ಹಾಯ್ ಗೆಳೆಯರೇ, ಸಕ್ಸೆಸ ಅನ್ನೋದು ಯಾರಿಗೂ ಕೂಡ ಸುಮ್ಮನೆ ಸಿಗಲ್ಲ. ಅದಕ್ಕಾಗಿ ಸಾಕಷ್ಟು ಸ್ಟ್ರಗಲ ಮಾಡಬೇಕಾಗುತ್ತದೆ. ಜೊತೆಗೆ ಕೆಲವೊಂದಿಷ್ಟು ಸಂಗತಿಗಳನ್ನು ಸ್ಯಾಕ್ರಿಫೈಸ್ ಮಾಡಬೇಕಾಗುತ್ತದೆ, ಸೀರಿಯಸ್ಸಾಗಿ ಕೆಲಸ ಮಾಡಬೇಕಾಗುತ್ತದೆ. Success wants your Seriousness and Sacrifice.
ನಾನು ನಿಮಗೆ ನಿಮ್ಮ ಲೈಫನ್ನು ಎಂಜಾಯ ಮಾಡಬೇಡಿ ಅಂತಾ ಹೇಳ್ತಿಲ್ಲ. ಎಂಜಾಯ ಮಾಡಿ. ಆದರೆ ಆ ಎಂಜಾಯಮೆಂಟಗೋಸ್ಕರ ಎಲ್ಲವನ್ನೂ ಕಳೆದುಕೊಳ್ಳಬೇಡಿ. ಸ್ವಲ್ಪ ಸೀರಿಯಸ್ಸಾಗಿರಿ. ನೀವು ನಿಮ್ಮ ಗೋಲ ಮೇಲೆ ಎಷ್ಟು ಸೀರಿಯಸ್ಸಾಗಿರುತ್ತಿರೋ ಅಷ್ಟು ಬೇಗನೆ ನೀವು ನಿಮ್ಮ ಗೋಲನ್ನು ಅಚೀವ ಮಾಡುತ್ತೀರಿ, ನಿಮ್ಮ ಬರ್ನಿಂಗ್ ಡಿಜೈರ ಎಷ್ಟು ಸ್ಟ್ರಾಂಗ್ ಆಗಿರುತ್ತದೆಯೋ ಅಷ್ಟು ಬೇಗನೆ ನೀವು ಸಕ್ಸೆಸಫುಲ್ಲಾಗುತ್ತೀರಿ. ಸೋ ಸ್ವಲ್ಪ ಸೀರಿಯಸ್ಸಾಗಿರಿ. ಯಾವುದನ್ನೂ ಉಡಾಫೆ ಮಾಡಬೇಡಿ. ಉಡಾಫೆ ಮಾಡಿದರೆ ನಂತರ ಖಂಡಿತ ಪಶ್ಚಾತ್ತಾಪ ಪಡುತ್ತೀರಿ.

ಸಕ್ಸೆಸಫುಲ್ಲಾಗಲು ಸೀರಿಯಸನೆಸ ಎಷ್ಟು ಮುಖ್ಯವೋ ಸ್ಯಾಕ್ರಿಫೈಸ್ ಕೂಡ ಅಷ್ಟೇ ಮುಖ್ಯವಾಗಿದೆ. ನೀವು ನಿಮ್ಮ ಸಕ್ಸೆಸಗೋಸ್ಕರ ಕೆಲವೊಂದಿಷ್ಟು ಹಾರ್ಮಫುಲ್ ಸಂಗತಿಗಳನ್ನು ಸ್ಯಾಕ್ರಿಫೈಸ್ ಮಾಡಲೇಬೇಕು. ಟೈಮಪಾಸ ವಿಷಯಗಳನ್ನು, ಟೈಮಪಾಸ ವ್ಯಕ್ತಿಗಳನ್ನು, ದುಶ್ಚಟಗಳನ್ನು, ದುಷ್ಟ ವ್ಯಕ್ತಿಗಳನ್ನು, ಶಾರ್ಟ ಟೈಮ ಸುಖಗಳನ್ನು, ಫಿಜಿಕಲ ಅಟ್ರ್ಯಾಕ್ಷನ, ಸೆ***ಕ್ಸಗಳಂಥ ಚೀಪ್ ಸುಳ್ಳು ಸುಖಗಳನ್ನು, ದಾರು, ಪಾರ್ಟಿಗಳನ್ನು ಸ್ಯಾಕ್ರಿಫೈಸ ಮಾಡಲೇಬೇಕಾಗುತ್ತದೆ.
ನೀವು ಸ್ಟೂಡೆಂಟಾಗಿದ್ದರೆ ಅತಿಯಾದ ನಿದ್ದೆ, ಅತಿಯಾದ ಊಟ, ಟಿವಿ ಅಡಿಕ್ಷನ್, ಮೊಬೈಲ್ ಅಡಿಕ್ಷನ್ ಹಾಗೂ ಎಂಟರ್ಟೇನ್ಮೆಂಟನ್ನು ನೀವು ಸ್ಯಾಕ್ರಿಫೈಸ್ ಮಾಡಲೇಬೇಕು.

ನೀವು ಬಿಜನೆಸಮ್ಯಾನಾಗಿದ್ದರೆ ವಿಕೇಂಡ ಪಾರ್ಟಿ, ಬ್ಯಾಡ್ ಫ್ರೆಂಡ್ಸ ಕಂಪನಿ, ಬ್ಯಾಡ್ ಹ್ಯಾಬಿಟ್ಸ, ಅನಾವಶ್ಯಕ ಶೋಕಿಗಳನ್ನು, ಕಾರು ಬೀರುಗಳಲ್ಲಿ ದುಡ್ಡನ್ನು ಉಡಾಯಿಸುವುದನ್ನು ಸ್ಯಾಕ್ರಿಫೈಸ ಮಾಡಲೇಬೇಕು.
ನೀವೊಬ್ಬ ಸ್ಪೋರ್ಟ್ಸಮ್ಯಾನ ಅಥವಾ ಆರ್ಟಿಸ್ಟ ಆಗಿದ್ದರೆ ನೀವು ಓವರ ಟೇಸ್ಟಿ ಫೂಡ್, ಲೇಜಿನೆಸ, ಮಾ**ಸ್ಟರ*ಬೇಷನ್, ಪೋ**ರ್ನ ಅಡಿಕ್ಷನ್, ಸೆ***ಕ್ಸ ಅಡಿಕ್ಷನಗಳನ್ನು ಸ್ಯಾಕ್ರಿಫೈಸ ಮಾಡಲೇಬೇಕು. ಇಲ್ಲವಾದರೆ ನಿಮ್ಮ ಕ್ರಿಯೆಟಿವಿಟಿ ಹಾಗೂ ಫೋಕಸ್ ಹಾಳಾಗುತ್ತದೆ. ನಿಮ್ಮ ಗೋಲ ಮಿಸ್ಸಾಗುತ್ತದೆ. ಹೇಗೆ ಅರ್ಜುನನಿಗೆ ಬರೀ ಪಕ್ಷಿಯ ಕಣ್ಣು ಮಾತ್ರ ಕಾಣಿಸುತ್ತಿತ್ತೋ ಅದೇ ರೀತಿ ನಿಮಗೆ ಬರೀ ನಿಮ್ಮ ಗೋಲ ಮಾತ್ರ ಕಾಣಿಸಬೇಕು, ರಾತ್ರಿ ಕನಸಲ್ಲಿ ನಿಮ್ಮ ಗೋಲ ಮಾತ್ರ ಬರಬೇಕು.

ನಮಗೆ ಸ್ವಾತಂತ್ರ್ಯ ಕೂಡ ಎಷ್ಟೋ ಜನರ ಸ್ಯಾಕ್ರಿಫೈಸನಿಂದ ಸಿಕ್ಕಿದೆ. ಬಿಟ್ಟಿಯಾಗಿ ಸಿಕ್ಕಿಲ್ಲ. ಲಕ್ಷಾಂತರ ಜನರ ಬಲಿದಾನದಿಂದ ಸಿಕ್ಕಿದೆ. ಭಗತಸಿಂಗ ಬರೀ 23ನೇ ವಯಸ್ಸಿಗೆ ಖುಷಿಯಿಂದ ಗಲ್ಲಿಗೇರುತ್ತಾರೆ. "ಇದು ಮದುವೆಯಾಗುವ ಸಮಯವಲ್ಲ. ನನ್ನ ದೇಶ ನನ್ನನ್ನು ಕರೆಯುತ್ತಿದೆ" ಎಂದೇಳಿ ತಮ್ಮ ಲೈಫನ್ನು ದೇಶಕ್ಕಾಗಿ ಸ್ಯಾಕ್ರಿಫೈಸ ಮಾಡುತ್ತಾರೆ. ಅವತ್ತು ಅವರಂತೆ ಲಕ್ಷಾಂತರ ಜನ ಸ್ಯಾಕ್ರಿಫೈಸ ಮಾಡಿದಕ್ಕೆ ನಾವಿವತ್ತು ಭಾರತ ದೇಶದಲ್ಲಿ ಸುಖವಾಗಿದ್ದೇವೆ. ಸೋ ಗೆಳೆಯರೇ, ನೀವು ಮುಂದೆ ಸುಖವಾಗಿರಬೇಕೆಂದರೆ ಇವತ್ತೇ ಹಾರ್ಮಫುಲ್ ಥಿಂಕ್ಸಗಳನ್ನ ಸ್ಯಾಕ್ರಿಫೈಸ ಮಾಡಿ ನಿಮ್ಮ ಕರಿಯರ ಮೇಲೆ ಫೋಕಸ ಮಾಡಿ.

ಭಗತಸಿಂಗ ದೇಶಕ್ಕಾಗಿ ಬರೀ ಮನೆ ಮದುವೆಯಷ್ಟೇ ಅಲ್ಲ ಈಡೀ ಲೈಫನ್ನೇ ಸ್ಯಾಕ್ರಿಫೈಸ ಮಾಡಿದ್ದಾರೆ. ಹೀಗಿರುವಾಗ ನೀವು ನಿಮ್ಮ ಸಕ್ಸೆಸಗಾಗಿ, ಫ್ಯುಚರ್ ಲೈಫಗಾಗಿ ಯಾಕೆ ಈ ಪ್ರೀತಿಪ್ರೇಮದ ಹುಚ್ಚಾಟಗಳನ್ನು, ಲವ್ ಸೆ***ಕ್ಸ ದೋಖಾಗಳನ್ನು, ಬ್ಯಾಡ ಹ್ಯಾಬಿಟ್ಸಗಳನ್ನು, ಟಾಕ್ಸಿಕ ರಿಲೆಷನಶೀಪಗಳನ್ನು ಸ್ಯಾಕ್ರಿಫೈಸ ಮಾಡಬಾರದು? "ನೀವು ಇಲ್ಲಿ ತನಕ ನಿಮ್ಮ ಲೈಫಿಗಾಗಿ, ನಿಮ್ಮ ಗೋಲಗಾಗಿ, ನಿಮ್ಮ ಸಕ್ಸೆಸಗಾಗಿ ಏನನ್ನೂ ಸ್ಯಾಕ್ರಿಫೈಸ ಮಾಡಿರುವಿರಿ?" ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ. ದೇಶಕ್ಕಾಗಿ ಏನನ್ನೂ ಸ್ಯಾಕ್ರಿಫೈಸ ಮಾಡದಿದ್ದರೂ ಪರವಾಗಿಲ್ಲ, ಅಟಲಿಸ್ಟ ನಿಮ್ಮ ಸ್ವಂತ ಲೈಫಿಗಾಗಿ ಸ್ಯಾಕ್ರಿಫೈಸ ಮಾಡಿ ಸರಿಯಾಗಿ ಕೆಲಸ ಮಾಡಿ ಸುಖವಾಗಿ ಸಕ್ಸೆಸಫುಲ್ಲಾಗಿ ಬದುಕಿ ಸಾಕು. All the Best and Thanks You...