1) ನಾನು ಕಳೆದ ಜನ್ಮದಲ್ಲಿ ಬಹಳಷ್ಟು ಪುಣ್ಯ ಮಾಡಿದ್ದೇ ಅನಿಸುತ್ತೆ. ಏಕೆಂದರೆ ಏಳೇಳು ಜನ್ಮ ಪುಣ್ಯ ಮಾಡಿದವರಿಗೆ ಮಾತ್ರ ಒಳ್ಳೇ ಲೈಫ ಪಾರ್ಟನರ ಸಿಗುತ್ತಾರೆ...
2) ನಿನ್ನಂಥ ಲೈಫ ಪಾರ್ಟನರ ಸಿಕ್ಕಿರುವಾಗ ನಾನು ಎದೆ ತಟ್ಟಿಕೊಂಡು ಜಗತ್ತಿನ ಮೊಸ್ಟ ಲಕ್ಕೀ ಪರ್ಸನ ಅಂತಾ ಹೇಳುವೆ...
3) ನಾನು ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸುತ್ತೇನೆಂದು ಪ್ರಮಾಣ ಮಾಡಿ ಹೇಳಲ್ಲ, ಹೆಗಲಿಗೆ ಹೆಗಲು ಕೊಟ್ಟು ಪ್ರೂವ್ ಮಾಡಿ ತೋರಿಸುವೆ...
4) ನನಗೆ ವಯಸ್ಸಾದಂತೆ ನನ್ನ ಸೌಂದರ್ಯ ಕಡಿಮೆಯಾಗಬಹುದು. ಆದರೆ ನಿನ್ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಲ್ಲ. ನಿನ್ಮೇಲಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ನನ್ನ ಪ್ರೀತಿ ಅನಂತ, ಅಮರ...
6) ನಿನ್ನ ಕಂಗಳೆ ನನ್ನ ಕನ್ನಡಿ, ನಿನ್ನ ಮಡಿಲೆ ನನ್ನ ಸುಖ ನಿದ್ದೆಗೆ ಶಾಂತ ಜೋಪಡಿ. ದಿನಾ ನಿನ್ನೆದೆ ಮೇಲೆ ತಲೆಯಿಟ್ಟು ಮಲಗುವುದೇ ನನ್ನ ಅದೃಷ್ಟದ ಗುಡಿ...
7) ನಿನ್ನೆದೆ ಮೇಲೆ ತಲೆಯಿಟ್ಟು ಮಲಗಿದರೆ, ನಿನ್ನನ್ನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡರೆ ನನ್ನೆಲ್ಲ ನೋವು ಆಯಾಸವೆಲ್ಲ ಮಾಯವಾಗಿ ಬಿಡುತ್ತದೆ...
8) ನೀನು ಬಂದ ಮೇಲೆ ನನ್ನ ಬಾಳಲ್ಲಿ ಬೆಳಕು ಬಂದಿದೆ, ನೀನು ಸಿಕ್ಕ ಮೇಲೆಯೇ ಸುಖ ಸಂತೋಷ ಸಕ್ಸೆಸ್ ನನ್ನ ಸ್ವತ್ತಾಗಿದೆ...
9) ಕಣ್ಣು ಬಿಟ್ಟರೂ ಕಣ್ಣು ಮುಚ್ಚಿದರೂ ನೀನೇ ಕಾಣುವೆ. ಈ ದೇಹದಲ್ಲಿ ಕೊನೆಯ ಉಸಿರು ಇರೋ ತನಕ ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ, ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೊಂದಿಗೆ ಇರುವೆ...
10) ನನ್ನ ಎದೆಯ ಏರಿಳಿತಗಳನ್ನು ಅಳೆಯುವ ಸಾಮರ್ಥ್ಯ ನಿನಗಷ್ಟೇ ಇದೆ. ಏಕೆಂದರೆ ದಿನಾ ರಾತ್ರಿ ನನ್ನೆದೆ ಮೇಲೆ ತಲೆಯಿಟ್ಟು ಮಲಗುವ ಅಧಿಕಾರ ಅವಕಾಶ ಅದೃಷ್ಟ ನಿನಗಷ್ಟೇ ಇರೋದು...
11) ನೀನು ನನ್ನ ಮನ ಹಾಗೂ ಮನೆಯ ಒಡತಿ. ನನ್ನ ಪಾಲಿನ ಲಕ್ಷ್ಮೀ, ಸರಸ್ವತಿ, ಅಣ್ಣಪೂರ್ಣೆಶ್ವರಿ ಎಲ್ಲವೂ ನೀನೇ. ನನ್ನ ಹಾಗೂ ನನ್ನ ಲೈಫಿನ ವೈಫ ನೀನೇ...
12) ನನ್ನ ಉಸಿರು, ಹೆಸರು, ಕನಸು, ಮನಸು, ಯಶಸ್ಸು ಎಲ್ಲವೂ ನೀನೇ. ನೀನಿಲ್ಲದೆ ನಾನಿಲ್ಲ, ನಿನ್ನ ಖುಷಿ ಬಿಟ್ಟರೇ ಬೇರೆನು ಬೇಕಿಲ್ಲ...
13) ದೇವರು ನನಗೆ ಕೊಟ್ಟ ಬೆಸ್ಟ ಗಿಫ್ಟ ಎಂದರೆ ಅದು ನೀನೇ... ನನ್ನ ಫಸ್ಟ ಲವ್, ಬೆಸ್ಟ ಲವ್, ಲಾಸ್ಟ ಲವ್ ಎಲ್ಲವೂ ನೀನೇ...
14) ನಾನು ನಿನ್ನೊಂದಿಗೆ ಕಳೆಯುವ ಪ್ರತಿ ಕ್ಷಣ ನನ್ನ ಪಾಲಿಗೆ ಬೆಲೆ ಕಟ್ಟಲಾಗದ ಬಂಗಾರದ ಕ್ಷಣಗಳಾಗಿವೆ, ಎಂದೂ ಮರೆಯದ ಅಮರ ಅದ್ಭುತ ನೆನಪುಗಳಾಗಿವೆ...
15) ವೈಫಾಗಿ ನನ್ನ ಲೈಫಿಗೆ ಬಂದು ನನ್ನ ಅಪೂರ್ಣ ಲೈಫನ್ನು ಸಂಪೂರ್ಣ ಮಾಡಿದಕ್ಕೆ ಕೋಟಿ ಕೋಟಿ ಧನ್ಯವಾದಗಳು...
16) ಡಿಯರ್ ಹಜಬಂಡ, ನಾನು ಈಡೀ ಜಗತ್ತಿನೊಡನೆ ಹೋರಾಡುವಷ್ಟು ಸಮರ್ಥಳಾಗಿರುವೆ. ಅದಕ್ಕೆ ನಿನ್ನೊಂದಿಗೆ ದಿನಾ ಜಗಳವಾಡುವೆ. ಏಕೆಂದರೆ ನೀನೇ ನನ್ನ ಜಗತ್ತು...
17) ಬೇಕಾದಂತೆ ಕಾಲು ಚಾಚಿ ಮಲಗಲು ದೊಡ್ಡ ಮನೆ, ಖರ್ಚು ಮಾಡಲು ಕೈತುಂಬ ಹಣ, ಜೊತೆಗೆ ಮನದಾಸೆಯನ್ನು ಅರಿತು ನಡೆಯುವ ಪತ್ನಿಯಿದ್ದರೆ ಸಾಕು, ಸ್ವರ್ಗ ಬೇಕಿಲ್ಲ...
18) ನಾನು ನನ್ನ ಜೀವನದಲ್ಲಿ ಸಂಪಾದಿಸಿದ ಅತೀ ದೊಡ್ಡ ಸಂಪತ್ತೆಂದರೆ ಅದು ನೀನು ಹಾಗೂ ನಿನ್ನ ಪ್ರೀತಿ...
19) ನೀನು ಜೊತೆಗಿರುವಾಗ ಯಾವ ಸಮಸ್ಯೆಯ ಸಂಕಟವಿಲ್ಲ, ಸಾವಿನ ಭಯವಿಲ್ಲ. ನೀನು ಜೊತೆಗಿರುವಾಗ ನೋವುಗಳೆಲ್ಲವು ನಗೆಯಾಗುತ್ತವೆ, ಸಂಕಷ್ಟಗಳೆಲ್ಲ ಸಕ್ಸೆಸಾಗಿ ಬದಲಾಗುತ್ತವೆ...
20) ಬೇಕಾದರೆ ನಿನ್ನೊಂದಿಗೆ ಸಾಯ್ತೀನಿ ಅನ್ನೋದು ಪ್ರೀತಿಯಲ್ಲ, ಹೇಡಿತನ. ಎಷ್ಟೇ ಕಷ್ಟ ಬಂದರೂ ನಿನ್ನೊಂದಿಗೆ ಬದುಕ್ತೀನಿ, ನಿನಗಾಗಿ ಬದುಕ್ತೀನಿ ಅನ್ನೋದು ನಿಜವಾದ ಪ್ರೀತಿ. ಇಂಥ ಮಹಾನ ಪ್ರೀತಿಯನ್ನು ಕಲಿಸಿದ ಮಹಾನ ಗುರು ನೀನು, ಗೆಳತಿ ನೀನು, ಮನೆ ಮನದೊಡತಿ ನೀನು...
21) ಈ ಜಗತ್ತಿನ ಜನ ಸಾಗರದಲ್ಲಿ ನನ್ನ ಕಣ್ಣುಗಳು ಯಾವಾಗಲೂ ನಿನ್ನನ್ನೇ ಹುಡುಕುತ್ತಿರುತ್ತವೆ. ಏಕೆಂದರೆ ನೀನು ಕಾಣಿಸದಿದ್ದರೆ ನನ್ನ ಮನಸ್ಸು ಕಳವಳಗೊಳ್ಳುತ್ತದೆ...
22) ಗಂಡ ಹೆಂಡತಿಯ ಸಂಬಂಧ ಒಂಥರಾ ಟಾಮ ಆ್ಯಂಡ ಜೆರಿ ಇದ್ದಂಗೆ. ಎಷ್ಟೇ ಜಗಳಾಡಿದರೂ, ಕಾಲೆಳೆದರೂ, ಕಿತ್ತಾಡಿ ಮುನಿಸಿಕೊಂಡು ಮಾತು ಬಿಟ್ಟರೂ ಮತ್ತೆ ಒಂದಾಗುವರು. ಒಬ್ಬರನ್ನೊಬ್ಬರು ಬಿಟ್ಟಿರಲಾರರು...
23) ನನ್ನ ನಗುವಿಗೆ, ನಲಿವಿಗೆ, ಯಶಸ್ಸಿಗೆ ನೀನೇ ಕಾರಣ. ನೀನು ಹೆಗಲಿಗೆ ಹೆಗಲು ಕೊಟ್ಟು ಜೊತೆಗಿರುವಾಗ ಸೋಲು ಸಾವು ಸಮೀಪಕ್ಕೆ ಸುಳಿಯುವ ಸಾಹಸ ಮಾಡಲ್ಲ...
24) ನಿಜವಾದ ಪ್ರೀತಿಯೆಂದರೆನು ಅಂತಾ ನನಗೆ ಅರ್ಥವಾಗಿದ್ದು ನಿನ್ನಿಂದಲೇ. ಅದಕ್ಕೆ ನನ್ನ ತನು, ಮನ, ಧನ ಎಲ್ಲವೂ ನಿನಗಷ್ಟೇ ಸೀಮಿತ, ನಿನಗಷ್ಟೇ ಸಮರ್ಪಿತ...
25) ನಾನು ಎಲ್ಲೇ ಹೋದರೂ ನನಗೆ ಮರಳಿ ಮನೆಗೆ ಬರುವುದು ಗೊತ್ತು. ಏಕೆಂದರೆ ನೀನು ನನ್ನ ಜೀವನದ ಧ್ರುವ ನಕ್ಷತ್ರ...
26) ನೀನಿಲ್ಲದ ಜೀವನ ಸೂರ್ಯನಿಲ್ಲದ ಗಗನ. ಅದಕ್ಕೆ ನಾನು ನಿನಗಾಗಿ ಎಲ್ಲವನ್ನೂ ಕಳೆದುಕೊಂಡರೂ ನಿನ್ನನ್ನು ಕಳೆದುಕೊಳ್ಳಲ್ಲ...
27) ನಾನು ಎಲ್ಲೇ ಇದ್ದರೂ, ಕೆಲಸದ ನಿಮಿತ್ಯ ಎಷ್ಟೇ ದೂರದಲ್ಲಿದ್ದರೂ ಪ್ರತಿಕ್ಷಣವು ನಿನ್ನವನೇ, ನನ್ನ ಮನಸ್ಸು ಸದಾ ನಿನ್ನಲ್ಲೇ ಇರುತ್ತದೆ...
28) ನಿನ್ನನ್ನು ಇಷ್ಟಪಟ್ಟು ಮದುವೆಯಾಗಿದ್ದಕ್ಕೂ ಸಾರ್ಥಕವಾಗಿದೆ. ಏಕೆಂದರೆ ನನಗೆ ಕಷ್ಟ ಎಂದರೆ ಏನಂತಾ ಗೊತ್ತಾಗದಂತೆ ನೋಡಿಕೊಂಡಿರುವೆ...
29) ಪ್ರತಿದಿನ ನಾ ನಿನ್ನ ಮೊದಲ ಗುಡ್ ಮಾರ್ನಿಂಗ್ ಹಾಗೂ ಕೊನೆಯ ಗುಡ್ ನೈಟ ಆಗಲು ಬಯಸುವೆ...
30) ನನ್ನ "I Love You..." ಪ್ರತಿದಿನ ನನ್ನಲ್ಲಿ ಹುಟ್ಟಿ ನಿನ್ನಲ್ಲಿ ಸೇರಿಕೊಂಡು ಪ್ರೇಮಗಂಗೆಯಾಗಿ ಹರಿದು ಮತ್ತೆ ನಮ್ಮಿಬ್ಬರಲ್ಲೇ ಲೀನವಾಗುತ್ತದೆ...
31) ನಾನು ನಿನ್ನೆದೆ ಬಡಿತವನ್ನು ಕೇಳಿಸಿಕೊಂಡಾಗ ಪುಳಕಿತಳಾಗುವೆ. ಏಕೆಂದರೆ ಅದು ಪ್ರತಿಕ್ಷಣ ನನ್ನ ಹೆಸರನ್ನು ಪ್ರೀತಿಯಿಂದ ಪಿಸುಗುಡುತ್ತಿರುತ್ತದೆ....
32) ನಾನು ನಿನ್ನ ಮುಂದೆಯು ಹೋಗಲ್ಲ, ಹಿಂದೆಯು ಉಳಿಯಲ್ಲ, ಸದಾ ನಿನ್ನ ಜೊತೆಗಿರುವೆ. ನಿನ್ನ ಪ್ರತಿ ನೋವು ನಲಿವಿನಲ್ಲಿ ಸರ್ವಸಮಳಾಗಿ ಸಾಥ ಕೊಡುವೆ...
33) ಸೂರ್ಯನ ಬಿಸಿಲಿಲ್ಲದೆ ಹೂ ಅರಳಲ್ಲ, ನಿನ್ನ ಮುಖದಲ್ಲಿ ನಗು ಮೂಡದಿದ್ದರೆ ನನ್ನ ಮುಖದ ಮೇಲೆ ಖುಷಿ ಕಾಣಿಸಲ್ಲ...
34) ದಿನಾ ಬೆಳಿಗ್ಗೆ ಬಿಸಿ ಬೆಡ ಕಾಫಿಯಿಲ್ಲದೆ ನಾನು ದಿನವನ್ನು ಪ್ರಾರಂಭಿಸಬಲ್ಲೆ. ಆದರೆ ನಿನ್ನ ಬೆಚ್ಚನೆಯ ಅಪ್ಪುಗೆಯಿಲ್ಲದೆ ದಿನದ ಮೊದಲ ಹೆಜ್ಜೆ ಇಡಲಾರೆ...
35) ಬಹಳಷ್ಟು ಜನ ಮದುವೆಯಾದ ಮೇಲೆ ಎಂಜಾಯಮೆಂಟ ಮುಗಿಯಿತು ಅಂತಾರೆ. ಆದರೆ ಅಸಲಿ ರೋಮ್ಯಾನ್ಸ, ಎಂಜಾಯಮೆಂಟ ಶುರುವಾಗೋದು ಮದುವೆಯಾದ ಮೇಲೆಯೇ...
36) ನಾನು ನಿನ್ನ ಮಿಸ್ ಮಾಡಿಕೊಳ್ಳಲು ಇಷ್ಟಪಡಲ್ಲ, ಕಿಸ್ ಮಾಡಲು ಇಷ್ಟಪಡುವೆ...
37) ದೂರಕ್ಕೆ ನನ್ನನ್ನು ನಿನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ನೀ ದೂರ ಹೋದಷ್ಟು ನಿನ್ನ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ನೀ ಬೇಗನೆ ಮನೆಗೆ ಬರದಿದ್ದರೆ ನನಗೆ ಹುಚ್ಚಿಡಿಯುತ್ತೆ...
38) ನೀನು ನನ್ನ ಬಳಿಯಿದ್ದಾಗ ಗಂಟೆಗಳು ಸೆಕೆಂಡನಂತೆ ಹೋಗುತ್ತವೆ. ಆದರೆ ನೀ ದೂರವಿರುವಾಗ ಒಂದೊಂದು ಸೆಕೆಂಡ್ ಒಂದೊಂದು ಗಂಟೆಯಂತೆ ಕಾಡುತ್ತವೆ...
39) ನಿನ್ನ ಬೆಚ್ಚನೆಯ ತೋಳುಗಳಲ್ಲಿರುವಾಗ ನನ್ನೆಲ್ಲ ಭಯಗಳು ದೂರಾಗುತ್ತವೆ, ನೋವುಗಳು ನಾಶವಾಗುತ್ತವೆ. ದು:ಖ ಹೋಗಿ ಸ್ವರ್ಗಸುಖದ ಆಗಮನವಾಗುತ್ತದೆ...
40) ನನ್ನ ಪ್ರತಿದಿನವೂ ಪರ್ಫೆಕ್ಟಾಗಿದೆ. ಏಕೆಂದರೆ ಅದು ಮುಂಜಾನೆ ನಿನ್ನ ಬಿಸಿ ಮುತ್ತುಗಳಿಂದ ಪ್ರಾರಂಭವಾಗಿ ರಾತ್ರಿ ನಿನ್ನ ಬೆಚ್ಚನೆಯ ಅಪ್ಪುಗೆಗಳಲ್ಲಿ ಕೊನೆಯಾಗುತ್ತದೆ...