ಹಾಯ್ ಗೆಳೆಯರೇ, ಗುಡ್ ಈವನಿಂಗ. ನಿಮಗೆ ಒಂದು ಪ್ರಶ್ನೆ ಕೇಳುವೆ. ಪ್ರಾಮಾಣಿಕವಾಗಿ ಉತ್ತರಿಸಿ. ನಿಮಗೆ ನಿಜವಾಗಿಯೂ ಏನಾದರೂ ಗೋಲ್ಸಗಳಿವೆಯಾ? ನಿಮ್ಮ ಗೋಲಗಳೇನು? ನೀವು ಈಗಾಗಲೇ ಗೋಲಗಳನ್ನು ಸೆಟ್ ಮಾಡಿದ್ದರೆ ತುಂಬಾನೇ ಒಳ್ಳೇ ಡಿಸಿಜನ. ಅದಕ್ಕೆ ನಿಮಗೆ ಕಂಗ್ರ್ಯಾಟ್ಸ. ಒಂದು ವೇಳೆ ನಿಮಗೆ ಯಾವುದೇ ಗೋಲಗಳಿರದಿದ್ರೆ ಇವತ್ತೇ ನಿಮ್ಮ ಗೋಲಗಳನ್ನ ಸೆಟ್ ಮಾಡಿ. ಹಳೆಯ ವರ್ಷ ಹೇಗೋ ವೇಸ್ಟಾಯಿತು. ಈ ಹೊಸ ವರ್ಷವನ್ನು ಸರಿಯಾಗಿ ಯುಜ ಮಾಡಿಕೊಳ್ಳಿ. ಏನಾದರೂ ಒಂದು ದೊಡ್ಡ ಗೋಲನ್ನು ಸೆಟ್ ಮಾಡಿ. ಗೋಲ ಸೆಟ್ ಮಾಡದಿದ್ದರೆ ನಿಮ್ಮ ಲೈಫ ಸೂತ್ರವಿಲ್ಲದ ಗಾಳಿಪಟದಂತೆ ಗಾಳಿ ಬೀಸಿದ ಕಡೆಗೆ ಪಟಪಟನೆ ಹಾರಾಡಿ ಬೇಗನೆ ಹರಿದು ಬೀಳುತ್ತದೆ. ಸೋ ಗೋಲ ಸೆಟ್ ಮಾಡಿ.
ಮೈ ಡಿಯರ್ ಫ್ರೆಂಡ್ ಲೈಫಲ್ಲಿ ದೊಡ್ಡ ಗುರು ಇರದಿದ್ದರೂ ಪರವಾಗಿಲ್ಲ, ಅಟಲಿಸ್ಟ ದೊಡ್ಡ ಗೋಲ ಆದ್ರೂ ಇರಬೇಕು. ಅದೇ ನಮಗೆ ಗುರುವಾಗುತ್ತದೆ. ನಮಗೆ ನಮ್ಮ ಲೈಫಲ್ಲಿ ದೊಡ್ಡ ಗೋಲಿದ್ದರೆ ನಾವು ದಾರಿ ತಪ್ಪಲ್ಲ, ಯಾವುದೇ ದುಶ್ಚಟಗಳಿಗೆ ಅಂಟಿಕೊಳ್ಳಲ್ಲ. ಸುಮ್ಮನೆ ಫಾಲ್ತು ಟೈಮಪಾಸಗಳನ್ನ ಮಾಡಲ್ಲ. ಯುಜಲೆಸ ಫ್ರೆಂಡಶೀಪಗಳನ್ನ, ಟಾಕ್ಸಿಕ ರಿಲೆಷನಶೀಪಗಳನ್ನು ಮಾಡಲ್ಲ. ನಮಗೆ ಗೋಲಗಳಿದ್ದರೆ ನಾವು ನಮ್ಮ ಲೈಫಲ್ಲಿ ಸರಿಯಾಗಿರುತ್ತೇವೆ, ಸಕ್ಸೆಸಫುಲ್ಲಾಗಿರುತ್ತೇವೆ.
ಅಡ್ರೆಸ ಬರೆಯದೇ ಲೆಟರನ್ನು ಪೋಸ್ಟ ಮಾಡುವುದು, ಡೆಸ್ಟಿನೇಷನ ಗೊತ್ತಿಲ್ಲದೆ ಟ್ರಾವೆಲ ಮಾಡುವುದು, ಗೋಲ ಇಲ್ಲದೆ ಜೀವನ ಸಾಗಿಸೋದು ಎಲ್ಲ ಒಂದೇ. ನಾನು ಗ್ಯಾರೆಂಟೆಡ್ಡಾಗಿ ಹೇಳುವೆ ನಿಮಗೆ ನಿಮ್ಮ ಲೈಫಲ್ಲಿ ಗೋಲ ಇರದಿದ್ದರೆ ನಿಮ್ಮ ಬ್ಯಾಂಕ ಬ್ಯಾಲನ್ಸ 5 ಲಕ್ಷಕ್ಕಿಂತಲೂ ಕಮ್ಮಿಯಾಗಿರುತ್ತದೆ, ನಿಮ್ಮ ಲೈಫ ಆರ್ಡಿನರಿಯಾಗಿರುತ್ತದೆ. ಡೌಟಿದ್ರೆ ಒಂದ್ಸರ್ತಿ ನಿಮ್ಮ ಲೈಫನ್ನು ಅನಲೈಜ ಮಾಡಿಕೊಳ್ಳಿ. ಇಷ್ಟು ದಿನ ಆದದ್ದು ಆಯ್ತು. ಈಗಲಾದರೂ ದೊಡ್ಡ ಗೋಲಗಳನ್ನು ಸೆಟ್ ಮಾಡಿ. ನೀವು ಮುಂದಿನ ಐದು ವರ್ಷದಲ್ಲಿ ನಿಮ್ಮನ್ನು ನೀವು ಯಾವ ಹೈಯೆಸ್ಟ ಪೋಜಿಷನನಲ್ಲಿ ನೋಡುವಿರಿ? ಯಾವ ಕಾರ ತೆಗೆದುಕೊಳ್ಳುವಿರಿ? ಎಂಥ ಮನೆ ಕಟ್ಟುವಿರಿ? ಮುಂದಿನ ವರ್ಷದಲ್ಲಿ ಎಷ್ಟು ಹಣವನ್ನು ಗಳಿಸುವಿರಿ? ಎಂಬಿತ್ಯಾದಿ ವಿಷಯಗಳ ಬಗ್ಗೆ ಥಿಂಕ ಮಾಡಿ. ದೊಡ್ಡ ಗೋಲಗಳನ್ನು ಸೆಟ್ ಮಾಡಿ. ಆ ಗೋಲಗಳನ್ನು ಒಂದು ಹಾಳೆಯಲ್ಲಿ ಬರೆದು ನಿಮ್ಮ ಬೆಡರೂಮಲ್ಲಿ ಅಂಟಿಸಿ. ಆ ಗೋಲಗಳಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ. ಖಂಡಿತ ನೀವು ನಿಮ್ಮ ಲೈಫಲ್ಲಿ ಸಕ್ಸೆಸಫುಲ್ಲಾಗಿರುತ್ತೀರಿ, ಹೆಲ್ದಿಯಾಗಿರುತ್ತೀರಿ, ಹ್ಯಾಪಿಯಾಗಿರುತ್ತೀರಿ.
5 ವರ್ಷದ ಲಾಂಗಟರ್ಮ ಗೋಲಗಳನ್ನು ಸೆಟ್ ಮಾಡಿ. ಅವುಗಳನ್ನು ರೀಚ್ ಆಗಲು ಶಾರ್ಟಟರ್ಮ ಗೋಲ ಸೆಟ್ ಮಾಡಿ. ಎವ್ರಿ ಡೇ ಕ್ವೀಕ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಿ. ಎವ್ರಿ ಸೆಕೆಂಡನ್ನು ಸರಿಯಾಗಿ ಯುಜ ಮಾಡಿಕೊಳ್ಳಿ. ಗೋಲ್ಸಗಳು ನಿಮ್ಮ ಫ್ಯುಚರ್ ಲೈಫಿಗೆ ರೋಡ ಮ್ಯಾಪ ಇದ್ದಂಗೆ. ದಿಕ್ಕು ದೆಸೆಯಿಲ್ಲದಂತೆ ಲೈಫಲ್ಲಿ ಟ್ರಾವೆಲ್ ಮಾಡಬೇಡಿ. ಸೋ ಇವತ್ತೇ ನಿಮ್ಮ ಲೈಫಿನ ಗೋಲಗಳನ್ನು ಸೆಟ್ ಮಾಡಿ. ವಿಶ್ ಯು ಹ್ಯಾಪಿ ನ್ಯೂ ಇಯರ್ & ಥ್ಯಾಂಕ ಯು...