ಓದಿದ್ದನ್ನೆಲ್ಲ ನೆನಪಲ್ಲಿಡುವುದೇಗೆ? - How to remember whatever we read? In Kannada - Study Tips in Kannada
ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡಗೆ ಸೆಲೆಕ್ಟಾದ ಪ್ರಶ್ನೆ ಇಂತಿದೆ. "ಓದಿದ್ದನ್ನೆಲ್ಲ ನೆನಪಲ್ಲಿಡುವುದೇಗೆ? How to remember whatever we read?". ಇವತ್ತಿನ ಎಪಿಸೋಡನಲ್ಲಿ ಇದರ ಬಗ್ಗೆ ಶಾರ್ಟಾಗಿ ಡಿಸ್ಕಸ ಮಾಡಿ ಒಂದು ಕ್ವೀಕ್ ಸೋಲುಷನನ್ನು ಪಡೆದುಕೊಳ್ಳೊಣಾ. ಲೆಟ್ಸ ಬಿಗಿನ...

ಬಹಳಷ್ಟು ಜನ ಇಷ್ಟಪಟ್ಟು ಓದಲ್ಲ, ಕಾಟಾಚಾರಕ್ಕೆ ಯಾರದ್ದೋ ಭಯಕ್ಕೆ ಕಷ್ಟಪಟ್ಟು ಓದುತ್ತಾರೆ. ಮನಸ್ಸಿಲ್ಲದೇ ಮಾಡಿದ ಯಾವ ಕೆಲಸಕ್ಕೂ ಫಲ ಸಿಗಲ್ಲ. ಹೀಗಾಗಿ ಕಾಟಾಚಾರಕ್ಕೆ ಓದುವುದರಿಂದ ಓದಿದ್ದು ಏನು ನೆನಪಿರುವುದಿಲ್ಲ. ಕಾಟಾಚಾರಕ್ಕೆ ಓದುವವರಿಗೆ ಯಾವುದೇ ಸೋಲುಷನ ಇಲ್ಲ. ನೀವು ಓದುವುದನ್ನು ಬಿಟ್ಟು ಈಗಲೇ ಕೆಲಸಕ್ಕೆ ಹೋಗುವುದು ಬೆಟರರಾಗಿದೆ.

ಇನ್ನೂ ಕೆಲವೊಂದಿಷ್ಟು ಜನ ಅರ್ಥ ಮಾಡಿಕೊಳ್ಳದೇ ಓದುತ್ತಾರೆ. ಬರೀ ಎಕ್ಸಾಮಗೋಸ್ಕರ ಬಾಯಿಪಾಠ ಮಾಡಿ ಓದುತ್ತಾರೆ. ಹೀಗಾಗಿ ಅವರು ಬಾಯಿಪಾಠ ಮಾಡಿದ್ದು ಅವರಿಗೆ ಎಕ್ಸಾಮ ಮುಗಿಯುವ ಮಾತ್ರ ನೆನಪಿರುತ್ತದೆ. ಎಕ್ಸಾಮ ಮುಗಿಯುತ್ತಿದ್ದಂತೆಯೇ ಎಲ್ಲ ಮರೆತು ಹೋಗುತ್ತೆ. ಎಕ್ಸಾಮ ಬರೆದ ದಿನವೇ ಓದಿದ್ದೆಲ್ಲ ಆಲಮೋಸ್ಟ ಆಲ್ ಮರೆತು ಹೋಗಿರುತ್ತದೆ. ನೀವು ಇಂಥವರಲ್ಲಿ ಒಬ್ಬರಾಗಿದ್ದರೆ ಬಾಯಿಪಾಠ ಮಾಡಬೇಡಿ. ಸ್ವಲ್ಪ ಕೂಲಾಗಿ ಪ್ರತಿ ಕಾನ್ಸೆಪ್ಟನ್ನು ಅರ್ಥ ಮಾಡಿಕೊಂಡು ಓದಿ ಓದಿದ್ದೆಲ್ಲ ಲೈಫಲಾಂಗ ನೆನಪಿರುತ್ತದೆ.

ಇನ್ನೂ ಕೆಲವೊಂದಿಷ್ಟು ಜನ ಇರ್ತಾರೆ, ಅವರು ಶ್ರದ್ಧೆಯಿಂದ ಮನಸ್ಸಿಟ್ಟು ಓದುತ್ತಾರೆ. ಆದರೆ ಅವರಿಗೆ ಓದಿದ್ದು ಓದುವಾಗಷ್ಟೇ ನೆನಪಿರುತ್ತದೆ. ಓದಿದ ದಿನವೇ ಮರೆತು ಹೋಗುತ್ತದೆ. ಈ ತರಹದ ಸಮಸ್ಯೆ ಬಹಳಷ್ಟು ಸ್ಟೂಡೆಂಟ್ಸಗಳಿಗಿದೆ. ಇದರಲ್ಲಿ ಅವರ ಮಿಸ್ಟೇಕ ಏನಿಲ್ಲ. ಅವರಿಗೆ ಅವರ ಮೈಂಡ ಹೇಗೆ ವರ್ಕಾಗುತ್ತೆ ಎಂಬ ಲಾಜಿಕ ಗೊತ್ತಾದರೆ ಅವರಿಗೆ ಓದಿದ್ದೆಲ್ಲ ಈಜಿಯಾಗಿ ನೆನಪಲ್ಲಿ ಉಳಿಯುತ್ತೆ. ಸೋ ಮೈಂಡ ಹೇಗೆ ವರ್ಕಾಗುತ್ತೆ ಅಂತಾ ಶಾರ್ಟಾಗಿ ತಿಳಿದುಕೊಳ್ಳೋಣಾ.

ನಮ್ಮ ಮೈಂಡ ಎಲ್ಲ ಡಾಟಾವನ್ನು ಪಿಕ್ಷರ್ಸಗಳಲ್ಲಿ ಸ್ಟೋರ ಮಾಡಿಟ್ಟುಕೊಳ್ಳುತ್ತದೆ. ಅಂದರೆ ಚಿತ್ರಗಳ ರೂಪದಲ್ಲಿ, ಇಮೇಜ್ಸಗಳ ರೂಪದಲ್ಲಿ ನೆನಪಿಟ್ಟುಕೊಳ್ಳುತ್ತದೆ. ಮೈಂಡಿಗೆ ಸಿಗುವ ಪ್ರತಿ ಇನ್ಫಾರ್ಮೇಶನನ್ನು, ಶಬ್ದಗಳನ್ನು, ವಾಕ್ಯಗಳನ್ನು, ಮಾತುಗಳನ್ನು ಅದು ಪಿಕ್ಚರ್ಸಗಳಲ್ಲಿ ಸೇವ ಮಾಡಿಟ್ಟುಕೊಳ್ಳುತ್ತದೆ. ಮಾತುಗಳನ್ನು, ಶಬ್ದಗಳನ್ನು ನಮ್ಮ ಮೈಂಡ ಆಟೋಮ್ಯಾಟಿಕ್ಕಾಗಿ ಪಿಕ್ಚರ್ಸಗಳಲ್ಲಿ ಕನವರ್ಟ ಮಾಡುತ್ತದೆ. ಅದನ್ನೇ ಸ್ಟೋರ ಮಾಡಿ ಸೇವ ಮಾಡಿಟ್ಟುಕೊಳ್ಳುತ್ತದೆ. ಯೋಚಿಸುವಾಗಲೂ ಅಷ್ಟೇ ನಮ್ಮ ಮೈಂಡ ಚಿತ್ರಗಳಲ್ಲಿ ಯೋಚಿಸುತ್ತದೆ, ಅಕ್ಷರಗಳಲ್ಲಿ ಅಲ್ಲ. ಹೀಗಾಗಿ ನಮಗೆ ಮೂರು ಗಂಟೆಯ ಸಿನಿಮಾ ಸರಿಯಾಗಿ ನೆನಪಲ್ಲಿ ಉಳಿಯುತ್ತದೆ, ಆದರೆ ಒಂದು ಗಂಟೆಯ ಲೆಕ್ಚರ ನೆನಪಲ್ಲಿ ಉಳಿಯುವುದಿಲ್ಲ. ಹತ್ತು ವರ್ಷಗಳ ಹಿಂದೆ ಓದಿದ ಒಂದು ಸಾಲು ನೆನಪಿರಲ್ಲ. ಆದರೆ ಹತ್ತು ವರ್ಷ ಹಿಂದೆ ನೋಡಿದ ಸಿನಿಮಾದ ಡೈಲಾಗ ಅಥವಾ ಹತ್ತು ವರ್ಷ ಹಿಂದೆ ಮೀಟಾದ ವ್ಯಕ್ತಿಯ ಮುಖ ಚೆನ್ನಾಗಿ ನೆನಪಿರುತ್ತದೆ. ಸೋ ನಾವು ನಮ್ಮ ಮೈಂಡಿಗೆ ಡೈರೆಕ್ಟಾಗಿ ಪಿಕ್ಚರ್ಸಗಳಲ್ಲಿ ಇನಫಾರ್ಮೆಶನ್ನು ಕೊಟ್ಟರೆ ಅದು ಅದನ್ನು ಈಜಿಯಾಗಿ ನೆನಪಲ್ಲಿಟ್ಟುಕೊಳ್ಳುತ್ತದೆ. ಅದಕ್ಕೆ ಓದುವಾಗ ಶಾರ್ಟ ನೋಟ್ಸಗಳನ್ನು ಮಾಡಿ, ದೊಡ್ಡ ಕಾನ್ಸೆಪ್ಟಗಳನ್ನು ಸಣ್ಣಸಣ್ಣ ಡೈಗ್ರಾಮಗಳ ಮೂಲಕ ನೆನಪಿಡಿ. ಡೇರಿವೇಷನಗಳು ಬಂದಾಗ ಕಂಪಲ್ಸರಿಯಾಗಿ ಡೈಗ್ರಾಮಗಳನ್ನು ಡ್ರಾ ಮಾಡಿ.

ಓದಿದ ನಂತರ ಬುಕ್ ಮುಚ್ಚಿಟ್ಟು ಕಣ್ಮುಚ್ಚಿ ಓದಿದ್ದನ್ನೆಲ್ಲ ಒಂದ್ಸರ್ತಿ ರಿಕಾಲ ಮಾಡಿಕೊಳ್ಳಿ. ಓದಿದ ಕಾನ್ಸೆಪ್ಟಗಳನ್ನೆಲ್ಲ ಕಣ್ಮುಚ್ಚಿ ಒಂದು ಆ್ಯನಿಮೇಷನ ಮೂವಿ ತರಹ ಇಮ್ಯಾಜಿನೇಷನ್ ಮಾಡಿ. ಬಸ್ಸಲ್ಲಿ ಕಾಲೇಜಿಗೆ ಹೋಗುವಾಗ ಫಾಲ್ತು ಟೈಮಪಾಸ ಮಾಡದೇ ಶಾಂತವಾಗಿ ಕುಳಿತುಕೊಂಡು ಮಾರ್ನಿಂಗ್ ಸ್ಟಡಿ ಮಾಡಿದ್ದನ್ನೆಲ್ಲ ಮೈಂಡಲ್ಲಿ ರಿವಿಜನ ಮಾಡಿ. ನಿಮಗೆ ಟೀಚ್ ಮಾಡುವ ಚಾನ್ಸ ಸಿಕ್ಕರೆ, ನೀವು ಯಾವ ಥರ ಟೀಚ್ ಮಾಡುತ್ತೀರಿ ಎಂಬುದನ್ನು ಮೈಂಡಲ್ಲೇ ಇಮ್ಯಾಜಿನೇಷನ್ ಮಾಡಿ. ಈ ತರಹ ಓದುವುದನ್ನು, ಮೈಂಡಲ್ಲಿ ರಿವಿಜನ ಮಾಡುವುದನ್ನು 21 ದಿನ ಪ್ರ್ಯಾಕ್ಟೀಸ್ ಮಾಡಿ. ಆನಂತರ ಇದು ನಿಮ್ಮ ಹಾಬಿಯಾಗುತ್ತದೆ. ನಿಮ್ಮ ಮೈಂಡ ಇದಕ್ಕೆ ಅಡಾಪ್ಟಾಗುತ್ತದೆ. ನಂತರ ನೀವು ಓದಿದ್ದೆಲ್ಲ ನಿಮಗೆ ಅಟೋಮ್ಯಾಟಿಕ್ಕಾಗಿ ನೆನಪಲ್ಲಿ ಉಳಿಯುತ್ತದೆ. ಇದು ನನ್ನ ಪರ್ಸನಲ್ ಟೆಕ್ನಿಕ್ ಆಗಿದೆ. ಕಾಲೇಜಿನಲ್ಲಿರುವಾಗಲೂ ನಾನು ಇದೇ ಟೆಕ್ನಿಕನ್ನು ಯುಜ ಮಾಡಿ ಹೈಯೆಸ್ಟ ಸ್ಕೋರ ಮಾಡಿದ್ದೆ. ಈಗಲೂ ಇದೇ ಟೆಕ್ನಿಕನ್ನು ಯುಜ ಮಾಡಿ ಗಂಟೆಗಟ್ಟಲೆ ಸೆಮಿನಾರ, ವರ್ಕಶಾಪ, ಟ್ರೇನಿಂಗ ಸೆಷನಗಳನ್ನು ಮಾಡಿ ಹೈಯೆಸ್ಟ ಅರ್ನಿಂಗ ಮಾಡ್ತಿರುವೆ. That's it. ನಿಮಗೆ ಇನ್ನೂ ಏನಾದರೂ ಡೌಟ್ಸಿದ್ರೆ ಕಮೆಂಟ ಮಾಡಿ ಇಲ್ಲ ಇನ್ಸಸ್ಟಾಗ್ರಾಮಲ್ಲಿ ನನಗೆ ಡೈರೆಕ್ಟ ಮೆಸೆಜ ಮಾಡಿ. All the Best and Thanks You...