ಬ್ರಹ್ಮಚರ್ಯ ಎಂದರೇನು? What is Brahmacharya?
ಸಿಂಪಲಾಗಿ ಹೇಳಬೇಕೆಂದರೆ ಬ್ರಹ್ಮಚರ್ಯ ಎಂದರೆ ವಿಚಾರ, ಮಾತು ಹಾಗೂ ಕೆಲಸದಲ್ಲಿ ಇಂದ್ರಿಯಗಳನ್ನು ನಿಯಂತ್ರಿಸುವುದು. ನಮ್ಮ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸುವುದು. ನಮ್ಮ ಇಂದ್ರಿಯಗಳಿಗೆ ನಮ್ಮನ್ನು ಹಾಳು ಮಾಡುವ ಅವಕಾಶ ಕೊಡದಿರುವುದು. ನಮ್ಮ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಿ ಒಂದು ಸಾರ್ಥಕ ಜೀವನವನ್ನು ಹೊಂದುವುದು, ಇದೇ ಬ್ರಹ್ಮಚರ್ಯ. ನಮ್ಮ ಋಷಿ ಮುನಿಗಳು ಮಹಾನ ಸಿದ್ಧಿ ಸಾಧನೆಗಳಿಗಾಗಿ ಕಠಿಣ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು. ಆದರೆ ನೀವು ಅವರಂತೆ ಕಠಿಣವಾಗಿ ಪಾಲಿಸುವುದೇನ ಬೇಡ. ಒಂದು ಸಕ್ಸೆಸಫುಲ ಲೈಫನ್ನು ಹೊಂದುವುದಕ್ಕಾಗಿ ನೀವು ಸಿಂಪಲ್ ಬ್ರಹ್ಮಚರ್ಯವನ್ನು ಪಾಲಿಸಿ ಸಾಕು.
