ಕನಸುಗಳ ಪವರ್ : Power of Dreams in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕನಸುಗಳ ಪವರ್ : Power of Dreams in Kannada

ಕನಸುಗಳ ಪವರ್ : Power of Dreams in Kannada

                        ಹಾಯ್ ಗೆಳೆಯರೇ, ಕನಸುಗಳಿಲ್ಲದ ವ್ಯಕ್ತಿ ಇದ್ದು ಸತ್ತಂತೆ. ನಿಮಗೆ ನಿಮ್ಮದೇ ಆದ ಕನಸುಗಳಿಲ್ಲದಿದ್ದರೆ‌ ನೀವು ಜೀವಂತ ಶವ ಎಂದರ್ಥ. ಕನಸುಗಳು ಬಹಳಷ್ಟು ಶಕ್ತಿಯನ್ನು ಹೊಂದಿವೆ.‌ ಕನಸುಗಳಿಗೆ ತಮ್ಮದೇ‌ ಆದ ಪವರಯಿದೆ.‌ 

ಕನಸುಗಳು ನಮಗೆ ನಮ್ಮ ಲೈಫಲ್ಲಿ ಯಾವುದು ಬೇಕು? ಯಾವುದು ಬೇಡ? ಎಂಬುದನ್ನು ಪ್ರಯರಟೈಜ‌ (Prioritize) ಮಾಡಲು ಹೆಲ್ಪ ಮಾಡುತ್ತವೆ.

ಕನಸುಗಳು ನಮ್ಮ‌ ಫ್ಯುಚರ ಬಗ್ಗೆ ಹೊಸ ಹೋಪ್ಸಗಳನ್ನು ಹುಟ್ಟಾಕುತ್ತವೆ. ನಮ್ಮನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮ್ಮ ಕನಸುಗಳು ಪ್ರೇರಣೆ ನೀಡುತ್ತವೆ. 

ಕನಸುಗಳು ನಮ್ಮ ಕಾನ್ಸಿಯಸ್ & ಸಬ ಕಾನ್ಸಿಯಸ್ ಮೈಂಡಗಳ ನಡುವೆ ಕಮ್ಯುನಿಕೇಷನ್ ಮಾಡುತ್ತವೆ. ನಮ್ಮ ಅಸಲಿ ಶಕ್ತಿ ಸಾಮರ್ಥ್ಯವನ್ನು ಹೊರಗೆಳೆದು ಕೆಲಸ ಮಾಡಿಸುತ್ತವೆ. 

ಕನಸುಗಳು ನಮಗೆ ಲೈಫಲ್ಲಿ ಮುಂದೆ‌ ಸಾಗಲು ಫೋಕಸನ್ನು ‌ನೀಡುತ್ತವೆ, ಸರಿಯಾದ ಡೈರೆಕ್ಷನನ್ನು ತೋರಿಸುತ್ತವೆ, ನಾವು ನಮ್ಮ‌ ಗೋಲಗಳನ್ನು ರೀಚ್‌ ಆಗಲು ಗೈಡ ಮಾಡುತ್ತವೆ. 

ಕನಸುಗಳಿಂದಾಗಿ ನಮ್ಮ ಲೈಫಲ್ಲಿ ಡಿಸಿಪ್ಲೇನ ಬರುತ್ತದೆ, ನಮ್ಮ ಲೈಫಿಗೆ ಒಂದು ಕ್ಲಿಯರ್ ಪರಪಜ ಸಿಗುತ್ತದೆ. 

ಕನಸುಗಳು ನಮ್ಮ ವಿಲ್ ಪವರ್ ಹಾಗೂ ಕಾನ್ಫಿಡೆನ್ಸನ್ನು ಹೆಚ್ಚಿಸಿ ನಮಗೆ ರೈಟ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಲು ಪುಷ್ (Push) ಮಾಡುತ್ತವೆ.‌

ಕನಸುಗಳ ಪವರ್ : Power of Dreams in Kannada

ನಮ್ಮ‌ ಕನಸುಗಳು ನಮ್ಮ ಫ್ಯುಚರನ್ನು ಪ್ರೇಡಿಕ್ಟ ಮಾಡುತ್ತವೆ. ನಾವು ನಮ್ಮ ಗೋಲಗಳ ಬಗ್ಗೆ ಇಮ್ಯಾಜಿನೇಷನ್ ಮಾಡಿದಷ್ಟು ನಾವು ನಮ್ಮ ಗೋಲಗಳ ಹತ್ತಿರ ಹೋಗುತ್ತೇವೆ. 

ನಮ್ಮ ಕನಸುಗಳು ನಮ್ಮನ್ನು ಸದಾಕಾಲ ಹ್ಯಾಪಿಯಾಗಿಡುತ್ತವೆ, ನಮ್ಮನ್ನು ಮೋಟಿವೇಟ ಮಾಡುತ್ತವೆ.‌

ನಮ್ಮ ಕನಸುಗಳಿಗೆ ನಮ್ಮ ಡಿಜೈರ ಹಾಗೂ ಗೋಲಗಳನ್ನು ರಿಯಾಲಿಟಿಯಾಗಿ ಬದಲಿಸುವ ಮಹಾನ ಶಕ್ತಿಯಿದೆ. 

ನಮ್ಮ ಡ್ರೀಮಲೈಫ, ಡ್ರೀಮ ಲೈಫ್ ಪಾರ್ಟನರ್ & ಡ್ರೀಮ ಥಿಂಗ್ಸಗಳನ್ನು ಪಡೆಯಲು ನಮ್ಮ ಡ್ರೀಮಗಳು ನಮ್ಮನ್ನು ಮೋಟಿವೇಟ ಮಾಡುತ್ತವೆ. Only our dreams motivates us to get our Dream Life, Dream Life Partner and Dream things. So don't hesitate to see dreams. 

ಕನಸುಗಳ ಪವರ್ : Power of Dreams in Kannada

                         ಗೆಳೆಯರೇ ಈ ರೀತಿ ನಮ್ಮ ಡ್ರೀಮಗಳಿಗೆ ಅಂದರೆ ಕನಸುಗಳಿಗೆ ಬಹಳಷ್ಟು ಪವರ್ ಇದೆ. ನಾವು ಕನಸಲ್ಲಿ ಕಂಡಿರುವುದನ್ನೆಲ್ಲ ಖರೀದಿಸುವ ಸಾಮರ್ಥ್ಯ ‌ನಮ್ಮಲ್ಲಿದೆ.‌  ಆದರೆ ನಮ್ಮ ಪ್ರಾಬ್ಲಮ ಏನಪ್ಪ ಅಂದ್ರೆ‌ ನಮ್ಮಲ್ಲಿ ಬಹಳಷ್ಟು ಜನರಿಗೆ ಕನಸುಗಳಿಲ್ಲ, ದೊಡ್ಡ ಕನಸುಗಳನ್ನು ಕಾಣುವಷ್ಟು ಧೈರ್ಯವಿಲ್ಲ. 

            ಗೆಳೆಯರೇ, ನಿಮಗೆ ನಿಮ್ಮದೇ ಆದ ಕನಸುಗಳಿದ್ದರೆ ನೀವು ನಿಮಗಾಗಿ ಕೆಲಸ ಮಾಡುತ್ತೀರಿ. ಇಲ್ಲದಿದ್ದರೆ ನೀವು ಬೇರೆಯವರ ಕನಸುಗಳಿಗಾಗಿ ಕೆಲಸ ಮಾಡುತ್ತೀರಿ. ಸೋ ಕನಸುಗಳನ್ನು ಕಾಣಲು ಸ್ಟಾರ್ಟ ಮಾಡಿ. ದೊಡ್ಡ ಕನಸುಗಳನ್ನು ಕಾಣುವ ಧೈರ್ಯ ಮಾಡಿ. At least dare to dream big. ಕನಸುಗಳಿಲ್ಲದ ವ್ಯಕ್ತಿ ಜೀವಂತ ಶವದಂತೆ‌. ಸೋ ಕನಸುಗಳನ್ನು ಕಾಣಿ. ಕನಸುಗಳನ್ನು ಕಾಣಲು ಯಾವುದೇ ಕರ ಕಟ್ಟಬೇಕಾಗಿಲ್ಲ, ಟ್ಯಾಕ್ಸ ಕಟ್ಟಬೇಕಾಗಿಲ್ಲ. ಕಣ್ಣಿಲ್ಲದವರು ಕನಸು ಕಾಣುತ್ತಿರುವಾಗ ಕಣ್ಣೀರುವ ನಿಮಗೇನಾಗಿದೆ? ಮಲಗಿ ನಿದ್ದೆ ಮಾಡುತ್ತಾ ಅಶ್ಲೀಲ ಕನಸುಗಳನ್ನು ಕಾಣಬೇಡಿ, ಎಚ್ಚರವಿದ್ದು ಗ್ರೇಟ ‌ಕನಸುಗಳನ್ನು ಕಾಣಿ. 

ಕನಸುಗಳ ಪವರ್ : Power of Dreams in Kannada

                ಗೆಳೆಯರೇ, ನಿಮಗೆ ಲೈಫಲ್ಲಿ ಎರಡು ತರಹದ ಜನ ಸಿಗ್ತಾರೆ. ಒಂದು "ದೊಡ್ಡ ಕನಸುಗಳನ್ನು ಕಾಣಬೇಡ...." ಅನ್ನೋ ಲೂಜರಗಳು, ಇನ್ನೊಂದು "ದೊಡ್ಡ ಕನಸುಗಳನ್ನು ಕಾಣು...." ಅನ್ನೋ ವಿನ್ನರಗಳು. ಲೂಜರಗಳ ಮಾತನ್ನು ಯಾವುದೇ ಕಾರಣಕ್ಕೂ ಕೇಳಬೇಡಿ. ವಿನ್ನರಗಳ ಮಾತನ್ನು ಕೇಳಿ ನೀವು ಮುಂದೆ ವಿನ್ನರಗಳಾಗುತ್ತೀರಿ.‌ ಕನಸುಗಳನ್ನು ಕಾಣಲು ಹೆದರಬೇಡಿ. ಧೈರ್ಯವಾಗಿ ದೊಡ್ಡ ಕನಸುಗಳನ್ನು ಕಾಣಿ. ಮಹಾನ ಕನಸುಗಾರರ ಎಲ್ಲ ಕನಸುಗಳು ಖಂಡಿತ ನನಸಾಗುತ್ತವೆ.‌ ನೀವು ಸತ್ತ ಮೇಲೂ ನಿಮ್ಮ ಕನಸುಗಳು ನನಸಾಗುತ್ತವೆ. 

ಉದಾಹರಣೆಗೆ : ಶೇಕ್ಸಪಿಯರ್ ಹಾಗೂ ಡಾ. ವಿಕ್ರಮ ಸಾರಾಭಾಯಿ.‌ ಶೇಕ್ಸ‌ಪಿಯರ್ ಬದುಕಿದ್ದಾಗ ಅವನ ಒಂದು ನಾಟಕವೂ ಬುಕ್ ರೂಪದಲ್ಲಿ ಪ್ರಕಟವಾಗಲಿಲ್ಲ, ಅವನು ಸತ್ತು ಎಷ್ಟೋ ವರ್ಷಗಳ ನಂತರ ಅವನ ಎಲ್ಲ ನಾಟಕಗಳು ಪ್ರಕಟವಾದವು. ಅವನ ಕನಸು ಕೊನೆಗೂ ನನಸಾಯಿತು. ಅದೇ ರೀತಿ ಭಾರತದ ಮೊದಲ‌ ಸ್ಯಾಟಲೈಟ್ ಆರ್ಯಭಟವನ್ನು ಗಗನಕ್ಕೇರಿಸುವುದು ಡಾ.‌ ವಿಕ್ರಮ ಸಾರಾಭಾಯಿಯವರ ಕನಸಾಗಿತ್ತು. ಅದಕ್ಕಾಗಿ ಅವರು ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಆರ್ಯಭಟ ಲಾಂಚ್ ಆಗುವ ಕೆಲವೇ ದಿನಗಳ ಮುಂಚೆ ಅವರ ನಿಧನವಾಯಿತು, ನಂತರ ಆರ್ಯಭಟ ಆರ್ಬಿಟಗೆ ಹಾರಿತು. ಅವರ ಕನಸು ನನಸಾಯಿತು.‌ ನೋಡಿದ್ರಲ್ಲ ಮಹಾನ ಕನಸುಗಾರರ ಕನಸುಗಳು, ಪರಿಶ್ರಮ ಯಾವತ್ತೂ ವ್ಯರ್ಥವಾಗಲ್ಲ. ಅವರು ಸತ್ತ ಮೇಲೂ ಅವರ ಎಲ್ಲ ಕನಸುಗಳು ನನಸಾಗೇ ಆಗುತ್ತವೆ‌.‌ ಲೇಟಾಗಬಹುದು, ಬಟ ಖಂಡಿತ ನನಸಾಗುತ್ತವೆ. ಸೋ ಗೆಳೆಯರೇ, ಕನಸುಗಳನ್ನು ಕಾಣಲು ಸ್ಟಾರ್ಟ ಮಾಡಿ. ನಿಮಗೆ ಮೋಟಿವೇಷನಲ ಸಪೋರ್ಟ್ ಬೇಕಿದ್ದರೆ ನನಗೆ ಇನ್ಸಸ್ಟಾಗ್ರಾಮಲ್ಲಿ ಮೆಸೆಜ ಮಾಡಿ. Dream Big and Do Big. All the best and Thanks You...

ಕನಸುಗಳ ಪವರ್ : Power of Dreams in Kannada
Blogger ನಿಂದ ಸಾಮರ್ಥ್ಯಹೊಂದಿದೆ.