
1) ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮವಾಗಿದೆ. ಇದು ನಿಜವಾದ ವಿಜಯವಾಗಿದೆ. ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ...

2) ಸಾಗರದ ಅಲೆಗಳು ಜೋರಾಗಿ ಸದ್ದು ಮಾಡಿದರೂ ಸಾಗರದ ತಳ ಯಾವಾಗಲೂ ಪ್ರಶಾಂತವಾಗಿರುತ್ತದೆ...

3) ನಾಲಿಗೆ ಹರಿತವಾದ ಚಾಕುವಿನಂತಾಗಿದೆ. ಅದು ರಕ್ತ ಚೆಲ್ಲದೆ ಕೊಲೆ ಮಾಡುತ್ತದೆ...

4) ಉದಾರ ಹೃದಯ, ಕರುಣೆ ತುಂಬಿದ ಮಾತು, ಸೇವೆ ಹಾಗೂ ಸಹಾನುಭೂತಿಯ ಜೀವನವು ಮಾನವೀಯತೆಯನ್ನು ನವೀಕರಿಸುತ್ತದೆ...

5) ಪ್ರತಿ ಮನುಷ್ಯ ತನ್ನ ಆರೋಗ್ಯ ಅಥವಾ ಅನಾರೋಗ್ಯದ ಲೇಖಕನಾಗಿದ್ದಾನೆ...

6) ಸುಳ್ಳನ್ನು ತ್ಯಜಿಸುವುದು ಆರೋಗ್ಯಕರವಾಗಿದೆ...

7) ಜೀವನವನ್ನು ಪ್ರೀತಿಸುವ ಮನುಷ್ಯ ವಿಷವನ್ನು ನಿರ್ಲಕ್ಷಿಸುವಂತೆ ನೀವು ಕೆಟ್ಟ ಕೆಲಸಗಳನ್ನು ನಿರ್ಲಕ್ಷಿಸಿ...

8) ಕೋಪವನ್ನು ಹಿಡಿದಿಟ್ಟುಕೊಳ್ಳುವುದು ಒಂಥರಾ ನಾವು ವಿಷ ಕುಡಿದು ಬೇರೆಯವರು ಸಾಯಲಿ ಅಂತಾ ನಿರೀಕ್ಷೆ ಮಾಡುವಂತಾಗಿದೆ...

9) ನೀವು ಯೋಚಿಸಿದಂತೆ ನೀವಾಗುತ್ತೀರಿ, ನೀವು ಅಂದುಕೊಂಡಿದ್ದನ್ನು ಆಕರ್ಷಿಸುತ್ತೀರಿ, ನೀವು ಕಲ್ಪಿಸಿದ್ದನ್ನು ರಚಿಸುತ್ತೀರಿ...

10) ಭೂತಕಾಲದಲ್ಲಿ ವಾಸಿಸಬೇಡಿ, ಭವಿಷ್ಯದ ಬಗ್ಗೆ ಚಿಂತಿಸಬೇಡಿ, ನಿಮ್ಮ ಮನಸ್ಸನ್ನು ಪ್ರಸ್ತುತ ಕ್ಷಣದ ಮೇಲೆ ಕೇಂದ್ರಿಕರಿಸಿ...

11) ಸದ್ಯಕ್ಕೆ ನಿಮ್ಮ ಬಳಿಯಿರುವುದನ್ನು ಗೌರವಿಸಲು ನೀವು ವಿಫಲರಾದರೆ ಸಂತೋಷ ಎಂದಿಗೂ ನಿಮ್ಮ ಬಳಿ ಬರುವುದಿಲ್ಲ...

12) ಪ್ರತಿದಿನ ಬೆಳಿಗ್ಗೆ ನಾವು ಮತ್ತೆ ಜನಿಸುತ್ತೇವೆ. ಇಂದು ನಾವು ಏನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ...

13) ಪ್ರತಿಯೊಂದರಲ್ಲೂ ಒಳ್ಳೆಯದನ್ನು ನೋಡಲು ನಿಮ್ಮ ಮನಸ್ಸಿಗೆ ತರಬೇತಿ ನೀಡಿ...

14) ನೀವು ಯಾರಿಗಾದರೂ ದೀಪವನ್ನು ಬೆಳಗಿಸಿದರೆ ಅದು ನಿಮ್ಮ ದಾರಿಯನ್ನು ಸಹ ಬೆಳಗಿಸುತ್ತದೆ... .


15) ನೀವು ಮೌನವಾಗಿದ್ದರೆ ಹೆಚ್ಚಿಗೆ ಕೇಳಿಸಿಕೊಳ್ಳಬಹುದು...

16) ನಿಮ್ಮ ಕೋಪಕ್ಕೆ ನಿಮಗೆ ಶಿಕ್ಷೆಯಾಗುವುದಿಲ್ಲ ; ನಿಮ್ಮ ಕೋಪದಿಂದ ನಿಮಗೆ ಶಿಕ್ಷೆಯಾಗುತ್ತದೆ...

17) ನಿಮ್ಮ ಅತೀ ಕೆಟ್ಟ ಶತ್ರು ಸಹ ನಿಮಗೆ ನಿಮ್ಮ ಸ್ವಂತ ಅಸುರಕ್ಷಿತ ಆಲೋಚನೆಗಳಂತೆ ಹಾನಿ ಮಾಡಲು ಸಾಧ್ಯವಿಲ್ಲ...

18) ನಾವು ನಮ್ಮ ಆಲೋಚನೆಗಳಿಂದ ನಮ್ಮ ಜಗತ್ತನ್ನು ರೂಪಿಸಿಕೊಳ್ಳುತ್ತೇವೆ...

19) ಹಿಂದಿನ ಘಟನೆಗಳು ಎಷ್ಟೇ ಕೆಟ್ಟದಾಗಿದ್ದರೂ ಮತ್ತೆ ನೀವು ಹೊಸದಾಗಿ ಪ್ರಯತ್ನಿಸಬಹುದು...

20) ನೀವು ಯಾವುದಕ್ಕೆ ಅಂಟಿಕೊಳ್ಳುತ್ತಿರೋ ಅದನ್ನಷ್ಟೇ ಕಳೆದುಕೊಳ್ಳುತ್ತೀರಿ...

21) ನಿಮ್ಮ ಮನಸ್ಸನ್ನು ಆಳಿ ; ಇಲ್ಲವಾದರೆ ಅದು ನಿಮ್ಮನ್ನು ಆಳುತ್ತದೆ...

22) ಹಿಂದಿನ ಘಟನೆಗಳು ನಿಮ್ಮನ್ನು ಮತ್ತಷ್ಟು ಉತ್ತಮಗೊಳಿಸಲಿ, ಕಹಿಯಾಗಿಸದಿರಲಿ...

23) ಆಸೆ ಹಾಗೂ ಅಟ್ಯಾಚಮೆಂಟ ದು:ಖದ ಮೂಲವಾಗಿದೆ...

24) ಸೆನ್ಸಿಟಿವ ಜನ ಹೆಚ್ಚಿಗೆ ದು:ಖವನ್ನು ಅನುಭವಿಸುತ್ತಾರೆ. ಆದರೆ ಅವರೇ ಹೆಚ್ಚಿಗೆ ಪ್ರೀತಿಸುತ್ತಾರೆ ಮತ್ತು ಹೆಚ್ಚಿಗೆ ಕನಸುಗಳನ್ನು ಕಾಣುತ್ತಾರೆ...

25) ನಿಮ್ಮೊಳಗೆ ಕೋಪವನ್ನು ಬೆಳೆಯಲು ಬಿಡದಿದ್ದರೆ ಹೊರಗಡೆ ನಿಮಗೆ ಶತ್ರುಗಳಿರುವುದಿಲ್ಲ...

26) ಬಲಿಷ್ಟ ಜನ ಬೇರೆಯವರನ್ನು ಕೆಳ ತಳ್ಳುವುದಿಲ್ಲ, ಬದಲಾಗಿ ಅವರನ್ನು ಮೇಲೆತ್ತುತ್ತಾರೆ...

27) ಮಾತುಗಳಿಗೆ ಕೊಲ್ಲುವ ಸಾಮರ್ಥ್ಯವೂ ಇದೆ, ಕಾಪಾಡುವ ಸಾಮರ್ಥ್ಯವೂ ಇದೆ. ಮಾತುಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ನಿಮ್ಮ ಬದುಕು ಬದಲಾಗುತ್ತದೆ...

28) ಜೀವನದಲ್ಲಿ ಕಲಿಯಬೇಕಾದ ಅತೀ ದೊಡ್ಡ ಪಾಠವೆಂದರೆ ಶಾಂತವಾಗಿರುವುದು...

29) ಯಾವಾಗಲೂ ಆತ್ಮವನ್ನು ಪ್ರೀತಿಸಿ, ಮುಖವನ್ನಲ್ಲ...

30) ನೀವು ಬಲಿಷ್ಟರಾಗಬೇಕೆಂದರೆ ನಿಮ್ಮ ಒಂಟಿತನವನ್ನು ಆನಂದಿಸುವುದನ್ನು ಕಲಿಯಿರಿ...

31) ಜನರಿಗೆ ನಿಮ್ಮ ಮುಂದಿನ ಪ್ಲ್ಯಾನಗಳ ಬಗ್ಗೆ ಹೇಳಬೇಡಿ, ನೇರವಾಗಿ ರಿಜಲ್ಟಗಳನ್ನ ತೋರಿಸಿ...

32) ನಿಮ್ಮ ಹಿಂದಿನ ನೆನಪುಗಳ ಬಂಧನದಲ್ಲಿ ಬಂಧಿಯಾಗಿ ಉಳಿಯಬೇಡಿ. ಅದೊಂದು ಜೀವನ ಪಾಠವಷ್ಟೇ, ಜೀವಾವಧಿ ಶಿಕ್ಷೆಯಲ್ಲ...

33) ಸೂರ್ಯನ ಬಿಸಿಲು, ನೀರು, ವಿಶ್ರಾಂತಿ, ಗಾಳಿ, ವ್ಯಾಯಾಮ ಹಾಗೂ ಮಿತ ಆಹಾರ ಇವು ಒಳ್ಳೆ ವೈದ್ಯರಾಗಿವೆ...

34) ಯಾವುದೇ ಕಾರಣಕ್ಕೂ ಭರವಸೆಯನ್ನು ಕಳೆದುಕೊಳ್ಳಬೇಡಿ. ಏಕೆಂದರೆ ನಾಳೆ ಏನಾಗುತ್ತೆ ಎಂಬುದು ನಿಮಗೆ ಗೊತ್ತಿಲ್ಲ...

35) ಅನಾವಶ್ಯಕ ಸದ್ದಿಗಿಂತ ಮೌನ ಅವಶ್ಯಕವಾಗಿದೆ ಹಾಗೂ ಉತ್ತಮವಾಗಿದೆ...

36) ಕಲಿಯುವುದನ್ನು ನಿಲ್ಲಿಸದಿರಿ. ಏಕೆಂದರೆ ಬದುಕು ನಿಮಗೆ ಕಲಿಸುವುದನ್ನು ನಿಲ್ಲಿಸುವುದಿಲ್ಲ...

37) ರಿಲ್ಯಾಕ್ಸ ಆಗಿರಿ : ಯಾವುದು ಸಹ ನಿಮ್ಮ ಕಂಟ್ರೋಲನಲ್ಲಿಲ್ಲ...

38) ನೀವು ನೋವಿನ ಮೇಲೆ ಫೋಕಸ ಮಾಡಿದರೆ ನರಳುತ್ತೀರಿ, ಅದೇ ನೋವಿನಿಂದ ಸಿಕ್ಕ ಪಾಠದ ಮೇಲೆ ಫೋಕಸ ಮಾಡಿದರೆ ಬೆಳೆಯುತ್ತೀರಿ...

39) ಭಾವನೆಗಳು ಪ್ರಯಾಣಿಕರಿದ್ದಂತೆ, ಅವುಗಳನ್ನು ಸುಮ್ಮನೆ ಬಂದು ಹೋಗಲು ಬಿಡಿ, ಹಿಡಿದಿಟ್ಟುಕೊಳ್ಳಬೇಡಿ...

40) ತಮ್ಮ ತಪ್ಪನ್ನು ಒಪ್ಪಿಕೊಳ್ಳದಿರುವವರಿಂದ ದೂರವಿರಿ. ಏಕೆಂದರೆ ಅವರು ಎಲ್ಲ ನಿಮ್ಮದೇ ತಪ್ಪು ಎಂಬಂತೆ ವರ್ತಿಸುತ್ತಾರೆ...

41) ನಿಮ್ಮನ್ನು ನೋಯಿಸಿದವರಿಗೆ ಥ್ಯಾಂಕ್ಸ ಹೇಳಿ. ಏಕೆಂದರೆ ಅವರು ನಿಮ್ಮನ್ನು ಬಲಿಷ್ಟರನ್ನಾಗಿಸಿದ್ದಾರೆ...

42) ಜನ ಎರಡು ಕಾರಣಗಳಿಗಾಗಿ ಬದಲಾಗುತ್ತಾರೆ. ಒಂದು ಅವರ ಮೆದುಳು ತೆರೆದಾಗ ಇಲ್ಲ ಹೃದಯ ಒಡೆದಾಗ...

43) ಸುಖಿ ಜನರು ತಮ್ಮ ಬಳಿ ಏನಿದೆ ಎಂಬುದರ ಮೇಲೆ ಫೋಕಸ ಮಾಡುತ್ತಾರೆ, ದು:ಖಿ ವ್ಯಕ್ತಿಗಳು ತಮ್ಮತ್ರ ಏನಿಲ್ಲ ಎಂಬುದರ ಮೇಲೆ ಫೋಕಸ ಮಾಡಿ ಕೊರಗುತ್ತಾರೆ...

44) ನೀವು ಖುಷಿಯಾಗಿರಬೇಕು ಎಂದುಕೊಳ್ಳುವ ತನಕ ನೀವು ಖುಷಿಯಾಗಿರಲಾರಿರಿ. ದು:ಖ ನಿಮ್ಮನ್ನು ಹಿಡಿದಿಟ್ಟಿಲ್ಲ. ನೀವು ದು:ಖವನ್ನು ಹಿಡಿದಿಟ್ಟುಕೊಂಡಿರುವಿರಿ...

45) ಪ್ರೀತಿ ಪರಿಪೂರ್ಣವಾಗಿರಬೇಕೆಂದಿಲ್ಲ, ನಿಜವಾಗಿದ್ದರೆ ಸಾಕು...

46) ಸಮಸ್ಯೆ ಸಮಸ್ಯೆಯಲ್ಲ. ಸಮಸ್ಯೆಗೆ ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂಬುದು ಸಮಸ್ಯೆಯಾಗಿದೆ...

47) ನೀವು ಮೊದಲು ಕ್ಷಮೆ ಕೇಳಿದರೆ ಸಾಹಸಿಯಾಗುತ್ತೀರಿ, ಕ್ಷಮಿಸಿದರೆ ಬಲಿಷ್ಟರಾಗುತ್ತೀರಿ, ಮರೆತರೆ ಸಂತೋಷವಾಗಿರುತ್ತೀರಿ...

48) ಯಾವುದೇ ಕಾರಣವಿಲ್ಲದೆ ಬೇರೆಯವರಿಗೆ ಒಳ್ಳೆಯವರಾಗಿರಿ...

49) ಮೂರ್ಖರೊಂದಿಗೆ ವಾದಿಸುವುದು ಕೆನ್ನೆ ಮೇಲೆ ಕುಳಿತ ಸೊಳ್ಳೆಯನ್ನು ಸಾಯಿಸುವಂತಿದೆ. ಸೊಳ್ಳೆ ಸತ್ತರೂ ಸಾಯದಿದ್ದರೂ ನಮ್ಮ ಕೆನ್ನೆಗೆ ನಾವೇ ಹೊಡೆದುಕೊಳ್ಳುತ್ತೇವೆ...

50) ನಿಮಗೆ ಸಿಗಬೇಕಾದ ಪ್ರತಿಯೊಂದು ಸರಿಯಾದ ಸಮಯಕ್ಕೆ ನಿಮ್ಮ ಬಳಿ ಬಂದೇ ಬರುತ್ತದೆ. ತಾಳ್ಮೆಯಿಂದಿರಿ...

51) ನಿಮ್ಮ ಮನಸ್ಸನ್ನು ನಿಯಂತ್ರಿಸಿ ಇಲ್ಲವಾದರೆ ಅದು ನಿಮ್ಮನ್ನು ನಿಯಂತ್ರಿಸುತ್ತದೆ...

52) ನೀವು ನಾನು ಎಲ್ಲದರಲ್ಲೂ ಯಾವಾಗಲೂ ಸರಿಯಾಗಿದ್ದೇನೆ ಎಂದುಕೊಂಡರೆ ನೀವು ಬದುಕಿನಿಂದ ಏನನ್ನೂ ಕಲಿಯಲಾರಿರಿ...

53) ಅತಿಯಾದ ಯೋಚನೆಯಿಂದ ಏನು ಆಗುವುದಿಲ್ಲ, ಬದಲಾಗಿ ಅದು ನಿಮ್ಮ ಸಂತೋಷವನ್ನು ಸಾಯಿಸುತ್ತದೆ...

54) ಸೇಡು ತೀರಿಸಿಕೊಳ್ಳಲು ಒದ್ದಾಡಬೇಡಿ, ಕರ್ಮಕ್ಕೆ ಆ ಅವಕಾಶವನ್ನು ಕೊಡಿ...

55) ನಿಮಗೆ ಕಷ್ಟ ಕೊಡುವ, ನಿಮ್ಮನ್ನು ನೋಯಿಸುವ ಪ್ರತಿಯೊಂದು ನಿಮಗೆ ಗುರುವಾಗಿದೆ...

56) ನಿಜವಾದ ರಿಲೆಷನಶೀಪದಲ್ಲಿ ನಂಬಿಕೆ ಮುಖ್ಯವಾಗಿರುತ್ತದೆ. ಅಲ್ಲಿ ಯಾವುದೇ ರಹಸ್ಯಗಳಿರುವುದಿಲ್ಲ, ಸುಳ್ಳುಗಳಿರುವುದಿಲ್ಲ...

57) ಸೈಲೆನ್ಸ ಹಾಗೂ ಸ್ಮೈಲ ಯಾವಾಗಲೂ ಸಕ್ಸೆಸಫುಲ ವ್ಯಕ್ತಿಗಳ ತುಟಿಯ ಮೇಲಿರುತ್ತವೆ...

58) ನೀವು ಬೇರೆಯವರಿಗೆ ಒಳ್ಳೆಯದನ್ನು ಬಯಸಿದರೆ ನಿಮಗೆ ಒಳ್ಳೆದಾಗುತ್ತದೆ. ಇದು ನಿಸರ್ಗದ ನಿಯಮವಾಗಿದೆ...

59) ಬೇರೆ ವ್ಯಕ್ತಿ ಅಥವಾ ಘಟನೆಗಳಿಗೆ ನಿಮ್ಮ ಅಂತರಿಕ ಭಾವನೆಗಳನ್ನು ನಿಯಂತ್ರಿಸಲು ಬಿಡಬೇಡಿ, ಇಲ್ಲವಾದರೆ ನಿಮ್ಮ ಆತ್ಮಶಾಂತಿ ಹಾಳಾಗುತ್ತದೆ...

60) ಯಾವುದೇ ಸಂಬಂಧ ಹಾಗೇ ಸುಮ್ಮನೆ ಸ್ವಾಭಾವಿಕವಾಗಿ ಸಾಯುವುದಿಲ್ಲ. ಈಗೋ, ಅಟಿಟ್ಯುಡ ಹಾಗೂ ಇಗ್ನೋರನ್ಸದಿಂದ ಸಂಬಂಧಗಳ ಹತ್ಯೆಯಾಗುತ್ತದೆ....

61) ನೀವು ನಿಮ್ಮ ಲೈಫಿನ ಪೋಜಿಟಿವ ಸಂಗತಿಗಳ ಮೇಲೆ ಫೋಕಸ ಮಾಡಿದರೆ ನೆಗೆಟಿವ ಸಂಗತಿಗಳು ತಾನಾಗಿಯೇ ದೂರಾಗುತ್ತವೆ...

62) ನೀವು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಿ, ನೀವು ಸರಿಯಾಗಿದ್ದಾಗ ಸುಮ್ಮನಿರಿ...

63) ಮೌನ ಖಾಲಿಯಾಗಿಲ್ಲ, ಅದರಲ್ಲಿ ಬಹಳಷ್ಟು ಉತ್ತರಗಳು ಅಡಗಿವೆ...

64) ಒಳ್ಳೆ ವ್ಯಕ್ತಿಗಳಾಗಿರಿ, ಆದರೆ ಅದನ್ನು ಸಾಬೀತುಪಡಿಸಲು ಸಮಯ ವ್ಯರ್ಥ ಮಾಡಬೇಡಿ...

65) ಕೋಪದಲ್ಲಿರುವಾಗ ಉತ್ತರಿಸಬೇಡಿ, ಸಂತೋಷವಾಗಿರುವಾಗ ಮಾತು ಕೊಡಬೇಡಿ, ದು:ಖದಲ್ಲಿರುವಾಗ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ...

66) ತಮ್ಮ ಸುಳ್ಳುಗಳನ್ನೇ ನಿಜವೆಂದು ನಂಬುವವರೊಂದಿಗೆ ವಾದ ಮಾಡಬೇಡಿ...

67) ಬದುಕು ಸುಲಭವಾಗಲ್ಲ, ನೀವೇ ಬಲಿಷ್ಟರಾಗಬೇಕು...

68) ಮೌನ ಮೂರ್ಖರಿಗೆ ಸರಿಯಾದ ಉತ್ತರವಾಗಿದೆ...

69) ಯಾರಾದರೂ ನಿಮಗೆ ತಪ್ಪಿ ಕೆಟ್ಟದ್ದನ್ನು ಮಾಡಿದಾಗ ಅವರು ನಿಮಗಾಗಿ ಮಾಡಿದ ಒಳ್ಳೆ ಕೆಲಸಗಳನ್ನು ಮರೆಯದಿರಿ...

70) ಒಂಟಿಯಾಗಿದ್ದಾಗ ನಿಮ್ಮ ಯೋಚನೆಗಳ ಮೇಲೆ ಹಿಡಿತ ಸಾಧಿಸಿ, ಗುಂಪಿನಲ್ಲಿದ್ದಾಗ ನಿಮ್ಮ ಮಾತುಗಳ ಮೇಲೆ ಹಿಡಿತ ಸಾಧಿಸಿ...

71) ಸೋಲು ಹೇಡಿಗಳನ್ನು ಹಿಮ್ಮೆಟ್ಟಿಸುತ್ತದೆ, ಶೂರರನ್ನು ಪ್ರೋತ್ಸಾಹಿಸುತ್ತದೆ...

72) ಕೊಡುವವರು ಅತ್ಯಂತ ಸುಖಿ ವ್ಯಕ್ತಿಗಳಾಗಿದ್ದಾರೆ, ತೆಗೆದುಕೊಳ್ಳುವವರಲ್ಲ...

73) ನಿನ್ನೆಯ ಬಗ್ಗೆ ಯೋಚಿಸಿ ನಾಳೆಯನ್ನು ಹಾಳು ಮಾಡಬೇಡಿ. ಇವತ್ತಿನ ದಿನವನ್ನು ಸರಿಯಾಗಿ ಬಳಸಿಕೊಳ್ಳಿ...

74) ಬೇಗನೆ ಗಾಯ ವಾಸಿಯಾಗಬೇಕೆಂದರೆ ಅದನ್ನು ಪದೇಪದೇ ಕೆರೆದುಕೊಳ್ಳುವುದನ್ನು ನಿಲ್ಲಿಸಿ...

75) ಭಯ ಮುಗಿದಾಗ ಬದುಕು ಪ್ರಾರಂಭವಾಗುತ್ತದೆ...
