ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada - mrityunjaya mantra lyrics in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada - mrityunjaya mantra lyrics in kannada

ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada

                    ಮಹಾ ಮೃತ್ಯುಂಜಯ ಮಂತ್ರವು ಮೃತ್ಯುವಿನ ಮೇಲೆ ವಿಜಯ ಸಾಧಿಸುವ ಮಂತ್ರವಾಗಿದೆ. ಸಾವನ್ನು ಗೆಲ್ಲುವ ಶಕ್ತಿ ಈ ಮಂತ್ರಕ್ಕಿದೆ. ಈ ಮಂತ್ರಕ್ಕೆ ರುದ್ರ ಮಂತ್ರ ಅಥವಾ ತ್ರಯಂಬಕ ಮಂತ್ರ ಎಂತಲೂ ಕರೆಯುತ್ತಾರೆ. ಯಜುರ್ವೇದದ 3ನೇ  ಅಧ್ಯಾಯದಲ್ಲಿ ಈ ಮಹಾ ಮೃತ್ಯುಂಜಯ ಮಂತ್ರದ ಬಗ್ಗೆ ಉಲ್ಲೇಖವಿದೆ. ಈ ಮಂತ್ರ ಮೂರು ಕಣ್ಣುಳ್ಳ ಶಿವನ ನೆಚ್ಚಿನ ಮಂತ್ರವಾಗಿದೆ‌.

ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada

                         ಈ ಮಹಾ ಮೃತ್ಯುಂಜಯ ಮಂತ್ರವನ್ನು ಋಷಿ ಮಾರ್ಕಂಡೇಯ ರಚಿಸಿದರು. ಒಮ್ಮೆ ಕೋಪದಲ್ಲಿ ದಕ್ಷನು ಚಂದ್ರನಿಗೆ ಸಾವಿನ ಶಾಪ ಕೊಟ್ಟಿದ್ದನು‌‌. ಚಂದ್ರನ ಸಾವು ಸಮೀಪಕ್ಕೆ ಬರ್ತಾಯಿತ್ತು. ಆಗ ಚಂದ್ರನನ್ನು ರಕ್ಷಿಸಲು ಋಷಿ ಮಾರ್ಕಂಡೇಯ ಈ ಮಂತ್ರವನ್ನು ರಚಿಸಿ ಸತಿಗೆ ಕೊಟ್ಟರು. ಸತಿ ಈ ಮಂತ್ರವನ್ನು ಪಠಿಸಿದಾಗ ಶಿವ ಪ್ರಸನ್ನನಾಗಿ ಸಾಯುವ ಸ್ಥಿತಿಯಲ್ಲಿದ್ದ ಚಂದ್ರನನ್ನು ಎತ್ತಿ ತನ್ನ ಜಡೆಯಲ್ಲಿ ಕೂಡಿಸಿಕೊಂಡನು. ಇದರಿಂದ ಚಂದ್ರನ ಪ್ರಾಣ ಉಳಿಯಿತು. ಅದಕ್ಕಾಗಿ ಈ ಮಂತ್ರಕ್ಕೆ ಮಹಾ ಮೃತ್ಯುಂಜಯ ಮಂತ್ರ ಎನ್ನುತ್ತಾರೆ. ಯಾರು ಭಯಾನಕ ರೋಗಗಳಿಂದ ನರಳುತ್ತಿದ್ದಾರೋ ಅವರು ಈ ಮಂತ್ರವನ್ನು ಶ್ರಧ್ದೆಯಿಂದ ಪಠಿಸಿದರೆ ಅವರ ರೋಗ ನಿವಾರಣೆಯಾಗುತ್ತದೆ. ಯಾರು ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಅಂದರೆ ಸುರ್ಯೋದಯಕ್ಕಿಂತ ಮುಂಚೆ (ಬೆಳಿಗ್ಗೆ 4 ಗಂಟೆಗೆ) ಸ್ವಚ್ಛ ಮನಸ್ಸಿನಿಂದ ಈ ಮಹಾ ಮೃತ್ಯುಂಜಯ ಮಂತ್ರವನ್ನು 108 ಸಲ ಜಪಿಸುತ್ತಾರೋ ಅವರ ಆಯಸ್ಸು, ಆರೋಗ್ಯ ಹಾಗೂ ಅಂತಸ್ತು ವೃದ್ಧಿಯಾಗುತ್ತದೆ. ಅವರು ಎಲ್ಲ ತರಹದ ಕಷ್ಟ, ನೋವು, ನಿರಾಸೆ, ದು:ಖ, ರೋಗಗಳಿಂದ ಮುಕ್ತಿಯನ್ನು ಪಡೆಯುತ್ತಾರೆ. ಸುಖ ಸಂತೋಷ ಸಂಪತ್ತಿನಿಂದ ಕೂಡಿದ ಜೀವನವನ್ನು ಹೊಂದುತ್ತಾರೆ. ಪೂರ್ಣ ಆಯಸ್ಸನ್ನು ಪಡೆದುಕೊಂಡು ನೂರು ವರ್ಷ ಬದುಕುವ ಆಸೆಯಿರುವವರು ಈ ಮಂತ್ರವನ್ನು ಜಪಿಸಿದರೆ ಅವರ ಇಚ್ಛೆ ಖಂಡಿತವಾಗಿಯೂ ಈಡೇರುತ್ತದೆ. ಆ ಮಹಾ ಮೃತ್ಯುಂಜಯ ಮಂತ್ರ ಇಂತಿದೆ. 

ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada

"ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪೃಷ್ಟಿವರ್ಧನಂ 

ಉರ್ವಾರುಕಮಿವ ಬಂಧನಾನ ಮೃರ್ತ್ಯೋಮುಕ್ಷಿಯ ಮಾಮ್ರತಾತ" 

                          ಈ ಮಹಾ ಮೃತ್ಯುಂಜಯ ಮಂತ್ರವನ್ನು ನಿಮ್ಮ ಎಲ್ಲ ಪ್ರೀತಿ ಪಾತ್ರರೊಡನೆ ಶೇರ್ ಮಾಡಿ ನಿಮ್ಮ ಎಲ್ಲ ಆಸೆಗಳು ಈಡೇರುತ್ತವೆ. ಧನ್ಯವಾದಗಳು...

ಮಹಾ ಮೃತ್ಯುಂಜಯ ಮಂತ್ರ - Maha Mrityunjaya Mantra in Kannada


Blogger ನಿಂದ ಸಾಮರ್ಥ್ಯಹೊಂದಿದೆ.