ಹಾಯ್ ಗೆಳೆಯರೇ, ಗುಡ್ ಮಾರ್ನಿಂಗ್,
ಪ್ರತಿದಿನ ವಾಟ್ಸಾಪ್ ಸ್ಟೇಟಸ್ ಬದಲಾಯಿಸುವುದರಿಂದ ನಿಮ್ಮ ಬದುಕು ಬದಲಾಗಲ್ಲ,
ಫೇಸ್‌ಬುಕ್ ಮತ್ತು ಇನಸ್ಟಾಗ್ರಾಮಗಳಲ್ಲಿ ಪದೇ ಪದೇ ಸ್ಟೇಟಸ್ ಇಡುವುದರಿಂದ ಮತ್ತು ಬೇರೆಯವರ ಸ್ಟೇಟಸಗಳನ್ನು ನೋಡುತ್ತಾ ಕೂಡುವುದರಿಂದ ನಿಮ್ಮ ಬದುಕು ಬದಲಾಗಲ್ಲ,
ಬೋರಾದಾಗ ನಿಮ್ಮ ಬಾಯ್ಫ್ರೆಂಡ್ ಗರ್ಲಫ್ರೆಂಡಗಳನ್ನು ಬದಲಾಯಿಸುವುದರಿಂದ ನಿಮ್ಮ ಬದುಕು ಬದಲಾಗಲ್ಲ,
ನಿಮ್ಮ ಗೆಳೆಯರನ್ನ ಬದಲಾಯಿಸುವುದರಿಂದ, ಮನೆಯನ್ನ ಬದಲಾಯಿಸುವುದರಿಂದ, ಲೈಫ್ ಸ್ಟೈಲನ್ನ ಬದಲಾಯಿಸುವುದರಿಂದ ನಿಮ್ಮ ಬದುಕು ಬದಲಾಗಲ್ಲ,

ಅಷ್ಟೇ ಏಕೆ ಈ ಜಗತ್ತನ್ನು ಬದಲಾಯಿಸುವುದರಿಂದಲೂ ನಿಮ್ಮ ಬದುಕು ಬದಲಾಗಲ್ಲ...
ನಿಮಗೆ ನಿಜವಾಗಿಯೂ ನಿಮ್ಮ ಬದುಕನ್ನು ಬದಲಾಯಿಸುವ ಆಸೆಯಿದ್ದರೆ, ನಿಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂಬ ಕನಸಿದ್ದರೆ ಮೊದಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ನಿಮ್ಮ ಲೊ ಲೆವೆಲ್ ಥಿಂಕಿಂಗನ್ನು ಬದಲಾಯಿಸಿ, ನಿಮ್ಮ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಿ, ನಿಮ್ಮ ಮೂಢ ನಂಬಿಕೆಗಳನ್ನು ಬದಲಾಯಿಸಿ, ನಿಮ್ಮ ನೆಗೆಟಿವ್ ಯೋಚನೆಗಳನ್ನು ಮತ್ತು ನೆಗೆಟಿವ್ ಮೈಂಡಸೆಟ್ಟನ್ನು ಬದಲಾಯಿಸಿ.
ಬೇರೆಯವರನ್ನು ಬದಲಾಯಿಸುವ ವ್ಯರ್ಥ ಪ್ರಯತ್ನ ಮಾಡಬೇಡಿ. ಮೊದಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ನಿಮ್ಮ ಮೇಲೆ ಕೆಲಸ ಮಾಡಿ. ಮೆಂಟಲಿ ಹಾಗೂ ಫಿಜಿಕಲಿ ಫಿಟ್ & ಆಕ್ಟಿವ್ ಆಗಿರಿ. ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮ ಕೆಲಸವನ್ನು ಪ್ರೀತಿಸಿ. ಆಗ ನಿಮ್ಮ ಬದುಕು ಖಂಡಿತಾ ಬದಲಾಗುತ್ತದೆ. ಆಲ್ ದಿ ಬೆಸ್ಟ & ಥ್ಯಾಂಕ್ಸ ಯು....