Everything About Share Market in Kannada | How to Invest Stock Market | ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

Everything About Share Market in Kannada | How to Invest Stock Market | ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ

Everything About Share Market in Kannada | How to Invest Stock Market | ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ

  ಸ್ಟಾಕ್ ಮಾರ್ಕೆಟನಲ್ಲಿ ಹಣ ಇವೆಸ್ಟ್ ಮಾಡಲು ಕೆಳಗಿನ ಲಿಂಕಗಳ ಮೂಲಕ ಫ್ರಿಯಾಗಿ ಡಿಮ್ಯಾಟ ಅಕೌಂಟ ಓಪನ ಮಾಡಿ ಹಣ ಗಳಿಸಿ.

No1 Broker - Largest stock broker in India

1) Zerodha Link :- https://www.roaringcreationsfilms.com/zerodha/

2) UpStox :- https://www.roaringcreationsfilms.com/upstox/

                           ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಶೇರ್ ಮಾರ್ಕೆಟನ ಬಗ್ಗೆ ಡಿಟೇಲಾಗಿ ತಿಳಿದುಕೊಳ್ಳೊಣಾ. ಶೇರ್ ಎಂದರೇನು? 

ಶೇರ್ ಮಾರ್ಕೆಟ ಎಂದರೇನು? What is Share? in Kannada

ಶೇರ್ ಮಾರ್ಕೆಟ ಹೇಗೆ ಕೆಲಸ ಮಾಡುತ್ತದೆ? What is Share market? in Kannada

ಶೇರ್ ಮಾರ್ಕೆಟ ಸೂಚ್ಯಂಕ ಎಂದರೇನು? 

ಶೇರ್ ಮಾರ್ಕೆಟ ಸೇಫಾಗಿದೆಯಾ?

ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದು ಒಳ್ಳೆಯದಾ? ಕೆಟ್ಟದಾ? How Share market works? in Kannada

ಶೇರ್ ಮಾರ್ಕೆಟನಲ್ಲಿ ಯಾರು ಹಣ ಹೂಡಿಕೆ ಮಾಡಬಹುದು?

ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? 

ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತ ಮುಂಚೆ ಗಮನಿಸಬೇಕಾದ ವಿಷಯಗಳು ಯಾವುವು? ಎಂಬಿತ್ಯಾದಿ ಟಾಪಿಕಗಳ ಬಗ್ಗೆ ಡಿಟೇಲಾಗಿ ತಿಳಿದುಕೊಳ್ಳೊಣಾ. ಲೆಟ್ಸ ಬಿಗಿನ... 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

1) ಶೇರ್ ಎಂದರೇನು? What is Share? 

                         ಶೇರ್ ಎಂದರೆ‌‌ ಪಾಲು ಎಂದರ್ಥ. ನೀವು ಹಣ ಹೂಡಿಕೆ ಮಾಡಿದ ಕಂಪನಿಯಲ್ಲಿ ನಿಮ್ಮ ಪಾಲು ಎಷ್ಟಿದೆ? ಆ ಕಂಪನಿಯಲ್ಲಿ ನಿಮ್ಮ ಒನರಶೀಪ‌ ಎಷ್ಟು ಪರ್ಸೆಂಟೆಜ ಇದೆ?  ಎಂಬುದನ್ನು ತಿಳಿಸುವ ಒಂದು ಡಾಕ್ಯುಮೆಂಟಗೆ ಶೇರ್ ಎನ್ನುವರು. 

ಉದಾಹರಣೆಗೆ ; ನಿಮ್ಮ ಬಳಿ ಯಾವುದಾದರೂ ಕಂಪನಿಯ 10% ಶೇರುಗಳಿದ್ದರೆ ಆ ಕಂಪನಿಯಲ್ಲಿ ‌ನಿಮ್ಮ ಒನರಶೀಪ 10% ಇದೆ‌ ಎಂದರ್ಥ. ಆ ಕಂಪನಿಯ ಪ್ರತಿ ಲಾಭದಲ್ಲಿ ನಿಮಗೆ 10% ಪಾಲಿದೆ ಎಂದರ್ಥ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

2) ಶೇರು ಮಾರುಕಟ್ಟೆ ಎಂದರೇನು? What is Share market? 

                        ಪಬ್ಲಿಕ ಲಿಮಿಟೆಡ್ ಕಂಪನಿಯ ಶೇರುಗಳನ್ನು ಮಾರಾಟ ಮಾಡುವ ಸ್ಥಳಕ್ಕೆ ಶೇರು ಮಾರುಕಟ್ಟೆ ಎನ್ನುವರು.‌ ಇದಕ್ಕೆ ಸ್ಟಾಕ ಮಾರ್ಕೆಟ ಎಂತಲೂ ಕರೆಯುತ್ತಾರೆ. ಇಲ್ಲಿ ನೀವು ಪಬ್ಲಿಕ್‌ ‌ಲಿಮಿಟೆಡ ಕಂಪನಿಯ ‌ಶೇರುಗಳನ್ನು ಕೊಂಡು ಕೊಳ್ಳಬಹುದು ಇಲ್ಲವೇ ಮಾರಾಟ ಮಾಡಬಹುದು. ಪ್ರೈವೆಟ್ ಲಿಮಿಟೆಡ್ ಕಂಪನಿಯ ಶೇರುಗಳನ್ನು ನಿಮಗಿಲ್ಲಿ ಡೈರೆಕ್ಟಾಗಿ ಖರೀದಿಸಲು ಸಾಧ್ಯವಿಲ್ಲ. ನೀವು ಬರೀ ಪಬ್ಲಿಕ್ ಲಿಮಿಟೆಡ್ ಕಂಪನಿಯ ಶೇರುಗಳನ್ನಷ್ಟೇ ಇಲ್ಲಿ ಖರೀದಿಸಬಹುದು. ಹೇಗೆ ವೇಜಿಟೆಬಲ ಮಾರ್ಕೆಟನಲ್ಲಿ ವೇಜಿಟೇಬಲ್ಸ ಮಾರುತ್ತಾರೋ ಅದೇ ರೀತಿ ಶೇರ್ ಮಾರ್ಕೆಟನಲ್ಲಿ ಕಂಪನಿಯ ‌ಶೇರುಗಳನ್ನು ಮಾರುತ್ತಾರೆ. 

ಉದಾಹರಣೆಗೆ : ಭಾರತದಲ್ಲಿ ಎರಡು ಶೇರ್ ಮಾರ್ಕೆಟ ಇವೆ. ಒಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಎರಡನೆಯದ್ದು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

3) ಶೇರ್ ಮಾರ್ಕೆಟ ಹೇಗೆ ಕೆಲಸ ಮಾಡುತ್ತದೆ? How Share market works? 

                                  ಶೇರ್ ಮಾರ್ಕೆಟ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಒಂದು ಸಿಂಪಲ್ ಎಕ್ಸಾಂಪಲ ಮೂಲಕ ತಿಳಿದುಕೊಳ್ಳೊಣಾ. ನಾನು ನನ್ನದೇ ಕಂಪನಿಯ ಎಕ್ಸಾಂಪಲ ಮೂಲಕ ಎಕ್ಸಪ್ಲೇನ ಮಾಡುವೆ. ರೋರಿಂಗ ಕ್ರಿಯೇಷನ್ಸ ಪಬ್ಲಿಕ ಲಿಮಿಟೆಡ್ ಕಂಪನಿಗೆ ತನ್ನ ಬಿಜನೆಸಗಾಗಿ ಒಂದು ದೊಡ್ಡ ಸ್ಟುಡಿಯೋ ಕಟ್ಟಲು 1000 ಕೋಟಿ ರೂಪಾಯಿ ಹಣದ ಅವಶ್ಯಕತೆ ಇದೆ ಅಂತಾ ಅನ್ಕೊಳ್ಳಿ. ಆಗ ಆ ಕಂಪನಿ ಹಣಕ್ಕಾಗಿ ಬ್ಯಾಂಕಗಳತ್ರ ಕೇಳಬಹುದು, ಗವರ್ನಮೆಂಟ್ ಹೆಲ್ಪ ತೆಗೆದುಕೊಳ್ಳಬಹುದು. But ಬ್ಯಾಂಕ ಲೋನ ಸಿಗದಿದ್ದಾಗ ಆ ಕಂಪನಿ ಶೇರ್ ಮಾರ್ಕೆಟನಲ್ಲಿ ತನ್ನ ಕೆಲವೊಂದಿಷ್ಟು ಶೇರುಗಳನ್ನು ಮಾರಾಟ ಮಾಡಿ ಆರ್ಡಿನರಿ ಜನರನ್ನು ತನ್ನ ಪಾರ್ಟನರ ಮಾಡಿಕೊಳ್ಳುತ್ತದೆ ಮತ್ತು ಬಂದ ಹಣವನ್ನು ತನ್ನ ಬಿಜನೆಸಗೆ ಬಳಸಿಕೊಳ್ಳುತ್ತದೆ೭. ಈ ಕಂಪನಿ‌ SEBIಯಿಂದ ಪರ್ಮಿಷನ‌ ತೆಗೆದುಕೊಂಡು ತನ್ನ ಹಣದ ಅವಶ್ಯಕತೆಗೆ ತಕ್ಕಂತೆ ಒಂದು ಶೇರಿಗೆ ಇಂತಿಷ್ಟು ರೂಪಾಯಿ ಅಂತೇಳಿ IPOವನ್ನು ಅಂದರೆ‌ Initial Public Offeringನ್ನು ತೆಗೆಯುತ್ತದೆ. ಆಗ ಯಾರು ಬೇಕಾದರೂ ಆ ಕಂಪನಿಯ ಶೇರುಗಳನ್ನು ಡೈರೆಕ್ಟಾಗಿ ಖರೀದಿಸಿ ಆ ಕಂಪನಿಯ ಪಾಲುದಾರರಾಗಬಹುದು. ಒಮ್ಮೆ IPO ಮುಗಿದ ನಂತರ ಆ ಕಂಪನಿಯಿಂದ ನಿಮಗೆ ಡೈರೆಕ್ಟಾಗಿ ಶೇರುಗಳನ್ನು ಖರೀದಿಸಲು ಬರಲ್ಲ. ನಿಮಗೆ ಆ ಕಂಪನಿಯ ಶೇರುಗಳು ಬೇಕೆಂದರೆ ನೀವು ಶೇರ್ ಮಾರ್ಕೆಟನಿಂದ ಖರೀದಿಸಬೇಕು. ಅಂದರೆ ಈಗಾಗಲೇ ಶೇರುಗಳನ್ನು ಖರೀದಿಸಿದ ಇನ್ವೆಸ್ಟರಗಳಿಂದ ಶೇರುಗಳನ್ನು ಖರೀದಿಸಬೇಕು. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

                                            ತುಂಬಾ ಜನರಿಗೆ ಶೇರ್ ಮಾರ್ಕೆಟನಿಂದ ಹಣ ಹೇಗೆ ಬರುತ್ತದೆ? ಎಂಬ ಡೌಟಿದೆ. ನೀವು ಯಾವುದಾದರೂ ಕಂಪನಿಯ ‌ಶೇರನ್ನು ಖರೀದಿಸಿದರೆ‌ ನೀವು ಆ ಕಂಪನಿಯ ಪಾಲುದಾರರಾಗುತ್ತೀರಿ. ಉದಾಹರಣೆಗಾಗಿ ; ನೀವು ರೋರಿಂಗ ಕ್ರಿಯೇಷನ್ಸ ಕಂಪನಿಯ 5% ಶೇರುಗಳನ್ನು ಖರೀದಿಸಿರುವಿರಿ ಅಂತಾ ಭಾವಿಸಿ. ಈಗ ನೀವು ಈ ಕಂಪನಿಯ 5% ಪಾಲುದಾರರಾಗುತ್ತೀರಿ. ಈ ಕಂಪನಿ ಗಳಿಸುವ ಪ್ರತಿ ಲಾಭದಲ್ಲಿ ನಿಮಗೆ 5% ಪಾಲು ಸಿಗುತ್ತದೆ. ಒಂದು ವೇಳೆ ಈ ಕಂಪನಿ ವರ್ಷಕ್ಕೆ 100 ಕೋಟಿ ಗಳಿಸಿದರೆ ನಿಮಗೆ 5 ಕೋಟಿ ಸಿಗುತ್ತದೆ. ಒಂದು ವೇಳೆ ಏನು ಗಳಿಸದಿದ್ದರೆ ನಿಮಗೇನು ಸಿಗಲ್ಲ‌. ಈ ರೀತಿ ಶೇರ್ ಮಾರ್ಕೆಟನಿಂದ ನಿಮಗೆ ಹಣ ಸಿಗುತ್ತದೆ. ನೀವು ಯಾವುದಾದರೂ ಕಂಪನಿಯ ಶೇರುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ಆನಂತರ ಒಳ್ಳೆ ರೇಟ ಬಂದಾಗ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಕೂಡ ಹಣ ಗಳಿಸಬಹುದು. ಇದೊಂಥರ ಕಡಿಮೆ ಬೆಲೆಗೆ ಪ್ಲಾಟ ಖರೀದಿಸಿ ಎರಡ್ಮೂರು ವರ್ಷ ಬಿಟ್ಟು ಜಾಸ್ತಿ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುವಂತಿದೆ. 

                      ಸದ್ಯಕ್ಕೆ ಶೇರ್ ಮಾರ್ಕೆಟನಲ್ಲಿ SBI, HDFC, ICICI, Wipro, Infosys, Microsoft, TCS, APPLE, Amazon, Facebookನಂಥ ಸಾವಿರಾರು ಕಂಪನಿಯ ಶೇರಗಳಿವೆ. ನಿಮಗೆ ಯಾವುದು ಅಪೋರ್ಡೆಬಲಾಗುತ್ತೆ ನೀವು ಆ ಕಂಪನಿಯ ಶೇರುಗಳನ್ನು ಖರೀದಿಸಿ ಹಣ ಗಳಿಸಬಹುದು‌. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

4) ಶೇರ್ ಮಾರ್ಕೆಟ ಸೂಚ್ಯಂಕ ಎಂದರೇನು? What is Share Market Index? 

                     ಶೇರ್‌ ಮಾರ್ಕೆಟನಲ್ಲಾಗುತ್ತಿರುವ ಏರಿಳಿತಗಳನ್ನು ಸೂಚಿಸುವ ಮಾನಕ್ಕೆ ಶೇರ್ ಮಾರ್ಕೆಟ ‌ಸೂಚ್ಯಂಕ ಎನ್ನುವರು.‌ ಶೇರ್ ಮಾರ್ಕೆಟನಲ್ಲಿರುವ ಟಾಪ ಕಂಪನಿಗಳ ಶೇರುಗಳಲ್ಲಾಗುತ್ತಿರುವ ಏರಿಳಿತಗಳನ್ನು ಆಧಾರವಾಗಿಟ್ಟುಕೊಂಡು ಶೇರ್ ಮಾರ್ಕೆಟ ಸೂಚ್ಯಂಕವನ್ನು ‌ಮಾಡಿರುತ್ತಾರೆ. 

ಉದಾಹರಣೆಗೆ : ಸೆನ್ಸೆಕ್ಸ ಬಾಂಬೆ ಸ್ಟಾಕ್ ಎಕ್ಸ್ಚೇಂಜನ ಸೂಚ್ಯಂಕವಾಗಿದೆ. ಅಲ್ಲಿರುವ ಟಾಪ 30 ಕಂಪನಿಗಳ‌ ಶೇರ ಪ್ರೈಜಗಳಲ್ಲಾಗುತ್ತಿರುವ ಏರಿಳಿತಗಳ ಆಧಾರದ ಮೇಲೆ ಸೆನ್ಸೆಕ್ಸ ಬದಲಾಗುತ್ತಿರುತ್ತದೆ. ಅದೇ ರೀತಿ ನಿಫ್ಟಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜನ ಸೂಚ್ಯಂಕವಾಗಿದೆ. ಅಲ್ಲಿರುವ ಟಾಪ 50 ಕಂಪನಿಗಳ ಶೇರ್ ಪ್ರೈಜಗಳಲ್ಲಾಗುತ್ತಿರುವ ಏರಿಳಿತಗಳ ಆಧಾರದ ಮೇಲೆ ನಿಫ್ಟಿ ಬದಲಾಗುತ್ತಿರುತ್ತದೆ. ಇದೇ ತರಹ ನಾಸಡಾಕ ಅಮೇರಿಕಾದ ಶೇರ್ ಮಾರ್ಕೆಟನ ಸೂಚ್ಯಂಕವಾಗಿದೆ. ನಿಕ್ಕಿ ಜಪಾನಿನ ಶೇರ್ ಮಾರ್ಕೆಟ ಸೂಚ್ಯಂಕವಾಗಿದೆ. ಈ ಸೂಚ್ಯಂಕದ ಆಧಾರದ ಮೇಲೆಯೇ ನಮಗೆ ಶೇರ್ ಮಾರ್ಕೆಟನಲ್ಲಿ ‌ಶೇರಗಳ ಬೆಲೆ ಏರುತ್ತಿದೆಯಾ ಅಥವಾ ಇಳಿಯುತ್ತಿದೆಯಾ ಎಂಬುದು ಗೊತ್ತಾಗುತ್ತದೆ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

5) ಶೇರ್ ಮಾರ್ಕೆಟ ಸೇಫಾಗಿದೆಯಾ? Is Share Market is safe or not? 

                      ಯೆಸ್ ಶೇರ್ ಮಾರ್ಕೆಟ ಸೇಫಾಗಿದೆ‌. ನೀವು ಇದರಲ್ಲಿ ಹಣ ಹೂಡಿಕೆ ಮಾಡಬಹುದು. ಹೇಗೆ RBI ಎಲ್ಲ ಬ್ಯಾಂಕಗಳನ್ನು ಕಂಟ್ರೋಲ ಮಾಡುತ್ತೋ, ಹೇಗೆ IRDA ಎಲ್ಲ ಇನ್ಶುರೆನ್ಸ್ ಕಂಪನಿಗಳನ್ನು ಕಂಟ್ರೋಲ ಮಾಡುತ್ತೋ ಅದೇ ರೀತಿ SEBI (Securities Exchange Board of India) ಶೇರ್ ಮಾರ್ಕೆಟನ್ನು ಕಂಟ್ರೋಲ ಮಾಡುತ್ತದೆ. ಶೇರ್ ಮಾರ್ಕೆಟನಲ್ಲಿ ಲಿಸ್ಟಿಂಗಾದ ಕಂಪನಿಗಳ ಮೇಲೆ SEBI ನಿಗಾ ಇಟ್ಟಿರುತ್ತದೆ. ಹೀಗಾಗಿ ಶೇರ್ ಮಾರ್ಕೆಟ ಸೇಫಾಗಿದೆ ಅಂತಾ ಹೇಳಬಹುದು. ಆದರೂ ಸಹ ಹರ್ಷದ ಮೆಹ್ತಾರಂಥ ಅತೀ ಬುದ್ಧಿವಂತರು ಬಂದಾಗ ಸ್ಕ್ಯಾಮಗಳಾಗುತ್ತವೆ. ಯಾರೇನು ಮಾಡಕ್ಕಾಗಲ್ಲ‌. ಏಕೆಂದರೆ ಭಾರತದಲ್ಲಿ ಇವುಗಳಿಗೆಲ್ಲ ಬ್ಯಾಕಡೋರನಿಂದ ಫುಲ್ ಸಪೋರ್ಟ್ ಸಿಗುತ್ತದೆ. ಬಟ ನೀವು ನಿಮ್ಮ ಜಾಗರೂಕತೆಯಲ್ಲಿದ್ದರೆ ನೀವು ಫುಲ್ ಸೇಫಾಗಿರುತ್ತೀರಿ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

6) ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದು ಒಳ್ಳೆಯದಾ? ಕೆಟ್ಟದಾ? Is it good to invest in Share Market? 

                      ಶೇರ್ ಮಾರ್ಕೆಟನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಕಡಿಮೆ ಟೈಮಲ್ಲಿ ಹೆಚ್ಚಿಗೆ ರಿಟರ್ನ್ಸ ಬರುತ್ತದೆ. ನೀವು ಶೇರುಗಳನ್ನು ಖರೀದಿಸಿದ ನಂತರ ಕಂಪನಿಯಲ್ಲಿ ಪಾರ್ಟನರರಾಗುತ್ತೀರಿ. ಶೇರ್ ಮಾರ್ಕೆಟನಲ್ಲಿ ಹೆಚ್ಚಿಗೆ ರಿಟರ್ನ್ಸ ಸಿಗುತ್ತದೆ. ಆದರೆ ಇಲ್ಲಿ ರಿಸ್ಕ ಕೂಡ ಹೆಚ್ಚಿಗಿದೆ. ಏಕೆಂದರೆ ಪ್ರತಿ ಸೆಕೆಂಡಿಗೆ ಶೇರ್ ಮಾರ್ಕೆಟ ಫ್ಲಕ್ಚುವೇಟಾಗುತ್ತಿರುತ್ತದೆ. ಶೇರಗಳ ಬೆಲೆ ಇಷ್ಟೇ ಉಳಿಯುತ್ತೆ ಇಲ್ಲ ಹೆಚ್ಚಾಗುತ್ತೆ, ಕಮ್ಮಿಯಾಗುತ್ತೆ ಅಂತಾ ಎಕ್ಜಾಕ್ಟಾಗಿ ಹೇಳಲು ಸಾಧ್ಯವಿಲ್ಲ. ನೀವು ಹಣ ಹೂಡಿಕೆ ಮಾಡಿದ ಕಂಪನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ನಿಮ್ಮ‌ ಹಣ ವೇಸ್ಟಾಗುತ್ತದೆ. ನೀವು ರಾಂಗ ಡಿಸಿಜನಗಳನ್ನು ತೆಗೆದುಕೊಂಡು ರಾಂಗ ಇನ್ವೆಸ್ಟಮೆಂಟಗಳನ್ನು ಮಾಡಿದರೆ ನಿಮಗೆ ನಷ್ಟವಾಗುತ್ತದೆ. ಸೋ ಈ ರೀತಿ ಶೇರ್ ಮಾರ್ಕೆಟನಲ್ಲಿ ಹೆಚ್ಚಿಗೆ ರಿಟರ್ನ್ಸ ಇರುವಂತೆ ಹೆಚ್ಚಿಗೆ ರಿಸ್ಕ ಕೂಡ ಇದೆ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

                 ನೀವು ಸ್ವಲ್ಪ ಟೈಮ ತೆಗೆದುಕೊಂಡು ಶೇರ್ ಮಾರ್ಕೆಟ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಕಂಪನಿಗಳ ಬಗ್ಗೆ ಸರಿಯಾಗಿ ಸ್ಟಡಿ ಮಾಡಿ ಹಣ ಹೂಡಿಕೆ ಮಾಡಿದರೆ ಖಂಡಿತ ನಿಮಗೆ ಲಾಭವಾಗುತ್ತದೆ. ಅದನ್ನು ಬಿಟ್ಟು ಯಾರದೋ ಮಾತು ಕೇಳಿ ಯಾವುದ್ಯಾವುದೋ ಶೇರಗಳಲ್ಲಿ ಕಣ್ಮುಚ್ಚಿ ಇನ್ವೇಸ್ಟ ಮಾಡಿದರೆ ಖಂಡಿತ ಲಾಸಾಗುತ್ತದೆ. ಶೇರ್ ಮಾರ್ಕೆಟನಲ್ಲಿನ ಸಕ್ಸೆಸ ಟೊಟಲಾಗಿ ನಿಮ್ಮ ಟ್ಯಾಲೆಂಟ, ನಾಲೇಜ ಹಾಗೂ ಇನ್ವೆಸ್ಟಮೆಂಟ ಟೈಮ ಮೇಲೆ ಡಿಪೆಂಡಾಗಿದೆ‌‌. ನಿಮ್ಮ ಬಳಿ ಟ್ಯಾಲೆಂಟ್‌ ಹಾಗೂ ನಾಲೇಜ ಇದ್ದರೆ ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದು 100% ಒಳ್ಳೆಯದಾಗಿದೆ‌. ನೀವು ರೀಚ್ ಆಗುತ್ತೀರಿ. ಬಟ ನಿಮಗೆ ಶೇರ್ ಮಾರ್ಕೆಟನ ನಾಲೇಜ ಇರದಿದ್ದರೆ ನೀವು ಅದರಲ್ಲಿ ಹಣ ‌ಹೂಡಿಕೆ ಮಾಡಬೇಡಿ. ಅದರ ಬದಲಾಗಿ ಮ್ಯೂಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡಿ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

7) ಶೇರ್ ಮಾರ್ಕೆಟನಲ್ಲಿ ಯಾರು ಹಣ ಹೂಡಿಕೆ ಮಾಡಬಹುದು? Who can invest in Share market? 

                             ಹೆಚ್ಚಿಗೆ ಹಣ ಗಳಿಸಬೇಕು ಎಂಬಾಸೆಯಿರುವ ಯಾರು ಬೇಕಾದರೂ ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡಬಹುದು. ನೀವು ಕಾಲೇಜ ಸ್ಟೂಡೆಂಟಾಗಿದ್ದರೆ ನೀವು ಜಸ್ಟ 500 ರೂಪಾಯಿಯಿಂದಲೂ ನಿಮ್ಮ ಇನ್ವೆಸ್ಟಮೆಂಟ ಜರ್ನಿಯನ್ನು ಪ್ರಾರಂಭಿಸಬಹುದು. ಶೇರ್ ಮಾರ್ಕೆಟನಲ್ಲಿ ಯಾರು ಬೇಕಾದರೂ ಇನ್ವೇಸ್ಟ ಮಾಡಬಹುದು‌. ಬಟ ಸರಿಯಾದ ನಾಲೇಜ ಬೇಕಷ್ಟೆ. ಸಾಲ ಮಾಡಿ ಶೇರ್ ಮಾರ್ಕೆಟನಲ್ಲಿ ಇನ್ವೇಸ್ಟ ಮಾಡಬೇಡಿ, ನಿಮ್ಮ ಬಳಿ ಎಕ್ಸಟ್ರಾ ಸೇವಿಂಗ್ಸ ಇದ್ದರೆ ಮಾತ್ರ ಇನ್ವೇಸ್ಟ ಮಾಡಿ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

8) ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Share Market? 

                 ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದು ಸಿಂಪಲಾಗಿದೆ. ಇದಕ್ಕಾಗಿ ನಿಮಗೆ ಒಂದು ಬ್ಯಾಂಕ ಅಕೌಂಟ, ಡಿಮ್ಯಾಟ ಅಕೌಂಟ ಹಾಗೂ ಟ್ರೇಡಿಂಗ ಅಕೌಂಟ ಬೇಕಾಗುತ್ತದೆ. ಬ್ಯಾಂಕ ಅಕೌಂಟ ಬಗ್ಗೆ ನಿಮಗೆ ಗೊತ್ತಿದೆ‌. ಅದರಲ್ಲಿ ನಿಮ್ಮ ಹಣ ಸೇವ ಆಗುತ್ತದೆ. ಹೇಗೆ ಬ್ಯಾಂಕ ಅಕೌಂಟನಲ್ಲಿ ಹಣ ಸೇವ ಆಗುತ್ತೋ ಅದೇ ರೀತಿ ಡಿಮ್ಯಾಟ ಅಕೌಂಟನಲ್ಲಿ ನೀವು ಖರೀದಿಸಿದ ಶೇರುಗಳು ಡಿಜಿಟಲ ಫಾರ್ಮನಲ್ಲಿ ಸೇವ ಆಗುತ್ತವೆ. ಇನ್ನೂ ಟ್ರೇಡಿಂಗ ಅಕೌಂಟ ನಿಮಗೆ ಶೇರುಗಳನ್ನು ಖರೀದಿಸಲು ಅಥವಾ ಮಾರಲು ಹೆಲ್ಪ ಮಾಡುತ್ತದೆ. ನೀವು ಬ್ಯಾಂಕ ಅಕೌಂಟನ್ನು ಆಲರೆಡಿ ಕ್ರಿಯೆಟ ಮಾಡಿರುತ್ತೀರಾ, ಈಗ ನೀವು ಡಿಮ್ಯಾಟ ಅಕೌಂಟ ಹಾಗೂ ಟ್ರೇಡಿಂಗ ಅಕೌಂಟನ್ನು ಕ್ರಿಯೆಟ ಮಾಡಿ. ಇದಕ್ಕಾಗಿ ನಿಮಗೆ ಪ್ಯಾನಕಾರ್ಡ, ಆಧಾರ ಕಾರ್ಡ, ವೋಟರ ಐಡಿ‌ ಇಲ್ಲವೇ ಅಡ್ರೆಸ ಪ್ರೂಫ್, ಬ್ಯಾಂಕ ಅಕೌಂಟ ಡಿಟೇಲ್ಸ ಹಾಗೂ ಪೋಟೋಗ್ರಾಫಗಳು ಬೇಕಾಗುತ್ತವೆ ಅಷ್ಟೇ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

                                   ನಾನು ಈಗಾಗಲೇ ಹೇಳಿದಂತೆ ನಿಮಗೆ ಶೇರ್ ಮಾರ್ಕೆಟನಲ್ಲಿ ಡೈರೆಕ್ಟಾಗಿ ಹಣ ಹೂಡಿಕೆ ಮಾಡಲು ಬರಲ್ಲ‌. ನೀವು ಯಾವುದಾದರೂ ಒಬ್ಬ ಬ್ರೋಕರನ ಹೆಲ್ಪ ತೆಗೆದುಕೊಳ್ಳಲೇಬೇಕು. ಆ ಬ್ರೋಕರ ಶೇರ್ ಮಾರ್ಕೆಟ ಆ್ಯಜೆಂಟಾಗಿರಬಹುದು, ಆನಲೈನ ಪ್ಲ್ಯಾಟಫಾರ್ಮ ಆಗಿರಬಹುದು ಅಥವಾ ಮೊಬೈಲ್ ಆ್ಯಪ ಆಗಿರಬಹುದು. ನಿಮಗೆ ಯಾವುದು ಕನ್ವಿನೆಂಟಾಗುತ್ತೋ ಆ ಬ್ರೋಕರನ್ನು ಸೆಲೆಕ್ಟ ಮಾಡಿಕೊಳ್ಳಿ. ನಾನು ಆನಲೈನ ಪ್ಲ್ಯಾಟಫಾರ್ಮನ್ನು ಬ್ರೋಕರಾಗಿ ಸೆಲೆಕ್ಟ ಮಾಡಿಕೊಳ್ಳಲು ಪ್ರಿಫರ ಮಾಡುವೆ‌. ಉದಾಹರಣೆಗೆ : Zerodha ಒಂದು ಮೊಸ್ಟ ಟ್ರಸ್ಟೆಸ್ಟ ಪ್ಲ್ಯಾಟಫಾರ್ಮಾಗಿದೆ‌. ಇಲ್ಲಿ ನೀವು ನಿಮ್ಮ ಡಿಮ್ಯಾಟ ಅಕೌಂಟ ಹಾಗೂ ಟ್ರೇಡಿಂಗ ಅಕೌಂಟಗಳನ್ನು ಕ್ರಿಯೆಟ ಮಾಡಬಹುದು. ನಿಮಗೆ ಎಲ್ಲಿ ಕನ್ವಿನೆಂಟಾಗುತ್ತೋ ಅಲ್ಲಿಂದ ಡಿಮ್ಯಾಟ ಅಕೌಂಟ ಹಾಗೂ ಟ್ರೆಡಿಂಗ ಅಕೌಂಟಗಳನ್ನು ಕ್ರಿಯೆಟ ಮಾಡಿ. ಆನಂತರ ಇವುಗಳನ್ನು ನಿಮ್ಮ‌ ಬ್ಯಾಂಕ ಅಕೌಂಟನೊಂದಿಗೆ ಲಿಂಕ ಮಾಡಿಸಿ. ನೀವು ಬ್ಯಾಂಕ ಅಕೌಂಟ, ಡಿಮ್ಯಾಟ ಅಕೌಂಟ ಹಾಗೂ ಟ್ರೇಡಿಂಗ ಅಕೌಂಟಗಳನ್ನು ಕಂಪಲ್ಸರಿಯಾಗಿ ಇಂಟರ್ ಲಿಂಕ ಮಾಡಿಸಲೇಬೇಕು. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

                        ಓಕೆ ಫೈನ, ನಿಮಗೆ ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ‌ ಮಾಡಬೇಕು ಎಂಬಾಸೆಯಿದ್ದರೆ ಮೊದಲು ನಾನು ಹೇಳಿದಂತೆ ಡಿಮ್ಯಾಟ ‌ಅಕೌಂಟ ಹಾಗೂ ಟ್ರೇಡಿಂಗ ಅಕೌಂಟಗಳನ್ನು ಕ್ರಿಯೆಟ ಮಾಡಿ. ಆನಂತರ ಅವುಗಳನ್ನು ನಿಮ್ಮ ಬ್ಯಾಂಕ ಅಕೌಂಟನೊಂದಿಗೆ ಇಂಟರಲಿಂಕ ಮಾಡಿಸಿ. ಈಗ ನಿಮ್ಮ ಟ್ರೇಡಿಂಗ ಅಕೌಂಟಗೆ ಲಾಗೀನ ಆಗಿ. ನಿಮಗೆ ಯಾವ ಕಂಪನಿಯ ಶೇರ ಬೇಕೋ ಅದನ್ನು ಚೂಜ ಮಾಡಿ‌. ನಂತರ ಹಣ ಟ್ರಾನ್ಸಫರ ಮಾಡಿ ಡೀಲನ್ನು ಕಂಪ್ಲೀಟ ಮಾಡಿ‌. ಈಗ ನೀವು ಖರೀದಿಸಿದ ಶೇರ್ ನಿಮ್ಮ ಡಿಮ್ಯಾಟ ಅಕೌಂಟಲ್ಲಿ ಸೇವ ಆಗುತ್ತದೆ. ನೀವು ಯಾವ ಕಂಪನಿಯ ಶೇರನ್ನು ಖರೀದಿಸಿರುತ್ತಿರೋ ಆ ಕಂಪನಿಯ ಲಾಭದಿಂದ ನಿಮ್ಮ ಬ್ಯಾಂಕ ಅಕೌಂಟಗೆ ತಿಂಗಳಿಗೊಮ್ಮೆ ಇಲ್ಲವೇ ವರ್ಷಕ್ಕೊಮ್ಮೆ ನಿಮ್ಮ ಪಾಲು ಕ್ರೆಡಿಟಾಗುತ್ತದೆ‌. ಒಂದು ವೇಳೆ ನೀವು ಖರೀದಿಸಿದ ಶೇರಿನ ಬೆಲೆ ಹೆಚ್ಚಾದರೆ ನೀವು ಅದನ್ನು ಬೇರೆಯವರಿಗೆ ಮಾರಿ ಹೆಚ್ಚಿಗೆ ಹಣ ಗಳಿಸಬಹುದು. ಇಲ್ಲಾ ನಿಮಗೆ ಗುಡ್ ರಿಟರ್ನ್ಸ ಬರುತ್ತಿದ್ದರೆ ಆ ಶೇರನ್ನೇ ನಿಮ್ಮ‌ ಬಳಿಯಿಟ್ಟುಕೊಳ್ಳಬಹುದು. ಈ ರೀತಿ ನೀವು ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿಗೆ ಹಣ ಗಳಿಸಬಹುದು. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

9) ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತ ಮುಂಚೆ ಗಮನಿಸಬೇಕಾದ ವಿಷಯಗಳು? Precautions to be taken before investing in share market? 

                        ಶೇರ್‌ ಮಾರ್ಕೆಟನಲ್ಲಿ ‌ಹಣ ಹೂಡಿಕೆ ಮಾಡುವುದಕ್ಕಿಂತ ಮುಂಚೆ ನೀವು ಕೆಲವೊಂದಿಷ್ಟು ವಿಷಯಗಳ ಕಡೆಗೆ ಹೆಚ್ಚಿಗೆ ಗಮನ ಹರಿಸಬೇಕು. ಇಲ್ಲವಾದರೆ ನಿಮಗೆ ದೊಡ್ಡ ಲಾಸಾಗುತ್ತದೆ. ಅದಕ್ಕಾಗಿ ಈ ವಿಷಯಗಳ ಕಡೆಗೆ ಗಮನ ಹರಿಸಿ. 

* ನಿಮಗೆ ಶೇರ್ ಮಾರ್ಕೆಟನ ನಾಲೇಜಿದ್ದರೆ ಮಾತ್ರ ಅದರಲ್ಲಿ ಇನ್ವೇಸ್ಟ ಮಾಡಿ. ಸುಮ್ಮನೆ ದುರಾಸೆ ಬಿದ್ದು ಯಾರದೋ ಮಾತು ಕೇಳಿ ಯಾವುದೋ ಶೇರಲ್ಲಿ ಹಣ ಹಾಕಿ ಹಣವನ್ನು ಕಳೆದುಕೊಳ್ಳಬೇಡಿ. ಯಾರದೋ ಮಾತಿಗೆ ಟೆಂಪ್ಟಾಗಿ ಹಣ ಹಾಕಬೇಡಿ.‌ ಬೇರೆಯವರ ಫ್ರಿ ಅಡ್ವೈಜಗಳನ್ನು ಕಣ್ಮುಚ್ಚಿ ಒಪ್ಪಿಕೊಂಡು ಎಲ್ಲ ಹಣವನ್ನು ಕಳೆದುಕೊಂಡು ಕಣ್ಣೀರಾಕಬೇಡಿ. ದುರಾಸೆಗೆ ಬಿದ್ದು ದುಸ್ಥಿತಿ ತಲುಪಬೇಡಿ. ಮೊದಲು ಶೇರ ಮಾರ್ಕೆಟನ ನಾಲೇಜ ಸಂಪಾದಿಸಿ ಆನಂತರ ಅದರಲ್ಲಿ ಹಣ ಹಾಕಿ. 

* ನಿಮ್ಮ ಬಳಿ ಎಕ್ಸಟ್ರಾ ಸೇವಿಂಗನ ಹಣವಿದ್ದರೆ ಮಾತ್ರ ಶೇರ್ ಮಾರ್ಕೆಟನಲ್ಲಿ ಹಣ ಹಾಕಿ. ಸಾಲ ಮಾಡಿ ಶೇರ್ ಮಾರ್ಕೆಟನಲ್ಲಿ ‌ಹಣ ಹಾಕಬೇಡಿ. ಹಣ ಡಬ್ಬಲಾಗುತ್ತೆ, ಬೇಗನೆ ಶ್ರೀಮಂತರಾಗಬಹುದು ಅಂತಾ ಸಾಲ‌ ಮಾಡಿ ಶೇರ್ ಮಾರ್ಕೆಟನಲ್ಲಿ ಹಣ ಹಾಕಿ ಮಣ್ಣು ತಿನಬೇಡಿ. ಏಕೆಂದರೆ ಶೇರ್ ಮಾರ್ಕೆಟ ನೀವೆಂದುಕೊಂಡಷ್ಟು ಸಿಂಪಲಾಗಿಲ್ಲ. ಇದೊಂಥರಾ ಜೂಜಾಗಿದೆ. ರಿಯಲ ಎಸ್ಟೇಟ ಆಟದಂತಿದೆ‌. ನಿಮಗೆ ಆಟ ಅರ್ಥವಾದರೆ ಮಾತ್ರ ನಿಮಗೆ ಹಣ ರಿಟರ್ನ್ಸ ಬರುತ್ತದೆ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

* ನೀವು ಯಾವುದೇ ಕಂಪನಿಯ ಶೇರುಗಳನ್ನು ಖರೀದಿಸುವ ಮುಂಚೆ ಆ ಕಂಪನಿಯ ಪ್ರೋಡಕ್ಟಗಳ ಬಗ್ಗೆ, ಪ್ರೋಮೋಟರಗಳ ಬಗ್ಗೆ, ಪಾರ್ಟನರಗಳ ಬಗ್ಗೆ, ಕಂಪನಿಯ ಪಾಸ್ಟ ಪರಫಾರ್ಮೆನನ್ಸ ಬಗ್ಗೆ, ಕಂಪನಿಯ ಬಗ್ಗೆ ಪಬ್ಲಿಕಗಿರುವ ಒಪಿನಿಯನ ಬಗ್ಗೆ, ಕಂಪನಿಯ ಮುಂದಿನ ಪ್ರೊಜೆಕ್ಟಗಳ ಹಾಗೂ ಪ್ರೋಫಿಟ ಪ್ಲ್ಯಾನ ಬಗ್ಗೆ, ರಿಸ್ಕ ಫ್ಯಾಕ್ಟರಗಳ ಬಗ್ಗೆ ಸರಿಯಾಗಿ ತಿಳಿದುಕೊಂಡ ನಂತರವೇ ಆ ಕಂಪನಿಯ ಶೇರುಗಳನ್ನು ಖರೀದಿಸಿ. ನೀವು ಕಂಪನಿಯನ್ನು ಜಡ್ಜ ಮಾಡಿದ ನಂತರ ಅದರ ಶೇರುಗಳನ್ನು ಖರೀದಿಸಿ.  

* ಶೇರ್ ಮಾರ್ಕೆಟಗೆ ಯಾವುದೇ ಡೈರೆಕ್ಷನ ಇಲ್ಲ‌.‌ ಅದು ಪ್ರತಿ ಸೆಕೆಂಡಿಗೆ ಏರಿಳಿತವಾಗುತ್ತಿರುತ್ತದೆ. ಸೋ ನೀವು ನಿಮ್ಮ ಡೈರೆಕ್ಷನನ್ನು ಕಳೆದುಕೊಳ್ಳಬೇಡಿ. ನಿಮ್ಮ ಡೈರೆಕ್ಷನ ಸರಿಯಾಗಿದ್ದರೆ ಮಾತ್ರ ನಿಮಗೆ ಶೇರ ಮಾರ್ಕೆಟನಲ್ಲಿ ಸಕ್ಸೆಸ ಸಿಗುತ್ತದೆ. 

* ಶೇರ್ ಮಾರ್ಕೆಟನಲ್ಲಿ ಎಲ್ಲರೂ ಗ್ರಿಡಿಯಾದಾಗ ನೀವು ಸುಮ್ಮನಿರಿ. ಎಲ್ಲರೂ ಹೆದರಿದಾಗ ನೀವು ಗ್ರಿಡಿಯಾಗಿ. ಬೆಸ್ಟ ಕಂಪನಿಗಳ ಶೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಒಳ್ಳೆ ಬೆಲೆ ಬಂದಾಗ ಹೆಚ್ಚಿನ ಲಾಭದೊಂದಿಗೆ ಮಾರಾಟ ಮಾಡಿ. ಶಾರ್ಟಟರ್ಮಗಿಂತ ಲಾಂಗಟರ್ಮ ಇನ್ವೆಸ್ಟಮೆಂಟ ಮೇಲೆ ಜಾಸ್ತಿ ಫೋಕಸ ಮಾಡಿ ಹಣ ಹೂಡಿಕೆ ಮಾಡಿ. 

* ನಿಮ್ಮ ಎಲ್ಲ ಹಣವನ್ನು ಒಂದೇ ಕಂಪನಿಯ ‌ಶೇರಗಳ ಮೇಲೆ ಇನ್ವೇಸ್ಟ ಮಾಡಬೇಡಿ. ಬೇರೆಬೇರೆ ಸೆಕ್ಟರನ ಬೇರೆಬೇರೆ ಕಂಪನಿಗಳ ಮೇಲೆ ಹಣ ಹಾಕಿ. ಒಂದು ವೇಳೆ ನೀವು ಹಣ ಹಾಕಿದ ಎಲ್ಲ ಕಂಪನಿಗಳು ಲಾಸಿಗೆ ಹೋದಾಗ ಯಾವುದಾದರೂ ಒಂದು ಕಂಪನಿ ‌ಪ್ರೋಫಿಟಗೆ ಹೋದರೂ ಸಹ ನಿಮಗೆ ನೀವು ಹಾಕಿದ ಹಣ ವಾಪಸ ಬರುತ್ತದೆ. ನೀವು ಸೇಫಾಗಿರುತ್ತೀರಿ. ಹೆಚ್ಚಿಗೆ ಲಾಭವಾಗದಿದ್ದರೂ ಹಾಕಿದ ಹಣವಾದರೂ ನಿಮಗೆ ಸಿಗುತ್ತದೆ. 

ಶೇರ್ ಮಾರ್ಕೆಟನ ಸಂಪೂರ್ಣ ಮಾಹಿತಿ - Everything about Share Market in Kannada - How to Invest in Share Market

                             ಇವೀಷ್ಟು ವಿಷಯಗಳನ್ನು ನೀವು ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತ ಮುಂಚೆ ಗಮನಿಸಬೇಕು. ಇನ್ನೂ ಬಹಳಷ್ಟು ವಿಷಯಗಳಿವೆ. ಅವುಗಳನ್ನು ನಾನು ಮತ್ತೊಂದು ವಿಡಿಯೋದಲ್ಲಿ ಡಿಟೇಲಾಗಿ ಡಿಸ್ಕಸ ಮಾಡುವೆ. 

                    ಓಕೆ ಗೆಳೆಯರೇ, ಇದೀಷ್ಟು ಶೇರ್ ಮಾರ್ಕೆಟಗೆ ಸಂಬಂಧಿಸಿದಂತೆ ಕಂಪ್ಲಿಟ ಮಾಹಿತಿ. ಮೊದಲು ನೀವು ಎಷ್ಟು ವರ್ಷದಲ್ಲಿ ಎಷ್ಟು ಹಣ ಗಳಿಸಬೇಕು ಎಂಬುದನ್ನು ಡಿಸೈಡ ಮಾಡಿ. ಆನಂತರ ಶೇರ್ ಮಾರ್ಕೆಟ ಬಗ್ಗೆ, ಬೇರೆ ಬೇರೆ ಕಂಪನಿಗಳ ಪರಫಾರ್ಮೆನನ್ಸ ಬಗ್ಗೆ ಚೆನ್ನಾಗಿ ಸ್ಟಡಿ ಮಾಡಿ. ಆನಂತರ ಹಣ ಹೂಡಿಕೆ ಮಾಡಿ ಶ್ರೀಮಂತರಾಗಿ. ನಿಮಗೆ ‌ಇನ್ನೂ ಏನಾದರೂ ಡೌಟ್ಸಗಳಿದ್ದರೆ ಕಮೆಂಟ ಮಾಡಿ. ಇಲ್ಲವೇ ಇನಸ್ಟಾಗ್ರಾಮಲ್ಲಿ ಡೈರೆಕ್ಟ್ ಮೆಸೆಜ ಮಾಡಿ‌‌. ನಿಮಗೆ ನನ್ನೊಂದಿಗೆ ಡೈರೆಕ್ಟಾಗಿ ಮಾತನಾಡಬೇಕು ಎಂಬಾಸೆಯಿದ್ದರೆ‌ ವಿಡಿಯೋ ಡಿಸ್ಕಕ್ರಿಪ್ಷನಲ್ಲಿ‌ ಕೊಟ್ಟಿರೋ ಫಾರ್ಮನ್ನು ಫಿಲ ಮಾಡಿ. All the best and thanks you...



ಸ್ಟಾಕ್ ಮಾರ್ಕೆಟನಲ್ಲಿ ಹಣ ಇವೆಸ್ಟ್ ಮಾಡಲು ಕೆಳಗಿನ ಲಿಂಕಗಳ ಮೂಲಕ ಫ್ರಿಯಾಗಿ ಡಿಮ್ಯಾಟ ಅಕೌಂಟ ಓಪನ ಮಾಡಿ ಹಣ ಗಳಿಸಿ.

No1 Broker - Largest stock broker in India

1) Zerodha Link :- https://www.roaringcreationsfilms.com/zerodha/

2) UpStox :- https://www.roaringcreationsfilms.com/upstox/

Blogger ನಿಂದ ಸಾಮರ್ಥ್ಯಹೊಂದಿದೆ.