ರಾಮಾಯಣದ 11 ಜೀವನ ಪಾಠಗಳು - Life Lessons from Ramayana in Kannada - Ramayana Stories in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ರಾಮಾಯಣದ 11 ಜೀವನ ಪಾಠಗಳು - Life Lessons from Ramayana in Kannada - Ramayana Stories in Kannada

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada  - Ramayana Stories in Kannada

                                                 ಹಾಯ್ ಗೆಳೆಯರೇ, ರಾಮಾಯಣ ಒಂದು ಬೆಸ್ಟ ಲೀಡರಶೀಪ ಡೆವಲಪ್ಮೆಂಟ್ ಹಾಗೂ ರಿಲೆಷನಶೀಪ ಮ್ಯಾನೇಜ್ಮೆಂಟ್ ಬುಕ್ ಆಗಿದೆ‌. ಇದರಿಂದ ಕಲಿಯಬೇಕಾದ ವಿಷಯಗಳು ಬಹಳಷ್ಟಿವೆ‌. ರಾಮಾಯಣದಿಂದ ಸಿಕ್ಕ ಜೀವನ ಪಾಠಗಳು ಇಂತಿವೆ ; 

1) ಎಷ್ಟೇ ಲೇಟಾದರೂ ಸತ್ಯ ಗೆದ್ದೆ ಗೆಲ್ಲುತ್ತದೆ. ಶತ್ರು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಕೊನೆಗೆ ಒಳ್ಳೆಯದಕ್ಕೇನೆ ಗೆಲುವಾಗುತ್ತದೆ‌. ಯಾವಾಗಲೂ ಒಳ್ಳೆಯದಕ್ಕೇನೆ ಜಸ್ಟೀಸ ಸಿಗುತ್ತದೆ. ಇದು ಜಗದ ನಿಯಮವಾಗಿದೆ‌. ಹೀಗಾಗಿ ನಾವು ಸದಾ ಒಳ್ಳೆಯದರ ಪಕ್ಷದಲ್ಲಿರಬೇಕು, ಒಳ್ಳೆಯದನ್ನಷ್ಟೇ ಬೆಂಬಲಿಸಬೇಕು, ಒಳ್ಳೆಯದನ್ನಷ್ಟೇ ಮಾಡಬೇಕು. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

2) ನಾವು ದು:ಖದಲ್ಲಿರುವಾಗ ಇಲ್ಲವೇ ಸಂತೋಷವಾಗಿರುವಾಗ ನಾವು ಯಾರಿಗೂ ಮಾತು ಕೊಡಬಾರದು. ನಾವು ಎಮೋಷನಲ್ಲಾಗಿರುವಾಗ ಪ್ರಾಮಿಸಗಳನ್ನ ಮಾಡಿದರೆ ದಶರಥನಂತೆ ಇಕ್ಕಟ್ಟಿಗೆ ಸಿಲುಕಿ ಸಾಯುತ್ತೇವೆ. 

3) ಯಾವಾಗಲೂ ನೆಗೆಟಿವ ಜನರಿಂದ ದೂರವಿರಬೇಕು. ದುಷ್ಟರ ಸಲಹೆ ತೆಗೆದುಕೊಳ್ಳಬಾರದು‌. ಜನ ಏನು ಹೇಳುತ್ತಾರೆ ಎಂಬುದನ್ನು ಕಿವಿಗೆ ಹಾಕಿಕೊಳ್ಳಬಾರದು. ಹಾಕಿಕೊಂಡರೆ ನಾವು ಸಹ ಕೈಕೆಯಂತೆ ಜಾಸ್ತಿ ಪ್ರೀತಿಸುವ ವ್ಯಕ್ತಿಗೇನೆ ಜಾಸ್ತಿ ನೋವು ಕೊಡುತ್ತೇವೆ. ಊಟದಲ್ಲಿ ಹಾಕಿದ ವಿಷಕ್ಕೆ ಔಷಧಿಯಿದೆ. ಆದರೆ ಕಿವಿಯಲ್ಲಿ ಹಾಕಿದ ವಿಷಕ್ಕೆ ಔಷಧಿಯಿಲ್ಲ. ಸೋ ಕಿವಿಯಲ್ಲಿ ವಿಷ ಹಾಕುವ ಮಂಥರೆಯರಿಂದ ದೂರವಿರಬೇಕು. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

4) ಜನ ನಮ್ಮನ್ನು ಗೌರವಿಸಬೇಕೆಂದರೆ, ಶ್ರೀರಾಮನಂತೆ ಫಾಲೋ ಮಾಡಬೇಕೆಂದರೆ ನಾವು ನಮ್ಮ ಡ್ಯುಟಿಯನ್ನು ಸರಿಯಾಗಿ ಮಾಡಬೇಕು, ನಮ್ಮ ಬಾಳ ಸಂಗಾತಿಗೆ ನಿಷ್ಟರಾಗಿರಬೇಕು, ನಮ್ಮ ಎನಿಮಿಯನ್ನು ಗೌರವಿಸಬೇಕು, ಲೀಡರಶೀಪನ್ನು ತೆಗೆದುಕೊಂಡು ಮುನ್ನುಗ್ಗಬೇಕು, ಯಾವಾಗಲೂ ಒಳ್ಳೆಯವರೊಂದಿಗೆ ದೋಸ್ತಿ ಮಾಡಬೇಕು. ಎಂಥದ್ದೇ ದೊಡ್ಡ ಸಮಸ್ಯೆ ಎದುರಾದರೂ ಯಾರನ್ನು ಬ್ಲೇಮ ಮಾಡದೇ ಸಮಸ್ಯೆಯನ್ನು ಸಾಲ್ವ ಮಾಡಿ ಸಕ್ಸೆಸಫುಲ್ಲಾಗಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲರನ್ನೂ ‌ಪ್ರೀತಿಯಿಂದ ಕಾಣಬೇಕು‌. ಆಸ್ತಿ, ಅಂತಸ್ತು, ಲಿಂಗ, ಜಾತಿ, ಧರ್ಮ ಭೇದ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಆಗ ಎಲ್ಲರೂ ನಮ್ಮನ್ನು ಶ್ರೀರಾಮನಂತೆ ಗೌರವಿಸುತ್ತಾರೆ, ಫಾಲೋ ಮಾಡುತ್ತಾರೆ. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

5) ಒಗ್ಗಟ್ಟು, ಸೋದರರ ಸಪೋರ್ಟ್ ಹಾಗೂ ಮಿತ್ರರ ಸಪೋರ್ಟ ನಮಗಿದ್ದರೆ ನಾವು ನಮ್ಮ ಲೈಫಲ್ಲಿ ಬರುವ ಎಲ್ಲ ದೊಡ್ಡ ಚಾಲೆಂಜಸಗಳನ್ನು ಈಜಿಯಾಗಿ ಫೇಸ ಮಾಡಬಹುದು. ನಾವು ನಮ್ಮ ಸೋದರನೊಂದಿಗೆ ಒಗ್ಗಟ್ಟಾಗಿದ್ದರೆ ಎಷ್ಟೇ ದೊಡ್ಡ ಸಮಸ್ಯೆ ಎದುರಾದರೂ ನಾವದನ್ನ ಫೇಸ ಮಾಡಿ ಗೆಲ್ಲುತ್ತೇವೆ‌. ನಾವು ಮೊದಲು ರಾಮನಾದರೆ ನಮ್ಮ ಸೋದರ ತಾನಾಗಿಯೇ ಲಕ್ಷ್ಮಣನಾಗುತ್ತಾನೆ‌. ಆದರೆ ನಾವೇ ರಾವಣನಾದರೆ ನಮ್ಮ ಸೋದರ ವಿಭೀಷಣನಂತೆ ಶತ್ರು ಪಕ್ಷ ಸೇರಿ ನಮ್ಮ ಸಾವಿಗೆ ಮುಹೂರ್ತ ಫಿಕ್ಸ ಮಾಡುತ್ತಾನೆ‌. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

 6) ನಾವು ಎಷ್ಟೇ ಬಲಶಾಲಿಯಾಗಿದ್ದರೂ ಕೂಡ ಹನುಮಂತನಂತೆ ಹಂಬಲ ಆಗಿರಬೇಕು. ಸಿಂಪಲಾಗಿರಬೇಕು. ಒಣ ಜಂಭ ಬಡಾಯಿಗಳನ್ನು ಕೊಚ್ಚಿಕೊಳ್ಳದೇ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಸಮರ್ಥವಾಗಿ ನಿಭಾಯಿಸಿ ಗುರುವಿನ ಸೇವೆ ಮಾಡಬೇಕು. ಏಕೆಂದರೆ ಪ್ರಭುವಿನ ಸೇವೆಯೇ ಪರಮ ಸೇವೆಯಾಗಿದೆ. ಹನುಮಂತ ಮನಸ್ಸು ಮಾಡಿದ್ದರೆ ರಾವಣನನ್ನು ಸಾಯಿಸಿ ಸೀತಾ ಮಾತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಬರಬಹುದಿತ್ತು. ಆದರೆ ತನಗೆ ಗುರುವಿನ ಆದೇಶವಿಲ್ಲ ಅಂತಾ ಆತ ಮರಳಿ ಬಂದನು. ಈ ತರಹದ ಡೆಡಿಕೇಷನ ನಮ್ಮಲ್ಲಿದ್ದರೆ ನಾವು ಕೂಡ ಚಿರಂಜೀವಿಯಾಗಬಹುದು. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

7) ಸೇಡಿಗಿಂತ ಕ್ಷಮೆ ದೊಡ್ಡದಾಗಿದೆ. ರಾವಣ ಶೂರ್ಪನಖಿಯ ಕಂಪ್ಲೇಂಟನ್ನು ಕೇಳಿ ಲಕ್ಷ್ಮಣನ ಮೇಲೆ ದ್ವೇಷ ಸಾಧಿಸದೇ ಇರೋ ಪರಿಸ್ಥಿತಿಯನ್ನು ಅನಲೈಜ ಮಾಡಿದ್ದರೆ ಅವನ ಜೀವನ ಸೇಫಾಗಿರುತ್ತಿತ್ತು. ಆದರೆ ಆತ ಕೋಪದ ಕೈಗೆ ಬುದ್ಧಿ ಕೊಟ್ಟು ತನ್ನ ಸಾವಿಗೆ ಆಮಂತ್ರಣ ಕೊಟ್ಟನು. ಒಂದು ವೇಳೆ ರಾವಣ ಲಕ್ಷ್ಮಣನನ್ನು‌ ಕ್ಷಮಿಸಿ ದೊಡ್ಡವನಾಗಿದ್ದರೆ, ಸೀತಾ ಮಾತೆಯ ಸಮೀಪಕ್ಕೆ ಸುಳಿಯದಿದ್ದರೆ ಆತ ಬೇಗನೆ ಸಾಯುತ್ತಿರಲಿಲ್ಲ. ಸೋ ಕೋಪ, ತಾಪ, ಸೇಡಿಗಿಂತ ಕ್ಷಮೆ ದೊಡ್ಡದಾಗಿದೆ, ಒಳ್ಳೆಯದಾಗಿದೆ. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

8) ಹೊಳೆಯುವುದೆಲ್ಲ ಬಂಗಾರವಲ್ಲ, ಕಣ್ಣಿಗೆ ಕಾಣಿಸಿದ್ದೆಲ್ಲ ನಿಜವಲ್ಲ‌. ನಾವು ಯಾವುದೇ ವಸ್ತುವಿನ ಕಡೆಗೆ ಇಲ್ಲ ವ್ಯಕ್ತಿಯ ಕಡೆಗೆ ಅಟ್ರ್ಯಾಕ್ಟಾದಾಗ ಅದು ನಿಜವಾಗಿಯೂ ಚಿನ್ನದ ಜಿಂಕೆಯಾ ಅಥವಾ ಮಾಯಾ ಜಿಂಕೆಯಾ ಎಂಬುದನ್ನು ಟೆಸ್ಟ ಮಾಡಿ ನೋಡಿ ಆಮೇಲೆ ನಂಬಬೇಕು. ಆತುರದಲ್ಲಿ ಯೋಚಿಸದೇ ಆಸೆಪಟ್ಟರೆ ನಾವೆಂದುಕೊಂಡ ಚಿನ್ನದ ಜಿಂಕೆ ಮಾಯಾ ಜಿಂಕೆಯಾಗುವ ಸಾಧ್ಯತೆ ತುಂಬಾನೆ ಇದೆ, ನಾವು ಸಾಧುವೆಂದುಕೊಂಡ ವ್ಯಕ್ತಿ ರಾವಣನಾಗುವ ಚಾನ್ಸ ಕೂಡ ಇದೆ. ಅದಕ್ಕೆ ಹೊಳೆಯುವುದೆಲ್ಲ ಚಿನ್ನವಲ್ಲ ಎಂಬುದು ನಮ್ಮ‌ ತಲೆಯಲ್ಲಿರಬೇಕು. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

9) ನೀವು ಎಷ್ಟೇ ಪರಮ ಜ್ಞಾನಿಯಾಗಿದ್ದರೂ ಸಹ ನಿಮ್ಮಲ್ಲಿ ಕಾಮ, ಈಗೋ, ಆ್ಯರೋಗನ್ಸ ಹೆಚ್ಚಾದರೆ, ನೀವು ಸಹ ಪರಸ್ತ್ರೀಯರ ಮೇಲೆ ಕೆಟ್ಟ ಕಣ್ಣಿಟ್ಟರೆ ರಾವಣನಂತೆ ನಿಮ್ಮ ದುರಂತ ಸಾವು ನಿಶ್ಚಿತ. ದುಷ್ಕರ್ಮ ಮಾಡಿದರೆ ದುರಂತ ಸಾವು ನಿಶ್ಚಿತ. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

10) ನಾವು ನಮ್ಮ ಲೈಫ ಪಾರ್ಟನರಗೆ ನಿಯತ್ತಾಗಿದ್ದರೆ ಈಡೀ ಜಗತ್ತು ನಮ್ಮನ್ನು ಪ್ರೀತಿಸುತ್ತದೆ, ಗೌರವಿಸುತ್ತದೆ, ಫಾಲೋ ಮಾಡುತ್ತದೆ, ಪೂಜಿಸುತ್ತದೆ. ರಾವಣನಿಂದ ಸೀತಾ ಮಾತೆಯ ಅಪಹರಣವಾದಾಗ ಶ್ರೀರಾಮ ಹೋದರೆ ಹೋಗಲಿ ಅಂತಾ ಎಲ್ಲವನ್ನೂ ಮರೆತು ಬಿಟ್ಟು ಬೇರೆ ರಾಜರಂತೆ ನಾಲ್ಕೈದು ಮದುವೆಯಾಗಿ ಐಷಾರಾಮಿ ಜೀವನ ಸಾಗಿಸಬಹುದಿತ್ತು. ಬಟ ಶ್ರೀರಾಮ ಆ ರೀತಿ ಮಾಡಲಿಲ್ಲ. ಆತ ತನಗೆ ಬಂದಿರುವ ಚಾಲೆಂಜನ್ನು ಸ್ವೀಕರಿಸಿ ಸೇತುವೆ ಕಟ್ಟಿ ಸಮುದ್ರ ದಾಟಿ ಹೋಗಿ ರಾವಣನನ್ನು ಸಾಯಿಸಿ ಸೀತಾಮಾತೆಯನ್ನು ರಕ್ಷಿಸಿದನು. ತಾಜಮಹಲನಲ್ಲಿ ನನಗೆಲ್ಲಿಯೂ ಪತ್ನಿಪ್ರೇಮ ಕಾಣಿಸಲ್ಲ. ಆದರೆ ರಾಮ ಸೇತುವೆಯಲ್ಲಿ ನಿಜವಾದ ಪತ್ನಿಪ್ರೇಮವನ್ನು ನಾವು ಕಾಣಬಹುದು. ಸೀತೆಮಾತೆಯೂ ಸಹ ರಾಮನನ್ನು ಮರೆತು ರಾವಣನ ಆಫರನ್ನು ಒಪ್ಪಿಕೊಂಡು ಲಂಕೆಗೆ ಮಹಾರಾಣಿಯಾಗಿ ಮೆರೆಯಬಹುದಿತ್ತು. ಆದರೆ ಆಕೆ ಹಾಗೇ ಮಾಡಲಿಲ್ಲ. ಇದಕ್ಕಂತಾರೆ ನಿಜವಾದ ಪ್ರೀತಿ, ಪ್ರೇಮ, ಶ್ರೇಷ್ಠ ನಡತೆ, ಸಹನೆ, ಸದ್ಗುಣ ಹಾಗೂ ಸಂಸ್ಕಾರ. ಈ ರೀತಿ ನಾವು ಸಹ ನಮ್ಮ‌ ಲೈಫ ಪಾರ್ಟನರಗೆ ನಿಯತ್ತಾಗಿದ್ದರೆ ಜಗತ್ತು ನಮ್ಮನ್ನು ಸಹ ಪೂಜಿಸುತ್ತದೆ. 

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada

11) ನಾವು ಸಹ ಶಬರಿಯಂತೆ ತಾಳ್ಮೆ, ಶ್ರದ್ಧೆ, ಭಕ್ತಿಯಿಂದ ಕಾದರೆ, ನಮ್ಮ ಭಕ್ತಿ‌ ನಿಜವಾಗಿದ್ದರೆ ಆ ದೇವರು ಖಂಡಿತ ನಮ್ಮನ್ನು ಹುಡುಕಿಕೊಂಡು ಬಂದು ದರ್ಶನ ಕೊಡುತ್ತಾನೆ. 

                     ಇವೀಷ್ಟು ರಾಮಾಯಣದಿಂದ ನಮಗೆ ಸಿಕ್ಕ ಜೀವನ ಪಾಠಗಳು. ಈ ಎಪಿಸೋಡ ನಿಮಗೆ ಇಷ್ಟವಾಗಿದ್ದರೆ ಇದನ್ನು ಲೈಕ ಮಾಡಿ, ಕಮೆಂಟ ಮಾಡಿ ಹಾಗೂ ಶೇರ್ ಮಾಡಿ. ನೆಕ್ಸ್ಟ್ ಎಪಿಸೋಡನಲ್ಲಿ ಮಹಾಭಾರತದ ಜೀವನ ಪಾಠಗಳನ್ನು ಎಕ್ಸಪ್ಲೇನ ಮಾಡುವೆ. ಸೋ ಈ ಚಾನೆಲಗೆ ಸಬಸ್ಕ್ರೈಬ ಮಾಡಿ. ನಿಮಗೆ ಫ್ರಿಯಾಗಿ ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಓದುವ ಇಂಟರೆಸ್ಟಯಿದ್ದರೆ www.Skkannada.comಗೆ ವಿಜಿಟ ಮಾಡಿ ಓದಿ. All the Best and Thanks You....

ರಾಮಾಯಣದ ಜೀವನ ಪಾಠಗಳು - Life Lessons from Ramayana in Kannada


Blogger ನಿಂದ ಸಾಮರ್ಥ್ಯಹೊಂದಿದೆ.