ಹೆಂಡತಿ ಜಗಳ ಮಾಡಿದಾಗ ಈ ರೀತಿ ಮಾಡಿ - Husband Wife Romantic Life tips in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹೆಂಡತಿ ಜಗಳ ಮಾಡಿದಾಗ ಈ ರೀತಿ ಮಾಡಿ - Husband Wife Romantic Life tips in Kannada

                              ಹೆಂಡತಿ ಜಗಳ ಮಾಡಿದಾಗ ಈ ರೀತಿ ಮಾಡಿ - Husband Wife Romantic Life tips in Kannada

                                           ಹಾಯ್ ಗೆಳೆಯರೇ, ಗುಡ್ ಈವನಿಂಗ. ಗಂಡ ಹೆಂಡತಿ ಅನ್ನೋ ಪದಗಳೇ ಎಷ್ಟೊಂದು ರೋಮ್ಯಾಂಟಿಕ್ಕಾಗಿವೆ. ಆದರೆ ಬಹಳಷ್ಟು ಜನ ಗಂಡಹೆಂಡತಿಯರು ಇದನ್ನು ಭಯಂಕರ ಮಾಡಿಕೊಂಡು ಲೈಫನ್ನು ನರಕ ಮಾಡಿಕೊಂಡು ಬದುಕುತ್ತಿದ್ದಾರೆ. ವೈಫ ಜೊತೆಗೆ ಜಳಗ ಮಾಡಿಕೊಂಡು ಲೈಫಲ್ಲಿ ಇಂಟರೆಸ್ಟನ್ನು ಕಳೆದುಕೊಂಡಿದ್ದಾರೆ. ಗಂಡ ಹೆಂಡತಿಯರ ನಡುವೆ ಜಗಳ ಆಗೋದು ಕಾಮನಲ್ಲ, ಕಂಪಲ್ಸರಿಯಾಗಿದೆ. ಗಂಡ ಹೆಂಡತಿ ಜಗಳವಾಡದಿದ್ದರೆ ಅವರು ಗಂಡಹೆಂಡತಿಯರೇ ಅಲ್ಲ‌. ಈ ಜಗಳದಲ್ಲಿ ಒಂದು ಕ್ಯೂಟ ರೋಮ್ಯಾನ್ಸಿದೆ, ಕಾಳಜಿಯಿದೆ, ಪ್ರೀತಿಯಿದೆ, ಅನುಕಂಪವಿದೆ. ಬಟ ಇದು ಮನಸ್ಸಿರುವವರಿಗೆ ಮಾತ್ರ ಅರ್ಥವಾಗುತ್ತದೆ. ನಿಮಗೆ‌ ಮದುವೆಯಾಗಿದ್ದರೆ ನಿಮ್ಮ‌ ಹೆಂಡತಿ ಅಥವಾ ಗಂಡ ಜಗಳ ಮಾಡುತ್ತಿದ್ದರೆ ಈ‌ ಕಥೆಯನ್ನು ಕೇಳಿ‌ ನಿಮ್ಮ ಥಿಂಕಿಂಗ ಪ್ರೊಸೆಸ ಬದಲಾಗುತ್ತದೆ. 

ಹೆಂಡತಿ ಜಗಳ ಮಾಡಿದಾಗ ಈ ರೀತಿ ಮಾಡಿ - Husband Wife Romantic Life tips in Kannada

                                  ಒಮ್ಮೆ ಸಂತ ತುಕಾರಾಮರ ಹೆಂಡತಿ ಅವರಿಗೆ "ಗದ್ದೆಗೆ ಹೋಗಿ ಬೆಳೆದಿರುವ ಕಬ್ಬನ್ನು ಕಟಾವು ಮಾಡಿಕೊಂಡು ತರಲು" ಹೇಳಿದಳು. ಅದರಂತೆ ಸಂತ ತುಕಾರಾಮರು ಗದ್ದೆಗೆ ಹೋಗಿ ಕಬ್ಬನ್ನು ಕಟಾವು ಮಾಡಿ ಒಂದು ಎತ್ತಿನ ‌ಗಾಡಿಯಲ್ಲಿ ತುಂಬಿಕೊಂಡು ಮನೆಗೆ ತರತೊಡಗಿದರು. ಊರು ಸಮೀಪಿಸುತ್ತಿದ್ದಂತೆ ಊರಲ್ಲಿನ ಸಣ್ಣಪುಟ್ಟ ಮಕ್ಕಳೆಲ್ಲ "ಮಾಮಾ ನನಗೊಂದು ಕಬ್ಬು ಕೊಡು, ನನಗೊಂದು ಕೊಡು" ಅಂತಾ ಕೇಳಲು ಪ್ರಾರಂಭಿಸಿದರು. ಮಕ್ಕಳಿಗೆ ಕೊಡಲ್ಲ ಎನ್ನುವ ಕಠೋರ ಮನಸ್ಸು ತುಕಾರಾಮರಿಗೆ ಇರಲಿಲ್ಲ. ಸೋ ಅವರು ಕೇಳಿದ ಮಕ್ಕಳಿಗೆಲ್ಲ ಒಂದೊಂದು ಕಬ್ಬು ಕೊಡುತ್ತಾ ತಮ್ಮ ಮನೆಯ ಕಡೆಗೆ ಹೊರಟರು. ದಾರಿ ಮಧ್ಯದಲ್ಲಿ ಕೇಳಿದವರಿಗೆಲ್ಲ ಕಬ್ಬು ಕೊಡುತ್ತಾ ಮನೆಗೆ ಹೋಗಿ‌ ತಲುಪುವಷ್ಟರಲ್ಲಿ ಗಾಡಿಯಲ್ಲಿ ಕೇವಲ ಒಂದೇ ಒಂದು ಕಬ್ಬು ಉಳಿದಿತ್ತು. ಆ ಒಂದು ಕಬ್ಬನ್ನು ಸಂತ ತುಕಾರಾಮರು ಹೆಂಡತಿಯ ಕೈಗೆ ಕೊಟ್ಟು ನಡೆದ ಘಟನೆಯನ್ನು ಹೇಳಿದರು. ಆಗ ಅವರ ಹೆಂಡತಿಗೆ ಕೆಟ್ಟ ಕೋಪ ಬಂದಿತು. ಆಕೆ ಕೋಪದಲ್ಲಿ ಅದೇ ಕಬ್ಬಿನಿಂದ ತುಕಾರಾಮರ ಬೆನ್ನಿಗೆ ಒಂದೇಟು ಜೋರಾಗಿ ಹೊಡೆದಳು. ಕಬ್ಬು ಎರಡು ತುಂಡಾಯಿತು. ಆಗ ತುಕಾರಾಮರು ದುಡುಕದೇ ಆ ಮುರಿದ ಕಬ್ಬನ್ನು ‌ಎತ್ತಿಕೊಂಡು ತಮ್ಮ ಹೆಂಡತಿಗೆ "ನೀನೆಷ್ಟು ಒಳ್ಳೆಯವಳು, ಬರೀ ಒಂದೇ ಕಬ್ಬಿದೆ ಎಂದು ಇರೋದನ್ನೆ ಎರಡು ತುಂಡು ಮಾಡಿರುವೆ, ಬಾ ಇಬ್ಬರು ಸೇರಿ ತಿನ್ನೋಣಾ..." ಎಂದೇಳಿದರು‌. ಅವರ ಮಾತನ್ನು ಕೇಳಿ ಅವರ ಹೆಂಡತಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದಳು. ಆಗ ತುಕಾರಾಮರು ಅವಳನ್ನು ಕ್ಷಮಿಸಿ ಪ್ರೇಮ ಸಂದೇಶ ಹೇಳಿದರು. ಸಂತ ತುಕಾರಾಮರಿಗಿದ್ದ ಈ ತರಹದ ತಾಳ್ಮೆ ಎಲ್ಲ ಗಂಡ ಹೆಂಡತಿಯರಲ್ಲಿದ್ದರೆ ಯಾವ ಸಂಸಾರವೂ ಹಾಳಾಗಲ್ಲ. ಗಂಡ ಹೆಂಡತಿಯರಲ್ಲಿ ಯಾರಾದರೊಬ್ಬರು ಸೋತಾಗಲೇ ಸಂಸಾರ ಸಕ್ಸೆಸಫುಲ್ಲಾಗಿ ಸಾಗುತ್ತದೆ. 

ಹೆಂಡತಿ ಜಗಳ ಮಾಡಿದಾಗ ಈ ರೀತಿ ಮಾಡಿ - Husband Wife Romantic Life tips in Kannada

                                ಗೆಳೆಯರೇ, ಪ್ರೀತಿ, ಪ್ರೇಮ, ಸಂಸಾರ ಹಾಗೂ ಸ್ನೇಹದಲ್ಲಿ ಯಾವತ್ತೂ ಕೂಡ ನಾವು ಗೆಲ್ಲಬಾರದು. ಒಂದು ವೇಳೆ ನಾವು ಇವುಗಳಲ್ಲಿ ಗೆದ್ದರೆ ನಾವು ನಮ್ಮ ಸಂಗಾತಿಯನ್ನು ಕಳೆದುಕೊಳ್ಳುತ್ತೇವೆ. ನಾವು ಸಂಸಾರದಲ್ಲಿ ಸಂತೋಷವಾಗಿರಬೇಕೆಂದರೆ ಸಂಗಾತಿಯ ಎದುರು ಸೋಲುವುದನ್ನು ಕಲಿಯಬೇಕು‌. ಏಕೆಂದರೆ ಅವಳ ಪ್ರತಿ ಬೈಗುಳದಲ್ಲಿ, ಪ್ರತಿ ಜಗಳದಲ್ಲಿ ಅನಲಿಮಿಟೆಡ್ ಪ್ರೀತಿ ಹಾಗೂ ಕಾಳಜಿ‌ ಅಡಗಿರುತ್ತದೆ. ಅದಕ್ಕಾಗಿ ಹೆಂಡತಿ ಜಗಳ ಮಾಡಿದಾಗ ಅವಳೊಂದಿಗೆ ಮಾತಿಗೆ ಮಾತು ಬೆಳೆಸಿ ನಿಮ್ಮ ಹ್ಯಾಪಿನೆಸನ್ನು ಹಾಳು ಮಾಡಿಕೊಳ್ಳಬೇಡಿ. ಜಗಳ ಮಾಡಿಕೊಂಡು ಡೈವರ್ಸಾದವರಂತೆ ಬದುಕಬೇಡಿ. ಮಾತಿನಿಂದ ಬಗೆ ಹರಿಯುವ ಸಮಸ್ಯೆಗಳನ್ನು ಮಾತಿನಿಂದ ಬಗೆ ಹರಿಸಿ. ಮುತ್ತಿನಿಂದ ಬಗೆ ಹರಿಸುವ ಸಮಸ್ಯೆಗಳನ್ನು ಮುತ್ತಿನಿಂದ‌ ಬಗೆ ಹರಿಸಿಕೊಳ್ಳಿ. ಅದನ್ನು ಬಿಟ್ಟು ಜಗಳ‌ ಮಾಡಿಕೊಂಡು ಪಿಶಾಚಿಯಂತೆ ಬದುಕಬೇಡಿ. ಮಡದಿ‌ ಮನೆಯ ಮಹಾಲಕ್ಷ್ಮಿ. ಅವಳು ಹ್ಯಾಪಿಯಾಗಿದಷ್ಟು ನಿಮ್ಮ‌ ಸಂಪತ್ತು ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ. ಅದಕ್ಕಾಗಿ‌ ಅವಳನ್ನು ಸದಾ ಹ್ಯಾಪಿಯಾಗಿಡಿ. ಸಂಸಾರದಲ್ಲಿ ಸೋಲುವುದನ್ನು‌ ಕಲಿಯಿರಿ ಎಲ್ಲವೂ ಸರಿ ಹೋಗುತ್ತದೆ. All the best and Thanks You..... 

ಹೆಂಡತಿ ಜಗಳ ಮಾಡಿದಾಗ ಈ ರೀತಿ ಮಾಡಿ - Husband Wife Romantic Life tips in Kannada
Blogger ನಿಂದ ಸಾಮರ್ಥ್ಯಹೊಂದಿದೆ.