ಹಾಯ್ ಗೆಳೆಯರೇ, ಮೇಜ್ಯಾರಿಟಿ ಆಫ್ ಜನ ಮನಸ್ಸಿನ ಸೌಂದರ್ಯಕ್ಕಿಂತ ಹೆಚ್ಚಾಗಿ ಮುಖದ ಸೌಂದರ್ಯಕ್ಕೆ, ಮೈ ಸೌಂದರ್ಯಕ್ಕೆ ಸಿಕ್ಕಾಪಟ್ಟೆ ಮಹತ್ವ ಕೊಡುತ್ತಾರೆ. ಎಷ್ಟೋ ಜನ ನಾನು ಸುಂದರವಾಗಿಲ್ಲ ಅಂತಾ ಕೊರಗಿದರೆ ಕೆಲವೊಂದಿಷ್ಟು ಜನ ನಾನು ಸುಂದರವಾಗಿರುವೆ ಎಂದು ಅಹಂಕಾರದಿಂದ ಮೆರೆದಾಡಿ ಸರ್ವನಾಶವಾಗುತ್ತಾರೆ. ಇಲ್ಲದ ಅಪಾಯಗಳನ್ನು ಮೈಮೇಲೆ ಎಳೆದುಕೊಂಡು ನರಕದ ಜೀವನವನ್ನು ಅನುಭವಿಸುತ್ತಾರೆ. ಆದರೆ ಬಹಳಷ್ಟು ಜನರಿಗೆ ಸೌಂದರ್ಯ ಒಂದು ಸುಂದರ ಸುಳ್ಳು ಎಂಬ ಸತ್ಯ ಗೊತ್ತಾಗಲ್ಲ. ಗೊತ್ತಾದರೂ ಅವರದನ್ನ ಅರ್ಥ ಮಾಡಿಕೊಳ್ಳಲ್ಲ.
ಸೌಂದರ್ಯ ಹಾಗೂ ಕುರೂಪತನ ಎರಡೂ ಸಹ ನಮ್ಮ ಮೆದುಳಿನ ಹುಸಿ ಕಲ್ಪನೆಗಳಾಗಿವೆ. Both beauty and ugliness are the false imagination of our brain. ಸೌಂದರ್ಯ ನೋಡುವವರ ಕಂಗಳಲ್ಲಿದೆ. ಒಬ್ಬರ ಕಣ್ಣಿಗೆ ಬ್ಯೂಟಿಫುಲ್ಲಾಗಿ ಕಾಣಿಸಿದ ವ್ಯಕ್ತಿ ಅಥವಾ ವಸ್ತು ಮತ್ತೊಬ್ಬರ ಕಣ್ಣಿಗೆ ಅಗ್ಲಿಯಾಗಿ ಕಾಣುತ್ತಾರೆ. ಸೋ ನಿಜವಾದ ಸೌಂದರ್ಯ ನೋಡುಗರ ಕಣ್ಣುಗಳಲ್ಲಿದೆ ಎನ್ನಬಹುದು. ಏಕೆಂದರೆ ಸೌಂದರ್ಯ ಒಂದು ಕಲ್ಪನೆಯಷ್ಟೇ. ದೈಹಿಕ ಸೌಂದರ್ಯ ಶಾಶ್ವತವಲ್ಲ. ಯೌವ್ವನ ಮುಗಿಯುತ್ತಿದ್ದಂತೆ ಅದು ಮಾಯವಾಗಿ ಬಿಡುತ್ತದೆ.
ಹೆಣ್ಣು ಎಲ್ಲರ ಕಣ್ಣಿಗೆ ಸುಂದರವಾಗಿ ಕಾಣುತ್ತಾಳೆ. ಅವಳು ಯಂಗ ಆಗಿರುವಾಗ, ಆಭರಣಗಳನ್ನು ಹಾಕಿಕೊಂಡಾಗ, ಹೊಸ ಬಟ್ಟೆಗಳನ್ನು ಹಾಕಿಕೊಂಡು ನಾಚಿಕೊಂಡು ನಕ್ಕಾಗ ಅಪ್ಸರೆಯಂತೆ ಕಾಣುತ್ತಾಳೆ. ಆಗ ಎಲ್ಲರೂ ಅವಳಿಗಾಗಿ ಏನು ಬೇಕಾದರೂ ಮಾಡಲು ತಯಾರಾಗುತ್ತಾರೆ. ಅವಳಿಗಾಗಿ ಯುದ್ಧ ರಕ್ತಪಾತಗಳಾಗುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಆದರೆ ಸಡನ್ನಾಗಿ ಅವಳು ಮುದುಕಿಯಾದರೆ? ಇಲ್ಲ ಅವಳು ಸಡನ್ನಾಗಿ ಸತ್ತರೆ? ಇಲ್ಲವೇ ಯಾವುದೋ ರೋಗದಿಂದ ಅವಳ ಸೌಂದರ್ಯ ಮಾಸಿದರೆ ಯಾರು ಸಹ ಅವಳ ಸಮೀಪಕ್ಕೆ ಸುಳಿಯುವುದಿಲ್ಲ. ಈಗ ಎಲ್ಲಿದೆ ಸೌಂದರ್ಯ? ಅವಳ ಹೊರಗಿನ ಸೌಂದರ್ಯಕ್ಕೆ ಮಹತ್ವವಿಲ್ಲ, ಅವಳ ಒಳಗಿನ ಮಹಾಶಕ್ತಿ ಉಸಿರಿಗೆ, ಆತ್ಮಕ್ಕೆ ಮಹತ್ವವಿದೆ ಎಂಬುದು ನಮಗೆ ಇದರಿಂದ ಈಜಿಯಾಗಿ ಗೊತ್ತಾಗುತ್ತದೆ. ಒಂದು ವೇಳೆ ಅವಳ ಸುಂದರವಾದ ಚರ್ಮಕ್ಕೆ ಬೆಲೆಯಿದ್ದರೆ ಎಲ್ಲರೂ ಅವಳ ಶವಕ್ಕೂ ಸಹ ಸುಂದರವೆನ್ನುತ್ತಿದ್ದರು. ಅವಳ ಶವದೊಂದಿಗೆ ಮದುವೆಯಾಗಿ ಸಂಸಾರ ಮಾಡ್ತೀನಿ ಎನ್ನುತ್ತಿದ್ದರು. ಆದರೆ ಯಾರು ಸಹ ಈ ರೀತಿ ಅನ್ನಲ್ಲ. ಏಕೆಂದರೆ ಬಾಹ್ಯ ಸೌಂದರ್ಯ ಶಾಶ್ವತವಲ್ಲ, ಅದಕ್ಕೆ ಬೆಲೆಯೂ ಇಲ್ಲ. ದೇಹದ ಒಳಗಿರುವ ಆತ್ಮ ಅಂದರೆ ಉಸಿರಿಗೆ ನಿಜವಾದ ಬೆಲೆಯಿದೆ, ಅದು ಇರುವ ತನಕ ನಮಗೊಂದು ಹೆಸರಿದೆ. ಉಸಿರು ಹೋದ ಮೇಲೆ ಯಾರು ನಮ್ಮನ್ನು ಹೆಸರಿನಿಂದ ಕರೆಯಲ್ಲ, ಶವ ಅಂತಾರೆ. ಸೋ ಮನಸ್ಸಿನ ಸೌಂದರ್ಯಕ್ಕೆ ನಾವು ಬೆಲೆ ಕೊಡುವುದನ್ನು ಕಲಿಯಬೇಕಾಗಿದೆ.
ಬಹಳಷ್ಟು ಜನ ಯುವಕ ಯುವತಿಯರು ಈ ಸೌಂದರ್ಯದ ಮಾಯಾಜಾಲದಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಉದಾಹರಣೆಗೆ ; ಯುವಕರು ಸುಂದರ ಯುವತಿಯನ್ನು ನೋಡಿ ಉದ್ರೇಕಗೊಳ್ಳುತ್ತಾರೆ, ಯುವತಿಯರು ಸುಂದರ ಯುವಕನನ್ನು ನೋಡಿ ಆಕರ್ಷಿತರಾಗುತ್ತಾರೆ. ಆದರೆ ಅಸಲಿಗೆ ಅವರು ಯಾವ ಸುಂದರ ಶರೀರಕ್ಕಾಗಿ ಸಾಯಲು ಮುಂದಾಗುತ್ತಿದ್ದಾರೋ ಅದು ನಶ್ವರ ಎಂಬ ಸತ್ಯ ಅವರಿಗೆ ಬೇಗನೆ ಅರ್ಥವಾಗಲ್ಲ. ಅಷ್ಟರಲ್ಲಿ ಅವರ ಜೀವನ ಸೌಂದರ್ಯದ ಶಾಖದಿಂದ ಹಾಳಾಗಿ ಹೋಗಿರುತ್ತದೆ. ಅವರು ಯಾವ ಹುಡುಗಿಯನ್ನು ನೋಡಿ ಅವಳ ಹಿಂದೆ ಅಲೆದು ಅವಳನ್ನು ವಿಶ್ವ ಸುಂದರಿ ಎನ್ನುತ್ತಿರುತ್ತಾರೋ ಅವಳು ಮುಖದಿಂದ ಮಾತ್ರ ಸುಂದರವಾಗಿರುತ್ತಾಳೆ. ಅದು ಅವಳ ತಪ್ಪಲ್ಲ. ಆದರೆ ಅಸಲಿಗೆ ಅವಳು ಮೂಳೆ, ಮಾಂಸ, ಮಲ, ಮೂತ್ರ, ಬೆವರುಗಳಿಂದಾದ ಚರ್ಮದ ಗೊಂಬೆಯಾಗಿರುತ್ತಾಳೆ ಅಷ್ಟೇ. ಎಲ್ಲರೂ ಸಹ ಚರ್ಮದ ಗೊಂಬೆಗಳಾಗಿದ್ದಾರೆ ಅಷ್ಟೇ. ಆದರೆ ಎಲ್ಲರೂ ಇದರಲ್ಲಿ ಸೌಂದರ್ಯ ಹಾಗೂ ಕುರೂಪುತನವನ್ನು ಕಲ್ಪಿಸಿಕೊಂಡು ಕೊರಗುತ್ತಿದ್ದಾರೆ ಇಲ್ಲ ಅಹಂಕಾರ ಪಟ್ಟುಕೊಂಡು ಮೆರೆದಾಡಿ ಮಣ್ಣಾಗುತ್ತಿದ್ದಾರೆ.
ಸೌಂದರ್ಯ ಒಂದು ಸುಂದರ ಸುಳ್ಳು ಅನ್ನುವುದಕ್ಕೆ ಒಂದು ಸಿಂಪಲ್ ಎಕ್ಸಾಮಪಲ್ ಕೊಡುವೆ. ಇದರಲ್ಲಿ ಸಾಧ್ಯವಾದರೆ ಅರ್ಥ ಮಾಡಿಕೊಳ್ಳಿ. ಮುಂದೆ ಎಕ್ಸಪ್ಲೇನ ಮಾಡುವಷ್ಟು ಟೈಮ ನನಗಿಲ್ಲ. ಮನೆಯಲ್ಲಿನ ಮಹಾಲಕ್ಷ್ಮಿ ಅಂದರೆ ಹೆಂಡತಿ ನಕ್ಕಾಗ ಮುದ್ದು ಮಾಡಿದಾಗ ಅವಳು ದೇವತೆಯಂತೆ ಕಾಣುತ್ತಾಳೆ. ಅದೇ ಹೆಂಡತಿ ಕೋಪಿಸಿಕೊಂಡಾಗ ಜಗಳವಾಡಿದಾಗ ಡೆವಿಲ ತರಹ ಕಾಡುತ್ತಾಳೆ. ಅವಳು ಅವಳೇ ಆಗಿರುತ್ತಾಳೆ. ಆದರೆ ಗಂಡ ಅವಳನ್ನು ಒಮ್ಮೆ ದೇವತೆಯಂತೆ ಮತ್ತೊಮ್ಮೆ ಡೆವಿಲನಂತೆ ನೋಡುತ್ತಾನೆ. ಕೆಲವೊಮ್ಮೆ ಅವಳನ್ನು ನೋಡಿ ಖುಷಿಪಡುತ್ತಾನೆ ಮತ್ತೊಮ್ಮೆ ಕೊರಗುತ್ತಾನೆ. ಆದರೆ ಆತ ಅವಳನ್ನು ಅವಳಿದ್ದಂಗೆ ನೋಡಿದ್ದರೆ ಆತ ಯಾವಾಗಲೂ ಖುಷಿಯಾಗಿರುತ್ತಿದ್ದ. ಆದರೆ ಆತ ಹಾಗೇ ನೋಡಲ್ಲ. ಏಕೆಂದರೆ ಅವಳ ಸುಂದರ ಚರ್ಮದ ಹಿಂದಿರುವ ಹಸಿ ಮಾಂಸವನ್ನು ನೋಡಲು, ಅವಳ ನಗುವಿನ ಹಿಂದಿರುವ ಕೋಪವನ್ನು ಅರಿಯಲು, ಅವಳ ಕೆಂಪು ತುಟಿಗಳಲ್ಲಿರುವ ರೋಗಾಣುಗಳನ್ನು ನೋಡಲು, ಅವಳ ಸುಂದರ ಶರೀರ ರೋಗಗಳ ಗೂಡಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವನಿಗೆ ಆತ್ಮದ ಕಣ್ಣುಗಳಿಲ್ಲ. ಎಲ್ಲರಿಗೂ ಆತ್ಮದ ಕಣ್ಣುಗಳಿದ್ದರೆ ಯಾರು ಸಹ ಅವರವರ ಗಂಡ ಅಥವಾ ಹೆಂಡತಿಯಿಂದ ದು:ಖಿತರಾಗುತ್ತಿರಲಿಲ್ಲ. ಎಲ್ಲರೂ ಸದಾ ಖುಷಿಯಾಗಿರುತ್ತಿದ್ದರು.
ಫ್ರೆಂಡ್ಸ, ಕೆಲವರಿಗೆ ದೇವರಲ್ಲಿ ಕಲ್ಲು ಕಾಣಿಸಿದರೆ, ಇನ್ನೂ ಕೆಲವರಿಗೆ ಕಲ್ಲಲ್ಲಿ ದೇವರು ಕಾಣಿಸುತ್ತಾನೆ. ಅದೇ ರೀತಿ ಈ ಸೌಂದರ್ಯವೂ ಕೂಡ ಆಗಿದೆ. ಸೌಂದರ್ಯ ಅನ್ನುವುದು ಸುಂದರ ಸುಳ್ಳಾಗಿದೆ. ಸಾಧ್ಯವಾದರೆ ಮನಸ್ಸಿನ ಸೌಂದರ್ಯವನ್ನು ಅರಿಯುವ ಪ್ರಯತ್ನ ಮಾಡಿ, ಹ್ಯಾಪಿಯಾಗಿರಿ. All the Best and Thanks You...