ಕನಕದಾಸರ ಉಪದೇಶಗಳು - Quotes of Kanakdas in Kannada 2021 - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕನಕದಾಸರ ಉಪದೇಶಗಳು - Quotes of Kanakdas in Kannada 2021

ಕನಕದಾಸರ ಉಪದೇಶಗಳು - Quotes of Kanakdas in Kannada

1) ಯಾವಾಗ ನಿಮ್ಮಲ್ಲಿರುವ "ನಾನು" ಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತೋ ಅವತ್ತು ನೀವು ಮೋಕ್ಷಕ್ಕೆ ಅರ್ಹರಾಗುತ್ತೀರಿ... 

2) ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರು? ಅಡವಿಯೊಳಗಿನ ಪ್ರಾಣಿ ಪಕ್ಷಿಗಳಿಗೆ ಅಡಿಗಡಿಗೆ ಆಹಾರವಿಟ್ಟವರು ಯಾರು? ಕಲ್ಲಿನಲ್ಲಿ ಕೂಗುವ ಕಪ್ಪೆಗಳಿಗೆ ಆಹಾರ ನೀಡಿದವರಾರು? ಅದಕ್ಕಾಗಿ ಚಿಂತಿಸದಿರು ತಾಳು ಮನವೇ ಕಾಗಿನೆಲೆ ಆದಿಕೇಶವ ಎಲ್ಲರನು ಸಲಹುವನು... 

3) ಕುಲ ಕುಲವೆಂದು ಹೊಡೆದಾಡಿ ಸಾಯಬೇಡಿರಿ ಹುಚ್ಚಪ್ಪಗಳಿರಾ. ಆತ್ಮ ಯಾವ ಕುಲ? ಜೀವ ಯಾವ ಕುಲ? ಗಾಳಿ ಯಾವ ಕುಲ? ನೀರು ಯಾವ ಕುಲ? ಅನ್ನ ಯಾವ ಕುಲ? 

4) ಎಲ್ಲರು ನಿನಗೆ ಹಿತವರು ಎಂದು ನಂಬಬೇಡ ಮನವೇ. ಆಪತ್ತು ಬಂದೊಡನೆ ಯಾರು ಯಾರಿಗೂ ಇಲ್ಲ. ಭಕ್ತ ಪ್ರಹ್ಲಾದನಿಗೆ ಬಂದ ಸ್ಥಿತಿ ನೋಡಿ ತಂದೆ ಹಿತವನು ಎಂದು ನಂಬಬಹುದೆ? ಹಡೆದ ಮಗುವನ್ನು ನೀರಲ್ಲಿ ತೇಲಿ ಬಿಟ್ಟ ಕುಂತಿಯನ್ನು ನೋಡಿ ತಾಯಿ ಹಿತವಳು ಎಂದು ನಂಬಬಹುದೆ? ತಂದೆಯನ್ನೇ ಸೆರೆಯಲ್ಲಿಟ್ಟ ಕಂಸನನ್ನು ನೋಡಿ ಮಗ ಹಿತವನು ಎಂದು ನಂಬಬಹುದೆ? ವಾಲಿಯನ್ನು ಕೊಲ್ಲಿಸಿದ ಅನುಜನನ್ನು ನೋಡಿ ಸೋದರ ಹಿತವನು ಎಂದು ನಂಬಬಹುದೆ? ಆಪತ್ತು ಬಂದು ಒದಗಿದಾಗ ಯಾರಿಗೆ ಯಾರು ಇಲ್ಲ...

5)  ಒಡಲಿನ ಆಸೆಗಾಗಿ ಜೇನಿನೊಳಗೆ ಬಿದ್ದು ಸಾಯುವ ನೊಣದಂತೆ ನಾನಾಗಿರುವೆ. ನನ್ನನ್ನು ಈ ಜೀವನ ಬಂಧನದಿಂದ ಮುಕ್ತಗೊಳಿಸು ರಂಗನೇ... 

6) ಪರಸತಿಯ ನೋಡದಿರು, ದುರ್ಜನರ ಕೂಡದಿರು, ಗರ್ವದ ಮಾತುಗಳನ್ನು ಆಡದಿರು, ಕೈಯ ಹಿಂದೆಗೆವ ಹೇಡಿಯನ್ನು ಬೇಡದಿರು, ಬೀದಿಗೂಳುಂಬ ದೈವಗಳನ್ನು ಕೊಂಡಾಡದಿರು... 

7) ಮನದಲ್ಲಿ ಕಪಟವಿಟ್ಟುಕೊಂಡು ಎಷ್ಟು ಜಪ ಮಾಡಿದರೇನು ಫಲ? ವೇದ ಶಾಸ್ತ್ರಗಳನ್ನೊದಿ ಬಾಯಾರಿದರೆ ಏನು ಫಲ? ಹೊಳೆಯೊಳಗೆ ಮುಳುಗಿ‌ ತಪ ಮಾಡಿದರೇನು ಫಲ? ಮನದಲ್ಲಿ ಕಪಟವಿರುವಾಗ ಎಲ್ಲವೂ ನಿಷ್ಫಲ... 

8) ತನುವನ್ನು ನೇಗಿಲ ಮಾಡಿ, ಹೃದಯವನ್ನು ಹೊಲ ಮಾಡಿ, ಜ್ಞಾನವನ್ನು ಮಿಣಿ ಕಣ್ಣಿ ಹಗ್ಗ ಮಾಡಿ, ನಿಮ್ಮ ಮನವೆಂಬ ಧಾನ್ಯವನ್ನು ನೋಡಿ ಬಿತ್ತಿರಯ್ಯ...  ನಿಮ್ಮ ಮನದೊಳಗಿನ ಚಂಚಲವೆಂಬ ಹಕ್ಕಿಯನ್ನು ಓಡಿಸಿರಯ್ಯ‌‌‌... 

9) ಮೋಕ್ಷ ಸಿಗಬೇಕೆಂದರೆ "ನಾನು" ಎಂಬಾಸೆ ಬಿಟ್ಟು ದಾಸನಾಗಬೇಕು, ಸದಾಶಿವನ ದಾಸನಾಗಬೇಕು...

Blogger ನಿಂದ ಸಾಮರ್ಥ್ಯಹೊಂದಿದೆ.