ಇತ್ತೀಚಿನ ದಿನಗಳಲ್ಲಿ ಒಂಟಿಯಾಗಿರಲು ಭಯವಾಗುತ್ತದೆ. ಏಕೆಂದರೆ ಉತ್ತರವಿಲ್ಲದ ಪ್ರಶ್ನೆಗಳು ಕಾಡಲು ಪ್ರಾರಂಭಿಸುತ್ತವೆ.
ಮನಸ್ಸಿದೆ, ಆದರೆ ಆ ಮನಸ್ಸಲ್ಲಿ ಪ್ರೀತಿಯಿಲ್ಲ,
ಕಣ್ಣುಗಳಿವೆ, ಆದರೆ ಅವುಗಳಲ್ಲಿ ಕನಸುಗಳಿಲ್ಲ,
ಹೊರಗಿನಿಂದ ಎಚ್ಚರವಿದ್ದೇವೆ, ಆದರೆ ಒಳಗೆ ಮಲಗಿದ್ದೇವೆ,
ಎಲ್ಲವೂ ಇದೆ, ಆದರೆ ಖುಷಿಯಿಲ್ಲ,
ಲೈಫಲ್ಲಿ ಮಜಾ ಬರ್ತಿಲ್ಲ...
ಯಾಕೆ ಈ ರೀತಿಯ ಫೀಲಿಂಗ್ಸಗಳು ಬರುತ್ತವೆ?
ಖಾಲಿ ಹೊಟ್ಟೆಯಿಂದ ಮಲಗಿದವರು, ಬರಿಗಾಲಲ್ಲಿ ನಡೆಯುತ್ತಿದ್ದವರು ಸಕ್ಸೆಸ್ಸಿನ ಶಿಖರವನ್ನೇರಿದ್ದಾರೆ. ಆದರೆ ನಾವು ಎಲ್ಲಿದ್ದೇವೋ ಇನ್ನೂ ಅಲ್ಲೇ ಇದ್ದೇವೆ. ಯಾಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಾವು ಅನಸಕ್ಸೆಸಫುಲ್ಲಾಗಿದ್ದೇವೆ. ಏಕೆಂದರೆ ನಮಗೆ ಬದುಕಲು ಬರಲ್ಲ. ದೊಡ್ಡ ಕನಸುಗಳನ್ನು ಕಾಣಲು ಬರಲ್ಲ.
ನಿಮಗೆ ಬದುಕುವುದನ್ನು ಕಲಿಸಲು ಯಾರು ಬರಲ್ಲ. ನಿಮ್ಮ ಬದುಕೇ ನಿಮಗೆ ಮಹಾನ ಗುರುವಾಗಿದೆ. ಲೈಫಿಗಿಂತ ಬೆಸ್ಟ ಟೀಚರಿಲ್ಲ. ಮೊದಲು ಬದುಕಲು ಕಲಿಯಿರಿ. ದೊಡ್ಡ ಕನಸು ಕಾಣಲು ಕಲಿಯಿರಿ. ದೊಡ್ಡದಾಗಿ ಯೋಚಿಸಲು ಕಲಿಯಿರಿ. ಖುಷಿಯಾಗಿರಲು ಕಲಿಯಿರಿ. ನೋವಿನಲ್ಲೂ ನಗುವುದನ್ನು ಕಲಿಯಿರಿ. ಸಮಸ್ಯೆಗಳನ್ನು ಎದುರಿಸಲು ಕಲಿಯಿರಿ. ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಕಲಿಯಿರಿ. ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಕಲಿಯಿರಿ. ಮೊದಲು ಬದುಕಲು ಕಲಿಯಿರಿ, ನಂತರ ಮುನ್ನುಗ್ಗಿ... All the Best and Thanks you...