ಹಾಯ್ ಗೆಳೆಯರೇ, ರೀಡಿಂಗಲ್ಲಿ ಇಂಟರೆಸ್ಟನ್ನು ಕ್ರಿಯೆಟ ಮಾಡುವುದೇಗೆ? ಎಂಬ ಟಾಪಿಕ ರಿಲೆಟೆಡ್ ಬಹಳಷ್ಟು ರಿಕ್ವೇಸ್ಟಗಳು ಬಂದಿವೆ. ಸೋ ಇವತ್ತಿನ ಎಪಿಸೋಡನಲ್ಲಿ ರೀಡಿಂಗಲ್ಲಿ ಇಂಟರೆಸ್ಟನ್ನು ಬೆಳೆಸಿಕೊಳ್ಳುವುದು ಹೇಗೆ? ಅಂತಾ ನೋಡೊಣಾ. ಲೆಟ್ಸ ಬಿಗೀನ...
ನಾನು ಕಾಲೇಜಿನಲ್ಲಿರುವಾಗ ಒಂದು ನ್ಯೂಜಪೇಪರ ಆರ್ಟಿಕಲನಲ್ಲಿ "ಅದೇನು ರೋಗವೋ ಇಲ್ಲ ನಮ ಟೀಚರ್ ಶಾಪವೋ ಗೊತ್ತಿಲ್ಲ, ಓದಲು ಕುಂತ್ರೆ ಬಹಳಷ್ಟು ಜನರಿಗೆ ನಿದ್ದೆ ತಂತಾನೇ ಬರುತ್ತದೆ. ಅವರಲ್ಲಿ ನಾನು ಒಬ್ಬ..." ಅಂತಾ ಬರೆದು ನಮ್ಮ ಟೀಚರ ಕಡೆಯಿಂದ ಬೈಯ್ಯಿಸಿಕೊಂಡಿದ್ದೆ. ಆ ಟೀಚರ ಹೇಸ್ರೆಳಲ್ಲ. ಏಕೆಂದರೆ ಇತ್ತೀಚಿಗೆ ಲಾಕಡೌನನಲ್ಲಿ ಟೈಮ ಸಿಕ್ಕಿರುವುದರಿಂದ ಎಲ್ಲ ಟೀಚರಗಳು ಕ್ವಾಂಟ್ಯಾಕ್ಟನಲ್ಲಿ ಬಂದಿದ್ದಾರೆ. ಮೇಡಂ ಈ ವಿಡಿಯೋ ನೋಡಿದರೆ ಮತ್ತೆ ಫೋನ ಮಾಡಿ ಮಂಗಳಾರುತಿ ಮಾಡ್ತಾರೆ. ಅದಕ್ಕೆ ಹೇಸ್ರೆಳಲ್ಲ. ಬಟ್ ರೀಡಿಂಗ್ ಅಂತು ಬೋರಿಂಗ ಪ್ರೊಸೆಸ್ ಆಗಿದೆ. ಅದರಲ್ಲಿ ಇಂಟರೆಸ್ಟ ಕ್ರಿಯೆಟ ಆಗದಿದ್ದರೆ ಓದೋವಾಗ ಖಂಡಿತ ನಿದ್ದೆ ಬಂದೇ ಬರುತ್ತೆ. ಹೇಗೆ ಫಿಜಿಕಲ ಎಕ್ಸರಸೈಜ ಮಾಡಲು ಹೋದಾಗ ನಮ್ಮ ಬಾಡಿ ಸಪೋರ್ಟ್ ಮಾಡಲ್ಲವೋ ಅದೇ ರೀತಿ ಓದಲು ಕುಂತಾಗ ನಮ್ಮ ಮೈಂಡ ಈಜಿಯಾಗಿ ಸಪೋರ್ಟ್ ಮಾಡಲ್ಲ. ಏಕೆಂದರೆ ರೀಡಿಂಗ್ ಮೆಂಟಲ ಎಕ್ಸರಸೈಜ ಆಗಿದೆ. ಸೋ ನಾವು ರೀಡಿಂಗ್ ಹ್ಯಾಬಿಟನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇಂಟರೆಸ್ಟನ್ನು ಕ್ರಿಯೆಟ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಕೆಲವೊಂದಿಷ್ಟು ಟಿಪ್ಸಗಳು ಇಂತಿವೆ :
1) ಯಾಕೆ ಓದಬೇಕು? Why to Read? ಎಂಬುದಕ್ಕೆ ಒಂದು ಸ್ಟ್ರಾಂಗ್ ರಿಜನ ಹುಡುಕಿ. ನೀವು ಯಾಕೆ ಓದಬೇಕು? ಎಂಬುದು ನಿಮಗೆ ಕ್ಲಿಯರಾದಾಗಲೇ ನಿಮಗೆ ಓದಲು ಇಂಟರೆಸ್ಟ ಬರುತ್ತದೆ. ನೀವು ನಾಲೇಜಗಾಗಿ ಓದ್ತಿರಾ? ನೌಕರಿಗಾಗಿ ಓದ್ತಿರಾ? ಬಿಜನೆಸಗಾಗಿ ಓದ್ತಿರಾ? ಅಥವಾ ಸುಮ್ಮನೆ ಎಂಟರ್ಟೇನ್ಮೆಂಟ ಎಂಜಾಯಮೆಂಟ ಟೈಮಪಾಸಗಾಗಿ ಓದ್ತಿರಾ? ಎಂಬುದು ನಿಮಗೆ ಕ್ಲಿಯರಾದರೆ ನಿಮಗೆ ರೀಡಿಂಗಲ್ಲಿ ಆಟೋಮ್ಯಾಟಿಕ್ಕಾಗಿ ಇಂಟರೆಸ್ಟ ಕ್ರಿಯೆಟ ಆಗುತ್ತದೆ. ನಿಮ್ಮ Why ಕ್ಲಿಯರಾದಾಗ How ತಂತಾನೇ ಕ್ಲಿಯರಾಗುತ್ತದೆ.
2) ರೀಡಿಂಗ್ ಹ್ಯಾಬಿಟ ಆಗಿದೆ. ಅದನ್ನು ನಿಧಾನಕ್ಕೆ ಕಲ್ಟಿವೇಟ ಮಾಡಿ. ಮೊದಲ ವಾರ ದಿನಕ್ಕೆ ಬರೀ 5 ಪೇಜ ಓದಿ, ಎರಡನೇ ವಾರದಿಂದ ದಿನಕ್ಕೆ 10 ಪೇಜ ಓದಲು ಸ್ಟಾರ್ಟ ಮಾಡಿ. ಈಗ ನಿಮಗೆ ಓದಲು ಇಂಟರೆಸ್ಟ ಬಂದರೆ ಮೂರನೇ ವಾರ ದಿನಕ್ಕೆ 15 ಪೇಜ ಓದಲು ಸ್ಟಾರ್ಟ ಮಾಡಿ. ನಿಮ್ಮ ಸಾಧನೆಯನ್ನು ನಿಮಗೆ ನೀವೇ ಅಪ್ರಿಸಿಯೆಟ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಮೂರು ವಾರಗಳಲ್ಲಿ ಅಂದರೆ 21 ದಿನಗಳಲ್ಲಿ ನಿಮ್ಮಲ್ಲಿ ರೀಡಿಂಗ ಹ್ಯಾಬಿಟ ಕಲ್ಟಿವೇಟ ಆಗಿರುತ್ತದೆ. ಈಗ ಎಷ್ಟು ಬೇಕೋ ಅಷ್ಟು ಪೇಜ ಓದಿ.
3) ಓದುವಾಗ ಡಾರ್ಕ ರೂಮಲ್ಲಿ ಕೂತು ಓದಬೇಡಿ. ಡಬ್ಬು ಮಲಗಿಕೊಂಡು ಓದಬೇಡಿ. ಡಬ್ಬು ಮಲಗಿಕೊಂಡು ಓದಿ ಎಕ್ಸಾಮಲ್ಲಿ ಡುಮಕಿ ಹೊಡೆದ ಎಷ್ಟೋ ಜನರನ್ನು ನಾನು ನೋಡಿರುವೆ. ಸೋ ಮಲಗಿಕೊಂಡು ಓದಬೇಡಿ. ಕಮ್ಮಿ ಓದಿದರೂ ಪರವಾಗಿಲ್ಲ ಸರಿಯಾಗಿ ಕೂತು ಓದಿ. ಫ್ರೆಶ್ ಏರ್ ನ್ಯಾಚುರಲ್ ಲೈಟ ಬರುವ ರೂಮಲ್ಲಿ ಕೂತು ಓದಿ. ಇಲ್ಲವೇ ಮನೆ ಟೆರೆಸ ಮೇಲೆ, ಇಲ್ಲ ನಿಮ್ಮ ತೋಟದಲ್ಲಿರುವ ಮರದ ಕೆಳಗೆ ಕೂತು ಆರಾಮಾಗಿ ಎಂಜಾಯ ಮಾಡುತ್ತಾ ಓದಿ.
ಓಕೆ ಗೆಳೆಯರೇ, ಈ ರೀತಿ ನೀವು ರೀಡಿಂಗಲ್ಲಿ ಇಂಟರೆಸ್ಟನ್ನು ಕ್ರಿಯೆಟ ಮಾಡಿಕೊಳ್ಳಬಹುದು. ನಿಮಗೆ ಏನ ಇಷ್ಟಾನೋ ಅವುಗಳನ್ನೆಲ್ಲ ಓದಿ, ಎಷ್ಟು ಸಾಧ್ಯಾನೋ ಅಷ್ಟು ನಾಲೇಜನ್ನು ಗೇನ ಮಾಡಿ. All the Best and Thanks You...