ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

                         ಹಾಯ್ ಗೆಳೆಯರೇ, ಸದ್ಯಕ್ಕೆ ನಾನು ಗಮನಿಸಿದಂತೆ ಭಾರತದಲ್ಲಿ 90% ಯುವಕ ಯುವತಿಯರು ತಮ್ಮ ಜೀವನದಲ್ಲಿ ಮಹತ್ತರವಾದದ್ದೇನು ಸಾಧಿಸುತ್ತಿಲ್ಲ. ಭಾರತದಲ್ಲಿ ಯುವಕರ ಜನಸಂಖ್ಯೆ ಹೆಚ್ಚಿದೆ. ಆದರೂ ಸಹ ಅವರಿಂದ ಯಾವುದೇ ತೆರನಾದ ಗ್ರೇಟ ಕೆಲಸಗಳಾಗುತ್ತಿಲ್ಲ. ಜಸ್ಟ 1% ಯಂಗಸ್ಟರ್ಸ ಮಾತ್ರ ತಮ್ಮ ಲೈಫಲ್ಲಿ ಸಕ್ಸೆಸಫುಲ ಆಗುತ್ತಿದ್ದಾರೆ. ಮಿಕ್ಕವರು ಆರ್ಡಿನರಿಗಳಾಗುತ್ತಿದ್ದಾರೆ. ಬಹಳಷ್ಟು ಜನ ಯಂಗಸ್ಟರ್ಸ ಹ್ಯಾಪಿಯಾಗಿಲ್ಲ, ಹೆಲ್ದಿಯಾಗಿಲ್ಲ, ತಮ್ಮ ಲೈಫಲ್ಲಿ ಏನು‌ ಅಚೀವ್ ಮಾಡಿಲ್ಲ, ಅವರಲ್ಲಿ ಗೋಲ ಇಲ್ಲ. ಬಹಳಷ್ಟು ಜನ ಡಿಪ್ರೆಶನನಲ್ಲಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಏನಪ್ಪ ಅಂದ್ರೆ ಯುವಕರ ಫೋಕಸ್ ಹಾಗೂ ಎನರ್ಜಿ ಅನಾವಶ್ಯಕ ವಿಷಯಗಳಲ್ಲಿ ವೇಸ್ಟಾಗುತ್ತಿದೆ. ಯುವಕರು ಡೈವರ್ಟಾಗಿದ್ದಾರೆ. 

          ಈಗಂತೂ ಸಣ್ಣಸಣ್ಣ ಮಕ್ಕಳ ಕೈಗೂ ಸಹ ಮೊಬೈಲ್ ಹಾಗೂ ಇಂಟರನೆಟ ಸಿಗ್ತಿದೆ. ಅವರು ಅತೀ ಸಣ್ಣ ವಯಸ್ಸಲ್ಲೇ ಮೊಬೈಲ ಹಾಗೂ ಬ್ಯಾಡ್ ಹ್ಯಾಬಿಟ್ಸಗಳಿಗೆ ಅಡಿಕ್ಟಾಗುತ್ತಿದ್ದಾರೆ. ಈಗ ಮೋಸ್ಟ ಆಫ್ ದ ಯಂಗಸ್ಟರ್ಸ ಮೊಬೈಲ್ ಫೋನಗೆ, ಪೋ***ರ್ನಗೆ, ಸಿಗರೇಟಗೆ, ಡ್ರಿಂಕ್ಸ & ಡ್ರಗ್ಸಗಳಿಗೆ, ಲೇಜಿತನಕ್ಕೆ, ಲವ್ ಸೆ****ಕ್ಸ ದೋಖಾಗೆ, ಮಲ್ಟಿಪಲ್ ಅಫೇರ್ಸಗಳಿಗೆ ಅಡಿಕ್ಟಾಗುತ್ತಿದ್ದಾರೆ.‌ ಈ ಬ್ಯಾಡ ಹ್ಯಾಬಿಟ್ಸಗಳನ್ನು ಮಾಡುತ್ತಾ ಕೂಲ್ ಬಾಯ್ ಕೂಲ್ ಗರ್ಲಗಳಾಗಲು ಟ್ರಾಯ ಮಾಡುತ್ತಿದ್ದಾರೆ. ಆದ್ರೆ ರಿಯಾಲಿಟಿಯಲ್ಲಿ ಇವರು ಕೂಲಾಗುತ್ತಿಲ್ಲ, ಹಾಳಾಗುತ್ತಿದ್ದಾರೆ. ತಮ್ಮ ಗೋಲ್ಡನ ಲೈಫನ್ನು ತಮ್ಮ‌ ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯೌವ್ವನದಲ್ಲಿರುವಾಗಲೇ ಎಲ್ಲ ಫೋಕಸ್ ಹಾಗೂ ಎನರ್ಜಿಯನ್ನು ಕಳೆದುಕೊಂಡು ಅನಸಕ್ಸೆಸಫುಲ್ ಆರ್ಡಿನರಿ ಲೈಫನ್ನು ಸೆಲೆಕ್ಟ ಮಾಡಿಕೊಳ್ಳುತ್ತಿದ್ದಾರೆ. ಅಂಥ ಆರ್ಡಿನರಿ ಯುವಕ ಯುವತಿಯರಲ್ಲಿ ನೀವು ಕೂಡ ಒಬ್ಬರಾಗಿ ಮುಂದೆ ಜೀವನಪೂರ್ತಿ ನರಳಬಾರದೆಂದರೆ ನೀವು ನಿಮ್ಮ ಲೈಫಲ್ಲಿ ಚೆನ್ನಾಗಿ ಸೆಟ್ಲಾಗುವ ತನಕ ಬ್ರಹ್ಮಚರ್ಯವನ್ನು ಪಾಲಿಸಲೇಬೇಕು‌‌. ಇಲ್ಲವಾದರೆ ನೀವು ಸಹ ಅವರಂತೆ ಹಾಳಾಗುತ್ತೀರಾ. 

            ಈಗ ನಿಮಗೆ ಬ್ರಹ್ಮಚರ್ಯವನ್ನು ಯಾಕೆ ಪಾಲಿಸಬೇಕು ಎಂಬುದರ ಬಗ್ಗೆ ಒಂದು ಸಣ್ಣ ಐಡಿಯಾ ಮೂಡಿರಬಹುದು. ಬ್ರಹ್ಮಚರ್ಯ ಎಂದರೇನು? ಬ್ರಹ್ಮಚರ್ಯದಿಂದಾಗುವ ಲಾಭಗಳು ಹಾಗೂ ಯಾವ ರೀತಿ ಬ್ರಹ್ಮಚರ್ಯವನ್ನು ಪಾಲಿಸಬೇಕು ಎಂಬುದನ್ನು ಸ್ಟೆಪ ಬೈ ಸ್ಟೆಪ್ ನೋಡೋಣಾ... 

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

ಬ್ರಹ್ಮಚರ್ಯ ಎಂದರೇನು? What is Brahmacharya? 

                   ಸಿಂಪಲಾಗಿ ಹೇಳಬೇಕೆಂದರೆ ಬ್ರಹ್ಮಚರ್ಯ ಎಂದರೆ ವಿಚಾರ, ಮಾತು ಹಾಗೂ ಕೆಲಸದಲ್ಲಿ ಇಂದ್ರಿಯಗಳನ್ನು ನಿಯಂತ್ರಿಸುವುದು. ನಮ್ಮ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸುವುದು. ನಮ್ಮ ಇಂದ್ರಿಯಗಳಿಗೆ ನಮ್ಮನ್ನು ಹಾಳು ಮಾಡುವ ಅವಕಾಶ ಕೊಡದಿರುವುದು. ನಮ್ಮ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಿ ಒಂದು ಸಾರ್ಥಕ ಜೀವನವನ್ನು ಹೊಂದುವುದು, ಇದೇ ಬ್ರಹ್ಮಚರ್ಯ. ನಮ್ಮ ಋಷಿ ಮುನಿಗಳು ಮಹಾನ ಸಿದ್ಧಿ ಸಾಧನೆಗಳಿಗಾಗಿ ಕಠಿಣ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು. ಆದರೆ ನೀವು ಅವರಂತೆ ಕಠಿಣವಾಗಿ ಪಾಲಿಸುವುದೇನ ಬೇಡ‌. ಒಂದು ಸಕ್ಸೆಸಫುಲ ಲೈಫನ್ನು ಹೊಂದುವುದಕ್ಕಾಗಿ ನೀವು ಸಿಂಪಲ್ ಬ್ರಹ್ಮಚರ್ಯವನ್ನು ಪಾಲಿಸಿ ಸಾಕು. 

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

ಬ್ರಹ್ಮಚರ್ಯದಿಂದಾಗುವ ಲಾಭಗಳು : Benefits of Brahmacharya

                 ನೀವು ಅಟಲಿಸ್ಟ 25ನೇ ವರ್ಷದ ತನಕ ಬ್ರಹ್ಮಚರ್ಯವನ್ನು ಪಾಲಿಸಿದರೆ ಖಂಡಿತ ನೀವೊಬ್ಬ ಯಶಸ್ವಿ ವ್ಯಕ್ತಿಯಾಗುತ್ತೀರಿ. ಇದರಲ್ಲಿ ಯಾವುದೇ ಅನುಮಾನವಿಲ್ಲ‌. ಬ್ರಹ್ಮಚರ್ಯದಿಂದಾಗುವ ಮಹಾನ್ ಲಾಭಗಳು ಇಂತಿವೆ ; 

1) ನೀವು ಬ್ರಹ್ಮಚರ್ಯವನ್ನು ಪಾಲಿಸಿದರೆ ನಿಮಗೆ ನಿಮ್ಮ ಇಂದ್ರಿಯಗಳ ಮೇಲೆ ಕಂಟ್ರೋಲ ಸಿಗುತ್ತದೆ. ನಿಮ್ಮ ಇಂದ್ರಿಯಗಳು ನಿಮ್ಮ ಕಂಟ್ರೋಲನಲ್ಲಿದ್ದರೆ ನಿಮ್ಮ ಮನಸ್ಸು ಹಾಗೂ ದೇಹ ನೀವು ಹೇಳಿದಂತೆ ಕೇಳುತ್ತವೆ. ಮೊದಲು ನಮ್ಮ ಮನಸ್ಸನ್ನು ಗೆದ್ದರೆ ಜಗತ್ತನ್ನೇ ಗೆದ್ದಂತೆ. 

2) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ನೀವು ಮೆಂಟಲಿ ಹಾಗೂ ಫಿಜಿಕಲಿ ಫಿಟ್ಟಾಗುತ್ತೀರಿ. ಮೆಂಟಲಿ ಸ್ಟೇಬಲಾಗುತ್ತಿರಿ. ಇದರಿಂದ ನಿಮಗೆ ನಿಮ್ಮ ಭಾವನೆಗಳ ಮೇಲೆ ಹಿಡಿತ ಸಿಗುತ್ತದೆ. ಜೊತೆಗೆ ಕೋಪ, ತಾಪ, ಚಪಲ, ಚಂಚಲ, ದುರಾಸೆ, ದುಷ್ಟತನ, ದುಶ್ಚಟಗಳಿಂದ ನೀವು ಸೇಫಾಗುತ್ತಿರಿ.  

3) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ‌ ನಿಮ್ಮ ಫೋಕಸ್  ಹಾಗೂ ಪ್ರೋಡಕ್ಟಿವಿಟಿ ಹೆಚ್ಚಾಗುತ್ತದೆ. ನೀವು‌ ಫೋಕಸ್ಡಾಗಿ ಹೆಚ್ಚಿಗೆ ಕೆಲಸ ಮಾಡುತ್ತೀರಿ. ‌ನಿಮ್ಮ ಫೋಕಸ್ ಹೆಚ್ಚಾದಾಗ ನೀವು ಬೇಗನೆ ನಿಮ್ಮ‌ ಗೋಲಗಳನ್ನು ಅಚೀವ್ ಮಾಡುತ್ತೀರಿ, ಬೇಗನೆ ನಿಮ್ಮ ಲೈಫಲ್ಲಿ ಸೆಟ್ಲಾಗುತ್ತೀರಿ. 

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

4) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ನಿಮ್ಮ  ವಿಲ್‌ ಪವರ್ ಹೆಚ್ಚಾಗುತ್ತದೆ, ಕರೇಜ & ಕಾನ್ಫಿಡೆನ್ಸ ಹೆಚ್ಚಾಗುತ್ತದೆ, ಮೆಮೊರಿ ಪವರ್ ಹೆಚ್ಚಾಗುತ್ತದೆ, ಇಂಟಲಿಜೆನ್ಸ ಹೆಚ್ಚಾಗುತ್ತದೆ, Morality ಅಂದ್ರೆ‌ ನೈತಿಕತೆ ಹೆಚ್ಚಾಗುತ್ತದೆ. ಇದರಿಂದ ನೀವು ನಿಮ್ಮ ಜೀವನದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತೀರಿ. ನಿಮ್ಮ ಲೈಫಲ್ಲಿ ಎಷ್ಟೇ ದೊಡ್ಡ ಪ್ರಾಬ್ಲಲ್ಸಗಳು ಬಂದರೂ ಸಹ ನೀವು ಅವುಗಳನ್ನ ಈಜಿಯಾಗಿ ಫೇಸ್ ಮಾಡಿ ಸಕ್ಸೆಸಫುಲ್ಲಾಗುತ್ತೀರಿ. 

5) ಬ್ರಹ್ಮಚರ್ಯ ನಿಮಗೆ ಉನ್ನತ ಮಟ್ಟದ ನಾಲೇಡ್ಜನ್ನು ಸಂಪಾದಿಸಲು ಸಹಾಯ ಮಾಡುತ್ತದೆ. ಜೊತೆಗೆ ನೀವು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಬಲಿಷ್ಟರಾಗುತ್ತೀರಿ. ನಿಮ್ಮಲ್ಲಿ ಒಂದು ಸ್ಪೆಷಲ್ ನಾಲೇಡ್ಜ ಡೆವಲಪ ಆಗುತ್ತದೆ. ನಿಮ್ಮತ್ರ ನಾಲೇಡ್ಜಯಿದ್ದರೆ ನೀವು ಬಯಸಿದ್ದೆಲ್ಲವು ನಿಮಗೆ ಸಿಗುತ್ತದೆ. 

6) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ಒಂದು Attractive Body ಹಾಗೂ Attractive Body Language ನಿಮ್ಮದಾಗುತ್ತದೆ. ನಿಮ್ಮ‌ ಮನಸ್ಸಲ್ಲಿ ಶಾಂತಿ, ಮುಖದಲ್ಲಿ ಕಾಂತಿ, ಕಣ್ಣಲ್ಲಿ ಮಿಂಚು ಮೂಡುತ್ತದೆ‌. ಒಟ್ಟಾರೆಯಾಗಿ ಒಂದು ಹ್ಯಾಪಿ, ಹೆಲ್ದಿ, ವೆಲ್ದಿ & ಸಕ್ಸೆಸಫುಲ ಲೈಫ ನಿಮ್ಮದಾಗುತ್ತದೆ. 

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

ಬ್ರಹ್ಮಚರ್ಯವನ್ನು ಪಾಲಿಸುವುದು ಹೇಗೆ? How to follow Brahmacharya?

                ಬ್ರಹ್ಮಚರ್ಯವನ್ನು ಪಾಲಿಸಲು ನೀವು ಕಾಡಿಗೆ ಹೋಗಿ ತಪಸ್ಸು ಮಾಡಬೇಕಾಗಿಲ್ಲ. ನಿಮ್ಮ ಡೇಲಿ ಲೈಫಸ್ಟೈಲ‌ ಹಾಗೂ ರೂಟಿನನಲ್ಲಿ ಸ್ವಲ್ಪ ಚೇಂಜಸ ಮಾಡಿಕೊಂಡರೆ ಸಾಕು. ನಾನು ಈಗಾಗಲೇ ಹೇಳಿದಂತೆ ನೀವು ಜಸ್ಟ ಸಿಂಪಲ್ ಬ್ರಹ್ಮಚರ್ಯವನ್ನು ಪಾಲಿಸಿದರೂ ಸಹ ನಿಮಗೆ Extraordinary ರಿಜಲ್ಟಗಳು ಸಿಗುತ್ತವೆ. ಬ್ರಹ್ಮಚರ್ಯವನ್ನು ಪಾಲಿಸಲು ಕೆಲವೊಂದಿಷ್ಟು ಟಿಪ್ಸಗಳು ಇಲ್ಲಿವೆ. 

1) ಮ್ಯಾ**ಸ್ಟರ*ಬೇಷನ ಹಾಗೂ ಸೆ***ಕ್ಸ ಮಾಡುವುದನ್ನು ನಿಲ್ಲಿಸಿ. ಏನಿಟೈಮ ಅವುಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಅಪೋಜಿಟ ಸೆ***ಕ್ಸ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಪರಿಶುದ್ಧವಾಗಿರಿ. ನೀವು ನಿಮ್ಮ ಲೈಫಲ್ಲಿ ಸೆಟ್ಲಾಗುವ ತನಕ, ನಿಮ್ಮ ಮ್ಯಾರೇಜಾಗುವ ತನಕ ಹನುಮಂತನಂತಿರಿ. ಮದುವೆಯಾದ ನಂತರ ಶ್ರೀರಾಮನಂತಿರಿ. ನಿಮ್ಮ ಲೈಫ ಪಾರ್ಟನರನಲ್ಲಿ ಮಾನಸಿಕ ಸುಖವನ್ನು ಹುಡುಕಿ, ಬರೀ ದೈಹಿಕ ಸುಖವನ್ನಲ್ಲ. ಲಸ್ಟ ಹಾಗೂ ಸೆ***ಕ್ಸಗಳನ್ನು ರೇಗ್ಯುಲೇಟ ಮಾಡಿ. ಅಟಲಿಸ್ಟ 45 ದಿನಗಳ ಗ್ಯಾಪ ಮೆಂಟೆನ ಮಾಡಿ. ದಿನಾ ಮೂರವೊತ್ತು ಸರಸ, ಸಲ್ಲಾಪ, ಭೋಗಗಳಲ್ಲಿ‌ ಮುಳುಗಬೇಡಿ.‌ ಸಂಕಷ್ಟದಿಂದ ಕೂಡಿದ ಸಂಸಾರದಲ್ಲಿ ಸರಸ ಬೇಕೆಬೇಕು. ಹಾಗಂತ ಬರೀ ಸೆ***ಕ್ಸಗಾಗಿ ಸಾಯಬೇಡಿ. ಊಟಕ್ಕೆ ಉಪ್ಪಿನಕಾಯಿಯಂತೆ ಸರಸ ಇರಲಿ, ಪೂರ್ತಿ ಊಟವಲ್ಲ. 

2) ದಿನಾ ತಪ್ಪದೇ ಸುರ್ಯೋದಯಕ್ಕಿಂತ ಮುಂಚೆಯೆದ್ದು ಯೋಗ, ಪ್ರಾಣಾಯಾಮ, ಧ್ಯಾನ, ರನ್ನಿಂಗ್, ವಾಕಿಂಗ್, ಎಕ್ಸರಸೈಜಗಳನ್ನು ಮಾಡಿ. ನಿಮ್ಮ ದೇಹದಲ್ಲಿ ಕೊನೆ ಉಸಿರು ಇರುವ ತನಕ ಯೋಗ ಹಾಗೂ ಪ್ರಾಣಾಯಾಮಗಳನ್ನು ನೀವು ಮಾಡಲೇಬೇಕು. No option, its compulsion. ದಿನಾ ಯೋಗ ಹಾಗೂ ಎಕ್ಸರಸೈಜ ಮಾಡಿ. ನಿಮ್ಮ ‌ಮನಸ್ಸು, ಉಸಿರಾಟ ಹಾಗೂ ಆಹಾರದ ಮೇಲೆ ನಿಯಂತ್ರಣ ಸಾಧಿಸಿ. ಅಂದಾಗಲೇ ನಿಮ್ಮ ಮನಸ್ಸು ಹಾಗೂ ಇಂದ್ರಿಯಗಳು ನಿಮ್ಮ ‌ಹಿಡಿತಕ್ಕೆ‌ ಸಿಗುತ್ತವೆ. ನೀವು ಇಂದ್ರಿಯಗಳ ಮೇಲೆ ಹಿಡಿತ ಸಾಧಿಸದಿದ್ದರೆ ನಿಮ್ಮ ಬ್ರಹ್ಮಚರ್ಯ ಬೇಗನೆ ಬ್ರೇಕ್ ಆಗುತ್ತದೆ.‌  

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

 3) ಎಲ್ಲ ತರಹದ ಬ್ಯಾಡ್ ಹ್ಯಾಬಿಟ್ಸಗಳಿಗೆ ಬಾಯ್ ಹೇಳಿ. ಲೈಫಲ್ಲಿ ಯಾವತ್ತೂ ನಾನವೇಜ ಮುಟ್ಟಲ್ಲ, ಪ್ರಾಣ ಹಿಂಸೆ ಮಾಡಲ್ಲ, ಡ್ರಿಂಕ್, ಡ್ರ**ಗ, ಸಿಗರೇಟಗಳ ಕಡೆಗೆ ನೋಡಲ್ಲ, ಸ್ವಾರ್ಥಕ್ಕಾಗಿ ಸುಳ್ಳೇಳಲ್ಲ, ಬೇರೆಯವರಿಗೆ ಕೆಟ್ಟದ್ದನ್ನು ಮಾಡಲ್ಲ, ಮೋಸ ಮಾಡಲ್ಲ, ದುಷ್ಟ ಜನರೊಂದಿಗೆ ದೊಸ್ತಿ ಮಾಡಲ್ಲ, ನನ್ನ ಲೈಫ ಪಾರ್ಟನರಗೆ ಯಾವುದೇ ಕಾರಣಕ್ಕೂ ಮೋಸ ಮಾಡಲ್ಲ, ಟೈಮಪಾಸ ಮಾಡಲ್ಲ, ನನ್ನ ದೇಶದ ಋಣ ತೀರಿಸದೆ ಸಾಯಲ್ಲ ಅಂತಾ ಇವತ್ತೇ ನಿಮ್ಮ ಮನೆ ದೇವರಿಗೆ ಪ್ರಾಮಿಸ ಮಾಡಿ. 

                              ಓಕೆ ಗೆಳೆಯರೇ, ಇದೀಷ್ಟು ಬ್ರಹ್ಮಚರ್ಯದ ಮಹತ್ವ ಹಾಗೂ ಆಚರಣಾ ಪದ್ಧತಿ. ಇಷ್ಟ ಆದ್ರೆ ಫಾಲೋ ಮಾಡಿ. ಇಷ್ಟವಾಗದಿದ್ದರೆ ನಿಮ್ಮ ಎನರ್ಜಿ, ಫೋಕಸ ಎಲ್ಲವನ್ನೂ ಕಳೆದುಕೊಂಡು ನಾಲ್ಕೈದು ರೋಗಗಳನ್ನು ‌ಅಂಟಿಸಿಕೊಂಡು ಜೀವನಪೂರ್ತಿ ನರಳಿ. ಚಾಯ್ಸ ನಿಮ್ಮ ಕೈಯಲ್ಲಿದೆ, ಸರಿಯಾಗಿ ಚೂಜ ಮಾಡಿ. ಕೊನೆಯದಾಗಿ ಒಂದು ಮಾತ ಹೇಳುವೆ. ನಿಮ್ಮ ಪ್ಯಾಂಟ್ ಝೀಪ ಟೈಟಾಗಿದ್ದರೆ, ನಿಮ್ಮ ಬಿಜನೆಸ ಪೇಪರ್ಸ ರೈಟಾಗಿದ್ದರೆ, ಪರ್ಸನಾಲಿಟಿ ಪವರಫುಲ್ಲಾಗಿದ್ದಾರೆ, ಕ್ಯಾರೆಕ್ಟರ್ ಕ್ಲೀನಾಗಿದ್ದರೆ ನಿಮ್ಮನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ. ‌ಸೋ ಯಾವ ರೀತಿ ಇರ್ತೀರಿ ನಿಮ್ಮಿಷ್ಟ. ಬರೀ ಕ್ಷಣಿಕ ಸುಖಕ್ಕಾಗಿ ಸೆ***ಕ್ಸಗಾಗಿ ಎಲ್ಲವನ್ನೂ ಕಳೆದುಕೊಳ್ಳಬೇಡಿ, ಸಾಸಿವೆ ಕಾಳಿನ ಚೀಪ ಸುಖಕ್ಕಾಗಿ ಸಾಗರದಷ್ಟು ದು:ಖವನ್ನು ಅನುಭವಿಸಬೇಡಿ. ಮೊದಲು ಲೈಫಲ್ಲಿ ಸೆಟ್ಲಾಗಿ, ಎಲ್ಲವೂ ನಿಮಗೆ ಸಮಯಾನುಸಾರ ಸಿಕ್ಕೇ ಸಿಗುತ್ತದೆ. ಕ್ಷಣಿಕ ಸುಖಗಳನ್ನು ಹುಡುಕಿಕೊಂಡು ಹೋಗಬೇಡಿ. ಬ್ರಹ್ಮಚರ್ಯವನ್ನು ಪಾಲಿಸಿ, ಬಯಸಿದ್ದು ಸಿಗುತ್ತದೆ. All the Best and Thanks You...

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada
Blogger ನಿಂದ ಸಾಮರ್ಥ್ಯಹೊಂದಿದೆ.