
ಹಾಯ್ ಗೆಳೆಯರೇ, ಇನ್ಮುಂದೆ ನೀವು ಯಾರಿಗಾದರೂ ಹಣ ಸಹಾಯ ಮಾಡುವಾಗ ಇಲ್ಲವೇ ಪೇಮೆಂಟ ಮಾಡುವಾಗ ಕ್ಯಾಷಲ್ಲಿ ಹಣ ಕೊಡಬೇಡಿ. ಏಕೆಂದರೆ ನೀವು ಕ್ಯಾಷ ಮೂಲಕ ಬೇರೆಯವರಿಗೆ ಹಣ ಕೊಟ್ಟಾಗ ನೀವು ಅವರಿಗೇನೆ ಹಣ ಕೊಟ್ಟಿರುವಿರಿ ಎಂಬುದಕ್ಕೆ ನಿಮ್ಮ ಬಳಿ ಪ್ರೂಪ್ಸಗಳು ಉಳಿಯುವುದಿಲ್ಲ. ನಂತರ ನಿಮ್ಮಿಂದ ಹಣ ತೆಗೆದುಕೊಂಡ ವ್ಯಕ್ತಿ ಉಲ್ಟಾ ಹೊಡೆದರೆ ನಿಮಗೆ ಅವನ ಮೇಲೆ ಯಾವುದೇ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲ್ಲ. ಸೋ ಇನ್ಮುಂದೆ ಯಾರಿಗಾದರೂ ಹಣ ಕೊಡುವುದಿದ್ದರೆ ಕ್ಯಾಷನಲ್ಲಿ ಕೊಡಬೇಡಿ. ಅಕೌಂಟ ಟು ಅಕೌಂಟ ಟ್ರಾನ್ಸಫರ ಮಾಡಿ ಇಲ್ಲ ಆನಲೈನ UPI ಮೂಲಕ ಕೊಡಿ ಇಲ್ಲ ಸೀದಾ ಚೆಕ್ ಮೂಲಕ ಕೊಡಿ. ಆದರೆ ಯಾವುದೇ ಕಾರಣಕ್ಕೂ ಕ್ಯಾಷನಲ್ಲಿ ಕೊಡಬೇಡಿ.

ನೀವು ಬೇರೆಯವರಿಗೆ ಕ್ಯಾಷನಲ್ಲಿ ಹಣ ಕೊಡದಿದ್ದರೆ ಮೊದಲನೆದಾಗಿ ಕರಪ್ಷನ ನಿಲ್ಲುತ್ತದೆ. ಜೊತೆಗೆ ನೀವು ಅಕೌಂಟ ಪೇ ಮಾಡುವಾಗ ನಿಮ್ಮ ಬ್ಯಾಂಕ್ ಟ್ರಾಂಜಿಷನಗಳು ಹೆಚ್ಚಾಗುತ್ತವೆ, ಇದರಿಂದ ನಿಮ್ಮ ಸಿಬಿಲ್ ಸ್ಕೋರ ಹೆಚ್ಚಾಗುತ್ತದೆ. ನಿಮಗೆ ಲೋನ ಬೇಕಾದರೆ ಈಜಿಯಾಗಿ ಸಿಗುತ್ತದೆ. ನೀವು ಇವರಿಗೇನೆ ಹಣ ಕೊಟ್ಟಿರುವಿರಿ ಎಂಬುದಕ್ಕೆ ಪ್ರೂಫ್ ಇರುತ್ತದೆ. ಒಂದು ವೇಳೆ ಇನಕಮ ಟ್ಯಾಕ್ಸ ಡಿಪಾರ್ಟ್ಮೆಂಟನವರು ನೋಟಿಸ ಕಳುಹಿಸಿದರೆ ನೀವು ಈಜಿಯಾಗಿ ಆ್ಯನ್ಸರ ಮಾಡಿ ಬಚಾವಾಗಬಹುದು. ಒಂದು ವೇಳೆ ನಿಮ್ಮಿಂದ ಹಣ ತೆಗೆದುಕೊಂಡ ವ್ಯಕ್ತಿ ನಿಮಗೆ ಉಲ್ಟಾ ಹೊಡೆದರೆ ಅವನ ಮೇಲೆ ನೀವು ಆ್ಯಕ್ಷನ್ ತೆಗೆದುಕೊಳ್ಳಬಹುದು. ನಿಮ್ಮ ಜೀವ ಸಹ ಉಳಿಯಬಹುದು. ಯಾಕೆ ಹೀಗೆ ಹೇಳ್ತಾಯಿದಿನಿ ಅಂತಾ ಈ ಸಣ್ಣ ರಿಯಲ ಇನ್ಸಿಡೆಂಟ್ ಮೂಲಕ ಎಕ್ಸಪ್ಲೇನ ಮಾಡ್ತೀನಿ ಕೇಳಿ.

ತೀರಾ ಇತ್ತೀಚಿಗೆ ಅಂದರೆ ಎರಡ್ಮೂರು ತಿಂಗಳುಗಳ ಹಿಂದಿನ ಇನ್ಸಿಡೆಂಟ ಇದು. ಡೆಲ್ಲಿಯಲ್ಲಿರುವ ಒಬ್ಬ ಯಂಗ ಬಿಜನೆಸಮ್ಯಾನ ಹುಡುಗ ಅವನಿಗೆ ಆಗತಾನೇ ಪರಿಚಯವಾದ ಗರ್ಲಫ್ರೆಂಡಳಿಗೆ 1 ಲಕ್ಷ ಹಣವನ್ನು ATMನಿಂದ ನಾಲ್ಕೈದು ದಿನ ಡ್ರಾ ಮಾಡಿ ಕ್ಯಾಷನಲ್ಲಿ ಕೊಟ್ಟಿದ್ದನು. ಆ ಹುಡುಗಿ ತನ್ನ ತಂದೆಗೆ ಹುಷಾರಿಲ್ಲ ಅಂತೇಳಿ ಅವನಿಂದ ಕ್ಯಾಷನಲ್ಲಿ 1 ಲಕ್ಷ ಹಣವನ್ನು ತೆಗೆದುಕೊಂಡಿದ್ದಳು. ಹಣ ತೆಗೆದುಕೊಂಡು ಆ ಹುಡುಗಿ ಅವನ ರಿಲೆಷನಶೀಪನ್ನು ಕಟ ಮಾಡಿಕೊಂಡಳು. ಹಣ ತೆಗೆದುಕೊಂಡು ಒಂದು ವರ್ಷವಾದರೂ ಅವಳು ತೆಗೆದುಕೊಂಡ ಹಣವನ್ನು ರಿಟರ್ನ ಮಾಡದಿರುವಾಗ ಆ ಹುಡುಗ ಅವನ ಎಕ್ಸ ಗರ್ಲಫ್ರೆಂಡಳಿಗೆ ಹಣ ಕೊಡುವಂತೆ ಕೇಳಲು ಪ್ರಾರಂಭಿಸಿದನು. ಎಷ್ಟೇ ಕೇಳಿದರೂ ಅವಳು ಹಣ ಕೊಡದಿದ್ದಾಗ ಆತ ಅವಳಿಗೆ 48 ಗಂಟೆಗಳ ಟೈಮ ಕೊಟ್ಟನು. ಆದರೆ ಅವಳು ಹಣ ಕೊಡುವ ಬದಲು ಅವನನ್ನು ಮೀಟಾಗಿ ಕಾರಲ್ಲಿ ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡು ಅವನ ಮೇಲೆ ರೇಪ ಅಟೆಂಪ್ಟ ಕೇಸ ಹಾಕುವುದಾಗಿ ಹೆದರಿಸಿದಳು. ಹಣ ಕೊಡಲ್ಲ ಅಂತೇಳಿ ಹೋದಳು.

ಆ ಹುಡುಗನತ್ರ ಅವಳಿಗೆ ಹಣ ಕೊಟ್ಟಿದಕ್ಕೆ ಯಾವುದೇ ಪ್ರೂಫ್ಸಗಳಿರಲಿಲ್ಲ. ಅವಳಿಗೆ ಮತ್ತು ಅವನಿಗಷ್ಟೇ ಅದು ಗೊತ್ತಿತ್ತು. ಆತ ATMನಿಂದ 1 ಲಕ್ಷ ಡ್ರಾ ಮಾಡಿದಕ್ಕೆ ಪ್ರೂಫ್ಸಯಿತ್ತು. ಆದರೆ ಡ್ರಾ ಮಾಡಿದ ಹಣವನ್ನು ಅವಳಿಗೇನೆ ಕೊಟ್ಟಿದ್ದಾನೆ ಎನ್ನುವುದಕ್ಕೆ ಅವನತ್ರ ಯಾವುದೇ ಪ್ರೂಫ್ಸ ಇರಲಿಲ್ಲ. ಏಕೆಂದರೆ ಆತ ಕ್ಯಾಷನಲ್ಲಿ ಕೊಟ್ಟಿದ್ದನು. ಅಕೌಂಟ ಟ್ರಾನ್ಸಫರ ಮಾಡಿದ್ದರೆ ಪ್ರೂಫ್ಸ ಇರುತ್ತಿತ್ತು. ಆ ಹುಡುಗ ಹೋದರೆ ಹೋಗಲಿ ಅಂತಾ ಆ ಹುಡುಗಿಯ ಜೊತೆಗೆ ಒಂದು ಲಕ್ಷ ಹಣದ ಆಸೆಯನ್ನು ಸಹ ಬಿಟ್ಟನು. ಆದರೆ ಅವಳು ಅವನನ್ನು ಅಷ್ಟಕ್ಕೆ ಬಿಡಲಿಲ್ಲ. ಹುಡುಗ ಹೆದರಿದ್ದಾನೆ ಅಂತಾ ಗೊತ್ತಾದ ತಕ್ಷಣವೇ ತನ್ನ ಹೊಸ ಬಾಯಫ್ರೆಂಡ ಜೊತೆಗೆ ಸೇರಿ ಮತ್ತೆ ಎರಡು ಲಕ್ಷ ಹಣವನ್ನು ಕ್ಯಾಷನಲ್ಲಿ ಕೊಡುವಂತೆ ಡಿಮ್ಯಾಂಡ ಮಾಡಿದಳು. 24 ಗಂಟೆಯೊಳಗೆ ಹಣ ಕೊಡದಿದ್ದರೆ ರೇಪ ಅಟೆಂಪ್ಟ ಕೇಸ ಹಾಕುವೆ ಅಂತಾ ಬ್ಲ್ಯಾಕ್ಮೇಲ ಮಾಡಿದಳು. ಆ ಹುಡುಗನಿಗೆ ಟೆನ್ಶನನಲ್ಲಿ ಏನು ಮಾಡಬೇಕು ಎಂಬುದು ಗೊತ್ತಾಗದೇ ಆತ ಇನಸ್ಟಾಗ್ರಾಮಲ್ಲಿ ಲೈವ ಬಂದು ನೇಣು ಹಾಕಿಕೊಂಡು ಸತ್ತನು. ಒಂದು ವೇಳೆ ಹಣ ಕೊಟ್ಟಿದ್ದಕ್ಕೆ ಅವನ ಬಳಿ ಪ್ರೂಫ್ ಇದ್ದರೆ ಆತ ಫೈಟ ಮಾಡಿ ಬದುಕುತ್ತಿದ್ದನೋ ಏನೋ.

ನೋಡಿದ್ರಲ್ಲ ಗೆಳೆಯರೇ, ಪ್ರೂಫ್ಸ ಇಟ್ಟುಕೊಳ್ಳದೇ ಕ್ಯಾಷನಲ್ಲಿ ಯಾರಿಗಾದರೂ ಹಣವನ್ನು ಕೊಟ್ಟರೆ ಪ್ರಾಣ ಕೂಡ ಹೋಗುತ್ತೆ ಅಂತಾ. ಸೋ ಗೆಳೆಯರೇ, ಯಾರಿಗಾದರೂ ಹಣ ಕೊಡುವಾಗ ಕ್ಯಾಷನಲ್ಲಿ ಕೊಡಬೇಡಿ, ಯಾರಿಂದಲಾದರೂ ತೆಗೆದುಕೊಳ್ಳುವಾಗಲೂ ಸಹ ಕ್ಯಾಷನಲ್ಲಿ ತೆಗೆದುಕೊಳ್ಳಿ. ಅಕೌಂಟ ಪೇ ಮಾಡಿಸಿಕೊಳ್ಳಿ. ನೀವು ಸೇಫಾಗಿರುತ್ತೀರಿ, ಜೊತೆಗೆ ಕರಪ್ಷನ ಕೂಡ ಕಡಿಮೆಯಾಗುತ್ತದೆ. ಈ ಜಗತ್ತಿನಲ್ಲಿ ಹಣಕ್ಕಾಗಿ ಯಾವಾಗ ಏನು ಬೇಕಾದರೂ ಆಗುತ್ತೆ. ಅದಕ್ಕಾಗಿ ಏನಿಟೈಮ ಅಲರ್ಟಾಗಿರಿ. All the Best and Thanks You....