ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story - Remarriage Story in Kannada - Director Satishkumar - Stories in Kannada , Ebooks, Love Stories, Kannada Kavanagalu, Kannada Quotes

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story - Remarriage Story in Kannada

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                                  ಈ ಪ್ರೀತಿ ಯಾವಾಗ ಹೇಗೆ ಯಾಕೆ ಹುಟ್ಟಿಕೊಳ್ಳುತ್ತೆ ಅಂತಾ ಹೇಳೊಕ್ಕಾಗಲ್ಲ. ಅನ್ವರ ಬೆಂಗಳೂರಿನ  ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಸ್ಯಾಲರಿ ಪ್ಯಾಕೇಜೆನೋ ಚೆನ್ನಾಗಿತ್ತು. ಆದರೆ ಸಂತೋಷ ಅನ್ನೋದು ಸ್ವಲ್ಪವೂ ಇರಲಿಲ್ಲ. ಎಂಜಿನಿಯರಿಂಗಲ್ಲಿ ಸಿಂಗಲ್ ಸಂತನಾಗಿದ್ದವನು ಇನ್ನೂ ಸಿಂಗಲ್ ಸಂತನಾಗೆ ಇದ್ದನು. ಅವನ ಮನಸ್ಸಿಗೆ ಹಿಡಿಸುವ ಹುಡುಗಿ ಅವನಿಗಿನ್ನೂ ಸಿಕ್ಕಿರಲಿಲ್ಲ. ಮನೆಯಲ್ಲಿ ಅವನಿಗೆ ಹುಡುಗಿ ಹುಡುಕುತ್ತಿದ್ದರು. ಆದರೆ ಮನೆಯವರು ತೋರಿಸುವ ಪೆದ್ದು ಹುಡುಗಿಯನ್ನು ಮದುವೆಯಾಗುವಷ್ಟು ಪೆದ್ದನೂ ಅವನಾಗಿರಲಿಲ್ಲ. ಅವನು ತನಗೆ ಸರಿ ಹೊಂದುವ ಐಟಿ ಪ್ರೊಫೆಷನ್ ಹುಡುಗಿಯನ್ನು ಹುಡುಕುತ್ತಿದ್ದನು. ಆತ ಮುಸ್ಲಿಂ ಅನ್ನೋ ಕಾರಣಕ್ಕೆ ಆಫೀಸಿನಲ್ಲಿ ಎಲ್ಲರೂ ಅವನನ್ನು ಸ್ವಲ್ಪ ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ಅವನ ಕ್ಲೋಸ್ ಗೆಳೆಯರೆಲ್ಲ ಹಿಂದೂಗಳೇ ಆಗಿದ್ದರು. ಅವನ ತಲೆಯಲ್ಲಿ ಹಿಂದೂ ಮುಸ್ಲಿಂ ಜಗಳಗಳ ಯೋಚನೆ ಯಾವತ್ತೂ ಬರ್ತಿರ್ಲಿಲ್ಲ. ಏಕೆಂದರೆ ಅವನ ಕುಚುಕುಗಳೆಲ್ಲ ಹಿಂದೂಗಳೇ ಆಗಿದ್ದರು. ವಯಸ್ಸು ಮೀರಿ ಹೋಗುತ್ತಿತ್ತು. ಆದರೆ ಸರಿಯಾದ ಹುಡುಗಿ ಸಿಗೋ ತನಕ ಕಾಯ್ತಿನಿ ಅನ್ನೋ ಹಠ ಅವನಿಗಿತ್ತು. ಅದಕ್ಕಾಗಿ ಆತ ತಾನಾಯ್ತು ತನ್ನ ಕೆಲಸವಾಯಿತು ಅಂತಾ ಇರುತ್ತಿದ್ದನು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                       ಅನ್ವರ ತುಂಬಾ ಮೌನಿಯಾಗಿದ್ದನು. ಮಾತು ಕಮ್ಮಿ ಕೆಲಸ ಜಾಸ್ತಿ ಅವನ ಸಿದ್ಧಾಂತವಾಗಿತ್ತು. ಅವನ ಮೌನ ಮುರಿಯಲು ಅವನ ಲೈಫಲ್ಲಿ ಒಬ್ಬಳು ಮಾತಿನ ಮಲ್ಲಿಯ ಎಂಟ್ರಿಯಾಯಿತು. ಐಶ್ವರ್ಯ ಹೊಸ ಪ್ರೊಜೆಕ್ಟ ಮ್ಯಾನೇಜರ್ ಆಗಿ ಕಂಪನಿಗೆ ಜಾಯಿನ್ ಆಗಿದ್ದಳು. ಅವಳು ನೋಯ್ಡಾದವಳು. ಕಂಪನಿಯ ಸ್ಪೆಷಲ್ ಪ್ರೊಜೆಕ್ಟ ಕೆಲಸದ ಮೇಲೆ ಅವಳು ಬೆಂಗಳೂರಿಗೆ ಬಂದಿದ್ದಳು. ಅವಳಿಗೆ ಬೆಂಗಳೂರು ಹೊಸದು. ಅವಳು ಕಂಪನಿಗೆ ಕಾಲಿಟ್ಟ ಮೊದಲ ದಿನವೇ ಎಲ್ಲರನ್ನು ಸೆಳೆದಳು. ಅವಳು MBA ಮಾಡಿದ್ದರೂ ಇಂಗ್ಲೀಷ ಅವಳಿಗೆ ಕಷ್ಟವಾಗುತ್ತಿತ್ತು. ಇಲ್ಲಿ ಬೆಂಗಳೂರಲ್ಲಿ ಎಲ್ಲರೂ ಇಂಗ್ಲೀಷನಲ್ಲಿ ಸೂಪರಾಗಿ ಮಾತಾಡುತ್ತಿದ್ದರು. ಅವಳಿಗೆ ಟೀಂನ್ನು ಲೀಡ್ ಮಾಡುವುದು ಕಷ್ಟವಾಗತೊಡಗಿತು. ಮುಂಚೆ ನೋಯ್ಡಾದಲ್ಲಿ ಅವಳು ಹಿಂದಿಯಲ್ಲಿ ಅವಾಜ ಹಾಕಿ ಟೀಂ ಲೀಡ್ ಮಾಡುತ್ತಿದ್ದಳು. ಆದರೆ ಈಗ ಭಾಷೆಯ ಸಮಸ್ಯೆಯಿಂದಾಗಿ ಸೈಲೆಂಟಾಗಿದ್ದಳು. ಅವಳು ಕಂಪನಿ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಮುಂದೆ ಸಾಗಿದ್ದಳು. ಅವಳ ಟೀಮಲ್ಲಿ ಯಾವಾಗಲೂ ಸೈಲೆಂಟ್ ಆಗಿರೋ ಅನ್ವರನನ್ನ ನೋಡಿ ಅವಳು ಒಂದಿನ ಅವನನ್ನು ವಿಚಾರಿಸಿಕೊಂಡಳು. ಆಗ ಅನ್ವರ ಅವಳೊಂದಿಗೆ ಹಿಂದಿಯಲ್ಲಿ ಫಟಾಫಟ್ ಅಂತಾ ಮಾತನಾಡಿದನು. ಅವನಿಗೂ ಇಂಗ್ಲೀಷ ಕಷ್ಟವಾಗುತ್ತಿತ್ತು. ಅದಕ್ಕೆ ಆತ ಮೌನವಾಗಿರುತ್ತಿದ್ದನು. ಈಗ ಐಶ್ವರ್ಯಳಿಂದಾಗಿ ಅವನ ಮೌನ ಮುರಿಯಿತು. ಅವರಿಬ್ಬರು ಬೆಸ್ಟ ಫ್ರೆಂಡ್ಸ ಆದರು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                         ಬೆಸ್ಟ ಫ್ರೆಂಡ್ಸ ಆಗಿದ್ದ ಐಶ್ವರ್ಯಾ ಹಾಗೂ ಅನ್ವರ ಯಾವಾಗ ಪ್ರೇಮಿಗಳಾದರು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಇಬ್ಬರು ಎರಡು ದೇಹ ಒಂದು ಜೀವ ಅನ್ನೋವಷ್ಟು ಹತ್ತಿರವಾದರು. ಅನ್ವರ ಇಂಜಿನಿಯರಿಂಗ ಓದಲು ಬೆಂಗಳೂರಿಗೆ ಬಂದವನು ಇಲ್ಲೇ ತಳ ಉರಿದ್ದನು. ಅವನಿಗೆ ಬೆಂಗಳೂರು ಚೆನ್ನಾಗಿ ಗೊತ್ತಿತ್ತು. ಆತ ಐಶ್ವರ್ಯಾಳನ್ನ ಬೈಕ ಮೇಲೆ ಕೂಡಿಸಿಕೊಂಡು ಬೆಂಗಳೂರೆಲ್ಲಾ ಸುತ್ತಿಸಿದನು. ಅವಳಿಗೆ ಕರ್ನಾಟಕದ ಮೈಸೂರ್ ಅರಮನೆ, ಮುರುಡೇಶ್ವರ, ಗೋಕರ್ಣ, ಯಾನಾ, ಮಡಿಕೇರಿ, ವಿಜಯಪುರದ ಗೋಲ್ ಗುಂಬಜ್, ಹಂಪಿ, ಬಾದಾಮಿ, ಐಹೊಳೆಗಳನ್ನೆಲ್ಲ ತೋರಿಸಿದನು. ಬೈಕ್ ಮೇಲೆ ಅರ್ಧ ಕರ್ನಾಟಕವನ್ನೇ ಸುತ್ತಿಸಿದನು. ಐಶ್ವರ್ಯಾ ಅವನ ಮೇಲೆ ಈಗ ಸಂಪೂರ್ಣ ಭರವಸೆ ಇಟ್ಟಳು. ಪ್ರೀತಿ ಹೆಸರಲ್ಲಿ ಪಾರ್ಕ್ ಸುತ್ತಿಸಿ ಹಾಸಿಗೆ ಹಂಚಿಕೊಂಡು ಮಾಯವಾಗುವ ಕಚಡಾ ಹುಡುಗ ನನ್ನವನಲ್ಲ ಎಂಬುದು ಅವಳಿಗೆ ಖಾತ್ರಿಯಾಯಿತು. ಅದಕ್ಕೆ ಅವಳು ಅವನೊಂದಿಗೆ ಮದುವೆ ವಿಚಾರವಾಗಿ ಮಾತನಾಡಿದಳು. ಅವಳ ಮದುವೆ ಆಫರಗೆ ಅನ್ವರ ತಕ್ಷಣವೇ ಒಪ್ಪಿಕೊಂಡನು. ಅವರಿಬ್ಬರು ತಮ್ಮತಮ್ಮ ಮನೆಯವರಿಗೆ ತಮ್ಮ ಪ್ರೀತಿಯ ಬಗ್ಗೆ ಹೇಳಿ ಮದುವೆಗೆ ಅನುಮತಿ ಕೇಳಿದರು. ಆದರೆ ಅವರ ಮನೆಯವರು ಅವರ ಮದುವೆಗೆ ಒಂಚೂರು ಒಪ್ಪಲಿಲ್ಲ. ಅವರ ಪ್ರೀತಿಗೆ ಜಾತಿ ಅಡ್ಡ ಗೋಡೆಯಾಗಿ ನಿಂತಿತು. ಅನ್ವರ ಮುಸ್ಲಿಂ ಮನೆತನದ ಹುಡುಗನಾದರೆ ಐಶ್ವರ್ಯಾ ಬ್ರಾಹ್ಮಣ ಸಮುದಾಯದ ಹುಡುಗಿಯಾಗಿದ್ದಳು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                           ಐಶ್ವರ್ಯಾ ಹಾಗೂ ಅನ್ವರ ತಮ್ಮ ಮನೆಯವರನ್ನು ಒಪ್ಪಿಸಲು ಪದೇಪದೇ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇಸತ್ತು ಅವರು ಎಲ್ಲರನ್ನು ಎದುರಾಕಿಕೊಂಡು ರೆಜಿಸ್ಟರ್ ಮ್ಯಾರೇಜ್ ಆದರು. ಅವರ ಮದುವೆಗೆ ಅವರ ಸ್ನೇಹಿತರು ಸಾಥ ನೀಡಿದರು. ಅವರಿಗೆ ಒಂದೊಳ್ಳೆ ಬಾಡಿಗೆ ಮನೆ ನೋಡಿ ಅವರಿಗೆ ಹೊಸ ಜೀವನಕ್ಕೆ ಕಾಲಿಡಲು ಸಹಾಯ ಮಾಡಿದರು. ನಂತರ ಅವರಿಬ್ಬರಿಗೆ ಬೆಸ್ಟ ಆಫ್ ಲಕ್ ಹೇಳಿ ಸ್ನೇಹಿತರೆಲ್ಲ ಅವರವರ ಮನೆಗೆ ತೆರಳಿದರು. ಮನೆಯಲ್ಲಿ ಈಗ ಅನ್ವರ ಹಾಗೂ ಐಶ್ವರ್ಯಾ ಇಬ್ಬರೇ ಉಳಿದರು. ಇಷ್ಟು ದಿನ ಪ್ರೇಮಿಗಳಾಗಿ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದವರು ಈಗ ಗಂಡ ಹೆಂಡತಿಯರಾಗಿದ್ದರು. ಸಂಸಾರದ ಜವಾಬ್ದಾರಿ ಅವರ ಸ್ವಾತಂತ್ರ್ಯವನ್ನು ಮೊದಲ ದಿನವೇ ಕಿತ್ತುಕೊಂಡಿತು. ಮೊದಲ ರಾತ್ರಿಯಲ್ಲಿ ಸರಸವಾಡುವುದನ್ನು ಬಿಟ್ಟು ಅವರಿಬ್ಬರು ತಮ್ಮ ತಂದೆತಾಯಿ, ಸಂಬಂಧಿಕರನ್ನೆಲ್ಲ ಕಳೆದುಕೊಂಡು ಅನಾಥರಾಗಿದಕ್ಕೆ ಕಣ್ಣಿರಾಕುತ್ತಾ ಕುಳಿತರು. ಅನ್ವರ  ಐಶ್ವರ್ಯಾಳನ್ನು ಮಡಿಲಲ್ಲಿ ಮಲಗಿಸಿಕೊಂಡು ಅವಳಿಗೆ ಸಾಂತ್ವನ ಹೇಳಿದನು. ಐಶ್ವರ್ಯಾ ಅವನ ಕೊರಳಿಗೆ ಬಿದ್ದು ಬಿಕ್ಕಿಬಿಕ್ಕಿ ಅತ್ತು ತನ್ನ ಮನಸನ್ನು ಹಗುರಾಗಿಸಿಕೊಂಡಳು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                      ಮರು ದಿನದಿಂದ ಅವರಿಬ್ಬರ ಅಸಲಿ ಸಾಂಸಾರಿಕ ಜೀವನ ಶುರುವಾಯಿತು. ಐಶ್ವರ್ಯಾಳಿಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿರಲಿಲ್ಲ. ಅವಳು ದಿನಾ ಅಡುಗೆಯಲ್ಲಿ ಏನಾದರೂ ಒಂದನ್ನು ಹೆಚ್ಚಿಗೆ ಹಾಕುತ್ತಿದ್ದಳು. ಆದರೆ ಅನ್ವರ ಅವಳು ಮಾತು, ಪ್ರೀತಿ ಎಲ್ಲದರಲ್ಲೂ ಹೆಚ್ಚಿಗೆ ಇದಾಳೆ ಅಂತಾ ಸುಮ್ಮನೆ ತಿನ್ನುತ್ತಿದ್ದನು. ಅವಳಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದನು. ದಿನವೆಲ್ಲ ಕಂಪನಿ ಕೆಲಸ ರಾತ್ರಿಯೆಲ್ಲಾ ಪೋಲಿ ಮಾತು ಒಂದೆರಡು ಬಿಸಿ ಮುತ್ತುಗಳಲ್ಲಿ ಅವರಿಬ್ಬರ ಜೀವನ ಸುಖವಾಗಿ ಸಾಗಿತ್ತು. ಆದರೆ ಮೂರು ತಿಂಗಳ ನಂತರ ಅವರ ಜೀವನ ಅವರಿಗೆ ಬೋರಾಯ್ತು. ಕೆಲಸದ ಒತ್ತಡದಿಂದಾಗಿ ಅವರಿಗೆ ಮನೆ ಕೆಲಸ ಹಿಂಸೆ ಅನಿಸತೊಡಗಿತು. ಐಶ್ವರ್ಯಾ ಸಹ ದಿನವೆಲ್ಲ ಅನ್ವರನಂತೆ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬರುತ್ತಿದ್ದಳು. ಬಂದ ಮೇಲೆ ಅವನಿಗೆ ಟೀ ಮಾಡಿಕೊಟ್ಟು ಮನೆ ಕಸಗೂಡಿಸಿ ಅಡುಗೆ ತಯಾರಿ ಮಾಡಬೇಕಿತ್ತು. ಆದರೆ ಅನ್ವರಗೆ ಯಾವುದೇ ಕೆಲಸ ಇರುತ್ತಿರಲಿಲ್ಲ. ಆತ ಮೊಬೈಲನಲ್ಲಿ ಗೇಮ್ ಆಡುತ್ತಾ ಕುಳಿತುಕೊಂಡು ಬಿಡುತ್ತಿದ್ದನು. ಸಾಲದಕ್ಕೆ ಮೇಲಾಗಿ ಬೇಗನೆ ಅಡುಗೆ ಮಾಡು ಹೊಟ್ಟೆ ಹಸಿತಿದೆ ಅಂತಾ ಆರ್ಡರ್ ಮಾಡುತ್ತಿದ್ದನು. 

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                                    ಮದುವೆಯಾದ ಹೊಸತರಲ್ಲಿ ಅನ್ವರ ಐಶ್ವರ್ಯಾಳ ಮೈ ಮುಟ್ಟುವ ಆಸೆಯಲ್ಲಿ ಅವಳಿಗೆ ಅಡುಗೆ ಮಾಡಲು, ಮನೆಗೆಲಸ ಮಾಡಲು ಸಹಾಯ ಮಾಡುತ್ತಿದ್ದನು. ಅಡುಗೆ ಮನೆಯಲ್ಲಿ ಅವಳು ತರಕಾರಿ ಹೆರಚುವಲ್ಲಿ ಬಿಜಿಯಾಗಿರುವಾಗ ಆತ ಅವಳನ್ನು ಹಿಂದಿನಿಂದ ಗಟ್ಟಿಯಾಗಿ ಅಪ್ಪಿಕೊಂಡು ಅವಳ ಸೊಂಟ ಸವರುತ್ತಾ ಅವಳ ಕತ್ತಿಗೆ ಮುತ್ತಿಡುತ್ತಾ ಅವಳಿಗೆ ಡಿಸ್ಟರ್ಬ್ ಮಾಡುತ್ತಿದ್ದನು. ಅವಳು ಸಹ ಅವನೊಂದಿಗೆ ಮೆಲ್ಲನೆ ಸರಸವಾಡುತ್ತಾ ಅಡುಗೆ ಮಾಡುತ್ತಿದ್ದಳು. ಅಡುಗೆ ರೆಡಿಯಾದ ನಂತರ ಇಬ್ಬರು ಪರಸ್ಪರ ತಿನ್ನಿಸುತ್ತಾ ರೊಮ್ಯಾಂಟಿಕ್ ಆಗಿ ಊಟ ಮಾಡುತ್ತಿದ್ದರು. ನಂತರ ಆಕೆ ಪಾತ್ರೆ ಉಜ್ಜಿಟ್ಟು ಬರುವಷ್ಟರಲ್ಲಿ ಆತ ಬೆಡರೂಮಲ್ಲಿ ಅವಳಿಗೋಸ್ಕರ ಕಾಯುತ್ತಿದ್ದನು. ಅವಳು ಬರುತ್ತಿದ್ದಂತೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಅವಳನ್ನು ಬೆಡ್ ಮೇಲೆ ಮಲಗಿಸಿ ಅವಳ ತುಟಿಗಳಲ್ಲಿನ ಪ್ರೀತಿ ಮುತ್ತುಗಳನ್ನು ಲೂಟಿ ಮಾಡುತ್ತಿದ್ದನು. ಆತ ಅವಳ ಸೊಂಟ ಸವರುತ್ತಾ ಎದೆಗೆ ಮುತ್ತಿಡುತ್ತಾ ಅವಳನ್ನು ಬೆತ್ತಲೆ ಮಾಡುವ ಪ್ರಯತ್ನ ಮಾಡುತ್ತಿದ್ದನು. ಆದರೆ ಅವಳು ಅವನಿಗೆ ಮುಂದುವರೆಯುವ ಅವಕಾಶ ನೀಡುತ್ತಿರಲಿಲ್ಲ. ಅವಳಿಗೆ ಇಷ್ಟು ಬೇಗನೆ ತಾಯಿಯಾಗುವ ಆಸೆ ಇರಲಿಲ್ಲ. ಬೇಗನೆ ಸ್ವಂತ ಮನೆ ಮಾಡಿ ಆಮೇಲೆ ಮಡಿಲು ತುಂಬಿಸಿಕೊಳ್ಳುವ ಕನಸು ಅವಳದ್ದಾಗಿತ್ತು. ಆದರೆ ಕೆಲಸದ ಒತ್ತಡದಿಂದಾಗಿ ಅವರ ಸಂಸಾರದ ಗೋಡೆಯಲ್ಲಿ ಬಿರುಕು ಮೂಡಿತು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                          ಅನ್ವರ ಹಾಗೂ ಐಶ್ವರ್ಯಾ ಪರಸ್ಪರ ಪ್ರೀತಿಸಿ ಜಗತ್ತನ್ನೇ ಎದುರಾಕಿಕೊಂಡು ಮದುವೆಯಾಗಿದ್ದರು. ಆದರೆ ಅವರಿಗೆ ಮದುವೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರ ನಡುವೆ ದಿನಾ ಒಂದಲ್ಲ ಒಂದು ಕಾರಣಕ್ಕೆ ಸಣ್ಣಪುಟ್ಟ ಜಗಳಗಳಾಗಲು ಪ್ರಾರಂಭಿಸಿದವು. ಅವರಿಬ್ಬರ ನಡುವೆ ಅನ್ಯೋನ್ಯತೆ ಈಗ ಕನಸಿನ ಮಾತಾಯಿತು. ಪ್ರೀತಿ ಮಾತುಗಳ ಬದಲಾಗಿ ದ್ವೇಷದ ಮಾತುಗಳು ಹೆಚ್ಚಾದವು. ಮದುವೆಯಾದ ಆರು ತಿಂಗಳಲ್ಲೇ ಅವರ ಸಾಂಸಾರಿಕ ಜೀವನ ಮುರಿದು ಬಿತ್ತು. ಒಂದಿನ ಐಶ್ವರ್ಯಾ ತನ್ನ ಗಂಡ ಅನ್ವರನಿಗೆ ಏನನ್ನು ಹೇಳದೆ ತನ್ನ ತವರು ಮನೆ ನೋಯ್ಡಾಗೆ ಹೋದಳು. ಅವಳು ತನ್ನ ತಾಯಿ ಜೊತೆಗೆ ಗುಟ್ಟಾಗಿ ಮಾತಾಡುತ್ತಿದ್ದಳು. ಅವಳ ತಾಯಿಗೆ ಈ ಮದುವೆ ಇಷ್ಟವಿರಲಿಲ್ಲ. ಅದಕ್ಕೆ ಅವರ ಮಗಳ ಕಿವಿ ಚುಚ್ಚಿ ಕೊನೆಗೂ ಅವಳನ್ನು ತಮ್ಮ ಮನೆಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಮಧ್ಯಾಹ್ನದಿಂದಲೇ ಅನ್ವರ ಆಫೀಸಿನಲ್ಲಿ ಐಶ್ವರ್ಯಾಳನ್ನು ಹುಡುಕುತ್ತಿದ್ದನು. ಅವಳ ಫೋನ್ ಸ್ವಿಚ್ ಆಫ್ ಅಂತಾ ಬರ್ತಿತ್ತು. ಅವಳು ಮನೆಗೆ ಹೋಗಿರಬಹುದು ಅಂತಂದುಕೊಂಡು ಆತ ಕೆಲಸದಲ್ಲಿ ಬಿಜಿಯಾದನು. ಸಂಜೆ ಮನೆಗೆ ಬಂದಾಗ ಆಕೆ ಮನೆಯಲ್ಲಿ ಇಲ್ಲದಿರುವುದನ್ನು ನೋಡಿ ಗಾಬರಿಯಾದರು. ಮತ್ತೆ ಅವಳಿಗೆ ಕಾಲ್ ಮಾಡಿದನು. ಅವಳು ರಿಸೀವ್ ಮಾಡಿ "ನಾನು ನನ್ನ ಅಮ್ಮನ ಮನೆಗೆ ಬಂದಿರುವೆ. ಒಂದು ವಾರ ಬಿಟ್ಟು ಬರುವೆ..." ಅಂತಾ ಹೇಳಿದಳು. ಅದನ್ನ ಕೇಳಿ ಅನ್ವರ ಕೋಪದಲ್ಲಿ "ಯಾರನ್ನ ಕೇಳಿ ನೀನು ಅಲ್ಲಿಗೆ ಹೋದೆ? ನನಗೆ ಒಂದು ಮಾತು ಹೇಳಿ ಹೋಗಬಹುದಿತ್ತಲ್ಲ. ಅಲ್ಲೇ ಇರು ವಾಪಸ ಬರಬೇಡ..." ಅಂತೆಲ್ಲ ರೇಗಿದನು. ಅಷ್ಟರಲ್ಲಿ ಅವಳಮ್ಮ ಫೋನ್ ಕಿತ್ತುಕೊಂಡು ಅಳಿಯನಿಗೆ ಕೋರ್ಟು ಕಛೇರಿ ಅಂತೆಲ್ಲ ಧಮಕಿ ಹಾಕಿ ಕಾಲ್ ಕಟ್ ಮಾಡಿದರು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                                 ಐಶ್ವರ್ಯಾ ಹೇಳದೆ ಕೇಳದೆ ತವರಿಗೆ ಹೋಗಿದ್ದರಿಂದ ಅನ್ವರ ಅಪ್ಸೆಟ್ ಆಗಿದ್ದನು. ಕೋಪದಲ್ಲಿ ಅವಳಿಗೆ ಏನೇನೋ ಅಂದಿದ್ದು ಸಾಲದಂತ ಕೆಟ್ಟದಾಗಿ ಮೆಸೇಜ್ ಕೂಡ ಕಳುಹಿಸಿದನು. ಅವಳು ಸಹ ಅವನಿಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದಳು. ಅನ್ವರ್ "ಬರೀ ಅವಳಿಗಷ್ಟೇ ಮನೆ ಇದೆಯಾ? ನಂಗಿಲ್ಲವ?" ಅಂತಾ ಕೆಲ್ಸಕ್ಕೆ ರಜೆ ಹಾಕಿ ತನ್ನ ಊರಿಗೆ ಹೋದನು. ಅವನು ಮನೆಗೆ ಹೋಗಿ ಎರಡು ವರ್ಷವಾಗಿತ್ತು. ಮನೆಯಲ್ಲಿ ಎಲ್ಲರೂ ಅವನನ್ನು ಪ್ರೀತಿಯಿಂದ ನೋಡಿಕೊಂಡು ಅವನ ತಲೆ ಸವರಿ ಐಶ್ವರ್ಯಾಳಿಗೆ ಡೈವೋರ್ಸ್ ಕೊಟ್ಟು ಬೇರೆ ಮದುವೆಯಾಗುವಂತೆ ಒತ್ತಡ ಹೇರಿದರು. ಏಕೆಂದರೆ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ. ಅದಕ್ಕೆ ಹೇಗಾದರೂ ಮಾಡಿ ಈ ಮದುವೆಯನ್ನು ಮುರಿಯಲು ಅವರು ತುದಿಗಾಲ ಮೇಲೆ ನಿಂತಿದ್ದರು. ಅವನ ತಲೆಯಲ್ಲಿ ಏನೇನೋ ತುಂಬಿ ಅವನಿಗೆ ಐಶ್ವರ್ಯಾಳ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದರು. ಅನ್ವರ್ ಐಶ್ವರ್ಯಾಳಿಗೆ ಡೈವೋರ್ಸ್ ಕೊಡಬೇಕಾ ಬೇಡವಾ ಅಂತಾ ಯೋಚಿಸುವಷ್ಟ್ರಲ್ಲಿ ಅವನಿಗೆ ಐಶ್ವರ್ಯಾಳ ಕಡೆಯಿಂದ ಡೈವೋರ್ಸ್ ನೊಟೀಸ್ ಬಂತು. ಅವಳ ಅಮ್ಮ ತಮ್ಮ ಮಗಳ ತಲೆ ಕೆಡಿಸಿ ಈ ರೀತಿ ತಮ್ಮ ಹಠ ಸಾಧಿಸಿದರು. ಅನ್ವರ್ ಅವಳೊಂದಿಗೆ ಮಾತನಾಡಬೇಕು ಅಂತಾ ಅವಳಿಗೆ ಎಷ್ಟೋ ಸಲ ಕಾಲ್ ಮಾಡಿದನು. ಆದರೆ ಪ್ರತಿಸಲ ಅವಳ ಅಮ್ಮ ಕಾಲ್ ರಿಸೀವ್ ಮಾಡುತ್ತಿದ್ದರು ಇಲ್ಲ ಅವಳಕ್ಕ ರಿಸೀವ್ ಮಾಡುತ್ತಿದ್ದಳು. ಐಶ್ವರ್ಯಾಳ ಅಮ್ಮನ ಮಾತುಗಳನ್ನು ಅರಗಿಸಿಕೊಳ್ಳಲಾಗದೆ ಅನ್ವರ ಅವಳಿಗೆ ಡೈವೋರ್ಸ್ ಕೊಡಲು ಮುಂದಾದನು. ಒಂದುವರೆ ವರ್ಷದಲ್ಲಿ ಅವರಿಬ್ಬರು ಡೈವೋರ್ಸ್ ತೆಗೆದುಕೊಂಡು ದೂರಾದರು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                         "ಹಿಂದೂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಆರು ತಿಂಗಳು ಸಹ ನೆಟ್ಟಗೆ ಹೆಂಡತಿಯನ್ನ ಚೆನ್ನಾಗಿ ನೋಡಿಕೊಳ್ಳದ ಬೇವರ್ಷಿ..." ಅಂತಾ ಈ ಸಮಾಜ ಅನ್ವರನ ಮುಖಕ್ಕೆ ಕ್ಯಾಕರಿಸಿ ಉಗಿಯತೊಡಗಿತು. ಅವನ ಹಿಂದೂ  ಗೆಳೆಯರು ಅವನ ಮೇಲೆ ಬಹಳಷ್ಟು ಭರವಸೆ ಇಟ್ಟು ಅವನಿಗೆ ಮದುವೆ ಮಾಡಿಸಿದ್ದರು. ಆದರೆ ಆತ ಐಶ್ವರ್ಯಾಳನ್ನು ಸರಿಯಾಗಿ ನೋಡಿಕೊಳ್ಳದೆ ಅವಳನ್ನು ತವರಿಗೆ ಓಡಿಸಿ ಡೈವೋರ್ಸ್ ಕೊಟ್ಟು ದೂರಾಗಿ ಪ್ರೀತಿಗೆ ಕಳಂಕ ತಂದಿದ್ದರಿಂದ ಅವನ ಗೆಳೆಯರೆಲ್ಲ ಅವನಿಗೆ ಚೆನ್ನಾಗಿ ಬೈದು ಅವನಿಂದ ದೂರಾದರು. ಅವನ ಮನೆಯಲ್ಲಿ ಅವನಿಗೆ ಮರು ಮದುವೆ ಮಾಡಲು ಮುಸ್ಲಿಂ ಹುಡುಗಿ ಹುಡುಕಲು ಪ್ರಾರಂಭಿಸಿದರು. ಆದರೆ ಅವನಿಗೆ ಪ್ರೀತಿಸಿದ ಹುಡುಗಿ ಹಾಗೂ ಜೀವದ ಗೆಳೆಯರನ್ನು ಮರೆತು ಹೊಸ ಜೀವನ ಪ್ರಾರಂಭಿಸುವ ಮನಸ್ಸಿರಲಿಲ್ಲ. ಆತ ಹಳೇ ಸುಮಧುರ ನೆನಪುಗಳೊಂದಿಗೆ ಒಂಟಿ ಜೀವನ ಕಳೆಯಲು ನಿರ್ಧರಿಸಿ ಕೆಲಸದ ನೆಪ ಹೇಳಿ ಬೆಂಗಳೂರಿಗೆ ಬಂದನು. ತನ್ನ ಕೆಲಸ ಮಾಡುತ್ತಾ ಮತ್ತೆ ಜೀವಂತ ಶವದಂತೆ ಬದುಕಲು ಪ್ರಾರಂಭಿಸಿದನು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                              ಅತ್ತ ಕಡೆ ಐಶ್ವರ್ಯಾಳನ್ನು ಸಹ ಸಮಾಜ ಕ್ಯಾಕರಿಸಿ ಉಗಿತಾಯಿತ್ತು. "ಮುಸ್ಲಿಂ ಹುಡುಗನೊಂದಿಗೆ ಓಡಿ ಹೋಗಿ ಮದುವೆಯಾಗಿ ಆರ ತಿಂಗಳು ಸಹ ನೆಟ್ಟಗೆ ಸಂಸಾರ ಮಾಡದೇ ಮತ್ತೆ ಮನೆಗೆ ಓಡಿ ಬಂದಿದ್ದಾಳೆ, ನಡತೆಗೆಟ್ಟವಳು, ಮತ್ತೆ ಯಾರ ಜೊತೆಗೆ ಓಡಿ ಹೋಗ್ತಾಳೋ ಏನೋ...?" ಅಂತೆಲ್ಲ ಅಕ್ಕಪಕ್ಕದ ಮನೆಯವರು ಮಾತಾಡಲು ಪ್ರಾರಂಭಿಸಿದರು. ಇದ್ಯಾವುದಕ್ಕೂ ಕೇರ್ ಮಾಡದೇ ಅವರಮ್ಮ ಅವಳಿಗೆ ಮರುಮದುವೆ ಮಾಡಲು ಹೊಸ ಹುಡುಗನನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಅವಳನ್ನು ನೋಡಲು ಬರುವ ಗಂಡುಗಳೆಲ್ಲ ಅವಳ ಶೀಲದ ಮೇಲೆಯೇ ಸಂಶಯ ಪಡುತ್ತಿದ್ದರು. ಅವಳ ಜೊತೆಗೆ ಪರ್ಸನಲ್ಲಾಗಿ ಮಾತಾಡ್ಬೇಕು ಅಂತಾ ರೂಮಿಗೆ ಹೋಗಿ "ನೀನು ವರ್ಜಿನ್ ಹೌದಾ ಅಲ್ವಾ?" ಎಂದು ಕೇಳುತ್ತಿದ್ದರು. ತಮಗೆ ಎರಡು ಮಕ್ಕಳಿರುವ ಗಂಡುಗಳು ಸಹ ಅವಳ ವರ್ಜಿನಿಟಿಯ ಬಗ್ಗೆ ಕೇಳುತ್ತಿದ್ದರು. ಇದರಿಂದ ಐಶ್ವರ್ಯಾ ಬೇಸರಗೊಂಡು ಅಮ್ಮನ ಕೊರಳಿಗೆ ಬಿದ್ದು ಅಳಲು ಪ್ರಾರಂಭಿಸಿದಳು. ಆಗ ಅವಳಮ್ಮ ಅವಳಿಗೆ ಸಮಾಧಾನ ಮಾಡುತ್ತಾ "ನೀನು ಆ ಆಯೋಗ್ಯನನ್ನ ಮದುವೆಯಾಗಿರದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ..." ಅಂತೇಳಿ ಎಲ್ಲ ಅವಳದೆ ತಪ್ಪು ಅನ್ನೋ ಹಾಗೆ ಮಾತಾಡಿ ಅವಳ ಮೇಲೆ ಗೂಬೆ ಕೂಡಿಸಿ ತಾವು ಬಚಾವಾದರು. ಅಕ್ಕಪಕ್ಕದ ಮನೆಯವರ ಚುಚ್ಚು ಮಾತುಗಳಿಂದ ನೊಂದು ಐಶ್ವರ್ಯಾ ಆತ್ಮಹತ್ಯೆಗೆ  ಯತ್ನಿಸಿದಳು. ಆಗ ಅವಳಕ್ಕ ಬಂದು ಅವಳ ಮೂಡ್ ಚೇಂಜ್ ಮಾಡಲು ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋದಳು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                           ಅಕ್ಕನ ಮನೆಗೆ ಹೋದರೂ ಸಹ ಐಶ್ವರ್ಯಾಳಿಗೆ ಹಳೇ ನೆನಪುಗಳು ಕಾಡಲು ಪ್ರಾರಂಭಿಸಿದವು. ಕೊನೆಗೂ ಅವಳಿಗೆ ತನ್ನ ಮನೆಯವರು ತಮ್ಮ ಹಠ ಸಾಧಿಸಲು ನನಗೆ ಡೈವೋರ್ಸ್ ಕೊಡೆಸಿ ನನ್ನ ಬಾಳನ್ನು ಹಾಳು ಮಾಡಿದ್ರು ಎಂಬುದು ಅರಿವಾಯಿತು. ಅನ್ವರಗೆ ಇದು ಯಾವತ್ತೋ ಅರ್ಥವಾಗಿತ್ತು. ಇದು ಅರ್ಥವಾದ ದಿನವೇ ಆತ ಮನೆ ಬಿಟ್ಟು ಬೆಂಗಳೂರು ಸೇರಿದ್ದನು. ಆದರೆ ಐಶ್ವರ್ಯಾ ಇನ್ನೂ ಕೆಲ್ಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು. ಅವಳಿಗೆ ನಾನು ಅನ್ವರನೊಂದಿಗೆ ಒಂದ್ಸಲ ಸರಿಯಾಗಿ ಮಾತಾಡಿದ್ರೆ ನಮ್ಮ ಜೀವನ ಸರಿಯಾಗುತಿತ್ತು ಅಂತಾ ಅನ್ನಿಸತೊಡಗಿತು. ಅವಳಿಗೆ ಕೊನೆಗೂ ಕೆಟ್ಟ ಮೇಲೆಯೆ ಬುದ್ಧಿ ಬಂತು. ಆದರೆ ಈಗ ಕಾಲ ಮಿಂಚಿ ಹೋಗಿತ್ತು. ಅವರಿಬ್ಬರೂ ಕಾನೂನಿನ ಪ್ರಕಾರ ಡೈವೋರ್ಸ್ ತೆಗೆದುಕೊಂಡು ದೂರಾಗಿದ್ದರು. ಅವಳಕ್ಕ ಅವಳಿಗೆ ಹೇಗಾದರೂ ಮಾಡಿ ಮದುವೆ ಮಾಡಿಸಬೇಕು ಅಂತಾ ಅಲ್ಲಿಯೂ ಅವಳಿಗೆ ಗಂಡುಗಳನ್ನ ತೋರಿಸಲು ಪ್ರಾರಂಭಿಸಿದಳು. ಒಂದಿನ ಅವಳನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದರು. ಅವಳಕ್ಕ ಗಡಿಬಿಡಿಯಲ್ಲಿ ಎಲ್ಲ ತಯಾರಿ ಮಾಡುವಷ್ಟರಲ್ಲಿ ಸ್ವಲ್ಪ ತಡವಾಗಿತ್ತು. ಅವಳಕ್ಕ ಅವಳಿಗೆ ಬೇಗನೆ ಸೀರೆಯುಟ್ಟುಕೊಂಡು ರೆಡಿಯಾಗು ಅಂತೇಳಿ ಕೆಲಸದಲ್ಲಿ ಬಿಜಿಯಾದಳು. ಆದರೆ ಐಶ್ವರ್ಯಾ ರೆಡಿಯಾಗದೆ ರೂಮಲ್ಲಿ ಸುಮ್ಮನೆ ಕುಳಿತ್ತಿದ್ದಳು. ಏಕೆಂದರೆ ಅವಳಿಗೆ  ಸೀರೆಯುಡಲು ಬರುತ್ತಿರಲಿಲ್ಲ. ಅಲ್ಲದೇ ಅವಳಿಗೆ ಪದೇಪದೇ ಬೇರೆಬೇರೆ ಗಂಡುಗಳನ್ನ ನೋಡಿ ಮುಜುಗುರಕ್ಕೆ ಒಳಗಾಗುವುದು ಇಷ್ಟವಿರಲಿಲ್ಲ. ಅದಕ್ಕೆ ಅವಳು ರೂಮಲ್ಲಿ ಸಪ್ಪೆ ಮೊರೆ ಹಾಕಿಕೊಂಡು ಕುಳಿತ್ತಿದ್ದಳು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                                ಅವಳಕ್ಕ ಮನೆ ಕೆಲಸ ಮುಗಿಸಿ ಬಂದರೂ ಐಶ್ವರ್ಯಾ ಇನ್ನೂ ರೆಡಿಯಾಗಿರಲಿಲ್ಲ. ಅದಕ್ಕೆ ಅವಳು ಅವಳನ್ನು ರೇಗಿದಳು. ಆಗ ಅವಳಿಗೆ ಸೀರೆಯುಡಲು ಬರಲ್ಲ ಎಂಬುದು ಅವಳಿಗೆ ಗೊತ್ತಾಯಿತು. ಕೂಡಲೇ ಅವಳಕ್ಕ ಅವಳಿಗೆ ಸೀರೆಯುಡಿಸಲು ಪ್ರಾರಂಭಿಸಿದಳು. ಆದರೆ ಆತುರದಲ್ಲಿ ಬಾಗಿಲ ಚಿಲಕ ಹಾಕುವುದನ್ನು ಮರೆತ್ತಿದ್ದಳು. ಬಾಗಿಲನ್ನು ಬರೀ ಮುಂದೆ ಮಾಡಿ ಅವಳಿಗೆ ಸೀರೆಯುಡಿಸುತ್ತಿದಳು. ಪೂರ್ತಿ ಸೀರೆಯುಡಿಸಿ ಸೇಫ್ಟಿ ಪಿನ್ ಹಾಕಬೇಕು ಅನ್ನೋವಷ್ಟರಲ್ಲಿ ಅವಳ ಭಾವ ಅಂದ್ರೆ ಅವಳಕ್ಕನ ಗಂಡ ಅವಳ ರೂಮಿಗೆ ಸಡನ್ನಾಗಿ ಬಂದು "ಗಂಡಿನ ಕಡೆಯವರು ಬಂದರು. ಇನ್ನೂ ರೆಡಿಯಾಗಿಲ್ವಾ?" ಅಂತಾ ಕೇಳಿದನು. ಜೊತೆಗೆ ಐಶ್ವರ್ಯಾಳನ್ನು ಮೊದಲ ಸಲ ಸೀರೆಯಲ್ಲಿ ನೋಡಿ ಆತ ಮನಸೋತನು. ಐಶ್ವರ್ಯಾಳಿಗೆ ತನ್ನನ್ನು ನೋಡಲು ಬಂದ ಗಂಡು ಇಷ್ಟವಾಗಲಿಲ್ಲ. ಅದಕ್ಕೆ ಅವಳು ರೂಮಲ್ಲಿ ಹೋಗಿ ಅಳುತ್ತಾ ಕುಂತಳು. ಅವಳಕ್ಕ ಅವಳನ್ನು ಸಮಾಧಾನ ಮಾಡುತ್ತಿದ್ದಳು. ಅಷ್ಟರಲ್ಲಿ ಅವಳ ಭಾವ ಸಹ ಅವಳನ್ನು ಸಮಾಧಾನ ಮಾಡಲು ಪ್ರಾರಂಭಿಸಿದನು. ಅವಳಕ್ಕ ಅವಳಿಗೆ ಟೀ ತರಲು ಅಡುಗೆ ಮನೆಗೆ ಹೋದಳು. ಆಗ ಅವಳ ಭಾವ ಅವಳ ಭುಜದ ಮೇಲೆ ಕೈಹಾಕಿ ಅವಳ ಭುಜ ಸವರುತ್ತಾ "ಚಿಂತಿಸಬೇಡ, ನಿನ್ನನ್ನು ಯಾರು ಮದುವೆಯಾಗದಿದ್ದರೆ ನಾನು ಮದುವೆಯಾಗುವೆ...." ಅಂತಾ ಹೇಳಿ ತನ್ನ ಮನದಾಸೆ ವ್ಯಕ್ತಪಡಿಸಿದನು. ಅಷ್ಟರಲ್ಲಿ ಅವಳಕ್ಕ ಟೀ ತೆಗೆದುಕೊಂಡ ಬಂದಾಗ ಭಾವ ಅಲ್ಲಿಂದ ಕಾಲ್ಕಿತ್ತನು. ಐಶ್ವರ್ಯಾಳಿಗೆ ಒಂಟಿ ಹೆಣ್ಣನ್ನು ಈ ಸಮಾಜ ಯಾವ ರೀತಿ ನೋಡುತ್ತೆ ಎಂಬುದು ಅರ್ಥವಾಯಿತು. ಅದಕ್ಕೆ ಅವಳು ಮತ್ತೆ ಕೆಲ್ಸಕ್ಕೆ ಸೇರಿಕೊಂಡು ಸ್ವತಂತ್ರ ಜೀವನ ಸಾಗಿಸಲು ನಿರ್ಧರಿಸಿದಳು. ಅಕ್ಕನಿಗೆ ಇದನ್ನು ಹೇಳಿ ತಕ್ಷಣವೇ ತಯಾರಾಗಿ ಅವಳ ಮನೆ ಬಿಟ್ಟು ನೋಯ್ಡಾಗೆ ತೆರಳಿದಳು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                        ಐಶ್ವರ್ಯಾ ಬಸ್ಸಿನಲ್ಲಿ ಹೋಗುವಾಗ ತನ್ನ ಹಳೇ ಕಂಪನಿ ಮ್ಯಾನೇಜರಗೆ ಕಾಲ ಮಾಡಿ "ನನ್ನ ಹೇಗಾದರೂ ಮಾಡಿ ಬೆಂಗಳೂರ ಬ್ರಾಂಚಗೆ ಕಳುಹಿಸಿ ಕೊಡಿ..." ಅಂತಾ ಬೇಡಿಕೊಂಡಳು. ಅದಕ್ಕೆ ಅವರು ಒಪ್ಪಿ ಅವಳಿಗೆ ನಾಳೇನೇ ಕೆಲ್ಸಕ್ಕೆ ಜಾಯಿನ್ ಆಗಲು ಹೇಳಿದರು. ಐಶ್ವರ್ಯಾ ನೋಯ್ಡಾಗೆ ಹೋದ ನಂತರ ಮನೆಗೋಗುವ ಬದಲು ಬೆಂಗ್ಳೂರಿಗೆ ಹೋಗಲು ರೈಲ್ವೆ ಸ್ಟೇಷನಿನ ದಾರಿ ಹಿಡಿದಳು. ಅವಳು ಏನಾದರೂ ಮಾಡಿ ಅನ್ವರನನ್ನು ಮೀಟಾಗಿ ಅವನೊಂದಿಗೆ ಒಂದ್ಸಲ ಮಾತಾಡಲು ಹಂಬಲಿಸುತ್ತಿದ್ದಳು. ಅತ್ತ ಕಡೆ ಅನ್ವರ ಕೂಡ ಅವಳ ನೆನಪಲ್ಲೇ ಸಿಂಗಲ ಸನ್ಯಾಸಿ ಜೀವನ ಸಾಗಿಸುತ್ತಿದ್ದನು. ಐಶ್ವರ್ಯಾ ಇದೇ ಯೋಚನೆಯಲ್ಲಿ ರೈಲ್ವೆ ಸ್ಟೇಷನ್ ತಲುಪಿದಳು. 

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                  ರಾತ್ರಿ ಬಹಳಷ್ಟು ಟೈಮ್ ಆಗಿತ್ತು. ಸ್ಟೇಷನ್ ಆಲ್ ಮೋಸ್ಟ ಖಾಲಿ ಹೊಡೀತಾಯಿತ್ತು. ಅಷ್ಟರಲ್ಲಿ ಒಂದಿಬ್ಬರು ಪೋಲಿ ಹುಡುಗರು ಬಂದು ಅವಳೊಂದಿಗೆ ಕೆಟ್ಟದಾಗಿ ವರ್ತಿಸತೊಡಗಿದರು. ಅವಳು ಸಹಾಯಕ್ಕೆ ಕೂಗಿಕೊಂಡಳು. ಆದರೆ ಅಲ್ಲಿ ಯಾರೂ ಇರಲಿಲ್ಲ. ಅವರು ಅವಳ ಕೈಹಿಡಿದು ಎಳೆದಾಡತೊಡಗಿದರು. ಅಷ್ಟರಲ್ಲಿ ಒಬ್ಬ ಯುವಕ ಅವಳನ್ನು ನೋಡಿ ಅವಳನ್ನು ಕಾಪಾಡಲು ಓಡಿ ಬಂದನು. ಆತ ಸಮೀಪಕ್ಕೆ ಬಂದಾಗ ಐಶ್ವರ್ಯಾ ಆಶ್ಚರ್ಯಚಕಿತಳಾಗಿ ನಿಂತಳು. ಅವಳನ್ನು ಕಾಪಾಡಲು ಓಡಿ ಬಂದ ಯುವಕ ಅನ್ವರ ಆಗಿದ್ದನು. ಆತ ಅವಳನ್ನು ಬಿಟ್ಟಿರಲಾಗದೆ ಅವಳನ್ನು ಒಂದಲ್ಸ ಮಾತಾಡಿಸಿಕೊಂಡು ಹೋಗಲು ನೋಯ್ಡಾಗೆ  ಬಂದಿದ್ದನು. ಆದರೆ ಅವಳ ಮನೆ ಎಲ್ಲಿದೆ ಅಂತಾ ಗೊತ್ತಾಗದೆ ಸ್ಟೇಷನನಲ್ಲೇ ಕುಳಿತ್ತಿದ್ದನು. ಆ ಪೋಲಿ ಹುಡುಗರು ಅವಳನ್ನು ಎಳೆದಾಡುತ್ತಿರುವುದನ್ನು ನೋಡಿ ಓಡಿ ಬಂದನು. ಐಶ್ವರ್ಯಾ ಏನು ಮಾತಾಡದೇ ಅನ್ವರನನ್ನ ಅಪ್ಪಿಕೊಂಡಳು. ಆ ಪೋಲಿ ಹುಡುಗರು ಹತಾಶೆಯಲ್ಲಿ ಅನ್ವರನ ಕೈಗೆ ಚಾಕುವಿನಿಂದ ಕೊರೆದು ಓಡಿ ಹೋದರು. ಅವನ ಕೈಯಿಂದ ರಕ್ತ ಸುರಿಯಲು ಪ್ರಾರಂಭಿಸಿತು. ಅದನ್ನು ನೋಡಿ ಐಶ್ವರ್ಯಾಳ ಕಣ್ಣಿನಿಂದ ನೀರು ಸುರಿಯಲು ಪ್ರಾರಂಭಿಸಿತು. ಆಕೆ ತನ್ನ ಕರ್ಚಿಫಿನಿಂದ ಅವನ ಕೈಗೆ ಕಟ್ಟಿದಳು. ನಂತರ ಅವನನ್ನು ಹಾಸ್ಪಿಟಲಗೆ ಕರೆದುಕೊಂಡು ಹೋದಳು. ಅಲ್ಲಿ ಅವನಿಗೆ ಟ್ರೀಟ್ಮೆಂಟ್ ಕೊಡೆಸಿ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಆದರೆ ಅವಳ ಮನೆಯಲ್ಲಿ ಅವರಿಬ್ಬರಿಗೆ ಜಾಗ ಕೊಡದೇ ಬೈದು ಅವಮಾನ ಮಾಡಿ ಕಳುಹಿಸಿದರು. ಅಲ್ಲಿಂದ ಅವರಿಬ್ಬರು ಮುಂಜಾನೆ ಟ್ರೇನ್ ಹಿಡಿದು ಸೀದಾ ಬೆಂಗಳೂರಿಗೆ ಬಂದರು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                     ಬೆಂಗಳೂರಿಗೆ ಬಂದ ನಂತರ ಅನ್ವರ ಐಶ್ವರ್ಯಾಳನ್ನು ತನ್ನ ಸ್ವಂತ ಮನೆಗೆ ಕರೆದುಕೊಂಡು ಹೋದನು. ಆ ಮನೆಗೆ ಕಾಲಿಟ್ಟ ನಂತರ ಐಶ್ವರ್ಯಾ ಖುಷಿಯಿಂದ ಅನ್ವರನನ್ನು ಅಪ್ಪಿಕೊಂಡು ಕಣ್ಣೀರಾಕಿದಳು. ಏಕೆಂದರೆ ಹೊಸ ಮನೆಯಲ್ಲಿ ಅನ್ವರ ಐಶ್ವರ್ಯಾಳ ಒಂದೊಂದು ವಸ್ತುವನ್ನು ಭದ್ರವಾಗಿ ಇಟ್ಟಿದ್ದನು. ಅವಳ ಗಿಫ್ಟ ಕಲೆಕ್ಷನ್, ಒಡವೆ, ಬಟ್ಟೆ, ಲ್ಯಾಪಟಾಪ್  ಇತ್ಯಾದಿಗಳೆಲ್ಲವನ್ನು ಕ್ಷೇಮವಾಗಿ ಇಟ್ಟಿದ್ದನು. ತಕ್ಷಣವೇ ಅನ್ವರ ತನ್ನ ಗೆಳೆಯರಿಗೆಲ್ಲ ಕಾಲ ಮಾಡಿ ಮನೆಗೆ ಬರಲು ಹೇಳಿದನು. ಅವರಿಬ್ಬರು ತಮ್ಮ ತಪ್ಪನ್ನು ತಿದ್ದಿಕೊಂಡು ಮತ್ತೆ ಮರು ಮದುವೆಯಾಗ್ತಿವಿ ಅಂದಾಗ ಅವರ ಗೆಳೆಯರು ಮತ್ತೆ ಅವರಿಗೆ ಸಹಾಯ ಮಾಡಲು ಮುಂದಾದರು. ಆದರೆ ಈ ಸಲ ಅವರು ರೆಜಿಸ್ಟರ್ ಮದುವೆ ಮಾಡಿಸದೇ ಸೀದಾ ಅವರಿಬ್ಬರನ್ನು ಒಂದು ಕಾರಲ್ಲಿ ಮೊದಲು ಅನ್ವರನ ಮನೆಗೆ ಕರೆದುಕೊಂಡು ಹೋದರು. 

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                          ಅನ್ವರನ ಮನೆಯಲ್ಲಿ ಮಗ ಒಂಟಿಯಾಗಿ ನರಳುವುದಕ್ಕಿಂತ ಅವಳನ್ನೇ ಮದುವೆಯಾಗಿ ಸುಖವಾಗಿರಲಿ ಅಂತಾ ಅವರ ಮದುವೆಗೆ ಒಪ್ಪಿದರು. ಅವರಿಬ್ಬರು ಪ್ರೀತಿಸಿ ಮದುವೆಯಾಗಿ ಕಿತ್ತಾಡಿ ಡೈವೋರ್ಸ್ ತೆಗೆದುಕೊಂಡು ಬೇರೆಯಾಗಿ  ಮತ್ತೆ ಮದುವೆಯಾಗುತ್ತಿರುವುದನ್ನು ನೋಡಿ ಅವರಿಬ್ಬರ ಪ್ರೀತಿ ನಿಜ ಅಂತಾ ಅವರ ಮನೆಯಲ್ಲಿ ಅವರಿಬ್ಬರನ್ನು ಬೆಂಬಲಿಸಿದರು. ಅವರ ಅಪ್ಪ ನಾನೇ ಮುಂದೆ ನಿಂತು ಅದ್ದೂರಿಯಾಗಿ ನಿಮ್ಮ ಮದುವೆ ಮಾಡುವುದಾಗಿ ಹೇಳಿದರು. ಅನ್ವರನ ಮನೆಯಲ್ಲಿ ಅವರ ಮದುವೆಗೆ ಒಪ್ಪಿಗೆ ಸಿಕ್ಕಿತು. ಆದರೆ ಐಶ್ವರ್ಯಾಳ ಮನೆಯವರ ಮನ ನೋಯಿಸಿ ಮದುವೆ ಮಾಡುವುದು ಅವರ ಗೆಳೆಯರಿಗೆ ಇಷ್ಟವಿರಲಿಲ್ಲ. ಅದಕ್ಕವರು ಅವಳ ಮನೆಯವರನ್ನು ಒಪ್ಪಿಸಲು ನೋಯ್ಡಾಗೆ ಹೋದರು. ಅವಳಿಗೆ ಎರಡನೇ ಮದುವೆ ಮಾಡಲು ಯೋಗ್ಯ ಹುಡುಗನನ್ನು ಹುಡುಕಲು ಸಾಧ್ಯವಾಗದೆ ಅವರಮ್ಮನ ಹಠ ಜಂಭ ಎರಡು ಇಳಿದಿದ್ದವು. ಅದಕ್ಕೆ ಅವಳ ಮನೆಯಲ್ಲೂ ಅವರಿಬ್ಬರ ಮದುವೆಗೆ ಅನುಮತಿ ಕೊಟ್ಟರು. ಇಬ್ಬರ ಮನೆಯವರು ತಾವೇ ಮುಂದೆ ನಿಂತು ಅವರಿಬ್ಬರ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ಪ್ರೀತಿ ಹಾಗೂ ಡೈವೋರ್ಸನಲ್ಲಿ ಹೋದ ಅವರ ಮರ್ಯಾದೆ ಈಗ ಮರು ಮದುವೆಯಲ್ಲಿ ಮರಳಿ ಬಂತು.

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

                     ಮದುವೆ ಶಾಸ್ತ್ರಗಳೆಲ್ಲ ಆದ ನಂತರ ಅವರಿಬ್ಬರು ತಮ್ಮ ಬೆಂಗಳೂರಿನ ಮನೆ ಸೇರಿದರು. ಅದು ಅವರ ಪ್ರೀತಿ ಗೂಡಾಯಿತು. ಈಗ ಅನ್ವರ ಆರ್ಥಿಕವಾಗಿ ಸಬಲನಾಗಿದ್ದನು. ಸ್ವಂತ ಮನೆ ಸಹ ಮಾಡಿದ್ದನು. ಹೀಗಾಗಿ ಐಶ್ವರ್ಯಾಳಿಗೆ ಈಗ ಕೆಲ್ಸ ಮಾಡುವ ಅವಶ್ಯತೆಯಿರಲಿಲ್ಲ. ಆದರೆ ಅವಳು ಜಾಬ್ ಮಾಡ್ತೀನಿ ಅಂದಾಗ ಅನ್ವರ ಬೇಡ ಅನ್ನದೇ ಅವಳನ್ನು ಬೆಂಬಲಿಸಿದನು. ಮನೆ ಕೆಲಸ ಮಾಡಲು ಒಬ್ಬಳು ಮನೆ ಗೆಲಸದವಳನ್ನು ನೇಮಿಸಿದನು. ಈಗ ಐಶ್ವರ್ಯಾಳಿಗೆ ಮನೆಯಲ್ಲಿ ಯಾವ ಕೆಲ್ಸಾನೂ  ಇರಲಿಲ್ಲ. ದಿನಾ ಬೆಳಿಗ್ಗೆ ಬೇಗನೆ ಎದ್ದು ಅವರಿಬ್ಬರು ವಾಕಿಂಗಗೆ ಹೋಗುತ್ತಿದ್ದರು. ನಂತರ ವಾಪಸ್ ಬಂದು ರೆಡಿಯಾಗಿ ಟಿಫಿನ್ ಮಾಡಿ ಜೊತೆಯಾಗಿ ಬೈಕ್ ಮೇಲೆ ಒಂದೇ ಕಂಪನಿಗೆ ಹೋಗುತ್ತಿದ್ದರು. ಸಂಜೆ ಮನೆಗೆ ಬಂದ ನಂತರ ಲೈಟಾಗಿ ಏನಾದರೂ ತಿಂದು ಟೀ ಕುಡಿದು ಸೀಟಿ ಸುತ್ತಲೂ ಹೋಗುತ್ತಿದ್ದರು. ಬೇಗನೆ ಮನೆಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ಮನೆ ಟೆರೆಸ್ ಮೇಲೆ ವಾಕ್ ಮಾಡಿ ಬೆಡ್ರೂಮ ಸೇರಿ ಗೋಡೆಗಳು ನಾಚಿ ಕಣ್ಮುಚ್ಚಿಕೊಳ್ಳುವಂತೆ ಸರಸವಾಡುತ್ತಿದ್ದರು. ವೀಕೆಂಡಲ್ಲಿ ಟೈಮ್ ಸಿಕ್ರೆ ಯಾವುದಾದರೂ ಟೂರಿಸ್ಟ ಸ್ಪಾಟಿಗೆ ಹೋಗುತ್ತಿದ್ದರು. ಈ ರೀತಿ ಅವರಿಬ್ಬರ ಜೀವನ ಸುಖವಾಗಿ ಸಾಗಿತು. ಅವರ ಪ್ರೇಮದ ಸಂಕೇತವಾಗಿ ಒಂದು ವರ್ಷದಲ್ಲಿ ಅವರ ಮನೆಗೆ ಒಬ್ಬಳು ಪುಟ್ಟ ರಾಜಕುಮಾರಿಯ ಆಗಮನವಾಯಿತು. ಅವರಿಬ್ಬರ ಪ್ರೀತಿ, ಮದುವೆ ಎಲ್ಲವೂ ಸಾರ್ಥಕವಾಯಿತು.....

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story

ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story - Remarriage Story in Kannada ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story - Remarriage Story in Kannada Reviewed by Director Satishkumar on ಅಕ್ಟೋಬರ್ 05, 2020 Rating: 4.5
Blogger ನಿಂದ ಸಾಮರ್ಥ್ಯಹೊಂದಿದೆ.