ಹಾಯ್ ಗೆಳೆಯರೇ, ಬಹಳಷ್ಟು ಜನ ಕೋಪ ಮಾಡಿಕೊಳ್ಳಬಾರದು, ಕೋಪ ಬರಬಾರದು ಅಂತಾ ಹೇಳುತ್ತಾರೆ. ಆದರೆ ನನ್ನ ಪ್ರಕಾರ ಕೋಪ ಬರುವುದು ನ್ಯಾಚುರಲ ಆಗಿದೆ, ಕೆಲವು ಸರ್ತಿ ಕೋಪ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಕೋಪ ಬರುವುದು ನ್ಯಾಚುರಲ್ಲಾಗಿದೆ. ಕೋಪದಲ್ಲಿ ಬಹಳಷ್ಟು ಎನರ್ಜಿಯಿರುತ್ತದೆ. ನೀವು ಕೋಪಿಸಿಕೊಂಡಾಗ ನಿಮ್ಮ ದೇಹ ಕಂಪಿಸಲು ಪ್ರಾರಂಭಿಸುತ್ತದೆ, ನಿಮ್ಮ ರಕ್ತ ಕುದಿಯಲು ಪ್ರಾರಂಭಿಸುತ್ತದೆ. ಸೋ ಕೋಪದಲ್ಲಂತು ಬಹಳಷ್ಟು ಎನರ್ಜಿಯಿದೆ. ಕೋಪದಲ್ಲಿರುವ ಈ ಎನರ್ಜಿಯನ್ನು ನೀವು ಯಾವ ರೀತಿ ಯುಜ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಲೈಫ ಡಿಸೈಡ್ ಆಗುತ್ತದೆ.

ಕೋಪದಲ್ಲಿರುವ ಎನರ್ಜಿಯನ್ನು ನೀವು ನೆಗೆಟಿವ ಆಗಿ ಯುಜ ಮಾಡಿಕೊಂಡರೆ ನೀವು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೀರಿ, ನಿಮ್ಮ ಸ್ನೇಹ ಪ್ರೇಮ ಸಂಬಂಧಗಳನ್ನು ಮುರಿದುಕೊಳ್ಳುತ್ತೀರಿ, ನೀವು ನಿಮ್ಮ ಕೆಲಸದಲ್ಲಿ, ಲೈಫಲ್ಲಿ ಫೇಲ್ ಆಗುತ್ತೀರಿ, ರಾಂಗ್ ಡಿಸಿಜನಗಳನ್ನ ತೆಗೆದುಕೊಳ್ಳುತ್ತೀರಿ, ಎಲ್ಲವನ್ನೂ ಮತ್ತು ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿ ನರಳುತ್ತೀರಿ.

ನೀವು ಇದೇ ಎನರ್ಜಿಯನ್ನು ಪೋಜಿಟಿವ ಆಗಿ ಯುಜ ಮಾಡಿಕೊಂಡರೆ ನೀವು ಜಗತ್ತನ್ನೇ ಗೆಲ್ಲಬಹುದು, ಈ ಎನರ್ಜಿಯನ್ನು ನೀವು ನಿಮ್ಮ ಕೆಲಸದಲ್ಲಿ ಯುಜ ಮಾಡಿಕೊಂಡರೆ ನೀವು ನಿಮ್ಮ ಲೈಫಿನ ರೇಸಲ್ಲಿ ಸಕ್ಸೆಸಫುಲ್ ಆಗುತ್ತೀರಿ. ಸೋ ಕೇರಫುಲ್ಲಾಗಿ ಥಿಂಕ್ ಮಾಡಿ. ನೀವು ಹೇಗೆ ನಿಮ್ಮ ಕೋಪದ ಎನರ್ಜಿಯನ್ನು ಯುಜ ಮಾಡಿಕೊಳ್ಳುತ್ತೀರಿ ಎಂಬುದು ಕಂಪ್ಲಿಟಾಗಿ ನಿಮ್ಮ ಮೇಲೆ ಡಿಪೆಂಡಾಗುತ್ತದೆ. ನೆಗೆಟಿವ ಆಗಿ ಯುಜ ಮಾಡಿಕೊಂಡರೆ ನಿಮ್ಮಿಂದಲೇ ನೀವು ಡೆಸ್ಟ್ರಾಯ ಆಗುತ್ತೀರಿ. ಅದನ್ನೇ ನೀವು ಪೋಜಿಟಿವ ಆಗಿ ಯುಜ ಮಾಡಿಕೊಂಡರೆ ಜಗತ್ತನ್ನೇ ಗೆಲ್ಲುತ್ತೀರಿ. ಅದಕ್ಕಾಗಿ ಕೋಪದಲ್ಲಿರುವ ಈ ಪವರಫುಲ್ ಎನರ್ಜಿಯನ್ನು ನಿಮ್ಮ ಕೆಲಸದಲ್ಲಿ ಯುಜ ಮಾಡಿ. ನಿಮ್ಮ ಶತ್ರುಗಳನ್ನು ಗೆಲ್ಲಲ್ಲು ಇಲ್ಲವೇ ನಿಮ್ಮ ಸಕ್ಸೆಸನಿಂದ ಸೈಲೆಂಟಾಗಿ ಕೊಲ್ಲಲು ಯುಜ ಮಾಡಿ.

ನಾನು ಈಗಾಗಲೇ ಹೇಳಿದಂತೆ ಕೋಪ ಬರುವುದು ನ್ಯಾಚುರಲ್ಲಾಗಿದೆ, ಅನಿವಾರ್ಯವಾಗಿದೆ. ಒಂದು ವೇಳೆ ನಿಮಗೆ ಅವಮಾನವಾದಾಗ ನಿಮಗೆ ಕೋಪ ಬರದಿದ್ದರೆ ನೀವು ಯಾವುದಕ್ಕಾಗಿ ಬದುಕುತ್ತೀದ್ದಿರಾ? ನಿಮಗೆ ಯಾವುದೇ ಬೆಲೆ ಇಲ್ವಾ? ನಿಮಗೆ ಆತ್ಮಾಭಿಮಾನ ಇಲ್ವಾ? ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ವಾ?
ಒಂದು ವೇಳೆ ನಿಮಗೆ ನಿಮ್ಮ ಮೇಲೆ ಅಭಿಮಾನ ಇದ್ದರೆ ಖಂಡಿತ ನಿಮಗೆ ಕೋಪ ಬರುತ್ತದೆ. ನೀವು ಸತ್ಯದ ಪರವಾಗಿದ್ದರೆ ಖಂಡಿತ ನಿಮಗೆ ಕೋಪ ಬರುತ್ತದೆ. ಸುಳ್ಳೇಳುವ ಜನ ಯಾವಾಗಲೂ ನಗುತ್ತಿರುತ್ತಾರೆ. ನಕ್ಕು ತಮ್ಮ ಸ್ವಾರ್ಥ ಸಾಧಿಸಿ ಎಸ್ಕೇಪ ಆಗುತ್ತಾರೆ. ಯಾರು ಸತ್ಯದ ಪರವಾಗಿರುತ್ತಾರೋ ಅವರಿಗೆ ಕೋಪ ಬಂದೇ ಬರುತ್ತದೆ. ಯಾರಿಗೆ ಕೋಪ ಬರುತ್ತೋ ಅವರು ಯಾವಾಗಲೂ ಸತ್ಯದ ಪರವಾಗಿರುತ್ತಾರೆ. ನಾನಿದನ್ನ ನನ್ನ ಗುರುಗಳಲ್ಲಿ, ಮೆಂಟರಗಳಲ್ಲಿ, ಅಷ್ಟೇ ಏಕೆ ನನ್ನ ಬೆಸ್ಟಫ್ರೆಂಡಳಲ್ಲೂ ಅಬ್ಜರ್ವ ಮಾಡಿರುವೆ. ಸತ್ಯವಂತರಿಗೆ ಕೋಪ ಬರುತ್ತದೆ, ಅವರದನ್ನ ಬುದ್ಧಿವಂತಿಕೆಯಿಂದ ಬಳಸಿಕೊಳ್ಳುತ್ತಾರೆ. ಯಾರಿಗೆ ಯಾವಾಗ ಯಾವ ರೀತಿ ಪಾಠ ಕಲಿಸಬೇಕೋ ಅದೇ ರೀತಿ ಕಲಿಸುತ್ತಾರೆ.

ಇದೆಲ್ಲ ಸರಿ, ಇದು ಆ್ಯಂಗರ್ ಮ್ಯಾನೇಜಮೆಂಟನ ಮಾತಾಯಿತು. ಈಗ ಈ ಕೋಪವನ್ನು ಕಂಟ್ರೋಲ್ ಮಾಡುವುದು ಹೇಗೆ ಅಂತಾ ನೋಡೋಣಾ. ನಿಮಗೆ ಹರ್ಟ ಆದಾಗ, ಇಲ್ಲ ಏನಾದರೂ ಯಡವಟ್ಟಾದಾಗ ಕೋಪ ಬಂದ್ರೆ, ಸರಿ ಇಟ್ಸ ಫೈನ್ ನೋ ಪ್ರಾಬ್ಲಮ್. ಇಟ್ಸ ನ್ಯಾಚುರಲ್. ಆವಾಗ ಇದನ್ನು ಸಾಧ್ಯವಾದಷ್ಟು ಕೂಲ್ ಆಗಿ, ಕಾಮ ಆಗಿ ಸಿಚುವೆಷನನ್ನು ಹ್ಯಾಂಡಲ್ ಮಾಡಿ. ಸಡನ್ನಾಗಿ ರಿಪ್ಲೆ ಮಾಡಬೇಡಿ, ಸ್ವಲ್ಪ ಟೈಮ ತಗೊಂಡು ಆನಂತರ ಸರಿಯಾಗಿ ರಿಸ್ಪಾಂಡ್ ಮಾಡಿ. ಕೋಪದಲ್ಲಿ ಶತ್ರುವಿನ ಬಗ್ಗೆ ಚಿಂತಿಸಬೇಡಿ. ಶಾಂತ ಚಿತ್ತದಿಂದ ಸರಿಯಾಗಿ ಯೋಚಿಸಿ ಸರಿಯಾದ ಡಿಸಿಜನ ತೆಗೆದುಕೊಳ್ಳಿ. ಈ ವಿಷಯದಲ್ಲಿ ನಮ್ಮ ಗ್ರೇಟ ಇಂಡಿಯನ್ ಆರ್ಮಿಯನ್ನು ಇನ್ಸಪಿರೇಷನಾಗಿ ತೆಗೆದುಕೊಳ್ಳಿ. ನಮ್ಮ ಇಂಡಿಯನ್ ಆರ್ಮಿ ಸಡನ್ನಾಗಿ ರಿಪ್ಲೆ ಕೊಡಲ್ಲ, ಸ್ವಲ್ಪ ಟೈಮ ತೆಗೆದುಕೊಂಡು ಸಿಚುವೇಷನನ್ನ ಅನಲೈಜ ಮಾಡಿ ಆನಂತರ ರಿಸ್ಪಾಂಡ್ ಮಾಡಿ ಶತ್ರುವಿನ ಎದೆ ಸೀಳಿ ಬಿಡುತ್ತೆ. ತಾಳಿದವನು ಬಾಳುತ್ತಾನೆ, ತಾಳ್ಮೆಯಿಂದ ಡಿಸಿಜನ ತೆಗೆದುಕೊಂಡು ಮುಂದುವರೆದವನು ಗೆಲ್ಲುತ್ತಾನೆ.

ನಿಮಗೆ ಕೋಪ ಬರದಂತೆ ತಡೆಯಲು ಸಾಧ್ಯವಿಲ್ಲ. ನಾವು ಕೋಪ ಮಾಡಿಕೊಳ್ಳಬಾರದಂತ ಎಷ್ಟೇ ಅಂದುಕೊಂಡರೂ ಕೋಪ ಬಂದೇ ಬರುತ್ತದೆ. ಕೋಪವನ್ನು ತಡೆಯಲು ಸಾಧ್ಯವಿಲ್ಲ. ಬಟ್ ಅದನ್ನ ನಾವು ಸರಿಯಾಗಿ ಮ್ಯಾನೇಜ ಮಾಡಬಹುದು. ಅದಕ್ಕಾಗಿ ಯಾವಾಗಲೂ ಮೆಂಟಲಿ ಸ್ಟೇಬಲಾಗಿರಿ. ಡೇಲಿ ಯೋಗ, ಪ್ರಾಣಾಯಾಮ, ಎಕ್ಸರಸೈಜ, ಮೆಡಿಟೆಷನಗಳನ್ನು ಮಿಸ ಮಾಡದೇ ಮಾಡಿ. ಮೆಂಟಲಿ ಹ್ಯಾಪಿಯಾಗಿದ್ದರೆ ನಿಮಗೆ ಪದೇಪದೇ ಅಷ್ಟೊಂದು ಕೋಪ ಬರಲ್ಲ. ಸೋ ಹ್ಯಾಪಿಯಾಗಿರಿ. ನಿಮ್ಮ ಕೋಪವನ್ನು ಸರಿಯಾಗಿ ಮ್ಯಾನೇಜ ಮಾಡಿ, ಯಾವಾಗಲೂ ಸಕ್ಸೆಸಫುಲ್ಲಾಗಿರಿ, ಹ್ಯಾಪಿಯಾಗಿರಿ. All the Best and Thanks You....
