ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson with Stories - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson with Stories

ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson

                 ಹಾಯ್ ಗೆಳೆಯರೇ, ನಾನಿವತ್ತು ನಿಮಗೊಂದು ಗ್ರೇಟ ಫ್ರೀ ಅಡ್ವೈಜನ್ನು ಕೊಡುತ್ತಿರುವೆ. ಆ ಫ್ರೀ ಅಡ್ವೈಜ ಏನಪ್ಪಾ ಅಂದ್ರೆ ಯಾರಿಗೂ ಸಹ ಯಾವುದೇ ಕಾರಣಕ್ಕೂ ಫ್ರೀ‌ ಅಡ್ವೈಜನ್ನು ಕೊಡಬೇಡಿ. ಮಾರ್ಕೆಟನಲ್ಲಿ ಜನ ಫೀಜ ತೆಗೆದುಕೊಂಡು ಟಿಪ್ಸ ಕೊಡುತ್ತಿರುವಾಗ ನೀವೇಕೆ ಅನಾವಶ್ಯಕವಾಗಿ ಮೂರ್ಖರಿಗೆ ಫ್ರೀ‌ ಅಡ್ವೈಜ ಕೊಟ್ಟು ಲಾಸ ಮಾಡಿ‌‌‌‌ ಕೊಳ್ಳುತ್ತೀರಿ?. ಗೆಳೆಯರೇ, ಈಗ ಬಹಳಷ್ಟು ಜನರಿಗೆ ಇನಕ್ಲುಡಿಂಗ ನಮ್ಮ ಫ್ಯಾಮಿಲಿ ಮೆಂಬರ್ಸ್, ಫ್ರೆಂಡ್ಸ, ರಿಲೆಟಿವ್ಸಗಳಿಗೆ ಬಹಳಷ್ಟು ಒಣ ಈಗೋ ಇದೆ, ರಾಂಗ ಅಟಿಟ್ಯೂಡ ಇದೆ. ನಾವು ಇವರಿಗೆ ಒಳ್ಳೆ ಉದ್ದೇಶದಿಂದ ಒಳ್ಳೆ ಅಡ್ವೈಜನ್ನು ಕೊಟ್ಟರೂ ಸಹ ಇವರು ಬದಲಾಗಲ್ಲ. ಬದಲಿಗೆ ನಮಗೆ ಇನ್ಸಲ್ಟ ಮಾಡುತ್ತಾರೆ, ಹರ್ಟ ಮಾಡುತ್ತಾರೆ, ನಮ್ಮೊಂದಿಗೆ ದುಶ್ಮನಿಯನ್ನು ಮಾಡುತ್ತಾರೆ.‌ ಇಷ್ಟು ಸಾಲದು ಅಂತಾ ನಮಗೆ ಲಾಸನ್ನು ಮಾಡುತ್ತಾರೆ. ಅದು ಹೇಗಂತ ಎರಡು ಸಣ್ಣ ರಿಯಲ್ ಕಥೆಗಳ ಮೂಲಕ ಎಕ್ಸಪ್ಲೇನ ಮಾಡ್ತೀನಿ ಕೇರಫುಲ್ಲಾಗಿ ‌ಕೇಳಿ. 

ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson

ಕಥೆ - 1 : ಒಂದು ಮರದಲ್ಲಿ ‌ಒಂದು‌ ಗುಬ್ಬಚ್ಚಿಗಳ ಫ್ಯಾಮಿಲಿ ವಾಸವಾಗಿತ್ತು. ಅದೇ ಮರದಲ್ಲಿ ‌ಒಂದು ಮಂಗಗಳ ಫ್ಯಾಮಿಲಿಯೂ ವಾಸವಾಗಿತ್ತು. ಅವುಗಳ ಮಧ್ಯೆ ಯಾವುದೇ ದುಶ್ಮನಿ ಇರಲಿಲ್ಲ. ಎರಡೂ ‌ಫ್ಯಾಮಿಲಿಗಳು ಹ್ಯಾಪಿಯಾಗಿ ವಾಸವಾಗಿದ್ದವು. ಇನ್ನೇನು ಬೇಸಿಗೆ ಮುಗಿಯಲು ಬಂತು, ಮಳೆಗಾಲ ಸ್ಟಾರ್ಟಾಗುತ್ತೆ ಅಂತಾ ಗುಬ್ಬಚ್ಚಿಗಳು ಗೂಡು ಕಟ್ಟಲು ಪ್ರಾರಂಭಿಸಿದವು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಸ್ಟಾಕ ಮಾಡಲು ಪ್ರಾರಂಭಿಸಿದವು. ಆದರೆ ಅದೇ ಮರದಲ್ಲಿ ವಾಸವಾಗಿದ್ದ ಮಂಗಗಳು ಮುಂದಿನ ದಿನಗಳ ಬಗ್ಗೆ ಯೋಚಿಸದೇ ಮರದಲ್ಲಿ ‌ಕೊಂಬೆಯಿಂದ ಕೊಂಬೆಗೆ ನೇಗೆಯುತ್ತಾ ಆಟವಾಡುತ್ತಿದ್ದವು. ಆಗ ಗುಬ್ಬಚ್ಚಿಗಳು ಆ ಮಂಗಗಳಿಗೆ "ಮಂಗಣ್ಣಗಳಿರಾ‌ ಇನ್ನೇನು ಮಳೆಗಾಲ‌ ಬರುತ್ತೆ, ನೀವು ನಮ್ಮ‌ ಥರ ಒಂದು ಮನೆ‌‌‌ ಕಟ್ಟಿಕೊಳ್ಳಿ, ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳಿ" ಎಂದು ಫ್ರೀ ಅಡ್ವೈಜನ್ನು ‌ಕೊಟ್ಟವು. ಆದರೆ ಮಂಗಗಳು ಗುಬ್ಬಚ್ಚಿಗಳ ಮಾತನ್ನು ಕಿವಿಗಾಗಿಕೊಳ್ಳದೆ ಆಟವಾಡುತ್ತಾ ಟೈಮವೇಸ್ಟ ಮಾಡಿದವು.‌ 

ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson

                     ಕೆಲ‌‌ ದಿನಗಳ ನಂತರ ಮಳೆಗಾಲ ಬಂತು. ಗುಬ್ಬಚ್ಚಿಗಳು ‌ತಮ್ಮ ಗೂಡಲ್ಲಿ ಆರಾಮಾಗಿದ್ದವು. ಆದರೆ‌ ಮಂಗಗಳು ‌ಮಳೆಯಲ್ಲಿ ನೆನೆಯುತ್ತಾ ಮರದ ಕೊಂಬೆಗಳ ಮೇಲೆ ಕುಳಿತ್ತಿದ್ದವು.‌ ಅದನ್ನು ನೋಡಿ ಗುಬ್ಬಚ್ಚಿಗಳು ಆ ಮಂಗಗಳಿಗೆ "ನೋಡಿದ್ರಾ ಮಂಗಣ್ಣಗಳಿರಾ ಬೇಸಿಗೆಯಲ್ಲಿ ಟೈಮವೇಸ್ಟ ಮಾಡದೇ‌ ನಮ್ಮಂತೆ ಒಂದು ಮನೆ ಕಟ್ಟಿಕೊಂಡಿದ್ದರೆ ಈಗ ಈ ರೀತಿ ಮಳೆಯಲ್ಲಿ ನೆನೆಯುವ ಪ್ರಸಂಗ ಬರುತ್ತಿರಲಿಲ್ಲ, ಮುಂದಿನ ವರ್ಷವಾದರೂ ಮನೆ ಕಟ್ಟಿಕೊಂಡು ಆರಾಮಾಗಿರಿ...." ಎಂದು ಅಡ್ವೈಜ  ಕೊಟ್ಟವು. ಈ ಅಡ್ವೈಜ‌ ಮಂಗಗಳಿಗೆ ಸರಿ ಬರಲಿಲ್ಲ‌. ಅವುಗಳ‌ ಈಗೋ ಹರ್ಟಾಯಿತು. ಕೋಪದಲ್ಲಿ ಆ ಮಂಗಗಳು ಗುಬ್ಬಚ್ಚಿಗಳ‌ ಗೂಡನ್ನು ಕಿತ್ತು ಮರದಿಂದ ಕೆಳಗೆ‌ ಬೀಸಾಕಿದವು. ಗುಬ್ಬಚ್ಚಿಗಳ ಮನೆ‌ ಮುರಿದು ಮಳೆಯಲ್ಲಿ ನೆನಿತಾ ಬಿದ್ದಿತು.‌ ಸೋ ಗೆಳೆಯರೇ, ಮೂರ್ಖರಿಗೆ ಯಾವುದೇ ಕಾರಣಕ್ಕೂ ಫ್ರೀ ‌ಅಡ್ವೈಜನ್ನು ಕೊಡಬೇಡಿ, ಕೊಟ್ಟರೆ ಗುಬ್ಬಚ್ಚಿಗಳಂತೆ ನಿಮ್ಮ‌ ಬಾಳು ಸಹ ಹಾಳಾಗುತ್ತದೆ. 

ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson

ಕಥೆ - 2 : ನಾನು ಕಾಲೇಜಿನಲ್ಲಿರುವಾಗ ನಮ್ಮ‌ ಕ್ಲಾಸಲ್ಲಿ ಒಬ್ಬಳು ದಾರಿತಪ್ಪಿದ ಹುಡುಗಿಯಿದ್ದಳು. ಎಲ್ಲರು ಅವಳನ್ನು ದೋನ ನಂಬರ ಅಂತಾ ಕರೆಯುತ್ತಿದ್ದರು. ಏಕೆಂದರೆ ಅವಳು ಹುಡುಗಿಯರು ಮಾಡಬಾರದ ಎಲ್ಲ ದೋನ ನಂಬರ ಕೆಲಸಗಳನ್ನು ಮಾಡುತ್ತಿದ್ದಳು. ಅಂದರೆ ಪ್ರೀತಿ ಹೆಸರಲ್ಲಿ ಹುಡುಗರನ್ನು ದೋಚುತ್ತಿದ್ದಳು. ಎರಡ್ಮೂರು ತಿಂಗಳಿಗೊಮ್ಮೆ ‌ಬಾಯಫ್ರೆಂಡಗಳನ್ನು ಬದಲಾಯಿಸುತ್ತಿದ್ದಳು, ನಂತರ ಅವರಿಗೆ ಬ್ಲ್ಯಾಕ್ಮೇಲ ಮಾಡಿ‌ ಮೊಬೈಲ್, ಹಣ‌ ಇತ್ಯಾದಿಗಳನ್ನು ಕಿತ್ತುಕೊಳ್ಳುತ್ತಿದ್ದಳು. ಇನ್ನೂ ಬಹಳಷ್ಟು ಹಲ್ಕಾ ಕೆಲಸಗಳನ್ನು ಮಾಡುತ್ತಿದ್ದಳು. ಟೊಟಲಾಗಿ ಅವಳೊಬ್ಬಳು ಗೋಲ್ಡ ಡಿಗ್ಗರರಾಗಿದ್ದಳು. ಅವಳ ರೋಲ ನಂಬರ ಸಹ 2 ಆಗಿತ್ತು, ಅಲ್ಲದೇ ಅವಳು ಎಲ್ಲ ದೋನ ನಂಬರ ಕೆಲಸಗಳನ್ನು ಕದ್ದು ಮುಚ್ಚಿ ಮಾಡುವ ಬದಲು ಬಿಂದಾಸಾಗಿ ಮಾಡುತ್ತಿದ್ದಳು. ‌ಇದು ಎಲ್ಲರಿಗೂ ಗೊತ್ತಿದ್ದರೂ ಎಲ್ಲರೂ ನೋಡಿಯೂ ನೋಡದವರಂತೆ ಸುಮ್ಮನಿದ್ದರು. ಆದರೆ ಒಬ್ಬ ಹುಡುಗ ಅವಳಿಗೆ "ನೋಡು ಅಕ್ಕ ಈ ತರ ಎಲ್ಲ ಮಾಡೋದು ಸರಿಯಲ್ಲ, ನೀನು ‌ಒಳ್ಳೆ ಫ್ಯಾಮಿಲಿಯಿಂದ ಬಂದಿದಿಯಾ, ಇದನ್ನೆಲ್ಲ ಬಿಟ್ಟರೆ ನಿನ್ನ ಫ್ಯುಚರ ಚೆನ್ನಾಗಿರುತ್ತೆ, ಅಲ್ಲದೇ ನಿನಗೆ ಎಲ್ಲರು ದೋನ ನಂಬರ ಅಂತಾ ಕರೆಯೋದು ನಿಲ್ಲುತ್ತೆ..." ಅಂತಾ ಫ್ರೀ ಅಡ್ವೈಜನ್ನು ಕೊಟ್ಟನು. ಇಷ್ಟಕ್ಕೆ ಅವಳು ಕೆರಳಿ ಕೆಂಡಾಮಂಡಲವಾದಳು, ಅವಳ ಚೇಲಾಗಳಿಂದ ಅವನಿಗೆ ಹೊಡೆಯಿಸುವ ಪ್ರಯತ್ನ ಮಾಡಿದಳು. ಆಗದಿದ್ದಾಗ HODಗಳಿಂದ ಅವನಿಗೆ ಬೈಯ್ಯಿಸಿದಳು, ಹೊಡೆಸಿದಳು. ನಂತರ ಅವನಿಗೆ ಬೇರೆಬೇರೆ ರೀತಿ ಮೆಂಟಲಿ ಹ್ಯಾರಸ ಮಾಡಿದಳು. ಪಾಪ ಅವನ ಪರಿಸ್ಥಿತಿ "ಸೂಳೆ ಸಹವಾಸ ಮಾಡಿ ಸುಖಾಸುಮ್ನೆ ಸಂನ್ಯಾಸಿ ಕೆಟ್ಟ..." ಅನ್ನೋ ತರಹ ಆಯ್ತು. ಸೋ ಗೆಳೆಯರೇ, ದೋನ ನಂಬರಗಳಿಗೆ, ದುಷ್ಟರಿಗೆ ಫ್ರೀ ಅಡ್ವೈಜನ್ನು ಕೊಡಬೇಡಿ. ಇಲ್ಲವಾದರೆ ನಿಮ್ಮ ಮಾನಸಿಕ ಶಾಂತಿ ಹಾಳಾಗುವುದರ ಜೊತೆಗೆ ನಿಮ್ಮ ಒಳ್ಳೆ ಹೆಸರು ಸಹ ಹಾಳಾಗುತ್ತದೆ. 

ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson

                          ನೋಡಿದ್ರಲ್ಲ ಗೆಳೆಯರೇ, ಒಂದು ಫ್ರೀ ಅಡ್ವೈಜನ್ನು ಕೊಡುವುದರಿಂದ ಏನೆಲ್ಲ ಅವಾಂತರಗಳಾಗುತ್ತವೆ, ನಮಗೆ ಎಷ್ಟು ನೋವಾಗುತ್ತೆ, ನಷ್ಟವಾಗುತ್ತೆ ಅಂತಾ. ಸೋ ಗೆಳೆಯರೇ, ಯಾರಿಗೂ ಫ್ರೀ ಅಡ್ವೈಜನ್ನು ಕೊಡಬೇಡಿ. ಹಾಳಾಗುವವರನ್ನು ಹಾಳಾಗಲು ಬಿಡಿ.‌ ಇಲ್ಲವಾದರೆ ಅವರು ನಿಮ್ಮನ್ನು ಹಾಳು ಮಾಡುತ್ತಾರೆ. ಅಲ್ಲದೇ ಈ‌ ಮೂರ್ಖರಿಗೆ ಬುದ್ಧಿವಾದ ಹೇಳೊದು ನಮ್ಮ ಕೆನ್ನೆ ಮೇಲೆ ಕುಳಿತ ಸೊಳ್ಳೆಯನ್ನು ಸಾಯಿಸುವಂತಿದೆ. ಸೊಳ್ಳೆ ಸತ್ತರೂ, ಸಾಯದಿದ್ದರೂ ನಮಗೇ ನೋವಾಗುತ್ತದೆ. So friends, don't give free advice to stupid peoples. All the best and Thanks You...

ಯಾರಿಗೂ ಫ್ರಿ ಅಡ್ವೈಜ ಕೊಡಬೇಡಿ - Don't Give Free Advice to anyone - Kannada Life Lesson
Blogger ನಿಂದ ಸಾಮರ್ಥ್ಯಹೊಂದಿದೆ.