26+ ಭಗತಸಿಂಗರ ವಿಚಾರವಾಣಿಗಳು - 26+ Bhagat Singh Quotes in Kannada - Quotes of Bhagat Singh in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

26+ ಭಗತಸಿಂಗರ ವಿಚಾರವಾಣಿಗಳು - 26+ Bhagat Singh Quotes in Kannada - Quotes of Bhagat Singh in Kannada

ಭಗತಸಿಂಗರ ವಿಚಾರವಾಣಿಗಳು - Bhagat Singh Quotes - Quotes of Bhagat Singh in Kannada

1) ನಮ್ಮ ಜೀವನದ ಜವಾಬ್ದಾರಿ ನಮ್ಮ ಹೆಗಲ ಮೇಲೆಯೇ ಇರಬೇಕು. ಏಕೆಂದರೆ ಬೇರೆಯವರ ಹೆಗಲ ಮೇಲೆ ಬರೀ ನಮ್ಮ ಹೆಣ ಹೋಗುತ್ತದೆ... 

Bhagat Singh Quotes in Kannada

2) ದೇಶ ಸೇವೆಯೇ ನನ್ನ ಧರ್ಮವಾಗಿದೆ... 

Bhagat Singh Quotes in Kannada

3) ಪ್ರೇಮಿಗಳು, ಹುಚ್ಚರು ಹಾಗೂ ಕವಿಗಳು ಒಂದೇ ವಸ್ತುವಿನಿಂದ ಮಾಡಲ್ಪಟ್ಟಿರುತ್ತಾರೆ... 

Bhagat Singh Quotes in Kannada

4) ದೇಶಭಕ್ತರನ್ನು ಹೆಚ್ಚಾಗಿ ಜನ ಹುಚ್ಚರೆನ್ನುತ್ತಾರೆ... 

Bhagat Singh Quotes in Kannada

5) ಸೂರ್ಯ ವಿಶ್ವದ ಎಲ್ಲ ದೇಶಗಳನ್ನು ನೋಡುತ್ತಾನೆ. ಆದರೆ ಭಾರತದಂಥ ಸ್ವತಂತ್ರ, ಸುಶೀಲ, ಸುಂದರ, ಸಂತೋಷಕರ ದೇಶವನ್ನು ಸೂರ್ಯ ನೋಡಿರಲು ಸಾಧ್ಯವೇ ಇಲ್ಲ... 

Bhagat Singh Quotes in Kannada

6) ನಾನೊಬ್ಬ ಇಂಥ ಹುಚ್ಚನೆಂದರೆ‌ ನಾನು ಜೈಲಿನಲ್ಲೂ ಸ್ವತಂತ್ರನಾಗಿರುವೆ... 
Bhagat Singh Quotes in Kannada

7) ಯಾವುದೇ ವ್ಯಕ್ತಿಯನ್ನು ಸಾಯಿಸುವುದು ಸುಲಭವಾಗಿದೆ, ಆದರೆ ಅವನ ವಿಚಾರಗಳನ್ನು ಸಾಯಿಸುವುದು ಅಷ್ಟು ಸುಲಭವಲ್ಲ. ದೊಡ್ಡ ಸಾಮ್ರಾಜ್ಯಗಳೇ ಮಣ್ಣಾಗುತ್ತವೆ, ಆದರೆ ವಿಚಾರಗಳು ಸದಾ ಜೀವಂತವಾಗಿರುತ್ತವೆ.‌..
Bhagat Singh Quotes in Kannada

8) ನನಗೂ ಆಸೆ, ಆಕಾಂಕ್ಷೆ ಹಾಗೂ ಜೀವನದ ಕಡೆಗೆ ಆಕರ್ಷಣೆಗಳಿವೆ. ಆದರೆ ಅವಶ್ಯಕತೆ ಬಿದ್ದರೆ ನಾನವುಗಳನ್ನು ತ್ಯಾಗ ಮಾಡಲು ಸಿದ್ಧನಾಗಿರುವೆ. ಇದೇ ನಿಜವಾದ ಬಲಿದಾನವಾಗಿದೆ... 
Bhagat Singh Quotes in Kannada

9) ಜನರನ್ನು ತುಳಿದು ಅವರ ಆಲೋಚನೆಗಳನ್ನು, ವಿಚಾರಗಳನ್ನು ಸಾಯಿಸಲು ಸಾಧ್ಯವಿಲ್ಲ... 
Bhagat Singh Quotes in Kannada

10) ಕಾನೂನಿನ ಪಾವಿತ್ಯ್ರತೆಯೂ ಅದು ಜನರ ಇಚ್ಛೆಯನ್ನು ಅಭಿವ್ಯಕ್ತಿಸುವ ತನಕ ಮಾತ್ರ ಇರುತ್ತದೆ... 
Bhagat Singh Quotes in Kannada

11) ಕ್ರಾಂತಿ ‌ಮನುಕುಲದ ಅನಿವಾರ್ಯ ಅಧಿಕಾರವಾಗಿದೆ. ಸ್ವಾತಂತ್ರ್ಯ ಎಲ್ಲರ ಜನ್ಮಸಿದ್ಧ ಹಕ್ಕಾಗಿದೆ. ಶ್ರಮವೇ ಸಮಾಜದ ನಿಜವಾದ ನಿರ್ವಾಹಕವಾಗಿದೆ... 
Bhagat Singh Quotes in Kannada

12) ನಿರ್ದಯ ವಿಶರ್ಮೆ ಹಾಗೂ ಸ್ವತಂತ್ರ ಚಿಂತನೆ ಕ್ರಾಂತಿಕಾರಿ ಯೋಚನೆಯ ಎರಡು ಮುಖ್ಯ ಲಕ್ಷಣಗಳಾಗಿವೆ... 

 

Bhagat Singh Quotes in Kannada

13) ನಾನೊಬ್ಬ ಮನುಷ್ಯನಾಗಿರುವೆ, ಮನುಷತ್ವದ ಮೇಲೆ ಪ್ರಭಾವ ಬೀರುವ ಎಲ್ಲದರ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ...‌

Bhagat Singh Quotes in Kannada

14) ನನ್ನ ಪೆನ್ ನನ್ನ ಭಾವನೆಗಳೊಂದಿಗೆ ಚಿರಪರಿಚಿತವಾಗಿದೆ. ನಾನು ಇಷ್ಕ (ಪ್ರೇಮ) ಬರೆಯ ಬಯಸಿದರೆ ಅದು ಇಂಕಾಲಾಬ (ಕ್ರಾಂತಿ) ಎಂದು ಬರೆಯುತ್ತದೆ...‌
Bhagat Singh Quotes in Kannada

15) ಪ್ರಯತ್ನಿಸುವುದು ಮನುಷ್ಯನ ಕರ್ತವ್ಯವಾಗಿದೆ, ಯಶಸ್ಸು ಅವಕಾಶ ಹಾಗೂ ಪರಿಸರದ ಮೇಲೆ ನಿರ್ಧಾರಿತವಾಗುತ್ತದೆ...‌
Bhagat Singh Quotes in Kannada

16) ಪ್ರೀತಿ ಯಾವಾಗಲೂ ಮನುಷ್ಯನ ಪಾತ್ರವನ್ನು ಹೆಚ್ಚಿಸುತ್ತದೆ. ಪ್ರೀತಿ ಪ್ರೀತಿಯಾಗಿದ್ದರೆ ಅದು ಯಾವತ್ತೂ ಮನುಷ್ಯನನ್ನು ಕುಗ್ಗಿಸುವುದಿಲ್ಲ... 
Bhagat Singh Quotes in Kannada

17) ಫಿಲಾಸಫಿ ಮಾನವ ದೌರ್ಬಲ್ಯದ ಅಥವಾ ಜ್ಞಾನದ ಕೊರತೆಯ ಫಲಿತಾಂಶವಾಗಿದೆ‌‌... 
Bhagat Singh Quotes in Kannada

18) ಕ್ರಾಂತಿಯ ಖಡ್ಗವು ವಿಚಾರಗಳ ಘೋರ ಕಲ್ಲಿನ ಮೇಲೆ ಹರಿತಗೊಂಡಿದೆ..‌. 
Bhagat Singh Quotes in Kannada

19) ನನ್ನ ಕ್ರಾಂತಿಯು ಅನಿವಾರ್ಯವಾಗಿ ಕಲಹವನ್ನು ಒಳಗೊಂಡಿರಲಿಲ್ಲ‌. ಅದು ಬಾಂಬ್ ಮತ್ತು ಪಿಸ್ತೂಲಗಳ  ಆರಾಧನೆಯಾಗಿರಲಿಲ್ಲ... 
Bhagat Singh Quotes in Kannada

20) ರಾಜನ ವಿರುದ್ಧದ ದಂಗೆ ಯಾವಾಗಲೂ ಎಲ್ಲ ಧರ್ಮಗಳ ಅನುಸಾರ ಪಾಪವಾಗಿದೆ.‌ ಅದಕ್ಕೆ ನಾನು ಆ ದೇವರ ಅಸ್ತಿತ್ವವನ್ನು ನಂಬುವುದಿಲ್ಲ‌‌..‌. 
Bhagat Singh Quotes in Kannada

21) ದಂಗೆ ಒಂದು ಕ್ರಾಂತಿಯಲ್ಲ. ಅದು ಕೊನೆಗೆ ಎಲ್ಲರ ಅಂತ್ಯಕ್ಕೆ ಕಾರಣವಾಗಬಹುದು... 
Bhagat Singh Quotes in Kannada

22) ನಾನು ಸಂತೋಷದಿಂದ ಗಲ್ಲು ಹತ್ತುತ್ತೇನೆ ಮತ್ತು ಕ್ರಾಂತಿಕಾರಿಗಳು ಎಷ್ಟು ಧೈರ್ಯದಿಂದ ತಮ್ಮನ್ನು ತಾವು ತ್ಯಾಗ ಮಾಡಬಹುದೆಂದು ಜಗತ್ತಿಗೆ ತೋರಿಸುತ್ತೇನೆ... 
Bhagat Singh Quotes in Kannada

23) ಇದು ಮದುವೆಯಾಗುವ ಸಮಯವಲ್ಲ. ನನ್ನ ದೇಶ ನನ್ನನ್ನು ‌ಕರೆಯುತ್ತಿದೆ. ನನ್ನ ಹೃದಯ ಮತ್ತು ಆತ್ಮದಿಂದ ದೇಶಕ್ಕೆ ಸೇವೆ ಸಲ್ಲಿಸುವ ಪ್ರತಿಜ್ಞೆ ಮಾಡಿದ್ದೇನೆ... 
Bhagat Singh Quotes in Kannada

24) ಅವರು ನನ್ನನ್ನು ಸಾಯಿಸಬಹುದು, ಆದರೆ ಅವರಿಗೆ ನನ್ನ ಆಲೋಚನೆಗಳನ್ನು ಸಾಯಿಸಲು ಸಾಧ್ಯವಿಲ್ಲ. ಅವರು ನನ್ನ ದೇಹವನ್ನು ಪುಡಿಪುಡಿ ಮಾಡಬಹುದು, ಆದರೆ ಅವರಿಗೆ ನನ್ನ ಆತ್ಮವನ್ನು ಪುಡಿ ಮಾಡಲು ಸಾಧ್ಯವಿಲ್ಲ... 
Bhagat Singh Quotes in Kannada

25) ಕಿವುಡರಿಗೆ ಕೇಳಿಸಬೇಕೆಂದರೆ‌ ಜೋರಾಗಿ ಕೂಗಿ ಹೇಳಬೇಕು...‌
Bhagat Singh Quotes in Kannada

26) ಬಾಂಬು ಹಾಗೂ ಪಿಸ್ತೂಲುಗಳಿಂದ ಕ್ರಾಂತಿಯಾಗುವುದಿಲ್ಲ. ಕ್ರಾಂತಿಯ ಖಡ್ಗ ವಿಚಾರಗಳ ಕಲ್ಲಿನ ‌ಮೇಲೆ ಹರಿತಗೊಳ್ಳುತ್ತದೆ... 
Bhagat Singh Quotes in Kannada

Blogger ನಿಂದ ಸಾಮರ್ಥ್ಯಹೊಂದಿದೆ.