ನಾವು ಯಾವುದೇ ಒಂದು ಮಂತ್ರವನ್ನು ಪಠಿಸುವುದಕ್ಕಿಂತ ಮುಂಚೆ ಅದರ ಸರಿಯಾದ ಅರ್ಥವನ್ನು ತಿಳಿದುಕೊಂಡು ಆನಂತರ ಪಠಿಸಿದರೆ ಮಾತ್ರ ನಮಗೆ ಸಂಪೂರ್ಣ ಲಾಭ ಪ್ರಾಪ್ತವಾಗುತ್ತದೆ. ಗಾಯತ್ರಿ ಮಂತ್ರವು ವೇದ ಮಾತೆ ಗಾಯತ್ರಿಗೆ ಅಂದರೆ ಸರಸ್ವತಿಗೆ ಸಮರ್ಪಿತವಾದ ಮಂತ್ರವಾಗಿದೆ. ಇದನ್ನು ಪ್ರತಿನಿತ್ಯ ಪಠಿಸುವುದರಿಂದ ನಮ್ಮ ಜ್ಞಾನ ಹೆಚ್ಚಾಗುತ್ತದೆ. ಮೂಲ ಗಾಯತ್ರಿ ಮಂತ್ರ ಹಾಗೂ ಅದರ ಅರ್ಥ ಇಂತಿದೆ ;
ಮೂಲ ಗಾಯತ್ರಿ ಮಂತ್ರ - Gayatri Mantra in Kannada
"ಓಂ ಭುರ್ ಭುವ ಸ್ವಹ:
ತತ್ ಸವಿತುರ್ವರೇಣ್ಯಂ
ಭರ್ಗೊ ದೇವಸ್ಯ ಧಿಮಯಿ
ಧಿಯೋ ಯೋನ: ಪ್ರಚೋದಯಾತ..."
ಗಾಯತ್ರಿ ಮಂತ್ರದ ಅರ್ಥ - Gayatri Mantra Meaning in Kannada
"ಭೂಮಿ ಆಕಾಶ ಹಾಗೂ ಅಂತರಿಕ್ಷವನ್ನು ಆವರಿಸಿದ ತೇಜೋಮಯನಾದ ದಿವ್ಯ ಸ್ವರೂಪನಾದ ಎಲ್ಲರಿಂದ ಪೂಜಿತನಾದ ಪರಬ್ರಹ್ಮ ಸ್ವರೂಪಿಯಾದ ಸವಿತ್ರನೇ (ಸೂರ್ಯನೇ) ನಮ್ಮ ಬುದ್ಧಿಯನ್ನು ಮೆದುಳನ್ನು ಬೆಳಕಿನೆಡೆಗೆ ಅಂದರೆ ಜ್ಞಾನದ ಕಡೆಗೆ ಹರಿಸು"