ಮದುವೆಯಾದರೂ ಬ್ರಹ್ಮಚರ್ಯವನ್ನು ಪಾಲಿಸುವುದು ಹೇಗೆ? | How to Follow Brahmacharya Celibacy in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮದುವೆಯಾದರೂ ಬ್ರಹ್ಮಚರ್ಯವನ್ನು ಪಾಲಿಸುವುದು ಹೇಗೆ? | How to Follow Brahmacharya Celibacy in Kannada

 

How to Follow Brahmacharya Celibacy in Kannada

   ಬ್ರಹ್ಮಚರ್ಯವನ್ನು ಪಾಲಿಸಲು ನೀವು ಕಾಡಿಗೆ ಹೋಗಿ ತಪಸ್ಸು ಮಾಡಬೇಕಾಗಿಲ್ಲ. ನಿಮ್ಮ ಡೇಲಿ ಲೈಫಸ್ಟೈಲ‌ ಹಾಗೂ ರೂಟಿನನಲ್ಲಿ ಸ್ವಲ್ಪ ಚೇಂಜಸ ಮಾಡಿಕೊಂಡರೆ ಸಾಕು. ನಾನು ಈಗಾಗಲೇ ಹೇಳಿದಂತೆ ನೀವು ಜಸ್ಟ ಸಿಂಪಲ್ ಬ್ರಹ್ಮಚರ್ಯವನ್ನು ಪಾಲಿಸಿದರೂ ಸಹ ನಿಮಗೆ Extraordinary ರಿಜಲ್ಟಗಳು ಸಿಗುತ್ತವೆ. ಬ್ರಹ್ಮಚರ್ಯವನ್ನು ಪಾಲಿಸಲು ಕೆಲವೊಂದಿಷ್ಟು ಟಿಪ್ಸಗಳು ಇಲ್ಲಿವೆ. 

1) ಮ್ಯಾ**ಸ್ಟರ*ಬೇಷನ ಹಾಗೂ ಸೆ***ಕ್ಸ ಮಾಡುವುದನ್ನು ನಿಲ್ಲಿಸಿ. ಏನಿಟೈಮ ಅವುಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಅಪೋಜಿಟ ಸೆ***ಕ್ಸ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಪರಿಶುದ್ಧವಾಗಿರಿ. ನೀವು ನಿಮ್ಮ ಲೈಫಲ್ಲಿ ಸೆಟ್ಲಾಗುವ ತನಕ, ನಿಮ್ಮ ಮ್ಯಾರೇಜಾಗುವ ತನಕ ಹನುಮಂತನಂತಿರಿ. ಮದುವೆಯಾದ ನಂತರ ಶ್ರೀರಾಮನಂತಿರಿ. ನಿಮ್ಮ ಲೈಫ ಪಾರ್ಟನರನಲ್ಲಿ ಮಾನಸಿಕ ಸುಖವನ್ನು ಹುಡುಕಿ, ಬರೀ ದೈಹಿಕ ಸುಖವನ್ನಲ್ಲ. ಲಸ್ಟ ಹಾಗೂ ಸೆ***ಕ್ಸಗಳನ್ನು ರೇಗ್ಯುಲೇಟ ಮಾಡಿ. ಅಟಲಿಸ್ಟ 45 ದಿನಗಳ ಗ್ಯಾಪ ಮೆಂಟೆನ ಮಾಡಿ. ದಿನಾ ಮೂರವೊತ್ತು ಸರಸ, ಸಲ್ಲಾಪ, ಭೋಗಗಳಲ್ಲಿ‌ ಮುಳುಗಬೇಡಿ.‌ ಸಂಕಷ್ಟದಿಂದ ಕೂಡಿದ ಸಂಸಾರದಲ್ಲಿ ಸರಸ ಬೇಕೆಬೇಕು. ಹಾಗಂತ ಬರೀ ಸೆ***ಕ್ಸಗಾಗಿ ಸಾಯಬೇಡಿ. ಊಟಕ್ಕೆ ಉಪ್ಪಿನಕಾಯಿಯಂತೆ ಸರಸ ಇರಲಿ, ಪೂರ್ತಿ ಊಟವಲ್ಲ. 

2) ದಿನಾ ತಪ್ಪದೇ ಸುರ್ಯೋದಯಕ್ಕಿಂತ ಮುಂಚೆಯೆದ್ದು ಯೋಗ, ಪ್ರಾಣಾಯಾಮ, ಧ್ಯಾನ, ರನ್ನಿಂಗ್, ವಾಕಿಂಗ್, ಎಕ್ಸರಸೈಜಗಳನ್ನು ಮಾಡಿ. ನಿಮ್ಮ ದೇಹದಲ್ಲಿ ಕೊನೆ ಉಸಿರು ಇರುವ ತನಕ ಯೋಗ ಹಾಗೂ ಪ್ರಾಣಾಯಾಮಗಳನ್ನು ನೀವು ಮಾಡಲೇಬೇಕು. No option, its compulsion. ದಿನಾ ಯೋಗ ಹಾಗೂ ಎಕ್ಸರಸೈಜ ಮಾಡಿ. ನಿಮ್ಮ ‌ಮನಸ್ಸು, ಉಸಿರಾಟ ಹಾಗೂ ಆಹಾರದ ಮೇಲೆ ನಿಯಂತ್ರಣ ಸಾಧಿಸಿ. ಅಂದಾಗಲೇ ನಿಮ್ಮ ಮನಸ್ಸು ಹಾಗೂ ಇಂದ್ರಿಯಗಳು ನಿಮ್ಮ ‌ಹಿಡಿತಕ್ಕೆ‌ ಸಿಗುತ್ತವೆ. ನೀವು ಇಂದ್ರಿಯಗಳ ಮೇಲೆ ಹಿಡಿತ ಸಾಧಿಸದಿದ್ದರೆ ನಿಮ್ಮ ಬ್ರಹ್ಮಚರ್ಯ ಬೇಗನೆ ಬ್ರೇಕ್ ಆಗುತ್ತದೆ.‌  

ಬ್ರಹ್ಮಚರ್ಯ ಪಾಲಿಸಿ ; ಬಯಸಿದ್ದು ಸಿಗುತ್ತೆ... : Benefits of Brahmacharya in Kannada

 3) ಎಲ್ಲ ತರಹದ ಬ್ಯಾಡ್ ಹ್ಯಾಬಿಟ್ಸಗಳಿಗೆ ಬಾಯ್ ಹೇಳಿ. ಲೈಫಲ್ಲಿ ಯಾವತ್ತೂ ನಾನವೇಜ ಮುಟ್ಟಲ್ಲ, ಪ್ರಾಣ ಹಿಂಸೆ ಮಾಡಲ್ಲ, ಡ್ರಿಂಕ್, ಡ್ರ**ಗ, ಸಿಗರೇಟಗಳ ಕಡೆಗೆ ನೋಡಲ್ಲ, ಸ್ವಾರ್ಥಕ್ಕಾಗಿ ಸುಳ್ಳೇಳಲ್ಲ, ಬೇರೆಯವರಿಗೆ ಕೆಟ್ಟದ್ದನ್ನು ಮಾಡಲ್ಲ, ಮೋಸ ಮಾಡಲ್ಲ, ದುಷ್ಟ ಜನರೊಂದಿಗೆ ದೊಸ್ತಿ ಮಾಡಲ್ಲ, ನನ್ನ ಲೈಫ ಪಾರ್ಟನರಗೆ ಯಾವುದೇ ಕಾರಣಕ್ಕೂ ಮೋಸ ಮಾಡಲ್ಲ, ಟೈಮಪಾಸ ಮಾಡಲ್ಲ, ನನ್ನ ದೇಶದ ಋಣ ತೀರಿಸದೆ ಸಾಯಲ್ಲ ಅಂತಾ ಇವತ್ತೇ ನಿಮ್ಮ ಮನೆ ದೇವರಿಗೆ ಪ್ರಾಮಿಸ ಮಾಡಿ. 

Blogger ನಿಂದ ಸಾಮರ್ಥ್ಯಹೊಂದಿದೆ.