ಬ್ರಹ್ಮಚರ್ಯದಿಂದಾಗುವ ಲಾಭಗಳು : Benefits of Brahmacharya
ನೀವು ಅಟಲಿಸ್ಟ 25ನೇ ವರ್ಷದ ತನಕ ಬ್ರಹ್ಮಚರ್ಯವನ್ನು ಪಾಲಿಸಿದರೆ ಖಂಡಿತ ನೀವೊಬ್ಬ ಯಶಸ್ವಿ ವ್ಯಕ್ತಿಯಾಗುತ್ತೀರಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬ್ರಹ್ಮಚರ್ಯದಿಂದಾಗುವ ಮಹಾನ್ ಲಾಭಗಳು ಇಂತಿವೆ ;
1) ನೀವು ಬ್ರಹ್ಮಚರ್ಯವನ್ನು ಪಾಲಿಸಿದರೆ ನಿಮಗೆ ನಿಮ್ಮ ಇಂದ್ರಿಯಗಳ ಮೇಲೆ ಕಂಟ್ರೋಲ ಸಿಗುತ್ತದೆ. ನಿಮ್ಮ ಇಂದ್ರಿಯಗಳು ನಿಮ್ಮ ಕಂಟ್ರೋಲನಲ್ಲಿದ್ದರೆ ನಿಮ್ಮ ಮನಸ್ಸು ಹಾಗೂ ದೇಹ ನೀವು ಹೇಳಿದಂತೆ ಕೇಳುತ್ತವೆ. ಮೊದಲು ನಮ್ಮ ಮನಸ್ಸನ್ನು ಗೆದ್ದರೆ ಜಗತ್ತನ್ನೇ ಗೆದ್ದಂತೆ.
2) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ನೀವು ಮೆಂಟಲಿ ಹಾಗೂ ಫಿಜಿಕಲಿ ಫಿಟ್ಟಾಗುತ್ತೀರಿ. ಮೆಂಟಲಿ ಸ್ಟೇಬಲಾಗುತ್ತಿರಿ. ಇದರಿಂದ ನಿಮಗೆ ನಿಮ್ಮ ಭಾವನೆಗಳ ಮೇಲೆ ಹಿಡಿತ ಸಿಗುತ್ತದೆ. ಜೊತೆಗೆ ಕೋಪ, ತಾಪ, ಚಪಲ, ಚಂಚಲ, ದುರಾಸೆ, ದುಷ್ಟತನ, ದುಶ್ಚಟಗಳಿಂದ ನೀವು ಸೇಫಾಗುತ್ತಿರಿ.
3) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ನಿಮ್ಮ ಫೋಕಸ್ ಹಾಗೂ ಪ್ರೋಡಕ್ಟಿವಿಟಿ ಹೆಚ್ಚಾಗುತ್ತದೆ. ನೀವು ಫೋಕಸ್ಡಾಗಿ ಹೆಚ್ಚಿಗೆ ಕೆಲಸ ಮಾಡುತ್ತೀರಿ. ನಿಮ್ಮ ಫೋಕಸ್ ಹೆಚ್ಚಾದಾಗ ನೀವು ಬೇಗನೆ ನಿಮ್ಮ ಗೋಲಗಳನ್ನು ಅಚೀವ್ ಮಾಡುತ್ತೀರಿ, ಬೇಗನೆ ನಿಮ್ಮ ಲೈಫಲ್ಲಿ ಸೆಟ್ಲಾಗುತ್ತೀರಿ.
4) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ನಿಮ್ಮ ವಿಲ್ ಪವರ್ ಹೆಚ್ಚಾಗುತ್ತದೆ, ಕರೇಜ & ಕಾನ್ಫಿಡೆನ್ಸ ಹೆಚ್ಚಾಗುತ್ತದೆ, ಮೆಮೊರಿ ಪವರ್ ಹೆಚ್ಚಾಗುತ್ತದೆ, ಇಂಟಲಿಜೆನ್ಸ ಹೆಚ್ಚಾಗುತ್ತದೆ, Morality ಅಂದ್ರೆ ನೈತಿಕತೆ ಹೆಚ್ಚಾಗುತ್ತದೆ. ಇದರಿಂದ ನೀವು ನಿಮ್ಮ ಜೀವನದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತೀರಿ. ನಿಮ್ಮ ಲೈಫಲ್ಲಿ ಎಷ್ಟೇ ದೊಡ್ಡ ಪ್ರಾಬ್ಲಲ್ಸಗಳು ಬಂದರೂ ಸಹ ನೀವು ಅವುಗಳನ್ನ ಈಜಿಯಾಗಿ ಫೇಸ್ ಮಾಡಿ ಸಕ್ಸೆಸಫುಲ್ಲಾಗುತ್ತೀರಿ.
5) ಬ್ರಹ್ಮಚರ್ಯ ನಿಮಗೆ ಉನ್ನತ ಮಟ್ಟದ ನಾಲೇಡ್ಜನ್ನು ಸಂಪಾದಿಸಲು ಸಹಾಯ ಮಾಡುತ್ತದೆ. ಜೊತೆಗೆ ನೀವು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಬಲಿಷ್ಟರಾಗುತ್ತೀರಿ. ನಿಮ್ಮಲ್ಲಿ ಒಂದು ಸ್ಪೆಷಲ್ ನಾಲೇಡ್ಜ ಡೆವಲಪ ಆಗುತ್ತದೆ. ನಿಮ್ಮತ್ರ ನಾಲೇಡ್ಜಯಿದ್ದರೆ ನೀವು ಬಯಸಿದ್ದೆಲ್ಲವು ನಿಮಗೆ ಸಿಗುತ್ತದೆ.
6) ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ಒಂದು Attractive Body ಹಾಗೂ Attractive Body Language ನಿಮ್ಮದಾಗುತ್ತದೆ. ನಿಮ್ಮ ಮನಸ್ಸಲ್ಲಿ ಶಾಂತಿ, ಮುಖದಲ್ಲಿ ಕಾಂತಿ, ಕಣ್ಣಲ್ಲಿ ಮಿಂಚು ಮೂಡುತ್ತದೆ. ಒಟ್ಟಾರೆಯಾಗಿ ಒಂದು ಹ್ಯಾಪಿ, ಹೆಲ್ದಿ, ವೆಲ್ದಿ & ಸಕ್ಸೆಸಫುಲ ಲೈಫ ನಿಮ್ಮದಾಗುತ್ತದೆ.