
ಹಾಯ್ ಗೆಳೆಯರೇ, ನಾನಿವತ್ತು ಹೇಳಲು ಹೊರಟಿರುವ ವಿಷಯ ಸಿಂಪಲಾಗಿದೆ, ಆದರೆ ಬಹಳಷ್ಟು ಯುಜಫುಲ್ ಆಗಿದೆ. ಈ ಟಿಪನ್ನು ಫಾಲೋ ಮಾಡಿದರೆ ನಿಮ್ಮ ರಿಲೆಷನಶಿಪಗಳು ಸೇಫಾಗಿರುತ್ತವೆ ಹಾಗೂ ಸಕ್ಸೆಸಫುಲ್ಲಾಗಿರುತ್ತವೆ. ಆ ಗೋಲ್ಡನ ಟಿಪ ಏನಪ್ಪ ಅಂದ್ರೆ ಈ 3 ಜನರೊಂದಿಗೆ ಯಾವುದೇ ಕಾರಣಕ್ಕೂ ವಾದ ಮಾಡಬೇಡಿ. ಒಂದು ವೇಳೆ ನೀವು ಇವರೊಂದಿಗೆ ವಾದ ಮಾಡಿ ಗೆದ್ದರೆ ಖಂಡಿತ ನೀವು ಈ ವ್ಯಕ್ತಿಗಳನ್ನು ಕಳೆದುಕೊಳ್ಳುತ್ತೀರಿ. So don't argue with these 3 people in your life.

1) ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ಅಥವಾ ನಿಮ್ಮನ್ನು ಇಷ್ಟಪಡುವ ವ್ಯಕ್ತಿಯೊಂದಿಗೆ ಯಾವುದೇ ಕಾರಣಕ್ಕೂ ವಾದಿಸಬೇಡಿ. ಆ ವ್ಯಕ್ತಿ ನಿಮ್ಮ ಲೈಫ ಪಾರ್ಟನರ ಆಗಿರಬಹುದು ಅಥವಾ ನಿಮ್ಮ ಲವರ ಆಗಿರಬಹುದು. ನಿಮ್ಮನ್ನು ಇಷ್ಟಪಡುವವರಿಗೆ ನಿಮ್ಮ ಟೈಮ ಹಾಗೂ ಅಟೆನಷನಗಳು ಬೆಸ್ಟ ಗಿಫ್ಟಾಗಿರುತ್ತವೆಯೇ ಹೊರತು ಮಿಕ್ಕ ಸಿಲ್ಲಿ ವಿಷಯಗಳಲ್ಲ. ನಿಮ್ಮ ಟೈಮ & ಅಟೆನಷನ ಅವರಿಗೆ ಸಿಗದಿದ್ದಾಗ ಅವರು ನಿಮ್ಮೊಂದಿಗೆ ಮುನಿಸಿಕೊಳ್ಳುತ್ತಾರೆ, ಸಿಲ್ಲಿ ವಿಷಯಗಳನ್ನು ಮುಂದಿಟ್ಟುಕೊಂಡು ಕ್ಯೂಟಾಗಿ ಕೋಳಿ ಜಗಳವಾಡುತ್ತಾರೆ. ಆಗ ನೀವು ಅವರೊಂದಿಗೆ ವಾದ ಮಾಡಿದರೆ, ಮಾತಿಗೆ ಮಾತು ಬೆಳೆಸಿದರೆ ನೀವು ವಾದವನ್ನು ಗೆಲ್ಲಬಹುದು, ಆದರೆ ನೀವು ನಿಮ್ಮನ್ನು ಇಷ್ಟಪಡುವ ವ್ಯಕ್ತಿಯನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೀರಿ. ಸೋ ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ವಾದ ಮಾಡಬೇಡಿ, ಅವರಿಗೆ ನಿಮ್ಮ ಟೈಮ & ಅಟೆನಷನ ಕೊಡಿ, ನಿಮ್ಮ ರಿಲೆಷನಶೀಪ ಸೂಪರಾಗಿರುತ್ತದೆ.

2) ನಿಮ್ಮ ಕಸ್ಟಮರಗಳ ಜೊತೆಗೆ ವಾದಿಸಬೇಡಿ. ಬಹಳಷ್ಟು ಜನ ತಮ್ಮ ಕಸ್ಟಮರಗಳೊಂದಿಗೆ ಪೊಲಿಟಿಕ್ಸ ಇಲ್ಲವೇ ಫೇವರೆಟ ವ್ಯಕ್ತಿಗಳ ವಿಷಯವಾಗಿ ವಾದ ಮಾಡುತ್ತಾರೆ. ಬಿಜನೆಸ ಮಾಡುವಾಗ ಇವುಗಳ ಡಿಸ್ಕಷನ ಬೇಕಾಗಿರಲ್ಲ, ಆದರೂ ಸಹ ಮಾತು ಎಲ್ಲೊಂದಿಗೆ ಬಂದು ಶುರುವಾಗುತ್ತದೆ.
ಉದಾಹರಣೆಗೆ ; ನೀವು ಯಾವುದಾದರೂ ಅಂಗಡಿಗೆ ಏನಾದರೂ ತರಲು ಹೋದಾಗ ನೀವು ರೇಟ ಹೆಚ್ಚಾಗಿದೆ ಅನ್ನುತ್ತೀರಿ. ಆಗ ಅಂಗಡಿಯಾತ ಎಲ್ಲ ಮೋದಿಜಿ ಹಾಗೂ GSTಯಿಂದ ಎನ್ನುತ್ತಾನೆ. ಆಗ ನೀವು ಮೋದಿಜಿ ಪರವಾಗಿ ವಾದ ಮಾಡಲು ಸ್ಟಾರ್ಟ ಮಾಡುತ್ತೀರಿ, ಅಂಗಡಿಯಾತ ಮೋದಿಜಿ ಅಪೋಜಿಟಾಗಿ ಮಾತನಾಡುತ್ತಾನೆ. ನಿಮ್ಮಿಬ್ಬರ ಮಧ್ಯೆ ಅನಾವಶ್ಯಕ ಡಿಬೇಟ ಆಗುತ್ತದೆ. ನೀವು ಆ ಅಂಗಡಿಯಲ್ಲಿ ಮುಂದೆ ಯಾವುದೇ ಕಾರಣಕ್ಕೂ ಸಾಮಾನು ಖರೀದಿಸಲು ಹೋಗಲ್ಲ. ನಿಮ್ಮ ರಿಲೆಷನಶೀಪ ಹಾಳಾಗುತ್ತದೆ. ಸೋ ನೀವು ಮುಂದೆ ಬಿಜನೆಸಮ್ಯಾನ ಆದಾಗ ಇಲ್ಲವೇ ಈಗಾಗಲೇ ಬಿಜನೆಸಮ್ಯಾನ ಆಗಿದ್ದರೆ ನಿಮ್ಮ ಕಸ್ಟಮರಗಳೊಂದಿಗೆ ವಾದ ಮಾಡಬೇಡಿ, ಅನಾವಶ್ಯಕ ವಿಷಯಗಳನ್ನು ಡಿಸ್ಕಸ ಮಾಡಬೇಡಿ, ಮಾಡಿದರೆ ನಿಮ್ಮ ಕಸ್ಟಮರಗಳನ್ನು ಕಳೆದುಕೊಳ್ಳುತ್ತೀರಿ.

3) ನಿಮ್ಮ ಬಾಸಗಳೊಂದಿಗೆ ವಾದ ಮಾಡಬೇಡಿ. ನಾನು ನೋಡಿದ ಮಟ್ಟಿಗೆ ಬಹಳಷ್ಟು ಜನ ತಮ್ಮ ಬಾಸಗಳೊಂದಿಗೆ ಸಿಲ್ಲಿ ವಾದಗಳನ್ನ ಮಾಡುತ್ತಾರೆ, ಅವರ ಬೆನ್ನ ಹಿಂದೆ ಅವರನ್ನು ಬ್ಲೇಮ್ ಮಾಡುತ್ತಾರೆ. ಎಲ್ಲಿ ಪ್ರಾಬ್ಲಮಾಗುತ್ತಿದೆ ಎಂಬುದನ್ನು ಅವರೊಂದಿಗೆ ಡೈರೆಕ್ಟಾಗಿ ಡಿಸ್ಕಸ ಮಾಡಿ ಹೇಳುವ ಬದಲು ಅನಾವಶ್ಯಕವಾಗಿ ವಾದ ಮಾಡುತ್ತಾರೆ. ನೀವು ಈ ತಪ್ಪನ್ನು ಮಾಡಬೇಡಿ. ನೀವು ಬಿಜನೆಸ್ಸಲ್ಲಿ ಬೆಳೆಯಬೇಕೆಂದರೆ ನೀವು ನಿಮ್ಮ ಬಾಸಗಳೊಂದಿಗೆ ಗುಡ್ ರಿಲೆಷನಶೀಪನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಈಗೋ ಹಾಗೂ ಪರ್ಸನಲ್ ಐಡಿಯಾಲಜಿಗಳನ್ನು ನಿಮ್ಮ ಮನೆಯಲ್ಲಿಟ್ಟು ಜಸ್ಟ ಬಿಜನೆಸ ಮೇಲಷ್ಟೆ ಫೋಕಸ ಮಾಡಬೇಕು. ಇಲ್ಲವಾದರೆ ನೀವು ಸಹ ಸ್ಟೀವ ಜಾಬ್ಸ ತರ ನೀವೇ ಕಟ್ಟಿದ ಕಂಪನಿಯಿಂದ ಕಿಕ್ ಔಟ ಆಗಬಹುದು.

ನಾನು ನನ್ನ ಬಾಸಗಳೊಂದಿಗೆ ಅಂದರೆ ಬಿಜನೆಸ ಪಾರ್ಟನರ್, ಕಂಪನಿಯ ಬೋರ್ಡ ಆಫ್ ಡೈರೆಕ್ಟರ್ಸ, ಶೇರ್ ಹೋಲ್ಡರ್ಸ, ಇನ್ವೇಸ್ಟರ್ಸ, ಪ್ರೋಮೋಟರ್ಸಗಳೊಂದಿಗೆ ವಾದ ಮಾಡುವುದಿಲ್ಲ. ಕೆಲವೊಂದಿಷ್ಟು ಸಲ ನನ್ನ ಮತ್ತು ಅವರ ಮಧ್ಯೆ ಭಿನ್ನಾಭಿಪ್ರಾಯಗಳು ಬರುತ್ತವೆ. ಆಗ ನಾನು ಅವರಿಗೆ ಇರೋ ಫ್ಯಾಕ್ಟನ್ನು ಸಿಂಪಲಾಗಿ ಎಕ್ಸಪ್ಲೇನ ಮಾಡಿ ಡಿಸಿಜನನ್ನು ಅವರ ಮೇಲೆ ಬಿಟ್ಟು ಬಿಡುತ್ತೇನೆ. ಅವರಿಗೆ ಡೆಮೋ ಕೊಟ್ಟು ಎಕ್ಸಪ್ಲೇನ ಮಾಡುತ್ತೇನೆ, ಬಟ್ ವಾದ ಮಾಡಲ್ಲ. ನಾನು ವಾದ ಮಾಡಿದರೆ ಅವರ ಸೆಲ್ಪ ರೆಸ್ಪೆಕ್ಟಗೆ ಹರ್ಟಾಗುತ್ತದೆ. ಆಗ ಅವರು ರಾಂಗ ಆರ್ಡರ್ ಕೊಡಬಹುದು ಇಲ್ಲ ನನ್ನೇ ಕಂಪನಿಯಿಂದ ಕಿಕ್ ಔಟ್ ಮಾಡಬಹುದು. ಅದಕ್ಕೆ ನಾನು ಬಾಸಗಳೊಂದಿಗೆ ವಾದಿಸುವುದಿಲ್ಲ, ಇರೋ ಫ್ಯಾಕ್ಟನ್ನು ಸರಿಯಾಗಿ ಕೂಲಾಗಿ ಕ್ಲೇವರಾಗಿ ಎಕ್ಸಪ್ಲೇನ ಮಾಡುತ್ತೇನೆ, ಆಗ ಬಾಸಗಳು ತಾವಾಗಿಯೇ ಟೈಮ ತಗೊಂಡು ರೈಟ ಡಿಸಿಜನ ತೆಗೆದುಕೊಳ್ಳುತ್ತಾರೆ. ಇನಡೈರೆಕ್ಟಾಗಿ ಎಲ್ಲ ನಾನೆಂದುಕೊಂಡಂತೆಯೆ ಆಗುತ್ತದೆ.

ಸೋ ಗೆಳೆಯರೇ , ನೀವು ನಿಮ್ಮ ಲೈಫಲ್ಲಿ ಹ್ಯಾಪಿ & ಸಕ್ಸೆಸಫುಲ್ಲಾಗಿರಬೇಕೆಂದರೆ ಈ 3 ಜನರೊಂದಿಗೆ ವಾದಿಸಬೇಡಿ, ಅಂದರೆ ನಿಮ್ಮ ಲೈಫ ಪಾರ್ಟನರ ಅಥವಾ ಲವ್ವರ, ನಿಮ್ಮ ಕಸ್ಟಮರ್ಸ & ನಿಮ್ಮ ಬಾಸ್. ಇವರೊಂದಿಗೆ ವಾದಿಸಬೇಡಿ. ಒಂದು ವೇಳೆ ನೀವು ವಾದ ಮಾಡಿ ಗೆದ್ದರೆ ಖಂಡಿತ ಇವರನ್ನು ಪರ್ಮನೆಂಟಾಗಿ ಕಳೆದುಕೊಳ್ಳುತ್ತೀರಿ, ಇದಕ್ಕಿಂತ ದೊಡ್ಡ ನಷ್ಟ ಬೇರೊಂದಿಲ್ಲ. ಸೋ ಥಿಂಕ್ ಮಾಡಿ, ನಿಮ್ಮವರಿಗೆ ಟೈಮ, ಅಟೆನಷನ & ರೆಸ್ಪೆಕ್ಟನ್ನು ಕೊಡಿ. All the best and thanks you...