1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? - How to Earn 1 Crore in 1 Year? - How to Earn Money Online in Kannada - How to Earn ₹1,00,00,000 Rupee Money in 1 Year? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? - How to Earn 1 Crore in 1 Year? - How to Earn Money Online in Kannada - How to Earn ₹1,00,00,000 Rupee Money in 1 Year? in Kannada

                                                                                ಬಿಜನೆಸ ಲೆಸನ 24  

                 ಹಾಯ್ ಗೆಳೆಯರೇ, ಇವತ್ತಿನ ಬಿಜನೆಸ ಲೆಸನನಲ್ಲಿ ನಾನು ಇನಸ್ಟಾಗ್ರಾಮಲ್ಲಿ ನನಗೆ ಬಂದ ಒಂದು ಕ್ವೇಷನನ್ನೇ‌ ಕವರ ಮಾಡುತ್ತಿರುವೆ. ಆ ಕ್ವೇಷನ ಏನಪ್ಪ ಅಂದ್ರೆ "Hi Sir, ನಾನು ಸುಜಾತಾ. ನಾನು ಧಾರವಾಡದಲ್ಲಿ BSc ಫೈನಲ ಇಯರ ಮಾಡ್ತಿರುವೆ. ನನಗೆ ನಿಮ್ಮಂತೆ ಬಿಜನೆಸ್ ಮಾಡಬೇಕು ಎಂಬ ಗೋಲಿದೆ. Sir please teach me a strategy or give a framework to earn 1 crore money in 1 year...". ಓಕೆ ಥ್ಯಾಂಕ್ಸ ಯು ಸುಜಾತಾ ಈ ಪ್ರಶ್ನೆಯನ್ನು ಕೇಳಿದಕ್ಕೆ‌.‌ ನಾನು ಸಹ ಧಾರವಾಡದ JSS ಕಾಲೇಜಿನಲ್ಲೇ ಪಿಯುಸಿ ಸೈನ್ಸ ಮಾಡಿರುವೆ. ಒಕೆ ಬನ್ನಿ ಗೆಳೆಯರೇ "ಒಂದು ವರ್ಷದಲ್ಲಿ ಹೇಗೆ ಒಂದು ಕೋಟಿ ಗಳಿಸೋದು?" ಅನ್ನೋದನ್ನ ಒಂದು ಡಿಟೇಲ್ಡ ಸ್ಟ್ರ್ಯಾಟರ್ಜಿ‌ ಮೂಲಕ ನೋಡೋಣಾ. ಲೆಟ್ಸ ಬಿಗಿನ್...

1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? How to Earn 1 Crore in 1 Year?

Step - 0 : First Develop the Business Mentality : ಮೊದಲು ಬಿಜನೆಸ ಮೆಂಟ್ಯಾಲಿಟಿಯನ್ನು ಬೆಳಸಿಕೊಳ್ಳಿ. 

                ಒಂದು ವರ್ಷದಲ್ಲಲ್ಲ ಈಡೀ ಲೈಫಲ್ಲೇ ಒಂದು ಕೋಟಿ ಗಳಿಸಲು ಸಾಧ್ಯವಿಲ್ಲ ಅಂತಾ ನೆಗೆಟಿವ ಥಿಂಕ್ ಮಾಡಬೇಡಿ. ಈಗಾಗಲೇ ಎಷ್ಟೋ ಜನ ಬಿಜನೆಸಮ್ಯಾನಗಳು ದಿನಕ್ಕೆ ಕೋಟಿಗಟ್ಟಲೇ ಸಂಪಾದಿಸುತ್ತಿದ್ದಾರೆ. ಹೀಗಿರುವಾಗ ನಾವು ಸ್ಟಾರ್ಟಿಂಗಲ್ಲಿ ಒಂದು ವರ್ಷಕ್ಕೆ ಒಂದು ಕೋಟಿ ಗಳಿಸಲು ಪ್ಲ್ಯಾನ ಮಾಡುವುದರಲ್ಲಿ ತಪ್ಪೇನಿಲ್ಲ. ಸೋ‌ ಮೊದಲು ಸ್ಟೂಪಿಡ್ ನೆಗೆಟಿವ ಥಾಟ್ಸಗಳನ್ನು ನಿಮ್ಮ ಮೈಂಡನಿಂದ ಡೀಲಿಟ ಮಾಡಿ. ನೀವು ರಿಚ್ ಆಗಬೇಕೆಂದರೆ ನೀವು ರಿಚ್ ಮೈಂಡಸೆಟ ಬೆಳೆಸಿಕೊಳ್ಳಲೇಬೇಕು. ಒಂದು ವರ್ಷದಲ್ಲಿ ಒಂದು ಕೋಟಿ‌ ಗಳಿಸುವ ಸಾಮರ್ಥ್ಯ ನಿಮಗೂ ಇದೆ ಎಂಬುದನ್ನು ನಂಬುವ ಧೈರ್ಯ ಮಾಡಿ. ನಂಬಲು ಭಯವಾಗುತ್ತೆ, ಆದರೆ ನಿಮ್ಮಲ್ಲಿ ಛಲ‌ ಹಾಗೂ ಟ್ಯಾಲೆಂಟ್‌ ಇದ್ದರೆ ಈ ಭಯ ತಾನಾಗಿಯೇ ದೂರಾಗುತ್ತೆ. ಶಾರ್ಟಕಟ್ಸಗಳಿಗೆ ಕೈಹಾಕಬೇಡಿ. ಸೀದಾ ಬಿಜನೆಸ ಪ್ಲ್ಯಾನ ಹುಡುಕಿ. ಬಿಜನೆಸ ಮೈಂಡಸೆಟ ಬೆಳೆಸಿಕೊಳ್ಳಿ. ಒಬ್ಬ ಬಿಜನೆಸಮ್ಯಾನ ತರಹ ಥಿಂಕ್ ಮಾಡಿ. ನಿಮ್ಮ ಸುತ್ತಮುತ್ತಲಿರುವ ಅಪಾರ್ಚುನಿಟಿಗಳನ್ನು ಕಣ್ತೆರೆದು ನೋಡಿ. ಅದರಿಂದ‌ ಹಣ ಗಳಿಸೋದು ಹೇಗೆ ಅಂತಾ ಯೋಚನೆ ಮಾಡಿ. ನಿಮ್ಮ ಮೈಂಡಿಗೆ ಕೆಲಸ ಕೊಡಿ. ಅದಕ್ಕೆ ‌ಕೇಳಿ "ನಾನು ಯಾವ ಕೆಲಸ ಮಾಡಿದ್ರೆ ನಾನು ಒಂದು ವರ್ಷದಲ್ಲಿ 1 ಕೋಟಿ ಹಣ ಗಳಿಸಬಹುದು?" ಅಂತಾ. ಈ ತರ ಮೊದಲು ಬಿಜನೆಸ ಮೆಂಟ್ಯಾಲಿಟಿ ಬೆಳೆಸಿಕೊಳ್ಳಿ, ಆನಂತರ ನೆಕ್ಟ್ಸ ಸ್ಟೆಪ್ ಫಾಲೋ ಮಾಡಿ. 

1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? How to Earn 1 Crore in 1 Year?

Step 1 : Find Your Expertise : ನೀವು ಯಾವುದರಲ್ಲಿ ಎಕ್ಸಪರ್ಟ ಆಗಿರುವಿರಿ ಎಂಬುದನ್ನು ಪತ್ತೆ ಹಚ್ಚಿ.‌

                 ಬಿಜನೆಸ ಮೆಂಟ್ಯಾಲಿಟಿಯನ್ನು ಬೆಳೆಸಿಕೊಂಡ ನಂತರ ನೀವು ಯಾವುದರಲ್ಲಿ ಎಕ್ಸಪರ್ಟ ಆಗಿರುವಿರಿ ಎಂಬುದನ್ನು ಪತ್ತೆ ಹಚ್ಚಿ. ಅಂದರೆ ನಿಮ್ಮ ಪ್ಯಾಷನ ಏನು? ನಿಮಗೆ ಯಾವ ಪ್ರೊಡಕ್ಟ ತಯಾರಿಸುವ ಸಾಮರ್ಥ್ಯವಿದೆ? ಅಥವಾ ಯಾವ ಸರ್ವಿಸ ಕೊಡುವ ಸಾಮರ್ಥ್ಯ ನಿಮಗಿದೆ ಎಂಬುದನ್ನು ಪತ್ತೆ ಹಚ್ಚಿ. ನಿಮ್ಮತ್ರ ಸೆಲ್ ಮಾಡಲು ಏನಿದೆ? ಅಥವಾ ನೀವು ಏನನ್ನು ತಯಾರಿಸಿ ಸೆಲ್ ಮಾಡಬಹುದು ಎಂದು ಯೋಚಿಸಿ. ನೀವು ಹೇಗೆ ಜನರ ಸಮಸ್ಯೆಗಳನ್ನು ಸಾಲ್ವ ಮಾಡಬಹುದು ಎಂಬುದನ್ನು ಯೋಚಿಸಿ. ಭಾರತ 130+ ಕೋಟಿ ಜನರನ್ನು ಹೊಂದಿರುವ ದೊಡ್ಡ ದೇಶವಾಗಿದೆ. ಇಲ್ಲಿ ಮನುಷ್ಯ ‌ಹುಟ್ಟಿದಾಗಿನಿಂದ ಹಿಡಿದು ಸತ್ತು ಸಮಾಧಿ ಸೇರುವ ತನಕವೂ ಬಿಜನೆಸ ಅಪಾರ್ಚುನಿಟಿಗಳು ಈಜಿಯಾಗಿ ಸಿಗುತ್ತವೆ. ಹೆಲ್ತ, ಎಜುಕೇಶನ್, ಎಂಟರ್ಟೇನ್ಮೆಂಟ್, ಟ್ರಾನ್ಸಪೊರ್ಟೆಷನ, ಕಮ್ಯುನಿಕೇಷನ್ ಸೇರಿದಂತೆ ಎಲ್ಲದರಲ್ಲಿ ಹಣ ಗಳಿಸಬಹುದು. ಹೆಜ್ಜೆ ಇಟ್ಟ ಕಡೆಗೆಲ್ಲ ಅಪಾರ್ಚುನಿಟಿಗಳಿವೆ. ನಿಮಗೆ ಏನು ಬರುತ್ತೆ, ನೀವು ಯಾವುದರಲ್ಲಿ ಎಕ್ಸಪರ್ಟ ಆಗಿರುವಿರಿ? ಎಂಬುದನ್ನು ಪತ್ತೆ ಹಚ್ಚಿ. ನಿಮ್ಮ ಎಕ್ಸಪರ್ಟೀಜ ಏನು ಬೇಕಾದರೂ ಆಗಿರಬಹುದು. ರೈಟಿಂಗ, ಸೇಲ್ಲಿಂಗ, ಮ್ಯಾನೆಜ್‌ಮೆಂಟ್‌, ವೆಬ್ ಡೆವಲಪ್ಮೆಂಟ್, ಮೊಬೈಲ್ ಆಪ್ ಮೇಕಿಂಗ, ಪೇಂಟಿಂಗ್, ಫೋಟೋಗ್ರಫಿ, ಗ್ರಾಫಿಕ್ ಡಿಜೈನ, ಮಾರ್ಕೆಟಿಂಗ್ ಇತ್ಯಾದಿ. ನಿಮಗೆ ಯಾವುದೇ ಸ್ಕೀಲ ಬಂದರೂ ಸಹ ನೀವು ಅದರಿಂದ ಬೇಕಾದಷ್ಟು ಹಣ ಗಳಿಸಬಹುದು. 

                  ಒಂದು ವೇಳೆ ನೀವು ಯಾವುದರಲ್ಲಿಯೂ ಎಕ್ಸಪರ್ಟ ಆಗಿರದಿದ್ದರೆ ಮಾರ್ಕೆಟನಲ್ಲಿ ಯಾವುದಕ್ಕೆ ಡಿಮ್ಯಾಂಡ ಇದೆಯೋ ಅದನ್ನು ಕಲಿಯಿರಿ, ಅದನ್ನೇ ಬಿಜನೆಸ ಮಾಡಿಕೊಂಡು ಹಣ ಗಳಿಸಿ. 

1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? How to Earn 1 Crore in 1 Year?

Step -2 : Prepare Your Service or Product : ನಿಮ್ಮ ಸರ್ವಿಸ ಅಥವಾ ಪ್ರೊಡಕ್ಟನ್ನು ತಯಾರು ಮಾಡಿ. 

                 ನೀವು ಯಾವುದರಲ್ಲಿ ಎಕ್ಸಪರ್ಟ ಆಗಿರುವಿರಿ? ನಿಮಗೆ ಏನು ಬರುತ್ತೆ? ಅಂತಾ ಪತ್ತೆ ಹಚ್ಚಿದ ನಂತರ 3 ತಿಂಗಳು ಅದರ ಮೇಲೆ ಸರಿಯಾಗಿ ಫೋಕಸ ಮಾಡಿ. ನಿಮಗೆ ‌ಯಾವುದಾದರೂ‌ ಸ್ಕೀಲ ಬರುತ್ತಿದ್ದರೆ ಅದನ್ನೇ ಸರ್ವಿಸ ಆಗಿ ಕನವರ್ಟ ಮಾಡಿ ಗಳಿಸಬಹುದು. ಫಾರ್ ಎಕ್ಸಾಮಪಲ್ ನಿಮಗೆ ವೆಬ್ ಡೆವಲಪ್ಮೆಂಟ್ ಬರುತ್ತಿದ್ದರೆ 3 ತಿಂಗಳು ಅದನ್ನೇ ಸರಿಯಾಗಿ ಪ್ರ್ಯಾಕ್ಟೀಸ್ ಮಾಡಿ, ನೀವು ಬೇರೆಯವರಿಗೆ ಸರ್ವಿಸ ಕೊಟ್ಟು ಹಣ ಗಳಿಸುವಷ್ಟು ಪರ್ಫೆಕ್ಟ ಆಗಿ. ನಿಮಗೆ ಪ್ರೋಡಕ್ಟಗಳನ್ನು ತಯಾರಿಸುವ ಸ್ಕೀಲ್ ಇದ್ದರೆ 3 ತಿಂಗಳಲ್ಲಿ ನಿಮ್ಮ ಪ್ರೊಡಕ್ಟನ್ನು ತಯಾರು ಮಾಡಿ. 3 ತಿಂಗಳು ಬೇರೆನು ಮಾಡಬೇಡಿ, ಬರೀ ನಿಮ್ಮ ಸರ್ವಿಸಗೆ ಬೇಕಾದ ಪ್ರಿಪರೇಷನ ಮಾಡಿ, ಪ್ರೊಡಕ್ಟನ್ನು ತಯಾರಿಸಿ ಅದನ್ನೇ ಬಿಜನೆಸ ಮಾಡಿಕೊಳ್ಳಲು ಬಿಜನೆಸ ಸ್ಟ್ಯಾಟರ್ಜಿ ರೆಡಿ ಮಾಡಿ.

1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? How to Earn 1 Crore in 1 Year?

Step 3 : Set a Target and Sell : ಟಾರ್ಗೆಟ್ ಸೆಟ್ ಮಾಡಿ ಮತ್ತು ಸೆಲ್ ಮಾಡಿ

                          ನಿಮ್ಮ ಪ್ರೊಡಕ್ಟ ಅಥವಾ ಸರ್ವಿಸ ರೆಡಿಯಾದ ನಂತರ ನೀವು ಒಂದು ಕರೆಕ್ಟ ರೇಟ ಫಿಕ್ಸ ಮಾಡಿ ಮತ್ತು ಮಾರಲು ಸ್ಟಾರ್ಟ ಮಾಡಿ. ನೀವು ಒಂದು ಕೋಟಿ ಹಣ ಗಳಿಸಬೇಕೆಂದರೆ ಎಷ್ಟು ಪ್ರೋಡಕ್ಟಗಳನ್ನು ಮಾರಬೇಕಾಗುತ್ತದೆ ಅಥವಾ ಎಷ್ಟು ಜನರಿಗೆ ಸರ್ವಿಸನ್ನು ಕೊಡಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ. ಅದರ ಆಧಾರದ ಮೇಲೆ ಸೇಲ್ಸ ಟಾರ್ಗೆಟ ಸೆಟ ಮಾಡಿ. ಸೇಲ್ಸ ಟಾರ್ಗೆಟಗೆ ತಕ್ಕಂತೆ ಮಾರ್ಕೆಟಿಂಗ್ ಮಾಡಿ, ಹಣ ಗಳಿಸಿ ಟಾರ್ಗೆಟ್ ರೀಚ ಆಗಿ. ಉದಾಹರಣೆಗೆ ; 

1) 250 × 40,000 = 1 Cr

                          ಒಂದು ವೇಳೆ ನಿಮ್ಮ ಪ್ರೊಡಕ್ಟನ ಬೆಲೆ 250 ರೂ ಆಗಿದ್ದರೆ ನೀವು 1 ಕೋಟಿ ಹಣವನ್ನು ಗಳಿಸಲು 40,000 ಪ್ರೋಡಕ್ಟಗಳನ್ನು ಮಾರಬೇಕಾಗುತ್ತದೆ. ನಿಮ್ಮ ಸರ್ವಿಸ ಚಾರ್ಜ್ 250 ಆಗಿದ್ದರೆ 40,000 ಜನರಿಗೆ ಸರ್ವಿಸ ಕೊಡಬೇಕಾಗುತ್ತದೆ. ನೀವು 250 ರೂಗೆ ಒಂದು ಬುಕ್ ಬರೆದು ಮಾರಾಟ ಮಾಡಬಹುದು, ಇಲ್ಲವೇ ಬೈಕ ವಾಶಿಂಗ ಸರ್ವಿಸ ಕೊಡಬಹುದು. ಇದು ಜಸ್ಟ ಎಕ್ಸಾಮಪಲ ಅಷ್ಟೇ. ನೀವು 250 ರೂಗೆ ನಿಮಗೆ ಬರುವ ಯಾವ ಸರ್ವಿಸ ಬೇಕಾದರೂ ಕೊಡಬಹುದು, ಯಾವ ಪ್ರೋಡಕ್ಟ ಬೇಕಾದರೂ ಮಾಡಬಹುದು. 

2) 500 × 20,000 = 1 Cr 

                   ಸಪೋಜ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸನ ಬೆಲೆ 500 ರೂ ಆಗಿದ್ದರೆ ನೀವು 1 ಕೋಟಿ ಗಳಿಸಲು 20,000 ಪ್ರೋಡಕ್ಟಗಳನ್ನು ಮಾರಬೇಕಾಗುತ್ತದೆ ಇಲ್ಲವೇ 20,000 ಜನರಿಗೆ ಸರ್ವಿಸ ಕೊಡಬೇಕಾಗುತ್ತದೆ. ನೀವು 500 ರೂ ತೆಗೆದುಕೊಂಡು 20,000 ಜನರಿಗೆ ಒನ ಡೇ ವರ್ಕಶಾಪ ಕಂಡಕ್ಟ ಮಾಡಿ ಇಲ್ಲವೇ ಟ್ರೇನಿಂಗ ಕೊಟ್ಟು 1 ಕೋಟಿ ಗಳಿಸಬಹುದು. 

3) 2000 × 5,000 = 1 Cr 

               ನೀವು ಒಂದು ಸಣ್ಣ ಯುಜಫುಲ್ ವಿಡಿಯೋ ಕೋರ್ಸ ಕ್ರಿಯೆಟ ಮಾಡಿ ಅದನ್ನು 2000 ರೂನಂತೆ 5000 ಜನರಿಗೆ ಮಾರಿ 1 ಕೋಟಿ ಗಳಿಸಬಹುದು. 

4) 5000 × 2000 = 1 Cr

            ನೀವು ಒಂದು ದೊಡ್ಡ ಕೋರ್ಸ ರೆಡಿ ಮಾಡಿ ಇಲ್ಲವೇ ದೊಡ್ಡ ಟ್ರೇನಿಂಗ ಈವೆಂಟ ಆರ್ಗನೈಜ ಮಾಡಿ ಅದನ್ನು 5000 ರೂನಂತೆ 2000 ಜನರಿಗೆ ಮಾರಿದರೆ ನಿಮಗೆ 1 ಕೋಟಿ ಟರ್ನೋವರ ಸಿಗುತ್ತದೆ.‌

5) 10,000 × 1000 = 1 Cr

                ನೀವು 10000 ರೂಗೆ ಮಾರಬಹುದಾದ ಯಾವುದಾದರೂ ಒಂದು ವ್ಯಾಲುವೇಬಲ ಪ್ರೋಡಕ್ಟನ್ನು ತಯಾರಿಸಿ ಅದನ್ನು 1000 ಜನರಿಗೆ ಮಾರಿ 1 ಕೋಟಿ ಗಳಿಸಬಹುದು. 

6) 1 L × 100 = 1 Cr

                   ನೀವು 100 ಜನರಿಂದ 1 ಲಕ್ಷ ಹಣವನ್ನು ಕಿತ್ತುಕೊಂಡು ಒಂದು ಕೋಟಿ ಗಳಿಸಬಹುದು. ಬಟ ಇದು ಅಂದುಕೊಂಡಷ್ಟು ಈಜಿಯಲ್ಲ. ನೀವು ಒಂದು ಲಕ್ಷಕ್ಕೆ ಒನ ಇಯರ್ ಆನಲೈನ ಕೋರ್ಸ ಮಾಡಬಹುದು, ಸೆಲೆಬ್ರಿಟಿಗಳಿಗೆ ಒಂದು ವರ್ಷದ ತನಕ ಪರ್ಸನಲ್ ಫಿಟನೆಸ ಟ್ರೇನಿಂಗ, ಯೋಗಾ ಟ್ರೇನಿಂಗ, ಡೈಟ ಟ್ರೇನಿಂಗ ಕೊಡಬಹುದು. ಇಲ್ಲವೇ 1 ಲಕ್ಷದ ಪ್ರಿವೆಡ್ಡಿಂಗ ಫೋಟೋಶೂಟ ವಿಡಿಯೋಶೂಟ ಪ್ಯಾಕೆಜ ಸೆಲ್ ಮಾಡಬಹುದು. ನೀವು ಸ್ವಲ್ಪ ಥಿಂಕ ಮಾಡಿ, ನಿಮಗೂ ಹೊಸ ಐಡಿಯಾಗಳು ಹೊಳೆಯುತ್ತವೆ. 

7) 5 L × 20 = 1 Cr 

                 ನೀವು ಬರೀ 20 ಜನರಿಂದ ತಲಾ 5 ಲಕ್ಷ ಕಿತ್ತುಕೊಂಡರೆ 1 ಕೋಟಿ ಗಳಿಸಬಹುದು. ನೀವು 5 ಲಕ್ಷ ಚಾರ್ಜ್ ಮಾಡಿ ಬೇರೆಯವರ ಬಿಜನೆಸ ಸೆಟಅಪ ಮಾಡಿ ಕೊಡಬಹುದು, ಫುಲ್ ವೆಡ್ಡಿಂಗ್ ಫಿಲ್ಮಮೇಕಿಂಗ ಪ್ಯಾಕೇಜ ಸೆಲ್ ಮಾಡಬಹುದು. 

8) 20 L × 5 = 1 Cr 

            ನೀವು 20 ಲಕ್ಷ ಚಾರ್ಜ ಮಾಡಿ 5 ದೊಡ್ಡ ಕಂಪನಿಗಳಿಗೆ ಆ್ಯಡ ಫಿಲ್ಮ ಮಾಡಿಕೊಟ್ಟು 1 ಕೋಟಿ ಹಣ ಗಳಿಸಬಹುದು. 

9) 1 Cr × 1 = 1 Cr 

                       ಒಂದು ವೇಳೆ ನೀವು ಒಂದು ವರ್ಷ ಸಿಕ್ಕಾಪಟ್ಟೆ ಎಫರ್ಟ ಹಾಕಿ ಹಾರ್ಡ ವರ್ಕ‌ ಮಾಡಿ ಸೋಸಿಯಲ ಮೀಡಿಯಾ ಸೆಲೆಬ್ರಿಟಿ ಬ್ರ್ಯಾಂಡ ಆದರೆ ನೀವು ಬೇರೆ ಕಂಪನಿಗಳ ಬ್ರ್ಯಾಂಡಗಳನ್ನು 1 ವರ್ಷದ ತನಕ ಪ್ರೋಮೋಟ ಮಾಡುವುದಕ್ಕೆ 1 ಕೋಟಿ ಚಾರ್ಜ್ ಮಾಡಬಹುದು. ಈಗಾಗಲೇ ಬಹಳಷ್ಟು ಜನ ಇದಕ್ಕಿಂತಲೂ ಹೆಚ್ಚಿಗೆ ಚಾರ್ಜ್ ಮಾಡುತ್ತಿದ್ದಾರೆ. 

1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? How to Earn 1 Crore in 1 Year?

                                 ಗೆಳೆಯರೇ, ಈ ರೀತಿ ನೀವು ಸೇಲ್ಸ ಟಾರ್ಗೆಟ್ ಸೆಟ ಮಾಡಿ ಸರಿಯಾಗಿ ಮಾರ್ಕೆಟಿಂಗ್ ‌ಮಾಡಿದರೆ ನೀವು ಸಹ ಒಂದು ವರ್ಷದಲ್ಲಿ ಒಂದು ಕೋಟಿ ಹಣವನ್ನು ಗಳಿಸಬಹುದು. ಇದು ಕೇಳುವುದಕ್ಕೂ ಈಜಿಯಲ್ಲ, ಮಾಡುವುದಕ್ಕೂ ಈಜಿಯಲ್ಲ. ಆದರೆ ಅಸಾಧ್ಯವೇನಲ್ಲ, ಸಾಧ್ಯವಿದೆ. ಈಗ ಸೋಸಿಯಲ್ ಮೀಡಿಯಾ  ಟ್ರೆಂಡ್ ನಡಿತಾಯಿದೆ. ಇದನ್ನು ಬಳಸಿಕೊಂಡು ಕೋಟ್ಯಾಂತರ ಜನರ ತನಕ ತಲುಪಿ ನೀವು ಸಾಕಷ್ಟು ಹಣ ಗಳಿಸಬಹುದು. ನೀವು ಟ್ರಾಯ ಮಾಡಿ, ಒಂದು ವರ್ಷ ಈ ಸ್ಟ್ರ್ಯಾಟರ್ಜಿ ಯುಜ ಮಾಡಿಕೊಂಡು ಒಂದು ಕೋಟಿ ಗಳಿಸಲು ಟ್ರಾಯ ಮಾಡಿ. ಟ್ರಾಯ ಮಾಡುವುದರಲ್ಲಿ ತಪ್ಪೇನಿಲ್ಲ. ಕೋಟಿ ಗಳಿಸಲು ಕೋಟ್ಯಾಂತರ ದಾರಿಗಳಿವೆ. ನಿಮಗೆ ಇಷ್ಟವಾದ ದಾರಿಯಲ್ಲಿ ಗಳಿಸಿ. All the best and Thanks You...

1 ವರ್ಷದಲ್ಲಿ 1 ಕೋಟಿ ‌ಗಳಿಸುವುದು ಹೇಗೆ? How to Earn 1 Crore in 1 Year?
Blogger ನಿಂದ ಸಾಮರ್ಥ್ಯಹೊಂದಿದೆ.