
ಹಾಯ್ ಗೆಳೆಯರೇ, ಕಾಲೇಜ ಸ್ಟೂಡೆಂಟ್ಸಗಳಿಂದ ಲವ್ ಮಾಡಬೇಕಾ? ಮಾಡಬಾರದಾ? ಮಾಡಿದರೆ ಎಂಥವರನ್ನು ಮಾಡಬೇಕು? ಕಾಲೇಜಿನಲ್ಲಿರುವಾಗ ಲವ್ ಮಾಡೋದು ತಪ್ಪಾ? ಎಂಬಿತ್ಯಾದಿ ಟಿಪಿಕಲ್ ಪ್ರಶ್ನೆಗಳು ಬಂದಿವೆ. ಅವುಗಳ ಬಗ್ಗೆ ಇವತ್ತಿನ ಎಪಿಸೋಡನಲ್ಲಿ ಡಿಸ್ಕಸ ಮಾಡುವೆ. ಲೆಟ್ಸ ಬಿಗಿನ್...

ಕಾಲೇಜಿನಲ್ಲಿರುವಾಗ ಲವ್ ಮಾಡೋದು ತಪ್ಪಾ? ಎಂಬ ಪ್ರಶ್ನೆಗೆ ನನ್ನ ಅಭಿಪ್ರಾಯ ಇಂತಿದೆ. ಲವ್ ಮಾಡೋದು ತಪ್ಪಲ್ಲ, ಕಾಲೇಜಿನಲ್ಲಿರುವಾಗಲೂ ಲವ್ ಮಾಡೋದು ತಪ್ಪಲ್ಲ. ಯಾವಾಗಲೂ ಲವ್ ಮಾಡೋದು ತಪ್ಪಲ್ಲ. ಪ್ರೀತಿ ಇರುವುದರಿಂದಲೇ ಈ ಜಗತ್ತಿನಲ್ಲಿ ಮನುಷ್ಯರಿನ್ನೂ ಬದುಕಿದ್ದಾರೆ. ಪ್ರೀತಿಯಿರದಿದ್ದರೆ ಹೊಡೆದಾಡಿ ಮಣ್ಣಾಗಿ ಅಳಿದು ಹೋಗುತ್ತಿದ್ದರು. ಸೋ ನಾನು ಪ್ರೀತಿಯನ್ನು ಯಾವತ್ತು ದ್ವೇಷಿಸಲ್ಲ. ಕಾಲೇಜಿನಲ್ಲಿರುವಾಗ ಲವ್ ಮಾಡೋದು ತಪ್ಪಲ್ಲ. ಬಟ್ ಕಾಲೇಜನಲ್ಲಿರುವಾಗ ಈ ಲವ್ವು ಗಿವ್ವು, ಪ್ರೀತಿ ಗೀತಿ ಇತ್ಯಾದಿಗಳ ಗೋಜಿಗೆ ಹೋಗಿ ಫಜೀತಿ ಅನುಭವಿಸದಿರುವುದು ಬೆಟರ್ ಅನ್ನೋದು ನನ್ನ ಪರ್ಸನಲ್ ಒಪಿನಿಯನ್ ಆಗಿದೆ. ಅದಕ್ಕೆ ಸೂಕ್ತ ಕಾರಣಗಳನ್ನು ಸಹ ಕೊಡುವೆ. ಅವುಗಳನ್ನು ಅರ್ಥಮಾಡಿಕೊಂಡು ಆನಂತರ ನಿಮಗೆ ತಿಳಿದಂತೆ ಮಾಡಿ. ಕಾಲೇಜಿನಲ್ಲಿರುವಾಗ ಯಾಕೆ ಲವ್ ಮಾಡಬಾರದು ಅನ್ನೋದಕ್ಕೆ ನನ್ನ ಕಾರಣಗಳು ಇಂತಿವೆ ;

1) ಟೀನೇಜಲ್ಲಿ ಆಗೋ ಲವ್ ಮೊಸ್ಟ ಆಫ್ ದ ಕೇಸಗಳಲ್ಲಿ ಲವ್ವೇ ಆಗಿರಲ್ಲ. ಅದು ಜಸ್ಟ ಫಿಜಿಕಲ ಅಟ್ರ್ಯಾಕ್ಷನ ಆಗಿರುತ್ತದೆ. ಸಿನಿಮಾ ಅಥವಾ ಲವ್ ಸ್ಟೋರಿಯಿಂದ ಇನ್ಸಪಾಯರಾಗಿ ಲವ್ ಮಾಡಬೇಕು ಅಂತಾ ಎಲ್ಲರಿಗೂ ಅನಿಸುತ್ತೆ. ಆಗ ನಿಜವಾದ ಲವ್ ಎಂದರೇನು ಗೊತ್ತಿಲ್ಲದ ನೀವು ಲವ್ವು ಲವ್ವು ಅಂತಾ ಕಂಡ ಕಂಡ ಹುಡುಗಿಯರ ಹಿಂದೆ ಅಲೆಯಲು ಪ್ರಾರಂಭಿಸುತ್ತೀರಿ. ಪ್ರೀತಿಸುವಂತೆ ಬೇಡಿಕೊಳ್ಳುತ್ತೀರಿ, ಹುಡುಗಿಯರನ್ನು ಪಟಾಯಿಸಲು ಹರಸಾಹಸ ಮಾಡುತ್ತೀರಿ. ಸೋ ಇದು ಲವ್ವಲ್ಲ. ನಿಜವಾದ ಲವ್ ಈ ರೀತಿ ಆಗಲ್ಲ. ಪ್ರೀತಿ ಭಿಕ್ಷೆ ಬೇಡಿ ಪಡೆಯುವ ವಸ್ತುವಲ್ಲ. ಪ್ರೀತಿ ನ್ಯಾಚುರಲ್ಲಾಗಿ ಆಗಬೇಕು, ನಾವಾಗಿಯೇ ಏನೇನೋ ಇಮ್ಯಾಜಿನೇಷನ್ ಮಾಡಿಕೊಂಡು ಕೆರೆದು ಕೆರೆದು ಮಾಡಿಕೊಳ್ಳೋ ಗಾಯ ಅಲ್ಲ. ನಿಜವಾದ ಪ್ರೀತಿಯಾಗಲು ಸಿಕ್ಕಾಪಟ್ಟೆ ಟೈಮ & ಕಮ್ಮಿಟಮೆಂಟ ಬೇಕಾಗುತ್ತದೆ. ಅದರ ಜವಾಬ್ದಾರಿ ನಿಭಾಯಿಸೋಕೆ ಹಣ ಬೇಕಾಗುತ್ತದೆ. ನೀವೇ ನಿಮ್ಮಪ್ಪನ ದುಡ್ಡಲ್ಲಿ ಓದ್ತಾಯಿರ್ತಿರಾ. ಸೋ ಟೈಮ, ಕಮ್ಮಿಟಮೆಂಟ & ಮನಿ ಈ ಮೂರು ನಿಮ್ಮತ್ರ ಇರಲ್ಲ. ಅದಕ್ಕೆ ಕಾಲೇಜಿನಲ್ಲಿರುವಾಗ ಲವ್ ಮಾಡೋದು ಬೆಟರ್ ಅಲ್ಲ.

2) ಟೀನೇಜಲ್ಲಿ ಎಲ್ಲ ಫೀಲಿಂಗ್ಸಗಳು ಟೆಂಪರರಿಯಾಗಿರುತ್ತವೆ. ನಿಮ್ಮ ಸ್ನೇಹ ಹಾಗೂ ಪ್ರೀತಿಗಳು ಸಹ ಜಸ್ಟ ಟೆಂಪರರಿ ಫೀಲಿಂಗ್ಸ ಆಗಿರುತ್ತವೆ. ದೇಹದಲ್ಲಿ ಹಾರ್ಮೋನುಗಳ ಹಾರಾಟ ಶುರುವಾದಾಗ ಹಾಗೇ ಏನೇನೋ ಅನ್ನಿಸಲು ಶುರುವಾಗುತ್ತದೆ. ಅಂಥದರಲ್ಲಿ ಡೋಪಮಿನನಿಂದ ಬೇರೆಯವರ ಮೇಲೆ ಪ್ರೀತಿಯಾದಂತೆ ಅನಿಸುತ್ತೆ ಅಷ್ಟೇ. ನಂತರ ಕಾಲೇಜ ಎಜ್ಯುಕೇಷನ ಮುಗಿದ ಮೇಲೆ ಲೈಫಿನ ರಿಯಾಲಿಟಿ ಗೊತ್ತಾಗುತ್ತದೆ. ಆಗ ಬದುಕು ಕಟ್ಟಿಕೊಳ್ಳುವುದು ದೊಡ್ಡ ಸಾಹಸವಾಗುತ್ತದೆ. ಆವಾಗ ಕಾಲೇಜಲ್ಲಿರುವ ಯಾವ ಫ್ರೆಂಡ್ಸ, ಲವರ್ ಪ್ರಯೋಜನಕ್ಕೂ ಬರಲ್ಲ, ನೆನಪಿಗೂ ಬರಲ್ಲ. ಸೋ ಟೆಂಪರರಿ ಫಿಲಿಂಗ್ಸಗಳಿಗೆ ಬಲಿಯಾಗಿ ದೊಡ್ಡ ಲೈಫನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಸೋ ಕಾಲೇಜಿನಲ್ಲಿರುವಾಗ ಲವ್ ಬೇಡ.

3) ಭಾರತೀಯ ಮ್ಯಾರೇಜ ಕಾನೂನಿನ ಪ್ರಕಾರ 18-21 ಏಜ ರೂಲಿದೆ. ಮದುವೆಯಾಗುವ ಹುಡುಗಿಗೆ ಹದಿನೇಂಟಾಗಿರಬೇಕು, ಹುಡುಗನಿಗೆ ಇಪ್ಪತ್ತೋಂದಾಗಿರಬೇಕು. ಹೀಗಿರುವಾಗ ನೀವು ಕಾಲೇಜಿನಲ್ಲಿರುವಾಗ ಅಂದರೆ ಡಿಗ್ರಿ ಫಸ್ಟ ಸೆಮೆಸ್ಟರನಲ್ಲಿರುವಾಗ ಯಾವುದಾದರೂ ಹುಡುಗಿನಾ ಲವ್ ಮಾಡ್ತಾ ಇದಿರಾ, ಅವಳು ನಿಮ್ಮನ್ನು ಲವ್ ಮಾಡ್ತಿದಾಳೆ ಅಂತಾ ಅನ್ಕೋಳಿ. ನಿಮ್ಮ ಲವ್ ಮ್ಯಾಟರ್ ಅವಳ ಮನೆಯಲ್ಲಿ ಗೊತ್ತಾಗುತ್ತೆ. ಕೂಡಲೇ ಅವಳ ಮನೆಯವರು ಅವಳ ಕಾಲೇಜ ಬಿಡಿಸಿ ಅವಳ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ. ಆನಂತರ ನಿಮಗೆ 21 ಆಗುವಷ್ಟರಲ್ಲಿ ನಿಮ್ಮ ಎಕ್ಸ ಲವರಗೆ ಎರಡು ಮಕ್ಕಳಾಗಿರುತ್ತವೆ. ಸೋ ಇತ್ತ ಅವಳ ಲೈಫು ಹಾಳಾಗುತ್ತೆ, ನಿಮ್ಮ ಲೈಫು ಹಾಳಾಗುತ್ತೆ. ಇಬ್ಬರು ಗೋಲ್ಡನ್ ಟೈಮನ್ನು ಕೊರಗು ಹಾಗೂ ಕಣ್ಣೀರಲ್ಲಿ ವೇಸ್ಟ ಮಾಡುತ್ತೀರಿ. ಸೋ ಇದು ಬೇಕಾ? ನೀವಿಬ್ಬರು ಓಡಿ ಹೋಗಿ ಮದುವೆಯಾಗ್ತೀನಿ ಅಂದ್ರೂ ಕಾನೂನು ಒಪ್ಪಲ್ಲ. ಮದುವೆಯಾದ ನಂತರ ಜೀವನ ಸಾಗಿಸಲಾಗದೆ ಸುಳ್ಳು ಡೆಥನೋಟ ಬರೆದಿಟ್ಟು ನೀವು ಗ್ಯಾರಂಟಿ ಸೂಸೈಡ ಮಾಡಿಕೊಳ್ತಿರಿ ಅಷ್ಟೇ. ಇಂಥ ಲೈಫ ಬೇಕಾ? ಸೋ ಸರಿಯಾಗಿ ಯೋಚನೆ ಮಾಡಿ. ಕಾಲೇಜಿನಲ್ಲಿರುವಾಗ ಲವ್ ಮಾಡಿ ಲೈಫ ವೇಸ್ಟ ಮಾಡಿಕೊಳ್ಳುವ ಬದಲು ಒಳ್ಳೇ ಫ್ರೆಂಡಶೀಪ ಮಾಡಿ. ಇಬ್ಬರು ಸೇರಿ ಚೆನ್ನಾಗಿ ಸ್ಟಡಿ ಮಾಡಿ. ಬೇಗನೆ ಜಾಬ್ ಹಿಡಿದು ಲೈಫಲ್ಲಿ ಬೇಗನೆ ಸೆಟ್ಲಾಗಿ. ಆಮೇಲೆ ಸೀದಾ ಮದುವೆಯಾಗಿ ಜೀವನಪೂರ್ತಿ ಲವ್ ಮಾಡಿ. ಎಲ್ಲ ಬಿಟ್ಟು ಹೇಡಿಗಳ ತರಹ ಓಡೋಗಿ ಮದುವೆಯಾಗಿ ಆರ್ಡಿನರಿಗಳಾಗಿ ಬದುಕಬೇಡಿ. ಪ್ರೀತಿ ಮಾಡಿ ಓಡೋಗಿ ಮದುವೆಯಾಗುವ ಅವಶ್ಯಕತೆ ಇಲ್ಲ. ಮೊದಲು ಕರಿಯರ ಬಿಲ್ಡ ಮಾಡಿ ಆಮೇಲೆ ಎಲ್ಲರೂ ನಿಮ್ಮ ಪ್ರೀತಿಗೆ, ಮದುವೆಗೆ ಖಂಡಿತ ಸಪೋರ್ಟ್ ಮಾಡ್ತಾರೆ. ಯಾರು ಸಪೋರ್ಟ್ ಮಾಡದಿದ್ರೆ ನಾನು ಸಪೋರ್ಟ್ ಮಾಡ್ತೀನಿ. ನೀವು ಮೊದಲು ಲೈಫಲ್ಲಿ ಸರಿಯಾಗಿ ಸೆಟ್ಲಾಗಿ ಸಾಕು.

4) ಕಾಲೇಜಿನಲ್ಲಿರುವಾಗ ನಿಮ್ಮ ಫುಲ್ ಫೋಕಸ್ ಸ್ಟಡಿ ಮೇಲಿರಬೇಕು. ಲವ್ ಮೇಲೆ ಅಲ್ಲ. ಸೋ ಸ್ಟಡಿ ಮೇಲೆ ಮಾತ್ರ ಫೋಕಸ ಮಾಡಿ. ಕಾಲೇಜಿನಲ್ಲಿರುವಾಗ ಈ ಲವ್ವು ಗಿವ್ವುಗಳನ್ನು ಸ್ಯಾಕ್ರಿಫೈಸ ಮಾಡಿ ಸರಿಯಾಗಿ ಸ್ಟಡಿ ಮಾಡಿ ಚೆನ್ನಾಗಿ ಸೆಟ್ಲಾದರೆ ಲೈಫಲಾಂಗ ಒದೆ ಬೀಳುವುದು ತಪ್ಪುತ್ತದೆ. ಕಾಲೇಜಿನಲ್ಲಿರುವಾಗ ಕಷ್ಟ ಬಿದ್ದು ಓದಿದರೆ ದೇವರ ವಿಗ್ರಹದ ಕಲ್ಲಾಗುತ್ತೀರಾ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಕಾಲೇಜಿನಲ್ಲಿರುವಾಗ ನೀವು ಟೈಮ ವೇಸ್ಟ ಮಾಡಿದರೆ ನೀವು ತೆಂಗಿನಕಾಯಿ ಒಡೆಯುವ ಕಲ್ಲಾಗುತ್ತೀರಾ, ಎಲ್ಲರೂ ನಿಮ್ಮ ತಲೆ ಮೇಲೆ ಕಾಯಿ ಒಡೆಯುತ್ತಾರೆ, ನಿಮ್ಮ ಮುಂದೆ ಚಪ್ಪಲಿಗಳನ್ನು ಬಿಡುತ್ತಾರೆ. ನಿಮ್ಮ ಜೀವನ ಹೀಗಾಗಬಾರದು ಅಂದ್ರೆ ಕಾಲೇಜ ಲೈಫಲ್ಲಿ ಸ್ಟಡಿ ಅಷ್ಟೇ ಮಾಡಿದರೆ ಬೆಟರ್ ಆಗಿದೆ.

5) ಇನ್ನೂ ನಿಮಗೆ ಕೊನೆಯದಾಗಿ ಹೇಳಬೇಕೆಂದರೆ ಕಳೆದು ಹೋದ ಟೈಮ ಯಾವುದೇ ಕಾರಣಕ್ಕೂ ಯಾರಿಗೂ ವಾಪಸ ಬರಲ್ಲ. ನೀವು ಕಾಲೇಜಿನಲ್ಲಿರುವಾಗ ಮೈಂಡ ಗ್ರೋ ಮಾಡುವ ಬದಲು, ನಾಲೇಜ ಅಕ್ವೈರ ಮಾಡುವ ಬದಲು, ಕರಿಯರ್ ಬಿಲ್ಡ ಮಾಡುವ ಬದಲು ಬರೀ ಲವ್ ಅಂತಾ ಮೆಂಟಲ ಆದರೆ ನಿಮ್ಮ ಲೈಫ ಆರ್ಡಿನರಿಯಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಮುಂದೆ ನಿಮಗೆ ಹೆಣ್ಣು ಹುಡುಕಲು ನಿಮ್ಮ ಅಪ್ಪ ಅಮ್ಮನಿಗೆ ನಾಚಿಕೆ ಬರುತ್ತದೆ. ಏಕೆಂದರೆ ಗವರ್ನಮೆಂಟ್ ಜಾಬ ಇರದಿದ್ರೆ ಯಾರು ಈಜಿಯಾಗಿ ಹೆಣ್ಣು ಕೊಡಲ್ಲ. ನಿಮ್ಮತ್ರ ಹಣ ಇರದಿದ್ರೆ ಯಾವ ಹುಡುಗಿನೂ ಲವ್ ಮಾಡಲ್ಲ, ಮದುವೆಯಾಗ್ತೀನಿ ಅಂತಾ ಅನ್ನಲ್ಲ. ನಿಮ್ಮತ್ರ ಏನಾದರೂ ಸ್ಪೆಷಲ್ ಟ್ಯಾಲೆಂಟ್ ಇದ್ದರೆ ನಿಮ್ಮನ್ನು ಪ್ರೀತಿಸುವ ಹುಡುಗಿ ನಿಮ್ಮ ಜೊತೆ ಲೈಫ ಶೇರ್ ಮಾಡಬಹುದು. ನಿಮ್ಮತ್ರ ಗವರ್ನಮೆಂಟ್ ಜಾಬೂ ಇಲ್ಲ, ಟ್ಯಾಲೆಂಟು ಇಲ್ಲ, ದುಡ್ಡು ಇಲ್ಲ ಅಂದ್ರೆ ನಿಮ್ಮ ಮದುವೆ ಗೋಲಮಾಲ ಸ್ಕೀಮಗಿಂತ ಏನು ಕಮ್ಮಿಯಿರಲ್ಲ. ನಿಮ್ಮ ಮದುವೆ ಖಂಡಿತ ಸುಳ್ಳಿನ ಸಂತೆಯಾಗುತ್ತದೆ, ಜೀವನ ಹರಿದೋದ ಚಡ್ಡಿಗಿಂತ ಕಡೆಯಾಗುತ್ತದೆ. ನೀವು ಜಾಬಲೆಸ ಆಗಿರೋ ಹುಡುಗಿಯನ್ನು ಮದುವೆಯಾಗಬಹುದು. ಆದರೆ ನೀವೇ ಜಾಬಲೆಸ ಆದರೆ ಯಾವ ಹುಡುಗಿನೂ ನಿಮ್ಮನ್ನು ಮದುವೆಯಾಗಲು ಮುಂದೆ ಬರಲ್ಲ. ಈಗಾಗಲೇ ಎಷ್ಟೋ ಜನರಿಗೆ ಯಾಕೆ ಮದುವೆಯಾಗ್ತಿಲ್ಲ ಅಂತಾ ಸ್ವಲ್ಪ ನಿಮ್ಮ ಅಕ್ಕಪಕ್ಕ ನೋಡಿ ನಿಮಗೆ ಏನು ಮಾಡಬೇಕು ಏನು ಮಾಡಬಾರದು ಅಂತಾ ಚೆನ್ನಾಗಿ ಗೊತ್ತಾಗುತ್ತದೆ.

ಓಕೆ ಗೆಳೆಯರೇ, ಇದೀಷ್ಟು ಕಾಲೇಜ ಲವ್ ಬಗ್ಗೆ ನನ್ನ ಪರ್ಸನಲ್ ಅಭಿಪ್ರಾಯ. ನೀವು ಸರಿಯಾಗಿ ಯೋಚನೆ ಮಾಡಿ, ಸರಿಯಾದ ಡಿಸಿಜನ ತೆಗೆದುಕೊಳ್ಳಿ. ಮೊದಲು ಲೈಫಲ್ಲಿ ಸಕ್ಸೆಸಫುಲ್ಲಾಗಿ ಆನಂತರ ಎಲ್ಲರೂ ಸಂಬಂಧ ಬೆಳೆಸೋಕೆ ನಿಮ್ಮ ಮನೆ ಬಾಗಿಲಿಗೆ ಬರ್ತಾರೆ. ಏನಾದರೂ ಹೆಲ್ಪ ಬೇಕಿದ್ರೆ ಇನಸ್ಟಾಗ್ರಾಮಲ್ಲಿ ನನಗೆ ಮೆಸೆಜ ಮಾಡಿ. ಈ ಟಾಪಿಕ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ ಮಾಡಿ. All the Best and Thanks You...
