರಾಗಿದ್ದಾರೆ. ಇದು ಧೈರ್ಯಶಾಲಿಗಳ ಅಧಿಕಾರವಾಗಿದೆ.
7) ನೀವು ನಾಳೆ ಸಾಯುವವರಿದ್ದೀರಿ ಎಂಬಂತೆ ಬದುಕಿ. ಶಾಶ್ವತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಯಿರಿ.
8) ಸ್ವಾತಂತ್ರ್ಯ ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಕೊಡದಿದ್ದರೆ ಅದು ಯೋಗ್ಯವಾಗಿಲ್ಲ.
9) ಸಂತೋಷವಿಲ್ಲದೆ ಸಲ್ಲಿಸುವ ಸೇವೆ ನಿರರ್ಥಕವಾಗಿದೆ. ಅದು ಸೇವಕನಿಗೂ ಸಹಾಯ ಮಾಡುವುದಿಲ್ಲ, ಮಾಲೀಕನಿಗೂ ಸಹಾಯ ಮಾಡುವುದಿಲ್ಲ.
10) ನಿಮ್ಮನ್ನು ನೀವು ಕಂಡುಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಬೇರೆಯವರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಂಡು ಬಿಡುವುದು.
11) ನೀವು ಸೌಮ್ಯ ರೀತಿಯಲ್ಲಿ ಈಡೀ ಜಗತ್ತನ್ನು ಅಲುಗಾಡಿಸಬಹುದು.
12) ನಿಮಗೆ "ನಾನು ಅದನ್ನು ಮಾಡಬಲ್ಲೆ..." ಎಂಬ ನಂಬಿಕೆಯಿದ್ದರೆ ನಿಮಗೆ ಆರಂಭದಲ್ಲಿ ಸಾಮರ್ಥ್ಯವಿರದಿದ್ದರೂ ಕೆಲಸ ಮಾಡಲು ಪ್ರಾರಂಭಿಸಿದಾಗ ಆ ಸಾಮರ್ಥ್ಯ ಖಂಡಿತವಾಗಿಯೂ ಬರುತ್ತದೆ.
13) ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
14) ನೀವು ಎದುರಾಳಿಯನ್ನು ಎದುರಿಸಿದಾಗೆಲ್ಲ ಅವನನ್ನು ಪ್ರೀತಿಯಿಂದ ಜಯಿಸಿ.
15) ಇವತ್ತು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ನಾಳೆ ನಿಂತಿದೆ.
16) ಒಂದು ಒಳ್ಳೆ ಕೆಲಸದಿಂದ ಒಂದು ಹೃದಯಕ್ಕೆ ಸಂತೋಷವನ್ನು ನೀಡುವುದು ಪ್ರಾರ್ಥನೆಯಲ್ಲಿ ತಲೆಬಾಗುವ 1000 ತಲೆಗಳಿಗಿಂತ ಉತ್ತಮವಾಗಿದೆ.
17) ದೈಹಿಕ ಸಾಮರ್ಥದಿಂದ ಶಕ್ತಿ ಬರುವುದಿಲ್ಲ. ಅದು ಅದಮ್ಯ ಇಚ್ಛೆಯಿಂದ ಬರುತ್ತದೆ.
18) ನಿಮಗೆ ಯಾರು ಮುಖ್ಯ ಎಂಬುದನ್ನು ನೀವು ಅವರನ್ನು ಕಳೆದುಕೊಳ್ಳುವ ತನಕ ತಿಳಿದುಕೊಳ್ಳಲಾರಿರಿ.
19) ಸ್ವಾಭಿಮಾನದ ನಷ್ಟಕ್ಕಿಂತ ದೊಡ್ಡ ನಷ್ಟ ಬೇರೊಂದಿಲ್ಲ.
20) ನಿಮ್ಮನ್ನು ನೀವು ಬದಲಾಯಿಸಿ - ಎಲ್ಲವೂ ನಿಮ್ಮ ಕೈಯಲ್ಲಿದೆ.
21) ಪ್ರೀತಿ ಜಗತ್ತಿನ ಪ್ರಬಲ ಶಕ್ತಿಯಾಗಿದೆ.
22) ಅಹಿಂಸೆ ಶಕ್ತಿಶಾಲಿಗಳ ಅಸ್ತ್ರವಾಗಿದೆ.
23) ಮೊದಲು ಬೇರೆಯವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಆನಂತರ ನಿಮ್ಮೊಂದಿಗೆ ಹೋರಾಡುತ್ತಾರೆ. ನಂತರ ನೀವು ಗೆಲ್ಲುತ್ತೀರಿ.
24) ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆ ಮೊದಲು ನೀವೇ ಆಗಬೇಕು. ನೀವೇ ಆಗಿ ಆ ಬದಲಾವಣೆ.
25) ಎಲ್ಲಿ ಪ್ರೀತಿಯಿದೆಯೋ ಅಲ್ಲೇ ಜೀವನವಿದೆ.
26) ಕಣ್ಣಿಗೆ ಕಣ್ಣನ್ನು ಕೀಳುತ್ತಾ ಹೋದರೆ ಒಂದಿನ ಜಗತ್ತು ಕುರುಡಾಗುತ್ತದೆ.
27) ಆ ದೇವರಿಗೆ ಯಾವುದೇ ಧರ್ಮವಿಲ್ಲ.
28) ತಮ್ಮ ಕೊಳೆಯಾದ ಕಾಲುಗಳಿಂದ ನನ್ನ ಹೃದಯದ ದಾರಿಯಲ್ಲಿ ನಡೆಯುವ ಅವಕಾಶವನ್ನು ನಾನು ಯಾರಿಗೂ ಕೊಡುವುದಿಲ್ಲ.
29) ಆರೋಗ್ಯವೇ ನಿಜವಾದ ಸಂಪತ್ತಾಗಿದೆ. ಬಂಗಾರ ಬೆಳ್ಳಿಯ ತುಣುಕುಗಳಲ್ಲ.
30) ಅನಕ್ಷರತೆ ಭಾರತಕ್ಕೆ ಕಳಂಕವಾಗಿದೆ. ಅದು ತೊಲಗಬೇಕು.
31) ನನ್ನ ಜೀವನವೇ ಒಂದು ಸಂದೇಶವಾಗಿದೆ.
32) ಸತ್ಯಕ್ಕಿಂತ ದೊಡ್ಡದಾದ ದೇವರಿಲ್ಲ.
33) ಸತ್ಯವಾಗಿರಿ, ಸೌಮ್ಯವಾಗಿರಿ, ನಿರ್ಭಯವಾಗಿರಿ.
34) ಬಡತನ ಹಿಂಸೆಯ ಅತ್ಯಂತ ಕೆಟ್ಟ ರೂಪವಾಗಿದೆ.
35) ಪ್ರಾಣಿಗಳ ಬಗ್ಗೆಯಿರುವ ಕಾಳಜಿ ನೋಡಿ ನಾವು ಆ ದೇಶದ ಮಹಾನತೆ ಹಾಗೂ ಮೌಲಿಕ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಬಹುದು.