Motivational Story in Kannada - ಈ ರೀತಿ ಪ್ರಾರ್ಥಿಸಿದರೆ ದೇವರು ನಿಮ್ಮಾಸೆ ಈಡೇರಿಸುತ್ತಾನೆ... ಪ್ರಾರ್ಥನೆಯ ಪವರ್ - Power of Prayer in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

Motivational Story in Kannada - ಈ ರೀತಿ ಪ್ರಾರ್ಥಿಸಿದರೆ ದೇವರು ನಿಮ್ಮಾಸೆ ಈಡೇರಿಸುತ್ತಾನೆ... ಪ್ರಾರ್ಥನೆಯ ಪವರ್ - Power of Prayer in Kannada

ಈ ರೀತಿ ಪ್ರಾರ್ಥಿಸಿದರೆ ದೇವರು ನಿಮ್ಮಾಸೆ ಈಡೇರಿಸುತ್ತಾನೆ... ಪ್ರಾರ್ಥನೆಯ ಪವರ್ - Power of Prayer in Kannada

                 ಹಾಯ್ ಗೆಳೆಯರೇ, ಗುಡ್ ಮಾರ್ನಿಂಗ್. ಮನುಷ್ಯರು ಸುಖದಲ್ಲಿರುವಾಗ ದೇವರನ್ನು ನೆನಪಿಸಿಕೊಳ್ಳಲ್ಲ. ಆದರೆ ಒಂದು ಸಣ್ಣ ಕಷ್ಟ ಬಂದರೆ ಸಾಕು ಮನುಷ್ಯರಿಗೆ ದೇವರು ಅಟೋಮ್ಯಾಟಿಕ್ಕಾಗಿ ನೆನಪಾಗುತ್ತಾನೆ. ಬಹಳಷ್ಟು ಜನ ದೇವರತ್ರ ಪ್ರಾರ್ಥಿಸುತ್ತಾರೆ. ಆದರೆ ಕೆಲವರ ಪ್ರಾರ್ಥನೆಗಳು ಮಾತ್ರ ಈಡೇರುತ್ತವೆ. ಯಾಕೆ ಹೀಗೆ? ಯಾಕೆ ಎಲ್ಲ ಪ್ರಾರ್ಥನೆಗಳು ಈಡೇರಲ್ಲ? ಈ ಸೆಕ್ರೆಟ ನಿಮಗೆ ಅರ್ಥವಾಗಬೇಕೆಂದರೆ ನೀವು ಈ ಸಣ್ಣ ಕಥೆಯನ್ನು ಕೇಳಲೇಬೇಕು. 

                     ಒಂದು ಊರಲ್ಲಿ ಒಮ್ಮೆ ಭೀಕರ ಬರಗಾಲ ಬಿದ್ದಿತ್ತು. ನಾಲ್ಕೈದು ವರ್ಷಗಳಿಂದ ಮಳೆಯಾಗಿರಲಿಲ್ಲ. ಭೂಮಿ ಕಾದ ಹೆಂಚಿನಂತಾಗಿತ್ತು. ತಿನ್ನಲು ಅನ್ನವಿಲ್ಲದೆ ಕುಡಿಯಲು ನೀರಿಲ್ಲದೆ ಜನ ಪರದಾಡುತ್ತಿದ್ದರು. ಕೆಲವರು ಹೊಟ್ಟೆಗಿಲ್ಲದೆ ಸಾವನ್ನಪ್ಪಿದರೆ ಇನ್ನೂ‌ ಕೆಲವರು ಊರನ್ನು ಬಿಟ್ಟು ಬೇರೆ ಊರಿಗೆ ಹೋದರು. 

ಈ ರೀತಿ ಪ್ರಾರ್ಥಿಸಿದರೆ ದೇವರು ನಿಮ್ಮಾಸೆ ಈಡೇರಿಸುತ್ತಾನೆ... ಪ್ರಾರ್ಥನೆಯ ಪವರ್ - Power of Prayer in Kannada

                             ಮಳೆ ಬರಿಸುವುದಕ್ಕಾಗಿ ಊರ ಜನರೆಲ್ಲ ಸೇರಿ ಒಗ್ಗಟ್ಟಾಗಿ ಊರ ದೇವತೆಗೆ ಪ್ರಾರ್ಥನೆ ಸಲ್ಲಿಸಿದರು. ಪೂಜೆ ಹೋಮ ಹವನಗಳನ್ನು ಮಾಡಿದರು. ಆದರೂ ಮಳೆ‌ ಬರಲಿಲ್ಲ. ಎಲ್ಲರೂ ನಿರಾಸೆಯಿಂದ ಮನೆಗೆ ವಾಪಸ ತೆರಳಲು ತಯಾರಾಗುತ್ತಿದ್ದರು. ಅಷ್ಟರಲ್ಲಿ ಒಬ್ಬಳು ಪುಟ್ಟ ಹುಡುಗಿ ಓಡುತ್ತಾ ಬಂದು ಊರಿನ ದೇವತೆಗೆ ಮಳೆ‌ ಸುರಿಸುವಂತೆ ಪ್ರಾರ್ಥಿಸಿದಳು. ಆ ಹುಡುಗಿಗೆ ದೇವರ ಮೇಲೆ ಇಷ್ಟೊಂದು ನಂಬಿಕೆಯಿತ್ತೆಂದರೆ ಅವಳು ಮಳೆ ಬಂದೇ ಬರುತ್ತೆ ಅಂತಾ ಕೊಡೆ ತಂದಿದ್ದಳು. ಜನರೆಲ್ಲ ಮಳೆ‌ ಬರಲ್ಲ ಅಂತಾ ವಾಪಸ ಹೊರಟಿದ್ದರು. ಅಷ್ಟರಲ್ಲಿ ಊರಿನ ದೇವತೆ ಆ ಪುಟ್ಟ ಹುಡುಗಿಯ ನಂಬಿಕೆ ಹಾಗೂ ಪ್ರಾರ್ಥನೆಗೆ ಮೆಚ್ಚಿ ಮಳೆ ಸುರಿಸಿದಳು. ಊರ ಜನರೆಲ್ಲ ನಾಲ್ಕೈದು ವರ್ಷಗಳ ನಂತರ ಮಳೆ‌ ಬಂತೆಂದು ಕುಣಿದು ಕುಪ್ಪಳಿಸಿದರು. ಆ ಪುಟ್ಟ ಹುಡುಗಿ ದೇವತೆಗೆ ಧನ್ಯವಾದಗಳನ್ನು ಅರ್ಪಿಸಿ ಕೊಡೆ ಹಿಡಿದುಕೊಂಡು ಮನೆಗೆ ತೆರಳಿದಳು. 

ಈ ರೀತಿ ಪ್ರಾರ್ಥಿಸಿದರೆ ದೇವರು ನಿಮ್ಮಾಸೆ ಈಡೇರಿಸುತ್ತಾನೆ... ಪ್ರಾರ್ಥನೆಯ ಪವರ್ - Power of Prayer in Kannada

                ಈಗ ನಿಮಗೆ ಅರ್ಥವಾಗಿರಬಹುದು ಯಾಕೆ ಎಲ್ಲರ ಪ್ರಾರ್ಥನೆಗಳನ್ನು ದೇವರು ಈಡೇರಿಸಲ್ಲ ಅಂತಾ?. ಎಲ್ಲರೂ ದೇವರಲ್ಲಿ ತಮ್ಮ‌ ಆಸೆಗಳನ್ನು ಹೇಳಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಪ್ರಾರ್ಥನೆಯ ಮೇಲೆ 100% ನಂಬಿಕೆಯನ್ನು ಇಡುವುದಿಲ್ಲ. ಪ್ರಾರ್ಥನೆ ಮಾಡಿದ ಮರು ಕ್ಷಣವೇ ಮನಸ್ಸಲ್ಲಿ ನನ್ನ ಬಯಕೆ ಈಡೇರುತ್ತೋ ಅಥವಾ ಇಲ್ವೋ ಎಂಬ ಅನುಮಾನವನ್ನು ಶುರು ಮಾಡುತ್ತಾರೆ. ದೇವರಲ್ಲಿ ಅಪನಂಬಿಕೆಯನ್ನು ತಾಳುತ್ತಾರೆ. ದೇವರ ಮೇಲೆ ದೌಟ ಪಡುತ್ತಾರೆ. ಹೀಗಾಗಿ ಇಂಥವರ ಪ್ರಾರ್ಥನೆಗಳು ಈಡೇರಲ್ಲ. ನಾವು ಮಾಡಿದ ಪ್ರಾರ್ಥನೆಯಲ್ಲಿ ನಮಗೆ 100% ನಂಬಿಕೆಯಿದ್ದರೆ, ನಮ್ಮಲ್ಲಿ ನಿಯತ್ತಿದ್ದರೆ, ನಮ್ಮ‌ ಪ್ರಾರ್ಥನೆಯಿಂದ ಬಹು ಜನರಿಗೆ ಒಳ್ಳೆಯದಾಗುತ್ತಿದ್ದರೆ ಮಾತ್ರ  ಪ್ರಾರ್ಥನೆಗಳನ್ನು ದೇವರು ಈಡೇರಿಸುತ್ತಾನೆ‌. ನಮ್ಮ‌ ಪ್ರಾರ್ಥನೆಯಲ್ಲಿ ಬರೀ ಸ್ವಾರ್ಥ ಹಾಗೂ ದುರಾಸೆ ತುಂಬಿಕೊಂಡಿದ್ದರೆ ಅಂಥ ಪ್ರಾರ್ಥನೆಗಳು ಯಾವತ್ತೂ ಈಡೇರಲ್ಲ. ಸೋ ನಿಮ್ಮ ಪ್ರಾರ್ಥನೆಗಳು ಈಡೇರಬೇಕೆಂದರೆ ನೀವು ನಿಸ್ವಾರ್ಥ ಭಾವದಿಂದ ಪ್ರಾರ್ಥಿಸಬೇಕು, ಬಹುಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರಾರ್ಥಿಸಬೇಕು, 100% ನಂಬಿಕೆಯೊಂದಿಗೆ ಪ್ರಾರ್ಥಿಸಬೇಕು‌. ಅಂದಾಗಲೇ ನಿಮ್ಮ ಪ್ರಾರ್ಥನೆಗಳು ನನಸಾಗುತ್ತವೆ‌. ಮಳೆ ಬಂದೇ ಬರುತ್ತೆ ಅಂತಾ ಪ್ರಾರ್ಥನೆಗೆ ಬರುವಾಗ ಕೊಡೆ ತೆಗೆದುಕೊಂಡು ಬಂದ ಆ ಪುಟ್ಟ ಹುಡುಗಿಗಿದ್ದ ನಂಬಿಕೆ ನಿಮಗೂ ಇದ್ದರೆ ನಿಮ್ಮ ಪ್ರಾರ್ಥನೆಗಳು ಸಹ ದೇವರನ್ನು ತಲುಪುತ್ತವೆ. ಡೌಟಿದ್ರೆ ಒಂದ್ಸಲ 100% ನಂಬಿಕೆಯಿಂದ ಪ್ರಾರ್ಥನೆ ಮಾಡಿ ನೋಡಿ‌. All the Best and Thanks You.....

ಈ ರೀತಿ ಪ್ರಾರ್ಥಿಸಿದರೆ ದೇವರು ನಿಮ್ಮಾಸೆ ಈಡೇರಿಸುತ್ತಾನೆ... ಪ್ರಾರ್ಥನೆಯ ಪವರ್ - Power of Prayer in Kannada
Blogger ನಿಂದ ಸಾಮರ್ಥ್ಯಹೊಂದಿದೆ.