ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you - Motivational Inspirational Life Changing Story in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you - Motivational Inspirational Life Changing Story in Kannada

                               ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you

                ಹಾಯ್ ಗೆಳೆಯರೇ, ನಾವು ನಮ್ಮ‌ ಜೀವನದಲ್ಲಿ ಮುಂದೆ ಹೊರಟಾಗ ಜನ ನಮ್ಮ ಕಾಲೆಳೆಯುತ್ತಾರೆ, ನಮ್ಮ ಬೆನ್ನ ಹಿಂದೆ ಮಾತಾಡಲು ಸ್ಟಾರ್ಟ ಮಾಡುತ್ತಾರೆ. ನಾವು ನಮ್ಮ‌ ಜೀವನದಲ್ಲಿ ಏನಾದರೂ ಒಂದು ಹೊಸದನ್ನು ಮಾಡಲು ಹೊರಟಾಗ, ಏನಾದರೂ ಒಂದನ್ನು ಸಾಧಿಸಲು ಹೊರಟಾಗ, ಏನಾದರೂ ‌ಒಂದನ್ನು ಗಳಿಸಲು ಹೊರಟಾಗ ಜನ ನಮ್ಮನ್ನು ಡಿಮೋಟಿವೇಟ ಮಾಡುತ್ತಾರೆ, ನಮಗೆ ತಲೆ ಕೆಟ್ಟಿದೆ ಎನ್ನುತ್ತಾರೆ, ನಮ್ಮ ಬಗ್ಗೆ ಗಾಸಿಪಗಳನ್ನು ಹಬ್ಬಿಸುತ್ತಾರೆ. ನಾವು ಏನಾದರೂ ಒಂದು ಒಳ್ಳೇ ಕೆಲಸ ಮಾಡಲು ಸ್ಟಾರ್ಟ ಮಾಡಿದಾಗ ಜನ ನಮಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾರೆ. ಜನ ಈ ತರ ಎಲ್ಲ ಯಾಕ ಮಾಡ್ತಾರೆ? ಇವರಿಗೆ ನಾವು ಏನು ಹಾನಿ ಮಾಡದಿದ್ದರೂ ಸಹ ಈ ಜನ ನಮಗೆ ತೊಂದರೆ ಕೊಡುತ್ತಾರೆ, ನಮ್ಮನ್ನು ‌ಡಿಮೋಟಿವೇಟ ಮಾಡುತ್ತಾರೆ. ಯಾಕ ಹೀಗ ಮಾಡ್ತಾರೆ? ಅಂತಾ ನಿಮಗೂ ಸಹ ಬಹಳಷ್ಟು ಸಲ ಅನ್ನಿಸಿರಬಹುದು. ಆದರೆ ಬಹುಶಃ ನಿಮಗೆ ಉತ್ತರ ಸಿಕ್ಕಿರಲಕ್ಕಿಲ್ಲ. ಜನ ಯಾಕೆ ನಿಮಗೆ ಅನಾವಶ್ಯಕವಾಗಿ ತೊಂದರೆ ಕೊಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಈ ಕಥೆಯನ್ನು ಕೇರಫುಲ್ಲಾಗಿ ಕೇಳಿ. 

ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you

              ಭಾರತದ ಯಾವುದೋ ಒಂದು ಮೂಲೆಯಲ್ಲಿ ಒಂದು ಸಣ್ಣ ಹಳ್ಳಿಯಿತ್ತು. ಒಂದೊಳ್ಳೆ ಹೆಸರು ಸಹ ಆ ಹಳ್ಳಿಗೆ ಇರಲಿಲ್ಲ. ಅಷ್ಟೊಂದು ದರಿದ್ರ ಹಳ್ಳಿ ಅದಾಗಿತ್ತು. ಆ ಹಳ್ಳಿಯಲ್ಲಿನ ವಿಚಿತ್ರ ಏನಪ್ಪ ಅಂದ್ರೆ ಆ ಹಳ್ಳಿಯಲ್ಲಿ ಕರೆಂಟ್ ಇರಲಿಲ್ಲ. ಹಳ್ಳಿಯ ಎಲ್ಲ ಜನ ಸುರ್ಯೋದಯಕ್ಕಿಂತ ಮುಂಚೆಯೆದ್ದು ಸೂರ್ಯಾಸ್ತವಾಗುವುದರೊಳಗೆ ತಮ್ಮೆಲ್ಲ ಕೆಲಸಗಳನ್ನು ಮಾಡಿ ಮುಗಿಸಿ ಬೇಗನೆ ಮಲಗಿಕೊಳ್ಳುತ್ತಿದ್ದರು. ದಿನವೆಲ್ಲ ಕೆಲಸ ಮಾಡಿ ಸಂಜೆಯಾಗುತ್ತಿದ್ದಂತೆ ಬೇಗನೆ ಊಟ ಮಾಡಿ ಬಾಗಿಲನ್ನು ಹಾಕಿ ‌ಮಲಗಿ ಬಿಡುತ್ತಿದ್ದರು. ಸೂರ್ಯಾಸ್ತವಾದ ನಂತರ ಆ ಹಳ್ಳಿಯಲ್ಲಿ ಯಾರು ಓಡಾಡುತ್ತಿರಲಿಲ್ಲ‌. ಏಕೆಂದರೆ ಕರೆಂಟ್ ‌ಇಲ್ಲದ ಕಾರಣ ಎಲ್ಲ ಕಡೆಗೆ ಕತ್ತಲ್ಲಿರುತ್ತಿತ್ತು. ಈ ರೀತಿ ಆ ಹಳ್ಳಿ ಘೋರ ಅಂಧಕಾರದಲ್ಲಿತ್ತು. ಆ ಹಳ್ಳಿಗೆ ಸೂರ್ಯನ ಬೆಳಕು ಬಂದಿತ್ತು. ಆದರೆ ಶಿಕ್ಷಣದ ಬೆಳಕು ಬಂದಿರಲಿಲ್ಲ. ಎಲ್ಲ ‌ಮಕ್ಕಳು ಶಾಲೆಗೆ ಹೋಗುವ ಬದಲು ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಏಕೆಂದರೆ ಆ ಹಳ್ಳಿಯಲ್ಲಿ ಶಾಲೆಯಿದ್ದರೂ ಸಹ ಯಾವ ಟೀಚರ ಕೂಡ ನೌಕರಿ ಮಾಡಲು ಬರುತ್ತಿರಲಿಲ್ಲ. ಏಕೆಂದರೆ ಆ ಹಳ್ಳಿಯಲ್ಲಿ ಕರೆಂಟ್ ಇರಲಿಲ್ಲ. 

ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you

                ಆ ಹಳ್ಳಿ ಸುಮಾರು ಐವತ್ತು ವರ್ಷಗಳಿಂದ ಇದೇ ತರ ಕತ್ತಲಲ್ಲೇ ಇತ್ತು. ಜನರೆಲ್ಲ ಕತ್ತಲಲ್ಲೇ ಖುಷಿಯಾಗಿದ್ದರು. ಆದರೆ ಆ ಹಳ್ಳಿಯಲ್ಲಿ ಒಬ್ಬರು ಬುದ್ಧಿವಂತ ಗಂಡ ಹೆಂಡತಿಯಿದ್ದರು. ಅವರು ಖುಷಿಯಾಗಿರಲಿಲ್ಲ. ಏಕೆಂದರೆ ಕರೆಂಟ್ ಇಲ್ಲದ ಊರಲ್ಲಿ ಕತ್ತಲಲ್ಲಿ ಇರುವುದು ಅವರಿಗೆ ಅಷ್ಟೊಂದು ಸರಿ ಬರುತ್ತಿರಲಿಲ್ಲ. "ಹೀಗೆ ಎಷ್ಟು ದಿನ ಅಂತಾ ಕತ್ತಲಲ್ಲಿ ಇರುವುದು? ಮುಂದೆ ನಮಗೆ ಮಕ್ಕಳಾದಾಗ ಅವರು ಕತ್ತಲಲ್ಲಿ ಹೇಗೆ ಓದುತ್ತಾರೆ? ಅವರ ಭವಿಷ್ಯ ಹೇಗೆ?" ಎಂಬುದು ಅವರ ದೊಡ್ಡ ಚಿಂತೆಯಾಗಿತ್ತು. ಊರಲ್ಲಿ ಕರೆಂಟ್ ‌ಇರದಿದ್ದರೆ ಅದು ಊರ ಸಮಸ್ಯೆ. ಅಟಲಿಸ್ಟ ನಮ್ಮ ಮನೆಯಲ್ಲಾದರೂ ಬೆಳಕು ಇರಬೇಕು ಎಂಬುದು ಅವರ ಆಸೆಯಾಗಿತ್ತು. ಅದಕ್ಕಾಗಿ ಆ ಗಂಡ ಹೆಂಡತಿ ಸ್ವಲ್ಪ ಜಾಸ್ತಿ ಕೆಲಸ ಮಾಡಲು ಸ್ಟಾರ್ಟ ಮಾಡಿದರು. 

                      ಒಂದು ತಿಂಗಳಲ್ಲಿ ಒಂದು ನೂರು ರೂಪಾಯಿ ಹೊಂದಿಸಿದರು. ಆ ಗಂಡ ಹೆಂಡತಿ ಇಬ್ಬರು ಒಂದಿನ ಬೇರೆ ಊರಿಗೆ ಹೋಗಿ 5 ಕಂದಿಲುಗಳನ್ನು ತಂದರು. ಅವರು ಮನೆಗೆ ಬರುವಷ್ಟರಲ್ಲಿ ಸೂರ್ಯಾಸ್ತವಾಗಿ ಊರ ತುಂಬೆಲ್ಲ ಕತ್ತಲು ಆವರಿಸಿತ್ತು. ಆಗ ಅವರು ತಾವು ತಂದಿದ್ದ ಐದು ಕಂದಿಲುಗಳಲ್ಲಿ ಮೂರು ಕಂದಿಲುಗಳನ್ನು ಮನೆಯೊಳಗೆ ಹಚ್ಚಿದರೆ ಎರಡು ಕಂದಿಲುಗಳನ್ನು ತಮ್ಮ ಮನೆ ಮುಂದೆ ಹಚ್ಚಿದರು.‌ ರಾತ್ರಿಯಾದ ಮೇಲೆ ಮೊದಲ ಸಲ ಬೆಳಕು ಬಿದ್ದಿರುವುದನ್ನು ನೋಡಿ ಅಕ್ಕಪಕ್ಕದ ಜನ ಆ ಕಂದಿಲುಗಳನ್ನು ನೋಡಲು ಬಂದರು. ಕಾಲೋನಿಯ ಮಕ್ಕಳೆಲ್ಲ ಆ ಕಂದಿಲುಗಳ ಬೆಳಕಲ್ಲಿ‌ ಕುಣಿದಾಡಲು ಪ್ರಾರಂಭಿಸಿದರು. ಊರ ಜನರೆಲ್ಲ ಬೆಳಕನ್ನು ನೋಡಲು ಗುಂಪುಗುಂಪಾಗಿ ಬಂದರು. ಮೊದಲ ಸಲ ಸೂರ್ಯ ಮುಳುಗಿದ ಮೇಲೆ ಬೆಳಕನ್ನು ನೋಡಿ ಆ ಗಂಡ ಹೆಂಡತಿಯ ಬಗ್ಗೆ ಮಾತನಾಡುತ್ತಾ ಮನೆಗೆ ಹೋದರು. 

ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you

                  ಮರು ದಿನ ಊರಲ್ಲಿ ಎಲ್ಲಿ ನೋಡಿದರೂ ಆ ಗಂಡ ಹೆಂಡತಿಯ ಚರ್ಚೆ ಶುರುವಾಯಿತು. ಜನ ಅವರು ತಂದ ಕಂದಿಲುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಎಲ್ಲರ ಮನೆಯಲ್ಲಿ ಹೆಂಡತಿ, ಮಕ್ಕಳು ಅದೇ ತರಹದ ಕಂದಿಲುಗಳನ್ನು ತರಲು‌ ಮನೆಯ ಗಂಡಸರನ್ನು ಒತ್ತಾಯಿಸಿದರು. ಆದರೆ ಗಂಡಸರಿಗೆ ಕಂದಿಲು ತರುವ ಯೋಗ್ಯತೆ ಇರಲಿಲ್ಲ. ಏಕೆಂದರೆ ಅವರು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ದೊಡ್ಡ ಆಲಸಿಗಳಾಗಿದ್ದರು. ಹೀಗಾಗಿ ಅವರತ್ರ ಕಂದಿಲು ತರಲು ಹಣವಿರಲಿಲ್ಲ. ಕಂದಿಲುಗಳ ವಿಷಯವಾಗಿ ಊರಲ್ಲಿನ ಎಲ್ಲ ಮನೆಗಳಲ್ಲಿ ಜಗಳಗಳಾಗಲು ಪ್ರಾರಂಭವಾದವು. ಆಗ ಊರಲ್ಲಿನ ಎಲ್ಲ ಜನ ಒಂದು ರಹಸ್ಯ ಸಭೆ ಮಾಡಿದರು. ಆ ಸಭೆಯಲ್ಲಿ ಎಲ್ಲರು ಸೇರಿ "ನಾವೆಲ್ಲ ಸೇರಿ ಮನೆಮನೆಗೆ ನೂರಾರು ಕಂದಿಲುಗಳನ್ನು ತರುವ ಬದಲು ಆ ಗಂಡ ಹೆಂಡತಿ ತಂದ ಕಂದಿಲುಗಳನ್ನು ಹೇಗಾದರೂ ಮಾಡಿ ಒಡೆದರೆ ಸಮಸ್ಯೆ ಸಾಲ್ವಾಗುತ್ತೆ, ಊರು ಮೊದಲಿನಂತೆ ಕತ್ತಲಲ್ಲಿ ಶಾಂತವಾಗಿರುತ್ತದೆ" ಎಂದು ನಿರ್ಧರಿಸಿದರು. ಅವತ್ತೇ ರಾತ್ರಿ ಆ ಹಳ್ಳಿಯ ಕೆಲವು ಜನ ಆ ಗಂಡ ಹೆಂಡತಿಯ ಮನೆಗೆ ನುಗ್ಗಿ ಅವರು ತಂದಿದ್ದ ಕಂದಿಲುಗಳನ್ನು ಒಡೆದು ಹಾಕಿದರು. ಹಳ್ಳಿಯಲ್ಲಿ ಮತ್ತೆ ಮೊದಲಿನಂತೆ ಕತ್ತಲು ಬಿದ್ದಿದ್ದನ್ನು ನೋಡಿ ಖುಷಿಯಿಂದ ತಮ್ಮತಮ್ಮ ಮನೆಗಳಿಗೆ ಹೋದರು. 

                 ಎಲ್ಲರ ಮನೆಯಲ್ಲಿ ಹೆಂಡತಿ ಮಕ್ಕಳು ಈಗ ಅವರ ಮನೆಯಲ್ಲಿಯೂ ಸಹ ಕಂದಿಲುಗಳಿಲ್ಲ, ರಾತ್ರಿ ಬೆಳಕಿಲ್ಲ ಎಂಬ ಖುಷಿಯಲ್ಲಿ ಊಟ ಮಾಡಿ ಮಲಗಿಕೊಂಡರು. ಈಡೀ ಹಳ್ಳಿ ಖುಷಿಯಿಂದ ಮಲಗಿತು. ಆದರೆ ಕಂದಿಲುಗಳನ್ನು ತಂದ ಗಂಡ ಹೆಂಡತಿ ಊಟ ಮಾಡದೆ ರಾತ್ರಿಯೆಲ್ಲ ಅಳುತ್ತಾ ಕುಂತರು. ಅವರಿಗೆ ಯಾಕೆ ಈ ಹಳ್ಳಿ ಜನರೆಲ್ಲ ಸೇರಿ ನಾವು ತಂದ ಕಂದಿಲುಗಳನ್ನು ಒಡೆದಾಕಿದರು ಎಂಬುದು ತಿಳಿಯಲಿಲ್ಲ. ಬೆಳಕಿಲ್ಲದ ಈ ದರಿದ್ರ ಹಳ್ಳಿಯಲ್ಲಿ ಇರುವುದರಲ್ಲಿ ಯಾವ ಅರ್ಥಾನು ಇಲ್ಲ ಅಂತಾ ಆ ಗಂಡ ಹೆಂಡತಿ ರಾತ್ರೋರಾತ್ರಿ ತಮ್ಮ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ಸೂರ್ಯೋದಯಕ್ಕಿಂತ‌ ಮುಂಚೇಯೆ ಆ ದರಿದ್ರ ಹಳ್ಳಿ ಬಿಟ್ಟು ಬೇರೆ ಊರಿಗೆ ಹೋದರು. 

ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you

                                   ಆ ಗಂಡ ಹೆಂಡತಿ ಬೇರೆ ಊರಿಗೆ ಹೋದ ನಂತರ ಒಂದು ಪುಟ್ಟ ಬಾಡಿಗೆ ಮನೆ ಮಾಡಿದರು. ಸಂಜೆಯಾಗುತ್ತಿದ್ದಂತೆ ಅವರಿಗೆ "ನಾವು ಸಂಪಾದಿಸಿದ ಹಣವೆಲ್ಲ ಆ ಕಂದಿಲುಗಳ ಜೊತೆಗೆ ಹಾಳಾಯ್ತು, ಈಗ ಮತ್ತೆ ನಾವು ‌ಕತ್ತಲಲ್ಲಿ ಇರಬೇಕಲ್ಲ...?" ಎಂಬ ಚಿಂತೆ ಕಾಡಲು ಶುರುವಾಯಿತು. ಅಷ್ಟರಲ್ಲಿ ಸೂರ್ಯಾಸ್ತವಾಯಿತು. ಆದರೆ ಎಲ್ಲ ಕಡೆಗೆ ಸ್ವಲ್ಪ ಬೆಳಕಿತ್ತು. ಆ ಗಂಡ ಹೆಂಡತಿ ಇಬ್ಬರು ಮನೆಯಾಚೆ ಬಂದು ನೋಡಿದರು‌‌. ಬೀದಿ ದೀಪಗಳು ಹೊತ್ತಿ ಉರಿಯುತ್ತಿದ್ದವು. ಏಕೆಂದರೆ ಈ ಊರಲ್ಲಿ ಕರೆಂಟ್ ಇತ್ತು. ಅವರು ಮನೆಯೊಳಗೆ ಹೋಗಿ ಲೈಟ ಬಟನ ಒತ್ತಿದರು. ಮನೆ ತುಂಬೆಲ್ಲ ಬೆಳಕು ಬಿತ್ತು. ಬೆಳಕನ್ನು ನೋಡಿ ಅವರಿಬ್ಬರು ಚಿಕ್ಕ ಮಕ್ಕಳಂತೆ ಕುಣಿದಾಡಲು ಪ್ರಾರಂಭಿಸಿದರು. ‌ಕರೆಂಟ ಇಲ್ಲದ ಆ ಹಳ್ಳಿ ಬಿಟ್ಟು ಅವರು ಈ ಊರಿಗೆ ಬಂದು ಸರಿಯಾದ ಕೆಲಸ ಮಾಡಿದ್ದರು.‌ ಇಲ್ಲಿ ಒಳ್ಳೇ ಜನ ಇದ್ದರು. ಒಳ್ಳೇ ಶಾಲೆಯಿತ್ತು.‌ ಇಲ್ಲಿ ಮಕ್ಕಳೆಲ್ಲ ಶಾಲೆಗೆ ಹೋಗುತ್ತಿದ್ದರು. ಇದನ್ನು ನೋಡಿ ಆ ಗಂಡ ಹೆಂಡತಿ ಈಗ ನಾವು ಧೈರ್ಯವಾಗಿ ಮಕ್ಕಳನ್ನು ‌ಮಾಡಬಹುದು, ಅವರನ್ನು ಚೆನ್ನಾಗಿ ಓದಿಸಬಹುದು, ಇಲ್ಲಿ ಸಾಕಷ್ಟು ಬೆಳಕಿದೆ ಎಂದು ಸಿಕ್ಕಾಪಟ್ಟೆ ಖುಷಿಪಟ್ಟರು... 

ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you

                      ಈ ಕಥೆಯನ್ನು ಕೇಳಿದ ನಂತರ ನಿಮಗೆ "ಯಾಕೆ ಜನ ನಿಮಗೆ ಅನಾವಶ್ಯಕವಾಗಿ ತೊಂದರೆ ಕೊಡುತ್ತಾರೆ?" ಎಂಬುದು ಅರ್ಥವಾಗಿರಬಹುದು. ಗೆಳೆಯರೇ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ಈಡೀ ಜಗತ್ತಿನಲ್ಲೇ 99% ಜನ ಅಂಧಕಾರದಲ್ಲಿದ್ದಾರೆ, ಅಜ್ಞಾನದಲ್ಲಿದ್ದಾರೆ, ಬಡತನದಲ್ಲಿದ್ದಾರೆ, ಕಂಫರ್ಟ ಝೋನನಲ್ಲಿ ಕೊಳೆಯುತ್ತಿದ್ದಾರೆ. ಅದಕ್ಕಾಗಿ ಅವರು ನೀವು ಏನಾದರೂ ಒಂದು ಹೊಸದನ್ನು ಮಾಡಲು ಹೊರಟಾಗ ನಿಮ್ಮನ್ನು ಡಿಸಕರೇಜ ಮಾಡುತ್ತಾರೆ. "ನಾವು ಜಾಬ್ ಮಾಡಿ ಸಾಯುತ್ತಿರುವಾಗ ಇವರೇಕೆ ಬಿಜನೆಸ ಮಾಡುತ್ತಿದ್ದಾರೆ? ನಾವು ಬೈಕಲ್ಲಿ ಒದ್ದಾಡುತ್ತಾ ಸವಾರಿ ಮಾಡುವಾಗ ಇವರೇಕೆ ಕಾರಲ್ಲಿ ‌ಮೆರವಣಿಗೆ ಹೊರಟಿದ್ದಾರೆ? ನಾವು ಬಾಡಿಗೆ ಮನೆಯಲ್ಲಿ ಬಿದ್ದಿರುವಾಗ ಇವರೇಕೆ ಬಂಗಲೆಯಲ್ಲಿದ್ದಾರೆ? ನಮ್ಮ ಮಕ್ಕಳು ಬೀದಿಯಲ್ಲಿರುವಾಗ ಇವರೇಕೆ ಇವರ ಮಕ್ಕಳ ಭವಿಷ್ಯಕ್ಕಾಗಿ ಇಷ್ಟೊಂದು ಕೆಲಸ ಮಾಡುತ್ತಿದ್ದಾರೆ?" ಎಂಬ ಜಲಸಿ ಅವರ ಮೈಮನಸ್ಸಲ್ಲಿ ಮೂಡುತ್ತೆ. ಅದಕ್ಕಾಗಿ ಅವರು ನಿಮ್ಮನ್ನು ಹೇಟ್ ಮಾಡುತ್ತಾರೆ. ನೀವು ಮುಂದೆ ಹೊರಟಾಗ ಎಲ್ಲರಿಗಿಂತ ಮೊದಲು ನಿಮ್ಮ ಸಂಬಂಧಿಕರಿಗೆ, ಗೆಳೆಯರಿಗೆ ಹೊಟ್ಟೆನೋವು ಸ್ಟಾರ್ಟಾಗೋದು ನಿಮ್ಮ ಗಮನಕ್ಕೂ ಸಹ ಬಂದಿರಬಹುದು. 

                    ಸೋ ಗೆಳೆಯರೇ, ಜನ ನಿಮಗೆ ತೊಂದರೆ ಕೊಟ್ಟಾಗ ತಲೆ ಕೆಡಿಸಿಕೊಳ್ಳದೆ ಈ ಕಥೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ಈ ಕಥೆಯಲ್ಲಿನ ಗಂಡ ಹೆಂಡತಿಯನ್ನು ನೋಡಿ ಕಲಿಯಿರಿ. ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ಬೆಳಕಿರುವ ಊರಿಗೆ‌ ಹೋಗಿ, ನಿಮ್ಮ ಸುಖಕ್ಕಾಗಿ ಚೆನ್ನಾಗಿ ಕೆಲಸ ಮಾಡಿ ಸಾಕಷ್ಟು ಸಂಪಾದಿಸಿ. ಒಂದು ವೇಳೆ ಕರೆಂಟ್ ಇಲ್ಲದ ಊರಿನ ಜನ ನಿಮಗೆ ತೊಂದರೆ ‌ಕೊಟ್ಟರೆ‌ ಅವರಿಂದ ಸಾಧ್ಯವಾದಷ್ಟು ದೂರವಿದ್ದು ಬಿಡಿ. ಏಕೆಂದರೆ ಅವರ ಮನೋರೋಗಕ್ಕೆ ಯಾವುದೇ ಔಷಧಿಯಿಲ್ಲ. ಅವರನ್ನು ಅದೇ ಕತ್ತಲಲ್ಲಿ ಕೊಳೆಯಲು ಬಿಡಿ. ನೀವು ಬೆಳಕಿಗೆ ಬಂದು ಸುಖವಾಗಿರಿ. All the best and Thanks you....

ಜನ ನಿಮಗೆ ತೊಂದರೆ ಕೊಟ್ಟಾಗ ಈ ಕಥೆಯನ್ನು ನೆನಪಿಸಿಕೊಳ್ಳಿ : Remember this story when people trouble you
Blogger ನಿಂದ ಸಾಮರ್ಥ್ಯಹೊಂದಿದೆ.