ದೈಹಿಕ ಆಕರ್ಷಣೆಯಿಂದ ಹೊರ ಬರುವುದು ಹೇಗೆ? - How to Overcome Physical Attraction? Girls Attraction Solution In Kannada
ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡಗೆ ಸೆಲೆಕ್ಟಾದ ಪ್ರಶ್ನೆ ಇಂತಿದೆ. "ಸರ್ ನಾನು ಪದೇಪದೇ ಹುಡುಗಿಯರ ಕಡೆಗೆ ಅಟ್ರ್ಯಾಕ್ಟ ಆಗುತ್ತಿರುವೆ, ಯಾರನ್ನು ನೋಡಿದರೂ ಡಿಸ್ಟರ್ಬ ಆಗುತ್ತಿರುವೆ. ನಿಮ್ಮ ವಿಡಿಯೋಗಳನ್ನು ನೋಡಿದ ನಂತರ ನಾನು ಚೆನ್ನಾಗಿ ಸ್ಟಡಿ ಮಾಡಿ ಕ್ಲಾಸ ಟಾಪರ ಆಗಿರುವೆ. ಮುಂದೆ ಪೋಲಿಸ್ ಡಿಪಾರ್ಟಮೆಂಟ ಸೇರುವ ಟಾರ್ಗೆಟ್ ಸೆಟ್ ಮಾಡಿರುವೆ. ಬಟ್ ಈಗ ಗರ್ಲ್ಸ ಅಟ್ರ್ಯಾಕ್ಷನನಿಂದ ದೂರ ಉಳಿಯಲು ಟಿಪ್ಸ ಕೊಡಿ. ನನಗೆ ಫುಲ್ ಫೋಕಸ ಬರಬೇಕು. ಇದಕ್ಕೆ ಸೋಲುಷನ ಕೊಡಿ...". ಈ ಪ್ರಶ್ನೆಯನ್ನು ಪುಣೆಯಿಂದ ಆಶೀಶ ಎಂಬುವವರು ಕೇಳಿದ್ದಾರೆ. ಥ್ಯಾಂಕ್ಸ ಯು ಆಶೀಶ ಈ ಪ್ರಶ್ನೆಯನ್ನು ಕೇಳಿದ್ದಕ್ಕೆ & All the best for your goal. ಓಕೆ ಬನ್ನಿ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಈ ಫಿಜಿಕಲ್ ಅಟ್ರ್ಯಾಕ್ಷನನಿಂದ ಹೊರ ಬರುವುದು ಹೇಗೆ ಅಂತಾ ನೋಡೋಣಾ. ಲೆಟ್ಸ ಬಿಗಿನ್...
ಟೀನೇಜಲ್ಲಿ ಹಾರ್ಮೋನುಗಳ ಹಾರಾಟದಿಂದ ಫಿಜಿಕಲ ಅಟ್ರ್ಯಾಕ್ಷನ ಆಗುವುದು ಕಾಮನಾಗಿದೆ. ಇದಕ್ಕೆ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಇದು ಲಿಮಿಟ ಮೀರಿ ಹೋದರೆ ನಿಮ್ಮ ಲೈಫಿನ ಕರಿಯರ ಬಿಲ್ಡಿಂಗ್ ಟೈಮನ್ನು, ಫೋಕಸ್ಸನ್ನು ಹಾಳು ಮಾಡಿ ನಿಮ್ಮನ್ನು ಡೈವರ್ಟ ಮಾಡುತ್ತದೆ. ಯೌವ್ವನದಲ್ಲಿರುವಾಗ ಎಲ್ಲರೂ ತಮ್ಮ ಅಪೋಜಿಟ ಜೆಂಡರ ಕಡೆಗೆ ಅಟ್ರ್ಯಾಕ್ಟ ಆಗೇ ಆಗುತ್ತಾರೆ. ಅದರಲ್ಲಿ ಅವರ ತಪ್ಪೇನು ಇರಲ್ಲ. ಅದು ಅವರ ಪ್ರಬಲ ವಯಸ್ಸು ಹಾಗೂ ದುರ್ಬಲ ಮನಸ್ಸಿನ ತಪ್ಪಾಗಿರುತ್ತದೆ. ಯೌವ್ವನದಲ್ಲಿ ಹೆಣ್ಣು ಗಂಡಿನ ದೊಡ್ಡ ಡಿಸ್ಟರ್ಬನ್ಸಾಗುತ್ತಾಳೆ. ಗಂಡು ಹೆಣ್ಣಿಗೆ ದೊಡ್ಡ ಡಿಸ್ಟರ್ಬನ್ಸಾಗುತ್ತಾನೆ. ಈ ಡಿಸ್ಟರ್ಬನ್ಸನ್ನು ಡೆಸ್ಟಾರ್ಯ ಮಾಡಿದವರು ತಮ್ಮ ಲೈಫಲ್ಲಿ ಬೇಗನೆ ಸೆಟ್ಲಾಗುತ್ತಾರೆ. ಒಂದು ಹ್ಯಾಪಿ & ಸಕ್ಸೆಸಫುಲ್ ಲೈಫನ್ನು ಎಂಜಾಯ ಮಾಡುತ್ತಾರೆ. ಸೋ ಫಿಜಿಕಲ ಅಟ್ರ್ಯಾಕ್ಷನನಿಂದ ಹೊರ ಬರುವುದು ಅವಶ್ಯಕವಾಗಿದೆ. ಫಿಜಿಕಲ ಅಟ್ರ್ಯಾಕ್ಷನನಿಂದ ಹೊರ ಬರಲು ಕೆಲವೊಂದಿಷ್ಟು ಟಿಪ್ಸಗಳು ಇಂತಿವೆ ;
1) ಮಾನಸಿಕವಾಗಿ, ದೈಹಿಕವಾಗಿ ಪರಿಶುದ್ಧವಾಗಿರಿ. ಅಂದರೆ ಮೆಂಟಲಿ ಹಾಗೂ ಫಿಜಿಕಲಿ ಕ್ಲಿನಾಗಿರಿ. ಲಸ್ಟಫುಲ ಥಾಟ್ಸಗಳಿಗೆ, ಡರ್ಟಿ ಥಾಟ್ಸಗಳಿಗೆ ಜಾಗ ಕೊಡಬೇಡಿ. ಬ್ಯಾಡ ಹ್ಯಾಬಿಟ್ಸಗಳಿಗೆ ಬಾಯ್ ಹೇಳಿ. ನಿಮ್ಮ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಿ. ಒಳ್ಳೆಯದನ್ನು ನೋಡಿ, ಒಳ್ಳೆಯದನ್ನು ಕೇಳಿ, ಒಳ್ಳೆಯದನ್ನು ಯೋಚಿಸಿ, ಒಳ್ಳೆಯದನ್ನು ತಿನ್ನಿ, ಒಳ್ಳೆಯವರ ಸ್ನೇಹ ಮಾಡಿ. ಆಗ ನಿಮ್ಮ ಮೈಂಡಲ್ಲಿ ಕೆಟ್ಟ ವಿಚಾರಗಳು ಹುಟ್ಟುವುದಿಲ್ಲ. ಡರ್ಟಿ ಜಾಗದಲ್ಲಿ ಸೊಳ್ಳೆಗಳು ಬೆಳೆಯುತ್ತವೆ. ಅದೇ ರೀತಿ ಡರ್ಟಿ ಮೈಂಡಲ್ಲಿ ಡರ್ಟಿ ವಿಚಾರಗಳು ಬರುತ್ತವೆ. ನೀವು ಮೆಂಟಲಿ ಕ್ಲೀನಾಗಿರಿ. ಕೆಟ್ಟ ಆಲೋಚನೆಗಳು ನಿಮ್ಮ ಸಮೀಪಕ್ಕೆ ಸುಳಿಯುವುದಿಲ್ಲ. ನಿಮ್ಮ ಫೋಕಸ ತಾನಾಗಿಯೇ ಶಾರ್ಪಾಗುತ್ತದೆ.
2) ನಮ್ಮ ದೇಹ ಒಂದು ಕೆಮಿಕಲ್ ಫ್ಯಾಕ್ಟರಿಯಾಗಿದೆ. ಇಲ್ಲಿ ಹಾರ್ಮೋನುಗಳ ವೈಪರೀತ್ಯದಿಂದ ಪ್ರೀತಿ, ಪ್ರೇಮ, ನೋವು, ನಗು, ಆಯಾಸ, ಆಲಸ್ಯ ಇತ್ಯಾದಿಗಳಾಗುತ್ತವೆ. ಸೋ ಈ ಹಾರ್ಮೋನಗಳನ್ನು ಬ್ಯಾಲನ್ಸ ಮಾಡಿದರೆ ನಾವು ಹ್ಯಾಪಿಯಾಗಿರುತ್ತೇವೆ, ಹೆಲ್ದಿಯಾಗಿರುತ್ತೇವೆ. ಈ ಹಾರ್ಮೋನುಗಳ ಹಾರಾಟವನ್ನು ಬ್ಯಾಲನ್ಸ ಮಾಡುವುದಕ್ಕಾಗಿ ದಿನಾಲು ಯೋಗ, ಪ್ರಾಣಾಯಾಮ, ಧ್ಯಾನ, ರನ್ನಿಂಗ್, ವಾಕಿಂಗ್ ಇತ್ಯಾದಿಗಳನ್ನು ಮಾಡಿ.
3) ಡರ್ಟಿ ಥಾಟ್ಸಗಳನ್ನು ಸಪ್ರೆಸ್ ಮಾಡಿದಷ್ಟು ಅವು ಹೆಚ್ಚಾಗುತ್ತವೆ. ಅವುಗಳನ್ನು ಸಪ್ರೆಸ ಮಾಡುವ ಬದಲು ನಿಮ್ಮ ಮೈಂಡನಿಂದ ಸೀದಾ ಎಲಿಮಿನೇಟ ಮಾಡಿ. ಒಂಟಿಯಾಗಿರಲು ಟ್ರಾಯ ಮಾಡಬೇಡಿ. ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರಿ. ಒಳ್ಳೆ ಹ್ಯಾಬಿಟ್ಸಗಳನ್ನು ಬೆಳೆಸಿಕೊಳ್ಳಿ. ಚೆನ್ನಾಗಿ ಊಟ ಮಾಡಿ, ಚೆನ್ನಾಗಿ ಸ್ಟಡಿ ಮಾಡಿ ಅಥವಾ ನಿಮ್ಮ ಕೆಲಸ ಮಾಡಿ. ಚೆನ್ನಾಗಿ ನಿದ್ದೆ ಮಾಡಿ. ಡರ್ಟಿ ಥಾಟ್ಸಗಳು ಬರುತ್ತಿದ್ದಂತೆಯೇ ಅವುಗಳನ್ನು ಡಿಲೀಟ ಮಾಡಿ. ಒಳ್ಳೇ ಥಾಟ್ಸಗಳನ್ನು ಕ್ರಿಯೆಟ ಮಾಡಿ. ಲವ್ ಸಿನೆಮಾಗಳನ್ನು ನೋಡಿದರೂ ಸಹ ಬರೀ ಎಂಟರ್ಟೇನ್ಮೆಂಟಗಾಗಿ ನೋಡಿ. ಯಾವುದನ್ನು ಮೈಂಡಿಗೆ ಫೀಡ ಮಾಡಬೇಡಿ. ನಿಮ್ಮ ಗೋಲಗೆ ಸಪೋರ್ಟ ಮಾಡುವ ವಿಷಯಗಳನ್ನಷ್ಟೇ ಮೈಂಡಿಗೆ ಫೀಡ್ ಮಾಡಿ.
4) ಸ್ವಲ್ಪ ಮೆಂಟಲಿ ಮ್ಯಾಚುರಾಗಲು ಟ್ರಾಯ ಮಾಡಿ, ಮೆಂಟಲಿ ಮ್ಯಾಚುರಾಗಿ. ನೀವು ಯಾರನ್ನು ನೋಡಿ ಫಿಜಿಕಲಿ ಅಟ್ರ್ಯಾಕ್ಟ ಆಗುತ್ತಿರುವಿರೋ, ಹಗಲು ರಾತ್ರಿ ಅವರನ್ನು ಕಲ್ಪಿಸಿಕೊಂಡು ಟೈಮ ವೇಸ್ಟ ಮಾಡುತ್ತಿರುವಿರೋ ಅವರ ರಿಯಾಲಿಟಿಯನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಿ. ಫಾರ ಎಕ್ಸಾಮಪಲ್ ; ನೀವು ಯಾವುದಾದರೂ ಹುಡುಗಿಯನ್ನು ನೋಡಿ ಅಟ್ರ್ಯಾಕ್ಟಾಗಿ ಫೋಕಸ ಕಳೆದುಕೊಂಡಿದ್ದರೆ, ಆ ಹುಡುಗಿಯನ್ನು ಕಾಮದ ಕಣ್ಣುಗಳ ಬದಲಾಗಿ ಪ್ರೇಮದ ಕಣ್ಣುಗಳಿಂದ ನೋಡಿ. ಜ್ಞಾನದ ಕಣ್ಣುಗಳಿಂದ ನೋಡಿ. ಆಗ ನಿಮ್ಮ ಮನಸ್ಸಲ್ಲಿ ಫಿಜಿಕಲ ಅಟ್ರ್ಯಾಕ್ಷನಗೆ ಜಾಗವೇ ಇರುವುದಿಲ್ಲ. ನೀವು ಹಾಗೂ ನಿಮ್ಮನ್ನು ಡಿಸ್ಟರ್ಬ ಮಾಡಿದ ಹುಡುಗಿ ಇಬ್ಬರು ಮೂಳೆ, ಮಾಂಸ, ರಕ್ತ, ಮಲ, ಮೂತ್ರ, ಬೆವರುಗಳನ್ನು ತುಂಬಿಕೊಂಡ ಚರ್ಮದ ಗೊಂಬೆಗಳು ಎಂಬುದು ನಿಮಗೆ ಅರ್ಥವಾದರೆ ಸಾಕು ನೀವು ಬೇರೆಯವರನ್ನು ನೋಡಿ ಡೈವರ್ಟಾಗಲ್ಲ. ಮಾಲಿನ್ಯತೆಗಳಿಂದ ಕೂಡಿದ ದೇಹದ ಮೇಲೆ ಚರ್ಮದ ಟೆಂಪರರಿ ಮೇಕಪಯಿದೆ. ಅದನ್ನ ನೋಡಿ ನೀವು ಫೂಲಿಶಾದರೆ ಮುಂದೆ ಗ್ಯಾರಂಟಿ ನಿಮ್ಮ ಲೈಫ ಬ್ರೇಕಪ ಆಗುತ್ತದೆ. ಸೌಂದರ್ಯ ಒಂದು ಸುಂದರ ಸುಳ್ಳಾಗಿದೆ. ಅದರ ಬಗ್ಗೆ ಮುಂದಿನ ಎಪಿಸೋಡನಲ್ಲಿ ಡಿಸ್ಕಸ ಮಾಡುವೆ. ಕಾಮದ ಕಣ್ಣುಗಳ ಬದಲಾಗಿ ಪ್ರೇಮದ ಕಣ್ಣುಗಳಿಂದ ನೋಡಿ, ನೀವು ಯಾರಿಂದಲೂ ಡಿಸ್ಟರ್ಬಾಗಲ್ಲ.
5) ಸುಂದರವಾಗಿರುವ ವ್ಯಕ್ತಿಗಳ ಕಡೆಗೆ ನೋಡುವುದು, ಅವರೊಂದಿಗೆ ಮಾತಾಡುವುದು ತಪ್ಪಲ್ಲ. ಆದರೆ ಒಳ್ಳೆ ದೃಷ್ಟಿಯಿಂದ ನೋಡಿದರೆ ಅದು ನಮಗೂ ಒಳ್ಳೆಯದು, ಬೇರೆಯವರಿಗೂ ಒಳ್ಳೆಯದು. ಸೋ ಯಾವುದಾದರೂ ಹುಡುಗಿಯನ್ನು ನೋಡಿ ನಿಮ್ಮ ಮೈಂಡಲ್ಲಿ ಕೆಟ್ಟ ಥಾಟ್ಸ ಬಂದರೆ ತಕ್ಷಣವೇ ನಿಮ್ಮ ಮನೆ ದೇವತೆಯನ್ನು ಇಮ್ಯಾಜಿನೇಷನ್ ಮಾಡಿಕೊಳ್ಳಿ. ನಿಮ್ಮ ಡರ್ಟಿ ಥಾಟ್ ಒಂದು ಸೆಕೆಂಡಲ್ಲಿ ಡೆಸ್ಟ್ರಾಯ ಆಗುತ್ತದೆ. ನನಗೂ ಕೂಡ ಕೆಲವೊಂದಿಷ್ಟು ಸಲ ಕೆಟ್ಟ ಥಾಟ್ಸ ಬರುತ್ತವೆ. ಆಗ ನಾನು ತಕ್ಷಣವೇ ನಮ್ಮ ಮನೆದೇವತೆ ಅಂಭಾಭವಾನಿಯನ್ನು ಮೈಂಡಲ್ಲಿ ಇಮ್ಯಾಜಿನೇಷನ್ ಮಾಡಿಕೊಳ್ಳುವೆ. ಕೆಟ್ಟ ಥಾಟ ಒಂದು ಸೆಕೆಂಡನಲ್ಲಿ ಸಾಯುತ್ತದೆ, ನನ್ನ ಮೈಂಡ ಕ್ಲೀನಾಗಿ ನನ್ನ ಫುಲ್ ಫೋಕಸ ಮತ್ತೆ ಕೆಲಸದ ಮೇಲೆ ಹೋಗುತ್ತದೆ. ಸೋ ಈ ಟೆಕ್ನಿಕ್ ಎಲ್ಲದಕ್ಕಿಂತ ಈಜಿಯಾಗಿದೆ, ಇದನ್ನು ಎಫೆಕ್ಟಿವಾಗಿ ಯುಜ ಮಾಡಿ. ಆವಾಗಾವಾಗ ಟೈಮ ಸಿಕ್ಕಾಗ ನಿಮ್ಮ ಮನೆ ದೇವರಿಗೆ ಹೋಗಿ. ದೇವಸ್ಥಾನದ ಪೂಜೆಗಳಲ್ಲಿ ಭಾಗಿಯಾಗಿ. ಅನ್ನದಾನಗಳಂಥ ಕೆಲಸಗಳಲ್ಲಿ ಫ್ರಿಯಾಗಿ ಸೇವೆ ಮಾಡಿ. ಇದರಿಂದ ನಿಮಗೆ ಪುಣ್ಯದ ಜೊತೆಗೆ ಒಳ್ಳೆ ಸಂಸ್ಕಾರವೂ ಸಿಗುತ್ತದೆ.
ಓಕೆ ಗೆಳೆಯರೇ, ಇವಿಷ್ಟು ಟಿಪ್ಸಗಳು ಫಿಜಿಕಲ್ ಅಟ್ರ್ಯಾಕ್ಷನನಿಂದ ಹೊರಬರಲು ಸಫೀಸಿಯಂಟಾಗಿವೆ. ಯೌವ್ವನವನ್ನು ಹ್ಯಾಪಿಯಾಗಿ, ಹೆಲ್ದಿಯಾಗಿ ಎಂಜಾಯ ಮಾಡಿ. ಆದರೆ ದಾರಿ ತಪ್ಪಬೇಡಿ. ಒಳ್ಳೇ ಕರಿಯರ್ ಬಿಲ್ಡ ಮಾಡಿ. ಆಟವಾಡಿ, ಟೂರಿಸ್ಟ ಸ್ಪಾಟಗಳಿಗೆ ಹೋಗಿ. ಈ ಥರಹದ ಎಂಜಾಯಮೆಂಟಗಳನ್ನು ಮಾಡಿ. ನಿಮ್ಮನ್ನು ಹಾಳು ಮಾಡುವ ಎಂಜಾಯಮೆಂಟ ಹಾಗೂ ಎಂಟರ್ಟೇನ್ಮೆಂಟಗಳಿಂದ ದೂರವಿರಿ. All the Best and Thanks You...