ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                                                           ವಿಶೇಷ ಸೂಚನೆ 

                       ಈ ಕಥೆ ಕಾಲ್ಪನಿಕವಾದರೂ ಒಂದು ನೈಜ ಘಟನೆಯಿಂದ‌ ಪ್ರೇರಿತವಾಗಿದೆ. 2018ರಲ್ಲಿ ಗುರುಗ್ರಾಮನಲ್ಲಾದ ಒಂದು ವೈರಲ ಘಟನೆಯಿಂದ ಸ್ಪೂರ್ತಿ ಪಡೆದುಕೊಂಡು ನಾನೀ ಕಥೆಯನ್ನು ಬರೆದಿರುವೆ. ಈ ಕಥೆಯಲ್ಲಿ ಬರುವ ಒಂದು ಘಟನೆ ಮಾತ್ರ ನಿಜವಾಗಿದೆ. ಮಿಕ್ಕ 99% ಕಥೆ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ.  

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

               ಅವತ್ತು ಸಂಡೇ ರಜೆಯಿದ್ದರೂ ಸಹ ರೀತು ಕಂಪನಿಗೆ ಬಂದಿದ್ದಳು. ಅದಕ್ಕೆ‌ ಒಂದೇ‌ ಕಾರಣ ಏನಪ್ಪ ಅಂದರೆ ಆಕೆ ಅವನ‌ ಕಲೀಗ ಸಂದೀಪನನ್ನು ಪ್ರೀತಿಸುತ್ತಿದ್ದಳು, ಮದುವೆಯಾದರೆ ಅವನನ್ನೇ ಮದುವೆಯಾಗುವೆ ಎಂದು ನಿರ್ಧಾರ ಮಾಡಿದ್ದಳು. ಅದಕ್ಕಾಗಿ ‌ಮನೆಯವರನ್ನು‌ ಒಪ್ಪಿಸಲು‌ ಇಲ್ಲವೇ ಮನೆ ಬಿಟ್ಟು ಓಡಿ‌ ಹೋಗಲು ಸಹ ತಯಾರಾಗಿದ್ದಳು. ಅವನ ಲವ್‌ ಪ್ರಪೋಜಲನ್ನು ಒಪ್ಪಿಕೊಂಡ ದಿನವೇ ಆಕೆ ಅವನೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸೋಸಿಯಲ ಮೀಡಿಯಾಗಳಲ್ಲಿ ಹಾಕಿದ್ದಳು. ರೀತು ಸಂದೀಪನೊಂದಿಗೆ ಎಂಗೇಜಾಗಿದ್ದಾಳೆ ಅಂತಾ ಎಲ್ಲರಿಗೂ ಗೊತ್ತಾಗಿತ್ತು. ಆದರೆ ಸಂದೀಪ ಅವಳಷ್ಟು ಕಮ್ಮಿಟ್ಟಾಗಿರಲಿಲ್ಲ. ಆತ ಅವಳನ್ನು ಅಷ್ಟೊಂದು ಸೀರಿಯಸ್ಸಾಗಿ ಲವ್ ಮಾಡಿರಲಿಲ್ಲ. ಬರೀ ಟೈಮಪಾಸಗಾಗಿ ಲವ್ ಮಾಡಿದ್ದನು. ಆಕೆ ಅವನನ್ನು ಮೀಟಾಗಲು ಬಂದಿದ್ದರೆ ಆತ ಅವಳೊಂದಿಗೆ ಬ್ರೇಕಪ‌ ಮಾಡಿಕೊಳ್ಳಬೇಕಂತಾನೆ ಅವಳನ್ನು ಫೋನ ಮಾಡಿ ಕರೆಸಿಕೊಂಡಿದ್ದನು. ಅವಳು ಬಂದ ತಕ್ಷಣವೇ ಅವಳಿಗೆ ತಾನು ಅವಳೊಂದಿಗೆ ಬ್ರೇಕಪ ಮಾಡಿಕೊಳ್ಳುವುದಾಗಿ ಹೇಳಿದನು. ಆಗ ಅವರಿಬ್ಬರ ‌ಮಧ್ಯೆ ಒಂದು ದೊಡ್ಡ ಮಾತಿನ ಯುದ್ಧವಾಯಿತು. 

ರೀತು : ನಾ ನಿನ್ನೇ ಮದುವೆಯಾಗಬೇಕು ಅಂತಾ ಕನಸು ಕಾಣುತ್ತಿರುವೆ.‌ ಆದರೆ ನೀ ನಂಜೊತೆ ಬ್ರೇಕಪ ಮಾಡಿಕೊಳ್ಳೊ ಮಾತಾಡುತ್ತಿರುವೆಯಲ್ಲ ಯಾಕೆ? ನೀನು ‌ತಮಾಷೆ ಮಾಡ್ತಿಲ್ಲ ತಾನೇ? 

ಸಂದೀಪ : ತಮಾಷೆ ‌ಮಾಡ್ತಿಲ್ಲ, ನಾನು ನಿಜವಾಗಿಯೂ ನಿನ್ನೊಂದಿಗೆ ಬ್ರೇಕಪ ಮಾಡಿಕೊಳ್ತಿರುವೆ. ನನಗೆ ನಿಂಜೊತೆ ಮದುವೆಯಾಗಲು ಆಗಲ್ಲ... 

ರೀತು : ಓಕೆ, ಯಾಕೆ ಅಂತಾನಾದ್ರೂ ಹೇಳು. 

ಸಂದೀಪ‌ : ನೀ ಈಗ ಮೊದಲಿನಂತಿಲ್ಲ. ಮೊದಲು ನೀ‌ ನಿನ್ನೆಲ್ಲ ಟೈಮನ್ನು ನಂಜೊತೆ ತಮಾಷೆಯಲ್ಲಿ ಸ್ಪೆಂಡ‌ ಮಾಡ್ತಿದ್ದೆ.‌ ಹಗಲು ರಾತ್ರಿ ನಂಜೊತೆ ಫೋನಲ್ಲಿ ಮಾತಾಡ್ತಿದ್ದೆ, ಚಾಟ ಮಾಡ್ತಿದ್ದೆ. ಆದ್ರೆ ನೀ ಈಗ ನನಗೆ ಅಷ್ಟೊಂದು ಟೈಮ ಮತ್ತೆ ಇಂಪಾರಟನ್ಸ ಕೊಡ್ತಿಲ್ಲ. ಯಾವಾಗ ನೋಡಿದರೂ ಸ್ಟಾರ್ಟಪ, ಬಿಜನೆಸ ಅಂತಾ ಮಾತಾಡ್ತಿಯಾ. ನಿನಗೆ ಹಣದ ಹುಚ್ಚು ಹಿಡಿದಿದೆ. ನನಗೆ ಸಿಂಪಲಾಗಿರೋ ಹುಡುಗಿ ಹೆಂಡ್ತಿಯಾದ್ರೆ ಸಾಕು, ನನಗೆ ನೀನು ಬೇಕಿಲ್ಲ. 

ರೀತು : ಏ ನಾ ಎಷ್ಟೇ ಬಿಜಿಯಾದ್ರೂ ದಿನಾ ನಿನಗೆ ಫೋನ ಮೆಸೆಜ ಮಾಡ್ತಿನಲ್ಲೋ? ನಾನು ಸ್ಟಾರ್ಟಪ‌ ಸ್ಟಾರ್ಟ ಮಾಡ್ತಾ ಇರೋದು ನಮ್ಮ ಫ್ಯುಚರ ಸೆಕ್ಯುರಾಗಿರಲಿ ಅಂತಾ ತಾನೇ? ನೋಡು ನಾ ನಿನಗೆ ಮೊದಲಿನಂತೆ ಟೈಮ‌ ಕೊಡದಿದ್ರು‌ ಫುಲ್ ಇಂಪಾರಟನ್ಸ ಕೊಟ್ಟಿರುವೆ. ಮದುವೆಯಾದ ಮೇಲೆ ಫುಲ್ ಟೈಮ‌ ಕೊಡುವೆ. ಪ್ಲೀಜ ಕಣೋ ಬ್ರೇಕಪ ಮಾಡಿಕೋಳಬೇಡ್ವೋ. ನಾ ನಿನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿರುವೆ, ಪ್ಲೀಜ ಅರ್ಥ ಮಾಡ್ಕೋಳೊ...  

ಸಂದೀಪ : ನನಗೆ ಎಲ್ಲವೂ ಅರ್ಥವಾಗಿದೆ, ನಾನು ಬಹಳಷ್ಟು ಯೋಚನೆ ಮಾಡಿಯೇ ಈ ನಿರ್ಧಾರ ತೆಗೆದುಕೊಂಡಿರುವೆ. ನನಗೆ ನಿಂಜೊತೆ ಬದುಕೊಕ್ಕಾಗಲ್ಲ. ಬೆಸ್ಟ ಆಫ್ ಲಕ್ ಬಾಯ್...‌

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                           ಈ ತರ ಹೇಳಿ ಸಂದೀಪ ತಿರುಗಿ ನೋಡದೆ ಹೋದನು. ರೀತು ಅವನನ್ನೇ ನೋಡುತ್ತಾ ನಿಂತಳು. ಅವಳು ಅವನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದಳು, ಅವನ ಜೊತೆಗೆ ಜೀವನ ಶೇರ ಮಾಡಲು ಸಿದ್ಧಳಾಗಿದ್ದಳು. ಆದರೆ ಅವಳಂಥ ಒಳ್ಳೇ‌ ಹುಡುಗಿ ಜೊತೆಗೆ ಬಾಳೋವಷ್ಟು ಸಂದೀಪ ಒಳ್ಳೆಯವನಾಗಿರಲಿಲ್ಲ. ಅವನಿಗೆ ಆ ಯೋಗ್ಯತೆಯೂ ಇರಲಿಲ್ಲ. ರೀತುವಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂಗಾಯಿತು. ಅವಳು ನಿಂತ ಜಾಗದಲ್ಲೇ ಕುಸಿದು ಕುಂತಳು. ಅವಳ ಕಣ್ಣಿನಿಂದ ಜಲಪಾತ ಧಾರೆ ಹರಿಯಿತು. ಆಕೆ ತನ್ನನ್ನು ತಾನು ಬೇಗನೆ ಸಂತೈಸಿಕೊಂಡು ಸ್ಕೂಟಿಯಲ್ಲಿ ಅವನನ್ನು ‌ಫಾಲೋ‌ ಮಾಡಿದಳು. ಆಕೆಗೆ ಅವನು ನನ್ನಂತೆ ಅಳ್ತಾನಾ ಎಂಬ ಕುತೂಹಲ ಕಾಡ್ತಿತ್ತು. ಅದಕ್ಕಾಗಿ ಆಕೆ ಅವನನ್ನು ಫಾಲೋ ಮಾಡಿದಳು. ಆತ ಜನರಿರದ ಒಂದು ಸಿಟಿ ಪಾರ್ಕಿಗೆ ಹೋಗಿ ಯಾರಿಗೋ ಫೋನ ಮಾಡಿ‌ ಬರಲು ಹೇಳಿದನು. ಅರ್ಧ ಗಂಟೆ ನಂತರ ಒಂದು ಹುಡುಗಿ ಅವನನ್ನು ಹುಡುಗಿಕೊಂಡು ಬಂದಳು. ಅವಳು ಸಹ ಅವನ ಕಲಿಗ ಆಗಿದ್ದಳು. ಅವನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದಳು. ಸಂದೀಪ ಅವಳನ್ನು ‌ಹಗ ಮಾಡಿ ಒಂದು ಮರದ‌ ಕೆಳಗೆ ಕರೆದುಕೊಂಡೊಗಿ ಅವಳನ್ನು ಮಡಿಲಲ್ಲಿ ‌ಮಲಗಿಸಿಕೊಂಡು ಕುಂತನು. ಅವರನ್ನು ಯಾರು ನೋಡ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಅವಳ ತುಟಿಗಳಿಗೆ ತುಟಿ ಸೇರಿಸಿದನು. ಇದನ್ನೆಲ್ಲ‌ ರೀತು ತನ್ನ ಕಣ್ಣಾರೆ ನೋಡಿದಳು. ಅವಳಿಗೆ ಅವನ‌ ಅಸಲಿ ಮುಖದ ಪರಿಚಯವಾಯಿತು. ಆತ ಯಾಕೆ ಅವಳೊಂದಿಗೆ ಬ್ರೇಕಪ ಮಾಡಿಕೊಂಡ ಎಂಬುದು ಸಹ ತಿಳಿಯಿತು. ಅವಳಿಗೆ ಸಂದೀಪನನ್ನು ಸಾಯಿಸಿ ಬಿಡುವಷ್ಟು ಕೋಪ ಬಂದಿತು. ಆದರೆ ಆಕೆ ತನ್ನನ್ನು ತಾನು ಕಂಟ್ರೋಲ ಮಾಡಿಕೊಂಡಳು. ಅವನ ರಾಸಲೀಲೆಯ ಸಣ್ಣ ವಿಡಿಯೋ ಮಾಡಿಕೊಂಡು ಆಕೆ ಅಲ್ಲಿಂದ ತನ್ನ ಮನೆಗೆ ಹೋದಳು. 

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                    ಮನೆಗೋಗಿ ರೀತು ತನ್ನ ರೂಮಲ್ಲಿ ಬಾಗಿಲಾಕಿ ಕೊಂಡಳು. ಅವಳು ಸಂದೀಪನನ್ನು ಪ್ರೀತಿಸುತ್ತಿರುವೆ, ಅವನನ್ನೇ ಮದುವೆಯಾಗುವೆ ಎಂದೇಳಿ ಅವನೊಂದಿಗಿರುವ ಫೋಟೋವನ್ನು ಸೋಸಿಯಲ‌ ಮೀಡಿಯಾದಲ್ಲಿ ಹಾಕಿ ಊರಿಗೆಲ್ಲ ಡಂಗುರ ಸಾರಿದ್ದಳು. ಆದರೆ ಆತ ಅವಳಿಗೆ ಕೈಕೊಟ್ಟು ಮತ್ತೊಬ್ಬಳ ಗುಲಾಮನಾಗಿದ್ದನು. ಅವಳಿಗೆ ಏನು ಮಾಡಬೇಕು ಎಂಬುದು ತೋಚದಾಯಿತು. ಅವಳಿಗೆ "ನನ್ನನ್ನು ಬೇರೆ ಯಾವ ಹುಡುಗ ಮದ್ವೆಯಾಗ್ತಾನೆ, ನಾನು ನನ ಲವ ಸ್ಟೋರಿ ಎಲ್ಲರಿಗೂ ಹೇಳಿರುವೆ, ನನ್ನ ಲೈಫ ಹಾಳಾಯ್ತು" ಎಂದೆಲ್ಲ ಚಿಂತಿಸಿ ಸೂಸೈಡ ಮಾಡಿಕೊಂಡು ಸಾಯಲು ಮುಂದಾದಳು. ಅದಕ್ಕಾಗಿ ಪಟಪಟನೆ ಸೂಸೈಡ ನೋಟ ಕೂಡ ಬರೆದಳು. ಆದರೆ ಅವಳಿಗೆ ಸಾಯುವ ಮುಂಚೆ ಒಮ್ಮೆ ತನ್ನ ಅಪ್ಪ ಅಮ್ಮನ ಜೊತೆಗೆ ಮಾತಾಡಬೇಕು ಎಂದೆನಿಸಿತು. ಆಕೆ ಅವರೊಂದಿಗೆ ಮಾತನಾಡಲು ರೂಮ ಬಿಟ್ಟು ಹೊರಬಂದಳು. ನಸುನಗುತ್ತಾ ಅಪ್ಪನ ಜೊತೆಗೆ ಬಹಳಷ್ಟು ಪ್ರೀತಿಯಿಂದ ‌ಮಾತನಾಡಿದಳು. ಆದರೆ ಅಮ್ಮನ ಜೊತೆಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ಅವಳಿಗೆ ಆಗಲಿಲ್ಲ. ಆಕೆ ಅಮ್ಮನಿಗೆ ಊಟಕ್ಕೆ ಏನ ಮಾಡಿದಿಯಾ ಅಂತಷ್ಟೇ ಕೇಳಿದಳು. ಆದರೆ ಅವಳಮ್ಮ ಅವಳ ಕೆನ್ನೆಗೆ ಚಟಾರನೇ ಬಾರಿಸಿದಳು. ಏಕೆಂದರೆ ಆಕೆ ಅಳುತ್ತಾ ರೂಮಲ್ಲಿ ಹೋಗಿ ಬಾಗಿಲಾಕಿಕೊಂಡಿದ್ದನ್ನ ಅವಳಮ್ಮ ನೋಡಿದ್ದಳು. ಅದರ‌ ಆಧಾರದ ಮೇಲೆ ರೀತು ನಗುನಗುತ್ತಾ ನಾಟಕವಾಡುತ್ತಿದ್ದಾಳೆ ಎಂಬುದು ಅವಳಿಗೆ ಗೊತ್ತಾಗಿತ್ತು. ಆದರೆ ಅವಳಪ್ಪನಿಗೆ ಏನು ಅರ್ಥವಾಗಿದೆ ಆತ ರೀತುವನ್ನು ಸಮಾಧಾನ ಮಾಡಲು ಮುಂದಾದನು. ಆಗ ಅವರಮ್ಮ ಅವಳನ್ನು ಎಳೆದುಕೊಂಡು ಅವಳ ರೂಮಿಗೆ ಕರೆದೋಯ್ದಳು. ಅವಳ ರೂಮಲ್ಲಿ ಅವರಿಗೆ ಅವಳೇ ಬರೆದಿಟ್ಟ ಸೂಸೈಡ ನೋಟ ಸಿಕ್ಕಿತು. ಅದನ್ನು ನೋಡಿ ಅವರಪ್ಪ ಏನು ಮಾತಾಡದೆ ಅಪಸೆಟ ಆಗಿ ಕುಂತರು.

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                        ರೀತುವಿನ ಅಮ್ಮ ರೀತುಳ ಬೆಸ್ಟಫ್ರೆಂಡ ಸುರಭಿಗೆ ಕಾಲ್ ಮಾಡಿ ತಕ್ಷಣವೇ ಅವರ ಮನೆಗೆ ಬರುವಂತೆ ಹೇಳಿದಳು. ರೀತು ಮೌನವಾಗಿ ಕುಂತಳು. ಅವಳಮ್ಮ ಅವಳಪ್ಪ‌ ಅವಳನ್ನೇ ನೋಡುತ್ತಾ ಸುಮ್ಮನೆ ಕುಂತರು. ಅರ್ಧ ಗಂಟೆಯಲ್ಲಿ ಸುರಭಿ ರೀತುಳ ಮನೆಗೆ ಬಂದಳು. ಎಲ್ಲರೂ ಮೌನವಾಗಿ ಕುಳಿತಿರುವುದನ್ನು ನೋಡಿ ಆಕೆ ಗಾಬರಿಯಾದಳು.‌ ಆಕೆ ಏನಾಗಿದೆ ನಿಮಗೆಲ್ಲ ಎಂದು ಕೇಳಿದಾ ರೀತುಳ‌ ಅಪ್ಪ ಅವಳಿಗೆ ರೀತು ಬರೆದ ಸೂಸೈಡ ನೋಟ ಕೊಟ್ಟರು. ಅದನ್ನೊದಿ ಸುರಭಿ ರೀತುಳಿಗೆ ಬೈಯ್ಯುವ ಬದಲು "ಅಯ್ಯೋ ಹುಚ್ಚಿ ಇಷ್ಟಕ್ಕೆ ಯಾರಾದರೂ ಸಾಯ್ತಾರಾ? ನೀನು ಅವನನ್ನು ಪ್ರೀತಿಸುತ್ತಿರುವೆ ಅಂತಾ ಸೋಸಿಯಲ‌ ಮೀಡಿಯಾದಲ್ಲಿ ಹಾಕಿರುವೆ ಅಷ್ಟೇ. ನಿನ್ನಂಥ ಒಳ್ಳೇ ಹುಡುಗಿನಾ ಮದುವೆಯಾಗೋಕೆ ಹುಡುಗರು ಕ್ಯೂ ನಲ್ಲಿ ನಿಲ್ತಾರೆ. ನೀನು ಅವನನ್ನು ‌ಈಗ ಪ್ರೀತಿಸುತ್ತಿಲ್ಲ, ಅವ ಮೋಸಗಾರ ಅಂತಾ ಜಗತ್ತಿಗೆ ಡಂಗುರ ಸಾರಿ ಬಿಡು, ಅವನನ್ನ ಇವತ್ತೇ ಮರೆತು ಬಿಡು. ಹೊಸ‌ ಲೈಫ ಸ್ಟಾರ್ಟ ಮಾಡು. ಆ ಚೀಟರಗೆ ಬೇರೆ ಹುಡುಗಿ ಸಿಕ್ಕಿದಾಳೆ. ಆದ್ರೆ ನಿನ್ನಪ್ಪ ನಿಮ್ಮಮ್ಮನಿಗೆ ಬೇರೆ ಮಗಳು ಸಿಗ್ತಾಳಾ? ನನಗೆ ನಿನ್ನಂಥ ಬೇರೆ‌ ಗೆಳತಿ ಸಿಗ್ತಾಳಾ? ಯೋಚನೆ ಮಾಡು" ಅಂತೆಲ್ಲ ಬುದ್ಧಿವಾದ ಹೇಳಿ ಅವಳ ತಲೆ ಸವರಿ ಅವಳನ್ನು ಸಮಾಧಾನ ‌ಮಾಡಿದಳು. ರೀತುಳಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಅವಳು ಅವಳಮ್ಮನನ್ನು ಅಪ್ಪಿಕೊಂಡು ಅತ್ತಳು. ಅವಳಪ್ಪ ಅವಳಿಗೆ "ನೀನು ನಿನ್ನ ಗೋಲ‌ ರೀಚ್ ಆಗು, ನಿನ್ನ ಮದುವೆನಾ ನಾನು ಊರಿಗೆ ಊಟ ಹಾಕಿಸಿ ಮಾಡ್ತೀನಿ" ಅಂತೇಳಿದರು. ಸುರಭಿ ಅವಳಿಗೆ "ನಾ ನಿಂಜೊತೆ ಲೈಫಲಾಂಗ ಜೊತೆಗಿರ್ತಿನಿ, ನೀ ಏನೇ ಮಾಡಿದ್ರೂ ನಾ ನಿನ್ನ ಜೊತೆಗೆ ನಿಂತು ಸಪೋರ್ಟ್ ಮಾಡ್ತೀನಿ, ಇನ್ಮುಂದೆ ಈ ತರ ಮಾಡಬೇಡ" ಅಂತೇಳಿದಳು. ಆಗ ರೀತುಳಿಗೆ ಒಂದು ಐಡಿಯಾ ಹೊಳೆಯಿತು. ಅವಳು ಒಂದು ಗಂಟೆಯಲ್ಲಿ ಬರ್ತಿನಿ ಅಂತೇಳಿ ಸುರಭಿಯನ್ನು ಕರೆದುಕೊಂಡು ಸ್ಕೂಟಿ ಮೇಲೆ ಹೋದಳು. 

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

               ಸುರಭಿ ರೀತುಳಿಗೆ ಎಲ್ಲಿಗೆ ಕರೆದುಕೊಂಡು ಹೊರಟಿರುವೆ ಎಂದು ಕೇಳ್ತಾನೆ ಇದ್ದಳು‌. ಆದರೆ ಅವಳು ಸುಮ್ಮನೆ ಬಾ ಅಂತೇಳಿ ವೇಗವಾಗಿ ಒಂದು ಡಿಜೆ ಬ್ಯಾಂಡಿನ ಆಫೀಸನ ಎದುರು ಸ್ಕೂಟಿ ತಂದು ನಿಲ್ಲಿಸಿದಳು. ರೀತು ಬ್ಯಾಂಡ ಮಾಲೀಕರೊಂದಿಗೆ ಮಾತಾಡಿ ಅವರು ಕೇಳಿದಕ್ಕಿಂತ ಎಕ್ಸಟ್ರಾ ಹಣ ಕೊಟ್ಟು ಎರಡು ಡಿಜೆ ಬುಕ್ ಮಾಡಿದಳು. ಇವತ್ತೇ ಒಂದ ಗಂಟೆಯಲ್ಲಿ ಡಿಜೆಗಳು ಇಲ್ಲಿರಬೇಕು ಅಂತೇಳಿ‌ ಅಡ್ರೆಸ ಕೊಟ್ಟು ಹೋದಳು. ಅವಳು ಏನ ಮಾಡ್ತಿದಾಳೆ ಎಂಬುದು ಸುರಭಿಗೆ ತಿಳಿಯದಾಗಿತ್ತು. ಸಂದೀಪನ ಮನೆ ಗುರುಗ್ರಾಮದ ಪಟೌಡಿ ನಗರದಲ್ಲಿದೆ ಎಂಬುದು ರೀತುಗೆ ಗೊತ್ತಿತ್ತು. ಆಕೆ ಅವನ ಮನೆ ಎದುರು ಹೋಗಿ ಡಿಜೆಗಳಿಗಾಗಿ ವೇಟ್ ಮಾಡುತ್ತಾ ನಿಂತಳು. ಅವಳು ಸಂದೀಪ ಮೋಸಗಾರ ಎಂಬುದನ್ನು ಜಗತ್ತಿಗೆ ಕೂಗಿ ಹೇಳಿ ಅವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಇಷ್ಟೆಲ್ಲ ಪ್ಲ್ಯಾನ್ ಮಾಡುತ್ತಿದ್ದಳು. 

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                   ಮಧ್ಯಾಹ್ನ ಒಂದು ಗಂಟೆಯಾಗಿತ್ತು.‌ ಸೂರ್ಯ ನೆತ್ತಿ ಮೇಲೆ ಬಂದು ಎಲ್ಲರನ್ನೂ ಸುಡುತ್ತಿದ್ದನು. ಅಷ್ಟರಲ್ಲಿ ‌ಅವಳು ಬಾಡಿಗೆ ಹೇಳಿದ್ದ ಎರಡೂ‌‌ ಡಿಜೆಗಳು ಅಲ್ಲಿಗೆ ಬಂದವು. ರೀತು ಅವುಗಳನ್ನು ಸಂದೀಪನ ಮನೆ ಅಕ್ಕಪಕ್ಕ ನಿಲ್ಲಿಸಿದಳು. ನಂತರ ಡಿಜೆ ಸ್ಟಾರ್ಟ ಮಾಡಿಸಿ ಸಂದೀಪನ ಮನೆ ಮುಂದೆ ಕುಣಿಯಲು ಸ್ಟಾರ್ಟ ಮಾಡಿದಳು.‌ ಯಾರಿಗೂ ಸಹ ಅವಳು ಯಾರು? ಯಾಕ‌ ಈ ರೀತಿ ‌ನಡುಬೀದಿಯಲ್ಲಿ ಡಿಜೆ ಹಚ್ಚಿ ಕುಣಿಯುತ್ತಿದ್ದಾಳೆ ಎಂಬುದು ಗೊತ್ತಿರಲಿಲ್ಲ. ಯಾರೋ ಡೊಂಬರಾಟ ಮಾಡೋರು ಇಲ್ಲ ಸರ್ಕಸನವರು ಬಂದಿದ್ದಾರೆ ಅಂತಾ ತಿಳಿದು ಅಲ್ಲಿ ಜನ ಸೇರಲು ಪ್ರಾರಂಭಿಸಿದರು. ನೋಡು ನೋಡುತ್ತಿದ್ದಂತೆ ಅಲ್ಲಿ ನೂರಾರು ಜನ ಸೇರಿದರು. ರಸ್ತೆಗಳು ಬ್ಲಾಕ್ ಆಗಿ ಟ್ರಾಫಿಕ್ ಜಾಮ‌ ಆಯ್ತು. ಕೆಲವೊಂದಿಷ್ಟು ಹುಡುಗರು ಅವಳು ಕುಣಿಯುತ್ತಿರುವುದನ್ನು ಫೇಸ್‌ಬುಕ್‌ ಲೈವ ಮಾಡಿದರು. ಅರ್ಧಗಂಟೆಯೊಳಗೆ ಈ ಸುದ್ದಿ ಎಲ್ಲೆಡೆಗೆ ವೈರಲಾಯ್ತು. ಅಷ್ಟರಲ್ಲಿ ಟಾಪ ನ್ಯೂಜ ಚಾನೆಲನವರು ಸಹ ಬಂದು ಅವಳು ನಡು ರಸ್ತೆಯಲ್ಲಿ ಕುಣಿಯುತ್ತಿರುವುದನ್ನು ಲೈವಲ್ಲಿ ಟೆಲಿಕಾಸ್ಟ ಮಾಡಲು ಪ್ರಾರಂಭಿಸಿದರು. ಎಲ್ಲರೂ ಬಂದರೂ ಸಂದೀಪ ಇನ್ನೂ ಮನೆಗೆ ಬಂದಿರಲಿಲ್ಲ. ಏಕೆಂದರೆ ಆತ ಪಾರ್ಕಲ್ಲಿ ರಾಸಲೀಲೆಯಲ್ಲಿ ಬಿಜಿಯಾಗಿದ್ದನು. 

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

               ಬಹಳಷ್ಟು ಜನ‌ ಸೇರಿದ್ದನ್ನು ನೋಡಿ‌‌ ಸುರಭಿ ಗಾಬರಿಯಾಗಿ ರೀತುಳನ್ನು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಳು. ಆದರೆ ಆಕೆ ಕೇಳದೆ ಮತ್ತಷ್ಟು ಜೋರಾಗಿ ಕುಣಿಯಲು ಸ್ಟಾರ್ಟ ಮಾಡಿದಳು‌. ಹಿಂದಿ ಪ್ಯಾಥೋ ಸಾಂಗಗಳಿಗೆ ನಾಚಿಕೆ ಬಿಟ್ಟು ಕುಣಿಯುತ್ತಿದ್ದಳು. ರಾಜಾ ಹಿಂದೂಸ್ತಾನಿ ಸಿನಿಮಾದ "ತೆರೆ ಇಷ್ಕ ಮೇ ನಾಚೇಂಗೆ..." ಹಾಡನ್ನು ರೀಪಿಟ ರೀಪಿಟಾಗಿ ಹಾಕಿಸಿ ಕುಣಿಯುತ್ತಿದ್ದಳು. ಅವಳು ನೋವಿನಲ್ಲಿ ಕುಣಿಯುತ್ತಿದ್ದಳು. ಆದರೆ ಸಾವಿರಾರು ಜನ ಅವಳನ್ನು ನೋಡಿ ನಗುತ್ತಿದ್ದರು. ಕೋಟ್ಯಾಂತರ ಜನ ಅವಳನ್ನು ಲೈವಲ್ಲಿ ನೋಡಿ ಅವಳ ಮಜಾಕ ಮಾಡುತ್ತಿದ್ದರು. ಕೆಲವರು ಮೊಬೈಲನಲ್ಲಿ ಅವಳ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಒಂದ ನಾಲ್ಕೈದು ಕುಡುಕರು ಅವಳೊಂದಿಗೆ ಸೇರಿ ಕುಣಿಯಲು ಪ್ರಾರಂಭಿಸಿದರು. ಎಲ್ಲರೂ ಡೊಂಬರಾಟ ನೋಡಿದಂತೆ ಅವಳನ್ನು ನೋಡುತ್ತಾ ನಿಂತಿದ್ದರು. ಆದರೆ ಯಾರು ಸಹ ಅವಳನ್ನು ತಡೆದು ಯಾಕೆ ಅಂತಾ ಕೇಳಲಿಲ್ಲ. ಅವಳ‌ ಸ್ಥಿತಿ ಕಂಡು ಸುರಭಿ ಕೂಡ ಬೇಜಾರಲ್ಲಿ ಅಳುತ್ತಾ ಅಲ್ಲೇ ನೆಲದ ಮೇಲೆ ಕುಂತಳು. ರೀತು ಯಾರಿಗೂ ಕೇರ್ ಮಾಡದೇ ಹಾಗೇ ಕುಣಿಯುತ್ತಲೇ ಇದ್ದಳು. 

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                 ರೀತು ಸ್ಯಾಡ್ ಸಾಂಗಗಳಿಗೆ ಕುಣಿಯುತ್ತಲೇ‌ ಇದ್ದಳು. ಅಷ್ಟರಲ್ಲಿ ಜನರನ್ನು ಪಕ್ಕಕ್ಕೆ ಸರಿಯುತ್ತಾ ಸಂದೀಪ ತನ್ನ ಮನೆಗೆ ಬಂದನು. ಇಷ್ಟೊಂದು ಜನರನ್ನು ನೋಡಿ ಆಶ್ಚರ್ಯಚಕಿತನಾಗಿದ್ದವನು ಈಗ ಅವನ ಮನೆ‌ ಮುಂದೆ ರೀತು ಕುಣಿಯುತ್ತಿರುವುದನ್ನು ನೋಡಿ ಗಾಬರಿಯಾದನು. ಆತ ಅವಳ ಕಣ್ತಪ್ಪಿಸಿ ಮನೆಯೊಳಗೆ ಓಡಿ ಹೋಗಲು ಪ್ರಯತ್ನಿಸಿದನು‌.‌ ಅಷ್ಟರಲ್ಲಿ ರೀತು ಅವನನ್ನು ನೋಡಿ ಅವನಿಗೆ ಚಪ್ಪಲಿ ಎಸೆದು ಅವನನ್ನು ‌ತಡೆದು ನಿಲ್ಲಿಸಿದಳು. ನಂತರ ಅವನನ್ನು ಬಾಯಿಗೆ ಬಂದಂತೆ ಬೈದು ಅವನ ಕಾಲರ‌ ಹಿಡಿದು ಎಳೆದಾಡಿದಳು. ನಂತರ ಆಕೆ‌ "ಸಂದೀಪ ಚೀಟರ‌ ಆಗಿದ್ದಾನೆ, ಯಾರು ಇವನನ್ನು ನಂಬಬೇಡಿ, ಯಾರು ಇವನನ್ನು ಪ್ರೀತಿಸಬೇಡಿ, ಯಾರು ಇವನನ್ನು ಮದುವೆಯಾಗಬೇಡಿ..." ಎಂದು ಕೂಗಿಕೂಗಿ ಹೇಳಿದಳು. ಸಂದೀಪ ನಾಚಿ ಮನೆಯೊಳಗೆ ಹೋಗಿ ಬಾಗಿಲಾಕಿಕೊಂಡನು. ಅವಳು ಕುಣಿಯುವುದನ್ನು ನಿಲ್ಲಿಸಿ‌ ಮೌನವಾಗಿ ನಿಂತಳು. ಡಿಜೆಯಲ್ಲಿ ಹಾಡು ಇನ್ನೂ ಜೋರಾಗಿ ಪ್ಲೇ ಆಗುತ್ತಿತ್ತು.‌ ಅವಳು ಮಾಡುತ್ತಿರುವುದೆಲ್ಲ ಎಲ್ಲ ಟಾಪ ನ್ಯೂಜ ಚಾನೆಲಗಳಲ್ಲಿ ಲೈವ ಟೆಲಿಕಾಸ್ಟ ಆಗುತ್ತಿತ್ತು.‌ ನೋಡು ನೋಡುತ್ತಿದ್ದಂತೆ ಅವಳು ನ್ಯಾಷನಲ್ ನ್ಯೂಜ ಆದಳು.‌ ಅಷ್ಟರಲ್ಲಿ ಪೋಲಿಸರು ಬಂದು ಅವಳನ್ನು ಅರೆಸ್ಟ ಮಾಡಿ ತಮ್ಮ ಕಸ್ಟಡಿಗೆ ತೆಗೆದುಕೊಂಡರು. ಏಕೆಂದರೆ ಅವಳಿಂದಾಗಿ ಸಿಟಿ ಸೆಂಟರನಲ್ಲೇ ಫುಲ್ ಟ್ರಾಫಿಕ್ ಜಾಮಾಗಿತ್ತು. 

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                   ಪೋಲಿಸನವರು ರೀತುಳನ್ನು ವಿಚಾರಣೆಗೆ ಸ್ಟೇಷನಗೆ ತೆಗೆದುಕೊಂಡು ಹೋದರು. ಅವಳನ್ನು ನ್ಯೂಜ ಚಾನೆಲನವರು ಸಹ ಫಾಲೋ ಮಾಡಿದರು. ‌ಸುರಭಿ ಅವಳ‌ ಸ್ಕೂಟಿ ತೆಗೆದುಕೊಂಡು ಪೋಲಿಸ್ ‌ಸ್ಟೇಷನಗೆ ಹೋದಳು.‌ ರೀತು ಸುಸ್ತಾಳಿದ್ದಳು. ಪೋಲಿಸರು ಅವಳಿಗೆ ನೀರು ಕೊಟ್ಟು ಸುಧಾರಿಸಿಕೊಳ್ಳಲು ಸ್ವಲ್ಪ ಟೈಮ‌‌ ಕೊಟ್ಟು ಕೂಡಿಸಿದ್ದರು. ಅಷ್ಟರಲ್ಲಿ ‌ಸುರಭಿ ಪೋಲಿಸರಿಗೆ ನಡೆದ ಸಂಗತಿಯನ್ನು ಹಾಗೂ ಅದರ ಹಿನ್ನೆಲೆಯನ್ನು ತಿಳಿಸಿ ಅವಳು ಬರೆದ ಸೂಸೈಡ ನೋಟನ್ನು ಕೊಟ್ಟು ಅವಳನ್ನು ಬಿಡುವಂತೆ ಕೇಳಿಕೊಂಡಳು. ಪೋಲಿಸರು ಅವಳನ್ನು ನಾರ್ಮಲಾಗಿ ವಿಚಾರಣೆ ಮಾಡಿ ಅವಳಿಗೆ ಬುದ್ಧಿವಾದ ಹೇಳಿ ಕಳುಹಿಸಿದರು. ನಂತರ ಅವರೇ ನ್ಯೂಜ ಚಾನೆಲಗಳಿಗೆ ವಿಷಯ ಮುಗಿದಿದೆ ಇದನ್ನು ಇಲ್ಲಿಗೆ ಬಿಡಿ ಎಂದು ಹೇಳಿ ಕಳುಹಿಸಿದರು. 

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada

                ಕೊನೆಗೂ ರೀತು ಸಂದೀಪನಿಗೆ ತಕ್ಕ ಪಾಠ ಕಲಿಸಿದಳು. ಅವಳು ಏನು ಹೇಳದಿದ್ದರೂ ನ್ಯೂಜ ಚಾನೆಲಗಳೆಲ್ಲ "ಸಂದೀಪನನ್ನು ಅವಳೀಗ ಪ್ರೀತಿಸುತ್ತಿಲ್ಲ" ಎಂಬುದನ್ನು ಸಾರಿ ಸಾರಿ ಹೇಳಿದವು. ಅವಳ ಸಮಸ್ಯೆ ಸಾಲ್ವಾಯಿತು. ಅವಳು ಸುರಭಿಯೊಂದಿಗೆ ಮನೆಗೋಗಿ ಅಪ್ಪ ಅಮ್ಮನ ಜೊತೆ ಕುಳಿತು ಸಿಹಿ ತಿಂದು ನಡೆದದನ್ನೆಲ್ಲ ಮರೆತು ಹೊಸ ಜೀವನ ಸ್ಟಾರ್ಟ ಮಾಡಿದಳು. ಮರುದಿನ ಅವಳ ಕೆಲಸ ಹೋಯಿತು. ಆದರೆ ಅವಳು ತಲೆ ಕೆಡಿಸಿ ಕೊಳ್ಳಲಿಲ್ಲ. ಸುರಭಿ ಕೆಲಸಕ್ಕೆ ರಿಜೈನ ಮಾಡಿ‌ ರೀತುಳೊಂದಿಗೆ ಸೇರಿ ಸ್ಟಾರ್ಟಪ‌ ಸ್ಟಾರ್ಟ ಮಾಡಲು ಹೆಲ್ಪ ಮಾಡಿದಳು. ಈಗ ಅವರ ಸ್ಟಾರ್ಟಪ ಸ್ಟ್ರಗಲನಿಂದ ಸಕ್ಸೆಸನೆಡೆಗೆ ಸಾಗಿದೆ...

ಒಂದು ಬ್ರೇಕಪ್ ಸ್ಟೋರಿ ‌: One Breakup Story in Kannada
Blogger ನಿಂದ ಸಾಮರ್ಥ್ಯಹೊಂದಿದೆ.